Police Bhavan Kalaburagi

Police Bhavan Kalaburagi

Friday, December 22, 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀಮತಿ ತನುಜಾ ಗಂಡ ಶ್ರೀಧರ ಸರಡಗಿ ಸಾ : ಮೊಗಲಾ ತಾ : ಚಿತ್ತಾಪೂರ ರವರ ಗಂಡನಾದ ಶ್ರೀಧರ ಇವರು ದಿನಾಂಕ:- 08/10/2017 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿದ್ದ ಮೊಟಾರ ಸೈಕಲನ್ನು ತೆಗೆದುಕೊಂಡು  ಕಲಬುರಗಿಗೆ ಹೋಗಿ ಅಲ್ಲಿ ಮೊಟಾರ ಸೈಕಲ ಹಚ್ಚಿ  ಕಲಬುರಗಿಯಿಂದ ತಾನು ಚಲಾಯಿಸುತ್ತಿರುವ  ಕ್ರೂಸರ ವಾಹನ ತೆಗೆದುಕೊಂಡು 2 ದಿವಸ ಬಾಡಿಗಿಯ ಮೇಲೆ ತುಳಜಾಪೂರ ಕಡೆ ಹೋಗಿ ಬಂದು ನಿನ್ನ ದಿನಾಂಕ:-10/10/2017 ರಂದು ಕಲಬುರಗಿಯಿಂದ ತಮ್ಮ ಗ್ರಾಮಕ್ಕೆ ಮೊಟಾರ ಸೈಕಲ ಮೇಲೆ ರಾತ್ರಿ 11 ಪಿ.ಎಮ್. ದಿಂದ 04 ಎ .ಎಮ್. ದ ಮದ್ಯದ ಅವದಿಯಲ್ಲಿ ಬರುತ್ತಿರುವಾಗ ಕಲಬುರಗಿ ಸೇಡಂ ರಾಜ್ಯ ಹೆದ್ದಾರಿಯ ಇವಣಿ ಕ್ರಾಸ ದಾಟಿ 1 ಕೀ.ಮೀ ಅಂತರದ ರೋಡಿನ ಎಡ ಭಾಗಗಕ್ಕೆ  ಫಿರ್ಯಾದಿಯ ಗಂಡ ಶ್ರೀಧರ ತನ್ನ ಮೊಟಾರ ಸೈಕಲ ಮೇಲಿಂದ ಅಥವಾ ಫಿರ್ಯಾದಿಯ ಗಂಡನು ತಾನು ಚಲಾಯಿಸಿಕೊಂಡು ಹೋಗುತ್ತಿರುವ ಮೊಟಾರ ಸೈಕಲಕ್ಕೆ ಯಾವುದೋ ಒಂದು ವಾಹನ ಡಿಕ್ಕಿ ಪಡಿಸಿ ಹೋಗಿರಬಹುದು. ಈ ಘಟನೆಯಲ್ಲಿ ಫಿರ್ಯಾದಿಯ ಗಂಡ ಶ್ರೀಧರನಿಗೆ ತಲೆಯಲ್ಲಿ ಭಾರಿ ರಕ್ತಗಾಯ, ಬಲ ಹಣೆಯ ಮೇಲೆ, ಮೂಗಿನ ಮೇಲೆ, ಬಲ ಗಣ್ಣಿನ ಮೇಲೆ, ಗದ್ದಕ್ಕೆ ರಕ್ತಗಾಯವಾಗಿದ್ದು. ಹಾಗೂ ಬಲಗೈ ಮೊಣಕೈಗೆ ತರಚಿದ ಗಾಯಗಳಾಗಿದ್ದು. ಮಾತನಾಡುವ ಸ್ಥತಿಯಲ್ಲಿರುವದಿಲ್ಲ. ರಸ್ತೆ ಅಫಘಾತಕ್ಕೋಳಗಾಗಿ ಬಿದ್ದಿರುವದನ್ನು ಮಾಹಿತಿ ಮೇರೆಗೆ ಜಿ.ವಿ.ಆರ್. ಅಂಬುಲೆನ್ಸ್ ನವರು ಘಟನಾ ಸ್ಥಳಕ್ಕೆ ಹೋಗಿ ಫಿರ್ಯಾದಿಯ ಗಂಡನಿಗೆ ನೋಡಿ ಫಿರ್ಯಾದಿಯ ಹತ್ತಿರ ಇದ್ದ ಮೊಬೈಲನಲ್ಲಿ ಬಂದ ಮಿಸ್ ಕಾಲ ನಂಬರ ನೋಡಿ   ಈ ನಂಬರಿನಿಂದ  ಫಿರ್ಯಾದಿದಾರಳಿಗೆ ಫೋನ ಮಾಡಿ ಘಟನಾ ಸ್ಥಳದ ಬಗ್ಗೆ ತಿಳಿಸಿ ಆತನಿಗೆ ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಗಂಗಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವದಾಗಿ ತಿಳಿಸಿರುತ್ತಾರೆ,   ಈ ಘಟನೆ ಯಾವ ರೀತಿಯಿಂದ ಜರುಗಿದೆ ಎಂಬುದರ ಬಗ್ಗೆ ಫಿರ್ಯಾದಿಯ ಗಂಡನು ಸಹಜ ಸ್ಥತಿಗೆ ಬಂದಾಗ ತನಿಗೆ ವಿಚಾರಿಸಿ ಪುನಹ ತಿಳಿಸಲಾಗುವುದು ಅಂಥಾ ತಿಳಿಸಿದ್ದು ದಿನಾಂಕ 15-10-2017 ರಂದು ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು ಗಂಗಾ ಆಸ್ಟತ್ಎ ಕಲಬುರಗಿಯಿಂದ ಸೊಲ್ಲಾಪೂರ ಆಸ್ಪತ್ರಗರ ತೆಗೆದುಕೊಂಡು ಹೋಗಿದ್ದು  ಇಲ್ಲಿಯವರಗರಗೆ ಆಸ್ಪತ್ರಯಲ್ಲಿ ಉಪಚರಿಸುತ್ತಾ ದಿನಾಂಕ 21-12-2017 ರಂದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಈರಣ್ಣ ತಂದೆ ಕೆಂಚಪ್ಪ ಹಂಜಗಿ ಸಾಃ ಗಚ್ಚಿನಕಟ್ಟಿ ಕಾಲೊನಿ ವಿಜಾಪೂರ ಇವರು ಕಲಬುರಗಿಯಲ್ಲಿ ಕೆಲಸ ಇದ್ದರಿಂದ ನಾನು ಮತ್ತು ಭೀಮರಾಜ @ ಭೀಮರಾಯ ತಂದೆ ವೀರೂಪಾಕ್ಷಪ್ಪ ಕಾಸಿನಗುಂಟಿ ಜಾಡರ ಓಣಿ ವಿಜಯಪೂರ, ನಾಗನಗೌಡ ತಂದೆ ಕಾಶಪ್ಪಗೌಡ ಬಿರಾದಾರ ಈತನು ನಡೆಯಿಸುವ ಬುಲೇರೊ ಜೀಪ ನಂ ಕೆಎ-28-ಪಿ-1433 ನೇದ್ದರಲ್ಲಿ ಕುಳಿತು, ದಿ. 24.04.2017 ರಂದು ಬೆಳಗಿನ ಜಾವ ವಿಜಯಪೂರದಿಂದ ಕಲಬುರಗಿಗೆ ಬರುತ್ತಿದ್ದೆವು, ಬುಲೇರೋ ಜೀಪನ್ನು ನಾಗನಗೌಡ ಬಿರಾದಾರ ಇತನು ನಡೆಯಿಸುತ್ತಿದ್ದನು. ಮುಂಜಾನೆ 6.30 ಗಂಟೆಯ ಸುಮಾರಿಗೆ ರೇವನೂರ ಕ್ರಾಸ್ ದಾಟಿ ಲಕ್ಮಿ ಗುಡಿಯ ಹತ್ತಿರ ಜೇವರಗಿ-ವಿಜಯಪೂರ ರೋಡಲ್ಲಿ ನಾಗನಗೌಡ ಇತನು ಬುಲೆರೋ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು, ಅಲ್ಲಿ  ರೋಡಿನಲ್ಲಿ ದನ ಅಡ್ಡ ಬಂದಿದ್ದರಿಂದ ಅದಕ್ಕೆ ಉಳಿಸಲು ಹೋಗಿ ಜೀಪನ್ನು ಒಮ್ಮೇಲೆ ಕಟ್ಟ ಹೊಡೆದು ಬುಲೇರೋ ಜೀಪ ರೋಡಿನಲ್ಲಿ ಪಲ್ಟಿ ಮಾಡಿದನು. ಆಗ ಜೀಪನಲ್ಲಿ ಕುಳಿತ ನನಗೆ ಬಲ ಕಣ್ಣಿನ ಹತ್ತಿರ, ಹಣೆಯ ಮೇಲೆ ಬಲಕಾಲಿಗೆ ಬಲಗಡೆ ಭುಜಕ್ಕೆ ಗಾಯವಾಗಿರುತ್ತದೆ & ನನ್ನ ಜೊತೆ ಇದ್ದ ಭೀಮರಾಜ @ ಭೀಮರಾಯ ತಂದೆ ವಿರೂಪಾಕ್ಷಪ್ಪ ಕಾಸೀನಕುಂಟಿ ಇತನಿಗೆ ಬಲಕಣ್ಣಿನ ಹತ್ತಿರ ಮೂಗಿಗೆ, ಮುಂಗೈ ಹತ್ತಿರ, ಬಲಕೈ ತೊಳಿನ ಹತ್ತಿರ, ಮತ್ತು ಕಾಲಿಗೆ ಬಾರಿ ಪೆಟ್ಟಾಗಿತ್ತು. ಅವನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ನಮ್ಮ ಬುಲೇರೊ ಚಾಲಕನಿಗೆ ತಲೆಗೆ ಎದೆಗೆ ಒಳಪೆಟ್ಟು & ಎರಡು ಕೈಗಳಿಗೆ ತರಚಿದ ಗಾಯಗಳಾಗಿರುತ್ತವೆ. ನಂತರ ನಾನು ಮತ್ತು ಭೀಮರಾಜ ಹಾಗೂ ನಮ್ಮ ಜೀಪ ಚಾಲಕ ಎಲ್ಲರೂ ಒಂದು ಅಂಬುಲೇನ್ಸ್ ವಾಹನದಲ್ಲಿ ಕುಳಿತು ಕಲಬುರಗಿ ಯುನೈಟೇಡ ಆಸ್ಪತ್ರೆ ಬಂದು ಉಪಚಾರ ಕುರಿತು ಸೇರಿಕೆಯಾಗಿರುತ್ತೆವೆ. ಮೇಲೆ ನಮೂದಿಸಿದ ಬುಲೇರೋ ಜೀಪ ನಂ ಕೆಎ-28-ಪಿ-1433 ನೇದ್ದರ ಚಾಲಕ ನಾಗನಗೌಡ ಬಿರಾದಾರ ಈತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿದ್ದರಿಂದ ಈ ಘಟನೆ ಸಂಭವಿಸಿರುತ್ತದೆ ಕಾರಣ ಅವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣಧಲ್ಲಿನ ಘಾಯಾಳು ಶ್ರೀ ಭೀಮರಾಜ @ ಭೀಮರಾಯ ತಂದೆ ವಿರುಪಾಕ್ಷಪ್ಪ ಕಾಸಿನಕುಂಟೆ ಈತನನ್ನು ಉಪಚಾರ ಕುರಿತು ದಿ. 13.12.2017 ರಂದು ಮಾನ್ಯ ವೈದ್ಯಾಧಿಕಾರಿಗಳು ಆಲ್ಅಮೀನ ಆಸ್ಪತ್ರೆ ವಿಜಯಪೂರದಲ್ಲಿ ಸೇರಿಕೆಯಾಗಿದ್ದು ಶ್ರೀ ಭೀಮರಾಜ @ ಭೀಮರಾಯ ತಂದೆ ವಿರುಪಾಕ್ಷಪ್ಪ ಕಾಸಿನಕುಂಟೆ ಈತನನ್ನು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ  ದಿನಾಂಕ; 20/12/2017 ರಂದು ಬೆಳಗಿನ ಜಾವ ಮೃತ ಪಟ್ಟರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ 20-12-2017 ರಂದು ಮಹಾಗಾಂವ ಕ್ರಾಸ ಹತ್ತಿರ ನಾಗರಾಜ ತಂದೆ ಶಿವಶರಣಪ್ಪ ಸಾ: ಮಹಾಗಾಂವ ಆಟೊ ನಂ ಕೆ.ಎ-32 ಬಿ-7723 ನೇದ್ದರ ಚಾಲಕ ಇತನು ತನ್ನ ಆಟೊ ನೇದರಲ್ಲಿ ಶ್ರೀ ಸಿದ್ದಪ್ಪ ತಂದೆ ಮಲ್ಲಪ್ಪ ಹಡಪದ ಸಾ: ಮಹಾಗಾಂವ ತಾ||ಜಿ|| ಕಲಬುರಗಿ ರವರನ್ನು ಕೂಡಿಸಿಕೊಂಡು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಮಹಾಗಾಂವ ಗ್ರಾಮದ ಬಸ್ ಸ್ಯಾಂಡ ಹತ್ತಿರ ಇರುವ ಆಟೊ ಸ್ಯಾಂಡಿನ ಕಂಬಕ್ಕೆ ಒಮ್ಮೇಲೆ ಕಟ್ ಹೊಡೆದು ಅಪಘಾತ ಪಡಿಸಿ ಭಾರಿ ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಅಶೋಕ ತಂದೆ ಮೌಲಪ್ಪ ದೇಗಲಮಡಿ ಸಾ: ಹರಳಯ್ಯ ನಗರ ಶಹಾಬಾದ ಇವರು ದಿನಾಂಕ: 19/12/2017 ರಂದು ಮುಂಜಾನೆ ಪಿರ್ಯಾದಿಯು ತನ್ನ ಹೆಂಡತಿಯಾದ ಗಾಯತ್ರಿ ರವರಿಗೆ ಆರಾಮವಿಲ್ಲದ ಕಾರಣ ಕಲಬುರಗಿಗೆ ಆಸ್ಪತ್ರೆ ತೋರಿಸಲು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ವಿ 4717 ನೇದ್ದರ ಮೇಲೆ ಕೂಡಿಸಿಕೊಂಡು ಕಲಬುರಗಿಗೆ ಹೋಗಿ ಆಸ್ಪತ್ರೆಗೆ ತೊರಿಸಿಕೊಂಡು ಮರಳಿ ಶಹಾಬಾದಕ್ಕೆ ಬರುವಾಗ ಶಹಾಬಾದ ಜೆ.ಪಿ ಕಂಪನಿಯ ಗೇಟ ಎದುರುಗಡೆ ರಸ್ತೆಯಲ್ಲಿ ಬರುವಾಗ ಅದೇ ವೇಳೆಗೆ ಶಹಾಬಾದ ಕಡೆಯಿಂದ ಎದುರಿನಿಂದ ಒಬ್ಬ ಟಾಟಾ ಎ ಸಿ ಗೂಡ್ಸ ವಾಹನ ಚಾಲಕನ್ನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾನು ಚಲಾಯಿಸುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗೆ ಬಿದ್ದರಿಂದ ನನಗೆ ಬಲ ಮುಂಡಿಗೆ , ಬಲ ಮೊಳಕಾಳಿಗೆ ತರಚಿದ ರಕ್ತಗಾಯಾವಾಗಿರುತ್ತದೆ ಮತ್ತು ನನ್ನ ಹೆಂಡತಿ ಗಾಯಾತ್ರಿ ಇವಳಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ಒಳಪೆಟ್ಟಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಅವಳು ಬೆಹುಷಾ ಆಗಿ ಬಿದ್ದಳು ಆಗ ವಾಹನದ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋದನು ಅದರ ನಂಬರ ನೋಡಿರುವುದಿಲ್ಲಾ ನಂತರ ನಾನು ವಿಷಯ ನಮ್ಮ ಅಣ್ಣ ಸೊಮಶೇಖರ ಮತ್ತು ಶಿವಕಾಂತ ಇವರಿಗೆ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಗಾಯಾ ಪೆಟ್ಟು ಹೊಂದಿದ ನನಗೆ ಮತ್ತು ನನ್ನ ಹೆಂಡಿತಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡುತ್ತಿರುವಾಗ ನನ್ನ ಹೆಂಡತಿ ಮೃತಪಟ್ಟಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಚಂದಮ್ಮ ಗಂಡ ಬೀಮಪ್ಪ ದಾಸರ ಸಾ|| ಗೋಗಿಹಾಳ ಗ್ರಾಮ ತಾ|| ಜೇವರ್ಗಿ ರವರದು ಕಾಖಂಡಕಿ ಗ್ರಾಮ ಸಿಮಾಂತರದಲ್ಲಿ ನನ್ನ ಗಂಡನ ಹೆಸರಿಗೆ ಹೊಲ ಇದ್ದು, ಅದರ ಸರ್ವೆ ನಂ 54 ಇದ್ದು, ಅದರಲ್ಲಿ 4 ಎಕರೆ 12 ಗುಂಟೆ ಜಮೀನು ಇರುತ್ತದೆ. ನನ್ನ ಗಂಡ ಹೊಲದ ಸಲುವಾಗಿ ಇಜೇರಿ ಕೆ.ಜಿ.ಬಿ ಬ್ಯಾಂಕನಲ್ಲಿ 1,00,000/- ರೂ, ಜೇವರ್ಗಿ ಎಸ್.ಬಿ ಐ ಬ್ಯಾಂಕನಲ್ಲಿ 1,00,000/- ರೂ, ಹಾಗು ಖಾಸಗಿಯಾಗಿ 2,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ, ಆಗಾಗ ನನ್ನ ಗಂಡ ಸಾಲ ಬಹಳಾಗಿದೆ ಇದನ್ನು ತೀರಿಸುವುದು ನನ್ನಿಂದ ಆಗುವುದಿಲ್ಲಾ, ನಾನು ಸತ್ತರೆ ಎಲ್ಲಾ ಸರಿ ಹೋಗುತ್ತದೆ ಅಂತಾ ಅನ್ನುತ್ತಿದ್ದನು, ಆಗ ನಾವು ಅವರಿಗೆ ಸಮಾದಾನ ಹೇಳುತ್ತಾ ಬಂದಿದ್ದು ದಿನಾಂಕ 20-12-2017 ರಂದು ನಾನು ನನ್ನ ಗಂಡ ಮತ್ತು ನನ್ನ ಮಗ ರಾಜಪ್ಪ ಹಾಗು ನಮ್ಮ ಅಳಿಯ ಕನಕಪ್ಪ ರವರು ಕೂಡಿ ಮನೆಯಲ್ಲಿದ್ದಾಗ ನನ್ನ ಗಂಡ ಮುಖ ಸಣ್ಣ ಮಾಡಿ ಮಲಗುವ ಕೋಣೆಯೊಳಗೆ ಹೋದರು, ನಂತರ 4;30 ಗಂಟೆ ಸುಮಾರಿಗೆ ಕೋಣೆಯಿಂದ ಚೀರುವ ಸಪ್ಪಳ ಕೇಳಿ ನಾವೆಲ್ಲರು ಒಳಗೆ ಹೋಗಿ ನೋಡಲಾಗಿ ನನ್ನ ಗಂಡ ಘೂಟಕ್ಕೆ ಮಾಪಲದಿಂದ ನೇಣು ಹಾಕಿಕೊಂಡಿದ್ದರು, ನಂತರ ನಾವು ಮತ್ತು ನಮ್ಮ ಬಾಜು ಮನೆಯವರಾದ ಜಟ್ಟೆಪ್ಪ ಮಾದರ ಹಿಗೆಲ್ಲರೂ ಕೂಡಿ ನನ್ನ ಗಂಡನಿಗೆ ಕೆಳಗೆ ಇಳಿಸಿ ಹಾಕುವಷ್ಟರಲ್ಲಿ ನನ್ನ ಗಂಡ ಮೃತ ಪಟ್ಟಿದ್ದನು, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.