Police Bhavan Kalaburagi

Police Bhavan Kalaburagi

Sunday, December 9, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 07-12-2018 ರಂದು ಘತ್ತರಗಾ ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾರೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೇ ಹಣ ಕೊಡದೇ ಮೋಸ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.  ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಘತ್ತರಗಾ ಗ್ರಾಮಕ್ಕೆ ಹೋಗಿ ಅಂಬೇಡ್ಕರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿಯವರಿಗೆ ಹಣ ಕೇಳುತ್ತಿದ್ದರು, ಆಗ ಸದರಿಯವರು ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದರು. ಆಗ ದಾಳಿ ಮಾಡಲು ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡ ತೊಡಗಿದರು. ಆಗ ನಾವು ಬೆನ್ನಟ್ಟಿ ಒಬ್ಬನನ್ನು ಹಿಡಿದಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮೈಹಿಬೂಬ ತಂದೆ ಸಾಬುದ್ದಿನ ಶೇಖ್ ಸಾ|| ವಿಭೂತಿಹಳ್ಳಿ ತಾ|| ಇಂಡಿ ಹಾ|| || ಘತ್ತರಗಾ ಅಂತಾ ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು 1) ಅರ್ಜುನ ಕಂಬಾರ ಸಾ|| ಘತ್ತರಗಾ 2) ಪರಶುರಾಮ ಭಜಂತ್ರಿ ಸಾ|| ಘತ್ತರಗಾ  ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 450/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನ  ದೊರೆತವು  ಸದರಿಯವುಗಳನ್ನು  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಾಜು ತಂದೆ ಶಿವಪ್ಪ ಹೋನ್ನಕೇರಿ ಸಾ: ಜಂಬಗಿ ತಾ:ಜಿ: ವಿಜಯಪೂರ  ರವರು ಶ್ರೀ ಶಿವಶರಣಪ್ಪ ತಂದೆ ಗುರಪ್ಪ ಬಿರಾದಾರ ಸಾ|| ಹಿಟ್ನಳ್ಳಿ ತಾ|| ಸಿಂದಗಿ ಇವರು ಅಫಜಲಪೂರ ತಾಲೂಕಿನ ಗುಡ್ಡೆವಾಡಿ ಗ್ರಾಮದಲ್ಲಿ ಒಂದು ಹೊಲ ಪಾಲಿಗೆ ಮಾಡಿದ್ದು, ಸದರಿ ಹೊಲದಲ್ಲಿ ನಾನು ಕೂಲಿ ಕೆಲಸ ಮಾಡಲು ದಿನಗೂಲಿ ಆದಾರದ ಮೇಲೆ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತೇನೆ. ಶಿವಶರಣಪ್ಪ ರವರು ಪಾಲಿಗೆ ಮಾಡಿದ ಹೊಲದ ಮಾಲಿಕ ಭೀಮಣ್ಣಗೌಡ ತಂದೆ ಸಾತಲಿಂಗಪ್ಪ ನಾರಸೇರ ಹಾಗೂ ಶಾಂತಾಬಾಯಿ ಗಂಡ ಸಾತಲಿಂಗಪ್ಪ ನಾರಸೇರ ಮತ್ತು ರೂಪಾ ಗಂಡ ಭೀಮನಗೌಡ ನಾರಸೇರ ಸಾ|| ಗುಡ್ಡೆವಾಡಿ ಇವರುಗಳೂ ನನಗೆ ಪರಿಚಯವಾಗಿದ್ದರೂ ಮತ್ತು ನನ್ನ ಬಗ್ಗೆ ಹಾಗೂ ನನ್ನ ಜಾತಿಯ ಬಗ್ಗೆಯೂ ಸದರಿಯವರಿಗೆ ಗೊತ್ತಿದ್ದು  ದಿನಾಂಕ 05-12-2018 ರ ಬುದುವಾರದಂದು ಕೂಲಿ ಕೆಲಸಕ್ಕಾಗಿ ಶಿವಶರಣಪ್ಪ ರವರು ಪಾಲಿಗೆ ಮಾಡಿದ ಭೀಮಣ್ಣಗೌಡ ನಾರಸೇರ ರವರ ಗುಡ್ಡೆವಾಡಿಯ ಹೊಲಕ್ಕೆ ಬಂದು ಕೆಲಸ ಮಾಡುತ್ತಿದ್ದೆನು. ಮದ್ಯಾಹ್ನ ಸುಮಾರು 1:00 ಗಂಟೆಗೆ ಶಿವಶರಣಪ್ಪ ತಂದೆ ಗುರಪ್ಪ ಬಿರಾದಾರ ಇವರಿಗೆ 1) ಭೀಮಣ್ಣಗೌಡ ತಂದೆ ಸಾತಲಿಂಗಪ್ಪ ನಾರಸೇರ ಸಾ|| ಗುಡ್ಡೆವಾಡಿ 2) ಶಾಂತಾಬಾಯಿ ಗಂಡ ಸಾತಲಿಂಗಪ್ಪ ನಾರಸೇರ ಸಾ|| ಗುಡ್ಡೆವಾಡಿ 3) ರೂಪಾ ಗಂಡ ಭೀಮನಗೌಡ ನಾರಸೇರ ಸಾ|| ಗುಡ್ಡೆವಾಡಿ 4) ಬಸವರಾಜ ತಂದೆ ಸಾತಲಿಂಗಪ್ಪ ನಾರಸೇರ ಸಾ|| ಗುಡ್ಡೆವಾಡಿ ಹಾಗೂ ಇತರ ಸುಮಾರು 8 ರಿಂದ 10 ಜನರುಗಳು ಕೂಡಿ ಕೊಡಲಿ ಮತ್ತು ಚಾಕು ಹಿಡಿದುಕೊಂಡು ಶಿವಶರಣಪ್ಪ ಬಿರಾದಾರ ರವರೊಂದಿಗೆ ಜಗಳ ಮಾಡುತ್ತಿದ್ದಾಗ ನಾನು ಬಿಡಿಸಲು ಹೋದಾಗ ನನಗೆ ಸಮಗಾರ ಸೂಳೆ ಮಗನೆ ನೀ ಬಿಡಿಸಲಿಕ್ಕೆ ಬಂದಿ ಅಂದರೆ ನಿನ್ನನ್ನು ಇದೆ ಕೊಡಲಿಯಿಂದ ಕಡಿದು ಒಗೆಯುತ್ತೇವೆ ಎಂದು ಬೆದರಿಕೆ ಹಾಕಿದರು. ಅಷ್ಟಾದರೂ ನಾನು ಬಿಡಿಸಲು ಹೋದಾಗ ನನಗೆ ಭೀಮನಗೌಡ ನಾರಸೇರ, ಶಾಂತಾಬಾಯಿ ನಾರಸೇರ, ರೂಪಾ ನಾರಸೇರ, ಬವರಾಜ ನಾರಸೇರ ಇವರುಗಳು ನನಗೆ ನೆಲಕ್ಕೆ ಹಾಕಿ ಮನಬಂದಂತೆ ಹೊಡೆದಿರುತ್ತಾರೆ ಮತ್ತು ನನಗೆ ಜೀವ ಬೆದರಿಕೆಯೂ ಹಾಕಿರುತ್ತಾರೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ದಾರಿಯಲ್ಲಿ ಹೋಗುತ್ತಿದ್ದ ಗುಡ್ಡೆವಾಡಿ ಗ್ರಾಮದ ಮಚೇಂದ್ರನಾಥ ತಂದೆ ಮಹಾದೆವಪ್ಪ ಹೂಗಾರ, ಅಂಬೋಜಿ ತಂದೆ ಸಿದ್ದಪ್ಪ ತೇಲಿ, ಚನ್ನಪ್ಪ ತಂದೆ ಮಲ್ಲಪ್ಪ ಘತ್ತರಗಿ ಇವರು ಇನ್ನಿತರರೂ ಕೂಡಿ ಹೊಡೆಯುವುದನ್ನು ನೋಡಿ ಬಂದು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ದೇವಲಗಾಣಗಾಪೂರ ಠಾಣೆ : ದಿನಾಂಕ 07/12/2018 ರಂದು  ಶ್ರೀ ಅನಿಲಕುಮಾರ ತಂದೆ ಜೆಟ್ಟೆಪ್ಪ ಡಿಪ್ಪಿ ಸಾ|| ಹಿರಾಪೂರ ಕಲಬುರಗಿ, ಇವರಿಗೆ ಅನುಜ ಎಂಬ 14 ವರ್ಷದ ಮಗ ಇದ್ದು, ಹೆಂಡತಿ ಮೃತಪಟ್ಟಿರುವದರಿಂದ ಅವಳ ತವರು ಊರಾದ ಚೌಡಾಪೂರದಲ್ಲಿ  ಸುಮಾರು 14 ವರ್ಷದಿಂದ ಇರುತ್ತಾನೆ. ಹೀಗಿದ್ದು ದಿನಾಂಕ 07/12/2018 ರಂದು ಮದ್ಯಾಹ್ನ 01.30 ಕ್ಕೆ  ಚವಡಾಪೂರ ಗ್ರಾಮದ ರಾಜು ಮರೆಪ್ಪ ನವಲೇಕರ ಎಂಬುವವರು ನನ್ನ ಅಣ್ಣನಾದ ರಾಜೇಂದ್ರ ಡಿಪ್ಪಿ ಇವರಿಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ , ಮುಂಜಾನೆ ಸುಮಾರು 10.00 ಗಂಟೆಗೆ  ನಾನು ಮಹಾಂತಪ್ಪ ಕಾಡ ರವಿರ ಮನೆಗೆ ಹೋದಾಗ ನಮ್ಮೂರಿನ ಗುಲಾಬಿ ಗಂಡೋಳಿ ಎಂಬುವವರು  ನನಗೆ ಹೇಳಿದ್ದನೇಂದರೆ ನನ್ನ ಮೊಮ್ಮಗನಾದ ಅನುಜ ಎಂಬತನು ಮನೆಯ ಮುಂದೆ ಇರುವ ಸಂಡಾಸ ರೂಮಿಗೆ ಸಂಡಾಸ ಮಡಲು ಹೋದವನು ಎಷ್ಟು ಹೊತ್ತಾದರೂ  ಹೊರಗೆ ಬಂದಿರುವದಿಲ್ಲ ಅಂತ ಹೇಳಿದ್ದರಿಂದ ನಾನು ಸಂಡಾಸ ರೂಮಿಗೆ ಹೋಗಿ ನೋಡಲಾಗಿ ಅನುಜ ಈತನು ರೂಮಿನಲ್ಲಿ ಕುಸಿದು ಬಿದ್ದಿದ್ದನು.  ನಂತರ ಇಬ್ಬರೂ ಕೂಡಿಕೊಂಡು ಅಟೋದಲ್ಲಿ ಹಾಕಿಕೊಂಡು ಮುಂಜಾನೆ 10.30 ರ ಸುಮಾರಿಗೆ ಗೊಬ್ಬುರ ಬಿ ಸರ್ಕಾರಿ ದವಾಖಾನೆಗೆ ತಂದಾಗ  ವೈದ್ಯರು ಪರೀಕ್ಷಿಸಿ ನೋಡಿ ಅನುಜ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದರಿಂದ, ನಂತರ 108 ಅಂಬುಲೆನ್ಸ ನಲ್ಲಿ ಶವವನ್ನು  ಹಾಕಿಕೊಂಡು ಜಿಲ್ಲಾ ಸರ್ಕಾರಿ ದವಾಖಾನೆಯ ಶವಗಾರ ಕೋಣೆಯಲ್ಲಿ ಹಾಕಿರುತ್ತೇನೆ ಅಂತ ತಿಳಿಸಿದ್ದರಿಂದ, ನಾನು ಅನಿಲಕುಮಾರ , ನನ್ನ ಅಣ್ಣ ರಾಜೇಂದ್ರ, ನಮ್ಮ ಸಂಭಂದಿಕರಾದ ರಾಜಶೇಖರ ನಿಪ್ಪಾಣಿ, ಜೆಟ್ಟೆಪ್ಪ ನೂಲಾ, ಅಲ್ಲಮಪ್ರಭು ನಿಂಬರ್ಗಾ ಮತ್ತಿತರು ಕೂಡಿಕೊಂಡು ಮದ್ಯಾಹ್ನ 02.00 ಗಂಟೆಗೆ ಜಿಲ್ಲಾ ಆಸ್ಪತ್ರೆ ಕಲಬುರಗಿಯ ಶವಾಗಾರಕ್ಕೆ ಹೋಗಿ ಶವವನ್ನು ನೋಡಿರುತ್ತೇವೆ. ನನ್ನ ಮಗನು ಯಾವ ಕಾರಣಕ್ಕಾಗಿ  ಮೃತಪಟ್ಟಿರುತ್ತಾನೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಾಗಿರುವದಿಲ್ಲ. ಗಂಡೋಳಿಯ ಅತ್ತೆಯಾದ ಗುಲಾಬಿ ಗಂಡೋಳಿ  ನಮ್ಮ ಅಳಿಯನಾದ  ಶ್ರೀಧರ ಗಂಡೋಳಿ , ರಂಜಿತಾ ಗಂಡೋಳಿ, ಪೂಜಾ ಗಂಡೋಳಿ ಎಲ್ಲರೂ ಸಾ|| ಚವಡಾಪೂರ ಎಂಬುವವರ ಮೇಲೆ ನನಗೆ  ಸಂಶಯವಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು  :
ಯಡ್ರಾಮಿ ಠಾಣೆ : ಶ್ರೀ ಗೊಲ್ಲಾಳಪ್ಪ ತಂದೆ ನಿಂಗಪ್ಪ ನಾಟೀಕಾರ ಸಾ|| ಮಾಗಣಗೇರಾ ರವರು 5 ಜನ ಅಣ್ಣತಮ್ಮಂದಿರರಿದ್ದು, 1] ಸಿದ್ದಪ್ಪ, 2] ಮಲ್ಲಿನಾಥ, 3] ಮಹಾಂತೇಶ, 4] ನಾನುಗೊಲ್ಲಾಳಪ್ಪ, 5] ಕಲ್ಯಾಣಿ ಅಂತಾ ಇರುತ್ತೇವೆ, ನಾವೆಲ್ಲರು ಬೇರೆ ಬೇರೆ ಯಾಗಿ ಸಂಸಾರಮಾಡುತ್ತಿರುತ್ತೇವೆ, ನಮ್ಮೂರ ಸಿಮಾಂತರದಲ್ಲಿ ನಮ್ಮಪಿತ್ರಾರ್ಜಿತ ಆಸ್ತಿ ಇದ್ದು, ನಾವೆಲ್ಲರು ಸಮನಾಗಿ ಹಂಚಿಕೊಂಡಿರುತ್ತೇವೆ, ಅದರಂತೆ ನಾನು ನಮ್ಮ ಹೊಲದಲ್ಲೆ ಮನೆಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ಅಲ್ಲೆವಾಸವಾಗಿರುತ್ತೇನೆ, ನಮ್ಮಂತೆ ನಮ್ಮ ಅಣ್ಣ ಸಿದ್ದಪ್ಪ ರವರು ಸಹ ನಮ್ಮ ಹೊಲಕ್ಕೆ ಹತ್ತಿ ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ಅಲ್ಲೇವಾಸವಾಗಿರುತ್ತಾರೆ, ದಿನಾಂಕ 07-12-2018 ರಂದು ನಮ್ಮ ಅಣ್ಣ ಸಿದ್ದಪ್ಪ ರವರು ತಮ್ಮ ಕಬ್ಬಿನ ಹೊಲದಲ್ಲಿ ಬೆಂಕಿ ಹಚ್ಚಿದ್ದರು, ಅದನ್ನುನಮ್ಮಹೊಲದ ವಡ್ಡಿನ ಕಡೆಬರುತ್ತಿತ್ತು, ಆಗ ನಾನು ಅವರಿಗೆ ನಿಮ್ಮ ಹೊಲದಲ್ಲಿನ ಬೆಂಕಿ ನಮ್ಮ ಹೊಲದ ಒಡ್ಡಿಗೆ ಬರುತ್ತಿದ್ದೆ, ಅದನ್ನು ಸರಿಯಾಗಿ ಆರಿಸಿ, ಇಲ್ಲದಿದ್ದರೆ ನಮ್ಮ ಬೆಳೆ ಹಾಳಾಗುತ್ತವೆ ಅಂತಾ ಅಂದು ಅಲ್ಲಿಂದ ನಮ್ಮ ಮನೆಗೆ ಬಂದಿರುತ್ತೇನೆ, ನಂತರ 4;00 ಪಿ.ಎಂ ಸುಮಾರಿಗೆ ನಾನು ನನ್ನ ಹೆಂಡತಿ ಮಹಾದೇವಿ ಇಬ್ಬರು ಕೂಡಿ ನಮ್ಮ ಮನೆಯಮುಂದೆ ಮಾತಾಡುತ್ತಾ ಕುಳತಿದ್ದೇವು, ಆಗ ನಮ್ಮಅಣ್ಣ 1] ಸಿದ್ದಪ್ಪ ತಂದೆ ನಿಂಗಪ್ಪ ನಾಟೀಕಾರ, 2] ನಿಂಗಪ್ಪ ತಂದೆ ಸಿದ್ದಪ್ಪ ನಾಟೀಕಾರ, 3] ಮಲ್ಲಿನಾಥ ತಂದೆ ನಿಂಗಪ್ಪ ನಾಟೀಕಾರ, 4] ಮೌನೇಶ ತಂದೆ ಮಲ್ಲಿನಾಥ ನಾಟೀಕಾರ, 5] ನಿಂಗಪ್ಪ ತಂದೆ ಮಲ್ಲಿನಾಥ ನಾಟೀಕಾರ, 6] ಮಹಾಂತೇಶ ತಂದೆ ನಿಂಗಪ್ಪ ನಾಟೀಕಾರ ಹಿಗೆ ಎಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆಗಳು ಹಿಡಿದುಕೊಂಡು ನಮ್ಮ ಹತ್ತಿರ ಬಂದರು, ಅವರಲ್ಲಿ ಸಿದ್ದಪ್ಪ ಈತನು ಏಸೂಳಿ ಮಗನೆ ಗೊಲ್ಲಾಳ್ಯಾ ನಮ್ಮ ಹೊಲದಲ್ಲಿ ನಾವು ಬೆಂಕಿ ಹಚ್ಚಿದರೇ ನಿನಗೇನು ಆಗುತ್ತೇ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದನು, ನಿಂಗಪ್ಪ ತಂದೆ ಸಿದ್ದಪ್ಪ ಈತನು ತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಮೊಳಕಾಲ ಮೇಲೆ ಜೋರಾಗಿ ಹೊಡೆದು ಭಾರಿಒಳಪೆಟ್ಟು ಪಡಿಸಿರುತ್ತಾನೆ, ಮಲ್ಲಿನಾಥ ಈತನು ಕಲ್ಲಿನಿಂದ ನನ್ನ ಬಲಗಡೆ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ಆಗ ನನ್ನ ಹೆಂಡತಿ ಬಿಡಿಸಲು ಬಂದಾಗ ಅವಳಿಗೆ ಮೌನೇಶ ಮತ್ತು ನಿಂಗಪ್ಪ ತಂದೆ ಮಲ್ಲಿನಾಥರವರು ಕೂಡಿ ಕೈಹಿಡಿದು ಎಳೇದಾಡಿ ಕೈಯಿಂದ ಬೆನ್ನಿನ ಮೇಲೆ ಹೊಡೆದು ಬಲಗೈ ನಡುವಿನಬಟ್ಟು ತಿರುವಿ ಒಳಪೆಟ್ಟುಪಡಿಸಿರುತ್ತಾರೆ, ಮಹಾಂತೇಶ ಈತನು ಈಸೂಳಿಮಕ್ಕಳಗಿ ಇವತ್ತ ಬಿಡಬ್ಯಾಡರಿ ಹೊಡೆದು ಖಲಾಸ ಮಾಡೋಣಾ ಅಂತಾ ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತೊರಡಿನ ಹತ್ತಿರ ಒದ್ದನು ಆಗ ನಾನು ತಪ್ಪಿಸಿಕೊಂಡಿರುತ್ತೇನೆ, ನಂತರ ಅಲ್ಲೆ ಹೋಗುತ್ತಿದ್ದ ಸಿದ್ದಪ್ಪ ತಂದೆ ಯಮನಪ್ಪನಾಟೀಕಾರ ಈತನು ಬಂದುಬಿಡಿಸಿಕೊಂಡಿರುತ್ತಾನೆ, ಇಲ್ಲದಿದ್ದರೆ ನನಗೆ ಹೊಡೆದು ಖಲಾಸ ಮಾಡುತ್ತಿದ್ದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ದುಂಡಪ್ಪ ತಂದೆ  ಸಿದ್ದರಾಮ ಜಮಾದಾರ ಸಾ||ಬಜಾರ ರೋಡ ಅಫಜಲಪೂರ ರವರದು ಘತ್ತರಗಾ ರೋಡಿಗೆ ದಿಲ್ ಖುಷ್ ದಾಬಾ ಇರುತ್ತದೆ ನಾನು ನಮ್ಮ ದಾಬಾದ ಮಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ ನಮ್ಮ ಅಣ್ಣತಮ್ಮಕ್ಕಿಯ ಬಸವರಾಜ ತಂದೆ ಲಕ್ಷ್ಮಣ ಜಮಾದಾರ ಈತನು ಆಗಾಗ ನಮ್ಮ ದಾಬಾಕ್ಕೆ ಬಂದು ದಾಬಾದಲ್ಲಿ ಊಟ ಮಾಡಿ ಊಟದ ಹಣ ಕೊಡದೇ ನಮ್ಮ ಜೋತೆ ಜಗಳ ಮಾಡಿ ನನಗೆ ರಂಡಿ ಮಗನೆ ನೀನು ನನಗೆ ಹಣ ಕೇಳ್ತಿ ಮತ್ತ ನನ್ನ ಕರ್ಚಿಗೆ ನೀ ಆಗಾಗ ರೊಕ್ಕಾ ಕೊಡಲಿಲ್ಲ ಅಂದ್ರ ನಿನಗ ಖಲಾಸ ಮಾಡ್ತಿನಿ ಅಂತ ಅಂದು ಹೋಗುತಿದ್ದನ್ನು ಈ ವಿಷಯ ನಮ್ಮ ಮನೆಯಲ್ಲಿ ನಮ್ಮ ಅಣ್ಣನಾದ ಲಚ್ಚಪ್ಪ ರವರಿಗೆ ತಿಳಿಸಿರುತ್ತೇನೆ ನಮ್ಮ ಅಣ್ಣನು ಸಹ ನೀ ಸುಮ್ಮನಿರು ನಾನು ಬಸವರಾಜನಿಗೆ ಬುದ್ದಿ ಮಾತು ಹೇಳುತ್ತೇನೆ ಅಂತ ಹೇಳಿರುತ್ತಾರೆ.  ದಿನಾಂಕ 08/12/2018 ರಂದು ಸಾಯಂಕಾಲ ನಾನು ಹಾಗು ನನ್ನ ಸಂಗಡ ನನ್ನ ಗೆಳೆಯನಾದ ಸಂತೋಷ ಹಾದಿಮನಿ ಇತನಿಗೆ ನಮ್ಮ ಮೋಟಾರ್ ಸೈಕಲ ಮೇಲೆ ಕರೆದುಕೊಂಡು ನಮ್ಮ ದಾಬಾಕ್ಕೆ ಹೋಗುತಿದ್ದಾಗ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಬಸವರಾಜ ಇತನು ತನ್ನ ಕೈಯಲ್ಲಿ ಕಬ್ಬು ಕಟಾವು ಮಾಡುವ ಬತಾಯಿ ಹಿಡಿದುಕೊಂಡು ಬಂದು ನನ್ನ ಮೋಟಾರ್ ಸೈಕಲ್ ಮುಂದೆ ನಿಂತು ನಾನು ಹೋಗದಂತೆ ತಡೆದು ರಂಡಿಮಗನೆ ನಿಮಗೆ ಸೊಕ್ಕ ಬಾಳ ಬಂದಿದೆ ನಾನು ದಾಬಾದಲ್ಲಿ ಊಟ ಮಾಡಿದಕ್ಕೆ ಹಣ ಕೇಳ್ತಿ ಬೋಸಡಿ ಮಗನೆ ನೀನಗೆ ಇವತ್ತ ಬಿಡಲ್ಲಾ ಅಂತ ಬೈಯುತಿದ್ದಾಗ ನಾನು ಹಾಗು ಸಂತೋಷ ಇಬ್ಬರು ಮೋಟಾರ ಸೈಕಲ ಮೇಲಿಂದ ಇಳಿದು ಯಾಕೆ ಬೈತಿ ಅಂತ ಹೇಳುತಿದ್ದಾಗ ಅಲ್ಲೆ ಇದ್ದ ಸಂತೋಷ ಹಾದಿಮನಿ ಹಾಗು ಅಭಿಷೇಕ ಹೊನ್ನೂರ, ಸಿದ್ದಪ್ಪ ಸಿನ್ನೂರ ರವರು ಬಂದು ಬಸವರಾಜನಿಗೆ ಯಾಕೆ ಜಗಳ ಮಾಡುಕತ್ತಿದ್ದಿ ಅಂತ ಕೇಳುತಿದ್ದಾಗ ಬಸವರಾಜ ಈತನು ಈ ರಂಡಿ ಮಗನಿಗೆ ಇವತ್ತ ಇಲ್ಲೆ ಖಲಾಸ ಮಾಡುತ್ತೇನೆ ಅಂತ ಅಂದು ತನ್ನ ಕೈಯಲ್ಲಿನ ಬತಾಯಿಂದ ನನ್ನ ತಲೆಯ ಹಿಂದನ ಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಆಗ ಅಲ್ಲೆ ಇದ್ದ ಸಂತೋಷ, ಅಭಿಷೇಕ, ಸಿದ್ದಪ್ಪ ರವರು ಬಸವರಾಜನಿಗೆ ಹಿಡಿದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ನಂತರ ನನಗೆ ಸಂತೋಷ, ಅಭಿಷೇಕ ಹಾಗು ಸಿದ್ದಪ್ಪ ರವರು ಅಫಜಲಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಕೊಡಿಸಿರುತ್ತಾರೆ. ಬಸವರಾಜ ತಂದೆ ಲಕ್ಷ್ಮಣ ಜಮಾದಾರ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬು ಕಟಾವು ಮಾಡುವ ಬತಾಯಿಂದ ನನ್ನ ತಲೆಗೆ ಹಿಂದಿನ ಬಾಗಕ್ಕೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖ ಅಸಲಮ ತಂದೆ ಶೇಖ ಶಬ್ಬಿರ ಸಾ|| ಮದಿನಾ ಕಾಲೋನಿ ಕಲಬುರಗಿ ರವರು ಈಗ ಒಂದುವರೆ ತಿಂಗಳ ಹಿಂದೆ ಸದರಿ ಮಹ್ಮದ ಹುಸೇನಿ ಇತನು ನನ್ನ ಹತ್ತಿರ ಬಂದು ಬಾಂಬೆಗೆ ಹೋಗೊಣ ಅಂತ ಅಂದಿದ್ದು ನನ್ನ ಹತ್ತಿರ ಹಣ ಇಲ್ಲದಕ್ಕೆ ನಾನು ಬಾಂಬೆಗೆ ಹೋಗಲು ನಿರಾಕರಿಸಿದ್ದು ಆಗ ಮಹ್ಮದ ಹುಸೇನಿ ಇತನು ನನಗೆ 5 ಸಾವೀರ ರೂಪಾಯಿ ಕೊಟ್ಟಿದ್ದು ಅದರಂತೆ ನಾನು ಮಹ್ಮದ ಹುಸೇನಿ ಬಾಂಬೆಗೆ ಹೋಗಿ ಬಂದಿದ್ದು ಇರುತ್ತದೆ. ಬಾಂಬೆಗೆ ಹೊಗಿ ಬಂದ ನಂತರ ಮಹ್ಮದ ಹುಸೇನಿ ಇತನು ಹಣ ಮರಳಿ ಕೊಡು ಅಂತ ಕೇಳುತ್ತಾ ಬಂದಿದ್ದು ನನ್ನ ಹತ್ತಿರ ಹಣ ಇಲ್ಲದಕ್ಕೆ ನಾನು ಮಹ್ಮದ ಹುಸೇನಿ ಇತನಿಗೆ ಹಣ ಮರಳಿ ಕೊಟ್ಟಿರುದಿಲ್ಲ. ದಿನಾಂಕ 06.12.2018 ರಂದು ರಾತ್ರಿ 8:45 ಗಂಟೆಯ ಸುಮಾರಿಗೆ ಮಹ್ಮದ ಹುಸೇನಿ ಇತನು ನನ್ನ ಮನೆಯ ಮುಂದೆ ಬಂದು ನನಗೆ ಕರೆದಿದ್ದು ಆಗ ನಾನು ಹೊರಗೆ ಬಂದಾಗ ಸದರಿ ಮಹ್ಮದ ಹುಸೇನಿ ಇತನು ನನಗೆ ಈಗಲೆ ಹಣ ಬೇಕು ಅಂತ ಹೇಳಿದ್ದು ಆಗ ನಾನು ಸದರಿಯವನಿಗೆ ಸಧ್ಯ ನನ್ನ ಹತ್ತಿರ ಹಣ ಇಲ್ಲ ನಾಳೆ ಕೊಡುತ್ತೆನೆ ಅಂತ ಹೇಳಿದ್ದು ಅದಕ್ಕೆ ಅವನು ರಂಡಿ ಮಗನೆ ನಾನು ಕೊಟ್ಟ ಹಣ ನನಗೆ ಮರಳಿ ಕೊಡುವದಿಲ್ಲ ಸೂಳಿ ಮಗನೆ ಅಂತ ಬೈಯುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದುಕೊಂಡು ಅವನ ಕೈಯಲಿದ್ದ ಚಾಕು ದಿಂದ ನನ್ನ ಹೊಟ್ಟೆಗೆ ಚುಚ್ಚಲು ಬಂದಿದ್ದು ಆಗ ನಾನು ನನ್ನ ಎಡಗೈ ಅಡ್ಡ ತಂದಿದ್ದರಿಂದ ಚಾಕು ನನ್ನ ಎಡಗೈಗೆ ಚುಚ್ಚಿ ರಕ್ತಗಾಯ ಪಡಿಸಿದ್ದು ಮತ್ತೆ ಮಹ್ಮದ ಹುಸೇನಿ ಇತನು ಚಾಕು ದಿಂದ ನನ್ನ ಕುತ್ತಿಗೆಗೆ ಹೊಡೆದು ನನಗೆ ಕೊಲೆ ಮಾಡಲು ಪ್ರಯತ್ನಿಸಿದ್ದು ಆಗ ನಾನು ಸ್ವಲ್ಪ ಹಿಂದಕ್ಕೆ ಸರಿದಿದ್ದರಿಂದ ಚಾಕು ನನ್ನ ಕುತ್ತಿಗೆಯ ಬಲಭಾಗಕ್ಕೆ ಚುಚ್ಚಿ ರಕ್ತಗಾಯ ವಾಗಿದ್ದು ಇರುತ್ತದೆ. ಸದರಿಯವನು ನನಗೆ ಹೊಡೆಯುವುದನ್ನು ನೋಡಿ ಮತ್ತು ನಾನು ಚಿರಾಡುವುದನ್ನು ಕೇಳಿ ನಮ್ಮ ಮನೆಯ ಪಕ್ಕದಲ್ಲಿದ್ದ ಅಂಗಡಿಯವರು ಮತ್ತು ಮನೆಯಲಿದ್ದ ನಮ್ಮ ತಾಯಿ, ನಮ್ಮ ಅಕ್ಕ ಕೂಡಿಕೊಂಡು ಬಂದಿದ್ದು ಆಗ ಮಹ್ಮದ ಹುಸೇನಿ ಇತನು ನನಗೆ ಹೊಡೆಯುವದನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ನಂತರ ನಮ್ಮ ತಾಯಿ, ನಮ್ಮ ಅಕ್ಕ ನನಗೆ ವಿಚಾರಿಸಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ತೇಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ  ಭೀಮಣ್ಣಗೌಡ ತಂದೆ ಸಾತಲಿಂಗಪ್ಪ ನಾರಶೇರ ಸಾ: ಗುಡ್ಡೇವಾಡಿ ರವರು ಕಳೆದ 2015 ನೇ ಸಾಲಿನಲ್ಲಿ ಗುಡ್ಡೇವಾಡಿ ಗ್ರಾಮದಲ್ಲಿರುವ ನನ್ನ ಹೆಸರಿನ ಜಮೀನು ಸರ್ವೇ ನಂ 18 ಕ್ಷತ್ರ, 05 ಎಕರೆ 00 ಗುಂಟಾ ಹಾಗೂ ಧರ್ಮ ಪತ್ನಿ ರೂಪಾ ರವರ ಹೆಸರಿನಲ್ಲಿ  ಸರ್ವೇ ನಂ 38 ಕ್ಷತ್ರ 03 ಎಕರೆ, 00 ಗುಂಟಾ ಜಮೀನು ಅಫಜಲಪೂರ ಸರಕಾರಿ ಪಶು ಆಸ್ಪತ್ರೆಯಲ್ಲಿ ನೌಕರನಾದ ಶಿವಶರಣಪ್ಪ ತಂದೆ ಗುರಪ್ಪ ಬಿರೇದಾರ ಎನ್ನುವವರಿಗೆ ಅರ್ಧ ಪಾಲಿನಂತೆ ಜಮೀನು ಹಚ್ಚಿದ್ದು ಸದರಿ ಜಮೀನಿಗೆ ಆಗುವ ಲಾಗೋಡಿ ಖರ್ಚು ಸಂಪೂರ್ಣ ಶಿವಶರಣಪ್ಪ ಬಿರೇದಾರ ಹಾಕುವುದು ಹಾಗೂ ಜಮೀನಿನಲ್ಲಿ ಮಾಲಿಕನಾದ ನಾನು ಪಗಾರ ಇಲ್ಲದೇ ದುಡಿಯುವುದು ಮತ್ತು ಬೆಳೆದ ಬೆಳೆಯಲ್ಲಿ ಇಬ್ಬರು ಎರಡು ಪಾಲು (ಸಮಪಾಲು) ಮಾಡಿಕೊಳ್ಳುವ ಖರಾರು ಮಾಡಿಕೊಂಡಿದ್ದೇವೆ ಆದರೇ ಜಮೀನು ಅರ್ಧ ಪಾಲಿನಂತೆ ಮಾಡಿದ ಶಿವಶರಣಪ್ಪ ಬಿರೇದಾರ ಇಗಾಗಲೇ ಮೋದಲನೆಯ ಪೀಕಿನಲ್ಲಿ ಬೆಳೆಯಲ್ಲಿ 1600 ಚೀಲ ಉಳ್ಳಾಗಡ್ಡಿ ಇದಲ್ಲದೇ ಮೂರನೆ ಪೀಕ 250 ಚೀಲ ಮೇಕ್ಕೆ ಜೋಳ ತದನಂತರ ಒಮ್ಮೆ 1500 ಪಾಕೀಟ ಉಳ್ಳಾಗಡ್ಡಿ ಇದಲ್ಲದೇ  ಪೀಕ 1300 ಚೀಲ ಉಳ್ಳಾಗಡ್ಡಿ ಈ ರೀತಿಯಾಗಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ನನಗೆ ಅದರಲ್ಲಿ ಪಾಲು ಕೊಡದೇ 16,00,000/- (ಹದಿನಾರು ಲಕ್ಷ) ಲಾಭ ತೋರಿಸಿ ಈಗ 42,00,000/- ಲಾಗೋಡಿ ಮಾಡಿದ್ದೇನೆಂದು ಲೆಕ್ಕ ತೋರಿಸಿ ನನಗೆ ಹೇದರಿಸಿ ಹಾಗೂ ಜೀವ ಬೇದರಿಕೆ ಹಾಕಿ ನನ್ನಿಂದ ಗುಡ್ಡೇವಾಡಿ ಗ್ರಾಮದಲ್ಲಿರುವ ಮನೆಯನ್ನು ಮಾರಿಸಿ ಅದರಿಂದ ಬಂದ 4,00,000/- ಹಣವನ್ನು ಈಗಾಗಲೇ ತಗೆದುಕೊಂಡಿರುತ್ತಾರೆ, ಇನ್ನು 11,47,915/- ರೂಪಾಯಿ ಹಣವನ್ನು ಕೊಡಬೇಕೆಂದು  ಒಂದು ವೇಳೆ ಸದರಿ ಹಣ ಕೊಡದಿದ್ದಲ್ಲಿ 02 ವರ್ಷದವರೆಗೆ ಜಮೀನು ಸದರಿಯವರ ಸೋದರ ಮಾವನಾದ (ಅಕ್ಕನ ಗಂಡನಾದ) ಚನ್ನಬಸಪ್ಪ ತಂದೆ ಮಲ್ಲಪ್ಪ ಘತ್ತರಗಿ ಸಾ: ಬಗಲೂರ ಇವರಿಗೆ ಉಳುಮೆ ಮಾಡಲು ಬಿಡಬೇಕೆಂದು 07-06-2018 ರಂದು ಚನ್ನಬಸಪ್ಪ ತಂದೆ ಮಲ್ಲಪ್ಪ ಘತ್ತರಗಿ ಇವರಿಗೆ ಎರಡು ರೂಪಾಯಿ ಬಾಂಡ ಮೇಲೆ ಒತ್ತಾಯಪೂರ್ವಕವಾಗಿ ನನ್ನನ್ನು ಹೆದರಿಸಿ ಸಹಿ ಮಾಡಿಸಿಕೊಂಡಿದ್ದು ನಾನು ಬಡ ಹಾಗೂ ಮುಗ್ದ ಅನಕ್ಷರಸ್ತ ರೈತನಾದ ನಾನು ಪಗಾರ ಇಲ್ಲದೇ 03 ವರ್ಷ ಜಮೀನಿನಲ್ಲಿ ದುಡಿದಿದ್ದಲ್ಲದೇ ಬೆಳೆದ ಬೆಳೆಯಲ್ಲಿ ಪಾಲು ಸಹ ಇವರೆಗೂ ನನಗೆ ಕೊಟ್ಟಿರುವುದಿಲ್ಲಾ ಮುಗ್ದನಾದ ನನ್ನನ್ನು ಕಂಡು ಮೋಸ ಮಾಡಿದ್ದು ಈಗ ಈ ಬಗ್ಗೆ ಪ್ರಶ್ನಿಸಿದರೆ  ನನ್ನ ಜಮೀನು ಖಾಲಿ ಮಾಡುವಂತೆ ಹೇಳಿದರೆ ನನಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಬರುವುದು ಮಾಡುತ್ತಿದ್ದಾನೆ ಈ ವರ್ಷ ಜಮೀನಿನಲ್ಲಿ ಬೆಳೆದ ಉಳ್ಳಾಗಡ್ಡಿ ಪೀಕು ತಗೆದುಕೊಂಡು ಹೋಗುವುದನ್ನು ತಡೆದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಇದರಿಂದ ನಾನು, ನನ್ನ ಹೆಂಡತಿ ಮತ್ತು ತಾಯಿ ಮಕ್ಕಳು ಜೀವ ಭಯದಲ್ಲಿ ಇದ್ದೇವೆ ತದನಂತರ ಮತ್ತು ಶಿವಶರಣಪ್ಪ ಗುರಪ್ಪ ಬಿರೇದಾರ ದಿನಾಂಕ 05-12-2018 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನನ್ನ ತಾಯಿಯಾದ ಶಾಂತಾಬಾಯಿ ನಾರಸೇರ ರವರ ಹೆಸರಿನಲ್ಲಿರುವ ಹೊಲ ಸರ್ವೆ ನಂಬರ 36 ರಲ್ಲಿ ನಾನು ಮತ್ತು ನನ್ನ ತಾಯಿಯಾದ ಶಾಂತಾಬಾಯಿ ಹಾಗೂ ನನ್ನ ಹೆಂಡತಿಯಾದ ರೂಪಾ ಮೂರು ಜನರು ಹೊಲದಲ್ಲಿರುವ ಪತ್ರಾಸ ಶೇಡ್ಡಿನ ಮುಂದೆ ಇದ್ದಾಗ ನಮ್ಮ ಹೊಲ ಪಾಲಿಗೆ ಮಾಡಿದ ಶಿವಶರಣಪ್ಪ ತಂದೆ ಗುರಪ್ಪ ಬಿರಾದಾರ ಈತನು ತನ್ನ ಜೋತೆಗೆ ಇನ್ನು 40-50 ಜನರನ್ನು ಸಂಗಡ ಕರೆದುಕೊಂಡು ಬಂದು ನಾವು ರಾಶಿ ಮಾಡಿ ಇಟ್ಟಿದ್ದ ಮೆಕ್ಕೆ ಜೋಳದ ಚೀಲಗಳನ್ನು ಹಾಗೂ ನಮ್ಮ ಕುರಿ, ಆಕಳುಗಳನ್ನು ತಗೆದುಕೊಳ್ಳುತ್ತಿದ್ದನು. ಆಗ ನಾನು ಯಾಕ ವಯ್ತಿರಿ ನಾನು ಕೊಡಲ್ಲಾ ಅಂತಾ ಹೇಳಿದೆನು. ಆಗ ಸದರಿ ಶಿವಶರಣಪ್ಪ ಈತನು ನನಗೆ ನೀನು ಇನ್ನು ಲಾಗೋಡಿಯ ಹಣ ಕೊಡಬೇಕು ಎಂದು ಹೇಳಿದನು. ಆಗ ನಾನು ಒಯ್ಯಲು ಬಿಡುವುದಿಲ್ಲ ಎಂದು ಅಡ್ಡ ನಿಂತಾಗ ಬೋಸಡಿ ಮಗನೆ ಸರಿ ಎಂದು ನನ್ನನ್ನು ತಳ್ಳಿ ಶಿವಶರಣಪ್ಪ ಮತ್ತು ಅವನ ಜೋತೆಗೆ ಬಂದಿದ್ದವರು ನನಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಆಗ ನನ್ನ ತಾಯಿ ಬಿಡಿಸಲು ಬಂದಾಗ ಅವಳನ್ನು ತಳ್ಳಿದಾಗ ನನ್ನ ತಾಯಿ ಬಿದ್ದಿರುತ್ತಾಳೆ. ನಂತರ ನನಗೆ ಶಿವಶರಣ ಈತನು ಬಡಿಗೆಯಿಂದ ನನ್ನ ಬಲಗೈ ರಟ್ಟೆಗೆ ಹೊಡೆದು ನನ್ನನ್ನು ತಳ್ಳಿ ನಮ್ಮ 41 ಚೀಲ ಮೇಕ್ಕೆಜೋಳವನ್ನು ಹಾಗೂ 2 ಕುರಿಗಳನ್ನು ಮತ್ತು 3 ಆಕಳಗಳನ್ನು ತಗೆದುಕೊಂಡು ಹೋಗಿರುತ್ತಾರೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ರೋಡಿಗೆ ಯಾರೊ ಹೋಗುತ್ತಿದ್ದುದನ್ನು ನೋಡಿ ಸದರಿಯವರು ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಮುಂದೆ ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಚನ್ನಬಸಯ್ಯಾ ಹಿರೇಮಠ ಸಾ|| ಯಡ್ರಾಮಿ  ತಾ|| ಜೇವರ್ಗಿ  ರವರು ಊರಲ್ಲಿ ನಾವು ನಮ್ಮ ಹಳೆ ಮನೆ ಬಿಚ್ಚಿ ಹೊಸದಾಗಿ ಮನೆ ಕಟ್ಟುತ್ತಿರುತ್ತೇವೆ, ಆದ್ದರಿಂದ ನಮ್ಮ ಓಣಿಯವರಾದ ಶಾಂತಪ್ಪ ಗುಂಡಾನವರ ರವರ ಒಂದ ಕೋಣೆಯನ್ನು ಬಾಡಿಗೆಗೆ ತೆದುಕೊಂಡಿರುತ್ತೇವೆ, ಆ ಮನೆಯಲ್ಲಿ ನಮ್ಮ ಅಲ್ಮಾರಿ ಮತ್ತು ಇತರೆ ಸಾಮಾನುಗಳು ಇಟ್ಟಿದ್ದು ಇರುತ್ತದೆ. ಮನೆ ಕಟ್ಟಡ ಸಲುವಾಗಿ 1,50,000/- ರೂ ಮತ್ತು ಮನೆಯಲ್ಲಿದ್ದ 10 ಗ್ರಾಂ ಬಂಗಾರದ ನೆಕ್ ಲೇಸ ಹಾಗು ತಲಾ 05 ಗ್ರಾಮಿನ ಎರಡು ಬಂಗಾರದ ಉಂಗುರುಗಳನ್ನು ಅಲ್ಮಾರಿಯಲ್ಲಿ ಇಟ್ಟು ಕೀಲಿ ಹಾಕಿದ್ದು ಇರುತ್ತದೆ. ದಿನಾಂಕ 07-12-2018 ರಂದು ರಾತ್ರಿ 10;00 ಗಂಟೆಗೆ ನಾವು ಬಾಡಿಗೆಗೆ ತೆಗೆದುಕೊಂಡ ಕೊಣೆಗೆ ಕಿಲೀ ಹಾಕಿರುತ್ತೇವೆ, ನಂತರ ನಾನು ನಮ್ಮ ತಂದೆ ಮತ್ತು ನಮ್ಮ ತಾಯಿ ಶರಣಮ್ಮ ಹಾಗು ನಮ್ಮ ಅಕ್ಕ ಬಸಮ್ಮ ರವರು ಕೂಡಿ ನಮ್ಮ ಇನ್ನೊಂದೊ ಕೋಣೆಯಲ್ಲಿ ಮಲಗಿಕೊಂಡಿರುತ್ತೇವೆ, ನಂತರ ಇಂದು ಬೆಳಿಗ್ಗೆ 06;00 ಗಂಟೆಗೆ ಎದ್ದು ಹೊರಗೆ ಬಂದು ನೋಡಿದಾಗ ನಾವು ಕೀಲಿ ಹಾಕಿದ ಕೊಣೆಯ ಬಾಗಿಲ ತೆರೆದಿತ್ತು, ನಂತರ ನಾವೆಲ್ಲರೂ ಕೂಡಿ ಒಳಗೆ ಹೋಗಿ ನೋಡಿದಾಗ ಒಳಗಿದ್ದ ಅಲ್ಮಾರಿ ಬಾಗಿಲ ಮತ್ತು ಲಾಕರ ಮುರದಿತ್ತು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಹಣ ಒಟ್ಟು 2,10,000/- ರೂ ಕಿಮ್ಮತ್ತಿನವುಗಳನ್ನು  ಯಾರೋ ಕಳ್ಳರು ನಿನ್ನೆ ದಿನಾಂಕ 07-12-2018 ರಂದು ರಾತ್ರಿ 11;00 ಗಂಟೆಯಿಂದ ದಿನಾಂಕ 08-12-2018 ರ ಬೆಳಗಿನ 05;00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲ ಕೀಲಿಯನ್ನು ಮೂರಿದು ಒಳಗೆ ಪ್ರವೇಶ ಮಾಡಿ ಬಂಗಾರ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ. ಅಣವೀರಪ್ಪ ತಂದೆ ಬಸಣ್ಣ ನಾಟಿಕರ್ ಸಾಃ ನಡುವಿನಹಳ್ಳಿ ಗ್ರಾಮ ತಾ.ಜಿಃ ಕಲಬುರಗಿ  ರವರ ಮಗ ವಿಶ್ವರಾಜ ನಾಟಿಕರ್ ದಿನಾಂಕ 07/12/2018 ರಂದು ಎಂದಿನಂತೆ ಟಂ ಟಂ  ಕೆಎ-32 ಸಿ-7663 ನೇದ್ದನ್ನು ತೆಗೆದುಕೊಂಡು ಮನೆಯಿಂದ ಹೊದನು. ನಮ್ಮೂರಿನ ಚನ್ನಬಸ್ಸು ತಂದೆ ಮಲ್ಲಿಕಾರ್ಜುನ ಭಜಂತ್ರಿ ಇತನು ಪೋನ ಮಾಡಿ ನನ್ನ ಮಗನಿಗೆ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ತಿಳಿಸಿದ್ದು, ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗನ ತಲೆಗೆ ರಕ್ತಗಾಯ, ಎದೆಗೆ ಭಾರಿ ರಕ್ತಗಾಯ, ಎರಡು ಪಾದಗಳಿಗೆ ರಕ್ತಗಾಯ, ಎರಡು ಮುಂಗೈಗಳಿಗೆ ರಕ್ತಗಾಯವಾಗಿ ಮೃತ ಪಟ್ಟಿದ್ದನು. ಅಲ್ಲಿಯೇ ಇದ್ದ ಚನ್ನಬಸ್ಸು ಭಜಂತ್ರಿ ಇವರಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, ನಾನು ಮತ್ತು ಬಸವರಾಜ ಇಬ್ಬರು ಟಂಟಂ ನಂ ಕೆಎ 32 ಸಿ 7663 ನೇದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಜೇವರಗಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ಶಹಾಬಾದ ಕ್ರಾಸ ದಾಟಿ ಅಂದಾಜು 2 ಕಿಮಿ ದೂರದಲ್ಲಿ ರೋಡಿನ ಮೇಲೆ ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಕ್ರೂಜರ ಚಾಲಕನು ತನ್ನ ಕ್ರೂಜರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಂಟಂಕ್ಕೆ ಡಿಕ್ಕಿ ಪಡೆಯಿಸಿದ್ದರಿಂದ ನಾವು ವಾಹನ ಸಮೇತ ರೋಡಿನ ಮೇಲೆ ಬಿದ್ದು ನನಗೆ ತರಚಿದ ಗಾಯಗಳಾಗಿದ್ದು ವಿಶ್ವರಾಜ ಇತನಿಗೆ ಮೇಲಿನಂತೆ ಗಾಯಗಳಾಗಿದ್ದು ಅಪಘಾತ ಪಡಿಸಿದ ಕ್ರೂಜರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅದರ ನಂಬರ ನೋಡಲಾಗಿ ಕೆಎ 32 ಬಿ 6995 ನೇದ್ದು ಇತ್ತು ನಂತರ ವಿಶ್ವರಾಜ ಇತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಸದರಿ ಘಟನೆ ನಡೆದಾಗ 4-30 ಪಿಎಂ ಆಗಿತ್ತು ಅಂತಾ ತಿಳಿಸಿದನು ಕಾರಣ ಸದರಿ ಕ್ರೂಜರ ನಂ ಕೆಎ 32 ಬಿ 6995 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.