ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-11-2019
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 135/2019, ಕಲಂ.
279, 337, 304(ಎ) ಐಪಿಸಿ :-
ದಿನಾಂಕ 26-11-2019 ರಂದು ಫಿರ್ಯಾದಿ ಧನರಾಜ ತಂದೆ ರೇವಣಪ್ಪಾ ಕೊನಗುತ್ತಿ ಸಾ ಏಣಕೂರ, ತಾ: ಭಾಲ್ಕಿ ರವರ ತಮ್ಮನಾದ ಅನಿಲಕುಮಾರ ಇವನು
ತಮ್ಮೂರ ಶಾಕೀರ ಅಹ್ಮದ ಪಟೇಲ್ ತಂದೆ ಎಮ್.ಡಿ ನಜೀರ ಅಹ್ಮದ ಪಟೇಲ್ ರವರ
ಮಹಿಂದ್ರಾ ಸ್ಕಾರಪಿಯೋ ವಾಹನ ಸಂ. ಕೆಎ-288/ಎನ್-4815 ನೇದರಲ್ಲಿ ನೇದರಲ್ಲಿ ಶಾಕೀರ ಅಹ್ಮದ ಪಟೇಲ್ ರವರಿಗೆ ಕೂಡಿಸಿಕೊಂಡು ಹುಡಗಿ ಗ್ರಾಮದ ಅವರ ಸಂಬಂಧಿಕರ ಮನೆಗೆ ಹೋಗುವಾಗ
ಧುಮ್ಮನಸೂರ ಗ್ರಾಮದ ಗುರು ನಗರ ಹತ್ತಿರ ಬಂದಾಗ ರಾಷ್ಟ್ರೀಯ ಹೆದ್ದಾರಿ
ನಂ. 50 ಹುಮನಾಬಾದ - ಬೀದರ
ರೋಡಿನ ಮೇಲೆ ಎದುರಿನಿಂದ ಅಂದರೆ ಹುಮನಾಬಾದ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್
ನಂ. ಕೆಎ-32/ಎಫ್-2228 ನೇದರ
ಚಾಲಕನಾದ
ಆರೋಪಿ ಮಹಾಂತಗೌಡ ತಂದೆ ಮಡಿವಾಳಪ್ಪಾ ಬಿರಾದಾರ ಸಾ:
ಕಡಕೋಳ, ತಾ: ಯಡ್ರಾಮಿ, ಜಿಲ್ಲೆ: ಕಲಬುರಗಿ ಇತನು ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಅನಿಲಕುಮಾರ ಇವನು ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ಸದರಿ ಡಿಕ್ಕಿಯಿಂದ ಅನಿಲಕುಮಾರ ಇವನಿಗೆ ಮುಖಕ್ಕೆ,
ತಲೆಗೆ ತೀವ್ರ ರಕ್ತಗಾಯ ಮತ್ತು ಎದೆಗೆ ತೀವ್ರ ಗುಪ್ತಗಾಯ ಹಾಗೂ
ಬಲಗೈ ಮೊಣಕೈಗೆ ರಕ್ತಗಾಯಗಳಾಗಿ
ಸ್ಥಳದಲ್ಲೇ ಮೃತಪಟ್ಟಿರುತ್ತಾನೆ
ಹಾಗೂ ಶಾಕೀರ ಅಹ್ಮದ ಪಟೇಲ್ ಇವನಿಗೆ
ನೋಡಲಾಗಿ ಎದೆಗೆ, ಬಲಗೈ ಮುಂಗೈ, ಬಲಗಾಲ ಕಪಗಂಡಕ್ಕೆ ಮತ್ತು ಎಡಗೈ ಮುಂಗೈಗೆ ತೀವ್ರ ಗುಪ್ತಗಾಯಗಳಾಗಿ
ಸ್ಥಳದಲ್ಲೇ ಮೃತಪಟ್ಟಿರುತ್ತಾರೆ
ಮತ್ತು ಸದರಿ ಬಸ್ಸಿನಲ್ಲಿ ಕುಳಿತ ಇಸ್ಮಾಯಿಲಖಾನ ತಂದೆ ಹುಸೇನಖಾನ ಪಠಾಣ ಸಾ: ಬೀದರ ರವರಿಗೆ ನೋಡಲಾಗಿ ಎರಡು ಕಾಲುಗಳಿಗೆ ಗುಪ್ತಗಾಯ,
ಅವರ ಪತ್ನಿ ಅಫ್ಸರಬೇಗಂ ರವರಿಗೆ ಮೇಲಿನ ತುಟಿಗೆ ರಕ್ತಗಾಯವಾಗಿರುತ್ತದೆ,
ಆರೋಪಿಗೆ ಎರಡು ಕಾಲುಗಳಿಗೆ ಗುಪ್ತಗಾಯಗಳು,
ಬಸ್ ಕಂಡಕ್ಟರ್ ಚನ್ನಬಸವ ಆರ್ಯ ತಂದೆ ಸದಾಶಿವ ಹಪ್ಪಾರ ಸಾ: ಕಲಬುರಗಿ ಇವನಿಗೆ ಮೊಣಕಾಲಿಗೆ ಗುಪ್ತಗಾಯವಾಗಿರುತ್ತದೆ
ಹಾಗೂ ಬಸ್ಸಿನಲ್ಲಿದ್ದ ಇನ್ನೂ ಇತರೇ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ
ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 84/2019, ಕಲಂ. 279, 338 ಐಪಿಸಿ :-
ದಿನಾಂಕ 26-11-2019 ಫಿರ್ಯಾದಿ ಮಹೇಂದ್ರಕುಮಾರ ತಂದೆ ಶರಣಪ್ಪಾ ಹಾಳೋಳ್ಳಿಕರ
ವಯ: 25 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹೊನ್ನಡ್ಡಿ, ತಾ: ಜಿ:
ಬೀದರ ರವರ ತಂದೆಯಾದ ಶರಣಪ್ಪಾ ಬಗದಲ ಕಡೆಯಿಂದ ತನ್ನ ಟಿವಿಎಸ್
ವಾಹನ ಚಲಾಯಿಸುತ್ತಾ ಕೈ ಮಾಡಿ ಪೆಟ್ರೊಲ
ಬಂಕ್ ಕಡೆಗೆ ಹೊಗುತ್ತಿದ್ದಾಗ
ಅವನ ಹಿಂದಿನಿಂದ ಪೂಜಾ ಬಸ ನಂ. ಕೆಎ-39/7213 ನೇದರ ಚಾಲಕನಾದ ಆರೋಪಿ ಶಿವಾನಂದ ತಂದೆ ವಿಠಲ ಕಟಬೆನೊರ ವಯ: 26 ವರ್ಷ, ಜಾತಿ: ಕಟಬೊ
ಎಸ್.ಸಿ, ಸಾ: ಚಟನಳ್ಳಿ ಇತನು ತನ್ನ ಸಾಯಿ ಪೂಜಾ ಬಸ ನೇದನ್ನು
ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೆ
ಫಿರ್ಯಾದಿಯ ತಂದೆಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಂದೆಯ ತಲೆಯ ಹಿಂಬಾಗದಲ್ಲಿ
ಭಾರಿ ಒಳಪೆಟ್ಟು, ಬಲಗಡೆ ಕಿವಿಗೆ ರಕ್ತ ಬರುತ್ತಿತ್ತು,
ಬಲಗಾಲಿನ ಹಿಮ್ಮಡಿ, ಬಲಗಣ್ಣಿನ ಹತ್ತಿರ ಭಾರಿ ಒಳ ಪೆಟ್ಟಾಗಿ ಎಲುಬು ಮುರಿದಂತೆ ಕಂಡು ಬಂದಿರುತ್ತದೆ
ಹಾಗು ಎಡಗಡೆ ಮೆಲಕಿನಲ್ಲಿ
ರಕ್ತ ಬರುವಂತೆ ತರಚಿದ ಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ
ನಗರ ಪೊಲೀಸ ಠಾಣೆ ಅಪರಾಧ ಸಂ. 199/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 26-11-2019
ರಂದು ಫಿರ್ಯಾದಿ ಅಭಿಷೇಕ@ಗುರುಪ್ರಸಾದ ತಂದೆ ರಮೇಶ
ಕರಕಾಳೆ, ವಯ: 20 ವರ್ಷ, ಜಾತಿ: ಲಿಂಗಾಯತ, ಸಾ: ಲೆಕ್ಚರ ಕಾಲೋನಿ, ತಾ: ಭಾಲ್ಕಿ ರವರು ತನ್ನ ಖಾಸಗಿ ಕೆಲಸಕ್ಕೆ ಭಾಲ್ಕಿ ಬಸ್ಸ ನಿಲ್ದಾಣದ ಕಡೆಗೆ ತನ್ನ ಮೊಟರ ಸೈಕಲ ನಂ. ಕೆಎ-39/ಕೆ-3673 ನೇದನ್ನು ಚಲಾಯಿಸಿಕೊಂಡು ಒಳಗಡೆ
ರಸ್ತೆಯಿಂದ ಬಸ್ಸ ನಿಲ್ದಾಣದ ಕಡೆಗೆ ಹೋಗುತ್ತಿರುವಾಗ ಮಲ್ಲೆಕಿ ಮಜ್ಜಿದ ಹತ್ತಿರ ಎದುರಿನಿಂದ
ಒಂದು ಮೊಟರ ಸೈಕಲ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು
ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೆ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲ ಪಾದಕ್ಕೆ ಭಾರಿ ರಕ್ತಗಾಯವಾಗಿ
ಮೂಳೆ ಮುರಿದಿರುತ್ತದೆ, ನಂತರ ಫಿರ್ಯಾದಿಯು ಒಂದು ಅಟೊದಲ್ಲಿ ಕುಳಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ.
107/2019, ಕಲಂ.
78(3) ಕೆ.ಪಿ ಕಾಯ್ದೆ :-
ದಿನಾಂಕ 26-11-2019 ರಂದು ಹಳ್ಳಿಖೇಡ[ಬಿ]
ಪಟ್ಟಣದ ಶ್ರೀ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ[ಬಿ]
ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಹಳ್ಳಿಖೇಡ[ಬಿ]
ಪಟ್ಟಣದ ಶ್ರೀ ಬಸವೇಶ್ವರ ಚೌಕ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿ ಖಾಜಾಮೀಯಾ ತಂದೆ ಅಜಿಮೋದ್ದಿನ ಜಮಾದಾರ ವಯ:
50 ವರ್ಷ, ಜಾತಿ: ಮುಸ್ಲಿಂ,
ಸಾ: ನೇಕವಾಡಿ ಮೊಹಲ್ಲಾ ಹಳ್ಳಿಖೇಡ[ಬಿ]
ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಲು ಮಟಕಾ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು,
ಮಟಕಾ ಬರೆದುಕೊಳ್ಳುತ್ತಿದ್ದ ಸದರಿ ಆರೋಪಿಗೆ ಹಿಡಿದುಕೊಂಡು ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಲಾಗಿ ಆತನ ಹತ್ತಿರ
2430/- ರೂ. ನಗದು ಹಣ,
1 ಮಟಕಾ ಚೀಟಿ ಮತ್ತು
1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಜಪ್ತಿ ಪಂಚನಾಮೆ ಅಡಿಯಲ್ಲಿ ಜಪ್ತಿ ಮಾಡಿಕೊಂಡು,
ಆರೋಪಿತನನ್ನು ತಾಬೆಗೆ ತೆಗೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 148/2019, ಕಲಂ. 465, 468, 471, 420
ಐಪಿಸಿ :-
ದಿನಾಂಕ 26-11-2019 ರಂದು ಫಿರ್ಯಾದಿ ಸಿದ್ದವೀರಯ್ಯಾ ಕ್ಷೇತ್ರ ಶಿಕ್ಷಣಧಿಕಾರಿಗಳು ಭಾಲ್ಕಿ ರವರು ಠಾಣೆಗೆ
ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರು ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ 2007-2008 ನೇ ಸಾಲಿನಲ್ಲಿ ಕಲಬುರಗಿ ವಿಭಾಗ ಮಟ್ಟದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಖಾಲಿ
ಇರುವ ಹೋಲಿಗೆ ವಿಶೇಷ ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಲ್ಲಿ ನಕಲಿ
ನೇಮಕಾತಿ ಆದೇಶ ಸ್ರಷ್ಠಿಸಿ ನಕಲಿ ನೇಮಕಾತಿಗೊಂಡ ಶ್ರೀಮತಿ
ಉಮಾಬಾಯಿ ತಂದೆ ಮನೊಹರರಾವ ಹೋಲಿಗೆ ಶಿಕ್ಷಕಿ ಸರಕಾರಿ ಪ್ರೌಢ ಶಾಲೆ ಕಾಕನಾಳ ತಾಲೂಕಾ
ಭಾಲ್ಕಿ ಜೀಲ್ಲಾ ಬೀದರ ರವರು ಸೇವೆಗೆ ಹಾಜರುಗೊಂಡಿರುತ್ತಾರೆ ಈ ವಿಷಯ ಗಮನಕ್ಕೆ ಬಂದ ತಕ್ಷಣ ಕಛೇರಿಯಿಂದ ಮಾನ್ಯ ಅಪರ ಆಯುಕ್ತರು ಸಾರ್ವಜನಿಕ ಶಿಕ್ಷಣ
ಇಲಾಖೆ ಕಲಬುರುಗಿ ರವರಿಗೆ ವರದಿ ಸಲ್ಲಿಸುವ ಹಿನ್ನಲೆಯಲ್ಲಿ ನಕಲಿ ಆದೇಶ ಸ್ರಷ್ಟಿಸಿ ಹೋಲಿಗೆ
ಶಿಕ್ಷಕಿಯಾಗಿ ಸೇವೆಗೆ ಹಾಜರಾದ ಸದರಿ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಿ ಅವರ ವಿರುಧ್ಧ
ಕ್ರೀಮಿನಲ್ ಮೊಕದಮ್ಮೆ ದಾಖಲಿಸುವಂತೆ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.