Police Bhavan Kalaburagi

Police Bhavan Kalaburagi

Saturday, November 4, 2017

BIDAR DISTRICT DAILY CRIME UPDATE 04-11-2017¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-11-2017

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 158/2017, PÀ®A. 279, 304(J) L¦¹ :-
¢£ÁAPÀ 03-11-2017 gÀAzÀÄ ¦üAiÀiÁ𢠱ÀAPÀgÀgÁªÀ vÀAzÉ ²ªÀ±ÀgÀt¥Áà ªÀÄÄ®V ªÀAiÀÄ: 50 ªÀµÀð, eÁw: °AUÁAiÀÄvÀ, ¸Á: ºÀ½îSÉÃqÀ (©) gÀªÀgÀÄ PÉ®¸ÀzÀ ¥ÀæAiÀÄÄPÀÛ vÀ£Àß ªÉÆÃmÁgÀ ¸ÉÊPÀ® vÉUÉzÀÄPÉÆAqÀÄ ºÀĪÀÄ£Á¨ÁzÀPÉÌ ºÉÆÃV PÉ®¸À ªÀÄÄV¹PÉÆAqÀÄ ºÀ½îSÉÃqÀ (©) ¥ÀlÖtPÉÌ vÀ£Àß ªÉÆÃmÁgÀ ¸ÉÊPÀ® ªÉÄÃ¯É §gÀĪÁUÀ ºÀĪÀÄ£Á¨ÁzÀ ©ÃzÀgÀ gÉÆÃqÀ vÁ¼ÀA¥À½î gÀªÀgÀ PÉÆý ¥sÁgÀA ºÀwÛgÀ gÉÆÃr£À ªÉÄ¯É ªÀÄÄAzÀÄUÀqÉ MAzÀÄ PÁgÀ ZÁ®PÀ vÀ£Àß PÁgÀ ZÀ¯Á¬Ä¹PÉÆAqÀÄ ºÉÆÃUÀÄwÛzÀÄÝ, ¸ÀzÀj PÁgÀ ZÁ®PÀ vÀ£Àß PÁgÀ CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹ MªÉÄä¯É »rvÀ vÀ¦à gÉÆÃr£À §®UÀqÉ vÀVΣÀ°è ¥À°Ö ªÀiÁrgÀÄvÁÛ£É, £ÀAvÀgÀ ¦üAiÀiÁð¢AiÀÄÄ C°èUÉ ºÉÆÃV £ÉÆÃqÀ®Ä ¸ÀzÀj PÁgÀ EArPÁ «¸ÁÖ PÁgÀ £ÀA. PÉJ-06/J£ï-0180 EzÀÄÝ CzÀgÀ ZÁ®PÀ£À£ÀÄß £ÉÆÃqÀ®Ä CªÀ£ÀÄ vÀªÀÄÆägÀ §¸ÀªÀgÁd vÀAzÉ ¸ÀĨsÁµÀ ªÀÄAoÁ¼ÀPÀgÀ ªÀAiÀÄ: 32 ªÀµÀð FvÀ£ÀÄ EzÀÄÝ, EªÀ¤UÉ £ÉÆÃqÀ®Ä JqÀUÀqÉ ºÀuÉUÉ ºÀwÛ ¨sÁj gÀPÀÛUÁAiÀÄ, JqÀ Q«UÉ ºÀwÛ ¨sÁj gÀPÀÛUÁAiÀÄ ªÀÄvÀÄÛ ªÀÄÆVUÉ ºÁUÀÆ ¨Á¬ÄUÉ ºÀwÛ gÀPÀÛUÁAiÀÄUÀ¼ÀÄ DV FvÀ£ÀÄ ¸ÀܼÀzÀ¯ÉèAiÉÄà ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 204/2017, ಕಲಂ. 279, 304(ಎ) ಐಪಿಸಿ :-
ದಿನಾಂಕ 03-11-2017 ರಂದು ಹಳ್ಳಿಖೇಡ (ಕೆ) ಶಿವಾರದಲ್ಲಿ ನಾಗೇಶನು ತನ್ನ ಮೋಟಾರ್ ಸೈಕಲ ನಂ. ಕೆಎ-32/ಇಎಲ್-8449 ನೇದರ ಮೇಲೆ ಕಲಬುರ್ಗಿಯಿಂದ ಬಾಳೂರಗೆ ಹೋಗಲು ಹುಮನಾಬಾದ ಕಡೆಗೆ ಬರುವಾಗ ದೂರಿನಿಂದ ಬಂದ ಒಂದು ಟಾಟಾ ಎಸಿ ನಂ. ಕೆಎ-39/8969 ನೇದ್ದರ ಚಾಲಕನಾದ ಆರೋಪಿ ಜಾಫರ ತಂದೆ ಶಮಶೋದ್ದಿನ ಚಿಂಚೋಳಿವಾಲೆ ಸಾ: ಕನಕಟ್ಟಾ ಈತನು ತನ್ನ ವಾಹನವನ್ನು ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ನಾಗೇಶನ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ನಾಗೇಶನಿಗೆ ತಲೆ, ಹಣೆಗೆ ಭಾರಿರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತಸ್ರಾವವಾಗಿದ್ದು, ಮುಖಕ್ಕೆ ತರಚಿದ ರಕ್ತಗಾಯ, ಎಡರಟ್ಟೆಗೆ, ಬಲತೊಡೆಯ ಮೂಳೆ ಮುರಿದು ಭಾರಿ ಗುಪ್ತಗಾಯಗಳಾಗಿದ್ದು, ದಾರಿಹೋಕರಾದ ಹಳ್ಳಿಖೇಡ (ಕೆ) ಗ್ರಾಮದ ಸೂರ್ಯಕಾಂತ ಖಂಡಿ ಹಾಗು ಇತರರು 108 ಮೂಲಕ ನಾಗೇಶನಿಗೆ ಚಿಕಿತ್ಸೆಗಾಗಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ, ನಾಗೇಶನಿಗೆ ಆಸ್ಪತ್ರೆಗೆ ತಂದಾಗ ಮೃತಪಟ್ಟಿದ್ದು ಇರುತ್ತದೆ ಅಂತ ಫಿರ್ಯಾದಿ ರಾಜಕುಮಾರ ತಂದೆ ಸುಭಾಷ ಕಟ್ಟಿಮನಿ ವಯ: 40 ವರ್ಷ, ಜಾತಿ: ಕುರುಬ, ಸಾ: ಕಲಬುರ್ಗಿ ರವರು ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥ÉưøÀ oÁuÉ C¥ÀgÁzsÀ ¸ÀA. 105/2017, PÀ®A. 279, 337, 338 L¦¹ :-
¢£ÁAPÀ 02-11-2017 gÀAzÀÄ ¦üAiÀiÁ𢠸ÀAUÀ¥Àà vÀAzÉ PÁ²£ÁxÀ zsÀ¨Á¯É ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ªÁAdgÀSÉÃqÀ, vÁ: ¨sÁ°Ì gÀªÀgÀ vÀªÀÄä£À ªÀÄUÀ£ÁzÀ CqÉ¥Àà vÀAzÉ ¸ÁUÀgÀ ªÀAiÀÄ: 16 ªÀµÀð, eÁw: °AUÁAiÀÄvÀ, ¸Á: ªÁAdgÀSÉÃqÀ EvÀ£ÀÄ vÀ£Àß vÀAzÉUÉ gÉÆnÖ PÉÆqÀ®Ä ºÉÆ®PÉÌ ºÉÆÃV ªÀÄgÀ½ ªÀÄ£ÉUÉ §gÀĪÁUÀ ªÉÄúÀPÀgÀ ªÁAdgÀSÉÃqÀ gÉÆÃqÀ vÀªÀÄÆägÀ µÀqÀPÀëj ¥Ánî gÀªÀgÀ ºÉÆ®zÀ ºÀwÛgÀ gÀ¸ÉÛAiÀÄ ªÉÄÃ¯É §gÀĪÁUÀ »A¢¤AzÀ MAzÀÄ mÁmÁ ¸ÀĪÉÆà £ÀA. JªÀÄ.ºÉZï-24/¹-3661 £ÉÃzÀgÀ ZÁ®PÀ£ÁzÀ DgÉÆæ ªÀÄ°èPÁdÄð£À vÀAzÉ ªÉÊf£ÁxÀ ¤lÆÖgÉ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: ªÉÄúÀPÀgÀ EvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ £ÀqɬĹ CqÉ¥Àà EªÀ¤UÉ »A¢¤AzÀ rQÌ ªÀiÁrzÀÄÝ EzÀjAzÀ CqÉ¥Àà PɼÀUÉ ©zÀÄÝ, EªÀ¤UÉ vÀ¯ÉUÉ ¨sÁj UÀÄ¥ÀÛUÁAiÀĪÁVzÀÄÝ ªÀÄvÀÄÛ §®UÁ® ªÉƼÀPÁ® ªÀÄvÀÄÛ ¥ÁzÀzÀ ºÀwÛgÀ vÀgÀazÀ UÁAiÀĪÀVgÀÄvÀÛzÉ ªÀÄvÀÄÛ §®UÀqÉ ºÀuÉUÉ vÀgÀazÀ ¸ÁzÁUÁAiÀĪÁVgÀÄvÀÛzÉ, £ÀAvÀgÀ DgÉÆæAiÀÄÄ CqÉ¥Áà EvÀ¤UÉ aQvÉì PÀÄjvÀÄ ±ÀºÀeÁ¤ OgÁzÀPÉÌ vÀA¢gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 04-11-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 129/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 02-11-2017 ರಂದು ಫಿರ್ಯಾದಿ ಪುಟ್ಟಲಸ್ವಾಮಿ ತಂದೆ ಶಾಹಿಲು ವಯ: 39 ವರ್ಷ, ಜಾತಿ: ಎಸ್.ಸಿ (ಮಾದಿಗ), ಸಾ: ಜನಗಾಂವ ವರಂಗಲ ರವರಿಗೆ ಪರಿಚಯದ ಕಾರ ನಂ. ಎಪಿ-35/ಎಲ್-8971 ನೇದ್ದರಲ್ಲಿ ಫಿರ್ಯಾದಿ ಮತ್ತು ಕೆ.ಶ್ರೀರಾಮಲು ತಂದೆ ಕೆ.ಚುಕ್ಕಯ್ಯಾ ಕ್ಯಾಮಾ ವಯ: 49 ವರ್ಷ, ಜಾತಿ: ನೇತಾ, ಸಾ: ಎನ್.ಟಿ.ಆರ್ ನಗರ ಹೈದ್ರಾಬಾದ, ಎಂ.ಕೆ.ಸಂಜೀವರಾವ ತಂದೆ ರಾಘಲು ಮಿಟ್ಟಪಲ್ಲಿ ವಯ: 48 ವರ್ಷ, ಜಾತಿ: ಮನ್ನೂರ ಸೌಜನ್ಯ ಕಾಲೋನಿ ಬಾಪುಜಿ ನಗರ ಸಿಕಿಂದ್ರಾಬಾದ ಹಾಗೂ ಎಂ.ಡಿ.ಅನ್ವರ ತಂದೆ ಅಬ್ದುಲ ಕರಿಂ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ಚಂದ್ರನಗುಟ್ಟಾ ಇಸ್ಮಾಯಿಲ ನಗರ ಹೈದ್ರಾಬಾದ ರವರೆಲ್ಲರೂ ಕಾರಿನಲ್ಲಿ ಕುಳಿತು ಹೈದ್ರಬಾದದಿಂದ ಶಿರಡಿಗೆ ಹೋಗುತ್ತಿದ್ದು, ಕಾರನ್ನು ಎಂ.ಕೆ ಸಂಜಿವರಾವ ರವರು ಚಲಾಯಿಸುತ್ತಿದ್ದು, ರಾ.ಹೆ.ನಂ.9 ರ ಮನ್ನಳಿ ಬಾರ್ಡರ ಕ್ರಾಸ ಹತ್ತಿರ ಎದುರುಗಡೆಯಿಂದ ಒಂದು ಜೀಪ ಜೀಪ ನಂ. ಎಂಎಚ-16/ಈ-5327 ನೇದ್ದರ ಚಾಲಕನಾದ ಆರೋಪಿ ತನ್ನ ವಾಹನವನ್ನು ರಾಂಗ ಸೈಡಿನಿಂದ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೇ ಫಿರ್ಯಾದಿ ಕುಳಿತ ಕಾರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಹೊಟ್ಟೆಗೆ ಮತ್ತು ಮೈಕೈಗೆ ಗುಪ್ತಗಾಯವಾಗಿರುತ್ತದೆ, ಕೆ.ಶ್ರೀ ರಾಮಲು ರವರಿಗೆ ಎಡಗೈ ರಟ್ಟೆಗೆ ಭಾರಿ ಗಾಯವಾಗಿ ಮುರಿದಿರುತ್ತದೆ, ಸಂಜೀವರಾವಗೆ ಬಲಗೈ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ ಹಾಗೂ ಎಂಡಿ ಅನ್ವರಗೆ ಬಲಭೂಜಕ್ಕೆ ಮತ್ತು ಎದೆಗೆ ಗುಪ್ತಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಎಲ್ಲರೂ ಒಂದು ಖಾಸಗಿ ವಾಹನದಿಂದ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-11-2017 ರಂದು ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 130/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 03-11-2017 ರಂದು ಫಿರ್ಯಾದಿ ವಿಜಯಕುಮಾರ ತಂದೆ ಶರಣಪ್ಪಾ ಗುಂಗೆ, ವಯ: 30 ವರ್ಷ, ಜಾತಿ: ಲಿಂಗಾಯ್ತ, ಸಾ: ಬೇಲೂರ ರವರು ತನ್ನ ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಬಂದು ಬಸ್ಸ ನಿಲ್ದಾಣದ ಹತ್ತಿರ ನಿಂತಿದ್ದು, ಅಷ್ಟರಲ್ಲಿಯೆ ಫಿರ್ಯಾದಿಯ ಸಂಬಂಧಿ ಬಸವರಾಜ ತಂದೆ ಅಮೃತಪ್ಪಾ ಪಾಟೀಲ, ವಯ: 42 ವರ್ಷ, ಸಾ: ಮೋಳಕೇರಾ ರವರು ಭೇಟಿಯಾಗಿದ್ದು ಬೇಲೂರ ಗ್ರಾಮಕ್ಕೆ ಹೋಗುತ್ತಿದ್ದೇನೆ ಅಂತ ತಿಳಿಸಿದರು, ಸದರಿ ಬಸವರಾಜರವರು ರೋಡ ದಾಟುತ್ತಿರುವಾಗ ನಾರಾಯಣಪೂರ ಕ್ರಾಸ ಕಡೆಯಿಂದ ಬರುತ್ತಿರುವ ಒಂದು ಮೊಟಾರ್ ಸೈಕಲ ನಂ. ಕೆಎ-39/ಎಚ-1643 ನೇದ್ದರ ಚಾಲಕನಾದ ಆರೋಪಿ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಬಸವರಾಜ ರವರಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಫಿರ್ಯಾದಿಯು ಹೋಗಿ ನೋಡಲು ಸದರಿ ಬಸವರಾಜರವರಿಗೆ ಬಲಕೈ ಮೊಣಕೈ ಕೆಳಗೆ ಭಾರಿ ಗಾಯವಾಗಿ ಕೈ ಮುರಿದಿರುತ್ತದೆ, ಎಡ ಹಣೆಗೆ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಗಾಯಾಳು ಬಸವರಾಜರವರಿಗೆ ಸಮೀಪದ ಚೌಧರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Yadgir District Reported Crimes Updated on 04-11-2017

                                             Yadgir District Reported Crimes

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ  ಕಲಂ: 143, 147, 148, 353, 333, 504, 506, 336, 308,307 ಸಂಗಡ 149 ಐ.ಪಿ.ಸಿ;- ದಿನಾಂಕ 02-11-2017 ರಂದು ಸಾಯಂಕಾಲ 7-30 ಪಿ.ಎಂಕ್ಕೆ ಠಾಣೆಯಲ್ಲಿ ಇದ್ದಾಗ ಆಗ ಶಿರವಾಳ ಗ್ರಾಮದಿಂದ ಯಾರೋ ಪೋನ ಮಾಡಿ ಗ್ರಾಮದ ಹರಿಜನವಾಡಾದಲ್ಲಿ ಗ್ರಾಮದ ಹರಿಜನ (ಹೊಲೆಯ) ಮತ್ತು ಮಾದಿಗ ಜನಾಂಗದವರು ಅಂಬೇಡ್ಕರ ಕಟ್ಟೆಯ ಬಾಜು ಕಂಬಗಳನ್ನು ಹಾಕಿದ ಪ್ರಯುಕ್ತ ಎರಡು ಗುಂಪುಗಳ ಮದ್ಯ ಗಲಾಟೆ ನಡೆಯುತ್ತಿದೆ ಅಂತ ಪೋನ ಮಾಡಿ ತಿಳಿಸಿದ್ದರಿಂದ ಶಿರವಾಳ ಗ್ರಾಮಕ್ಕೆ ನಾನು ಹಾಗು ಸಿಬ್ಬಂದಿಯವರು ಕೂಡಿ ಠಾಣೆಯ ಜೀಪಿನಲ್ಲಿ ಶಿರವಾಳ ಗ್ರಾಮಕ್ಕೆ ಲಾಠಿ ಮತ್ತು ಹೆಲ್ಮೇಟದೊಂದಿಗೆ ಸಮಯ 8 ಪಿ.ಎಂಕ್ಕೆ ಹೋಗಿ ಅಲ್ಲಿ ಅಂಬೇಡ್ಕರ ಕಟ್ಟೆಯ ಹತ್ತಿರ ಹೋಗಿ ಜೀಪ ಇಳಿದು ನೋಡಲಾಗಿ ಅಲ್ಲಿ ಅಂಬೇಡ್ಕರ ಕಟ್ಟೆಯ ಹತ್ತಿರ ಎರಡು ಜನಾಂಗದವರಾದ ಹರಿಜನ (ಹೊಲೆಯ) ಮತ್ತು ಹರಿಜನ (ಮಾದಿಗ) ಜನಾಂಗದವರು ಗುಂಪುಗಳನ್ನು ಕಟ್ಟಿಕೊಂಡು ಜಗಳವಾಡುತ್ತಿದ್ದರು. ನಾವು ಅವರಿಗೆ ಜಳಗವಾಡದಂತೆ ಬಿಡಿಸಲು ಹೋದಾಗ ಅಲ್ಲಿಯ ಎರಡು ಗುಂಪಿನವರು ಕಂಬಗಳ ಮತ್ತು ಕಟ್ಟೆಯ ವಿಷಯದಲ್ಲಿಯ ಹಾಗೂ ನಿನ್ನೆ ದಿನಾಂಕ 02-11-2017 ರಂದು 7-15 ಪಿಎಂಕ್ಕೆ ದೇವಪ್ಪ ಟ್ರಾಕ್ಟರ ಓಡಿಸಿಕೊಂಡು ಬರುತ್ತಿದ್ದ ಸಂಧರ್ಭದಲ್ಲಿ ಮೋಟಾರ ಸೈಕಲಗೆ ಅಡ್ಡಿಪಡಿಸಿ ವಿನಾಕಾರಣ ಜಗಳ ತೆಗೆದ ಸಂಬಂದವಾಗಿ ದೇವಪ್ಪನಿಗೂ ಹೊಡೆದ ಬಗ್ಗೆ ವೈಷ್ಯಮ್ಯವಿಟ್ಟುಕೊಂಡು ಅದೇ ಕಾರಣದಿಂದ ಅಪರಾಧಿಕ ಮಾನವ ಹತ್ಯ ಅಂತ ಗೊತ್ತಿದ್ದರೂ ಸಹ ಈ ಹಿಂದೆ ಆದ ಗಲಾಟೆ ಸಂಬಂದವಾಗಿ ನಿಮಗೆ ಒಂದು ಸಲವಾದರೂ ಹೊಡೆಯುತ್ತೆವೆ ಅಂತ ಅಂದು ಈಗ ಹೊಡೆಯುತ್ತೇವೆ ಹಿಂದಿನ ಜಗಳದ ಕಾರಣವಿನ್ನಿಟ್ಟುಕೊಂಡು ಹಳೆ ವೈಷ್ಯಮ್ಯದಿಂದ  ಒಮ್ಮೇಲೆ ಅಲ್ಲಿಯೆ ಎರಡು ಗುಂಪುಗಳು ನಮ್ಮ ಪೊಲೀಸ್ರ ಮೇಲೆ ಕಲ್ಲು ತೂರಾಟ ಮಾಡಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಅಲ್ಲಿಯ ಗುಂಪುಗಳಲ್ಲಿ ಜನರು ಕಲ್ಲುಗಳನ್ನು ಬೀಸಿದಾಗ ಅದರಲ್ಲಿ ಕಲ್ಲು ನನಗೆ ತಲೆಯ ಹಿಂದೆ ಬಡಿದು ಭಾರಿರಕ್ತಗಾಯವಾಗಿದ್ದು ಇರುತ್ತದೆ.  ಮತ್ತು ಹುಸೇನ್ ಪಿ.ಸಿ ರವರಿಗೆ ಕಾಲಿನ ಹಿಂಬಡಿಗೆ ಕಲ್ಲು ಬಡಿದಿದ್ದು ಇರುತ್ತದೆ.  ಕಾರಣ ನಮಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಿಂದಿನ ಘಟನೆಗಳ ದುರುದ್ದೇಶದಿಂದ ಕೊಲೆ ಮಾಡಲು ಪ್ರಯತ್ನಿಸಿ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಅಜರ್ಿ ಸಾರಾಂಶವಿದೆ.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 109/2017 ಕಲಂ  143, 147, 148, 324, 504, 506, 336, 307,308 ,452, ಖ/ಘ 149 ಕಅ;- ದಿನಾಂಕ 03-11-2017 ರಂದು 8-15 ಪಿ.ಎಂಕ್ಕೆ ಪ್ರಕಾಶ ತಂದೆ ಸುಭಾಷ ನಡಗಿ ಜಾತಿ: ಹರಿಜನ ಉ: ಒಕ್ಕಲುತನ   ಸಾ: ಶಿರವಾಳ ತಾ: ಶಹಾಪೂರ ಇವರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಅಜರ್ಿದಾರರ  ಸ್ವಂತ ಜಾಗದಲ್ಲಿ ಅಂಬೇಡ್ಕರ ಭಾಚಿತ್ರವುಳ್ಳ ಕಟ್ಟೆ ಇರುತ್ತದೆ. ಅದರ ಪಕ್ಕ ರಸ್ತೆ ಹಾಗು ಅದಕ್ಕೆ ಹೊಂದಿಕೊಂಡಂತೆ ಕಲ್ಲುಗಳಿಂದ ಕಟ್ಟಿದ ಒಂದು ಕಟ್ಟೆ ಇದ್ದು ಅಜರ್ಿದಾರರ ಜನಾಂಗದವರು ಆಗಾಗ ಆ ಕಟ್ಟೆಯ ಮೇಲೆ ಕುಳಿತುಕೊಳ್ಳುವುದು ಮಾಡುತ್ತಿದ್ದರು. ಕಟ್ಟೆಯ ಹಿಂಭಾಗಕ್ಕೆ ಆರೋಪಿ ರಾಜಶೇಖರ ಇವರ ಮನೆಯಿದ್ದು ರಾಜಶೇಖರ ಈತನು ಆಗಾಗ ಕಟ್ಟೆಯ ಮೇಲೆ ಕುಳಿತಿರುವ ನಮ್ಮ ಜಾತಿ ಜನರೊಂದಿಗೆ ಜಗಳ ತೆಗೆದು ಇಲ್ಲಿ ಯಾಕೆ ಕೂಡುತ್ತೀರಿ ಮತ್ತು ನಮ್ಮ ಜಾಗದಲ್ಲಿ ಯಾಕೆ ಕಂಬಳನ್ನು ನೆಟ್ಟಿದ್ದೀರಿ  ಏ ಹೊಲೆ ಸುಳೆ ಮಕ್ಕಳೇ ನಿಮಗೆ ಎಷ್ಟು ದಿವಸ ಹೇಳದರೂ ಸಹ ಹಿಗೆ ಮಾಡುತ್ತಾ ಬಂದಿರುತ್ತೀರಿ ಈ ಸಾರಿ ನಿಮಗೆ ಸುಮ್ಮನೇ ಬಿಡುವುದಿಲ್ಲಾ ನಾವೆಲ್ಲರೂ ಸೇರಿ ಒಂದು ಗತಿ ಕಾಣಿಸುತ್ತೀವಿ ನಿಮ್ಮಲ್ಲಿ ಯಾರಿಗಾದರೂ ಖಲಾಸ ಮಾಡಿದರೆ ನೀವು ಇದರ ಸಮೀಪ ಬರುವುದಿಲ್ಲಾ ಅಂತ ಕೊಲೆ ಮಾಡುವ ಉದ್ದೇಶದಿಂದ ನಿನ್ನೆ ದಿನಾಂಕ 02/11/2017 ರಂದು 7-30 ಪಿಎಮ್ ಕ್ಕೆ ತಮ್ಮ ಜಾತಿಯ ಇನ್ನುಳಿದ ಆರೋಪಿತರೊಂದಿಗೆ ಗುಂಪು ಕಟ್ಟಿಕೊಂಡು  ಕೈಯಲ್ಲಿ ಕಲ್ಲು ಹಾಗು ಬಡಿಗೆಗಳನ್ನು ಹಿಡಿದುಕೊಂಡು ಬಂದು ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲಾ ಅಂತಾ ನಮ್ಮ ಮನೆಹೊಕ್ಕು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಕಲ್ಲು ತೂರಾಟ ಮಾಡಿ ಮಾರಣಾಂತಿಕ ಹಲ್ಯೆ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಅಂತ ಅಜರ್ಿಯ ಸಾರಾಂಶವಿರುತ್ತದೆ ಅಂತ ಮಾನ್ಯರವರಲ್ಲಿ ವಿಶೇಷ ವರದಿ ಸಲ್ಲಿಸಲಾಗಿದೆ.   
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ.  110/2017 ಕಲಂ  143, 147, 148, 341,323,324, 504, 506, 336, 307,308 ,452, ಖ/ಘ 149 ಕಅ;- ದಿನಾಂಕ 03-11-2017 ರಂದು 10 ಎ.ಎಂಕ್ಕೆ ಫಿಯರ್ಾದಿದಾರನು ಠಾಣೆಗೆ ಬಂದು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ನಮ್ಮೂರಲ್ಲಿ ನಮ್ಮ ಮಾದರ ಓಣಿಯಲ್ಲಿ ನಮ್ಮ ಮನೆಯ ಪಕ್ಕದಲ್ಲಿ ಮುಂಭಾಗದ ಕಟ್ಟೆಯ ಎಡಭಾಗಕ್ಕೆ ಹರಿಜನ (ಹೊಲೆಯ) ಜನಾಂಗದವರು ಸುಮಾರು 5-6 ಪೀಟ ಅಂತರದಲ್ಲಿ ಒಂದು ಕಲ್ಲಿನ ಕಟ್ಟೆಯನ್ನು ಕಟ್ಟಿಕೊಂಡಿದ್ದು ಆಗಾಗ ಬಂದು ಕುಳಿತುಕೊಂಡು ಹೋಗುತ್ತಿದ್ದರು, ಕಲ್ಲಿನ ಕಟ್ಟೆ ಮತ್ತು ನಮ್ಮ ಮನೆಯ ಮುಂಭಾಗದ ಕಲ್ಲಿನ ಕಟ್ಟೆಯ ಮದ್ಯಭಾಗದಲ್ಲಿ ಬುದ್ದ, ಬಸವ, ಅಂಬೇಡ್ಕರ, ಇರುವ ಬ್ಯಾನರಗಳನ್ನು ಕಟ್ಟಲು ನಾಲ್ಕು ಕಂಬಗಳನ್ನು ನೆಟ್ಟಿಕೊಂಡಿರುತ್ತಾರೆ, ಆಗಾಗ ಹರಿಜನ(ಹೊಲೆಯ) ಜನಾಂಗದವರು ಉದ್ದೇಶಪೂರ್ವಕವಾಗಿ ಜಗಳ ತೆಗೆಯಲು ಬಂದು ಹೋಗಿ ಕುಳಿತು ಕೊಳ್ಳುತ್ತಿದ್ದರು. ನಾನು ಸಾಕಷ್ಟು ಬಾರಿ ಹೇಳುತ್ತಾ ಬಂದಿದ್ದು ನನ್ನ ಮನೆ ಶಾಂತಿ (ಗೃಹಪ್ರವೇಶ) ಸಂಧರ್ಭದಲ್ಲಿ ಯಾಕೆ ಪೆಂಡಾಲಗಳನ್ನು ಕಂಬಗಳಿಗೆ ಕಟ್ಟಿದ್ದಿರಿ ಅಂತ ಯಲ್ಲಪ್ಪ, ಇವನು ಒಂದು ತಲವಾರನ್ನು ತಂದು ನಿನ್ನ ಕೊಲೆ ಮಾಡದೇ ಬಿಡುವುದಿಲ್ಲಾ ಅಂತ ಇನ್ನು 5-6 ಜನರು ಕೂಡಿ ಅನ್ನುತ್ತಾ ಬಂದಿದ್ದು ಆಗ ನನ್ನ ಅಣ್ಣನ ಹೆಂಡತಿಯಾದ ನಾಗಮ್ಮ ಇವಳು ಮನೆ ಶಾಂತಿ ಸಲುವಾಗಿ ಪೆಂಡಾಲ ಹಾಕಿಕೊಂಡಿದ್ದೇವೆ ಶಾಂತಿ ಮುಗಿದ ಕೂಡಲೇ ಬಿಚ್ಚುತ್ತೇವೆ ಅಂತ ಕೇಳಿಕೊಂಡ ಮೇರೆಗೆ ಶರಣಮ್ಮನ ಮಗ ಮತ್ತು ಇನ್ನು 5-6 ಜನರು ಅಕ್ಟೋಬರ ತಿಂಗಳ ಹದಿನೈದು ದಿನದ ಹಿಂದಿನ ಶುಕ್ರವಾರದಂದು,  ಇವತ್ತು ಬಿಡುತ್ತೇವೆ ಇನ್ನೊಮ್ಮ ನಿನಗೆ ಬಿಡುವುದಿಲ್ಲಾ ಹೊಡೆದೇ ತೀರುತ್ತೇವೆ ನೀವು ಅನಾವಶ್ಯಕವಾಗಿ ಮನೆಯ ಮುಂಭಾಗದ ಕಟ್ಟೆಯನ್ನು ಬೇಕಂತಲೇ ನಮ್ಮ ಕಂಬಗಳಿಗೆ ಹತ್ತಿ ಕಟ್ಟಿಕೊಂಡಿದ್ದಿರಿ ಆ ಕಟ್ಟೆಯನ್ನು ತೆಗೆಯದಿದ್ದಲ್ಲಿ ನಿಮಗೆ ಕೊಲೆ ಮಾಡದೇ ಬಿಡುವುದಿಲ್ಲಾ ಅಂತ ಹೇಳಿ ಹೋಗಿರುತ್ತಾರೆ, ನಿನ್ನೆ ದಿನಾಂಕ 02-11-2017 ರಂದು ಸುಮಾರು 7-15 ಗಂಟೆಗೆ ನನ್ನ ಅಣ್ಣನ ಮಗ ದೇವಪ್ಪ ಇತನು ನಮ್ಮೂರ ಯಲ್ಲಪ್ಪ ಕೊರವರ ಇವರ ಟ್ರಾಕ್ಟರ ನಡೆಯಿಸಿಕೊಂಡು ಅಂಬೇಡ್ಕರ ಕಟ್ಟೆಯ ಮುಂಭಾಗದಲ್ಲಿ ಮನೆಗೆ ಬರುವ ಸಂದರ್ಭದಲ್ಲಿ ಅಂಬೇಡ್ಕರ ಭಾವಚಿತ್ರದ ಕಟ್ಟೆಯ ಮುಂಭಾಗದ ಮುಖ್ಯ ರಸ್ತೆಯ ಮೇಲೆ ಜಂಪ(ಹಂಪ) ಇದ್ದು ಅಲ್ಲಿ ಉದ್ದೇಶಪೂರ್ವಕವಾಗಿ ಅಲ್ಲಿಗೆ ಮೂರು ಜನರಾದ ಯಲ್ಲಪ್ಪ, ಮೌನೇಶ, ಮಂಜುನಾಥ ಇವರು ಮೋಟಾರ ಸೈಕಲ ಮೇಲೆ ಬಂದು ಟ್ರಾಕ್ಟರ ಮುಂಭಾಗದಲ್ಲಿ ತಾವೇ ಬಿಳಿಸಿ ನಮ್ಮ ಮೇಲೆ ಎಕ್ಸಿಂಡೆಂಟ ಮಾಡಲು ಬಂದಿದಿಯಾ ಅಂತ ಹಿಗ್ಗಾಮುಗ್ಗಾವಾಗಿ ದೇವಪ್ಪ ಈತನನ್ನು ಹೊಡೆಯುತ್ತಿದ್ದರು. ಆಗ ನಾನು ಓಡಿ ಹೋದೆ. ಯಾಕೆ ಈ ರೀತಿ ನಮ್ಮ ''ಹೊಡೆಕತ್ಯಾರಿ'' ಕೇಳಿದೇನು. ಆಗ ನನ್ನನ್ನು ಸಹ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದರು. ಆಗ ನಾನು ''ನನ್ನ ಜೀವ ಉಳಿಸಿರೆಪ್ಪೋ'' ಅಂತ ಚೀರಾಡುತ್ತಿದ್ದಾಗ ನನ್ನ ಹೆಂಡತಿ ಭೀಮಾಬಾಯಿ ಬಂದು ಯಾಕ್ರೋ ನನ್ನ ಗಂಡ ಏನ ತಪ್ಪ ಮಾಡಿದ್ದಾನೆ ಹಿಂಗ ಹೊಡೆಕತ್ತೀರಿ, ಅಂತ ಅಂದಾಗ ನಾನು ಅಲ್ಲಿಂದ ಓಡಿಹೋದೇನು. ಆಗ ಒಂದೇಸಮನೆ ಮನೆ ಕಡೆಗೆ ಕಲ್ಲುಗಳನ್ನು ಏರತೊಡಗಿದರು. ಆಗ ನನ್ನ ಹೆಂಡತಿ ಮನೆಯಲ್ಲಿದ್ದಂತಹ ನನ್ನ ಮಗ ಭಾಗೇಶನನ್ನು ಎತ್ತಿಕೊಂಡು ಬರಲು ಹೋದಾಗ 7.45 ಪಿ.ಎಂ 1)ಮಾನಪ್ಪ ತಂದೆ ಭೀಮರಾಯ ಸನ್ನತಿ ಹಾಗೂ ಇನ್ನಿತರರು ಒಮ್ಮೇಲೆ ಅಕ್ರಮಕೂಟ ರಚಿಸಿಕೊಂಡು ಮನೆ ಹೊಕ್ಕು ನಿನ್ನ ಗಂಡನು ಎಲ್ಲಿ ಅಡಿಗಿ ಕುಂತಿದ್ದಾನೆ ಅಂತ ಏಕೊದ್ದೇಶದಿಂದ ಕೈಯಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ನಮ್ಮ ಮೇಲೆ ಟ್ರಾಕ್ಟರ ನಡೆಯಿಸಿಕೊಂಡು ಎಕ್ಸಿಂಡೆಂಟ ಮಾಡಲು ಹೇಳಿಕೊಟ್ಟಿದೇನು. ಅವನಿಗೆ ಈ ಹಿಂದೆನು ಸಹ ನಮ್ಮ ಜಾಗದಲ್ಲಿ ನಾವು ಕಂಬಗಳನ್ನು ಹಾಕಿದ ವಿಷಯದಲ್ಲಿ ಅನಾವಶ್ಯಕವಾಗಿ ಜಗಳ ತೆಗೆದು ಅಲ್ಲಿ ಕೂಡಬೇಡ ಅಂತ ಅಡಸಿಮಕ್ಕಳೇ ಅಂತ ಬೈತ್ತಿದ್ದೆ. ಇವತ್ತು ನಿನ್ನ ದಿನ ಮುಗಿದಿದೆ ನಿನ್ನ ಕೊಲೆ ಮಾಡದೇ ಬಿಡುವುದಿಲ್ಲಾ ಅಂತ ಕೂಗಾಡುತ್ತಿದ್ದು ಆಗ ನಾನು ಮಗವನ್ನು ಉಳಿಸಿಕೊಳ್ಳು ಅಂತ ನಾನು ನನ್ನ ಹೆಂಡತಿ ಮತ್ತು ದೇವಪ್ಪ ಇವರಿಗೆ ಅಂದೇನು. ಆಗ ಅಷ್ಟೋತ್ತಿಗೆ ನಮ್ಮೂರಿನವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದಂತೆ ಆಗ ಪೊಲೀಸ್ನವರು ಬಂದರು. ಅಲ್ಲಿಗೆ ಪೊಲೀಸರು ಬಂದು ನಮಗೆಲ್ಲಾ ವಿಚಾರಿಸಿಕೊಂಡು ನಾನು ಮೇಲಿನಂತೆ ಎಲ್ಲಾ ವಿಷಯವನ್ನು ಅಮೀನಸಾಬರಿಗೆ ಮತ್ತು ಅವರ ಸಿಬ್ಬಂದಿವರಿಗೆ ತಿಳಿಸಿದೇನು. ನಾನು ಮತ್ತು ದೇವಪ್ಪ ಕೂಡಿ ದೇವಪ್ಪನ ಮನೆಗೆ ಹೋಗುತ್ತಿದ್ದೇವು. ಆಗ ಹೊಲೆಯ ಜನಾಂಗದವರು ಪೊಲೀಸ್ನವರ ಮೇಲೆ ನೀವು ಅವರಿಗೆ ಸಪೋರ್ಟ ಮಾಡಿ ಅವರಿಗೆಲ್ಲಾ ಹೇಳಿಕೊಡ್ತಾ ಇದ್ದೀರಿ ನೀವು ಅವರ ಜೊತೆಗೆ ನಿಮಗೂ ಒಂದು ಗತಿ ಕಾಣಿಸ್ತಿವೇ ಈ ಮೊದಲು ಅನಾವಶ್ಯಕವಾಗಿ ಕೇಸುಗಳನ್ನು ಮಾಡಿದ್ದೀರಿ, ನಮ್ಮ ಮನೆಗಳ ಮೇಲೆ ಕಲ್ಲುಗಳನ್ನು ಬೀಸುತ್ತಾ ನಮ್ಮ ಮನೆಗಳ ಹೊಕ್ಕರು. ನಿಮ್ಮನೆಲ್ಲಾ ಮಾದಿಗ ಸೂಳೆ ಮಕ್ಕಳನ್ನು ಬಿಡುವುದಿಲ್ಲಾ ಅಂತ ಮನೆಗಳನ್ನು ಹೊಕ್ಕು ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದ್ದು.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 417/2017 ಕಲಂ 279, 338, 304[ಎ] ಐ.ಪಿ.ಸಿ ಮತ್ತು 187 ಐಎಂವಿ ಯಾಕ್ಟ ;- ದಿನಾಂಕ 03/11/2017 ರಂದು 06-00 ಎ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ. ದೇವಮ್ಮ ಗಂಡ ಸಾಬಣ್ಣ ನಾಟಿಕಾರ ವ|| 24 ವರ್ಷ ಜಾ|| ಕಬ್ಬಲಿಗ ಉ|| ಮನೆಗಲಸ ಸಾ|| ಸನ್ನತಿ ತಾ|| ಚಿತಾಪೂರ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಹಾಜರಪಸಿದ್ದು ಸದರ ಅಜರ್ಿ ಸಾರಾಂಶವೇನೆಂದರೆ, ನಾನು ಹೆರಿಗೆ ಕುರಿತು 3 ತಿಂಗಳ ಹಿಂದೆ ಹೆರಿಗೆ ಕುರಿತು ನನ್ನ ತವರು ಮನೆ ಯಮನೂರಗೆ ಬಂದಿದ್ದು, 1 ತಿಂಗಳ ಹಿಂದೆ ಒಂದು ಹೆಣ್ಣ ಮಗುವಿಗೆ ಜನ್ಮ ಕೊಟ್ಟಿರುತ್ತೇನೆ. ನನ್ನ ಗಂಡ ನಿನ್ನೆ ದಿನಾಂಕ: 02/11/2017 ರಂದು ರಾತ್ರಿ 9.30 ಪಿ.ಎಂ ಸುಮಾರಿಗೆ ಯಮನೂರಿಗೆ ಬರುತ್ತಿದ್ದಾಗ ಹತ್ತಿಗುಡುರ-ದೇವದುಗರ್ಾ ಮುಖ್ಯೆ ರಸ್ತೆಯ ವಿಶ್ವನಾಥರಡ್ಡಿ ವಕೀಲರ ಹೊಲದ ಹತ್ತಿರ ಇದ್ದಾಗ ಕಾರ.ನಂ. ಕೆಎ-04 ಎಎ-9424 ನೇದ್ದರ ಚಾಲಕ ದೇವರಾಜ ತಂ/ ತಿಪ್ಪಣ್ಣ ಸುರಡ್ಡಿ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ನನ್ನ ಗಂಡನು ಕುಳಿತು ಹೊರಟಿದ್ದ ಮೋಟರ ಸೈಕಲ್ ನಂ.ಕೆಎ-33 ಕ್ಯೂ-1476 ನೇದ್ದರ ಹಿಂದೆ ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ನನ್ನ ಗಂಡ ಸಾಬಣ್ಣ ತಂ/ ಚಂದಪ್ಪ ನಾಟೀಕಾರ ಸಾ|| ಸನ್ನತಿ ತಾ|| ಚಿತಾಪುರ ಇವರಿಗೆ ಬಾರೀ ಗಾಯಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಸಿದ್ದಪ್ಪ ತಂ/ ಶರಣಪ್ಪ ಪರಸನಳ್ಳಿ ಸಾ|| ಮಂಗ್ಯಾಳ ಇವನಿಗೆ ಬಾರಿ ಒಳಪೆಟ್ಟು ಆಗಿರುತ್ತದೆ. ಅಪಘಾತಪಡಿಸಿ ಕಾರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಸದ ಮೇಲಿಂದ ಶಹಾಪುರ ಠಾಣೆ ಗುನ್ನೆ ನಂಬರ 417/2017 ಕಲಂ 279, 338, 304[ಎ] ಐ.ಪಿ.ಸಿ ಮತ್ತು 187 ಐಎಂವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 418/2017 ಕಲಂ 420  ಐಪಿಸಿ ಮತ್ತು ಕಲಂ 66(ಸಿ), 66(ಡಿ) ಐ.ಟಿ ಯಾಕ್ಟ 2000;- ದಿನಾಂಕ 03/11/2017 ರಂದು ರಾತ್ರಿ 20-30 ಗಂಟೆಗೆ ಪಿಯರ್ಾದಿ ಶ್ರೀ ಶಿವರೆಡ್ಡಿ ತಂದೆ ಅಮರಪ್ಪ ಜಾಲಿಬೆಂಚಿ ವ|| 37 ಉ|| ಒಕ್ಕಲುತನ ಜಾ|| ಬೇಡರ ಸಾ|| ಗಂಗಾನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೆನೆಂದರೆ ಶಹಾಪೂರ ನಗರದ ಬಸವೇಶ್ವರ ಗಂಜ್ ಏರಿಯಾದಲ್ಲಿ ಇರುವ  ಸ್ಟೇಟ್ ಬ್ಯಾಂಕ ಆಪ್  ಇಂಡಿಯಾದಲ್ಲಿ ನನ್ನ ಉಳಿತಾಯ ಖಾತೆ ನಂ: 64125865173 ಇದ್ದು, ಸದರಿ ಖಾತೆಯಲ್ಲಿ ದಿನಾಂಕ 28/10/2017 [ಶನಿವಾರದಿನದಂದು]  1,06,792=00 ಜಮಾ ಇದ್ದವು. ಸದರಿ ಖಾತೆಯಿಂದ  ಅದೆ ದಿನ ನಾನು ಮದ್ಯಾಹ್ನ  ಎ.ಟಿ.ಎಮ್ ಮುಖಾಂತರ ರೂಪಾಯಿ 2000=00 ಹಣ ಡ್ರಾ ಮಾಡಿಕೊಂಡಿರುತ್ತೆನೆ.  ನಂತರ ಮದ್ಯಾಹ್ನ  ಅಂದಾಜು 3-00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ಒಂದು ಮೊಬೈಲ್ ನಂಬರ 7739734219 ನೇದ್ದರಿಂದ ನನ್ನ ಮೋಬೈಲ್ ನಂಬರ 9663474919 ನೇದ್ದಕ್ಕೆ ಫೋನ್ ಮಾಡಿ ನಾನು ಬ್ಯಾಂಕ್ ಮಾನೇಜರ ಇದ್ದೇನೆ ನಿಮ್ಮ ಎ.ಟಿ.ಎಂ ಬಂದ ಆಗಿದೆ ಅದನ್ನು ಚಾಲು ಮಾಡಬೇಕು ನಿಮ್ಮ ಎ.ಟಿ.ಎಂ. ಕಾರ್ಡ ಮೇಲೆ ಇರುವ 16 ನಂಬರ ಹೇಳಿ ಅಂದಾಗ ನಾನು ನನ್ನ ಎ.ಟಿ.ಎಂ ಕಾರ್ಡ ಮೇಲೆ ಇರುವ 5211 1000 0080 7687 ಇರುತ್ತವೆ ಅಂತಾ 16 ನಂಬರಗಳನ್ನು ಹೇಳಿರುತ್ತೇನೆ.  ನಂತರ ಪುನಃಪೋನ್ ಮಾಡಿ ನಿಮ್ಮ ಮೋಬೈಲ್ಗೆ ಔಖಿಕ ನಂಬರ ಬಂದಿದೆ ಅದನ್ನು  ಹೇಳಿದರೆ ನಿಮ್ಮ ಎ.ಟಿ.ಎಮ್  ಕಾರ್ಡ ಚಾಲು ಆಗುತ್ತದೆ ಅಂತ ಹೇಳಿದ್ದರಿಂದ ನನ್ನ ಮೋಬೈಲಿಗೆ ಬಂದಿರುವ ಒಂದಾದ ನಂತರ ಒಂದು ಔಖಿಕ ನಂಬರಗಳನ್ನು ಹೇಳಿರುತ್ತೆನೆ. ನಂತರ ನಾನು ದಿನಾಂಕ:30/10/2017 ರಂದು ಮುಂಜಾನೆಯ ಸುಮಾರಿಗೆ ನನ್ನ ಖಾತೆಯಿಂದ ರೂಪಾಯಿ 2,000=00 ಹಣ ಡ್ರಾ ಮಾಡಿಕೊಂಡಿದ್ದು, ನಂತರ ಎ.ಟಿಎಮ್ ನಿಂದ ಬಂದ ಸ್ಲೀಪ್ ನೋಡಲಾಗಿ ಅದರಲ್ಲಿ ಂಗಿಐಂಃಐಇ ಃಂಐಂಓಅಇ  3,776 =00 ರೂಪಾಯಿ ಇದ್ದುದ್ದನ್ನು ಕಂಡು ನಾನು ಗಾಬರಿಗೊಂಡು ಎಸ್.ಬಿ.ಐ ಬ್ಯಾಂಕಿಗೆ ಹೋಗಿ ಮ್ಯಾನೇಜರ್ ರವರಿಗೆ ವಿಚಾರಣೆ ಮಾಡಲಾಗಿ ಸದರಿಯವರು ಚೆಕ್ ಮಾಡಿ ರೂಪಾಯಿ 3,776=00 ರೂಪಾಯಿ ಇರುತ್ತವೆ ಅಂತ ಹೇಳಿದರು. ನಾನು ನನ್ನ ಉಳಿತಾಯ ಖಾತೆ ನಂಬರ 64125865173 ನೇದ್ದರ ಸ್ಟೇಟ್ಮೆಂಟ್ ಕೊಡಲು ಕೇಳಿದಾಗ ಅವರು ಅಜರ್ಿ ತುಂಬಿ ಕೊಡಲು ಹೇಳಿದಾಗ ನಾನು ಅವರಿಗೆ ಅಜರ್ಿ ತುಂಬಿಕೊಟ್ಟಾಗ ಬ್ಯಾಂಕಿನವರು ನನ್ನ ಖಾತೆಯ ಸ್ಟೇಟಮೇಂಟ್ ನೀಡಿದರು ಆಗ ನಾನು ನನ್ನ ಖಾತೆಯ ನಂ 64125865173 ನೇದ್ದನ್ನು ಪರಿಶೀಲಿಸಿ ನೋಡಲಾಗಿ ನನ್ನ ಖಾತೆಯಲ್ಲಿ  ದಿನಾಂಕ 28/10/2017 ರಂದು 1] 9999/- 2] 9999/- 3]20000/- 4] 5000/- 5] 4000/- ಮತ್ತು ದಿನಾಂಕ 29/10/2017 ರಂದು 6] 5000/- 7] 5000/- 8] 5000/-  9] 9999/- 10] 4999/- 11] 9999/- 12] 2999/- 13] 6999/ ಹೀಗೆ ಒಟ್ಟು 98,993=00 ರೂಪಾಯಿ ಯಾರೋ ಅಪರಿಚಿತರು ಆನಲೈನ್ ಬ್ಯಾಂಕಿಂಗ ಮುಖಾಂತರ ಹಣ ಡ್ರಾ ಮಾಡಿಕೊಂಡಿದ್ದು ಕಂಡು ಬಂದಿರುತ್ತದೆ  ಯಾರೋ ಅಪರಿಚಿತರು ಲಾಕ್ ಆದ ನಿಮ್ಮ ಎ.ಟಿ.ಎಂ ಅನ್ನು ಓಪನ್ ಮಾಡಿಕೊಡುತ್ತೇವೆ ಅಂತಾ ಮೋಸ್ ಮಾಡುವ ಉದ್ದೇಶದಿಂದ ನನಗೆ ಫೋನ್ ಮಾಡಿ ನನ್ನಿಂದ ಮಾಹಿತಿಯನ್ನು ಪಡೆದುಕೊಂಡು ಆನ್ ಲೈನ್ ಬ್ಯಾಂಕಿಂಗ ಮುಖಾಂತರ ಹಣ ಡ್ರಾ ಮಾಡಿಕೊಂಡಿರುತ್ತಾರೆ. ನಂತರ ಈ ಬಗ್ಗೆ ಬ್ಯಾಂಕಿಗೆ ಹೋಗಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ಈ ಬಗ್ಗೆ ಪ್ರಕರಣವನ್ನು ದಾಖಲುಮಾಡಿಕೊಂಡು ನನ್ನ ಎಸ್.ಬಿ.ಐ ಬ್ಯಾಂಕಿನ ಉಳಿತಾಯ ಖಾತೆ ನಂಬರ 64125865173 ನೇದ್ದರಿಂದ  98,993=00  ರೂಪಾಯಿಯನ್ನು ಆನ್ ಲೈನ್ ಬ್ಯಾಂಕಿಂಗ್ ಮುಖಾಂತರ  ಹಣ ಡ್ರಾ ಮಾಡಿಕೊಂಡ ಬಗ್ಗೆ ಕಾನೂನು ರೀತಿಯ ಕ್ರಮ ಕೈಕೊಂಡು  ನನ್ನ ಹಣ  ಡ್ರಾ ಮಾಡಿಕೊಂಡವರನ್ನು ಪತ್ತೆ ಹಚ್ಚಲು ದೂರು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 418/2017 ಕಲಂ 420 ಐ.ಪಿ.ಸಿ. ಮತ್ತು 66(ಸಿ) 66 (ಡಿ) ಐ.ಟಿ.ಆ್ಯಕ್ಟ 2000 ನ್ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 262/2017 ಕಲಂ: 143, 147, 323, 324, 504, 506 ಸಂಗಡ 149 ಐಪಿಸಿ;-ದಿನಾಂಕ 27.10.2017 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಫಿರ್ಯಾದಿಯು ದೇವಿಂದ್ರಪ್ಪನ ಮನಗೆ ಹೋಗಿದ್ದಾಗ ಅಕ್ರಮ ಕೂಟ ರಚಿಸಿಕೊಂಡು ಬಂದ ಆರೊಪಿತರು ಫಿರ್ಯಾದಿ ಮತ್ತು ಆತನ ಮಕ್ಕಳು ಹಾಗೂ ದೇವಿಂದ್ರಪ್ಪ ಮತ್ತು ಆತನ ಹೆಂಡತಿಗೆ ಅವಾಚ್ಯವಾಗಿ ಬೈದು ಕೈಯಿಂದ, ಕಟ್ಟಿಗೆಯಿಂದ, ಕಲ್ಲಿನಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 262/2017 ಕಲಂ:143, 147, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 263/2017 ಕಲಂ: 143, 147, 341, 323, 324, 504, 506 ??. 149 ಐಪಿಸಿ ;- ಪಿರ್ಯಾದಿಯ ಹೊಲ ಮತ್ತು ದೇವಿಂದ್ರಪ್ಪ ಈತನ ಹೊಲ ಒಂದಕ್ಕೊಂದು ಹೊಂದಿಕೊಂಡಿದ್ದು ಪಿರ್ಯಾಧಿಯು ದಿ. 01.11.17 ರಂದು ತನ್ನ ಹೊಲದಲ್ಲಿ ಜೋಳ ಬಿತ್ತಿದ್ದು ಇರುತ್ತದೆ. ದಿನಾಂಕ 02.11.17 ರಂದು ದೇವಿಂದ್ರಪ್ಪ ಈತನು ತನ್ನ ಹೊಲದ ಡ್ವಾಣ (ಬದು) ಹೊಡೆದು ಜೋಳ ಬಿತ್ತಿದ್ದಿ ಸೂಳಿ ಮಗನೆ ಅಂತಾ ಪಿರ್ಯಾಧಿಗೆ ಅವಾಚ್ಯವಾಗಿ  ಬೈದು ನ್ಯಾಯ ಪಂಚಾಯಿತಿ ಮಾಡುತ್ತೇನೆ ಅಂತಾ ಹೋದನು ದಿನಾಂಕ 03.11.2017 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಪಿರ್ಯಾದಿಯು ದೇವಿಂದ್ರಪ್ಪ ಈತನ ಮನೆ ಮುಂದೆ ಹೋಗುತ್ತಿದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದು ಆತನಿಗೆ ತಡೆದು ನಿಲ್ಲಿಸಿ ಬಡಿಗೆಯಿಂದ, ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 303/2017 ಕಲಂ: 143, 147, 323, 504, 354, ಸಂಗಡ 149, ಐ.ಪಿ.ಸಿ.;- ದಿನಾಂಕ:03-11-2017 ರಂದು ಫಿಯರ್ಾದಿ ಶ್ರೀಮತಿ ಮರೆಮ್ಮ ಗಂಡ ಶಾಂತಪ್ಪ ಪೂಜಾರಿ ವಯ:28 ವರ್ಷ ಜಾ: ಕಬ್ಬಲಿಗ ಉ: ಮನೆಗೆಲಸ ಸಾ: ಮಾಚಗುಂಡಾಳ ತಾ:ಸುರಪೂರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನಂದರೆ   ದಿನಾಂಕ: 31-10-2017 ರಂದು ಮುಂಜಾನೆ 6:30 ಗಂಟೆಗೆ ನಮ್ಮ ಭಾವನಾದ ಬಾಲ್ದಂಡಪ್ಪ ತಂದೆ ಬಸವರಾಜ ಪೂಜಾರಿ ಈತನು ನಮ್ಮೂರ ಮಾಳಪ್ಪ ತಂದೆ ಹುಚ್ಚಪ್ಪ ಪೂಜಾರಿ ಈತನ ಹೊಟೆಲಗೆ ಚಹಾಕುಡಿಯಲು ಹೋಗಿದ್ದನು. ಅಲ್ಲಿ ನಮ್ಮ ಭಾವನಿಗೆ ನಮ್ಮೂರ ದೇವಿಂದ್ರಪ್ಪ ತಂದೆ ಭೀಮಣ್ಣ ಚೆನ್ನೂರ ಈತನು ಜಗಳ ತೆಗೆದಿದ್ದಾನೆ ಅಂತಾ ಸುದ್ದಿ ಕೇಳಿ ನಾನು ಮತ್ತು ನಮ್ಮ ಅಕ್ಕಂದಿರಾದ ರೇಣುಕಮ್ಮ ಗಂಡ ಚಿದಾನಂದ ಪೂಜಾರಿ ಮತ್ತು ಶಾಂತಮ್ಮ ಗಂಡ ಬಾಲ್ದಂಡಪ್ಪ ಪೂಜಾರಿ ಮೂರು ಜನರು ಕೂಡಿ ಬಿಡಿಸಲು ಹೋದೆವು ಆಗ ಅಲ್ಲಿ ದೇವಿದ್ರಪ್ಪನು  ನಮಗೆ ಅವಾಚ್ಯವಾಗಿ ಬೈಯತೊಡಗಿದನು. ನಂತರ ಅವರ ಸಂಭಂದಿಕರಾದ 2) ಸಿದ್ದಪ್ಪ ತಂದೆ ಭೀಮಣ್ಣ ಚನ್ನೂರ , 3) ಶರಣಪ್ಪ ತಂದೆ ಭೀಮಣ್ಣ ಚೆನ್ನೂರ 4) ಹೊನ್ನಯ್ಯ ತಂದೆ ದೇವಿಂದ್ರಪ್ಪ ಪೂಜಾರಿ 5) ಮಹಾದೇವಪ್ಪ ತಂದೆ ದೇವಿಂದ್ರಪ್ಪ ಪೂಜಾರಿ 6) ಭೀಮರಾಯ ತಂದೆ ಪಿಡ್ಡಪ್ಪ  ಚಾಕರಿ 7) ಪಿಡ್ಡಪ್ಪ ತಂದೆ ರಾಮಣ್ಣ ಚಾಕರಿ 8) ಕಾಂತಮ್ಮ ಗಂಡ ಭಿಮಣ್ಣ ಚೆನ್ನೂರ 9) ಶಿವಮ್ಮ ಗಂಡ ದೇವಿಂದ್ರಪ್ಪ ಚೆನ್ನೂರ 10) ವಿಜಯಮ್ಮ ಗಂಡ ಹೊನ್ನಯ್ಯ ಪೂಜಾರಿ ಎಲ್ಲರೂ ಕೂಡಿ ಅಕ್ರಮ ಕೂಟ ಕಟ್ಟಿಕೊಂಟು ಬಂದವರೇ ಲೆ ಸೂಳಿ ಮಕ್ಕಳೆ ನಿಮ್ಮದು ಬಹಾಳ ಆಗಿದೆ ಅಂತಾ ಬೈಯುತ್ತಾ  ಅವರಲ್ಲಿಯ ದೇವಿಂದ್ರಪ್ಪನು ನಮ್ಮ ಭಾವನಾದ ಬಾಲ್ದಂಡಪ್ಪ ಈತನಿಗೆ ಕೈಯಿಂದ ಹೊಡೆದು ನೆಲಕ್ಕೆ ಕಡವಿದನು. ಆಗ ನಾನು ಬಿಡಿಸಲು ಹೋದಾಗ ನನಗೆ ದೇವಿಂದ್ರಪ್ಪನು ಕೂದಲು ಹಿಡಿದು ಎಳೆದಾಡಿ ನನ್ನ ಬಲಗೈ ಹಿಡಿದು ತಿರುವು ಹೊಡೆದನು ಉಲಿದವರು ನಮ್ಮ ಅಕ್ಕಂದಿರಾದ ರೇಣುಕಮ್ಮ ಮತ್ತು ಶಾಂತಮ್ಮ ಇವರಿಗೆ ಎಳೆದಾಡಿ ಹೊಡೆದರು. ಆಗ ಅಲ್ಲೇ ಹೊಟೆಲದಲ್ಲಿ ಚಹಾ ಕುಡಿಯಲು ಬಂದಿದ್ದ ಬಾಲ್ದಂಡಪ್ಪ ತಂದೆ ಭೀಮಣ್ಣ ರುಕ್ಮಾಪೂರ ಮತ್ತು ದೇವಿಂದ್ರಪ್ಪ ತಂದೆ ಭೀಮಣ್ಣ ರುಕ್ಮಾಪೂರ ಸುಭಾಶ್ಚಂದ್ರ ತಂದೆ ಪಿಡ್ಡಪ್ಪ  ರುಕ್ಮಾಪೂರ ಇವರು ಬಂದು ಬಿಡಿಸಿಕೊಂಡಿರುತ್ತಾರೆ. ನಾವು ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ:03-11-2017 ರಂದು ತಡವಾಗಿ ಠಾಣೆಗೆ ಬಂದು ಫಿಯರ್ಾದಿ ನೀಡುತ್ತಿದ್ದೇನೆ.
       ಆದ್ದರಿಂದ ದಿನಾಂಕ:31-10-2017 ರಂದು ಮುಂಜಾನೆ 6:30 ಗಂಟೆಗೆ ಅಕ್ರಮಕೂಟ ಕಟ್ಟಿಕೊಂಡು ಜಗಳ ತೆಗೆದು ನಮ್ಮ ಭಾವನಿಗೆ ನನಗೆ ಮತ್ತು ನಮ್ಮ ಅಕ್ಕಂದಿರಿಗೆ ಹೊಡೆದು ಅವಮಾನ ಮಾಡಿದವರ ಮೇಲೆ      ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.303/2017 ಕಲಂ. 143, 147, 323, 504, 354, ಸಂಗಡ 149, ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.