ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
03-09-2020
ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 84/2020 ಕಲಂ 379 ಐಪಿಸಿ :-
ದಿನಾಂಕ:02/09/2020 ರಂದು 1130 ಗಂಟೆಗೆ ಫಿಯರ್ಾದಿ ಶ್ರೀ ಅಭೀಶೆಕ ತಂದೆ ರಾಜಕುಮಾರ ಬೀರಾದಾರ ಸಾ: ಅಗ್ರಾಹಾರ(ಶಾಮರಾಜಪೂರ) ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ ಫಿರ್ಯಾದಿಯು ಬೀದರ ನಗರದ ತರಕಾರಿ ಮಾಕರ್ೆಟ ಹತ್ತಿರ ಮೇನ ರೋಡಿಗೆ ಇರುವ ಎ,ರಹೇಮಾನ ರವರ ಕೀರಾಣಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ತಂದೆ ತಾಯಿಯವರ ಜೋತೆಯಲ್ಲಿ ಅಗ್ರಾಹಾರ ಗ್ರಾಮದಲ್ಲಿ ವಾಸವಾಗಿದ್ದು ಮೋಟಾರ್ ಸೈಕಲ್ ನಂ ಕೆಎ-38/ಡಬ್ಲ್ಯೂ-9139 ನೇದ್ದು ಮನೆಯ ಮುಂದೆ ಅಂಗಳದಲ್ಲಿ ನಿಲ್ಲಿಸಿ ಮನೆಯ ಒಳಗಡೆ ಹೋಗಿ ಊಟ ಮಾಡಿ ಮರುದಿನ ದಿನಾಂಕ 24/06/2020 ರಂದು 03:00 ಗಂಟೆ ನಸುಕಿನ ಜಾವ ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಗೆ ಬಂದು ನೋಡಲು ದ್ವಿಚಕ್ರ ವಾಹನ ಮನೆಯ ಮುಂದೆ ಇದ್ದಿರುವುದಿಲ್ಲಾ ಯಾರೊ ಅಪರಿಚಿತರು ಕಳವು ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 52/2020
ಕಲಂ 420, 406, 409 ಐಪಿಸಿ :-
02/09/2020
ರಂದು 1900 ಗಂಟೆಗೆ ಶ್ರೀ.ರವಿಂದ್ರ ಬಿ.ಎಲ್ ತಂದೆ ಲಂಕಪ್ಪಾ ಸಾ:ಎಎಸಪಿ
ಸಬಡಿವಿಜನ್ ಬೀದರ ರವರು ನೀಡಿದರ ದೂರಿನ ಸಾರಾಂಶವೆನೆಂದರೆ ಶ್ರೀಮತಿ ಪ್ರತಿಮಾ ಮನೆ.ನಂ.10-1-197 ಪಿ.ಡಬ್ಲ್ಯೂ.ಡಿ. ಕಛೇರಿ ಹಿಂಭಾಗ ಬೀದರ ಇವರು ಮಂಗಲಪೇಟ ಅಂಚೆ
ಕಛೇರಿಯಲ್ಲಿ ಒಖ ಎಮ್.ಐ.ಎಸ್. ಖಾತೆ (ನಂಬರ 65180 ರೂ. 201000/-) ಹೊಂದಿದ್ದು
ಅಬ್ದುಲ ಜಲೀಲ್ ಖಾತೆದಾರರಿಗೆ ತಿಳಿಯದಂತೆ ಪ್ರಿಮೇಚರ್ ಕ್ಲೋಸರ್ ಮಾಡಲು ಕ್ಲೋಸರ್ ಫಾರಂ ಅಂಚೆ ಪಾಲಕರಿಗೆ ಕೊಟ್ಟು
ದಿನಾಂಕ 12-06-2013 ರಂದು ಖಾತೆ
ಕ್ಲೋಸ್ ಮಾಡಿಸಿ ಅದರ ಹಣ 196800/-ರೂ
ರೂಪಾಯಿಗಳನ್ನು ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮಿಬಾಯಿ ಯವರು ಉಪ ಅಂಚೆಪಾಲಕರಾಗಿ ಕಾರ್ಯ
ನಿರ್ವಹಿಸುತ್ತಿದ್ದರು. ( ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ ವಿಳಾಸ ಶೀಮತಿ ಲಕ್ಷ್ಮಿ ನಿವೃತಿ
ಅಂಚೆ ಇಲಾಖೆ ಸಿಬ್ಬಂಧಿ ಎಲ್.ಐ.ಜಿ-31
ಹುಡ್ಕೊ ಕಾಲೋನಿ ಬೀದರ) ಈ ರೀತಿ ಸಾರ್ವಜನಿಕರಿಗೆ ಮೊಸ ಮಾಡಿ ಹಣ ದುರ್ಬಳಕೆ ಮಾಡಿಕೊಂಡು ಮತ್ತು
ಅಂಚೆ ಇಲಾಖೆಯ ಪಾಸ್ ಬುಕ್ ಮತ್ತು ದಿನಾಂಕ ಮುದ್ರೆಯ ದುರುಪಯೋಗ ಮಾಡುವ ಮೂಲಕ ಮೋಸ
ಮಾಡಿರುತ್ತಾರೆ. ಅದ್ದರಿಂದ ಇವರ ವಿರುದ್ದ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ
ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನೂತನ ನಗರ ಠಾಣೆ
ಅಪರಾಧ ಸಂಖ್ಯೆ 99/2020 ಕಲಂ 379 ಐಪಿಸಿ :-
ದಿನಾಂಕ
02/09/2020 ರಂದು 1815 ಗಂಟೆಗೆ ಫಿರ್ಯಾದಿ ಸಂಜುಕುಮಾರ ತಂದೆ ಸಿದ್ದಪ್ಪ ವಯ:40 ವರ್ಷ ಜಾತಿ:ಎಸ್.ಟಿ. ಟೊಕರಿ ಕೋಳಿ ಉ:ಕೂಲಿ ಕೆಲಸ ಸಾ/ಹೊನ್ನಡ್ಡಿ
ತಾ/ಬೀದರ. ರವರು ಠಾಣೆಗೆ ಹಾಜರಾಗಿ ಲಿಖಿತ ದೂರು
ಸಲ್ಲಿಸದರ ಸಾರಾಂಶವೇನಂದರೆ, ಫಿರ್ಯಾದಿಯು
ಒಂದು ಹೀರೊ ಸ್ಪ್ಲೆಂಡರ ಪ್ರೊ ಮೋಟರ ಸೈಕಲ
ನಂ ಕೆ.ಎ.38ಆರ್.-7046 ನೇದನ್ನು 2015 ನೇ ಸಾಲಿನಲ್ಲಿ
ಖರಿದಿಸಿದ್ದು ಇರುತ್ತದೆ. ದಿನಾಂಕ 31/08/2020 ರಂದು ನಮ್ಮ ಭಾವರವರಾದ ಶ್ರೀ. ರಾಜಕುಮಾರ ಇವರಿಗೆ ಹುಷಾರಿಲ್ಲದ
ಕಾರಣ ಮುಂಜಾನೆ 11:30
ಎ.ಎಮ್. ಗಂಟೆಯ ಸುಮಾರಿಗೆ ಮೊಟರ ಸೈಕಲನ್ನು ಬೀದರ ನಗರದ ಸರಕಾರಿ ಆಸ್ಪತ್ರೆಯ ಮುಂದೆ ನಿಲ್ಲಿಸಿ ಆಸ್ಪತ್ರೆಯಲ್ಲಿ ತೋರಿಸಲು ಕರೆದುಕೊಂಡು ಹೋಗಿದ್ದು, ಮದ್ಯಾಹ್ನ 1330 ಗಂಟೆಯ ಸುಮಾರಿಗೆ
ಆಸ್ಪತ್ರೆಯಿಂದ ಹೊರಗೆ ಬಂದು ನೋಡಿದಾಗ
ಮೊಟರ ಸೈಕಲ ಇರಲಿಲ್ಲ. ಮೋ.ಸೈಕಲ್ ಅಂದಾಜು ಕಿಮ್ಮತ್ತು ರೂ- 40,000/-ರೂ
ಆಗಿರುತ್ತದೆ. ದಿನಾಂಕ 31/08/2020 ರಂದು ಮುಂಜಾನೆ 1130 ಗಂಟೆಯಿಂದ ಮದ್ಯಾಹ್ನ 1330 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2020
ಕಲಂ 32, 34 ಕೆ.ಇ. ಕಾಯ್ದೆ:-
ದಿನಾಂಕ
02/09/2020 ರಂದು 19ಃ00
ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಮಂಗಲಗಿ ಗ್ರಾಮದ ಅಂಬೇಡ್ಕರ ಸರ್ಕಲ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಒಂದು ಬಿಳಿ ಚೀಲದಲ್ಲಿ
ವಿಸ್ಕಿ ಬಾಟಲಗಳು ಇಟ್ಟು ಸಾರ್ವಜನಿಕರಿಂದ ಹಣ ಪಡೆದು ಮಾರಾಟ ಮಾಡುತ್ತೀದ್ದಾನೆ. ಅಂತಾ ಖಚಿತ
ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ
ಮಂಗಲಗಿ ಗ್ರಾಮದ ಹೊಸ ಬಸ್ ನಿಲ್ದಾಣದ ಹತ್ತಿರ
ನಿಂತು ನೋಡಲು ಅಂಬೇಡ್ಕರ್ ಸರ್ಕಲ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ
ತನ್ನ ಬಳಿ ಇದ್ದ ಬೀಳಿ ಖಾಲಿ ಚಿಲದಿಂದ ವಿಸ್ಕಿ ಬಾಟಲಗಳನ್ನು ತೆಗೆದು ಸಾರ್ವಜನೀಕರಿಂದ ಹಣ ಪಡೆದು
ಮಾರಾಟಾ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು
ದಾಳಿ ಮಾಡಿ ಅಲ್ಲಾಬಕ್ಕಸ್ ತಂದೆ
ಚಾಂದಪಾಶಾ ಬೈರೂಫಿ ವಯಃ 27
ವರ್ಷ ಜಾತಿಃ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಮಂಗಲಗಿ ತಾಃ
ಚಿಟಗುಪ್ಪ ಇವನ ಹತ್ತಿರದಿಂದ ಯು.ಎಸ್ ವಿಸ್ಕಿ 90
ಎಮ್ ಎಲ್ ವುಳ್ಳ 42 ಬಾಟಲಗಳು ಇದ್ದು
ಇವುಗಳ ಕಿಮ್ಮತ್ತು 1470=00
ರೂ ಬೆಲೆ ಬಾಳುವ ವಿಸ್ಕಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ 110/2020 ಕಲಂ 78(3) ಕೆ.ಪಿ. ಕಾಯ್ದೆ :-
ದಿನಾಂಕ:02/09/2020 ರಂದು 13:15 ಗಂಟೆಗೆ ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದಿದ ಮೇರೆಗೆ ಬಸವಕಲ್ಯಾಣ ನಗರದ ತ್ರೀಪೂರಾಂತ ಮಡಿವಾಳ ಚೌಕ್ ದಿಂದ 50 ಅಡಿ ಅಂತರದಲ್ಲಿ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾತ್ಮಿಯಂತೆ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 17:00 ಗಂಟೆಗೆ ಎಲ್ಲರು ಒಮ್ಮಲೆ ಮೇಘರಾಜ ತಂದೆ ಮಧುಕರ ಸೂರ್ಯವಂಶಿ ವಯಸ್ಸು//24 ವರ್ಷ ಜಾತಿ//ಸಮಗಾರ ಉ//ಕೂಲಿಕೆಲಸ ಸಾ// ತ್ರೀಪೂರಾಂತ ಇವನ ಅಂಗ ಶೋಧನೆ ಮಾಡಿ ಅವನ ಹತ್ತಿರ ನಗದು ಹಣ 4,030/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.