ಆಕ್ರಮ
ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 14-05-2017 ರಂದು
ಶಿವಪೂರ ಗ್ರಾಮದ ಕಡೆಯಿಂದ ಒಬ್ಬ
ವ್ಯಕ್ತಿ ತನ್ನ
ಟ್ಯಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು
ತುಂಬಿಕೊಂಡು ಅಫಜಲಪೂರ ಕಡೆ
ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ
ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಬನ್ನಟ್ಟಿ ಕ್ರಾಸ
ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ಯಾಕ್ಟರ ಮರಳು
ತುಂಬಿಕೊಂಡು ಬರುತ್ತಿತ್ತು.
ಆಗ
ಸದರಿ
ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ
ಸೂಚನೆ
ಕೊಟ್ಟಾಗ,
ಟ್ರ್ಯಾಕ್ಟರ ಚಾಲಕ
ನಮ್ಮ
ಪೊಲೀಸ್ ಜೀಪನ್ನು ನೋಡಿ
ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ
ಹೋದನು.
ಪಂಚರ
ಸಮಕ್ಷಮ ಟ್ಯಾಕ್ಟರನ್ನು ಚೆಕ್ ಮಾಡಲಾಗಿ ಟ್ಯಾಕ್ಟರದಲ್ಲಿ ಮರಳು ಇತ್ತು
ಸದರಿ
ಟ್ಯಾಕ್ಟರ Mahindra Arjun Ultra-1 ಕಂಪನಿಯದು ಇದ್ದು
ಅದರ
ನಂ
ಕೆಎ-32
ಟಿಎ-6902
ಅಂತ
ಇದ್ದು
ಅ.ಕಿ
3,00,000/-ರೂ
ಇರಬಹುದು,
ಸದರಿ
ಟ್ಯಾಕ್ಟರದಲ್ಲಿದ್ದ ಮರಳಿನ ಅ.ಕಿ
3000/- ರೂ
ಆಗಬಹುದು ನಂತರ
ಸದರಿ
ಟ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ
ಪಡಿಸಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.
ಮೊಸ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಜೇವರಗಿ ಷಣ್ಮುಖ ಶಿವಯೋಗಿಗಳ ಮಠ ಹಿಂದೆ ಹಿದ್ದ ಮಹಾ ಸ್ವಾಮಿಗಳು ಶ್ರೀ. ಮ. ನಿ.
ಪ್ರ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಲಿಂಗೈಕ್ಯ ಆದ ನಂತರ ಇಲ್ಲಿಯವರೆಗೆ ನಾವು ಸ್ವಾಮಿಗಳು ನೇಮಕ
ಮಾಡಿರುವದಿಲ್ಲ. ಕಾರಣ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು (ವಿಜಯಕುಮಾರ ಸ್ವಾಮಿಗಳು
ತಾಂಬಾಳ) ಮಹಾರಾಷ್ಟ್ರ ರಾಜ್ಯದ ಕಾಸರ ಶಿರಸಗಿ ಮಠದ ಪಿಠಾಧಿಪತಿಗಳಾಗಿದ್ದಾರೆ, ಆದರೆ ಈಗ ಇವರು
ದುರುದ್ದೇಶದಿಂದ ನಮ್ಮ ಶ್ರೀ ಮಠದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ಕೆಲವು ಜನರ ಅಕ್ರಮ ಕೂಟ
ರಚಿಸಿಕೊಂಡು ಸದರಿ ಜೇವರಗಿ ಶ್ರೀ ಷಣ್ಮುಖ ಶಿವಯೋಗಿಗಳ ವಿರಕ್ತ ಮಠದ ಪಿಠಾಧೀಪತಿಗಳೆಂದು
ಹೇಳಿಕೊಳ್ಳುವದರ ಮೂಲಕ ಕರ ಪತ್ರದಲ್ಲಿಯು ಅಂದರೆ ಜೇವರಗಿ ತಾಲ್ಲೂಕಿನ ಹಾಲಗಡ್ಲಾ ಗ್ರಾಮದ ಹನುಮಾನ
ಮಂದಿರದ ಜೀರ್ಣೋದ್ಧಾರ ಸಮೀತಿಯ ಅಧ್ಯಕ್ಷ್ಯರಾದ ಶ್ರೀ ಶಂಕರಗೌಡ ಪಾಟೀಲ ಹಾಲಗಡ್ಲಾ ಇವರೊಂದಿಗೆ
ಸೇರಿ ಆ ಊರಿನ ಕಾರ್ಯಕ್ರಮ ಒಂದರಲ್ಲಿ ದಿನಾಂಕ 04.005.2017 ರ ಈ ಕಾರ್ಯಕ್ರಮದಲ್ಲಿ ಈ ಸ್ವಾಮಿಯು
ಅಂದರೆ ಶ್ರೀ. ಮ.ನಿ.ಪ್ರ ವಿಜಯಕುಮಾರ ಸ್ವಾಮಿಗಳು ಶ್ರೀ ಷಣ್ಮೂಖ ಶಿವಯೋಗಿ ಮಠ ಜೇವರಗಿ ಅಂತ
ಮುದ್ರಿಸಿ ತಪ್ಪು ಹುದ್ದೆಯನ್ನು ಸೃಷ್ಠಿಸಿರುತ್ತಾರೆ. ಕಾರಣ ಇವರಿಬ್ಬರ ಮೇಲೆ ಮೇಲಿನ ವಿಷಯದ
ಪ್ರಕಾರ ಕಾನೂನು ಪ್ರಕಾರ ಕ್ರಮ ಕೈಕಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ