ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-02-2021
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 06/2021, ಕಲಂ. 498(ಎ), 323, 324, 504 ಐಪಿಸಿ :-
ಫಿರ್ಯಾದಿ ಸರಸ್ವತಿ ಗಂಡ ತುಕಾರಾಮ ಗಾದಗಿಕರ್ ವಯ: 58 ವರ್ಷ, ಜಾತಿ: ಕಬ್ಬಲಿಗೇರ, ಸಾ: ಅಷ್ಟೂರ ಗ್ರಾಮ ರವರ ಗಂಡ ದಿನಾಲು ಸರಾಯಿ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಟ್ಟು, ಹೊಡೆ ಬಡೆ ಮಾಡುತ್ತಿರುತ್ತಾನೆ, ಹೀಗಿರುವಾಗ ದಿನಾಂಕ 11-02-2021 ರಂದು 2200 ಗಂಟೆಗೆ ಫಿರ್ಯಾದಿಯು ಮನೆಯ ಒಲೆಯ ಮುಂದೆ ಕುಳಿತು ಅಡುಗೆ ಮಾಡುವಾಗ ಗಂಡ ತುಕಾರಾಮ ಇತನು ಸರಾಯಿ ಕುಡಿದು ಬಂದು ನಿನ್ನ ಮಗ ಇನ್ನು ಬಂದಿಲ್ಲ ಅಂತ ಬೈಯುತ್ತಾ ಮನೆಯ ಓಳಗೆ ಬಂದು ಬಡಿಗೆ ಅದು ಇದು ಹುಡುಕುತ್ತಿರುವಾಗ ಹೇಗಾದರೂ ಹೊಡೆಯುತ್ತಾರೆ ಅಂತ ಫಿರ್ಯಾದಿಯು ಮನೆಯಿಂದ ಹೊರಗಡೆ ಹೋಗುವಾಗ ಒಮ್ಮೇಲೆ ಕೈಯಿಂದ ಕೂದಲು ಹಿಡಿದು ಕುತ್ತಿಗೆಯಲ್ಲಿ ಕೈ ಹಿಡಿದು ಬಡಿಗೆಯಿಂದ ಬಲ ಹಣೆಯ ತಲೆಯ ಮೇಲೆ ಹಾಗು ಎಡ ಹಣೆಯ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ನಂತರ ಫಿರ್ಯಾದಿಯು ಚೀರಾಡುವಾಗ ಮೈದುನನ ಸೊಸೆ ಲಕ್ಷ್ಮೀ ಇವಳು ಬಿಡಿಸಿರುತ್ತಾಳೆ, ಗಂಡ ಓಡಿ ಹೋಗಿರುತ್ತಾನೆ, ಫಿರ್ಯಾದಿಯು ನೆಲಕ್ಕೆ ಬಿದ್ದಾಗ ಮಂಗಲಾ ಗಂಡ ಸಂಜುಕುಮಾರ ಎಲ್ಲರೂ ಬಂದಾಗ ಮತ್ತು ಲಕ್ಷ್ಮೀ ಇವಳು ನೌಬಾದ ಠಾಣೆಗೆ ಕರೆ ಮಾಡಿದಾಗ ಪೊಲೀಸರು ಮನೆಗೆ ಬಂದು 108 ಎಂಬುಲೆನ್ಸಗೆ ಕರೆಯಿಸಿ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 12-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 279, 337, 338 ಐಪಿಸಿ :-
ದಿನಾಂಕ 12-02-2021 ರಂದು ಫಿರ್ಯಾದಿ ಸೋಮನಾಥ ತಂದೆ ಗುರುಚಂದ ಅಂಬಿಲಪೂರೆ, ವಯ: 35 ವರ್ಷ, ಜಾತಿ: ಸಮಗಾರ, ಸಾ: ಧನ್ನೂರ (ಕೆ) ವಾಡಿ, ತಾ: ಬಸವಕಲ್ಯಾಣ ರವರಿಗೆ ಸ್ವ-ಸಹಾಯ ಸಂಘಿನ ಕೆಲಸವಿದ್ದ ಕಾರಣ ಫಿರ್ಯಾದಿಯವರು ತಮ್ಮೂರ ಹೆಣ್ಣು ಮಕ್ಕಳಾದ 1) ಸಂಗೀತಾ ಗಂಡ ರಾಜು ಮಾನಕಾರಿ ವಯ: 38 ವರ್ಷ, 2) ಪರವೀನ ಗಂಡ ರಿಯಾಜ ಶೇಖ ವಯ: 32 ವರ್ಷ, 3) ಶಕುಂತಲಾ ಗಂಡ ಅಭಂಗರಾವ ಖತಾಳೆ ವಯ: 42 ವರ್ಷ, 4) ಕಾವೇರಿ ಗಂಡ ಸಂಜು ಗೌಂಡಿ ವಯ: 40 ವರ್ಷ, 5) ಶೀತಲ ಗಂಡ ಏಕನಾಥ ಸಗರ ವಯ: 42 ವರ್ಷ, ಹಾಗೂ ಫಿರ್ಯಾದಿಯವರ ಹೆಂಡತಿ ನಿರ್ಮಲಾ ವಯ: 30 ವರ್ಷ ಎಲ್ಲರು ಕೂಡಿಕೊಂಡು ತಮ್ಮೂರ ರೀಯಾಜ ಶೇಖ ಈತನ ಅಪ್ಟಿ ಆಟೋ ನಂ. ಕೆಎ-39/5474 ನೇದರಲ್ಲಿ ಬಸವಕಲ್ಯಾಣಕ್ಕೆ ಬಂದು ಕೆಲಸ ಮುಗಿಸಿಕೊಂಡು ಎಲ್ಲರು ಅದೇ ಆಟೋದಲ್ಲಿ ಮರಳಿ ತಮ್ಮೂರಿಗೆ ಹೋಗುವಾಗ ಬಸ್ ನಿಲ್ದಾಣ ರೋಡಿಗೆ ಇರುವ ಪೆಟ್ರೋಲ್ ಬಂಕ್ ಎದುರಿಗೆ ಸದರಿ ಆಟೋ ಚಾಲಕನಾದ ಆರೋಪಿ ರೀಯಾಜ ತಂದೆ ತಮೀಜಸಾಬ ಶೇಖ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಧನ್ನೂರ (ಕೆ) ವಾಡಿ, ತಾ: ಬಸವಕಲ್ಯಾಣ ಈತನು ತನ್ನ ಆಟೋವನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿರುತ್ತದೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಯಾವುದೇ ಗಾಯಗಳಾಗಿರುವದಿಲ್ಲಾ, ಹೆಂಡತಿಗೂ ಸಹ ಯಾವುದೇ ಗಾಯಗಳಾಗಿರುವದಿಲ್ಲಾ ಮತ್ತು ಸಂಗೀತಾ ಮಾನಕಾರಿರವರಿಗೆ ಬಲಗೈ ರಟ್ಟೆಗೆ ಗುಪ್ತಗಾಯ, ಬಲಗಣ್ಣಿನ ಹುಬ್ಬಿಗೆ ತರಚಿದ ಗಾಯ, ಪರವಿನ ಶೆಖರವರಿಗೆ ಬಲಗೈ ಬೆರಳುಗಳಿಗೆ, ಎರಡು ಮೊಣಕಾಲಿಗೆ & ಬಲಭುಜಕ್ಕೆ ತರಚಿದ ಗಾಯ, ಶಕುಂತಲಾ ಖತಾಳೆರವರಿಗೆ ತಲೆಯ ಹಿಂಭಾಗ ರಕ್ತಗಾಯ, ಎಡಗಾಲು ಪಾದದ ಹತ್ತಿರ ತರಚಿದ ಗಾಯ, ಕಾವೇರಿ ಗೌಂಡಿ ರವರ ಮೆಲ್ತುಟಿಗೆ & ಮೂಗಿನ ಮಧ್ಯದಲ್ಲಿ ಭಾರಿ ರಕ್ತಾಗಯ, ಎರಡು ಕೈ ಬೆರಳುಗಳಿಗೆ ತರಚಿದ ಗಾಯ, ಬಲಗೈ ಮೋಣಕೈ ಹತ್ತಿರ ತರಚಿದ ಗಾಯ, ಶಿತಲ ಸಗರ ರವರಿಗೆ ಯಾವುದೆ ಗಾಯಗಳಾಗಿರುವದಿಲ್ಲಾ, ಆರೋಪಿಗೂ ಸಹ ಯಾವುದೆ ಗಾಯಗಳಾಗಿರುವದಿಲ್ಲಾ, ನಂತರ ಗಾಯಗೊಂಡವರಿಗೆ ಚಿಕಿತ್ಸೆ ಕುರಿತು ರೀಫಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.