ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-08-2021
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 08/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 25-08-2021 ರಂದು ಫಿರ್ಯಾದಿ ನಾಗಮ್ಮಾ ಗಂಡ ಮಾದಪ್ಪಾ ಶಿವಗೊಂಡ ಸಾ: ಯರನಳ್ಳಿ ಗ್ರಾಮ ರವರ ಮಗನಾದ ಝರೆಪ್ಪಾ ತಂದೆ ಮಾದಪ್ಪಾ ಶಿವಗೊಂಡ ವಯ: 40 ವರ್ಷ ಇತನು ಹೊಲಕ್ಕೆ ಹೋಗಿ ಹುಲ್ಲು ತರುತ್ತೇನೆಂದು ಹೇಳಿ ತಮ್ಮೂರ ವಿಶ್ವನಾಥ ಧೋಬಿ ಇತನ ಜೊತೆಯಲ್ಲಿ ಹೊಲಕ್ಕೆ ಹೋಗುತ್ತಿರುವಾಗ ಬಸಪ್ಪಾ ವಡ್ಡೆ ರವರ ಹೊಲದ ಹತ್ತಿರ ಇರುವಾಗ ಒಮ್ಮೆಲೆ ಸಿಡಿಲು ಝರೆಪ್ಪಾ ಈತನಿಗೆ ಬಡಿದಿದ್ದು, ಆತನ ಎದೆಗೆ ಸುಟ್ಟ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಾಗೂ ವಿಶ್ವನಾಥ ಇತನ ಬಲಗೈ ಹತ್ತಿರ ಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 142/2021, ಕಲಂ. 302 ಜೊತೆ 34 ಐಪಿಸಿ :-
ಫಿರ್ಯಾದಿ ನರಸಿಂಗ್ ರೆಡ್ಡಿ ತಂದೆ ಈರಣ್ಣ ರೆಡ್ಡಿ ಮುನ್ನುರ್ ವಯ: 40 ವರ್ಷ, ಜಾತಿ: ರೆಡ್ಡಿ, ಸಾ: ಶಿವಪೂರ ಗಲ್ಲಿ ಹುಮನಾಬಾದ ರವರ ತಮ್ಮನಾದ ಶಿವಕುಮಾರ ಇತನು ಲಾರಿ ಡ್ರೈವರ ಕೆಲಸ ಮಾಡಿಕೊಂಡಿದ್ದು, ಇತ್ತಿಚೇಗೆ ಸಾರಾಯಿ ಕುಡಿಯುವ ಚಟಕ್ಕೆ ಬಿದ್ದಿದ್ದು, ಸಾರಾಯಿ ಕುಡಿದು ಮನೆಗೆ ಬಂದಾಗ ತನ್ನ ಹೆಂಡತಿ ಮಕ್ಕಳಿಗೆ ಹೊಡೆ ಬಡೆ ಮಾಡುತ್ತಿದ್ದನು, ಸಾರಾಯಿ ಕುಡಿದು ಬಂದಾಗ ಹೆಂಡಿತಿಯೊಂದಿಗೆ ಜಗಳ ಮಾಡಿ, ಇಬ್ಬರು ಹೊಡೆಬಡೆ ಮಾಡಿಕೊಳ್ಳುತ್ತಿದ್ದರು, ಹೀಗೆ ಸುಮಾರು ವರ್ಷಗಳಿಂದ ಜಗಳ ಮಾಡುತ್ತಿದ್ದು, ಹೀಗಿರುವಲ್ಲಿ ದಿನಾಂಕ 24-08-2021 ರಂದು ರಾತ್ರಿ ತಮ್ಮನ ಹೆಂಡತಿಯ ತಮ್ಮನಾದ ರಾಹುಲ ರೆಡ್ಡಿ ತಂದೆ ಸಂಜುರೆಡ್ಡಿ ಇತನು ಅವರ ಮನೆಗೆ ಬಂದಿದ್ದು, 2300 ಗಂಟೆಯ ಸುಮಾರಿಗೆ ತಮ್ಮ ಸಾರಾಯಿ ಕುಡಿದ ಅಮಲಿನಲ್ಲಿ ಮನೆಗೆ ಬಂದಾಗ ತಮ್ಮನ ಹೆಂಡತಿ ಮತ್ತು ತಮ್ಮ ಶಿವಕುಮಾರ ಇತನೊಂದಿಗೆ ಜಗಳ ಮಾಡುತ್ತಿದ್ದ ಶಬ್ದ ಕೇಳಿ ಬರುತ್ತಿದ್ದು, ಅವರಿಬ್ಬರು ಹೀಗೆ ದಿನಾಲೂ ಜಗಳ ಮಾಡಿಕೊಳ್ಳುತ್ತಾರೆಂದು ಅಂದುಕೊಂಡು ಮನೆಯಲ್ಲಿ ಮಲಗಿಕೊಂಡಿದ್ದು, ನಂತರ ದಿನಾಂಕ 25-08-2021 ರಂದು 0700 ಗಂಟೆಯ ಸುಮಾರಿಗೆ ತಮ್ಮನ ಮನೆಯಲ್ಲಿ ಅಳು-ಕರು ಮಾಡುವ ಶಬ್ದ ಕೇಳಿ ಫಿರ್ಯಾದಿಯು ತನ್ನ ಹೆಂಡತಿ ಜೊತೆ ಇಬ್ಬರು ತಮ್ಮನ ಮನೆಯಲ್ಲಿ ಹೋಗಿ ನೋಡಲು ಮನೆಯ ಪಲ್ಲಂಗ್ ಮೇಲೆ ತಮ್ಮ ಶಿವಕುಮಾರ ಇತನು ಮೃತಪಟ್ಟು ಬಿದ್ದಿದ್ದು, ಶಿವಕುಮಾರ ಇತನ ಎಡಗೈ ಭುಜದಿಂದ ಮೊಳಕೈವರೆಗೆ ಕಂದುಗಟ್ಟಿದ ಗಾಯ ಮತ್ತು ಬಲಗೈ ಭುಜದಿಂದ ಮೋಳಕೈವರೆಗೆ ಕಂದು ಗಟ್ಟಿದ ಗಾಯಗಳು, ಬೆನ್ನಿನ ಹಿಂಭಾಗದಲ್ಲಿ ಕಂದುಗಟ್ಟಿದ ಗಾಯಗಳು, ಸೊಂಟದ ಎರಡು ಬದಿಗೆ ಕಂದುಗಟ್ಟಿದ ಹಾಗೂ ರಕ್ತ ಚಿಮ್ಮಿದ ಗಾಯಗಳು, ಬಲಗಾಲಿನ ಮೊಳಕಾಲಿನ ಕೆಳಭಾಗ ಕಾಲಿನ ಮೂಳೆ ಮುರಿದಿದ್ದು, ಕಾಲು ಮುರಿದಿರುತ್ತದೆ, ಎರಡು ಮೊಳಕಾಲಿನ ಮೇಲೆ ಕಂದುಗಟ್ಟಿದ ಗಾಯಗಳು ಹಾಗೂ ಎರಡು ಕೈಗಳ ಮುಂಗೈಗಳು, ಕಂದುಗಟ್ಟಿ ಉಬ್ಬಿದಂತೆ ಆಗಿದ್ದು ಇರುತ್ತವೆ, ದಿನಾಂಕ 24-08-2021 ರಂದು 2300 ಗಂಟೆಯಿಂದ 2400 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮನ ಹೆಂಡತಿ ವನೀತಾ ಮತ್ತು ಅವಳ ತಮ್ಮ ರಾಹುಲ್ ಇಬ್ಬರು ಕೂಡಿಕೊಂಡು ತಮ್ಮನ ಎರಡು ಕೈಗಳು ಕಟ್ಟಿ, ಕಟ್ಟಿಗೆಯಿಂದ ಹೊಡೆದು ಅವನ ಬಲಗಾಲು ಮುರಿದಿರುವುದರಿಂದ ಅವನು ಚೀರಾಡುತ್ತಿರುವಾಗ ಅವನ ಬಾಯಿಗೆ ಮತ್ತು ಮೂಗಿಗೆ ಬಟ್ಟೆಯಿಂದ ಒತ್ತಿ ಹಿಡಿದು ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 123/2021, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಕೃಷ್ಣಾರಡ್ಡಿ ತಂದೆ ಶಿವಾರಡ್ಡಿ ಖಂದೋಡೆ ವಯ: 59 ವರ್ಷ, ಜಾತಿ: ರಡ್ಡಿ, ಸಾ: ಧುಪತಮಹಾಗಾಂವ, ತಾ: ಔರಾದ ರವರ ಮಗನಾದ ಗಜಾನಂದರಡ್ಡಿ ವಯ: 25 ವರ್ಷ ಇತನು ದಿನಾಲು ಕೂಲಿ ಕೆಲಸಕ್ಕೆ 0900 ಗಂಟೆಗೆ ಹೋಗಿ 2000 ಗಂಟೆಯವರೆಗೆ ಮನೆಗೆ ಬರುತ್ತಿದ್ದನು, ಹೀಗಿರುವಾಗ ದಿನಾಂಕ 28-05-2021 ರಂದು 1000 ಗಂಟೆಯ ಸುಮಾರಿಗೆ ಕೆಲಸಕ್ಕೆ ಹೋಗುತ್ತೆನೆಂದು ಹೇಳಿ ಮನೆಯಿಂದ ಹೋಗಿ ರಾತ್ರಿಯಾದರೂ ಮನೆಗೆ ಬಂದಿರುವದಿಲ್ಲಾ, ಎಲ್ಲಿಯಾದರು ಕೆಲಸಕ್ಕೆ ಹೋಗಿ ಬರಬಹುದೆಂದು ತಿಳಿದಿದ್ದು, ಆದರೇ ಮರುದಿನ ಸಾಯಂಕಾಲವಾದರೂ ಮರಳಿ ಮನೆಗೆ ಬಂದಿರುವದಿಲ್ಲಾ, ನಂತರ ಫಿರ್ಯಾದಿಯು ಆತನನ್ನು ಹುಡುಕಾಡಿದರೂ ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ, ಕಾಣೆಯಾದ ಮಗನ ವಿವರ :- 1) ಗಜಾನಂzÀ ರಡ್ಡಿ ತಂದೆ ಕೃಷ್ಣಾರಡ್ಡಿ ಖಂದೊಡೆ, ವಯ: 25 ವರ್ಷ, ಸಾ: ಧೂಪತªÀÄಹಾಗಾಂವ, ತಾ: ಔರಾದ, 2) ಮೈಬಣ್ಣ: ಗೋಧಿ ಬಣ್ಣ, ಮೈಕಟ್ಟು : ತೆಳ್ಳನೇಯ ಮೈಕಟ್ಟು, 3) ಧರಿಸಿ ಬಟ್ಟ : ಬಿಳಿ ಬಣ್ಣದ ಫುಲ್ ಶರ್ಟ, ಕರಿಯ ಬಣ್ಣದ ಪ್ಯಾಂಟ ಮೇಲೆ ಚಾಕಲೇಟ ಬಣ್ಣದ ಸ್ವೇಟರ್ ಧರಿಸಿರುತ್ತಾನೆ, 4) ಭಾಷೆ : ಕನ್ನಡ, ಹಿಂದಿ & ತೆಲಗು ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 124/2021, ಕಲಂ. 457, 380 ಐಪಿಸಿ :-
ದಿನಾಂಕ 25-08-2021 ರಂದು ಮದ್ಯರಾತ್ರಿ 0100 ಗಂಟೆಯಿಂದ 0500 ಗಂಟೆಯ ಮಧ್ಯದ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ರಂದು ಫಿರ್ಯಾದಿ ಜಗನಾಥ ತಂದೆ ಕಾಶಿನಾಥ ಮನ್ನಳ್ಳೆ ವಯ: 25 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಗೋರನಳ್ಳಿ ಗ್ರಾಮ, ತಾ: ಜಿ: ಬೀದರ ರವರ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಆಡುಗಳು ಹಾಕಿಟ್ಟಿದ ಕೊಣೆಯ ಬಾಗಿಲ ಕೀಲಿ ಮುರಿದು ಎಲ್ಲಾ 8 ಆಡುಗಳನ್ನು ಕ¼Àವು ಮಾಡಿಕೊಂಡು ಹೋಗಿರುತ್ತಾರೆ, ಅವುಗಳ ಅ.ಕಿ 40,000/- ರೂ. ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 98/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 25-08-2021 ರಂದು ಒಬ್ಬ ವ್ಯಕ್ತಿ ಕಳಸದಾಳ
ಗ್ರಾಮದಲ್ಲಿ ಭಾಲ್ಕಿ ರೋಡಿಗೆ ಇರುವ ಭವಾನಿ ಮಂದಿರ ಹತ್ತಿರ ಸಾರ್ವಜನಿಕರಿಂದ 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು
ನಂದಕುಮಾರ ಪಿಎಸ್ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ
ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕಳಸದಾಳ ಗ್ರಾಮದ ಸರಕಾರಿ
ಶಾಲೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಅಬ್ದುಲ ಸಮದ ತಂದೆ ನಬೀಸಾಬ ಶೇಕ ವಯ:
32 ವರ್ಷ, ಜಾತಿ: ಮುಸ್ಲಿಂ, ಸಾ: ಕಳಸದಾಳ, ತಾ: ಭಾಲ್ಕಿ ಇತನು 01/- ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ
ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ
ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಸದರಿ ಆರೋಪಿಗೆ ಹಿಡಿದು ಆತನ ಅಂಗ ಜಡ್ತಿ ಮಾಡಲು
ಆತನ ಹತ್ತಿರ 1) ನಗದು ಹಣ 6980/- ರೂ., 2) 8 ಮಟಕಾ ನಂಬರ ಬರೆದ ಚೀಟಿಗಳು,
3) ಒಂದು ಬಾಲ ಪೇನ್ ಇದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ
ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.