Yadgir District Reported Crimes
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 26/2018 ಕಲಂ: 32,34 ಕೆ.ಇ ಎಕ್ಟ್ 1965;-
ದಿನಾಂಕ: 21/02/2018 ರಂದು 12 ಪಿಎಮ್ ಕ್ಕೆ ಮಾನ್ಯ ಸಿ.ಪಿ.ಐ ಯಾದಗಿರಿ ವೃತ್ತ ರವರು
ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ
ನೀಡಿದ್ದೇನಂದರೆ ಇಂದು ದಿನಾಂಕ: 21/02/2018 ರಂದು ಮದ್ಯಾಹ್ನ ನಾನು ಮತ್ತು ಗಂಗಾಧರ
ಪಾಟಿಲ್ ಎ.ಎಸ್.ಐ, ಪ್ರಕಾಶ ಹೆಚ್.ಸಿ 18 ಮತ್ತು ಅಂಬ್ರೇಶ ಎಪಿಸಿ 114 ವೃತ್ತ ಕಛೇರಿ
ಜೀಪ ಚಾಲಕರವರೊಂದಿಗೆ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ
ತಡಿಬಿಡಿ ಗ್ರಾಮದ ಬಸ ನಿಲ್ದಾಣದ ಹತ್ತಿರ ಖಾಲಿ ಸ್ಥಳದಲ್ಲಿ ಯಾರೋ ಒಬ್ಬನು ಹೋಗಿ ಬರುವ
ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರ ಬಾಟ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಖಚಿತ
ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಕರೆಸಿಕೊಂಡು ಸದರಿ ಪಂಚರು ಮತ್ತು
ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0161 ನೇದ್ದರಲ್ಲಿ ಹೊರಟು 10-30
ಎ.ಎಮ್ ಕ್ಕೆ ತಡಿಬಿಡಿ ಗ್ರಾಮದಲ್ಲಿ ಶರಣಮ್ಮ ಆಯಿ ಮಠದ ಹತ್ತಿರ ಜೀಪನ್ನು ಸ್ವಲ್ಪ
ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ತಡಿಬಿಡಿ ಬಸನಿಲ್ದಾಣವನ್ನು ಮರೆಯಾಗಿ
ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ
150/- ರೂ. ಗೆ ಒಂದು ಬಿಯರ ಬಾಟಲಿ ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ
ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿಯಬೇಕು
ಎನ್ನುವಷ್ಟರಲ್ಲಿ ಆ ಮನುಷ್ಯನು ಅಲ್ಲಿಂದ ತಪ್ಪಿಸಿಕೊಂಡು ಸಂದಿಯಲ್ಲಿಂದ ಓಡಿ ಹೋದನು.
ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಖಾಜಾಹುಸೇನ ತಂದೆ
ಮುನ್ನಾಸಾಬ ದೊಡ್ಡಮನಿ, ವ:35, ಜಾ:ಮುಸ್ಲಿಂ, ಉ:ಕೂಲಿ ಸಾ:ತಡಿಬಿಡಿ ತಾ:ಶಹಾಪೂರ ಎಂದು
ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ರಟ್ಟಿನ ಕಾಟನ
ಬಾಕ್ಸದಲ್ಲಿ ಕಿಂಗಫಿಶಯರ ಬಿಯರ ಬಾಟಲಿಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ 650 ಎಮ್.ಎಲ್
ದ ಒಟ್ಟು 12 ಬಾಟಲಿಗಳು ಇದ್ದವು. ಒಟ್ಟು ಮದ್ಯ 650*12=7 ಲೀಟರ್ 800 ಎಮ್.ಎಲ್
ಆಗುತ್ತಿದ್ದು, ಸದರಿ ಬಾಟಲಿಗಳ ಮೇಲೆ ಎಮ್.ಆರ್.ಪಿ ಬೆಲೆ 125/- ರೂ.ದಂತೆ ಒಟ್ಟು
1500=00 ರೂ.ಗಳು ಆಗುತ್ತಿದ್ದು, ಎಲ್ಲಾ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು 10-30
ಎಎಮ್ ದಿಂದ 11-30 ಎಎಮ್ ದವರೆಗೆ ಪಂಚನಾಮೆ ಜರುಗಿಸಿ, 12 ಪಿಎಮ್ ಕ್ಕೆ
ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ
ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ
ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 26/2018 ಕಲಂ: 32,34
ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 27/2018 ಕಲಂ. 78(3) ಕೆ.ಪಿ ಕಾಯ್ದೆ;- ದಿನಾಂಕ:
21/02/2018 ರಂದು 5-30 ಪಿಎಮ್ ಕ್ಕೆ ಶ್ರೀ ಮೌನೇಶ್ವರ ಮಾಲಿಪಾಟಿಲ್ ಸಿ.ಪಿ.ಐ
ಯಾದಗಿರಿ ವೃತ್ತ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ
ಪಂಚನಾಮೆ ಹಾಜರಪಡಿಸಿ, ವರದಿ ನೀಡಿದ್ದು, ಸದರಿ ಜಪ್ತಿ ಪಂಚನಾಮೆ ಸಾರಾಂಶವೇನೆಂದರೆ ಇಂದು
ದಿನಾಂಕ: 21/02/2018 ರಂದು ಬೀರನಾಳ ಗ್ರಾಮದ ಬಲಭೀಮೇಶ್ವರ ಗುಡಿ ಹತ್ತಿರ ರೋಡಿನ ಮೇಲೆ
ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಮಟ್ಕಾ ನಂಬರಗಳನ್ನು
ಬರೆದುಕೊಳ್ಳುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತು
ಸಿಬ್ಬಂದಿಯವರು, ಪಂಚರೊಂದಿಗೆ ಹೋಗಿ ಬೀರನಾಳ ಗ್ರಾಮದ ಬಲಭೀಮೇಶ್ವರ ಗುಡಿ ಹತ್ತಿರ
ಸ್ವಲ್ಪ ದೂರದಲ್ಲಿ ಹೋಗಿ ಜೀಪನ್ನು ನಿಲ್ಲಿಸಿ, ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ
ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 1/- ರೂ. 80/- ರೂ. ಗೆಲ್ಲಿರಿ ಬಾಂಬೆ
ಮಟ್ಕಾ ಆಡಿರಿ ಎಂದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು
ಬರೆದುಕೊಳ್ಳುವುದನ್ನು ನೋಡಿ, ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಅವನಿಗೆ ವಶಕ್ಕೆ
ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು ಸಿದ್ದಲಿಂಗಪ್ಪ ತಂದೆ ತಾಯಪ್ಪ
ಮಡಿವಾಳ, ವ:42, ಜಾ:ಅಗಸರ, ಉ:ಕೂಲಿ ಸಾ:ಬೀರನಾಳ ತಾ:ಶಹಾಪೂರ ಅಂತಾ ಹೇಳಿ ತಾನು
ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಮಟ್ಕಾ ನಂಬರಗಳನ್ನು
ಬರೆದುಕೊಳ್ಳುತ್ತಿರುವುದಾಗಿ ಒಪ್ಪಿಕೊಂಡನು. ಆಗ ಅವನಿಗೆ ಅಂಗಶೋಧನೆ ಮಾಡಲಾಗಿ ಅವನ
ಹತ್ತಿರ ನಗದು ಹಣ 870=00 ರೂ., ಮಟ್ಕಾ ನಂಬರಗಳನ್ನು ಬರೆದ ಒಂದು ಚೀಟಿ ಅ:ಕಿ: 00=00
ಮತ್ತು ಒಂದು ಬಾಲ ಪೆನ ಅ:ಕಿ: 00=00 ಇವುಗಳು ದೊರೆತ್ತಿದ್ದು, ಜಪ್ತಿ ಪಡಿಸಿಕೊಂಡು
ವಿವರವಾದ ಜಪ್ತಿ ಪಂಚನಾಮೆ ಕೈಕೊಂಡಿದ್ದು ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ
ಸ್ವರೂಪದ್ದಾಗಿರುವುದರಿಂದ ಕಲಂ: 78(3) ಕೆ.ಪಿ ಆಕ್ಟ 1963 ಅಡಿಯಲ್ಲಿ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿಕೊಂಡಿದ್ದು, ಮಾನ್ಯ
ನ್ಯಾಯಾಲಯವು ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ಕೊಟ್ಟ ಮೇರೆಗೆ
9-30 ಪಿಎಮ್ ಕ್ಕೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.
27/2018 ಕಲಂ: 78(3) ಕೆ.ಪಿ ಎಕ್ಟ್ 1963 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 56/2018.ಕಲಂ. 379. ಐ.ಪಿ.ಸಿ.;- ದಿನಾಂಕ
21/02/2018 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಗೆ ಪಿರ್ಯದಿ ಶ್ರೀ ಲಿಂಗರಾಜ ತಂದೆ
ಹುಲಗಪ್ಪ ಸುಬೇದಾರ ವ|| 25 ಜಾ|| ಬೆಡರು ಸಾ|| ಇಂದಿರಾ ನಗರ ಶಹಾಪೂರ ಇವರು ಹಾಜರಾಗಿ
ಒಂದು ಕನ್ನಡದಲ್ಲಿ ಬರೆದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ
ವೆನೆಂದರೆ ಪಿಯರ್ಾದಿ ಮತ್ತು ತನ್ನ ತಂದೆ ಇಬ್ಬರು ಸುರಪೂರಕ್ಕೆ ಹೋಗಲು ತನ್ನ ಬಜಾಜ
ಪಲ್ಸರ್ 220 ಮೋಟರ್ ಸೈಕಲ್ ನ್ನೇದ್ದನ್ನು ತೆಗೆದು ಕೊಂಡು ಶಹಾಪೂರದ ಹೋಸ ಬಸ್ಸ
ನಿಲ್ದಾಣದಲ್ಲಿ ದಿನಾಂಕ 20/02/2018 ರಂದು ಬೆಳಿಗ್ಗೆ 8-45 ಗಂಟೆಗೆ ನಿಲ್ಲಿಸಿದ್ದು
ಸುರಪೂರಕ್ಕೆ ಬಸ್ಸಿನಲ್ಲಿ ಹೋಗಿ ಕೆಲಸ ಮುಗಿಸಿ ಕೊಂಡು ಮರಳಿ ಪಿಯರ್ಾದಿಯು ಶಹಾಪೂರ ಬಸ್ಸ
ನಿಲ್ದಣಕ್ಕೆ ಬಂದು. 8-45 ಪಿ.ಎಂ.ಕ್ಕೆ ತನ್ನ ಬೈಕ ನಿಲ್ಲಿಸಿದಜಾಗಕ್ಕೆ ಹೋಗಿ ನೋಡಲಾಗಿ
ತನ್ನ ಮೋಡರ ಸೈಕಲ್ ಇರಲಿಲ್ಲಾ ಆಕಡೆ ಇಕಡೆ ಹುಡಿಕ್ಯಾಡಿದರು ಸಿಕ್ಕಿರುವದಿಲ್ಲಾ ನಂತರ
ಪಿರ್ಯದಿಯು ತನ್ನ ತಂದೆಗೆ ಪೋನ ಮಾಡಿ ತಿಳಿಸಿದ್ದರಿಂದ ಅವರು ಬಂದು ಮತ್ತು ತನ್ನ ಅಣ್ಣ
ಮಲ್ಲಿಕಾಜರ್ುನ್ ತಂದೆ ಅಯ್ಯಪ್ಪ ಎಲ್ಲರು ಕೂಡಿ ಹುಡಿಕ್ಯಾಡಿದರು ಸಿಕ್ಕಿರುದಿಲ್ಲಾ ಕಾರಣ
ತನ್ನ ಬಜಾಜ್ ಪಲ್ಸರ್ 220 ಮೋಟರ್ ಸೈಕಲ್ ನಂ. ಏಂ-33ಗ-3098 ಇಓಉಓ ಓಔ- ಆಏಚಅಉಇ26469.
ಅಊಇಖಖ ಓಔ- ಒಆ2ಂ13ಇಚ7ಉಅಇ09869 ಅ:ಕಿ:40000=00ರೂ ನ್ನೆದ್ದನ್ನು ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತನ್ನ ಮೋಟರ ಸೈಕಲ್ ಹುಡುಕಿ ಕೊಡಲು ವಿನಂತಿ ಅಂತ
ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 56/2018 ಕಲಂ
379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 57/2018 ಕಲಂ 279, 304[ಎ] ಐ.ಪಿ.ಸಿ ಮತ್ತು 187 ಐ.ಎಂ.ವಿ ಯಾಕ್ಟ ;- ದಿನಾಂಕ:21/02/2018
ರಂದು 07.00 ಪಿ.ಎಂ.ಕ್ಕೆ ಶ್ರೀ. ಮಲ್ಲಣಗೌಡ ತಂ/ ರಾಮರೆಡ್ಡಿಗೌಡ ಹೊಸಳ್ಳಿ ವ|| 49
ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಬಿರಾಳ(ಕೆ) ತಾ|| ಜೇವಗರ್ಿ ಜಿ|| ಕಲಬುಗರ್ಿ
ಹಾ.ವ|| ಬಸವೇಶ್ವರ ನಗರ ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ
ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ಒಟ್ಟು 5 ಜನ ಗಂಡು ಮಕ್ಕಳಿದ್ದು, ನಾನು
ಹಿರಿಯವನಿರುತ್ತೇನೆ. ಬಸವರಾಜ ಈತನು ಕಿರಿಯ ಮಗನಿದ್ದು, ಅವನು ನಮ್ಮ ಊರಿನಲ್ಲಿಯೇ
ಒಕ್ಕಲುತನ ಕೆಲಸ ಮಾಡಿಕೊಂಡು ಊರಲ್ಲಿಯೇ ಇರುತ್ತಾನೆ. ಹೀಗಿದ್ದು, ಇಂದು
ದಿನಾಂಕ:21/02/2018 ರಂದು ಸಾಯಂಕಾಲ 5.50 ಪಿ.ಎಂ.ಕ್ಕೆ ಅಂಬೋಜಿ ತಂ/ ಶಂಕರ ರಾಠೋಡ
ಸಾ||ಬಿರಾಳ(ಬಿ) ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ಸಾಯಂಕಾಲ 4.00
ಪಿ.ಎಂ.ಕ್ಕೆ ನಿಮ್ಮ ಕಿರಿಯ ತಮ್ಮ ಬಸವರಾಜನು ನಿಮ್ಮ ಅಳಿಯ ಮಾಣಿಕರಡ್ಡಿ ಹುಡೇದ ಈತನಿಗೆ
ಬೇಟಿಯಾಗಲು ಶಹಾಪುರದ ಎ.ಸಿ ಗೋಡಾನಗೆ ಬಂದು ಬೇಟಿಯಾಗಿ ನಾನು ಊರಿಗೆ ಹೋಗಿ ಬರುತ್ತೇನೆ
ಅಂತಾ ಹೇಳಿ ತನ್ನ ಪ್ಯಾಶನ್ ಪ್ರೋ ಮೋಟರ ಸೈಕಲ್.ನಂ.ಕೆಎ-32 ಇಜಿ-5723 ನೇದ್ದರಲ್ಲಿ
4.50 ಪಿ.ಎಂ.ಕ್ಕೆ ಹೊರಟನು ನಾನೂ ಕೂಡಾ ಬಸವೇಶ್ವರ ಸರ್ಕಲ್ ಹತ್ತಿರ ಕೆಲಸ ಇದ್ದ
ಪ್ರಯುಕ್ತ ನನ್ನ ಮೋಟರ ಸೈಕಲ್ದಲ್ಲಿ ನಿಮ್ಮ ತಮ್ಮನ ಹಿಂದೆಯೇ ಹೊರಟೆನು. ಅಂದಾಜು 5.00
ಪಿ.ಎಂ ಸುಮಾರಿಗೆ ನಿಮ್ಮ ತಮ್ಮ ಬಸವರಾಜನು ಶಹಾಪುರ-ಹತ್ತಿಗುಡೂರ ರೋಡಿನಲ್ಲಿರುವ ಯಮಹಾ
ಶೋರೂಮ್ ಮುಂದೆ ಹೊರಟಿದ್ದಾಗ ಎದರುನಿಂದ ಅಂದರೆ ಶಹಾಪುರ ಬಸವೇಶ್ವರ ಸರ್ಕಲ್ ಕಡೆಯಿಂದ
ಒಂದು ಅಶೋಕಾ ಲೇಲ್ಯಾಂಡ್ ಮಿನಿ ಗೂಡ್ಸ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ನಿಮ್ಮ ತಮ್ಮನ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿ
ತನ್ನ ವಾಹನವನ್ನು ಸ್ವಲ್ಪ ದೂರ ನಡೆಸಿಕೊಂಡು ಹೋಗಿ ನಿಲ್ಲಿಸಿ ತನ್ನ ವಾಹನದಿಂದ ಇಳಿದು
ಓಡಿ ಹೋದನು ಆಗ ಅವನ ಮುಖ ನೋಡಿದ್ದು ಇನ್ನೊಮ್ಮೆ ನೋಡಿದಲ್ಲಿ ಗುರುತಿಸುತ್ತೇನೆ. ಅಶೋಕ
ಲೈಲ್ಯಾಂಡ್ ವಾಹನದ ನಂಬರ ಕೆಎ-35 ಬಿ-8254 ಇರುತ್ತದೆ. ನಂತರ ನಿಮ್ಮ ತಮ್ಮನ ಹತ್ತಿರ
ಬಂದು ನೋಡಲಾಗಿ ತಲೆಯ ಮಧ್ಯದಿಂದ ಮುಖದ ಬಲಸೈಡಿನ ಗದ್ದದವರೆಗೆ ಭಾರೀ ಕಟ್ಟಾದ
ರಕ್ತಗಾಯವಾಗಿದ್ದು, ಮತ್ತು ಬಲ ಮೊಳಕಾಲ ಮೇಲೆ ತೊಡೆಯ ಹತ್ತಿರ ಭಾರೀ ರಕ್ತಗಾಯವಾಗಿ ಕಾಲು
ಮುರಿದಿದ್ದು, ಮೊಳಕಾಲ ಕೆಳಗೆ ತರಚಿದ ಗಾಯ ಹಾಗೂ ಬಲ ಪಾದಕ್ಕೆ
ಕಟ್ಟಾದಗಾಯವಾಗಿರುತ್ತದೆ. ಬಸವರಾಜನಿಗೆ ಕೂಡಲೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು
ಶಹಾಪುರ ಸಕರ್ಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದಾಗ 5.40 ಪಿ.ಎಂಕ್ಕೆ ಉಪಚಾರ
ಫಲಿಸದೆ ತನಗಾದ ಗಾಯಪೆಟ್ಟಿನಿಂದ ಮೃತಪಟ್ಟಿರುತ್ತಾನೆ. ಈ ವಿಷಯವನ್ನು ನಿಮ್ಮ ಅಳಿಯ
ಮಾಣಿಕರಡ್ಡಿ ಹುಡೇದ ಈತನಿಗೆ ತಿಳಿಸಿರುತ್ತೇನೆ ನೀವು ಕೂಡಲೆ ಆಸ್ಪತ್ರೆಗೆ ಬನ್ನಿ ಅಂತಾ
ಹೇಳಿದ್ದರಿಂದ ನಾನು ಶಹಾಪುರ ಸಕರ್ಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಮರ್ಚರಿ ಕೋಣೆಯ
ಕಟ್ಟೆಯ ಮೇಲೆ ಹಾಕಿದ್ದ ನನ್ನ ತಮ್ಮ ಬಸವರಾಜನ ಶವವನ್ನು ನೋಡಲಾಗಿ ಅವನಿಗೆ ಮೇಲೆ
ತಿಳಿಸಿದಂತೆ ಗಾಯಗಳು ಆಗಿದ್ದು ಅವನು ಮೃತಪಟ್ಟಿದ್ದನು. ಕಾರಣ ಈ ಅಪಘಾತಕ್ಕೆ
ಕಾರಣಿಭೂತನಾದ ಅಶೋಕಾ ಲೈಲ್ಯಾಂಡ್ ಮಿನಿ ಗೂಡ್ಸ ನಂ. ಕೆಎ-35 ಬಿ-8254 ಚಾಲಕನ ವಿರುದ್ದ
ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ. 57/2018 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ
ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 44/2018 ಕಲಂ: 363 ಐಪಿಸಿ;-ದಿನಾಂಕ
21/02/2018 ರಂದು 05.30 ಪಿಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಶರಣಬಸಪ್ಪ ಎಮ್
ಗಾಣಿಗೇರ ಸಾ|| ಪ್ರಾಂಶುಪಾಲರು ಡಾ|| ಬಿ ಆರ್ ಅಂಬೇಡ್ಕರ ಸರಕಾರಿ ಸಹ ಶಿಕ್ಷಣ ವಸತಿ
ಶಾಲೆ ಮುದನೂರ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ,
2017-18ನೇ ಸಾಲಿನಲ್ಲಿ 6ನೇ ತರಗತಿ ವಿದ್ಯಾಥರ್ಿಯಾದ ಕುಮಾರ ಮಲ್ಲಪ್ಪ ತಂದೆ ಹಣಮಂತ
ಸಾ|| ಕೋಳಿಹಾಳ ಈತನು ದಿ: 14/02/2018 ರಂದು ಬೆಳಿಗ್ಗೆ 8.30 ಗಂಟೆಗೆ ಸ್ನಾನಕ್ಕೆ
ಬಟ್ಟೆ ತೊಳೆಯಲು ಹೋದವನು ಮರಳಿ ಬಾರದೇ ಇದ್ದದರಿಂದ ಎಲ್ಲ ಕಡೆ ಹುಡುಕಾಡಿದ್ದು ಹಾಗೂ
ಪಾಲಕರಿಗೂ ತಿಳಿಸಿದ್ದು ಎಲ್ಲಿಯೂ ಪತ್ತೆಯಾಗಿರುವದಿಲ್ಲ ಕಾರಣ ಸದರಿ ಅಪ್ರಾಪ್ತ ವಯಸ್ಸಿನ
ವಿದ್ಯಾಥರ್ಿ ಕು. ಮಲ್ಲಪ್ಪ ತಂದೆ ಹಣಮಂತ ಈತನಿಗೆ ಯಾರೋ ಅಪಹರಿಸಿಕೊಂಡು ಹೋಗಿರಬಹುದು
ಅಂತ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 44/18 ಕಲಂ:
363 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.