Police Bhavan Kalaburagi

Police Bhavan Kalaburagi

Sunday, February 7, 2021

BIDAR DISTRICT DAILY CRIME UPDATE 07-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-02-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 23/2021, ಕಲಂ. 379 :-

ಫಿರ್ಯಾದಿ ವಿಜಯಕುಮಾರ ತಂದೆ ಬಸ್ವರಾಜ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಕೆ.ಹೆಚ್.ಬಿ ಕಾಲೋನಿ ಬೀದರ ರವರು ಸುಮಾರು 18 ವರ್ಷಗಳಿಂದ ವಾಲಿ ಕಮ್ಯೂನಿಕೇಶನ ನೇದರಲ್ಲಿ ಮ್ಯಾನೆಜರ ಅಂತಾ ಕೆಲಸ ಮಾಡುತ್ತಿದ್ದು, ಫಿರ್ಯಾದಿಯವರ ಮಾಲಿಕರಾದ ಡಾ: ರಜನಿಶ ವಾಲಿಯವರ ಮಗನಾದ ಅನಶುಲ ವಾಲಿ ವಯ: 16 ವರ್ಷ ಇವರು ಬೀದರ ಶಾಹಿನ ಕಾಲೇಜದಲ್ಲಿ ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹೀಗಿರುವಲ್ಲಿ ನಾಂಕ 05-02-2021 ರಂದು 1500 ಗಂಟೆಗೆ ಅನಶುಲ ವಾಲಿ ರವರು ಸ್ಕೋರಪಿಯೋ ವಾಹನದಲ್ಲಿ ಕಾಲೇಜಿಗೆ ಹೊಗಿ ತನ್ನ .ಫೋನ ಮೋಬೈಲ ಸದರಿ ವಾಹನದಲ್ಲಿಯೇ ಇಟ್ಟು ಕಾಲೇಜಿಗೆ ಹೋದಾಗ ಸದರಿ ವಾಹನದ ಚಾಲಕನಾದ ಆರೋಪಿ ಅಗಸ್ಟೀನ ತಂದೆ ಅಪ್ಪಾರಾವ ಸಾ: ಗುನಳ್ಳಿ ಗ್ರಾಮ ಇತನು ಸದರಿ ವಾಹನದಲ್ಲಿಟ್ಟ .ಫೋನ ಮೋಬೈಲ .ಕಿ 60,000/- ರೂ. .ಎಂ... ನಂ. 356724082913067 ನೇದನ್ನು ಕಳವು ಮಾಡಿಕೊಂಡು ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 08/2021, ಕಲಂ. 379 ಐಪಿಸಿ :-

ದಿನಾಂಕ 03-12-2020 ರಂದು ಎರಡು ಜನ ಹೆಣ್ಣು ಮಕ್ಕಳು ಫಿರ್ಯಾದಿ ಪರವೇಜ್ ಅಹ್ಮದ ತಂದೆ ಎಂ. ಹಫೀಜ್ ವಯ: 31 ವರ್ಷ, ಸಾ: ಹೊರ ಶಹಾ ಗಂಜ್ ಬೀದರ ರವರ ನ್ಯೂ ದಾನಿಸ್ ಕನೆಕ್ಷನ್ ಬಟ್ಟೆ ಅಂಗಡಿಯಲ್ಲಿ ಬಂದು 05 ಜೋತೆ ಲಂಗಾ ಜಾಕೀಟ್ ಒಂದೊಂದರ ಅ.ಕಿ 6400/- ರೂ. ಹೀಗೆ ಒಟ್ಟು 32,000/- ರೂ. ಬೆಲೆ ಬಾಳುವ ಲಂಗಾ ಜಾಕೇಜ ಗಳನ್ನು ಬುರ್ಖಾದಲ್ಲಿ ಹಾಕಿಕೊಂಡು ಕಳವು ಮಾಡಿಕೊಂಡು ಹೋಗಿ ಅಂಗಡಿಯ ಮುಂದೆ ಆಟೋ ನಂ. ಕೆಎ-38/4804 ನೇದರಲ್ಲಿ ಕುಳಿತು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ  ದಿನಾಂಕ 06-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 06-02-2021 ರಂದು ಗುಂಡೂರು ಗ್ರಾಮದ ಗ್ರಾಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ತಮ್ಮ ಸಿಬ್ಬಂದಿಯವರೊಡನೆ ಗುಂಡೂರು ಗ್ರಾಮಕ್ಕೆ ಹೋಗಿ ಅಲ್ಲಿ ಗುಂಡೂರು ಗ್ರಾಮದ ಸ್ ನಿಲ್ದಾಣದ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಗುಂಡೂರು ಗ್ರಾಮದ ಗ್ರಾಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಿಲಾಸ ತಂದೆ ಧನಸಿಂಗ ಚಿನ್ನಿ ರಾಠೋಡ ವಯ: 32 ವರ್ಷ, ಜಾತಿ: ಲಂಬಾಣಿ, ಸಾ: ಗುಂಡೂರು ತಾಂಡಾ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು ನಂತರ ಸದರಿ ಆರೋಪಿಗೆ ಹಿಡಿದು ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದೆನೆ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ 1) ನಗದು ಹಣ 1520/-ರೂಪಾಯಿ, 2) ಎರಡು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 457, 380 ಐಪಿಸಿ :-

ಫಿರ್ಯಾದಿ ತುಕ್ಕಮ್ಮ ತಂದೆ ಚೆನ್ನಮಲ್ಲಪ್ಪ ಇಟಗಾ ವಯ: 65 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನಿರ್ಣಾ ಗ್ರಾಮ ರವರ ಸೋದರ ಅಳಿಯನಾದ ದಶರಥ ಇವರ ಮಗನ ಮದುವೆ ದಿನಾಂಕ 02-02-2021 ರಂದು ಇದ್ದ ಕಾರಣ ಫಿರ್ಯಾದಿಯವರು ದಿನಾಂಕ 01-02-2021 ರಂದು ನ್ನ ಮನೆಗೆ ಕೀಲಿ ಹಾಕಿ ಮದುವೆ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಗೆ ಹಾಕಿದ ಕಿಲಿಯನ್ನು ಮುರಿದು ಮನೆಯಲ್ಲಿನ 1) ಗುಂಡಿನ ಸರ 1 ತೋಲೆ ಅ.ಕಿ 20,000/- ರೂ., 2) ಜೀರಮಣಿ ಗುಂಡ 5 ಗ್ರಾಂ .ಕಿ 8000/- ರೂ ಹಾಗೂ ತಾಳಿಯಲ್ಲಿನ ಬಂಗಾರದ ಪತ್ತಿಗಳು 5 ಗ್ರಾಂ .ಕಿ 10,000/- ರೂ. ಹೀಗೆ ಒಟ್ಟು 38,000/- ರೂ. ಬೆಲೆ ಬಾಳುವ ಬಂಗಾರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅದೇ ರೀತಿ ಪಕ್ಕದ ಮನೆಯ ವಿನೋದಕುಮಾರ ತಂದೆ ಕಲ್ಲಪ್ಪ ಹೇಡ್ಗಾಪುರೆ ಮತ್ತು ಭಾಗೀರಥಿ ಗಂಡ ಪ್ರತಾಪಗೀರಿ ಗೋಸಾಯಿ ಇವರಿಬ್ಬರಿ ಮನೆಗಳ ಕೀಲಿ ಮುರಿದು ವಿನೋದಕುಮಾರ ರವರ ಮನೆಯಲ್ಲಿ ಅಲಮಾರಿಯಲ್ಲಿಟ್ಟಿದ ನಗದು ಹಣ 10,000/- ರೂ ಹಾಗೂ ಭಾಗೀರತಿ ಇವರ ಮನೆಯ ಕಬ್ಬಿಣದ ಪೆಟ್ಟಿಯಲ್ಲಿ ಇಟ್ಟಿದ್ದ ನಗದು ಹಣ 15,000/- ರೂ. ಗಳು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಯವರ ದೂರಿನ ಹೇಳಿಕೆ ಸಾರಾಂಶಧ ಮೇರೆಗೆ ದಿನಾಂಕ 06-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.