ªÁr oÁuÉ : ದಿನಾಂಕ 19/12/2019 ರಂದು 04-00 ಪಿ.ಎಮ್ ಕ್ಕೆ
ಫಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಶರಣಪ್ಪ ಬೆಣ್ಣೂರ ವಯ:40 ವರ್ಷ ಉ:ಖಾಸಗಿ
ನೌಕರಿ ಜಾ:ಕಬ್ಬಲಿಗ ಮು:ಚೌಡೇಶ್ವರ ಕಾಲೋನಿ ವಾಡಿ
ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅರ್ಜಿಯನ್ನು ಹಾಜರುಪಡಿಸಿದ್ದು
ಸಾರಾಂಶವೆನೆಂದರೆ, ನಾನು ವಾಡಿ ಪಟ್ಟಣದ ಜಯಲಕ್ಷ್ಮೀ ಟ್ರಾನ್ಸಪೋರ್ಟದಲ್ಲಿ ನೌಕರಿ ಮಾಡಿಕೊಂಡಿದ್ದು
ನನಗೆ ಸಿದ್ದಮ್ಮ ವಯ:30 ವರ್ಷದ ಹೆಂಡತಿ ಇದ್ದು
ಅವಳು ಮನೆ ಕೆಲಸ ಮಾಡಿಕೊಂಡಿರುತ್ತಾಳೆ. ಅಲ್ಲದೇ ನನಗೆ ಕುಮಾರಿ ಗೌರಿ ವಯ:08 ವರ್ಷ,
ಕುಮಾರ ಗಣೇಶ ವಯ:07 ವರ್ಷ,
ಕುಮಾರಿ ಆರಾಧನಾ ವಯ:01 ವರ್ಷ ಹೀಗೆ 03 ಜನ ಮಕ್ಕಳಿದ್ದು
ಕುಮಾರಿ ಗೌರಿ ಇವಳು ವಾಡಿ ಪಟ್ಟಣದ ಡಿ.ಎ.ವಿ ಶಾಲೆಯಲ್ಲಿ 02 ನೇ ತರಗತಿಯಲ್ಲಿ
ಓದುತ್ತಿದ್ದು, ಕುಮಾರ ಗಣೇಶ ಇತನು ವಾಡಿ ಪಟ್ಟಣದ ಸೆಂಟ್ ಅಂಬ್ರೋಸ ಶಾಲೆಯಲ್ಲಿ 01 ನೇ ತರಗತಿಯಲ್ಲಿ
ಓದುತ್ತಿದ್ದಾನೆ. ನನ್ನ ಮನೆಯಲ್ಲಿ ನಾನು ಮತ್ತು ನನ್ನ
03 ಮಕ್ಕಳು ಹಾಗೂ
ನಮ್ಮತಂದೆ ಶರಣಪ್ಪ ತಂದೆ ಮಲ್ಲಪ್ಪ ಬೆಣ್ಣೂರ ರವರು
ಕೂಡಿ ವಾಸವಾಗಿರುತ್ತೆವೆ. ನನ್ನ ಹೆಂಡತಿಯ ತವರು ಊರು ನಾಲವಾರ ಗ್ರಾಮ ಇರುತ್ತದೆ. ಹೀಗಿದ್ದು ದಿನಾಂಕ
03/12/2019 ರಂದು ಪ್ರತಿ
ದಿನದಂತೆ ನಾನು ಬೆಳಗ್ಗೆ 10-00 ಗಂಟೆಗೆ ನನ್ನ ಕೆಲಸಕ್ಕೆ
ಹೊರಟು ಹೋಗುವಾಗ ಮಗಳಾದ ಗೌರಿ ಇವಳಿಗೆ ಆರಾಮವಿರಲಿಲ್ಲ ಅವಳಿಗೆ ಆಸ್ಪತ್ರೆಗೆ ತೋರಿಸು ಅಂತಾ ನನ್ನ
ಹೆಂಡತಿಗೆ ಹೇಳಿ ಹೋದೆನು. ನಂತರ ನಾನು ವಾಡಿಯಿಂದ ಕೆಲಸದ ಮೇಲೆ ವಿಜಯಪುರಕ್ಕೆ ಹೊರಟು ಹೋಗಿ ಮದ್ಯಾಹ್ನ
04-00 ಗಂಟೆ ಸುಮಾರು
ನನ್ನ ಹೆಂಡತಿಯ ಮೊಬೈಲ ನಂಬರ 6362511744 ಗೆ ಫೋನ ಮಾಡಿ ಗೌರಿ
ಇವಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ ವಿಚಾರಿಸಲಾಗಿ ಅವಳು ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು
ಬಂದಿರುತ್ತೆನೆ ಅಂತಾ ಹೇಳಿ ತನ್ನ ಮೊಬೈಲದಲ್ಲಿ ಚಾರ್ಜ
ಇರುವದಿಲ್ಲ ಬಂದ ಆಗುತ್ತದೆ ಅಂತಾ ಹೇಳಿ ಫೋನ ಕಟ್
ಮಾಡಿದಳು. ನಂತರ ರಾತ್ರಿ 08-00 ಗಂಟೆ ಸುಮಾರು ನಾನು
ನನ್ನ ಹೆಂಡತಿಯ ಮೊಬೈಲಗೆ ಫೋನ ಮಾಡಿದಾಗ ಬಂದ ಆಗಿದ್ದರಿಂದ ನನ್ನ ಅಣ್ಣನ ಮಗ ಸತೀಶ ಇತನಿಗೆ ಪೋನ ಮಾಡಿ
ನಮ್ಮ ಮನೆಗೆ ಹೋಗಿ ನಿಮ್ಮ ಕಾಕಿಗೆ ಪೋನ ಕೊಡು ಮಾತನಾಡುತ್ತೆನೆ
ಅಂತಾ ಹೇಳಿದಾಗ ಅವಳು ಇನ್ನು ಮನೆಗೆ ಬಂದಿರುವದಿಲ್ಲ ಅಂತಾ ತಿಳಿಸಿದನು. ನಂತರ ನಾನು ಅವಳು ಎಲ್ಲಿ ಹೋಗಿದ್ದಾಳೆ ಹುಡುಕಾಡು ಅಂತಾ
ಹೇಳಿ ನಾನು ವಿಜಯಪುರದಲ್ಲಿ ಕೆಲಸದ ಮೇಲೆ ಉಳಿದುಕೊಂಡೆನು.
ನಂತರ ದಿನಾಂಕ 04/12/2019 ರಂದು ಬೆಳಗ್ಗೆ 08-00 ಗಂಟೆಗೆ ವಾಡಿ ಪಟ್ಟಣದ
ನನ್ನ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ಹೆಂಡತಿ ಹಾಗೂ ನನ್ನ 03 ಜನ ಮಕ್ಕಳು
ಇರಲಿಲ್ಲ. ನಮ್ಮ ತಂದೆಗೆ ವಿಚಾರಿಸಲಾಗಿ ನಿನ್ನೆ ದಿವಸ ಬೆಳಗ್ಗೆ 10-30 ಗಂಟೆ ಸುಮಾರು
ಸಿದ್ದಮ್ಮ ಇವಳು ಗೌರಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೆನೆ ಅಂತಾ ಹೇಳಿ 03 ಮಕ್ಕಳನ್ನು
ಕರೆದುಕೊಂಡು ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಅಂತಾ ತಿಳಿಸಿದನು. ನಂತರ ನನ್ನ ಹೆಂಡತಿ ಸಿದ್ದಮ್ಮ
ಹಾಗೂ ಮಕ್ಕಳಾದ ಗೌರಿ, ಗಣೇಶ,
ಆರಾಧನಾ ಇವರ ಪತ್ತೆಗಾಗಿ ನಾಲವಾರ ಗ್ರಾಮ, ಜೈನಾಪೂರ,
ಕಲಬುರಗಿ, ಹಿಪ್ಪರಗಿ, ಗೋಳಾ,
ಶಹಾಬಾದ, ನಂದೂರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಹೆಂಡತಿ ಹಾಗೂ 03 ಜನ ಮಕ್ಕಳ
ಬಗ್ಗೆ ಯಾವದೇ ಮಾಹಿತಿ ಸಿಕ್ಕಿರುವದಿಲ್ಲ. ಅವರನ್ನು ಹಡುಕಾಡಿ ಪತ್ತಯಾಗದೇ ಇರುವದರಿಂದ ತಡಮಾಡಿ ಇಂದು
ಠಾಣೆಗೆ ಬಂದು ಅರ್ಜಿಯನ್ನು ಸಲ್ಲಿಸಿದ್ದು ಕಾಣೆಯಾದ ನನ್ನ ಹೆಂಡತಿ ಹಾಗೂ ಮಕ್ಕಳ ಚಹರೆ ಪಟ್ಟಿ ಈ ಕೆಳಗಿನಂತೆ
ಇರುತ್ತದೆ. 1] ಹೆಂಡತಿ ಹೆಸರು: ಸಿದ್ದಮ್ಮ ವಯ:30 ವರ್ಷ ಉ:ಮನೆಕೆಲಸ
ಜಾ:ಕಬ್ಬಲಿಗ ಎತ್ತರ:5 ಪೀಟ್, ಸಾದಾಗೆಂಪು
ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ,
ಅಗಲ ಹಣೆ, ನೆಟ್ಟನೆ ಮೂಗು, ಕನ್ನಡ ಭಾಷೆ ಮಾತನಾಡುತ್ತಾಳೆ,ಧರಿಸಿದ ಬಟ್ಟೆಗಳು
ಹಸಿರು ಬಣ್ಣದ ಹೂವಿನ ಚುಕ್ಕೆಯುಳ್ಳ ಸೀರೆ,
ಕೆಂಪುಬಣ್ಣದ ಬ್ಲೌಸ ಧರಿಸಿರುತ್ತಾಳೆ. 2] ಕುಮಾರಿ ಗೌರಿ ವಯ:08 ವರ್ಷ,
ಉ:ವಿದ್ಯಾರ್ಥೀನಿ ಜಾ:ಕಬ್ಬಲಿಗ ಎತ್ತರ:03 ಫೀಟ್,
ಸಾದಾಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು,
ದುಂಡು ಮುಖ, ಗಿಡ್ಡ ಮೂಗು, ಅಗಲ ಕಣ್ಣು,
ಕನ್ನಡ ಭಾಷೆ ಮಾತನಾಡುತ್ತಿದ್ದು ಹಳದಿ ಬಣ್ಣದ ಟೀ ಶರ್ಟ, ಕಪ್ಪುಬಣ್ಣದ
ಪ್ಯಾಂಟು ಧರಿಸಿದ್ದು ಇರುತ್ತದೆ. 3] ಕುಮಾರ ಗಣೇಶ ವಯ:07 ವರ್ಷ,
ಉ:ವಿದ್ಯಾರ್ಥೀ ಜಾ:ಕಬ್ಬಲಿಗ ಎತ್ತರ:02.1/2 ಫೀಟ್, ಸಾಧಾಕಪ್ಪು ಮೈ ಬಣ್ಣ,
ಸಾಧಾರಣ ಮೈಕಟ್ಟು, ದುಂಡು ಮುಖ,
ಅಗಲ ಹಣೆ, ಮರದ ಕಿವಿ, ಗಿಡ್ಡ ಮೂಗು,
ಕನ್ನಡ ಭಾಷೆ ಮಾತನಾಡುತ್ತಿದ್ದು ಬಿಳಿ ಬಣ್ಣದ ಶರ್ಟ ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿದ್ದು
ಇರುತ್ತದೆ. 04] ಕುಮಾರಿ ಆರಾಧನಾ ವಯ:01 ವರ್ಷ,
ಜಾ:ಕಬ್ಬಲಿಗ ಎತ್ತರ: 02 ಫೀಟ್,
ಸಾದಾಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು,
ದುಂಡು ಮೂಖ, ಗಿಡ್ಡ ಮೂಗು, ಅಗಲ ಕಣ್ಣು,ಅಗಲ ಹಣೆ,
ಕಂದು ಬಣ್ಣದ ಪ್ರಾಕ್ ಧರಿಸಿದ್ದು ಇರುತ್ತದೆ. ರೀತಿ ಚಹರೆ ಪಟ್ಟಿ ಉಳ್ಳ ನನ್ನ ಹೆಂಡತಿ ಸಿದ್ದಮ್ಮ
ಹಾಗೂ ಮಕ್ಕಳಾದ ಕುಮಾರಿ ಗೌರಿ, ಕುಮಾರ ಗಣೇಶ,
ಕುಮಾರಿ ಆರಾಧನಾ ರವರು ಕಾಣೆಯಾಗಿದ್ದು ಅವರನ್ನು ಪತ್ತೆ ಮಾಡಿಕೊಡಲು ವಿನಂತಿ ಅದೆ ಅಂತಾ ಇತ್ಯಾದಿ
ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆ ಗುನ್ನೆ ನಂಬರ 134/2019 ಕಲಂ;ಮಹಿಳೆ ಕಾಣೆಯಾದ
ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ.
C¥sÀd®¥ÀÆgÀ oÁuÉ : ದಿನಾಂಕ:
19-12-2019 ರಂದು 1-30 ಪಿಎಮ್‍ಕ್ಕೆ ಶ್ರೋ ಮೋದಿನ ತಂದೆ ಮೈಹಿಬೂಬಸಾಬ ಭಾಗವಾನ ಕಂದಾಯ
ನಿರೀಕ್ಷಕರು ಕರಜಗಿ ರವರು ಟೈಪ ಮಾಡಿದ ಸೂರು ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿ ಸಾರಾಂಶ
ವೇನೆಂದರೆ ನಾನು ಮೋದಿನ ತಂದೆ ಮೆಹಬೂಬಸಾಬ ಭಾಗವಾನ ವ||33 ಜಾ||ಮುಸ್ಲಿಂ ಉ||ಕಂದಾಯ ನಿರೀಕ್ಷಕರು ಕರಜಗಿ
ವಲಯ ಸಾ||ಉಸ್ಮಾನಿಯ ಕಾಲೋನಿ ಅಫಜಲಪೂರ ಸರಕಾರಿ ತರ್ಫೆ ಪಿರ್ಯಾದ ಕೊಡುವದೆನಂದರೆ ಇಂದು ದಿನಾಂಕ
19/12/2019 ರಂದು ಮದ್ಯ ರಾತ್ರಿ 1:30 ಗಂಟೆಗೆ ನಾನು ಮತ್ತು ಮಾನ್ಯ ಯಲ್ಲಪ್ಪ ಸುಬೇದಾರ
ತಹಸಿಲ್ದಾರರು ಅಫಜಲಪೂರ ರವರು ಹಾಗೂ ಗ್ರಾಮ ಸಹಾಯಕರಾದ ನಂದಶ ನಾಗಪ್ಪ ಪ್ಯಾಟಿ, ಮಲ್ಲಿಕಾರ್ಜುನ ಗುರಣ್ಣ
ಜಮಾದಾರ ಎಲ್ಲರೂ ಕೂಡಿ ಅಕ್ರಮ ಮರಳು ಸಾಗಾಣಿಕ ತಡೆಗಟ್ಟುವ ಸಲುವಾಗಿ ಗಸ್ತು ಕರ್ತವ್ಯದಲ್ಲಿದ್ದಾಗ
ಮಣೂರ ಭೀಮಾ ನದಿಯ ಪಕ್ಕದಲ್ಲಿ ಈಗಾಗಲೆ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದನ್ನು ಜಪ್ತ ಮಾಡಿಕೊಂಡು
ಕೇಸು ಮಾಡಿದ್ದು, ಸದರಿ ಜಾಗಕ್ಕೆ ಬೇಟಿ ನೀಡಿದಾಗ, ಸದರಿ ಜಾಗದಲ್ಲಿ ಒಂದು ಜೆಸಿಬಿ ಯಿಂದ ಮರಳನ್ನು ತುಂಬಿ ಟಿಪ್ಪರದಲ್ಲಿ ಹಾಕಿ ಮರಳು
ತುಂಬಿಕೊಂಡು ಬರುತ್ತಿದ್ದರು. ಆಗ ನಾವು ಸದರಿ ವಾಹನಗಳ ಹತ್ತಿರ ಹೋಗುತ್ತಿದ್ದಂತೆ ಟಿಪ್ಪರ ಚಾಲಕ
ಮತ್ತು ಜೆ.ಸಿಬಿ ಚಾಲಕ ನಮ್ಮನ್ನು ನೋಡಿ ಓಡಿ ಹೋಗಿರುತ್ತಾರೆ. ನಂತರ ನಾವು ಟಿಪ್ಪರನ್ನು ಚೆಕ್
ಮಾಡಿ ನೊಡಲಾಗಿ, ಟಿಪ್ಪರದಲ್ಲಿ ಮರಳು ತುಂಬಿತ್ತು. ಸದರಿ ಟಿಪ್ಪರ ನಂಬರ ನೋಡಲಾಗಿ ಚೆಸ್ಸಿ ನಂ MAT449020G2D09335 ಇರುತ್ತದೆ. ಸದರಿ
ಟಿಪ್ಪರ ಅಕಿ 10 ಲಕ್ಷ. ಟಿಪ್ಪರದಲ್ಲಿದ್ದ ಮರಳೀನ ಅಕಿ 10,000/- ರೂ, ಮರಳು ತುಂಬಲು ಬಳಸಿದ
ಜೆ.ಸಿ/ಬಿ ನಂ MH-13 AH-0490 ಇರುತ್ತದೆ. ಅಕಿ 10 ಲಕ್ಷ ಇರಬಹುದು. ನಂತರ ಸದರಿ ವಾಹನಗಳನ್ನು ನಂದೇಶ ಪ್ಯಾಟಿ
ಗ್ರಾಮ ಸಹಾಯಕ ಮಣೂರ, ಮಲ್ಲಿಕಾರ್ಜುನ ತಂದೆ ಗುರಣ್ಣ ಜಮಾದಾರ ಗ್ರಾಮ ಸಹಾಯಕ ಮಣೂರ ರವರ ಸಮಕ್ಷಮ ರಾತ್ರಿ 01:45
ಎ.ಎಮ್ ದಿಂದ 02:45 ಎ.ಎಮ್ ಅವಧಿಯಲ್ಲಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು. ಅವುಗಳನ್ನು
ಮಾಶ್ಯಾಳ ಉಕ್ಕಡ ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಸದರಿ ಘಟನೆ ಬಗ್ಗೆ ನಮ್ಮ
ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾರಣ
ಸದರಿ ಟಿಪ್ಪರ ಚೆಸ್ಸಿ ನಂ MAT449020G2D09335 ನೇದ್ದರ ಚಾಲಕ ಮತ್ತು ಮಾಲೀಕನ ಮೇಲೆ ಹಾಗೂ ಮರಳು ತುಂಭಲು ಬಳಸಿದ ಜೆ.ಸಿ/ಬಿ ನಂ MH-13 AH-0490 ನೇದ್ದರ ಚಾಲಕ ಮತ್ತು
ಮಾಲಿಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ಪಿರ್ಯಾದಿ ಸಲ್ಲಿಸಿರುತ್ತೇನೆ. ಅಂತಾ ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.