ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-03-2020
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 11/2020, ಕಲಂ. 363 ಐಪಿಸಿ :-
ರವಿಂದ್ರ ತಂದೆ ಸುಬ್ಬಣ್ಣಾ ಚಟ್ನಳ್ಳಿ ವಯ: 39 ವರ್ಷ, ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪದವಿ ಪುರ್ವ ವಿಜ್ಞಾನ ಕಾಲೇಜು ಕಮಠಾಣ ತಾ:ಜಿ: ಬೀದರ ಇವರು ಠಾಣಗೆ ಹಾಜರಾಗಿ ದೂರು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ಕಾಲೆಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಕು: ಸ್ವಾಮಿದಾಸ ತಂದೆ ತುಕಾರಾಮ ವಯ: 17 ವರ್ಷ, ಸಾ: ಮುಗನುರ ಇವನು ಪಿಯುಸಿ ದ್ವೀತಿಯ ವರ್ಷದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಆತನು ಸುಮಾರು ದಿವಸದಿಂದ ವಸತಿ ಶಾಲೆಯಲ್ಲಿದ್ದ ಬೇರೆ ಬೇರೆ ಮಕ್ಕಳಿಗೆ ಚುಡಾಯಿಸುವುದು, ಹೆದರಿಸುವುದು ಮಾಡುತ್ತಿದ್ದನು, ಅದಕ್ಕಾಗಿ ವಾರ್ಡನ ರವರಾದ ಗೌತಮ ಕುದರೆ ಇವರು ನನಗೆ ತಿಳಿಸಿದಾಗ ಅವರ ಪಾಲಕರನ್ನು ಕರೆಯಿಸಿ ತಿಳಿಸಿದಾಗ ಅವರು ಸ್ವಾಮಿದಾಸನಿಗೆ ಈ ರೀತಿ ಮಾಡುವುದು ಸರಿಯಿಲ್ಲಾ ಅಂತ ಬುದ್ದಿ ಮಾತು ಹೇಳಿರುತ್ತಾರೆ, ಆದರೂ ಸಹ ಅವನು ವಸತಿ ನಿಲಯದ ಕಿಡಕಿ ಗ್ಲಾಸುಗಳು ಒಡೆಯುವುದು ಹಾಗೆ ಬೇರೆ ಬೇರೆ ವಿಧ್ಯಾರ್ಥಿಗಳಿಗೆ ಹೆದರಿಸುವುದು ಮಾಡುತ್ತಿದ್ದರಿಂದ ನಾನು ಮತ್ತು ವಾರ್ಡನ ಗೌತಮ ಸೇರಿ ಈ ರೀತಿ ಮಾಡುವುದು ಸರಿಯಿಲ್ಲಾ ಅಂತ ಬುದ್ದಿ ಮಾತು ಹೇಳಿರುತ್ತೇವೆ, ನಂತರ ದಿನಾಂಕ 11-03-2020 ರಂದು 2130 ಗಂಟೆಗೆ ವಸತಿ ಗೃಹದಲ್ಲಿ ಸ್ವಾಮಿದಾಸ ಇವನು ವಿಧ್ಯಾರ್ಥಿಗಳೊಂದಿಗೆ ಗಲಾಟೆ ಮಾಡುತ್ತಿದ್ದಾಗ ವಾರ್ಡನ ರವರು ಈ ವಿಷಯವನ್ನು ನನಗೆ ತಿಳಿಸಿದಾಗ ನಾನು ಪೊಲೀಸ್ ಠಾಣೆಗೆ ಈ ವಿಷಯ ತಿಳಿಸಿದೆನು ಆಗ ಪೊಲೀಸರು ವಸತಿ ಗೃಹಕ್ಕೆ ಬರುವುದನನ್ನು ಸ್ವಾಮಿದಾಸ ಇವನು ನೋಡಿ ಅಲ್ಲಿಂದ ಕಂಪೌಂಡ ಹಾರಿ ಓಡಿ ಹೋಗಿರುತ್ತಾನೆ, ರಾತ್ರಿ ಅವನ ಪಾಲಕರಿಗೆ ವಾರ್ಡನರವರು ಕರೆ ಮಾಡಿದಾಗ ಅವರ ಮೊಬೈಲ ಸ್ವೀಚ್ಚ ಆಫ ಅಂತ ಹೇಳಿರುತ್ತದೆ, ನಂತರ ದಿನಾಂಕ 12-03-2020 ರಂದು ನಮ್ಮ ವಾರ್ಡನ ರವರು ಅವರ ಪಾಲಕರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿರುತ್ತಾರೆ, ನಂತರ ಅವನ ಪಾಲಕರು ಶಾಲೆಗೆ ಬಂದು ನಮ್ಮ ಜೊತೆ ಮಾತನಾಡಿ ನಂತರ ನನಗೆ ನಮ್ಮ ಮಗ ಕಾಣೆಯಾಗಿದ್ದಾನೆ ಅವನಿಗೆ ಹುಡುಕಿ ಕೊಡಿರಿ ಅಂತ ತಿಳಿಸಿರುತ್ತಾರೆ, ಸ್ವಾಮಿದಾಸ ಇವನ ಮೈಮೇಲೆ ಸ್ಕಾಯಿ ಬ್ಲೂ ಶರ್ಟ, ಕಪ್ಪು ಪ್ಯಾಂಟ ಇದ್ದು, ಸಾಧಾರಣ ಮೈಕಟ್ಟು, ಎತ್ತರ ಅಂದಾಜು 5 ಅಡಿ, ಕಪ್ಪು ಬಣ್ಣವನಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯಹವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 14/2020, ಕಲಂ. 366(ಎ) ಐಪಿಸಿ ಮತ್ತು ಕಲಂ. 12 ಪೊಕ್ಸೊ ಕಾಯ್ದೆ :-
ದಿನಾಂಕ
30-01-2020 ರಂದು 1700 ಗಂಟೆಯ ಸುಮಾರಿಗೆ ಫಿರ್ಯಾದಿ ವಿಶ್ವನಾಥ ತಂದೆ ಕಂಟೆಪ್ಪಾ ವಡ್ಡೆ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ನ್ಯೂ ಆದರ್ಶ ಕಾಲೋನಿ, ಬೀದರ ರವರ ಮಗಳಾದ ಸ್ನೇಹಾ ವಯ: 17 ವರ್ಷ 7 ತಿಂಗಳು ಇವಳು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಬಂದಿರುªÀದಿಲ್ಲ, ಆಕೆಯನ್ನು ಫಿರ್ಯಾದಿಯು ತನ್ನ ಹೆಂಡತಿ, ಭಾವ, ಸೋದರಮಾವ ರವರೆಲ್ಲರೂ ಕೂಡಿ ಬೀದರದಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರೂ ಪತ್ತೆ ಆಗಿರುವದಿಲ್ಲ, ಅವಳನ್ನು ಆರೋಪಿ ಆಕಾಶ ತಂದೆ ಪ್ರೇಮನಾಥ ಡಾಂಗೆ ವಯ: 30 ವರ್ಷ, ಜಾತಿ: ಎಸ್.ಸಿ, ಸಾ: ಚಿಟ್ಟಗುಪ್ಪಾ, ಸದ್ಯ: ಅಂಬೇಡ್ಕರ್ ಕಾಲೋನಿ, ಬೀದರ ಇತನು ಮಗಳಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಫುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗುವದನ್ನು ಫಿರ್ಯಾದಿಯವರ ಗೆಳೆಯನಾದ ಬಸವರಾಜ ತಂದೆ ಶಿವಪುತಿರ್ ರವರು ಕಣ್ಣಾರೆ ನೋಡಿರುತ್ತಾರೆ,
ಆಕೆಯನ್ನು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆ ಆಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-03-2020 ರಂದು
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 15/2020, ಕಲಂ. 498(ಎ), 323, 504 ಜೊತೆ 34 ಐಪಿಸಿ 3 & 4 ಡಿ.ಪಿ ಕಾಯ್ದೆ :-
ಫಿರ್ಯಾದಿ
ಜ್ಯೋತಿ ಗಂಡ ವಿಠ್ಠಲ್ಸಿಂಗ್ ವಯ: 27 ವರ್ಷ, ಜಾತಿ: ರಾಜಪುತ, ಸಾ: ಚಾಂಡೇಶ್ವರ, ಸದ್ಯ: ರಾಮ ನಗರ, ಬೀದರ ರವರ ಮದುವೆಯು ಚಾಂಡೇಶ್ವರ ಗ್ರಾಮದ ವಿಜಯಸಿಂಗ್ ರವರ ಮಗನಾದ ವಿಠ್ಠಲಸಿಂಗ್ ಇತನ ಜೊತೆಯಲ್ಲಿ ದಿನಾಂಕ 04-01-2016 ರಂದು
ತಮ್ಮ ಧರ್ಮದ ಪ್ರಕಾರ ಕೆ.ಇ.ಬಿ ಫಂಕ್ಷನ ಹಾಲದಲ್ಲಿ ಆಗಿರುತ್ತದೆ, ಮದುವೆಯಲ್ಲಿ ಫಿರ್ಯಾದಿಯವರ ತಂದೆಯವರು ಗಂಡನಿಗೆ ವರೋಪಚಾರವಾಗಿ 30 ಗ್ರಾಂ. ಬಂಗಾರ ಅ.ಕಿ 1,50,000/- ರೂ.
ಕೊಟ್ಟು ಅಂದಾಜು 2 ಲಕ್ಷ ರೂಪಾಯಿ ಖರ್ಚು ವiÁಡಿ ಮದುವೆ ಮಾಡಿ ಕೊಟ್ಟಿರುತ್ತಾರೆ,
ಫಿರ್ಯಾದಿಗೆ ಆರೋಪಿತರಾದ ಗಂಡ ವಿಠ್ಠಲಸಿಂಗ್, ಅತ್ತೆ ಶೋಭಾಬಾಯಿ, ಮಾವ ವಿಜಯಸಿಂಗ್ ತಂದೆ ಮೊಹನ ಸಿಂಗ್, ಮೈದುನ ಕಿಶನ್ಸಿಂಗ್ ಎಲ್ಲರು ಸಾ: ಚಾಂಡೇಶ್ವರ ಇವರೆಲ್ಲರೂ ಮದುವೆಯಾದ ಸ್ವಲ್ಪ ದಿವಸಗಳ ಕಾಲ ಮಾತ್ರ ಚೆನ್ನಾಗಿ ನೋಡಿಕೊಂಡು ನಂತರ ಗಂಡ ಸಾರಾಯಿ ಕುಡಿಯುವ ಚಟದವನಾಗಿ ಸರಾಯಿ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಿದ್ದನು ಹಾಗೂ ಉಳಿದ ಆರೋಪಿತರು ಹಮಾರೆ ಘರಮೆ ರಹೆನಾ ಬೊಲೆತೋ ತೇರೆ ಮಾ ಬಾಪಸೆ ಅಭೀ 3 ಲಾಕ್ ಪೈಸೆ ಲಾಕೆ ದೇನಾ, ಪೈಸಾ ಲಾಕೆ ದಿಯೇ ತೋ ಘರಮೆ ರಖಲೇತೆ ಅಂತ ಜಗಳ ಮಾಡಿ ತಲೆಯ ಕೂದಲು ಹಿಡಿದು ಏಳೆದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾರೆ, ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಹೆಚ್ಚಿನ ವರದಕ್ಷಿಣೆ ತರುವ ಕುರಿತು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಕಾರಣ ಫಿರ್ಯಾದಿಗೆ ಹೆಚ್ಚಿನ ವರದಕ್ಷಿಣೆ ತರುವ ಕುರಿತು ಸದರಿ ಆರೋಪಿತರು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 12-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ.
22/2020, ಕಲಂ. 498(ಎ),
323, 504, 506 ಜೋತೆ 34 ಐಪಿಸಿ
:-
ಫಿರ್ಯಾದಿ ಸರಸ್ವತಿ ಗಂಡ ಬಸವರಾಜ ಬೋವಿ ಸಾ: ಮನ್ನಾಎಖೇಳ್ಳಿ ರವರಿಗೆ 14 ವರ್ಷಗಳ ಹಿಂದೆ ಮನ್ನಾಎಖೇಳ್ಳೀ ಗ್ರಾಮದ ಬಸವರಾಜ ಬೋವಿ ಇವನೊಂದಿಗೆ ಹಿಂದು
ಸಂಪ್ರದಾಯ ಪ್ರಕಾರ ಮದುವೆ ಆಗಿದ್ದು ಇರುತ್ತದೆ, ಫಿರ್ಯಾದಿಗೆ 1) ನಿಕೀತಾ ವಯ 12 ವರ್ಷ, 2) ನಾಗಮಣಿ ವಯ 6 ವರ್ಷ, 3) ಮೀನಾಕ್ಷಿ ವಯ 5 ವರ್ಷ, 4) ಸಂಜನಾ ವಯ 3 ವರ್ಷ ಹೀಗೆ 4 ಜನ ಹೆಣ್ಣು ಮಕ್ಕಳು ಇರುತ್ತಾರೆ, ಅಲ್ಲದೆ ಸದ್ಯಕ್ಕೆ 3 ತಿಂಗಳ ಗರ್ಭಿಣಿ
ಇದ್ದು, ಆಗಾಗ 2-3 ವರ್ಷಗಳಿಂದ ಗಂಡ ಒಂದಲ್ಲಾ ಒಂದು ರೀತಿ ತೊಂದರೆ ಕೊಡುತ್ತಲೆ ಬಂದಿರುತ್ತಾನೆ, ಈಗ ಸುಮಾರು 10 ದಿನಗಳಿಂದ ಮಗಳಿಗೆ ಜ್ವರ ಬಂದಿರುತ್ತದೆ ಆಸ್ಪತ್ರೆಗೆ ಚಿಕಿತ್ಸೆ ಸಲುವಾಗಿ 200/- ರೂ. ಕೇಳಿದ್ದು, ದಿನಾಂಕ 12-03-2020 ರಂದು ಮಗಳಾದ ಸಂಜನಾ ಇವಳಿಗೆ ಆಸ್ಪತ್ರೆಗೆ
ಕರೆದುಕೊಂಡು ಬರುವಾಗ ತಮ್ಮೂರ ಕೋಮಟಿ ಕಾಂಪ್ಲೆಕ್ಸ ಮುಂದೆ ರೊಡಿನ ಮೇಲೆ ಗಂಡ ಜಗಳ ತೆಗೆದು ನೀನು ಬರೀ ಹೇಣ್ಣು ಮಕ್ಕಳಿಗೆ ಹಡಿದಿದ್ದಿ ನಿನಗೆ
ಗಂಡು ಮಕ್ಕಳು ಆಗುವುದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು,
ನಾ ಹಣ ಕೊಡುವುದಿಲ್ಲಾ, ಮದುವೆ ಆದಾಗಿನಿಂದ ಇಲ್ಲಿಯವರೆಗೆ ಇದೇ ರೀತಿ ಮಾಡುತ್ತಿದ್ದಿ ನೀನು ಸರಿಯಿಲ್ಲಾ , ನಿನ್ನ ನಡತೆ ಸರಿಯಿಲ್ಲಾ ನನ್ನ ಮನೆಯಲ್ಲಿ ಇರಬೇಡ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ಧಾನೆ, ಅತ್ತೆಯು ಸಹ ನಿ ಅವಾರಾ
ಇದ್ದಿ ಈ ಮಕ್ಕಳು ನನ್ನ ಮಗನಿಗೆ ಹುಟ್ಟಿಲ್ಲಾ ಅಂತಾ ಬೈದು
ಕೈಯಿಂದ ಕಪಾಳದ ಮೇಲೆ ಹೋಡೆದಿರುತ್ತಾಳೆ, ನಾದುಣಿ
ಸರಸ್ವತಿ ಇವಳು ಬಂದು ಹಲಕಟ
ನೀ ಅವಾರಾ
ಇದ್ದಿ, ನಮ್ಮ ಅಣ್ಣನಿಗೆ ಬರಬಾದ ಮಾಡಿದಿ ಅಂತಾ ಬೈದು
ಕೈಯಿಂದ ಬಲಗೈ ಒಡ್ಡು
ಮುರಿದಿರುತ್ತಾಳೆ, ಪಿರ್ಯಾದಿಯು ಸದರಿ ಆರೋಪಿತರಿಗೆ ಹೀಗೇಕೆ ಎಲ್ಲರೂ ಕೂಡಿ ನನಗೆ ತೊಂದರೆ ಕೊಡುತ್ತಿದ್ದಿರಿ ಅಂತಾ ಕೇಳಲು ಅವರೆಲ್ಲರೂ ಸೇರಿ ಏ ಹಲಕಟ್
ನೀ ನಮ್ಮ ಮನ್ಯಾಗ ಇದ್ದಿ ಅಂದರೆ ನಿನಗೆ ಇಡುವುದಿಲ್ಲ ಜೀವ ಸಹಿತ ಹೊಡೆದು ಹಾಕುತ್ತೆವೆ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ, ಈ ಜಗಳದ ಗುಲ್ಲು ಕೇಳಿ ಓಣಿಯವರಾದ ತುಕ್ಕಮ್ಮಾ ಮತ್ತು ಸೆನೋಜಿ ಇವರು ಬಂದು ಜಗಳ ಬಿಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಲ್ಳಲಾಗಿದೆ.
ಬಸವಕಲ್ಯಾಣ
ನಗರ ಪೊಲೀಸ್ ಠಾಣೆ ಅಪರಾಧ ಸಂ. 31/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 12-03-2020 ರಂದು ಬಸವಕಲ್ಯಾಣ ನಗರದ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು
ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ
ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ.ಐ
[ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ
ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ತಮ್ಮ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ
ತ್ರೀಪೂರಾಂತ ಮಡಿವಾಳ ಚೌಕ್
ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನರಸಪ್ಪಾ ತಂದೆ ಜಗನ್ನಾಥ ಬೋಕ್ಕೆ ವಯ: 21 ವರ್ಷ, ಜಾತಿ: ಕಬ್ಬಲಿಗ, ಸಾ: ತ್ರೀಪೂರಾಂತ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ
ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರೂ ಒಮ್ಮೇಲೆ ದಾಳಿ ಮಾಡಿ ಹಿಡಿದು ಅವನ ಅಂಗ
ಶೋಧನೆ ಮಾಡಲು ಅವನ
ಹತ್ತಿರ ನಗದು ಹಣ 610/- ರೂ. ಮತ್ತು 01 ಮಟಕಾ
ಚೀಟಿ ಹಾಗು ಒಂದು
ಬಾಲ್ ಪೆನ್ ಸಿಕ್ಕಿರುತ್ತದೆ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.