Police Bhavan Kalaburagi

Police Bhavan Kalaburagi

Monday, June 17, 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 16-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಗುಡ್ಡೆವಾಡಿ ಗ್ರಾಮದ ಭೀಮಾನದಿಯಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಮಾರ್ಗವಾಗಿ ಬಳೂರ್ಗಿ ಕಡೆ ಹೋಗುತ್ತೀದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಬಸ್ ಡಿಪೋ ಹತ್ತೀರ ಹೋಗಿ ನಿಂತಾಗ ಅಫಜಲಪೂರ ಪಟ್ಟಣದ ಬಸವೆಶ್ವಸರ ಚೌಕ ಕಡೆಯಿಂದ ಎರಡು ಮರಳು ತುಂಬಿದ ಟಿಪ್ಪರಗಳು ಬರುತ್ತಿದ್ದು ಟಿಪ್ಪರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟಿಪ್ಪರ ಚಾಲಕರು ಟಿಪ್ಪರ ನಿಲ್ಲಿಸಿ ಓಡಿ ಹೋದರು. ಆಗ ನಾನು ಮತ್ತು ಸಿಬ್ಬಂದಿ ಜನರು ಸದರಿಯವರಿಗೆ ಹಿಡಿಯಲು ಬೆನ್ನು ಹತ್ತಿ ಓಡಿದರು ಕೂಡ ಸದರಿ ಚಾಲಕರು ಸಿಕ್ಕಿರುವದಿಲ್ಲ ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಬ್ಯಾಟರಿ ಲೈಟಿನ ಸಹಾಯದಿಂದ ಚೆಕ್ಕ ಮಾಡಲು 1) ಟಿಪ್ಪರ ನಂ ಎಮ್.ಹೆಚ್-02 ಈಆರ್-9926 ನೇದ್ದು ಇದ್ದು ಅದರಲ್ಲಿ ಮರಳೂ ತುಂಬಿತ್ತು ಸದರಿ ಟಿಪ್ಪರ .ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 10.000/- ರೂ ಇರಬಹುದು. 2) ಎಮ್.ಹೆಚ್-13 ಸಿ.ಯು.-5319 ನೆದ್ದು ಇದ್ದು ಅದರಲ್ಲಿ ಮರಳು ತುಂಬಿತ್ತು ಸದರಿ ಟಿಪ್ಪರ .ಕಿ 10,00,000/-ರೂ ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 90/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 16-06-2019 ರಂದು 2:00 .ಎಮ್ ಕ್ಕೆ ಶ್ರೀ ಸಿದ್ದಪ್ಪ ತಂದೆ ವಿಠ್ಠಲ ಹೊದಲೂರ ಆರ್. ಕರಜಗಿ ವಲಯ ರವರು ಮತ್ತು ಮಾನ್ಯ ಮದುರಾಜ ತಹಸಿಲ್ದಾರರು ಅಫಜಲಪೂರ ರವರು ಮತ್ತು ಮಂಜುನಾಥ ಹುಗಾರ ಪಿ,ಎಸ್,.ಅಫಜಲಪೂರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಯವರು ಜಂಟಿ ಕಾರ್ಯಾಚರಣೆ ನಡೆಸಿ ಮಾಶಾಳ ಗ್ರಾಮದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಸಂಗ್ರಹಿಸಿ ಮರಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು ಅದರ ವಿವರ ಕೆಳಗಿನಂತೆ ಇರುತ್ತದೆ.  01 ಸರಕಾರಿ ಪಟ್ಟೆ ಭೂಮಿಯಲ್ಲಿ ಅಬ್ದುಲ ತಂದೆ ಮೈನುದ್ದಿನ ಬಿಂಗೊಳಿ ಸಾ||ಮಾಶಾಳ ಸರ್ವೇ ನಂ 741/1  ಸುಮಾರು 05 ಟ್ರಿಪ್ ಅ.ಕಿ/50,000/- 02 ಸಿದ್ದಪ್ಪ ತಂದೆ ಮಲ್ಲೇಶಪ್ಪ ಗೌರ ಸಾ||ಮಾಶಾಳ ಸರ್ವೇ ನಂ 443/1 ಸುಮಾರು 03 ಟ್ರಿಪ್  ಅ.ಕಿ. 30,000/-  ಒಟ್ಟು 08 ಟ್ರಿಪ್ ಅ.ಕಿ.80.000/- ರೂ ರೀತಿಯಾಗಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಸದರಿ ಘಟನೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 91/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಅಫಜಲಪೂ ಠಾಣೆ  : ದಿನಾಂಕ 14-06-2019 ರಂದು ಸಾಯಂಕಾಲ ಶ್ರೀಮತಿ ಜಯಶ್ರೀ ಗಂಡ ಬಸವರಾಜ ಗಂಗನಳ್ಳಿ ಸಾ: ಉಡಚಾಣ ರವರ ಮಗನಾದ ಬೀರಣ್ಣ ಈತನು ನಮ್ಮ ಸಮಾಜದ ತನ್ನ ಗೆಳೆಯರೊಂದಿಗೆ ಕೂಡಿ ಕ್ರಿಕೇಟ್ ಆಡಲು ಹೋಗಿರುತ್ತಾನೆ. ಕ್ರಿಕೇಟ್ ಆಡಿ ಮರಳಿ ನನ್ನ ಮಗನು ಮನೆಗೆ ಬಂದು ನಾನು ಮತ್ತು ಸಚಿನ ಸಿಂಗೆ ಇನ್ನು ಕೆಲವು ಜನರು ಕೂಡಿ ಕ್ರಿಕೇಟ್ ಆಡುತ್ತಿದ್ದಾಗ ನಮಗೂ ಮತ್ತು ನಮ್ಮ ಜೊತೆಗೆ ಕ್ರಿಕೇಟ್ ಆಡುತ್ತಿದ್ದ ಸತೀಶ ಕವಟಗಿ, ಶ್ರೀಮಂತ ತಳವಾರ ಇನ್ನಿತರರಿಗೂ ಜಗಳ ಆಗಿರುತ್ತದೆ ಎಂದು ತಿಳಿಸಿರುತ್ತಾನೆ. ಸಂಜೆ ನಾನು ನಮ್ಮ ಸಮಾಜದ ಬೌರಮ್ಮ ಕಿರಗಲ್ ರವರ ಮನೆಯ ಹತ್ತಿರ ಹಾದು ಮನೆಗೆ ಹೋಗುತ್ತಿದ್ದಾಗ ನಮ್ಮೂರಿನ ಮಹಾಂತೇಶ ತಂದೆ ಸಿದ್ದಪ್ಪ ನಂದಿಹಳ್ಳಿ ಈತನು ಬಂದು ಏನ್ರೊ ಹೊಲೆಯ ಸೂಳೆ ಮಕ್ಕಳೆ ನಮ್ಮ ಹುಡುಗರೊಂದಿಗೆ ಕ್ರಿಕೇಟ್ ಆಡಿ ಜಗಳ ತಗೆದು ಅವರನ್ನೆ ಹೊಡೆದು ಕಳಸಿರಿ ಎಂದು ನಮ್ಮ ಓಣಿಯಲ್ಲಿ ನಿಂತು ಜಾತಿ ಎತ್ತಿ ಬೈದು ಅಲ್ಲೆ ಇದ್ದ ಸಚೀನ ತಂದೆ ಜೈಭೀಮ ಸಿಂಗೆ ಈತನಿಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಅಲ್ಲೆ ಬಿದ್ದ ಒಂದು ಬಡಿಗೆ ತಗೆದುಕೊಂಡು ಹೊಡೆಯಲು ಹೋಗುತ್ತಿದ್ದನು, ಆಗ ನಾನು ಮತ್ತು ನನ್ನ ಮಗನಾದ ಬೀರಣ್ಣ ಇಬ್ಬರು ನೋಡಿ ಹೊಡೆಯುವುದನ್ನು ಬಿಡಿಸಲು ಹೋದಾಗ ನನಗೆ ಹೊಲೆಯ ರಂಡಿ ಬಿಡಿಸಲು ಬರುತ್ತಿ ಎಂದು ನನ್ನ ಸಿರೆ ಹಿಡಿದು ಎಳೆದು ನನ್ನನ್ನು ತಳ್ಳಿ ಬಿಡಿಸಲು ಬಂದ ನನ್ನ ಮಗನಾದ ಬೀರಣ್ಣನನ್ನು ಅದೆ ಬಡಿಗೆಯಿಂದ ಹೊಡೆದನು. ಆಗ ನನ್ನ ಮಗ ಕೆಳಗೆ ಬಿದ್ದಾಗ ಅದೆ ಬಡಿಗೆಯಿಂದ ಸಚಿನನ ತಲೆಯ ಮೇಲೆ ಹೊಡೆದನು. ಸದರಿಯವನು ನಮಗೆ ಹೊಡೆಯುತ್ತಿದ್ದಾಗ ನಮ್ಮೂರಿನ ಸಂಗಮೇಶ ಕಡ್ಲಾಜಿ, ಉಮೇಶ ಸಿಂದೆ, ರಮೇಶ ಸಿಂಗೆ, ಸಿದ್ದಪ್ಪ ಹತ್ತರಕಿ ಇವರು ಪ್ರತ್ಯಕ್ಷವಾಗಿ ನೋಡಿ ನಮಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ. ಆಗ ಮಹಾಂತೇಶನು ಹೊಲೆಯ ಸೂಳೆ ಮಕ್ಕಳೆ ನಮ್ಮ ಹುಡುಗರ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಭಯ ಹಾಕಿ ಬಡಿಗೆಯನ್ನು ಅಲ್ಲೆ ಬಿಸಾಕಿ ಹೋಗಿರುತ್ತಾನೆ. ಮಹಾಂತೇಶ ಈತನು ನಮಗೆ ಹೊಡೆದರಿಂದ ನನಗೆ ಮೈ ಕೈಗೆ ಒಳಪೆಟ್ಟು ಮತ್ತು ನನ್ನ ಮಗನಿಗೆ ಮೈ ಕೈಗೆ ಒಳಪೆಟ್ಟು ಹಾಗೂ ಸಚಿನ ಸಿಂಗೆ ಈತನ ತಲೆಗೆ ರಕ್ತಗಾಯ ಮತ್ತು ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆ  ಗುನ್ನೆ ನಂ 89/2019 ಕಲಂ 323, 324, 354 (B), 504, 506 IPC & 3 (1)(i)(r)(w) SC/ST PA Act ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.