ಅಪಘಾತ ಪ್ರಕರಣ :
ಸಂಚಾರಿ
ಠಾಣೆ 1 : ದಿನಾಂಕ 15.04.2019 ರಂದು ಸಾಯಂಕಾಲ 7-45 ಗಂಟೆ
ಸುಮಾರಿಗೆ ಮೃತ ಮಲ್ಲಣ್ಣಾ ಇತನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಆಸ್ಪತ್ರೆ ಎದುರುಗಡೆ ಬರುವ ಚಹಾ ಬಂಡಿ
ಹೊಟೇಲನಲ್ಲಿ ಚಹಾ ಕುಡಿಯವ ಸಂಬಂದ ನಡೆದುಕೊಂಡು ಬಂದು ಚಹಾ ನೀರು ಕೂಡಿದು ನಡೆದುಕೊಂಡು ವಾಪಸ್ಸ
ಜಿಲ್ಲಾ ಸಕರ್ಾರಿ ಆಸ್ಪತ್ರೆ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಕಾರ ನಂಬರ ಕೆಎ-32/ಎನ್-3994 ನೇದ್ದರ
ಸವಾರಳು ಜಿ.ಜಿ.ಹೆಚ್. ಸರ್ಕಲ ಕ್ರಾಸ ಕಡೆಯಿಂದ
ಆರ.ಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಮಲ್ಲಣ್ಣಾ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ
ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಮಲ್ಲಣ್ಣಾ ಇವರಿಗೆ ಉಪಚಾರ ಕುರಿತು ಒಂದು
ಅಂಬುಲೇನ್ಸ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ 8-30 ಗಂಟೆಗೆ
ವೈದ್ಯರಿಗೆ ತೊರಿಸಲು ವೈದ್ಯರು ಆಸ್ಪತ್ರೆಗೆ ಬರುವದಕ್ಕಿಂತ ಮುಂಚಿತವಾಗಿ ಮೃತಪಟ್ಟಿದ್ದು
ಇರುತ್ತದೆ ಅಂತಾ ತಿಳಿಸಿದ್ದು ರಸ್ತೆ ಅಪಘಾತದಲ್ಲಿ ಭಾರಿಗಾಯ ಹೊಂದಿದ್ದ ಮಲ್ಲಣ್ಣಾ ಇವರು
ಸಾಯಂಕಾಲ 7-45 ಗಂಟೆಯಿಂದ ರಾತ್ರಿ 8-30 ಗಂಟೆಯ
ಮದ್ಯದ ಅವಧಿಯಲ್ಲಿ ಅಪಘಾತ ಸ್ಥಳದಿಂದ ಬಸವೇಶ್ವರ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಅಂಬುಲೇನ್ಸ
ವಾಹನದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀ
ಬಾಬುರಾವ ತಂದೆ ಸಿದ್ದಣ್ಣ ಪೂಜಾರಿ ಸಾ: ಮಂದರವಾಡ
ತಾ: ಜೇವರಗಿ ಹಾ.ವ. ಗುಮ್ಮಜ ಹತ್ತೀರ ಬಸವೇಶ್ವರ ಕಾಲನಿ
ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಚೌಕ ಠಾಣೆ
: ಶ್ರೀ ಮಹ್ಮದ ಆವೇಜ ತಂದೆ
ಮಹ್ಮದ ಮಗದುಮ್ ಜುನೈದಿ ಸಾ: ಶೇಖರೋಜಾ ಕಲಬುರಗಿ ರವರು ದಿನಾಂಕ 14-04-2019 ರಂದು ರಾತ್ರಿ
ನಮ್ಮ ಓಣಿಯ ಶಹಾದಾಬ ತಂದೆ ಸೈಯ್ಯದ ಜಾಫರ ಈತನಿಗೆ ಸಮಾಜದಲ್ಲಿ ಸರಿಯಾಗಿ ಇರಬೇಕು ಕೆಟ್ಟವರ ಸಂಗಡ ರಾತ್ರಿ
ವೇಳೆಯಲ್ಲಿ ತಿರುಗಾಡ ಬಾರದು ಎಂದು ಬುದ್ದಿ ವಾದ ಹೇಳಿದ್ದು ಆಗ ಅವನು ಎಲ್ಲಿಯೂ ತಿರುಗಾಡುವುದಿಲ್ಲ
ಮತ್ತು ಕೆಟ್ಟವರ ಸಂಗಡ ಮಾತಾಡುವುದಿಲ್ಲ ಅಂತಾ ಹೇಳಿದ್ದು ಆಗ ನಾನು ಅವನಲ್ಲಿದ್ದ ಚಿಕ್ಕದಾದ ಮೊಬೈಲ
ಫೋನ ತೆಗೆದುಕೊಂಡು ಪರಿಶೀಲಿಸಿ ನೋಡಕಲಾಗಿ ಅದರಲ್ಲಿ ಕೆಲವು ದುಶ್ಚಟ ಉಳ್ಳ ಹುಡುಗನೊಂದಿಗೆ ಮಾತಾಡಿದ್ದು
ಕಂಡು ಬಂದಿರುವುದರಿಂದ ನನಗೆ ಸುಳ್ಳು ಹೇಳುತ್ತಿಯಾ ಅಂತಾ ಸಿಟ್ಟು ಬಂದಿರುವುದರಿಂದ ಅವನ ಮೊಬೈಲ ಫೋನನ್ನು
ಗೋಡೆಗೆ ಹೊಡೆದಿರುತ್ತೇನೆ ನಂತರ ಅವನಿಗೆ ಹೊಸ ಮೊಬೈಲ ಕೊಡಿಸುತ್ತೇನೆ ಅಂತಾ ಹೇಳಿರುತ್ತೇನೆ ಅವನು
ನನ್ನ ಮೇಲೆ ಸಿಟ್ಟಿಗೆ ಬಂದು ಮಗನೇ ನಿನಗೆ ಒಂದು ದಿವಸ ನೋಡಿಯೇ ಬಿಡುತ್ತೇನೆ ಅಂತಾ ಹೇಳಿ ಸಿಟ್ಟಿನಿಂದ
ಅವನ ತನ್ನ ಮನೆಗೆ ಹೋಗಿದ್ದು ನಾನು ಸಹ ನಮ್ಮ ಮನೆಗೆ ಹೋಗಿರುತ್ತೇನೆ. ದಿನಾಂಕ
15.04.2019 ರಂದು ಸಾಯಂಕಾಲ ನಾನು ಖಾದ್ರಿ ಚೌಕ ಹತ್ತಿರದಲ್ಲಿರುವ ಬಾಬಾ ಪಾನಶಾಪ ಹತ್ತಿರ ಇದ್ದಾಗ 1) ಶಹಾದಾಬ ತಂದೆ
ಸೈಯ್ಯದ ಜಾಫರ 2) ಶಾರೂಖ ತಂದೆ ಸೈಯ್ಯದ ಜಾಫರ 3) ಸೋಹೇಲ ತಂದೆ
ಸೈಯ್ಯದ ಜಾಫರ 4) ಸೈಯ್ಯದ ಜಾಫರ ತಂದೆ ಹಮ್ಮೀದ 5) ಹಮ್ಮೀದ ಸಾ: ಎಲ್ಲರೂ ಶೇಖ
ರೋಜಾ ಕಲಬುರಗಿ ಇವರೆಲ್ಲರೂ ಕೈಯಲ್ಲಿ ಚಾಕೂಗಳನ್ನು ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ
ನನ್ನ ಹತ್ತಿರದಲ್ಲಿ ಬಂದವರೆ ನನಗೆ ಏ ಬೋಸಡಿ ಮಗನೆ ಈ ಬೋಸಡಿ ಮಗನಿಗೆ ಬಹಳ ಸೊಕ್ಕು ಬಂದಿದೆ ಇವನು
ವಿನಾಃ ಕಾರಣವಾಗಿ ನಮ್ಮ ಫೋನ ಒಡೆದಿರುತ್ತಾನೆ ಇವತ್ತು ಇವನಿಗೆ ಮುಗಿಸಿಯೇ ಬಿಡೋಣಾ ಅಂತಾ ಅವರಲ್ಲಿ
ಶಾರೂಖ ಮತ್ತು ಸೊಹೇಲ ಇವರು ನನಗೆ ಒತ್ತಿ ಹಿಡಿದುಕೊಂಡರು ಶಹಾದಾಬ ತಂದೆ ಸೈಯ್ಯದ ಜಾಫರ ಈತನು ತನ್ನ
ಕೈಯಲ್ಲಿ ಇದ್ದ ಚಾಕುವಿನಿಂದ ಒಮ್ಮೇಲೆ ನನ್ನ ಬಲ ಎದೆಗೆ ಜೋರಾಗಿ ತಿವಿದು ಭಾರಿ ರಕ್ತಗಾಯ ಪಡಿಸಿದನು
ಆಗನಾನು ಸತ್ತೆನೆಪ್ಪ ಅಂತಾ ಕುಸಿದು ಕೆಳಗೆ ಬಿದ್ದಾಗ ಶಾರುಖ ಮತ್ತು ಸೋಹೆಲ ಇವರು ಕೈಯಿಂದ ಮತ್ತು
ಕಾಲಿನಿಂದ ಬೆನ್ನಿಗೆ ಮತ್ತು ಹೊಟ್ಟೆಗೆ ಹೋಡೆದು ಗುಪ್ತಗಾಯಗಳು ಮಾಡಿರುತ್ತಾರೆ ಇದೇ ಸಮಯದಲ್ಲಿ ಸೈಯ್ಯದ
ಜಾಫರ ಮತ್ತು ಹಮ್ಮೀದ ಇವರುಗಳು ಹೊಡೆಯಿರಿ ರಂಡಿ ಮಗನಿಗೆ ಖಲ್ಲಾಸ ಮಾಡಿರಿ ಅಂತಾ ಕುಮ್ಮಕ್ಕು ನೀಡುತ್ತಿದ್ದರು
ಆಗ ಅಲ್ಲಿಯೇ ಹಾಜರಿದ್ದ ಪರಿಚಯದ ಅರ್ಶದ ತಂದೆ ಮೈನುದ್ದೀನ ಮತ್ತು ಅಕಬರ ತಂದೆ ಮೋದಿನ ಮುಲ್ಲಾ ಇವರು
ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ ಇದೇ ಸಮಯದಲ್ಲಿ ನಜೀಬ ಬಾಬಾ ಅವರು ನನಗೆ ಅವರ ಮೋಟರ ಸೈಕಲ
ಮೇಲೆ ಡೆಕ್ಕನ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಸಧ್ಯ ನಾನು ಉಪಚಾರ ಪಡೆಯುತ್ತಿದ್ದೆನೆ .ಕಾರಣ ನನಗೆ
ಶಹಾದಾಬ ತಂದೆ ಸೈಯ್ಯದ ಜಾಪರ ಹಾಗೂ ಇತರರು ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಚಾಕುಗಳನ್ನು ಹಿಡಿದುಕೊಂಡು
ಬಂದು ನನಗೆ ಚಾಕುವಿನಿಂದ ತಿವಿದು ಕೊಲೆಮಾಡಲು ಪ್ರಯತ್ನ ಮಾಡಿದವರ ವಿರುಧ್ಧ ಸೂಕ್ತ ಕಾನೂನು ಕ್ರಮ
ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಮಾನಮ್ಮ ಗಂಡ ಸದಾಶಿವ ಚಿಗರಾಳ ಸಾ|| ಹಂಗರಗಾ(ಕೆ) ತಾ|| ಜೇವರ್ಗಿ ರವರು
ರವರ ಮಗ ಭೀಮರಾಯನಿಗೆ ನಮ್ಮೂರ ಬಸವಂತ್ರಾಯ ನಡುವಿನಮನಿ ರವರ ಮಗಳಾದ ಪಾರ್ವತಿ ಇವಳೊಂದಿಗೆ ಮದುವೆಮಾಡಿರುತ್ತೇವೆ, ಸದ್ಯ ನನ್ನ
ಮಗನಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ, ನಮ್ಮೂರ ಸಿಮಾಂತರದಲ್ಲಿ
ನಮ್ಮ ಹಿರಿಯರ 11 ಎಕರೆ ಜಮೀನು ಇರುತ್ತದೆ, ನನ್ನ ಮಗ ಸದ್ಯ
ನಮ್ಮೊಂದಿಗೆ ಬೇರೆಯಾಗಿ ನಮ್ಮೂರಲ್ಲೇ ಮನೆ ಕಟ್ಟಿಕೊಂಡು ಸಂಸಾರ ಮಾಡುತ್ತಿರುತ್ತಾನೆ, ಅವನ ಉಪಜೀವನ
ಸಲುವಾಗಿ 3 ಎಕರೆ ಜಮೀನು ಕೊಟ್ಟಿರುತ್ತೇನೆ, ನನ್ನ ಸೊಸೆ ಪಾರ್ವತಿ ಇವಳು ಸುಮಾರು ಸಲ ನಮಗೆ ಇನ್ನು 3 ಎಕರೆ ಜಮೀನು
ಬರುತ್ತದೆ ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾಳೆ, ಅದರಂತೆ ನನ್ನ
ಮಗ ಭೀಮರಾಯನಿಗು ಸಹ ಆಸ್ತಿ ಸಲುವಾಗಿ ದಿನಾಲು ಕಿರುಕುಳ ಕೊಡುತ್ತಾ ಬಂದಿರುತ್ತಾಳೆ, ಈ ಬಗ್ಗೆ ನನ್ನ
ಮಗ ಆಗಾಗಾ ನನ್ನ ಮುಂದೆ ಹೇಳುತ್ತಿದ್ದನು, ದಿನಾಂಕ; 12-04-2019 ರಂದು ಬೆಳಿಗ್ಗೆ 09;00 ಗಂಟೆಗೆ ನನ್ನ ಸೊಸೆ ಪಾರ್ವತಿ ಇವಳು ಮನೆಗೆ ಬಂದು ನನ್ನ ಗಂಡನಿಗೆ ಬರಬೇಕಾದ ಇನ್ನು 3 ಎಕರೆ ಜಮೀನು
ನನಗೆ ಬಿಟ್ಟುಕೊಡು ಇಲ್ಲಾ ಅಂದರೆ ನಿನಗೆ ಮತ್ತು ನನ್ನ ಗಂಡನಿಗೆ ಖಲಾಸ ಮಾಡಿ ಆಸ್ತಿ ತೆಗೆದುಕೊಳ್ಳುತ್ತೇನೆ
ಅಂತಾ ಹೇಳಿ ಹೋದಳು, ನಂತರ ರಾತ್ರಿ ನನ್ನ ಮಗ ಭೀಮರಾಯನಿಗೆ ಅವಳ ಹೆಂಡತಿ ಮತ್ತು
ಅವರ ಮನೆಯವರು ಹೊಡೆಯುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ನಾನು ನಮ್ಮ ಮಗನ ಮನೆಗೆ ಹೋಗಿ ನೋಡಿದಾಗ
ಮನೆಯ ಮುಂದೆ ನನ್ನ ಸೊಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ ಗಂಡ ಬಸವಂತ್ರಾಯ ಹಾಗು ಅವರ ಅಣ್ಣ
ಸುಬ್ಬಣ್ಣ ತಂದೆ ಬಸವಂತ್ರಾಯ ಹಿಗೆಲ್ಲರೂ ಕೂಡಿ ನನ್ನ ಮಗನಿಗೆ ಸುತ್ತುಗಟ್ಟಿ ತಡೆದು ಏ ರಂಡಿ ಮಗನೆ
ನಿಮ್ಮ ತಾಯಿ ಕಡೆಯಿಂದ ಇನ್ನು 3 ಎಕರೆ ಆಸ್ತಿ ತೆಗೆದುಕೊಂಡು ಬಾ ಅಂತಾ ಅಂದು ಸುಬ್ಬಣ್ಣ ಇವನು
ಬಡಿಗೆಯಿಂದ ನನ್ನ ಮಗನ ಬಲಗಾಲಿನ ಮೇಲೆ ಹೊಡೆದನು, ಆಗ ನನ್ನ ಮಗ
ಕೆಳಗೆ ಬಿದ್ದಾಗ ಮತ್ತೆ ಅದೇ ಬಡಿಗೆಯಿಂದ ಎರಡು ಮೊಳಕೈಗಳಿಗೆ ಹೊಡೆದನು, ನಂತರ ಪಾರ್ವತಿ ಇವಳು ಇವತ್ತ ನನ್ನ ಹಾಟ್ಯಾನ ಮಗನಿಗಿ ಹೊಡೆದು ಖಲಾಸೆ
ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಿಲ್ಲಿದ್ದ ಕಬ್ಬಿಣದ ಊದಗೊಳದಿಂದ ನನ್ನ
ಮಗನ ಎಡ ಮೆಲಕಿನ ಹತ್ತಿರ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದಳು, ಮಹಾದೇವಿ ಇವಳು
ಇವನಿಗೆ ಹೊಡೆದು ಖಲಾಸ ಮಾಡಿದರೆ ಎಲ್ಲಾ ಆಸ್ತಿ ನಮಗೆ ಬರುತ್ತದೆ ಅಂತಾ ಅನ್ನುತ್ತಿದ್ದಾಗ ನಾನು ಮತ್ತು
ನಮ್ಮೂರ ರೆಹಮಾನ ತಂದೆ ಮಾಬುಸಾಬ ಚೌದರಿ, ರಾಜಶೇಖರ ತಂದೆ
ಹಣಮಂತ್ರಾಯ ಪೂಜಾರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡು ನನ್ನ ಮಗನಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇವೆ, ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ 27/03/2019 ರಿಂದ 04/04/2019 ರ ಮದ್ಯದ ಅವಧಿಯಲ್ಲಿ
ಸೈಯದ್ ಚಿಂಚೋಳ್ಳಿ ಗ್ರಾಮ ಸರ್ವೇ ನಂ 50/02 ರಲ್ಲಿ ಹಾಕಿರುವ 11 ಲೈಟಿನ
ಕಂಬಗಳ ಕರೆಂಟ್ ವಾಯರ್ ಅ.ಕಿ.1,25,000/-ರೂ ನೆದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಶ್ರೀ ರಾಹುಲದೇವ ಭಗವಾಲೆ ಜೂನಿಯರ ಇಂಜನೀಯರ
ಜಸ್ಕಾಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ ಶರಣಬಸವಾ ಕಾಂಟೆಪ್ಪಾಪೂಜಾರಿ ಸಾ :
ಬೀಮಳ್ಳಿ ತಾ : ಕಲಬುರಗಿ ರವರ ತಂದೆಯಾದ
ಕಂಟೆಪ್ಪಾ ವಯಾ : 45 ವರ್ಷ ರವರು ದಿನಾಂಕ ಮೇ 2015 ರಂದು ನಮ್ಮ ಮನೆಯಿಂದ ಹೋದವನು
ಮರಳಿ ಮನೆಗೆ ಬಂದಿರುವುದಿಲ್ಲ ಇಷ್ಟು ದಿನ ಎಲ್ಲಾ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.