ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
26-12-2020
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
108/2020 ಕಲಂ ಮನುಷ್ಯ ಕಾಣೆ :-
ದಿನಾಂಕ 25/12/2020
ರಂದು 1830 ಗಂಟೆಗೆ ಶ್ರೀಮತಿ ಮಲ್ಲಮ್ಮಾ ಗಂಡ ಸಂಜುಕುಮಾರ ಹಲ್ಮಡಗೆ ವಯ 35 ವರ್ಷ ಜ್ಯಾತಿ
ಲಿಂಗಾಯತ ಉ// ಮನೆಕೆಲಸ ಸಾ// ಮುರ್ಕಿರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಸಾರಾಂಶವೆಎನಂದರೆ
ಫಿರ್ಯದಿಗೆ 16 ವರ್ಷಗಳ ಹಿಂದೆ ಸಂಜುಕುಮಾರ ತಂದೆ ನಾಗನಾಥ ಹಲ್ಮಡಗೆ ವಯ 45 ವರ್ಷ ಜ್ಯಾತಿ
ಲಿಂಗಾಯತ ಉ// ಟೇಲರ ಕೆಲಸ ಸಾ// ಮುರ್ಕಿ ಇವರ ಜೊತೆ ಮದುವೆ ಯಾಗಿದ್ದು ಇವರಿಗೆ ಎರಡು ಹೆಣ್ಣು
ಮಕ್ಕಳಿರುತ್ತಾರೆ. 1) ಲಾವಣ್ಯ 15 ವರ್ಷ 2) ಅಕ್ಷತಾ 12 ವರ್ಷ ಅಂತಾ ಇರುತ್ತಾರೆ.
ಹಿಗೀರುವಲ್ಲಿ ದಿನಾಂಕ 23/12/2020 ರಂದು 07-00 ಗಂಟೆಗೆ ಮನೆಯಿಂದ ಟೇಲರ ಕೆಲಸಕ್ಕೆ ಅಂತಾ
ಹೊಗಿದ್ದು ರೂಪಾ ಚಾಂಡೇಶ್ವರೆ ಇವಳು ಮನೆಗೆ ಬಂದು ನಿನ್ನ ಗಂಡ ಕುಡಿದು ಮುಸ್ಲಿಂ ಹೆಣ್ಣು
ಮಗಳಿಗೆ ಬೈದಿರುತ್ತಾರೆ, ಅವರಿಗೆ ಸಂಬಾಳಿಸಿ ಇರಲು ಹೇಳು ಅಂತಾ ಅಂದು ಹೊಗಿದ್ದು
ನಂತರ ಮುಸ್ಲಿಂ ಹೆಣ್ಣು ಮಗಳು ಮನೆಗೆ ದಿನಾಂಕ 23/12/2020 ರಂದು 08-30 ಗಂಟೆಯ
ಸುಮಾರಿಗೆ ಬಂದು ಮುಸ್ಲಿಂ ಹೆಣ್ಣು ಮಗಳ ಜೊತೆ ಅಂದರೆ ಮುಸ್ಲಿಂ ಹೆಣ್ಣು ಮಗಳ ಮಗಳ
ಜೊತೆ ಜಗಳವಾಡಿರುತ್ತಾರೆ ಅವರಿಗೆ ಸರಿಯಾಗಿ ಇರಲು ಹೇಳಿರಿ ಅಂತಾ ಅಂದಾಗ ಫಿರ್ಯಾದಿಯು ಗಂಡನಾದ
ಸಂಜುಕುಮಾರ ಹಲ್ಮಡಗೆ ಇವರಿಗೆ ಫೋನ ನಂ 8050201323 ಗೆ ಕಾಲ ಮಾಡಿದ್ದಾಗ ಫೋನ ಸ್ವಿಚ್
ಆಫ್ ಅಂತಾ ಬಂದಿದ್ದು ಇರುತ್ತದೆ. ಆಗಿನಿಂದ ಇಲ್ಲಿಯವರೆಗೆ ಗಂಡನ ಫೋನ ಸ್ವಿಚ ಆಫ್ ಆಗಿರುತ್ತದೆ. ಅಲ್ಲದೆ ದಿನಾಂಕ
20/12/2020 ರಂದು ಮಾವ ನಾಗನಾಥ ಇವರು ಗಂಡನ ಜೊತೆ ನೀನು ಕುಡಿದು ಅಲ್ಲಿ ಇಲ್ಲಿ ಮಾತನಾಡಬೇಡ
ನಮ್ಮ ಓಟುಗಳು ಕೆಡುತ್ತವೆ ಅಂತಾ ಹೇಳಿದ್ದು ಇರುತ್ತದೆ. ಕಾರಣ
ಫಿರ್ಯಾದಿ ಗಂಡ ಸಂಜುಕುಮಾರ ತಂದೆ ನಾಗನಾಥ ಹಲ್ಮಡಗೆ ಇವರು ಕಾಣೆಯಾಗಿರುತ್ತಾರೆ. ಅವರ ವಯಸ್ಸು 45
ವರ್ಷ ಇರುತ್ತದೆ. ಅವರು ಹೊಗಿದ್ದಾಗ ನೀಲಿ ಬಣ್ಣದ ಜೀನ್ಸ ಪ್ಯಾಂಟ, ಫಿಕಾ
ನೀಲಿ ಬಣ್ಣದ ಫುಲ್ ಶೆರ್ಟ, ಬಿಳಿ ಬಣ್ಣದ ಹಾಫ್ಬನಿಯಾನ, ಮಾಚೋ
ಕಂಪನಿಯ ಅಂಡರವಿಯರ್ ಹಾಕಿದ್ದು ಇರುತ್ತದೆ. 6 ಫಿಟ್ ಎತ್ತರ, ಸಾಧಾರಣ
ಮೈಕಟ್ಟು ಗೋದಿ ಬಣ್ಣ ಉಳ್ಳವರಾಗಿರುತ್ತಾರೆ. ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ
ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್.ಸಂಖ್ಯೆ
31/2020 ಕಲಂ 174 ಸಿಆರ್.ಪಿ.ಸಿ
:-
ದಿನಾಂಕ: 25/12/2020 ರಂದು 1800 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಖಧಿರೊದ್ದಿನ ಎ.ಎಸ್.ಐ ಧನ್ನೂರ ಪೊಲೀಸ ಠಾಣೆ ರವರಿಗೆ ಫಿರ್ಯಾದಿ ಶ್ರೀಮತಿ ಕವಿತಾ ಗಂಡ ಶ್ರೀಪತಿ ಸಂತಪೂರ ವಯ: 40 ವರ್ಷ ಜಾತಿ: ಎಸ್.ಸಿ ಉ: ಕೂಲಿ ಕೆಲಸ ಸಾ: ಅಮದಾಬಾದ ಇವರು ನೀಡಿದ ದೂರು ಅರ್ಜಿ ಹಾಜರ ಪಡಿಸಿದ್ದು ಅದರ
ಸಾರಾಂಶವೇನೆಂದರೆ ಫಿರ್ಯಾದಿಗೆ 1] ಸುನಿಲ್, 2] ಅನಿಲ್, 3] ಸೋನಿ ಅಂತ ಮೂರು ಜನ ಮಕ್ಕಳಿದ್ದು ಇವರ ಗಂಡ ಶ್ರೀಪತಿಯವರು ಅಂದಾಜು 7 ವರ್ಷಗಳ ಹಿಂದೆ ಮೃತ ಪಟ್ಟಿದ್ದು ಫಿರ್ಯಾದಿಯು ಕೂಲಿ ಕೆಲಸ ಮಾಡಿಕೊಂಡಿದ್ದು ಇವರ ಮಗ ಸುನಿಲ್ ಇವನು ಒಂಬತ್ತನೇ ತರಗತಿಯವರೆಗೆ
ವಿದ್ಯಾಭ್ಯಾಸ ಮಾಡಿ ನಂತರ ಕೂಲಿ ಕೆಲಸ ಮಾಡಿಕೊಂಡು, ಇರುತ್ತಾನೆ. ನನ್ನ ಮಗ ಸುನಿಲ್ ಈತನಿಗೆ ಅಂದಾಜು 5-6 ತಿಂಗಳಿಂದ ಅತಿಯಾಗಿ ಹೊಟ್ಟೆಬೇನೆ
ಪ್ರಾರಂಭವಾಗಿದ್ದು ಆತನಿಗೆ ಖಾಸಗಿ ಇಲಾಜು ಮಾಡಿಸಿದರು ಸಹ ಕಡಿಮೆಯಾಗಲಿಲ್ಲ. ಹಾಗಾಗಿ ಅವನಿಗೆ ತಾಳಲಾರದಷ್ಟು
ಬೇನೆ ಆಗುತ್ತಾ ಇರುತ್ತಿತ್ತು. ಹೀಗಿರುವಲ್ಲಿ ದಿನಾಂಕ: 25/12/2020 ರಂದು ಮುಂಜಾನೆ ಸುನೀಲ್ ಇವನು ಕೂಲಿ ಕೆಲಸಕ್ಕೆ ಹೋಗಿದ್ದು
ಆತನು ಅಂದಾಜು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮನೆಗೆ ಬಂದು ನನಗೆ ತಿಳಿಸಿದ್ದೇನೆಂದರೆ ನನಗೆ ಹೊಟ್ಟೆಬೇನೆ ತಾಳಲಾರದೆ
ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ವಿಷಕಾರಿ
ಕೀಟನಾಶಕ ಔಷಧಿವನ್ನು ಅರ್ಧಗಂಟೆಯ ಹಿಂದೆ ಸೇರವಿಸಿದ್ದೇನೆ ಎಂದು ತಿಳಿಸಿದ ಕೂಡಲೇ ಈತನಿಗೆ
ಚಿಕಿತ್ಸೆ ಕುರಿತು ಅಂಬುಲೆನ್ಸನಲ್ಲಿ ಬೀದರ್ ಸರ್ಕಾರಿ ಆಸ್ಪತ್ರೆಗೆ 3 ಗಂಟೆಗೆ ತಂದು ಸೇರಿಕೆ ಮಾಡಿದ್ದು
ಆತನಿಗೆ ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ 3:15 ಗಂಟೆಗೆ ಚಿಕಿತ್ಸೆಯಲ್ಲಿ
ಮೃತಪಟ್ಟಿರುತ್ತಾನೆ ಮಗ ಸುನಿಲ್ ವಯ 19 ವರ್ಷ ಈತನು ಹೊಟ್ಟೆಬೇನೆ ತಾಳಲಾರದೆ ವಿಷ
ಸೇವಿಸಿದ್ದು ಚಿಕಿತ್ಸೆಯಲ್ಲಿ ಮೃತಪಟ್ಟಿದ್ದು ಆತನು ಹೊಟ್ಟೆಬೇನೆ ತಾಳಲಾರದೆ ವಿಷ ಸೇವಿಸಿ
ಆತ್ಮಹತ್ಯೆ ಮಾಡಿಕೊಂಡಿದ್ದು ಆತನು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ
ಸಂಶಯ ಇರುವುದಿಲ್ಲ. ಅಂತಾ
ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.