ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-02-2021
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 13/2021, ಕಲಂ. 279, 338 ಐಪಿಸಿ ಜೊತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ 25-02-2021 ರಂದು ಫಿರ್ಯಾದಿ ಆಕಾಶ ತಂದೆ ರಮೇಶ ಹತ್ತೆರ್ಗೆ ವಯ: 23 ವರ್ಷ, ಜಾತಿ: ಲಿಂಗಾಯತ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರ ಸಂಬಂಧಿಕರಾದ ಸುಶಿಲಾಬಾಯಿ ಗಂಡ ಅಣ್ಣೆಪ್ಪಾ ಉಜಳಂಬೆ ವಯ: 70 ವರ್ಷ ಸಾ: ಚಿಟ್ಟಾ(ಕೆ) ಗ್ರಾಮ ಇವರು ತಮ್ಮ ಮೊಮ್ಮಗಳಾದ ಈಶ್ವರಿ ತಂದೆ ಚಂದ್ರಕಾಂತ ಉಜಳಂಬೆ ವಯ: 7 ವರ್ಷ ಇವಳಿಗೆ ಕರೆದುಕೊಂಡು ಮಂಠಾಳ ಗ್ರಾಮಕ್ಕೆ ಬಂದು ತಮ್ಮ ಆಧಾರ ಕಾರ್ಡ ಅಪಡೆಟ್ ಮಾಡಿಕೊಂಡು ಫಿರ್ಯಾದಿಯವರ ಮನೆಗೆ ಬಂದಾಗ ಫಿರ್ಯಾದಿಯು ಅವರನ್ನು ತಮ್ಮ ಹೊಂಡಾ ಶೈನ ಮೋಟಾರ್ ಸೈಕಲ ನಂ. ಕೆಎ-56/ಹೆಚ್-1184 ನೇದರ ಮೇಲೆ ತಮ್ಮೂರಿನಿಂದ ಚಿಟ್ಟಾ(ಕೆ) ಗ್ರಾಮಕ್ಕೆ ಮಂಠಾಳ-ಆಲಗೂಡ ಟಾರ ರೋಡ ಮುಖಾಂತರ ಏಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಂಠಾಳ ಗ್ರಾಮ ಶಿವಾರದಲ್ಲಿರುವ ಜಂಗ್ಲಿ ಪೀರ ಕಡೆಯಿಂದ ಮಹಿಂದ್ರ ಕಮಾಂಡರ್ ಜೀಪ್ ನಂ. ಎಪಿ-22/ಸಿ-2601 ನೇದರ ಚಾಲಕನಾದ ಆರೋಪಿ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಟಾರ ರೋಡಿನ ಮೇಲೆ ಬಂದು ಫಿರ್ಯಾದಿಯು ಚಾಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿ ತನ್ನ ವಾಹನವನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ಹೊಲದಲ್ಲಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡ ಮೋಳಕಾಲು ಕೆಳಗೆ ಭಾರಿ ಗುಪ್ತಗಾಯ ಮತ್ತು ಎಡಗಾಲು ಹೆಬ್ಬರಳಿಗೆ ರಕ್ತಗಾಯ, ಸುಶಿಲಾಬಾಯಿ ಇವರಿಗೆ ಎರಡು ಮೋಳಕಾಲು ಕೆಳಗೆ ಭಾರಿ ಗುಪ್ತಗಾಯ ಹಾಗೂ ಕು: ಈಶ್ವರಿ ಇವಳಿಗು ಸಹ ಎಡ ಮೋಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿ ಎಡ ಮುಂಗೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಚಿಟ್ಟಾ ಗ್ರಾಮದ ತಮ್ಮ ಸಂಬಂಧಿಕರಾದ ಸತೀಷ ತಂದೆ ರಾಮಣ್ಣಾ ಉಜಳಂಬೆ ಇವರಿಗೆ ಕರೆ ಮಾಡಿದಾಗ ಅವರು ತಮ್ಮ ಜೊತೆ ಚಿಟ್ಟಾ(ಕೆ) ಗ್ರಾಮದ ಮಹೇಶ ತಂದೆ ಅಮೃತ ಕಿಟ್ಟೆ ರವರಿಗೆ ಕರೆದುಕೊಂಡು ಬಂದು 108 ಅಂಬ್ಯುಲೇನ್ಸಗೆ ಕರೆಯಿಸಿ ಗಾಯತೊಂಡ ಮೂವರಿಗೂ ಚಿಕಿತ್ಸೆ ಕುರಿತು ಬಸವಕಲ್ಯಾಣ ಪಾಟೀಲ ಆಸ್ಪತೆ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 25/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-02-2021 ರಂದು ಫಿರ್ಯಾದಿ ಪ್ರಹಲ್ಲಾದಗಿರಿ ತಂದೆ ಗುಲಾಬಗಿರಿ ವಯ: 58 ವರ್ಷ, ಜಾತಿ: ಗೊಸಾಯಿ, ಸಾ: ಮಂಗಲಗಿ ಗ್ರಾಮ ರವರು ತಮ್ಮ ಹೊಲದಲ್ಲಿ ಕಬ್ಬಿನ ಲಾವಣಿ ಮಾಡುವ ಸಲುವಾಗಿ ತನ್ನ ಹೊಂಡಾ ಶೈನ ಮೊಟರ ಸೈಕಲ್ ನಂ. ಕೆಎ-38/ಕ್ಯೂ-1401 ಮೇಲೆ ತಮ್ಮೂರ ಹೈಸ್ಕೂಲ ಹತ್ತಿರ ಇದ್ದ ತಮ್ಮ ಹೊಲಕ್ಕೆ ಹೊಗಿ ಹೊಲದ ಹತ್ತಿರ ರೊಡಿನ ಸೈಡಿಗೆ ತನ್ನ ಮೊಟರ ಸೈಕಲ್ ಸ್ಟ್ಯಾಂಡ ಹಾಕಿ ನಿಲ್ಲಿಸಿ ಅದರ ಮೇಲೆ ನಾನು ಕುಳಿತು ಕೂಲಿ ಕೆಲಸ ಮಾಡಲು ಬಂದ ತಮ್ಮೂರ ಬಸವ ತಂದೆ ಚಂದ್ರಶೇಖರ ಸಜ್ಜನಶೇಟ್ಟಿ ಹಾಗು ಅವರ ತಮ್ಮ ಮಲ್ಲಪ್ಪ ತಂದೆ ಚಂದ್ರಶೇಖರ ಸಜ್ಜನಶೇಟ್ಟಿ ಇವರ ಜೊತೆ ಮಾತನಾಡುತ್ತಿರುವಾಗ ಉಡಬಾಳ ಕಡೆಯಿಂದ ಆಟೊ ನಂ. ಕೆಎ-39/ಎ-1220 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ಮೊಟಾರ್ ಸೈಕಲಗೆ ಜೊರಾಗಿ ಡಿಕ್ಕಿ ಮಾಡಿ ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಸೊಂಟಕ್ಕೆ ಭಾರಿ ಗುಪ್ತಗಾಯ ಹಾಗು ಬಲಗಾಲು ಮತ್ತು ಎಡಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯ ಮಗನಿಗೆ ವಿಷಯ ಗೊತ್ತಾಗಿ ಅವನು ಘಟನೆ ಸ್ಥಳಕ್ಕೆ ಬಂದು 108 ಅಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 25/2021, ಕಲಂ. 457, 380 ಐಪಿಸಿ :-
ದಿನಾಂಕ 19-02-2021 ರಂದು ರಾತ್ರಿ 02:11 ಗಂಟೆಗೆ ಮುಚಳಂಬ ಗ್ರಾಮದ ಹೊರ ವಲಯದಲ್ಲಿರುವ ಏರಟೇಲ್ ಟವರಿನ ಸೆಲ್ಟರ ಬೀಗ ಒಡೆದು ಯಾರೋ ಕಳ್ಳರು ಸೆಲ್ಟರ ಒಳಗಡೆ ಇದ್ದ ಎಕ್ಸೈಡ್ ಕಾಯ್ 600 ಎ.ಹೆಚ್ 2ಕೆವಿ ಬ್ಯಾಟರಿಗಳು ಅ.ಕಿ 24,000/- ರೂ ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಮಾಣಿಕರಾವ ತಂದೆ ಕಾಂತಪ್ಪಾ ಹಳ್ಳಿಖೆಡ ವಯ: 70 ವರ್ಷ, ಸಾ: ರಾಮಚಂದ್ರ ನಗರ ನೌಬಾದ, ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 25-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. ಮಹಿಳೆ ಕಾಣೆ :-
ದಿನಾಂಕ 24-02-2021 ರಂದು ಫಿರ್ಯಾದಿ ಸೈಯದ ಅಲಿ ತಂದೆ ಮಹೇತಾಬಸಾಬ ಇಟಾವಾಲೆ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ವಡ್ಡರ ಗಲ್ಲಿ ಬಸವಕಲ್ಯಾಣ ರವರ ಹೆಂಡತಿ ರವರ ತವರು ಮನೆಯಲ್ಲಿ ಗ್ಯಾರವಿ ಕಾರ್ಯಕ್ರಮ ಇದ್ದ ಪ್ರಯುಕ್ತ ಫಿರ್ಯಾದಿಯು ತನ್ನ ಹೆಂಡತಿ ಹಾಊ ಮಕ್ಕಳೊಂದಿಗೆ ತಮ್ಮ ಓಣೆಯಲ್ಲಿದ್ದ ಹೆಂಡತಿ ತವರು ಮನೆಗೆ ಹೋಗಿ ರಾತ್ರಿ ಎಲ್ಲರು ಊಟ ಮಾಡಿ ಮಾತನಾಡುತ್ತಾ ಕುಳಿತಿರುವಾಗ ಫಿರ್ಯಾದಿಯವರ ಮಗಳಾದ ಕು:ನೇಹಾ ಬೇಗಂ ಇವಳು ರಾತ್ರಿ 12:30 ಗಂಟೆಯ ಸುಮಾರಿಗೆ ನನಗೆ ನಿದ್ರೆ ಬರುತ್ತಿದೆ ನಾನು ಮನೆಗೆ ಹೋಗುತ್ತೆನೆ ಎಂದು ತಿಳಿಸಿದಾಗ ಫಿರ್ಯಾದಿಯು ಅವಳಿಗೆ ಮನೆಗೆ ಹೋಗು ಎಂದು ತಿಳಿಸಿದ್ದು, ನಂತರ ಫಿರ್ಯಾದಿಯು ತನ್ನ ಹೆಂಡತಿಯೊಂದಿಗೆ 0100 ಗಂಟೆಗೆ ಮನೆಗೆ ಹೋದಾಗ ಮಗಳಾದ ಕು:ನೇಹಾಬೇಗಂ ಇವಳು ಮನೆಯಲ್ಲಿ ಇರಲಿಲ್ಲ, ಆವಾಗ ಫಿರ್ಯಾದಿಯು ತಮ್ಮ ಸಂಬಂಧಿಕರಲ್ಲಿ ಹುಡುಕಾಡಲು ಮಗಳು ಎಲ್ಲಿಯು ಕಾಣಲಿಲ್ಲ, ಕಾರಣ ಮಗಳಾದ ಕು:ನೇಹಾಬೆಗಂ ಇವಳು ದಿನಾಂಕ 25-02-2021 ರಂದು ರಾತ್ರಿ 12:30 ಗಂಟೆಯಿಂದ 01:00 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ, ಅವಳ ಚಹರೆ ಪಟ್ಟಿ 1) ದುಂಡು ಮುಖ, ದಪ್ಪ ಮೂಗು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, 2) 5 ಅಡಿ ಎತ್ತರ ಇರುತ್ತಾಳೆ, 3) ಅವಳ ಮೈ ಮೇಲೆ ಗುಲಾಬಿ ಬಣ್ಣದ ನೂರಿ ಡ್ರೇಸ್ ಮತ್ತು ಕಪ್ಪು ಬಣ್ಣದ ಬುರ್ಖ ಇರುತ್ತದೆ, 4) ಅವಳು ಹಿಂದಿ ಮತ್ತು ಉರ್ದು ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 09/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 25-02-2021 ರಂದು ಅಟ್ಟರಗಾ ಗ್ರಾಮದ ಹೊವರಲಯದಲ್ಲಿ ಅರಣ್ಯ ಪ್ರದೇಶದ ರೋಡಿಗೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟಿಕ ಚೀಲದಲ್ಲಿ ಸಾರಾಯಿ ಇಟ್ಟುಕೊಂಡು ಮಾರಾಟಾ ಮಾಡುತ್ತಿದ್ದಾನೆ ಅಂತ ಚಂದ್ರಶೇಖರ ಎಎಸಐ ಮೇಹಕರ ಪೊಲೀಸ್ ಠಾಣೆ ರವರಿಗೆ ಖಚಿತಿ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಟ್ಟರಗಾ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸದರಿ ಅರಣ್ಯದಲ್ಲಿ ಹೋಗುವ ರೋಡಿಗೆ ಅಟ್ಟರಗಾ ಮೇಹಕರ ರೋಡಿಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಭು ತಂದೆ ಶಂಕರ ಜಾಧವ ವಯ: 42 ವರ್ಷ, ಜಾತಿ: ಲಮಾಣಿ, ಸಾ: ಸಾಯಗಾಂವ ತಾಂಡಾ ಇತನು ತನ್ನ ಮುಂದೆ ಪ್ಲಾಸ್ಟಿಕ ಚೀಲದಲ್ಲಿ ಸಾರಾಯಿ ಇಟ್ಟುಕೊಂಡು ಸರಾಯಿ ಮಾರಾಟ ಮಾಡುತ್ತಾ ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಅವನ ಮೇಲೆ ಒಮ್ಮೆಲೆ ದಾಳಿ ಮಾಡಿ ಅವನನ್ನು ಹಿಡಿದುಕೊಂಡು ಅವನ ಬಳಿ ಸಾರಾಯಿ ಮಾರಾಟ ಮಾಡುವ ಸಂಬಂಧ ಯಾವುದಾದರೂ ಪ್ರಾಧಿಕಾರದಾಗಲಿ ಇಲ್ಲವೇ ಸರಕಾರದ ಪರವಾನಿಗೆ ಇದೆಯಾ? ಅಂತ ಕೇಳಿದಾಗ ಅವನು ತನ್ನ ಬಳಿ ಯಾವುದೇ ಸಾರಾಯಿ ಮಾರಾಟ ಸಂಬಂಧ ಯಾವುದೇ ಪರವಾನಿಗೆ ಇರುವುದಿಲ್ಲ ನಾನು ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ, ನಂತರ ಅವನ ಮುಂದೆ ಇರುವ ಸಾರಾಯಿಯನ್ನು ಪಂಚರ ಸಮಕ್ಷಮ ಪರಿಶೀಲಿಸಿದಾಗ ಒಂದು ಪ್ಲಾಸ್ಟಿಕ ಚೀಲದಲ್ಲಿ 90 ಎಮ್.ಎಲ್ ವುಳ್ಳ 96 ಯು.ಎಸ ವಿಸ್ಕಿ ಪ್ಲಾಸ್ಟಿಕ ಬಾಟಲಗಳುಳ್ಳ ಪ್ಲಾಸ್ಟಿಕ ಚೀಲ ಅ.ಕಿ 3372/- ರೂ. ಇರುತ್ತದೆ, ನಂತರ ಪಂಚರ ಸಮಕ್ಷಮ ಸದರಿ ಸಾರಾಯಿ ಬಾಟಲಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.