ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-01-2021
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 01/2021, ಕಲಂ. 498(ಎ), 323, 504 ಜೊತೆ 149 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ :-
ಫಿರ್ಯಾದಿ ಸೀಮಾ ಗಂಡ ರೇವಣಸಿದ್ದಪ್ಪಾ ಗುರನಳ್ಳಿ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 8-10-367/1 ದೇವಿ ಕಾಲೋನಿ ಬೀದರ, ಸದ್ಯ ಎಲ್.ಐ.ಜಿ-20 ಕೆ.ಹೆಚ್.ಬಿ ಕಾಲೋನಿ ಬೀದರ ರವರ ಮದುವೆಯು ದಿನಾಂಕ 03-07-2007 ರಂದು ದೇವಿ ಕಾಲೋನಿಯ ಶೆಂಕ್ರೆಪ್ಪಾ ಗುರನಳ್ಳಿ ರವರ ಮಗನಾದ ರೇವಣಸಿದ್ದಪ್ಪಾ ರವರ ಜೊತೆಯಲ್ಲಿ ಮಾಡಿರುತ್ತಾರೆ, ಮದುವೆಯಲ್ಲಿ ಗಂಡನ ಮನೆಯವರು ಕೇಳಿದಂತೆ 20 ತೊಲೆ ಬಂಗಾರ ಮತ್ತು ನಗದು 5 ಲಕ್ಷ ರೂಪಾಯಿ ಮತ್ತು ಮನೆ ಬಳಕೆಯ ಸಾಮಾನುಗಳಿಗಾಗಿ 51 ಸಾವಿರ ರೂಪಾಯಿ ಹಾಗೂ ಬೆಳ್ಳಿಯ ಸಾಮಾನುಗಳನ್ನು ಕೊಟ್ಟು 4 ಲಕ್ಷ ರೂಪಾಯಿ ಖರ್ಚು ಮಾಡಿ ಎಂ.ಎಸ್. ಪಾಟಿಲ್ ಫಂಕ್ಷನ್ ಹಾಲ ಬೀದರನಲ್ಲಿ ಮದುವೆ ಮಾಡಿರುತ್ತಾರೆ, ಮದುವೆಯಲ್ಲಿ ಗಂಡ ಕಾರ ಬೇಡಿಕೆ ಇಟ್ಟಿದ್ದರಿಂದ ಕಾರ ಖರಿದಿ ಮಾಡಲು ತಂದೆಯವರು 3 ಲಕ್ಷ ರೂಪಾಯಿ ನಗದು ಕೊಟ್ಟಿರುತ್ತಾರೆ, ಫಿರ್ಯಾದಿಯವರ ಗಂಡ ಬೆಂಗಳೂರಿನಲ್ಲಿ ಕಲ್ಲಿದ್ದಲು ವ್ಯಾಪಾರ ಮಾಡುತ್ತಿದ್ದರಿಂದ ಫಿರ್ಯಾದಿಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಯಲಹಂಕಾದ ಮನೆಯಲ್ಲಿ ಇಟ್ಟಿರುತ್ತಾನೆ, ಮದುವೆಯಾದ ನಂತರ ಗಂಡ 2-3 ತಿಂಗಳು ಮಾತ್ರ ಚೆನ್ನಾಗಿದ್ದು, ನಂತರ ಗಂಡನಾದ ರೇವಣಸಿದ್ದಪ್ಪಾ ಇತನು ನಿಮ್ಮ ತಂದೆಗೆ ಬಹಳ ಹೊಲ ಇದೆ ಅದನ್ನು ಮಾರಾಟ ಮಾಡಿಸಿ ನನಗೆ ಇನ್ನೂ ಹೆಚ್ಚಿನ ಹಣ, ಬಂಗಾರ ತಂದು ಕೊಡು ಅಂತ ಮೇಲಿಂದ ಮೇಲೆ ಫಿರ್ಯಾದಿಗೆ ನೀನು ಸಂಸಾರ ಮಾಡುವದಿಲ್ಲ ಅಂತ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಮನಸ್ಸಿಗೆ ಹತ್ತುವ ಹಾಗೆ ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಕಾಲಿನಿಂದ ಒದೆಯುವದು, ಕೈಯಿಂದ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಫಿರ್ಯಾದಿಯು ದೇವಿ ಕಾಲೋನಿಯ ತನ್ನ ಗಂಡನ ಮನೆಗೆ ಬಂದಾಗ ಇಲ್ಲಿಯೂ ಸಹ ಮಾವನಾದ ಶೆಂಕ್ರೆಪ್ಪಾ ಗುರನಳ್ಳಿ, ಅತ್ತೆಯಾದ ಲಕ್ಷ್ಮಿಬಾಯಿ, ಭಾವಂದಿರಾದ ಶಾಂತಕುಮಾರ, ಸಂಜುಕುಮಾರ, ಮೈದುನನಾದ ಶಿವಕುಮಾರ ರವರೆಲ್ಲರೂ ಕೂಡಿ ಗಂಡನಿಗೆ ಇಲ್ಲಸಲ್ಲದ ಮಾತುಗಳನ್ನು ಕಲಿಸಿರುತ್ತಾರೆ ಮತ್ತು ನೀನಗೆ ಬೇಗನೆ ಅಡುಗೆ ಮಾಡಲು ಬರುವದಿಲ್ಲ, ಗುಣ ಸರಿಯಾಗಿಲ್ಲ ರೇವಣಸಿದ್ದಪ್ಪಾ ಇತನಿಗೆ ಏನು ಕಮ್ಮಿ ಇಲ್ಲ ಆತನಿಗೆ ಇನ್ನೊಂದು ಮದುವೆ ಮಾಡುತ್ತೇವೆ, ಬೇರೆ ಮದುವೆ ಮಾಡಿದರೆ ಇನ್ನೂ ಹೆಚ್ಚಿನ ಹಣ, ಬಂಗಾರ ಕೊಡುತ್ತಾರೆ, ನಿನಗಿಂತ ಚೆನ್ನಾಗಿ ಇರುವವಳು ಸಿಗುತ್ತಾಳೆ, ನೀನು ಮನೆಯಿಂದ ಹೊರಗೆ ಹೋಗು ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ನಾದಣಿಯಾದ ಸರೋಜನಿದೇವಿ ಇವಳು ಸಹ ಆವಾಗ ಆವಾಗ ಮನೆಗೆ ಬಂದಾಗ ನೀನಗೆ ಅಡುಗೆ ಮಾಡಲು ಬರುವದಿಲ್ಲ, ನೀನು ಸರಿಯಾಗಿಲ್ಲ ರೇವಣಸಿದ್ದಪ್ಪಾಗೆ ಇನ್ನೂ ಹೆಚ್ಚಿನ ವರದಕ್ಷಿಣೆ ಕೊಡುತ್ತಿದ್ದರು, ನೀನು ನಿಮ್ಮ ತಂದೆಯ ಮನೆಗೆ ಹೋಗು ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡಿರುತ್ತಾಳೆ, ಅವರು ನೀಡುವ ಕಿರುಕುಳ ತಾಳಲಾರದೇ ಫಿರ್ಯಾದಿಯು ತನ್ನ ತಂದೆ, ತಮ್ಮ, ಅಕ ಮತ್ತು ಪರಿಚಯ ಇರುವ ಮಹಾದೇವ ಪಾಟಿಲ್, ವಿಶಾಲ ಪಾಟಿಲ್ ಮತ್ತು ರಾಜಕುಮಾರ ಚಿದ್ರಿ, ಸುರೇಶ ಮಾಶೆಟ್ಟಿ ಹಾಗೂ ನಿಶ್ಚಿತಾರ್ಥ ಮಾಡಿದ ರಾಮಶೆಟ್ಟಿ ಭದಭದೆ ರವರಿಗೆ ತಿಳಿಸಿದಾಗ ಅವರೆಲ್ಲರೂ ಕೂಡಿ ಅನೇಕ ಸಲ ಪಂಚಾಯಿತಿ ಹಾಕಿ ಗಂಡ ಹಾಗು ಗಂಡನ ಮನೆಯವರಿಗೆ ಬುದ್ದಿವಾದ ಹೇಳಿದರೂ ಸಹ ಅವರು ಯಾರದೆ ಮಾತು ಕೇಳಿರುವದಿಲ್ಲ, ಫಿರ್ಯಾದಿಯ ಗಂಡ ಹಾಗು ಗಂಡನ ಮನೆಯವರು ಕಿರುಕುಳ ಕೊಡುವ ಬಗ್ಗೆ ಚಿಂತಿಸಿ, ಫಿರ್ಯಾದಿಯ ಚಿಂತೆಯಲ್ಲಿಯೇ ಫಿರ್ಯಾದಿಯ ತಾಯಿ 2013 ನೇ ಸಾಲಿನಲ್ಲಿ ಮರಣ ಹೊಂದಿರುತ್ತಾರೆ, ಗಂಡನಿಗೆ ಬೇರೆ ಹೆಣ್ಣು ಮಕ್ಕಳ ಸಹವಾಸ ಇದ್ದರಿಂದ ಕಿರುಕುಳ ನೀಡಿ ಎಪ್ರೀಲ್-2019 ತಿಂಗಳಲ್ಲಿ ಗಂಡ ಜಗಳ ಮಾಡಿ ಹೊಡೆದು ಮನೆಯಿಂದ ಹೊರಗೆ ಹಾಕಿದಾಗ ಸದರಿ ವಿಷಯವನ್ನು ವಿಷಯವನ್ನು ಬೀದರದಲ್ಲಿದ್ದ ತನ್ನ ತಂದೆ ಮತ್ತು ತಮ್ಮನಿಗೆ ಹೇಳಿದಾಗ ತಮ್ಮನಾದ ಸಂತೋಷ ಮತ್ತು ಅವನ ಗೆಳೆಯಾರಾದ ರಾಜಕುಮಾರ ಪಾಟಿಲ್ ರವರು ಬೆಂಗಳೂರಿಗೆ ಇನೊವಾ ವಾಹನದಲ್ಲಿ ಬಂದು ತಂದೆಯ ಮನೆಗೆ ಕರೆದುಕೊಂಡು ಬಂದಿರುತ್ತಾರೆ, ಹೀಗಿರುವಾಗ ದಿನಾಂಕ 09-12-2020 ರಂದು ಆರೋಪಿತರಾದ ಗಂಡನಾದ ರೇವಣಸಿದ್ದಪ್ಪಾ, ಮಾವ ಶೆಂಕ್ರೆಪ್ಪಾ ಗುರನಳ್ಳಿ, ಅತ್ತೆ ಲಕ್ಷ್ಮಿಬಾಯಿ, ಭಾವ ಶಾಂತಕುಮಾರ, ಸಂಜುಕುಮಾರ, ಮೈದುನ ಶಿವಕುಮಾರ ರವರೆಲ್ಲರೂ ಕೂಡಿಕೊಂಡು ತಂದೆಯ ಮನೆಗೆ ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ, ಬಡೆ ಮಾಡಿ ಜಗಳ ಮಾಡುತ್ತಿರುವಾಗ, ತಂದೆ ಮತ್ತು ತಮ್ಮ ಇಬ್ಬರು ಏಕೆ ಸುಮ್ಮನೆ ಜಗಳ ಮಾಡುತಿದ್ದಿರಿ ಬನ್ನಿ ಮಾತನಾಡೋಣ ಅಂತ ಕೇಳಿದಾಗ ಸದರಿ ಆರೋಪಿತರೆಲ್ಲರೂ ತಂದೆಗೆ ನಿಮ್ಮ ಮನೆತನ ಸರಿಯಾಗಿಲ್ಲ, ನಿನ್ನ ಮಗಳಿಗೆ ನಡೆಯಿಸಿಕೊಳ್ಳುವದು ನಮಗೆ ಇಷ್ಟ ಇಲ್ಲ. ಇನ್ನು ಹಣ ಕೊಟ್ಟರೆ ಮಾತ್ರ ಅವಳಿಗೆ ಕರೆದುಕೊಂಡು ಹೊಗುತ್ತೇವೆ ಅಂತ ಜಗಳ ಮಾಡುತ್ತಿರುವಾಗ ಜಗಳದ ಶಬ್ದವನ್ನು ಕೇಳಿ ರಾಹುಲ್ ತಂದೆ ಮಾಣಿಕಪ್ಪಾ ತುಗಾಂವ, ಗುರು ಯಾಕತಪುರ್ ರವರು ಬಂದು ಜಗಳವನ್ನು ಕಣ್ಣಾರೆ ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 01/2021, ಕಲಂ. 363 ಐಪಿಸಿ :-
ದಿನಾಂಕ 01-01-2021 ರಂದು ಫಿರ್ಯಾದಿ ಲಲೀತಾ ಗಂಡ ಬಾಬುರಾವ, ಹೊಸಮನಿ, ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಬೋರಾಳ ರವರು ತನ್ನ 6ನೇ ಮಗನಾದ ಕಿರಣಕುಮಾರ@ಪ್ರಭು ತಂದೆ ಬಾಬುರಾವ ಹೊಸಮನಿ ವಯ: 15 ವರ್ಷ ಇಬ್ಬರು ಖಾಸಗಿ ಕೆಲಸ ಕುರಿತು ಬೀದರಗೆ ಹೋಗುವ ಕುರಿತು ಮೀನಾಕೇರಾ ಕ್ರಾಸ್ ಹತ್ತಿರ ಬಸ್ಸಿಗಾಗಿ ಕಾಯುತ್ತಿರುವಾಗ ಫಿರ್ಯಾದಿಯು ಕಿರಣ ಇತನಿಗೆ ನಾನು ಅಂಗಡಿಗೆ ಹೋಗಿ ಬರುತ್ತೇನೆ ನೀನು ಇಲ್ಲೆ ಕುಳ್ಳಿತುಕೋ ಅಂತಾ ಮಗನಿಗೆ ಕೂಡಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಮಗ ಕಿರಣಕುಮಾರ ಅಲ್ಲಿ ಇರಲ್ಲಿಲ್ಲ, ಆಗ ಫಿರ್ಯಾದಿಯು ಗಾಬರಿಗೊಂಡು ಅಲ್ಲೇ ಇದ್ದ ತಮ್ಮೂರಿನ ಹಣಮಂತ ತಂದೆ ಮಾಣಿಕಪ್ಪಾ ಇಬ್ಬರು ಕೂಡಿ ಅಲ್ಲಿ ಎಲ್ಲ ಕಡೆ ಹುಡಕಾಡಿದರೂ ಸಹ ಸಿಗಲ್ಲಿಲ್ಲ, ನಂತರ ತಮ್ಮ ಸಂಬಂಧಿಕರಲ್ಲಿ ಕರೆ ಮಾಡಿ ವಿಚಾರಿಸಲಾಗಿ ಯಾರು ಉಪಯುಕ್ತವಾದ ಮಾಹಿತಿ ನೀಡಿರುವುದಿಲ್ಲ, ತನ್ನ ಮಗನ ಚಹರೆ ಗುರುತು 1) ಬಣ್ಣ: ಬಿಳಿ ಬಣ್ಣ, 2) ಎತ್ತರ: 4'8, 3) ವಯ: 15 ವರ್ಷ, 4) ಮಾತನಾಡುವ ಭಾಷೆ: ಕನ್ನಡ, ಹಿಂದಿ ಹಾಗೂ 5) ಧರಿಸಿದ ಉಡುಪು: ಹಸಿರು ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 04-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.