ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಾಳಪ್ಪ ದೊಡ್ಡಮನಿ ಸಾ: ಜಮಖಂಡಿ ತಾ:
ಜೇವರಗಿ ರವರ ಮಕ್ಕಳಾದ ಅಯ್ಯಪ್ಪ ಮತ್ತು ಅವನ ಹೆಂಡತಿ ಮಕ್ಕಳು, ಮತ್ತು ಪರಶುರಾಮ, ಶಿವಪುತ್ರ ಇವರೆಲ್ಲರೂ ಬೆಂಗಳೂರದಲ್ಲಿ ಕೂಲಿ ಕೆಲಸಕ್ಕೆ ಹೊಗಿ ಅಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ನನ್ನ ಮಗ ಶಿವಪುತ್ರನು ನೆಲಮಂಗಲದಲ್ಲಿನ ಭಾರತ ಪೈನಾನ್ಸಿಯಲ್ ಇನಕ್ಲೂಜನ್ ಲಿಮಿಟೆಡ್
ಖಾಸಗಿ ಕಂಪನಿಯಲ್ಲಿ ಫೀಲ್ಡ ಅಸಿಸ್ಟಂಟ ಅಂತಾ ಕೆಲಸ ಮಾಡುತ್ತಿದ್ದನು. ಈಗ ಕರೊನಾ
ವೈರಸ್ ಹರಡುತ್ತಿದ್ದರಿಂದ ಲಾಕ್ ಡೌನ ಆದ
ಪ್ರಯುಕ್ತ ಕೆಲಸ ಇಲ್ಲದ ಕಾರಣ ನಮ್ಮ ಮಕ್ಕಳಾದ ಅಯ್ಯಪ್ಪ
ಮತ್ತು ಅವನ ಹೆಂಡತಿ ಮಕ್ಕಳು, ಮತ್ತು ಪರಶುರಾಮ ಎಲ್ಲರೂ ಬೆಂಗಳೂರದಿಂದ ಬಸ್ಸಿನಲ್ಲಿ ಕುಳಿತು ನಮ್ಮೂರಿಗೆ ದಿನಾಂಕ
25/03/2020 ರಂದು ಮುಂಜಾನೆ ಬಂದಿರುತ್ತಾರೆ. ಮಗ
ಅಯ್ಯಪ್ಪ ಈತನು ಹೇಳಿದ್ದನೆಂದರೆ ಲಾಕಡೌನ್ ಸಲುವಾಗಿ
ಶಿವಪುತ್ರ ಈತನ ಆಫೀಸ್ ಕೂಡಾ ರಜೆ ಇದ್ದು ಅವನೂ ಕೂಡಾ ತನ್ನ ಗೆಳೆಯ ಅವಿನಾಶ ಸಾ: ಮಂಗಲಗಿ ಇತನ್ನೊಂದಿಗೆ ನಮ್ಮ
ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ಕುಳಿತುಕೊಂಡು ಬೆಂಗಳೂರದಿಂದ ಬರುತ್ತಿದ್ದಾರೆ
ಎಂದು ಹೇಳಿರುತ್ತಾನೆ. ದಿನಾಂಕ 25/03/2020 ರಂದು ಅವನ ಮೊಬೈಲಕ್ಕೆ ಕರೆ ಮಾಡಲಾಗಿ ಮೊಬೈಲ ರಿಂಗ್
ಆಗಿರುತ್ತದೆ. ಆದರೆ ಅವನು ಮೊಬೈಲ್ ಎತ್ತಿರುವುದಿಲ್ಲಾ.
ಆ ದಿವಸ ರಾತ್ರಿಯಾದರೂ ಶಿವಪುತ್ರನು ಮನೆಗೆ ಬರಲಿಲ್ಲಾ ಪೊನಿನಲ್ಲಿ ಸಹ ಸಿಕ್ಕಿರುವುದಿಲ್ಲಾ,
ನನ್ನ ಮಗನ ಸಂಗಡ ಬೆಂಗಳೂರದಿಂದ ಬಂದ ಅವಿನಾಶ ಈತನ ಮೊಬೈಲಕ್ಕೆ ಪೊನ ಮಾಡಿ ಕೇಳಲಾಗಿ ಅವನು ಹೇಳಿದ್ದೆನೆಂದರೆ ನಾನು ಮತ್ತು ಶಿವಪುತ್ರ ಇಬ್ಬರೂ ಮೊಟಾರ್ ಸೈಕಲ ಮೇಲೆ ಬೆಂಗಳೂರದಿಂದ
ಕಲಬುರಗಿಗೆ ದಿನಾಂಕ 25/03/2020 ರಂದು ಮುಂಜಾನೆ
ಬಂದಿರುತ್ತೆವೆ. ಮುಂಜಾನೆ 7.00 ಗಂಟೆಯ ಸುಮಾರಿಗೆ ಶಿವಪುತ್ರನು ನನಗೆ ಕಲಬುರಗಿ ಹುಮನಾಬಾದ ರಿಂಗ್ ರೊಡ ಹತ್ತಿರ
ಬಿಟ್ಟು ಊರಿಗೆ ಹೋಗುತ್ತೆನೆಂದು ಹೇಳಿ ತನ್ನ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ
ಮೇಲೆ ಕುಳಿತುಕೊಂಡು ಹೋಗಿರುತ್ತಾನೆ. ನಾನು ನಮ್ಮೂರಿಗೆ ಬಂದಿರುತ್ತೆನೆ ಎಂದು ತಿಳಿಸಿದನು. ನಮ್ಮ ಮಗನು ಮನೆಗೆ ಬರಲಾರದಕ್ಕೆ ನಾವು
ಕಲಬುರಗಿಗೆ ಹೋಗಿ ಹುಡುಕಾಡಿದೇವು ಮತ್ತು ಅವನ ಗೆಳೆಯರಿಗೆ
ಹಾಗೂ ನಮ್ಮಸಂಭಂದಿಕರಿಗೆ ಪೊನ ಮಾಡಿ ಕೇಳಲಾಗಿ
ನಮ್ಮ ಮಗನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ
ಪತ್ತೆ ಸಹ ಹತ್ತಿರುವುದಿಲ್ಲಾ. ನಮ್ಮ ಮಗ
ಶಿವಪುತ್ರನು ಮನೆಗೆ ಬರಲಾರದಕ್ಕೆ ಮತ್ತುಅವನು ಪತ್ತೆ
ಹತ್ತಲಾರದಕ್ಕೆ ನಾನು ಮತ್ತು ನಮ್ಮೂರ ಭೀಮಣ್ಣಗೌಡ ತಂದೆ ಗುರುಲಿಂಗಪ್ಪಗೌಡ ಮಾಲಿಗೌಡರ
ಬೀರಪ್ಪ ತಂದೆ ಅಯ್ಯಪ್ಪ ಪೂಜಾರಿ,
ಕೂಡಿಕೊಂಡು ಇಂದು ದಿ 31/03/2020 ರಂದು ಮುಂಜಾನೆ ಕಲಬುರಗಿಗೆ ಗ್ರಾಮೀಣ
ಪೊಲೀಸ್ ಠಾಣೆಗೆ ಕೇಸು ಕೊಡಲು ಹೊದಾಗ ಪೊಲೀಸರು ನಮ್ಮ
ಮಗನ ಮೊಬೈಲ್ ನಂಬರ ಕಾಲ ಡಿಟೈಲ್ಸ ತೆಗೆದು ನೊಡಿ ನೀಮ್ಮ
ಮಗ ಜೇವರಗಿ ತಾಲೂಕಿನ ರೇವನೂರ ಕಡೆಗೆ ಹೋದ ಬಗ್ಗೆ ಮಾಹಿತಿ ಇರುತ್ತದೆ ಎಂದು ಹೇಳಿದಾಗ, ನಾವು ಮೂವರು ಕೂಡಿಕೊಂಡು ಜೇವರಗಿ-ವಿಜಯಪೂರ
ರೋಡ ರೇವನೂರ ಸೀಮಾಂತರ ಹೇಲಿಪ್ಯಾಡ ಹತ್ತಿರ ರೊಡಿನ ಪಕ್ಕದಲ್ಲಿ ಹುಡುಕಾಡುತ್ತಾ ಹೋದಾಗ ರೇವನೂರ ಸೀಮಾಂತರದ ರೋಡಿನ ಪಕ್ಕದ ತಗ್ಗಿನಲ್ಲಿ ನಮ್ಮ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದು
ಬಿದ್ದಿತ್ತು ಅಲ್ಲಿಯೇ ಹೇಲ್ಮೇಟ್ ಸಹ ಇತ್ತು. ಮತ್ತು ಕೇನಾಲ್ ನೀರಿನ ತೆಗ್ಗಿನಲ್ಲಿ ಒಬ್ಬ ಮನುಷ್ಯನ ಹೆಣ ಬಿದ್ದಿದ್ದು ಇತ್ತು. ಸಮೀಪ ಹೋಗಿ ನೋಡಲಾಗಿ
ಆ ಹೆಣ ನನ್ನ ಮಗ ಶಿವಪುತ್ರನೆ ಇತ್ತು. ಅವನ ತಲೆಯಲ್ಲಿನ
ಉದ್ದನೆ ಕೂದಲು, ಮತ್ತು ಮೈ ಮೇಲಿನ ಬಟ್ಟೆ ಮತ್ತು ಅವನ ಕಾಲಿನ ಚಪ್ಪಲಿ ಹಾಗೂ ಅವನ
ಬ್ಯಾಗನಲ್ಲಿನ ಕಾಗದ ಪತ್ರಗಳು ಇದ್ದಿರುವುದು ನೋಡಿ
ಗುರುತಿಸಿರುತ್ತೆನೆ. ಅವನ ಹೊಟ್ಟೆಯಿಂದ ಕೇಳಗಿನ
ಬಾಗ ಹುಳ ತಿಂದು ಕೊಳೆತಿದ್ದು ಮೊಳಕಾಲಿನವರೆಗೆ ಎಲುಬು
ಮಾತ್ರ ಇತ್ತು ಮತ್ತು ಕಣ್ಣು, ಕಿವಿ, ಮೂಗು,
ಬಾಯಿ, ಕುತ್ತಿಗೆ ಬಾಗ, ಎದೆಯ
ಬಾಗ ಹುಳಗಳು ತಿಂದು ಕೊಳೆತಿದ್ದು ಇತ್ತು ಮತ್ತು ಹೊಟ್ಟೆ ಬಾಗವು ಸಹ ಪೂರ್ತಿ ಕೊಳೆತಿರುತ್ತದೆ. ಅಡವಿಯಲ್ಲಿನಪ್ರಾಣಿಗಳು ಮೈಮೇಲಿನ ಮಾಂಶ ಖಂಡ ತಿಂದಿದಂತೆ ಇತ್ತು.
ಅಲ್ಲಿಯೇ ರೋಡಿನಸೈಡಿನಲ್ಲಿ ಒಂದುಬೇವಿನ ಗೀಡ
ಇದ್ದು ಗಿಡದಬಡ್ಡಗೆ ಮೊಟಾರ್ ಸೈಕಲ್ ಡಿಕ್ಕಿಯಾದಂತೆ ಬಡ್ಡೇಯ ತೊಗಟಿ ಕಿತ್ತಿದಂತೆ ಆಗಿತ್ತು. ಅಲ್ಲಿ ಸ್ಥಳದಲ್ಲಿ ನೊಡಿದರೆ ನಮ್ಮ ಮಗನಾದ ಶಿವಪುತ್ರನು ತನ್ನ ಮೊಟಾರ್ ಸೈಕಲ್
ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ತನ್ನ ಗೆಳೆಯ ಅವಿನಾಶನ್ನೊಂದಿಗೆ ಬೆಂಗಳೂರದಿಂದ ಕಲಬುರಗಿಗೆ ಬಂದು ಅವನ ಗೆಳೆಯನಿಗೆ ಕಲಬುರಗಿಯಲ್ಲಿ
ಬಿಟ್ಟು ಕಲಬುರಗಿಯಿಂದ ನಮ್ಮೂರಿಗೆ ಬರಲು ಜೇವರಗಿ ವಿಜಯಪೂರ ರೋಡಿನಲ್ಲಿ ತನ್ನ ಮೊಟಾರ್ ಸೈಕಲ್ ಮೇಲೆ
ದಿನಾಂಕ 25/03/2020 ರಂದು ಮುಂಜಾನೆ 09-30 ಗಂಟೆಯಿಂದ
ಮದ್ಯಾಹ್ನ 12.00 ಗಂಟೆಯ ಮದ್ಯದಲ್ಲಿ ನಮ್ಮೂರಿಗೆ ಬರುತ್ತಿದ್ದಾಗ ತನ್ನ ವಶದಲ್ಲಿರುವ ಮೋಟಾರ ಸೈಕಲ್
ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ತಾನೆ ರೋಡಿನ ಸೈಡಿನಲ್ಲಿ ಬೇವಿನಗಿಡಕ್ಕೆ ಮೊಟಾರ್ ಸೈಕಲ್ ಡಿಕ್ಕಿಪಡಿಸಿದರಿಂದ ಅವನ ತಲೆ ಮೇಲಕಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಕರೋನಾ
ವೈರಸ್ ದಿಂದ ಹೊರಗಡೆ ಯಾರು ಹೆಚ್ಚಿಗೆ ರೊಡಿನಲ್ಲಿ
ಜನರು ಓಡಾಡದೆ ಇದ್ದರಿಂದ ನನ್ನ ಮಗನು ಮೃತ ಪಟ್ಟ ಬಗ್ಗೆ
ಯಾರಿಗು ಗೊತ್ತಾಗಿರುವುದಿಲ್ಲಾ. ಕಾರಣ ಮಾನ್ಯರು ಈ
ಬಗ್ಗೆ ಸೂಕ್ತ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.