ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-10-2019
ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2019, ಕಲಂ. 174
ಸಿ.ಆರ್.ಪಿ.ಸಿ :-
ಫಿರ್ಯಾದಿ ಅನವರ ತಂದೆ ಅಹ್ಮದ ಮೊಜನ ವಯ:
45 ವರ್ಷ, ಸಾ: ಕೊಸಮ
ರವರ
ತಮ್ಮನಾದ ಸುಲ್ತಾನ
ವಯ:
35 ವರ್ಷ
ಇತನು
ಒಂದು
ವರ್ಷದಿಂದ ಹುಚ್ಚನಂತೆ ತಿರುಗಾಡುತ್ತಿದ್ದು,
ಹಿಗಿರುವಲ್ಲಿ
03-10-2019 ರಂದು 0600 ಗಂಟೆಗೆ ಸುಲ್ತಾನ ಇವನು ಮನೆಯಿಂದ ಹೊಗುವಾಗ ತಾಯಿ ಸುಲ್ತಾನ ಇವನಿಗೆ ಎಲ್ಲಿಗೆ ಅಂತ ವಿಚಾರಿಸಿದಾಗ ಸುಲ್ತಾನ ಇವನು ಹೊಟಲಕ್ಕೆ ಹೊಗಿ ಚಹಾ ಕುಡಿದು ಬರುತ್ತೇನೆ ಎಂದು ಹೇಳಿ ಹೊಗಿ
ತಮ್ಮ ಹೊಲದ
ಕಟ್ಟೆಗೆ ಇರುವ
ಬೇವಿನ
ಗಿಡಕ್ಕೆ ಬಿಳಿ ಹಗ್ಗದಿಂದ ನೇಣು ಹಾಕಿ ಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ,
ಫಿರ್ಯಾದಿಯ ತಮ್ಮನಾದ ಸುಲ್ತಾನ ತಂದೆ ಅಹ್ಮದ ಮೊಜನ್ ವಯ: 35 ವರ್ಷ, ಸಾ: ಕೊಸಮ ಇತನು
ಹುಚ್ಚತನದಿಂದ
ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು
ಆತನ
ಮರಣದ ಬಗ್ಗೆ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ
ಫಿರ್ಯಾದಿಯವರ ಅರ್ಜಿಯ ಸಾರಾಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 108/2019, ಕಲಂ. 279,
338, ಐ.ಪಿ.ಸಿ ಜೊತೆ
187 ಐಎಂವಿ ಕಾಯ್ದೆ
:-
ದಿನಾಂಕ 03-10-2019 ರಂದು ಫಿರ್ಯಾದಿ ನವಾಜ ತಂದೆ ನಬೀಸಾಬ್ ಶೇಖ್,
ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಯಾಖಬಪೂರಾ ಬಸವಕಲ್ಯಾಣ ರವರ ಅಣ್ಣನಾದ ಹಾಜಿ ತಂದೆ ನಬೀಸಾಬ್ ಶೇಖ್,
ವಯ: 28 ವರ್ಷ
ರವರ ಇತನು ಮೋಟಾರ ಸೈಕಲ ನಂ. ಕೆಎ-39/ಜೆ-2311 ನೇದನ್ನು ಚಲಾಯಿಸಿಕೊಂಡು ಗದಗಿ ಮಠ ಕಡೆಯಿಂದ ಗಾಂಧಿ ಚೌಕ ಕಡೆಗೆ ಹೋಗುತ್ತಿರುವಾಗ ಸ್ಮಶಾನ್ ಭೂಮಿ ಹತ್ತಿರ ಯಾವುದೋ ಒಂದು ವಾಹನ ನೇದ್ದರ ಚಾಲಕನು ತನ್ನ ವಾಹನನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಾಜಿ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಅದರ ನಂಬರ ಮತ್ತು ಚಾಲಕನ ಬಗ್ಗೆ
ಗೊತ್ತಾಗಿರುವದಿಲ್ಲ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಅಣ್ಣನ ಎಡಗಣ್ಣಿಗೆ, ಎಡಹಣೆಗೆ ಭಾರಿ ರಕ್ತಗಾಯ ಹಾಗೂ ತಲೆಗೆ ಗುಪ್ತಗಾಯ ಮತ್ತು ಮೂಗಿಗೆ,
ತುಟಿಗೆ ಗಟಾಯಿಗೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ನಂತರ ಅವರಿಗೆ ಆಟೋರಿಕ್ಷಾದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.