Police Bhavan Kalaburagi

Police Bhavan Kalaburagi

Thursday, May 2, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸಿದ್ದಾರಾಮ ತಂದೆ ಜೀವಪ್ಪ ಚಿಂಚೋಳಿ ಸಾಃ ನಿಂಬರ್ಗಾ ಗ್ರಾಮ, ತಾಃ ಆಳಂದ ರವರದು ನಿಂಬರ್ಗಾ ಗ್ರಾಮ ಸೀಮಾಂತರದಲ್ಲಿ ನನ್ನ ಹೆಸರಿಗೆ ಹೊಲ ಸರ್ವೆ ನಂ. 365 ರಲ್ಲಿ 3 ಎಕರೆ, 35 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನು ಪಟ್ಟಣ ಕ್ರಾಸದಿಂದ  ಸ್ಟೇಶನ ಗಾಣಗಾಪೂರಕ್ಕೆ ಹೋಗುವ ಮುಖ್ಯ ಡಾಂಬರ ರಸ್ತೆಗೆ ಹೊಂದಿಕೊಂಡಿರುತ್ತದೆ. ನಾನು ದಿನಾಂಕ 30/04/2019 ರಂದು ಸಾಯಂಕಾಲ 04.00 ಪಿ.ಎಮ ಸುಮಾರಿಗೆ ಹೊಲ ನೊಡಿಕೊಂಡು ಬರಲು ಅಂತ ನಮ್ಮೂರಿನಿಂದ ಹೊಲಕ್ಕೆ ಹೋಗಿ ತಿರುಗಾಡಿ ಹೊಲ ನೋಡಿಕೊಂಡು ಸಾಯಂಕಾಲ 05.45 ಪಿ.ಎಮ ಸುಮಾರಿಗೆ ನಮ್ಮ ಹೊಲದಿಂದ ಉತ್ತರ ದಿಕ್ಕಿನ ಬಂದಾರಿ ಏರಿ ರೊಡಿನ ಕಡೆ ಬರುವಾಗ ರೊಡಿನ ಪಕ್ಕದಲ್ಲಿ ಅರಣ್ಯ ಇಲಾಖೆಯವರು ಹೊಂಗೆ ಗಿಡದ ಸಸಿ ನೆಟ್ಟ ಗುಂಡದಲ್ಲಿ ಒಂದು ಗೊಣಿ ಚೀಲದಿಂದ ಒಬ್ಬ ಮಹಿಳೆಯ ಶವವು ತಲೆಯಿಂದ ಹೊಟ್ಟೆಯವರೆಗೆ  ಹೊರ ಚಾಚಿದ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡು ನಾನು ನೋಡಲಾಗಿ ಶವದ ತಲೆಯಿಂದ ಕುತ್ತಿಗೆಯವರೆಗೆ ಅಸ್ತಿ ಪಂಜರದ ಸ್ಥಿತಿಯಲ್ಲಿದ್ದು ಚರ್ಮ, ಮಾಂಸ ಖಂಡ, ತಲೆಯ ಮೇಲಿನ ಕೂದಲು ಇರುವದಿಲ್ಲ, ಬಲ ಭುಜದಿಂದ ಮುಂಗೈವರೆಗೆ ಎಲುಬು ಮಾತ್ರ ಇದ್ದು ಚರ್ಮ ಮಾಂಸ ಖಂಡ ಇರುವದಿಲ್ಲ, ಎರಡು ಕೈಗಳ ಮಣಿ ಕಟ್ಟುಗಳನ್ನು ಒಂದು ನೀಲಿ ಬಣ್ಣದ ಬಟ್ಟೆಯಿಂದ ಬಿಗಿದಿದ್ದು, ಎರಡು ಕೈಗಳು ತಲೆಯ ಹಿಂಭಾಗಕ್ಕೆ ಚಾಚಿರುತ್ತವೆ. ತಲೆಯಿಂದ ಕುತ್ತಿಗೆಯವರೆಗೆ ಸುಟ್ಟಂತೆ ಕಂಡು ಬಂದಿರುತ್ತದೆ. ಮಹಿಳೆಯ ಮೈ ಮೇಲೆ ಯಾವುದೆ ಬಟ್ಟೆ ಇರುವದಿಲ್ಲ ಹೀಗಾಗಿ ಮೃತ ದೇಹದ ಎದೆಯ ಭಾಗದಿಂದ ಸದರಿ ಶವವು ಮಹಿಳೆಯದ್ದೆ ಅಂತ ಗೊತ್ತಾಗುತ್ತದೆ. ಶರೀರವು ಸ್ವಲ್ಪ ಕೊಳೆತಂತಹ ಸ್ಥಿತಿಯಲ್ಲಿದ್ದು ದುರ್ವಾಸನೆ ಬರುತ್ತಿದೆ. ಹೊಟ್ಟೆಯಿಂದ ಕಾಲಿನವರೆಗೆ ಮೃತ ದೇಹದ ಭಾಗ ಗೊಣಿ ಚೀಲದಲ್ಲಿ ಇದ್ದು, ಗೊಣಿ ಚೀಲದ ಬಾಯಿಯನ್ನು ಕೆಂಪು ಬಣ್ಣದ ಟಾವೆಲದಿಂದ ಬಿಗಿಯಲಾಗಿದೆ. ಸದರಿ ಮೃತ ಮಹಿಳೆಯ ಅಂದಾಜ ವಯಸ್ಸು 20 ರಿಂದ 25 ವರ್ಷ ಇರಬಹುದು. ಸದರಿಯವಳನ್ನು ಯಾರೊ, ಎಲ್ಲೊ, ಯಾವುದೋ ದುರುದ್ದೇಶದಿಂದ ಅಂದಾಜು 2-3 ದಿವಸಗಳ ಹಿಂದೆ ಕೊಲೆ ಮಾಡಿ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮಹಿಳೆಯ ಮುಖವನ್ನು ತಲೆಯಿಂದ ಕುತ್ತಿಗೆವರೆಗೆ ಗುರುತು ಸಿಗದಂತೆ ಮಾಡಿ ಸದರಿ ಶವವನ್ನು ಒಂದು ಗೊಣಿ ಚೀಲದಲ್ಲಿ ಹಾಕಿ ಗೊಣಿ ಚೀಲದ ಬಾಯಿಯನ್ನು ಟಾವೆಲದಿಂದ ಬಿಗಿದು ರೊಡಿನ ಪಕ್ಕದಲ್ಲಿ ಎಸೆದು ಹೊದಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿರ್ಮಲಾ ಗಂಡ ಕೃಷ್ಣ ಕಡಕೋಳ ಸಾ: ಸುಂಬಡ ಗ್ರಾಮ ರವರು ಮಗಳು ಮನೆಗೆ ಅಳುತ್ತಾ ಬಂದಳು ಆಗ ನಾನು ಯಾಕೆ ಅಳುತ್ತಿದ್ದಿ ಏನಾಯಿತು ಅಂತ ಕೇಳಿದಕ್ಕೆ ಅವಳು ಹೇಳಿದೆನೆಂದರೆ, ನಾನು ಮರಗಮ್ಮ ದೇವಿಗೆ ನೈವಿದ್ಯ ಕೊಟ್ಟು ಮರಳಿ ಮನೆಗೆ ಬರುತ್ತಿದ್ದಾಗ ನಮ್ಮೂರಿನ ತೋಶಿಫ್ ತಂದೆ ಮಹಿಬೂಬಅಲಿ ಕುಕನೂರ ಇವನು ನನ್ನನ್ನು ಹಿಂಬಾಲಿಸುತ್ತಾ ಏ ನಿಲ್ಲು ಅಂತಾ ಅನ್ನುತ್ತಾ ಸೈಕಲ್ ಮೇಲೆ ಬರುತ್ತಿದ್ದನು, ನಂತರ 11;20 .ಎಂ ಸುಮಾರಿಗೆ ದುಂಡಪ್ಪಗೌಡ ಮಲಘಾಣ ರವರ ಹೊಲದ ಹತ್ತಿರ ತೋಶಿಫ್ ಇವನು ನನ್ನನ್ನು ಹಿಂಬಾಲಿಸುತ್ತಾ ಬಂದು ಸೈಕಲ್ ನಿಂದ ಇಳಿದು ಬಂದು ನನಗೆ ತಡೆದು ನಿಲ್ಲಿಸಿ ಏ ನಾನು ನಿನಗೆ ಇಷ್ಟ ಪಡುತ್ತೇನೆ, ನಿನಗೆ ಎಷ್ಟೂ ಬೇಕಾದರು ಹಣ ಕೊಡುತ್ತೆನೆ’’ ಅಂತ ಅಂದು ನನ್ನ ಎದೆ ಭಾಗವನ್ನು ಒತ್ತಿ ಹಿಡಿದು ಗಲ್ಲಕ್ಕೆ ಮುತ್ತು ಕೊಟ್ಟು ಗಟ್ಟಿಯಾಗಿ ತಬ್ಬಿಕೊಂಡನು, ಆಗ ನಾನು ಏ ಬೀಡು ಓ ತೋಶಿಫ್ ಅಂತ ಚಿರಾಡುತ್ತಿದ್ದಾಗ ಅವನು ಸೈಕಲ್ ತಗೆದುಕೊಂಡು ಓಡಿ ಹೋದನು ಅಂತ ಹೇಳಿದಳು, ನಂತರ ನಾನು ಮತ್ತು ನಮ್ಮ ಸಂಬಂಧಿಕರಾದ ಹೊನ್ನಮ್ಮ ಗಂಡ ಬಸವರಾಜ ದೋರಿ, ಶೇಖರ ತಂದೆ ಬಸವರಾಜ ದೋರಿ, ಕೃಷ್ಣಪ್ಪ ತಂದೆ ಯಂಕಪ್ಪ ದಳವಾಯಿ ಎಲ್ಲರೂ ಕೂಡಿಕೊಂಡು ತೋಶಿಫ್ನ ಮನೆಗೆ ಹೋಗಿ ತೋಶಿಫ್ ಇತನಿಗೆ ನನ್ನ ಮಗಳು ಪೂಜಾಗೆ ಹೀಗೇಕೆ ಮಾಡಿದಿ ಅಂತ ಕೇಳಿದಾಗ ಅವನುಏ ಬೇಡರ ಸೂಳೇ ಮಕ್ಕಳ್ಯಾ ನಮ್ಮ ಮನಿತನ ಕೇಳಲು ಬಂದಿರಿ ಅಂತ ಅಂದು ಕೈಯಿಂದ ನನ್ನ ಎಡ ಕಪಾಳ ಮೇಲೆ ಹೊಡೆದನು, ಆಗ ನನ್ನೊಂದಿಗೆ ಇದ್ದವರು ಬಿಡಿಸಿಕೊಂಡಿರುತ್ತಾರೆ. ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಇವಳಿಗೆ ತೋಶಿಫ್ ಇವನು ಲೈಂಗಿಕ ಉದ್ದೇಶದಿಂದ ಹಿಂಬಾಲಿಸುತ್ತಾ ತಡೆದು ನಿಲ್ಲಿಸಿ ಹಣದ ಆಮೀಷ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ನನಗೆ ಕೈಯಿಂದ ಕಪಾಳ ಮೇಲೆ ಹೊಡೆದು ಜಾತಿ ನಿಂದನೆ ಮಾಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 27.04.2019 ರಂದು ಬೆಳಿಗ್ಗೆ ಮೃತ ನೀಲಮ್ಮಾ ಮತ್ತು ಅವರ ಮಗ ಶಿವರುದ್ರ ಹಾಗೂ ಸೊಸೆ ಮಂಗಲಾ ಮೂರು ಜನರು ಕಲಬುರಗಿ ಸಂಗಮೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾದ ಅವರ ಸಂದಿಕರನ್ನು ಮಾತನಾಡಿಸುವ ಸಲುವಾಗಿ ಸಂಗೋಳಗಿ (ಜಿ) ಗ್ರಾಮದಿಂದ ಬಸ್ಸ ಮೂಲಕ ಕಲಬುರಗಿ ಕೇಂದ್ರ ಬಸ್ಸ ನಿಲ್ದಾಣಕ್ಕೆ ಬಂದು ಇಳಿದು ಬಸ್ಸ ನಿಲ್ದಾಣ ಸಮೀಪ ಬರುವ ಸಂಗಮೇಶ್ವರ ಆಸ್ಪತ್ರೆ ಕಡೆಗೆ ನಡೆದುಕೊಂಡು ಹೋಗುವಾಗ ಸಂಗಮೇಶ್ವರ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-39/ಕೆ-1133 ನೇದ್ದರ ಸವಾರನು ಆರ.ಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ತನ್ನ  ಮೋಟಾರ ಸೈಕಲನ್ನು ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನೀಲಮ್ಮಾ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಂದೆ ನೀಲಮ್ಮಾ ಇವರು ಉಪಚಾರ ಕುರಿತು ಖಾಸಗಿ ಕುರಾಳ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಾ ರಸ್ತೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ದಿನಾಂಕ 01-05-2019 ರಂದು ಮದ್ಯಾಹ್ನ 01-00 ಗಂಟೆ ಸುಮಾರಿಗೆ ಕುರಾಳ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01  : ಶ್ರೀ ಆನಂದರಾಯ ತಂದೆ ಅಣ್ಣಪ್ಪ ಮಾಲಿಪಾಟೀಲ ರವರು ದಿನಾಂಕ 27-04-2019 ರಂದು ನನ್ನ ಮಗನಾದ ಶ್ರೀಶೈಲ ಇತನು ನಮ್ಮ ಲಾರಿ ನಂಬರ ಕೆಎ-52/9837 ನೇದ್ದರಲ್ಲಿ ಕಲಬುರಗಿ ಕಪನೂರ ಇಂಡಸ್ಟ್ರಿಯಲ್ ಏರಿಯಾದಿಂದ ಬೆಂಗಳೂರಿಗೆ ತೊಗರಿ ಬೆಳೆಗಳನ್ನು ತಗೆದುಕೊಂಡು ಹೋಗುವ ಕುರಿತು ಆತನು ಚಲಾಯಿಸುತ್ತೀರುವ ಲಾರಿಯಲ್ಲಿ ನನಗೆ ಮತ್ತು ಲಾರಿ ಡ್ರೈವರ ಬಸವರಾಜ ಹಾಗೂ ಲಾರಿ ಕ್ಲಿನರ ಮಹೇಶ ಮೂರು ಜನರನ್ನು ಕೂಡಿಸಿಕೊಂಡು  ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೋಗುವಾಗ ನನ್ನ ಮಗ ಶ್ರೀಶೈಲ ಇತನು ಫರಹತಾಬಾದ ದಾಟಿದ ನಂತರ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ನಾನು ಮತ್ತು ವಿಶ್ರಾಂತಿಯಲ್ಲಿರುವ ಡ್ರೈವರ ಬಸವರಾಜ ಹಾಗೂ ಕ್ಲಿನರ ಮಹೇಶ ಮೂರು ಜನರು ಶ್ರೀಶೈಲ ಇತನಿಗೆ ಲಾರಿಯನ್ನು ನಿಧಾನವಾಗಿ ಚಲಾಯಿಸುವಂತೆ ತಿಳಿಸಿದರೂ ಕೂಡಾ ಶ್ರೀಶೈಲ ಇತನು ನಮ್ಮ ಮಾತು ಕೇಳದೆ ಅದೇ ವೇಗದಲ್ಲಿ ಮತ್ತು ಅಲಕ್ಷತನದಿಂದ ಲಾರಿ ಚಲಾಯಿಸಿ ಕಟ್ಟಿ ಸಂಗಾವಿ ಬ್ರಿಡ್ಜ್ ಸಮೀಪ ಬರುವ ತಿರುವಿನಲ್ಲಿ ರಾತ್ರಿ 11-45 ಗಂಟೆ ಸುಮಾರಿಗೆ ಒಮ್ಮಲೆ ಬ್ರೇಕ ಹಾಕಿ ತಿರುಗಿಸಿ ಲಾರಿ ಪಲ್ಟಿ ಮಾಡಿ ಅಪಘಾತ ಮಾಡಿ  ಲಾರಿಯಲ್ಲಿರುವ ತೋಗರಿ ಬೆಳೆಯ ಚೀಲಗಳು ಹರಿದು ಬೆಳೆಗಳು ಚಲ್ಲಾಪಿಲ್ಲಿಯಾಗಿ ಬಿಳಿಸಿ ಲಾರಿ ಡ್ಯಾಮೇಜ್ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.