ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-01-2021
ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 05/2021, ಕಲಂ. 323, 324, 504, 506 ಜೊತೆ 34 ಐಪಿಸಿ ಮತ್ತು ಕಲಂ 3[1][ಆರ್], 3[2] [5-ಎ] ಎಸ್.ಸಿ/ಎಸ್.ಟಿ (ಪಿಒಎ) ಕಾಯ್ದೆ 1989 :-
ಸುಮಾರು ವರ್ಷಗಳ ಹಿಂದಿನಿಂದ ಫಿರ್ಯಾದಿ ವಿಶ್ವನಾಥ ತಂದೆ ಭೀಮಣ್ಣ ಫುಲೆಕರ ಸಾ: ಕೆ.ಎಚ.ಬಿ ಕಾಲೋನಿ ಬೀದರ ಹಾಗೂ ಮನೆಯ ಪಕ್ಕದ ಭರತ ತಂದೆ ಬಸವರಾಜ ಶೆಟಕಾರ ಇಬ್ಬರ ಮಧ್ಯ ಕಂಪೌಂಡ ಗೋಡೆಯ ಬಗ್ಗೆ ತಕರಾರು ಇದ್ದು ಇದರ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯ ಕಲ್ಬುರ್ಗಿಯಲ್ಲಿ ವ್ಯಾಜ್ಯ ಇರುತ್ತದೆ, ಇದರ ಬಗ್ಗೆ ಸುಮಾರು ಸಲ ಬಾಯಿ ವiÁತಿನ ಜಗಳ ತಂಟೆಯಾಗಿರುತ್ತದೆ, ಹೀಗಿರುವಾಗ ದಿನಾಂಕ 18-12-2019 ರಂದು ಆರೋಪಿತರಾದ ಭರತ ತಂದೆ ಬಸವರಾಜ ಶೆಟಕಾರ ವಯ: 56 ವರ್ಷ, ಜಾತಿ: ಲಿಂಗಾಯತ, 2) ಅನುಶಾಯಾಬಾಯಿ ಗಂಡ ಭರತ ಶೆಟಕಾರ ವಯ: 50 ವರ್ಷ ಇಬ್ಬರು ¸Á: ಕೆ.ಎಚ.ಬಿ ಕಾಲೋನಿ ಬೀದರ ಇವರಿಬ್ಬರು ಕೂಡಿಕೊಂಡು ಬಂದು ಫಿರ್ಯಾದಿಯವರ ಜೊತೆ ಜಗಳ ಮಾಡಿ ಜಗಳದಲ್ಲಿ ಸದರಿ ಆರೋಪಿತರು ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿ ಅಕ್ರಮವಾಗಿ ಕೈಗಳಿಂದ ಫಿರ್ಯಾದಿಯ ಮೇಲೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 18-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 09/2021, ಕಲಂ. 279, 338 ಐ.ಪಿ.ಸಿ ಜೊತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ 18-01-2021 ರಂದು ಫಿರ್ಯಾದಿ ಯಾದವಕುಮಾರ ತಂದೆ ಮಾಣಿಕಪ್ಪಾ ಮೇತ್ರೆ ವಯ: 42 ವರ್ಷ, ಜಾತಿ: ಕುರುಬ, ಸಾ: ಗೋರನಳ್ಳಿ, ತಾ: & ಜಿ: ಬೀದರ ರವರು ತನ್ನ ಹೆಂಡತಿ ಸುನಿತಾ ಇಬ್ಬರೂ ಕೂಡಿ ಗೋರನಳ್ಳಿ ಗ್ರಾಮದಿಂದ ತಮ್ಮ ಹೊಲಕ್ಕೆ ಹೋಗಿ ಹೊಲದ ಹತ್ತಿರ ನಿಂತಾಗ ಗುನ್ನಳ್ಳಿ ಗ್ರಾಮದ ಕಡೆಯಿಂದ ಮೋಟಾರ ಸೈಕಲ್ ನಂ. ಟಿ.ಎಸ್-15/8626 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಕೊಂಡು ಬಂದು ಫಿರ್ಯಾದಿಗೆ ಅಘಫಾತ ಪಡಿಸಿ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಬಲªೆÆಳಕಾಲು ಕೆಳಗೆ ಮುರಿದಿರುತ್ತದೆ, ಭಾರಿ ಗುಪ್ತಗಾಯ ಮತ್ತು ಬಲ ಅಂಗೈಯಲ್ಲಿ 4 ಹೋಲಿಗೆ ಬಿದ್ದಿgÀÄತ್ತವೆ, ತಲೆಗೆ ಪೆಟ್ಟಾಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 04/2021, ಕಲಂ. 379 ಐಪಿಸಿ :-
ದಿನಾಂಕ 17-01-2021 ರಂದು ಫಿರ್ಯಾದಿ ಮಹ್ಮದ ಅಬ್ದುಲ ಮಹೇಬೂಬ ತಂದೆ ಮಹ್ಮದ ಅಬ್ದುಲ ಸತ್ತಾರ ಮಹ್ಮದ ವಯ: 23 ವರ್ಷ, ಸಾ: 6-210 ರೋಡಾ ಮೇಸ್ತ್ರಿ ನಗರ ನಹೇರು ನಗರ ಗಾಜುಲ್ಲಾ ರಾಮಾರಾಮ ರೋಡ ಕುದಬುಲ್ಲಾಪೂರ ಮಂಡಲ ಹೈದ್ರಾಬಾದ ರವರು ಮರೂರ ಗ್ರಾಮದಲ್ಲಿರುವ ಮೌಲಾಬಾಬಾ ದರ್ಗಾದ ಉರ್ಸಗೆ ಬರುವ ಕುರಿತು ಬಜಾಜ್ ಪಲ್ಸರ 150 ಮೋಟಾರ ಸೈಕಲ ನಂ. ಟಿ.ಎಸ್-08/ಜಿಕೆ-5070 ನೇದರ ಮೇಲೆ ಹೈದ್ರಾಬಾದದಿಂದ ತನ್ನ ಗೆಳೆಯನಾದ ಅಂಬಾದಾಸ ತಂದೆ ಶ್ರೀನಿವಾಸ ಇಬ್ಬರು ಮರೂರಗೆ ಬಂದು ಮರೂರ ಗ್ರಾಮದಲ್ಲಿ ಪಾರ್ಕಿಂಗನ ಸ್ವಲ್ಪ ಅಂತರದಲ್ಲಿ ಸದರಿ ಮೋಟಾರ ಸೈಕಲ ನಿಲ್ಲಿಸಿ ಮೌಲಾಬಾಬಾ ದರ್ಗಾಕ್ಕೆ ಹೋಗಿ ನಂತರ ಮರಳಿ ಮೋಟಾರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಲು ಮೋಟಾರ್ ಸೈಕಲ್ ಇರಲಿಲ್ಲಾ, ನಂತರ ಇಬ್ಬರು ಕೂಡಿ ಸದರಿ ವಾಹನವನ್ನು ಹುಡುಕಾಡಲು ಮೊಟಾರ ಸೈಕಲ ಸಿಗಲಿಲ್ಲಾ, ಯಾರೋ ಕಳ್ಳರು ಫಿರ್ಯಾದಿಯವರ ಬಜಾಜ್ ಪಲ್ಸರ 150 ಮೋಟಾರ ಸೈಕಲ ನಂ. ಟಿ.ಎಸ್-08/ಜಿಕೆ-5070 ಅ.ಕಿ 45,000/- ರೂಪಾಯಿ ಬೆಲೆಬಾಳುವುದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 04/2021, ಕಲಂ. 457, 380 ಐಪಿಸಿ :-
ಫಿರ್ಯಾದಿ ಮಂಗಲಾ ಗಂqÀ ನಾಗಪ್ಪಾ ಹೂಗಾರ ಸಾ: ಮರಪಳ್ಳಿ, ತಾ: ಚಿಂಚೋಳಿ, ಜಿಲ್ಲಾ ಕಲ್ಬುರ್ಗಿ ರವರ ಗಂಡ ಸಾರಾಯಿ ಕುಡಿಯುವ ಚಟವುಳ್ಳವನಾಗಿದ್ದರಿಂದ ತನ್ನ ಬಂಗಾರದ ಒಡವೆಗಳು ಭದ್ರವಾಗಿಡಲು ತನ್ನ ತವರು ಮನೆಯಾದ ಜಮಗಿ ಗ್ರಾಮದಲ್ಲಿ ತಮ್ಮ ತಾಯಿಗೆ ಕೊಟ್ಟು ಹೊಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 17-01-2021 ರಂದು 2100 ಗಂಟೆಗೆ ಫಿರ್ಯಾದಿಯವರ ತಾಯಿಯು ಊಟ ಮಾಡಿ ಅಲಮಾರಿವಿರುವ ಮನೆಗೆ ಕಿಲಿ ಹಾಕಿಕೊಂಡು ದೇವರ ಮನೆಯಲ್ಲಿ ಮಲಗಿಕೊಂಡಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ತಾಯಿಯ ಮನೆಗೆ ಬಂದು ಮನೆಯಲ್ಲಿನ ಅಲಮಾರಿ ವಡೆದು ಅದರಲ್ಲಿದ್ದ 1) 2 ತೊಲೆ ಬಂಗಾರದ ಲಾಕೇಟ ಅ.ಕಿ 60,000/- ರೂ., 2) 2 ತೊಲೆಯ ಬಂಗಾರದ ನೆಕಲೇಶ ಅ.ಕಿ 60,000/- ರೂ., 3) 1 ತೊಲೆಯ ಬಂಗಾರದ ಕಿವಿಯಲ್ಲಿನ ಝುಮಕಾ ಹೂ ಅ.ಕಿ 30,000/- gÀÆ., 4) 1 ತೊಲೆ 5 ಗ್ರಾಂ ಬಂಗಾರದ ನೆಕಲೇಶ ಅ.ಕಿ 45,000/- ರೂ., 5) 5 ಗ್ರಾಂ ನ ಬಂಗಾರದ 2 ಝುಮಕಾ ಅ.ಕಿ 15,000/-ರೂ., 6) 5 ಗ್ರಾಂ ನ ತೊಲೆ ಚೈನ ಅ.ಕಿ 15,000/- ರೂ., 7) ಗುಂಡಾ ಮಣಿ ಪತ್ತಿ ಇರುವ 1 ತೊಲೆಯ ಬಂಗಾರದ ಮಂಗಳಸೂತ್ರ ಅ.ಕಿ 30,000/- ರೂ., 8) 2 ಗ್ರಾಂ ನ ಗುಂಡಿ ಲಟಕನ್ ಅ.ಕಿ 6000/- ರೂ., 9) 4 ಗ್ರಾಂ ನ 2 ಬಂಗಾರದ ಉಂಗರುಗಳು ಅ.ಕಿ 12,000/- ರೂ., 10) 25 ತೊಲೆಯ ಬೆಳ್ಳಿಯ ಎರಡೂ ಕಾಲು ಚೈನಗಳು ಅ.ಕಿ 17,500/- gÀÆ. ಹಾಗೂ 11) 4 ತೊಲೆ ಬೆಳ್ಳಿಯ ಎರಡೂ ಕಾಲು ಚೈನಗಳು ಅ.ಕಿ 2800/-ರೂ. ನೇದವುಗಳು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 07/2021, ಕಲಂ. 380, 457 ಐಪಿಸಿ :-
ದಿನಾಂಕ 17-01-2021 23:00 ಗಂಟೆಯಿಂದ ದಿನಾಂಕ 18-01-2021 0400 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಗುಂಡಪ್ಪಾ ತಂದೆ ನಿಂಗಪ್ಪ ಬೀಜಾಪುರೆ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ತಾಳಮಡಗಿ ರವರ ಮನೆಯ ಬಾಗಿಲು ನೂಕಿ ಒಳಗೆ ಪ್ರವೇಶ ಮಾಡಿ ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ 1) 2 ತೊಲೆ ಬಂಗಾರದ ಸರ ಅ.ಕಿ 50,000/- ರೂ., 2) ಒಂದು ತೋಲೆ ಬಂಗಾರದ ಸರ ಅ.ಕಿ 30,000/- ರೂ., 3) 9 ಮಾಸಿ ಕಿವಿಯ ಬಂಗಾರ ಓಲೆ ಅ.ಕಿ 18,000/- ರೂ ಹಾಗು 4) ನಗದು ಹಣ 20,000/- ರೂ ಒಟ್ಟು ಅ.ಕಿ 1,28,000/- ರೂಪಾಯಿ ಬೆಲೆ ಬಾಳುವ ಬಂಗಾರ ಹಾಗು ನಗದು ಹಣ ಹಾಗೂ 2 ಮೊಬೈಲಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. 34, 38(ಎ), ಕೆ.ಇ ಕಾಯ್ದೆ :-
ದಿನಾಂಕ 17-01-2021 ರಂದು ಕಪಲಾಪೂರ ಕ್ರಾಸ್ ಹತ್ತಿರ ಇರುವ ಎ-ಸ್ಟಾರ್ ಧಾಬಾದಲ್ಲಿ ಒಬ್ಬ ವ್ಯಕ್ತಿಯು ಅನಧಿಕೃತವಾಗಿ ಸರಾಯಿ ಮಾರಾಟಾ ಮಾಡುತ್ತಿದ್ದಾನೆಂದು ಡಾ.ದೇವರಾಜ ಡಿ.ಎಸ್.ಪಿ ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸದರಿ ಧಾಬಾದ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಗಣೇಶ ತಂದೆ ಕಂಟೆಪ್ಪಾ ದುಬಲಗುಂಡೆ ವಯ: 35 ವರ್ಷ, ಜಾತಿ: ಕುರುಬ, ಸಾ: ಭಾಗ್ಯನಗರ ಇತನು ಧಾಬಾದಲ್ಲಿ ಅನಧೀಕೃತವಾಗಿ ಸಾರಾಯಿ ಮಾರಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ನಂತರ ಧಾಬಾದ ಕೌಂಟರ್ ಪರಿಶೀಲಿಸಿ ನೋಡಲು ಅದರಲ್ಲಿ 1) ಬ್ಲೆಂಡರ್ ಸ್ಪ್ರೈಡ್ 180 ಎಂ.ಎಲ್ ನ 1 ಬಾಟಲ್ ಅ.ಕಿ 451.81 ರೂ., 2) ಮ್ಯಾಕ್ ಡೋವಲ್ಸ್ 180 ಎಂ.ಎಲ್ ನ 9 ಬಾಟಲಗಳು ಅ.ಕಿ 1784.07 ರೂ., 3) ಇಂಪಿರಿಯಲ್ ಬ್ಲಿವ್ 180 ಎಂ.ಎಲ್ ನ 9 ಬಾಟಲಗಳು ಅ.ಕಿ 1783.89 ರೂ., 4) ರಾಯಲ್ ಸ್ಟಾಗ್ 180 ಎಂ.ಎಲ್ ನ 4 ಬಾಟಲಗಳು ಅ.ಕಿ 1282.56 ರೂ., 5) ರಾಯಲ್ ಸ್ಟಾಗ್ 90 ಎಂ.ಎಲ್ ನ 5 ಬಾಟಲಗಳು ಅ.ಕಿ 820.25/- ರೂ., 6) ರಾಯಲ್ ಚಾಲೆಂಜ್ 180 ಎಂ.ಎಲ್ ನ 2 ಬಾಟಲಗಳು ಅ.ಕಿ 656.16 ರೂ., 7) ಬ್ಲಾಕ್ ಡಿಲೆಕ್ಸ್ 180 ಎಂ.ಎಲ್ ನ 2 ಬಾಟಲಗಳು ಅ.ಕಿ 350.02 ರೂ., 8) ಬ್ಲೆಂಡರ್ ಸ್ಪ್ರೈಡ್ 90 ಎಂ.ಎಲ್ ನ 3 ಬಾಟಲಗಳು ಅ.ಕಿ 670.02 ರೂ., 9) ಇಂಪಿರಿಯಲ್ ಬ್ಲಿವ್ 90 ಎಂ.ಎಲ್ ನ 11 ಬಾಟಲಗಳು ಅ.ಕಿ 1212.42 ರೂ., 10) ಬ್ಯಾಗ ಪೈಪರ 180 ಎಂ.ಎಲ್ ನ 9 ಪೌಚಗಳು ಅ.ಕಿ 1912.14 ರೂ., 11) ಬ್ಯಾಗ ಪೈಪರ 90 ಎಂ.ಎಲ್ ನ 13 ಪೌಚಗಳು ಅ.ಕಿ 890.64 ರೂ., 12) ಯು.ಎಸ್ ವಿಸ್ಕಿ 90 ಎಂ.ಎಲ್ ನ 28 ಬಾಟಲಗಳು ಅ.ಕಿ 983.64 ರೂ., 13) ಓಲ್ಡ್ ಟಾವರಿನ್ 180 ಎಂ.ಎಲ್ ನ 17 ಪೌಚಗಳು ಅ.ಕಿ 1474.75/- ರೂ., 14) ಓಲ್ಡ್ ಟಾವರಿನ್ 90 ಎಂ.ಎಲ್ ನ 13 ಪೌಚಗಳು ಅ.ಕಿ 690.56 ರೂ., 15) ಆಫಿಸರ್ ಚಾಯಿಸ್ 180 ಎಂ.ಎಲ್ ನ 08 ಪೌಚಗಳು ಅ.ಕಿ 849.84 ರೂ., 16) ಆಫಿಸರ್ ಚಾಯಿಸ್ 90 ಎಂ.ಎಲ್ ನ 13 ಪೌಚಗಳು ಅ.ಕಿ 890.63/- ರೂ., 17) ಎಮ್.ಸಿ ರಮ್ 180 ಎಂ.ಎಲ್ ನ 11 ಪೌಚಗಳು ಅ.ಕಿ 1168.53 ರೂ., 18) ಎಮ್.ಸಿ ರಮ್ 90 ಎಂ.ಎಲ್ ನ 13 ಪೌಚಗಳು ಅ.ಕಿ 690.56 ರೂ., 19) ಓರಜಿನಲ್ ಚಾಯಿಸ್ 90 ಎಂ.ಎಲ್ ನ 22 ಪೌಚಗಳು ಅ.ಕಿ 772.86 ರೂ., 20) ಮ್ಯಾಕ್ ಡೋಲ್ಸ್ 90 ಎಂ.ಎಲ್ ನ 08 ಪೌಚಗಳು ಅ.ಕಿ 655.28 ರೂ., 21) ಬಕಾರ್ಡಿ ಆರಂಜ್ ಬ್ರೀಜರ್ 275 ಎಂ.ಎಲ್ ನ 13 ಬಾಟಲಗಳು ಅ.ಕಿ 1495/- ರೂ., 22) ಬಕಾರ್ಡಿ ಪಿಂಕ್ ಬ್ರಿಜರ್ 275 ಎಂ.ಎಲ್ ನ 21 ಬಾಟಲಗಳು ಅ.ಕಿ 2415/- ರೂ., 23) ಬಡವೈಸರ್ ಮಾಗನೆಮ್ 650 ಎಂ.ಎಲ್ ನ 12 ಬಾಟಲಗಳು ಅ.ಕಿ 2340/- ರೂ., 24) ಬಡವೈಸರ್ ಪ್ರಿಮಿಯಮ್ 650 ಎಂ.ಎಲ್ ನ 20 ಬಾಟಲಗಳು ಅ.ಕಿ 3400/- ರೂ., 25) ಕಿಂಗ್ ಫಿಶರ್ 330 ಎಂ.ಎಲ್ ನ 20 ಟಿನಗಳು ಅ.ಕಿ 1700/- ರೂ., 26) ಕಿಂಗ್ ಫಿಶರ್ 500 ಎಂ.ಎಲ್ ನ 6 ಟಿನಗಳು ಅ.ಕಿ 720/- ರೂ., 27) ಕಿಂಗ್ ಫಿಶರ್ 650 ಎಂ.ಎಲ್ ನ 14 ಬಾಟಲಗಳು ಅ.ಕಿ 2100/- ರೂ., 28) ಟುಬರ್ಗ 650 ಎಂ.ಎಲ್ ನ 07 ಬಾಟಲಗಳು ಅ.ಕಿ 1050/- ರೂ. ಹಾಗೂ 29) ಕಿಂಗ್ ಫಿಶರ್ ಪ್ರಿಮಿಯಮ್ 650 ಎಂ.ಎಲ್ ನ 26 ಬಾಟಲಗಳು ಅ.ಕಿ 3900/- ರೂಪಾಯಿ ಹೀಗೆ ಒಟ್ಟು 39,109.99/- ರೂಪಾಯಿ ಇದ್ದವು, ನಂತರ ಸದರಿ ಆರೋಪಿಗೆ ಸಾರಾಯಿ ಮಾರಾಟ ಮಾಡುವ ಬಗ್ಗೆ ಯಾವುದಾದರು ಇಲಾಖೆಯಿಂದ ಪರವಾನಿಗೆ ಇದೆಯೇ ಎಂದು ವಿಚಾರಿಸಲು ನನ್ನ ಹತ್ತಿರ ಯಾವುದೆ ಪರವಾನಿಗೆ ಇಲ್ಲಾ ಅಂತ ತಿಳಿಸಿದ್ದು, ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಅಂಗ ಝಡ್ತಿ ಮಾಡಿ ನೊಡಲು ಅವನ ಹತ್ತಿರ ಯಾವುದೆ ವಸ್ತುಗಳು ಸಿಕ್ಕಿರುವುದಿಲ್ಲಾ, ನಂತರ 39,109.99/- ರೂಪಾಯಿ ಬೇಲೆವುಳ್ಳ ಸಾರಾಯಿಯನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.