Police Bhavan Kalaburagi

Police Bhavan Kalaburagi

Friday, January 8, 2021

BIDAR DISTRICT DAILY CRIME UPDATE 08-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-01-2021

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 07-01-2021 ರಂದು ಫಿರ್ಯಾದಿ ಬಸಮ್ಮಾ ಗಂಡ ಶಾಂತಯ್ಯಾ ವಯ: 60 ವರ್ಷ, ಜಾತಿ: ಜಂಗಮ, ಸಾ: ಬರದಾಪುರ, ಸದ್ಯ: ತರನಳ್ಳಿ ರವರ ಗಂಡನಾದ ಶಾಂತಯ್ಯ ತಂದೆ ಚನ್ನಬಸಯ್ಯ ವಯ: 65 ವರ್ಷ ಇವರುಮ್ಮ ಮಕ್ಕಳ ಮದುವೆಗೆ ಮತ್ತು ವಿದ್ಯಾಭ್ಯಾಸಕ್ಕೆಂದು ಮಾಸಿದ ಸಾಲದಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ಮೃತ ಮಹಾದೇವ ತಂದೆ ಅರ್ಜುನ ಮಾನೆ ಸಾ: ಬಾರ್ಸಿ ಮಹಾರಾಷ್ಟ್ರ ಇತನು ಔರಾದ [ಬಿ] ಪಟ್ಟಣದ ವಸಂತ ವೈನ ಶ್ಯಾಪ ಎದುರಿಗೆ ರೇಹಮಾನ ಮನಿಯಾರ ಮತ್ತು ಶ್ರೀ ಜೇವಿಲಿಯರ್ಸ ಅಂಗಡಿಯ ಎದುರಿಗೆ ರಸ್ತೆಯ ಪಕ್ಕದಲ್ಲಿ ಸುಮಾರು 2 ದಿವಸಗಳ ವರೆಗೆ ಸರಾಯಿ ಕುಡಿದು ನಶೆಯಲ್ಲಿ ಮಲಗಿ ಬಿ.ಪಿ. ಶುಗರ ಹೆಚ್ಚಾಗಿ ಔರಾದ[ಬಿ] ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲು ಮಾಡಿದಾಗ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06-01-2021 ರಂದು ಬೆಳ್ಳಿಗ್ಗೆ 1030 ಗಂಟೆಗೆ ಮೃತಪಟ್ಟ ಬಗ್ಗೆ ಫಿರ್ಯಾದಿ ತಿಪ್ಪಣಾ್ಣ ತಂದೆ ಯಲ್ಲಪ್ಪಾ ವಡಿಯರ ಸಾ: ಔರಾದ(ಬಿ) ರವರಿಗೆ ಗೋತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 06-01-2021 ರಂದು ಫಿರ್ಯಾದಿ ಬಾಲರಾಜ ತಂದೆ ಗಣಪತರಾವ ಶೆಟಕಾರ ವಯ: 38 ವರ್ಷ, ಸಾ: ಶೆಟಕಾರ ಗಲ್ಲಿ ಔರಾದ (ಬಿ) ರವರ ಅಣ್ಣನಾದ ಧನರಾಜ ಇವರು ಮಾನಸಿಕ ರೋಗಿಯಾಗಿದ್ದು, ಅವರು 2 ಗುಳಿಗೆಗಳು ನುಂಗುವ ಬದಲು ಪುರ್ತಿ 10-12 ಗುಳಿಗೆಗಳು ನುಂಗಿ ಮಲಗಿದ್ದು ನಂತರ ದಿನಾಂಕ 07-01-2021 ರಂದು ಬೆಳಿಗ್ಗೆಯಾದರು ಅಣ್ಣ ಎಳಲಿಲ್ಲ ಅಂತಾ ಎಬ್ಬಿಸಲು ಹೋದಾಗ ಮಾತನಾಡದೆ ಕಣ್ಣುಗಳು ತೆರೆಯದೆ ಹಾಗೆ ಮಲಗಿದ್ದರಿಂದ ಗಾಬರಿಗೊಂಡು ಖಾಸಗಿ ವಾಹನದಲ್ಲಿ  ಆಸ್ಪತ್ರೆಗೆ ತಂದು ವೈದ್ಯಾಧಿಕರಿಯವರಿಗೆ  ತೋರಿಸಿದಾಗ ಅವರು ಗುಳಿಗೆಗಳು ನುಂಗಿರುತ್ತಾರೆ ಅಂತಾ ತಿಳಿಸಿದ್ದು, ಆಸ್ಪತ್ರೆಯಲ್ಲಿ ಗುಣಮುಖವಾಗದೆ ಮೃತಪಟ್ಟಿದ್ದು ಇರುತ್ತದೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯವಿರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 323, 498(), ,506, 504 ಜೊತೆ 34 ಐಪಿಸಿ :-

ದಿನಾಂಕ 07-01-2021 ರಂದು ಫಿರ್ಯಾದಿ ಶಿಲ್ಪಾ  ಗಂಡ ದೇವಿದಾಸ ಬಾವುಗೆ ಸಾ: ಸಿಕಿಂದ್ರಬಾದ ವಾಡಿ ರವರಿಗೆ ತಂದೆಯವರಾದ ನಾಗನಾಥ ಬನವಾ ಇವರು ಸುಮಾರು 13-14 ವರ್ಷಗಳ ಹಿಂದೆ ಸಿಕಿಂದ್ರಬಾದ ವಾಡಿ ಗ್ರಾಮದ ಬಾಬುರಾವ ಬಾವುಗೆ ರವರ ಮಗನಾದ ದೇವಿದಾಸ ಇವರಿಗೆ ಬೆಡಕುಂದಾ ಗ್ರಾಮದಲ್ಲಿ ತಮ್ಮ ಜಾತಿ ಪದ್ದತಿಯಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಸುಮಾರು 7-8 ವರ್ಷಗಳವರೆಗೆ ಗಂಡ ದೇವಿದಾಸ, ಅತ್ತೆ ನಾಗಮ್ಮಾ, ಮಾವ ಬಾಬುರಾವ, ನಾದಣಿ ಗುಂಡಮ್ಮಾ ಇವರೆಲ್ಲರು ಒಟ್ಟಿಗೆ ಅನ್ಯೋನ್ಯವಾಗಿದ್ದು, ನಂತರ ಇಗ 4-5 ವರ್ಷಗಳಿಂದ ಆರೋಪಿತರಾದ ಗಂಡ, ಅತ್ತೆ, ಮಾವ ಹಾಗೂ ನಾದಣಿ ಇವರೆಲ್ಲರೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ನೀನು ಅರೆ ಹುಚ್ಚಿ ಇದ್ದು ನಿನಗೆ ಮನೆಕೆಲಸ ಮಾಡಲು ಬರುವುದಿಲ್ಲ ಅಂತ ಆಪಾದಿಸಿ, ಕಿರುಕುಳ ನೀಡಿ, ಹೊಡೆ-ಬಡೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 02-01-2021 ರಂದು ಅತ್ತೆ ನಾಗಮ್ಮಾ ಇಕೆಯು ಫಿರ್ಯಾದಿಯ ಕುದಲು ಹಿಡಿದು ಎಳದಾಡಿ ಬೆನ್ನಲ್ಲಿ ಹಾಗೂ ಹೊಟ್ಟೆಯಲ್ಲಿ ಹೊಡೆದಿರುತ್ತಾಳೆ, ನಾದಣಿ ಇವಳಿಗೆ ಸೋಕ ಜಾಸ್ತಿಯಾಗಿದೆ ಅಂತ ಅವಾಚ್ಯವಾಗಿ ಬೈದಿರುತ್ತಾಳೆ, ಮಾವ ಇತನು ಫಿರ್ಯಾದಿಗೆ ಗಂಡನಿಗೆ ನೀನು ಇಕೆಗೆ ಖತಂ ಮಾಡು ಅಂತ ಜೀವ ಬೇದರಿಕೆ ಹಾಕಿದ್ದು, ಗಂಡ ಎರಡು ಕಪಾಳದಲ್ಲಿ ಹೊಡೆದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.