ಕೊಲೆ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀಮತಿ ಶಂಕ್ರೆಮ್ಮ ಗಂಡ ಬಸವರಾಜ ಸಾ : ಭಾರತ
ಕಾಲೂನಿ ಹುಮನಾಬಾದ ಕಲಬುರಗಿ ರವರ ಗಂಡ ಬಸವರಾಜ
ತಂದೆ ನಿಂಗಪ್ಪಾ ಹೊಡೆಲ್ ರವರು ಕಲಬುರಗಿಯ ಟಿ.ಎ.ಪಿ.ಸಿ.ಎಂ. ಗಂಜ ಕಾರ್ಯಾಲಯದಲ್ಲಿ ಮ್ಯಾನೇಜರೆಂದು
ಸುಮಾರು ವರ್ಷಗಳಿಂದ ಸರಕಾರಿ ನೌಕರಿ ಮಾಡಿಕೊಂಡಿರುತ್ತಾರೆ. ನನಗೆ ಮಕ್ಕಳಾಗದ ಕಾರಣ ಸೇಡಂ
ತಾಲೂಕಿನ ನನ್ನ ಗಂಡನ ಅಕ್ಕನ ಮಗಳಾದ ಗಾಯತ್ರಿ ಇವಳೊಂದಿಗೆ ಮದುವೆಯಾಗಿದ್ದು ಅವಳಿಗೂ ಕೂಡ
ಮಕ್ಕಳಾಗಿರುವದಿಲ್ಲಾ. ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಗಂಡ ಬಸವರಾಜ ಹೊಡೆಲ ಹಾಗೂ
ಗಾಯತ್ರಿಯ ಅಕ್ಕನ ಮಗ ಮಣಿಕಂಠ ವಯಸ್ಸು 10 ವರ್ಷದವನಿದ್ದು ಎಲ್ಲರೂ ಒಂದು ಮನೆಯಲ್ಲಿ ಭಾರತ
ಕಾಲೂನಿಯಲ್ಲಿ ವಾಸವಾಗಿರುತ್ತೇವೆ. ನನ್ನ ಗಂಡ ಬಸವರಾಜ ಇವರು ಪ್ರತಿ ದಿವಸ ಅವರಾದ (ಬಿ)
ಸೀಮಾಂತರದ ನಮ್ಮ ಹೊಲಕ್ಕೆ ಬಂದು ಹೋಗುತ್ತಾ
ಇದ್ದರು ಇಂದು ದಿನಾಂಕ. 5-9-2018 ರಂದು ಬೆಳಗ್ಗೆ 7-30 ಸುಮಾರಿಗೆ ನನ್ನ ಗಂಡ ಬ ಸ ವ
ರಾಜ ಇವರು ಹೊಲದಲ್ಲಿ ಹುಲ್ಲಿಗೆ ಹೊಡೆಯುವ
ಕ್ರಿಮಿನಾಶಕ ಔಷಧ ಕೊಟ್ಟು ಬರಲು ಹೊಲಕ್ಕೆ ಹೋಗಿ ಆಳು ಮನುಷ್ಯ ಶಿವಕುಮಾರ ಮಠಪತಿ ಇತನಿಗೆ ತಿಳಿಸಿ
ಬರುತ್ತೇನೆಂದರೆ ಮನೆಯಿಂದ ಅವರಾದ(ಬಿ) ಗ್ರಾಮಕ್ಕೆ ಕಾರಿನಲ್ಲಿ ಹೋದರು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ನಮ್ಮ
ಅಣ್ಣತಮಕಿಯ ತಮ್ಮನಾದ ಶಿವರಾಜ ತಂದೆ ನಾಗೀಂದ್ರಪ್ಪಾ ಮಾಲಿಪಾಟೀಲ್ ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಗಂಡ
ಬಸವರಾಜನಿಗೆ ಯಾರೋ ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ ಮಾರಕ ಅಸ್ತ್ರದಿಂದ ಹೊಡೆದು ಕೊಲೆ
ಮಾಡಿರುತ್ತಾರೆ ಶವ ಸ್ಥಳದಲ್ಲಿಯೇ ಅಂದರೆ ನಮ್ಮ ಕಬ್ಬಿನ ಹೊದ ಬಂದಾರಿಯ ಹತ್ತಿರ ಬಿದ್ದಿರುತ್ತದೆ
ಅಂತಾ ತಿಳಿಸಿದರು . ಆಗ ಗಾಬರಿಗೊಂದು ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಅಕ್ಕ ಚಂದಮ್ಮಾ ಅವಳ ಗಂಡ ಕಲಪ್ಪಾ ಓಗಿ ನಾಲ್ಕು ಜನ
ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ತಲೆಯ ಮೇಲೆ ಹಾಗೂ ಬಲಗಣ್ಣಿ ಹುಬ್ಬಿನ ಮೇಲ
ಭಾಗದಲ್ಲಿ ಹರಿತವಾದ ಮಾರಕ ಅಸ್ತ್ರಗಳಿಂದ ಹೊಡೆದು
ಭಾರಿ ರಕ್ತಗಾಯ ಮತ್ತು ಬಲಗಲ್ಲಕ್ಕೆ ರಕ್ಕಗಾಯವಾಗಿ ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಸ್ರಾವವಾಗುತ್ತಾ ಇತ್ತು . ಆಗ
ಅಲ್ಲಿಯೇ ಹಾಜರಿದ್ದ ಆಳು ಮನುಷ್ಯ ಶಿವಕುಮಾರ
ಮಠಪತಿ ಮತ್ತು ಪಕ್ಕದ ಹೊಲದ ಆಳು ಮನುಷ್ಯ ಸುಭಾಶ ಮಾಳಪ್ಪಾ ಪೂಜಾರಿ ಇವರಿಗೆ ವಿಚಾರಿಸಿದ್ದು ನನ್ನ ಗಂಡನ ಶವವು
ಬಿದಿದ್ದನ್ನು ಮೊದಲು ನೋಡಿ ಎಲ್ಲರಿಗೂ ಮಾಹಿತಿ ತಿಳಿಸಿರುವದಾಗಿ ಹೇಳಿದರು. ದಿನಾಂಕ. 5-9-2018
ರಂದು 8-30 ಎ.ಎಂ.ದಿಂದ 9-30 ಎ.ಎಂ.ದ ಮದ್ಯದ ಅವಧಿಯಲ್ಲಿ ನಮ್ಮ ಕಬ್ಬಿನಶಿರಂಜಿ ಹೊಲದ ಬಂದಾರಿ
ಹತ್ತಿರ ನನ್ನ ಗಂಡ ಬಸವರಾಜ ಹೊಡಲ್ ಇವರಿಗೆ ಯಾರೋ
ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ ಮಾರಕ
ಅಸ್ತ್ರಗಳಿಂದ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಿ ಹೋಗಿದ್ದು ಸದರಿ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚುವ
ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿಒ ನಿರತವನ ಬಂಧನ :
ಅಫಜಲಪೂರ
ಠಾಣೆ : ದಿನಾಂಕ
05-09-2018 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ
ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ
ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಮಾರುತಿ ಎಎಸ್ ಐ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಲ್ಲಿಕಾರ್ಜುನ ಗುಡಿ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು
ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ
ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು
ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ನಿಂಗಪ್ಪ ತಂದೆ
ಸಿದ್ದಣ್ಣ ಬಡಿಗೇರ ಸಾ||ಮಲ್ಲಿಕಾರ್ಜುನ ಚೌಕ ಅಫಜಲಪೂರ ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ
ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ
ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮವಶಕ್ಕೆ
ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ
ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಮುಧೋಳ
ಠಾಣೆ : ಗುರಪ್ಪ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ
ಗ್ರಾಮ ನತತ್ಉ ಶಂಕರ ತಂದೆ ಭೀಮಪ್ಪ ಹೂಗಾರ ಸಾ:
ಮೊತಕಪಲ್ಲಿ ಗ್ರಾಮ ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ ತಂಟೆ ತಕರಾರು
ಮಾಡಿಕೊಂಡು ಆರೋಪಿತನು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ ಬಡೆ ಮಾಡಿದ ಗಾಯಪಡಿಸಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ
ಠಾಣೆ : ಶ್ರೀ ಶಂಕರ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ
ಮತ್ತು ಗುರಪ್ಪ ತಂದೆ ಭೀಮಪ್ಪ ಹೂಗಾರ ಸಂ: ಇನ್ನೂ ಇಬ್ಬರು ಸಾ: ಮೊತಕಪಲ್ಲಿ ಗ್ರಾಮ ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ
ತಂಟೆ ತಕರಾರು ಮಾಡಿಕೊಂಡು ಆರೋಪಿತರು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ
ಬಡೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮನೆಗೆ ಬೆಂಕಿ ಹತ್ತಿ ಲುಕ್ಸಾನ ಅದ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಸಿದ್ರಾಮ ತಂದೆ ವಿಠ್ಠಲ ಸಿಂಗೆ ಸಾ||ಬಳೂರ್ಗಿ ತಾ||ಅಫಜಲಪೂರ ರವರು
ಬಳೂರ್ಗಿ ಗ್ರಾಮದದ ಹರಿಜನ ವಾಡದಲ್ಲಿ ನಮ್ಮ ಮನೆ ಫತ್ರಾಸ ಸಡ್ಡಿನದು ಇರುತ್ತದೆ ಸದರಿ ಸಡ್ಡಿನಲ್ಲಿ
ನಾನು ನನ್ನ ಹೆಂಡತಿಯಾದ ರೇವಮ್ಮಾ ಇಬ್ಬರು ವಾಸವಾಗಿರುತ್ತೇವೆ ನಮ್ಮ ಇಬ್ಬರು ಗಂಡು ಮಕ್ಕಳು ಬಾಂಬೆಯಲ್ಲಿ
ಕೆಲಸ ಮಾಡಿಕೊಂಡಿರುತ್ತಾರೆ ನಮ್ಮ ಸಡ್ಡಿನಲ್ಲಿ ಎರಡು ಹಿಟ್ಟಿನ ಗಿರಣಿ, ಒಂದು ಕಾರಕುಟ್ಟುವ ಮಸೀನ್
, ಶಾವಗಿ ಮಶಿನ ಇಟ್ಟುಕೊಂಡು ಅದೇ ದೈನಂದಿನ ಕೆಲಸ ಮಾಡಿಕೊಂಡಿರುತ್ತೇವೆ ದಿನಾಂಕ 30/08/2018 ರಂದು
ಬೆಳಿಗ್ಗೆ ನಾನು ನನ್ನ ಹೆಂಡತಿ ಇಬ್ಬರು ನಮ್ಮ ಫತ್ರಾಸ ಸಡ್ಡ ಮುಚ್ಚಿಕೊಂಡು ನಮ್ಮ ಬಳೂರ್ಗಿ ಗ್ರಾಮದಲ್ಲಿ
ಹೋದಾಗ 12.30 ಪಿಎಮ್ ಸುಮಾರಿಗೆ ನಮ್ಮ ಓಣಿಯ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ ಇವರು ನನಗೆ ಕಾಲ್ ಮಾಡಿ
ತಿಳಿಸಿದ್ದೆನೆಂದರೆ ನಿಮ್ಮ ಫತ್ರಾಸ ಸಡ್ಡಿನಲ್ಲಿ ಬೆಂಕಿ ಹತ್ತಿದೆ ಬೆಗ ಬನ್ನಿ ಅಂತ
ತಿಳಿಸಿದ ಬಳಿಕ ನಾನು ನನ್ನ ಹೆಂಡತಿ ಓಡಿ ಹೋಗಿ ನೋಡಲಾಗಿ ನಾವು ವಾಸವಾಗಿರುವ ಫತ್ರಾಸ ಸಡ್ಡಿಗೆ ಆಕಸ್ಮಿಕವಾಗಿ
ವಿದ್ಯೂತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಅತ್ತಿ ಉರಿಯುತಿತ್ತು
ನಾನು ನನ್ನ ಹೆಂಡತಿ ನಮ್ಮ ಗ್ರಾಮದ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ, ಶ್ರೀದೇವಿ ಗಂಡ ಮಲ್ಲಪ್ಪ ಜಳಕಿ,
ತುಕಾರಾಮ ತಂದೆ ಮಲ್ಲಿಕಾರ್ಜುನ ಹುಣಸಡಲಗಿ, ಸಂಜಯ ಕುಮಾರ ತಂದೆ ರಾಮಚಂದ್ರ ದೊಡ್ಮನಿ ಹಾಗು ಇನ್ನಿತರರು
ಕೂಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು ಬೆಂಕಿ ನಂದದ ಕಾರಣ ಅಗ್ನಿಶಾಮಕಕ್ಕೆ ಕರೆ ಮಾಡಿ ಅಗ್ನಿಶಾಮಕ
ವಾಹನದಿಂದ ನಂದಿಸಿದ್ದು ಇರುತ್ತದೆ. ನಮ್ಮ ಫತ್ರಾಸ ಸಡ್ಡಿನ ಮನೆಯಲಿದ್ದ ಎರಡು ಹಿಟ್ಟಿನ ಗಿರಣಿ
ಮಶೀನ, ಒಂದು ಕಾರ ಕುಟ್ಟುವ ಮಶಿನ್, ಶಾವಗಿ ಮಶೀನ, ಒಂದು ಎಲ್ ಇ ಡಿ ಟಿವ್ಹಿ ಮನೆಯ ದಿನ ನಿತ್ಯ ಬಳಕೆಯ
ಸಾಮಾನುಗಳು, 10 ತೊಲೆ ಬಂಗಾರದ ಆಭರಣಗಳು, 200000/-ರೂಪಾಯಿ ನಗದು ಹಣ ಆಕಸ್ಮಿಕವಾಗಿ ವಿದ್ಯೂತ್
ಶಾಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಸುಟ್ಟಿರುತ್ತವೆ. ಹೀಗೆ ಒಟ್ಟು ಅಂದಾಜು 10,00,000/-ರೂಪಾಯಿಯಷ್ಟು
ಆಕಸ್ಮಿಕ ಬೆಂಕಿಗೆ ಸುಟ್ಟು ಲುಕ್ಸಾನ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.