ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-06-2020
ಹುಮನಾಬಾದ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ 76/2020 ಕಲಂ 3 & 7 ಇ.ಸಿ. ಕಾಯ್ದೆ :-
ದಿನಾಂಕ
31/05/2020 ರಂದು 1415 ಗಂಟೆಗೆ ಫೀರ್ಯಾದಿ ಶ್ರೀ ವೆಂಕಟರಾವ ಆಹಾರ
ನಿರೀಕ್ಷಕರು ಹುಮನಾಬಾದ ಠಾಣೆಗೆ ಹಾಜರಾಗಿ ನೀಡಿದ
ದೂರಿನ ಸಾರಾಂಶವೆನೆಂದರೆ ದಿನಾಂಕ 31/05/2020 ರಂದು ಎ.ಪಿ.ಎಂ.ಸಿ ಮಾರುಕಟ್ಟೆ ಅಂಗಡಿ ಸಂಖ್ಯೆ 29 ರಲ್ಲಿ ಅಕ್ರಮವಾಗಿ ಪಿ.ಡಿ.ಸೆ ಅಕ್ಕಿ, ಗೋಧಿ ಹಾಗೂ ತೋಗರಿ ಬೆಳೆ ಸಂಗ್ರಹಿಸರುತ್ತಾರೆ ಅಂತಾ
ಭಾತ್ಮಿ ಬಂದ ಮೇರೆಗೆ ಹೋಗಿ ನೋಡಲು ವಿಷಯ ನಿಜವಿದ್ದು ಅಕ್ಕಿ 5.5 ಕ್ವಂಟಲ, ಗೋಧಿ 3 ಕ್ವಿಂಟಲ ಮತ್ತು ತೋಗರಿ ಬೆಳೆ 2.5 ಕ್ವಿಂಟಲ ಜಪ್ತಿ ಮಾಡಿಕೊಂಡು ಫಿರ್ಯಾದಿಯವರು ಈ
ಎಲ್ಲ ವಸ್ತುಗಳು ಜಪ್ತಿ ಮಾಡುವಾಗ ಆರೋಪಿ ಮೋಬಿನ್ ಸಾಬ ತಂದೆ ಮೋಹಿನ ಸಾಬ, ಪಟೇಲ, ವಯ 23 ವರ್ಷ ಸಾ. ಮಂಗಲಗಿ
ಇವನು ನಮ್ಮ ಕಣ್ಣು ತಪ್ಪಿಸಿ ಓಡಿ ಹೋಗಿರುತ್ತಾನೆ. ಜಪ್ತಿ ಮಾಡಿದ ಮುದ್ದೆ ಮಾಲ ಹಾಗೂ ಅಸಲು
ಜಪ್ತಿ ಪಂಚನಾಮೆ ಈ ಪತ್ರದೊಂದಿಗೆ ಹಾಜರಪಡಿಸುತ್ತಿದ್ದು ಓಡಿ ಹೋದ ಆರೋಪಿಯ ವಿರುದ್ಧ ಕಲಂ 3 & 7 ಇ.ಸಿ ಎಕ್ಟ ನೇಧ್ದರ ಅಡಿಯಲ್ಲಿ ಕ್ರಮ ಕೈಕೊಳಲು ವಿನಂತಿ
ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಭಾಲ್ಕಿ ನಗರ ಪೊಲೀಸ್
ಠಾಣೆ ಅಪರಾಧ ಸಂಖ್ಯೆ 129/2020 ಕಲಂ 32, 34 ಕೆ.ಇ. ಎಕ್ಟ್ ಮತ್ತು 143, 188, 202, 269, 270 ಐಪಿಸಿ :-
ದಿನಾಂಕ 30-05-2020 ರಂದು 2200 ಗಂಟೆಗೆ ಪಿಐ ರವರು ಠಾಣೆಯಲ್ಲಿ ಇದ್ದಾಗ ಭಾಲ್ಕಿ-ಹುಮನಾಬಾದ ರೋಡಿ ಬದಿಯಲ್ಲಿ ಆದಿತ್ಯಾ ಕಾಲೇಜ
ಎದುರುಗಡೆ ಇರುವ ಭವಾನಿ ಧಾಬಾದ ಮಾಲಿಕ ಅಂಕೂಶ ಸಾಯಿಗಾಂವ ಮತ್ತು ಮ್ಯಾಜೇಜರ ಅರವಿಂದ ತಂದೆ
ರಾಜಕುಮಾರ ಸಾ: ದೇವಿ ನಗರ ಭಾಲ್ಕಿ ಕೂಡಿಕೊಂಡು ಸಂಬಂಧ ಪಟ್ಟ ಇಲಾಖೆಯಿಂದ ಯಾವದೆ ಅನುಮತಿ ಇಲ್ಲದೆ
ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವ ಕುರಿತು ತಮ್ಮ ವಶದಲ್ಲಿ ಇಟ್ಟುಕೊಂಡು ಜನರಿಗೆ ಮಾರಾಟ
ಮಾಡುತ್ತಿದ್ದಾರೆ ಮತ್ತು ಕರೋನಾ ವೈರಸ್ ನಿಮತ್ಯ ಜಿಲ್ಲಾಧೀಕಾರಿ ಬೀದರ ರವರು ನಿಶೇದಾಜ್ಞೆ
ಹೊರಡಿಸಿದ್ದಾಗಿಯೂ, ಸಾರ್ವಜನಿಕರಿಗೆ ಊಟದ ಪದಾರ್ಥಗಳು ತಯ್ಯಾರಿಸಿ ಧಾಬಾದಲ್ಲಿ ಕೂಂಡ್ರಿಸಿ ಊಟ
ಮಾಡಿಸುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ, ಸಿಬ್ಬಂದಿಯೊಂದಿಗೆ ಹೋಗಿ ಧಾಬಾದಲ್ಲಿ ಧಾಬಾದ ಮಾಲಿಕ ಅಂಕೂಶ ಮತ್ತು ಮ್ಯಾನೇಜರ ಅರವಿಂದ ಹಾಗೂ ಇತರೇ ಸುಮಾರು 10-12 ಜನರು ಇರುವುದನ್ನು ನೋಡಿ 2240 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಿ 1) 180ಎಂ.ಎಲ್.ವುಳ್ಳ ಮಾಕ್ಡೊಲ್ ವಿಸ್ಕಿಯ 4 ಮಧ್ಯದ ಬಾಟೇಲಗಳು ಇದ್ದು ಒಂದೊಂದರ ಬೆಲೆ ರೂ. 162=22 ಇರುತ್ತದೆ, 2) 180ಎಂ.ಎಲ್.ವುಳ್ಳ ಇಂಪಿರಿಯಲ್ ಬ್ಲೂ ವಿಸ್ಕಿಯ 7 ಮಧ್ಯದ ಬಾಟೇಲಗಳು ಇದ್ದು ಒಂದೊಂದರ ಬೆಲೆ ರೂ. 198=21, 3) 180ಎಂ.ಎಲ್.ವುಳ್ಳ ಬ್ಲೆಂಡರ್ಸ್ ಪ್ರೈಡ್ ವಿಸ್ಕಿಯ 1 ಮಧ್ಯದ ಬಾಟೇಲ ಇದ್ದು ಅದರ ಬೆಲೆ ರೂ. 451=81, 4) 180ಎಂ.ಎಲ್.ವುಳ್ಳ ಬ್ಯಾಗ್ಪೆಪರ್ ವಿಸ್ಕಿಯ 6 ಮಧ್ಯದ ಬಾಟೇಲಗಳು ಇದ್ದು ಒಂದೊಂದರ ಬೆಲೆ ರೂ. 90=21, 5) 180ಎಂ.ಎಲ್.ವುಳ್ಳ ಓಲ್ಡ್ ಟಾವರಿನ್ ವಿಸ್ಕಿಯ 2 ಮಧ್ಯದ ಪೆಪರ್ ಪೌಚ್ಗಳು ಇದ್ದು ಒಂದೊಂದರ ಬೆಲೆ ರೂ. 74=13, 6) 90ಎಂ.ಎಲ್.ವುಳ್ಳ ಓರಿಜಿನಲ್ ಚ್ಯೋಯಿಸ್ ವಿಸ್ಕಿಯ ಮಧ್ಯದ
ಪ್ಲಾಸ್ಟಿಕ್ ಬಾಟೇಲ್ ಇದ್ದು ಒಂದೊಂದರ ಬೆಲೆ ರೂ. 35=13, 7) 90ಎಂ.ಎಲ್.ವುಳ್ಳ ಯು.ಎಸ್. ವಿಸ್ಕಿಯ ಮಧ್ಯದ ಪ್ಲಾಸ್ಟಿಕ್
ಬಾಟೇಲ್ ಇದ್ದು ಒಂದೊಂದರ ಬೆಲೆ ರೂ. 30=32 ಇದ್ದವು. ಸದರಿ ಭಾವಾನಿ ಧಾಬಾದ ಮಾಲಿಕ ಮತ್ತು ಮ್ಯಾನೇಜರ ಸರ್ಕಾರದ ಪರವಾನಿಗೆ ಮತ್ತು ಯಾವದೇ ಅನುಮತಿ ಪತ್ರ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದು ಅಲ್ಲದೇ ಸದ್ಯ ಕರೋನಾ ಸೊಂಕು
ಹರಡಿರುವುದರಿಂದ ಮಾನ್ಯ ಜಿಲ್ಲಾಧೀಕಾರಿಯವರು ಜಿಲ್ಲೆಯಾದಾಂತ ನಿಶೇದಾಜ್ಞೆ ಹೊರಡಿಸಿದಾಗಿಯೂ, ಅಪಾಯಕಾರಿಯಾದ ಸೊಂಕನ್ನು ಒಬ್ಬರಿಂದ ಮತ್ತೊಬ್ಬರಿಗೆ
ಹರಡುತ್ತದೆ ಎಂಬ ವಿಷಯಗೊತ್ತಿದ್ದು ಸೊಂಕನ್ನು ಹರಡಿಸುವ ಉದ್ದೇಶದಿಂದ ಜನರಿಗೆ ಅಕ್ರಮ ಕೂಟ
ಸೇರಿಸಿರುತ್ತಾರೆ. ಸದರಿಯವರು ಸ್ಥಳದಲ್ಲಿ ಬಿಟ್ಟು ಹೋದ ಅಂದಾಜು 3,576/- ರೂಪಾಯಿ ಮೌಲ್ಯದ , ಮದ್ಯವನ್ನು ಜಪ್ತಿ ಮಾಡಿಕೊಂಡು, ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.