Police Bhavan Kalaburagi

Police Bhavan Kalaburagi

Friday, May 21, 2021

BIDAR DISTRICT DAILY CRIME UPDATE 21-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-05-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 30/2021, ಕಲಂ. 379 ಐಪಿಸಿ :-

ದಿನಾಂಕ 20-04-2021 ರಂದು 2300 ಗಂಟೆಯಿಂದ 21-04-2021 ರಂದು 0600 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಕೃಸ್ತಾಮುಕ್ತಿ ತಂದೆ ಮನೋಹರ ಮೇತ್ರೆ ವಯ: 46 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಡೆ ಕಾಲೋನಿ ಬೀದರ ರವರ ಹಿರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹ ನಂ. ಕೆಎ-38/ಕ್ಯೂ-0922, ಅ.ಕಿ 18,000/- ರೂ. ನೇದನ್ನು ಫಿರ್ಯಾದಿಯವರು ಬೀದರ ನಗರದ ಡೆ ಕಾಲೋನಿಯಲ್ಲಿರುವ ತನ್ನ ಮನೆಮುಂದೆ ನಿಲ್ಲಿಸಿರುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2021, ಕಲಂ. 454, 380 ಐಪಿಸಿ :-

ದಿನಾಂಕ 20-05-2021 ರಂದು 1000 ಗಂಟೆಯಿಂದ 1400 ಗಂಟೆಯ ಮಧ್ಯವಾಧಿಯಲ್ಲಿ ಫಿರ್ಯಾದಿ ಸುಧಾರಾಣಿ ಗಂಡ ನಾಗನಾಥರಡ್ಡಿ ಯಲ್ಲಾರಡ್ಡಿ ವಯ: 30 ವರ್ಷ, ಜಾತಿ: ರಡ್ಡಿ, : ಮಹಿಳಾ ಪೊಲೀಸ್ ಕಾನ್ಸಟೇಬಲ್ ಹುಲಸೂರ ಪೊಲೀಸ್ ಠಾಣೆ, ಸಾ: ಹಂದ್ರಾಳ(ಕೆ), ತಾ: ಬಸವಕಲ್ಯಾಣ, ಸದ್ಯ: ಗಣೇಶ ನಗರ ಬಸವಕಲ್ಯಾಣ ಹುಲಸೂರಗೆ ನ್ನ ಕರ್ತವ್ಯಕ್ಕೆ ಹೋದಾಗ ಯಾರೋ ಅಪರಿಚಿತ ಕಳ್ಳರು ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಾದಲ್ಲಿದ್ದ 1) ಬಂಗಾರದ ಒಂದು ಗಂಟನ್ 4 ತೊಲೆ .ಕಿ 1,80,000/- ರೂ., 2) ಒಂದು ಜೊತೆ ಬಂಗಾರದ ಪಾಟ್ಲಿ 4 ತೊಲೆ 5 ಗ್ರಾಂ .ಕಿ 2,02,500/- ರೂ., 3) ಒಂದು ಬಂಗಾರದ ನೆಕ್ಲೆಸ್ 2 ತೊಲೆ .ಕಿ 90,000/- ರೂ. 4) 2 ಬಂಗಾರದ ಲಾಕೇಟ 2 ತೊಲೆ .ಕಿ 90,000/- ರೂ., 5) 3 ಬಂಗಾರದ ಉಂಗುರು 2 ತೊಲೆ .ಕಿ 90,000/- ರೂ., 6) ಗಟ್ಟಿ ಬಂಗಾರ 2 ತೊಲೆ .ಕಿ 90,000/- ರೂ., 7) ಚಿಕ್ಕ ಮಕ್ಕಳ ಬಂಗಾರದ 15 ಉಂಗುರು ಒಟ್ಟು 1 ತೊಲೆ 5 ಗ್ರಾಂ .ಕಿ 67,500/- ರೂ. ಹಾಗೂ 8) ಕಿವಿಯಲ್ಲಿ ಹಾಕುವ ಬೆಂಡೊಲೆ, ಗುಂಡಿ, ಚಿಕ್ಕ ಮಕ್ಕಳ ಕಿವಿಯಲ್ಲಿ ಹಾಕುವ ಬಂಗಾರದ ರಿಂಗ್, ಬಂಗಾರದ ತಾಳಿ ಒಟ್ಟು 2 ತೊಲೆ .ಕಿ 90, 000/- ರೂ., 9) ನಗದು ಹಣ 10,000/- ರೂ. ಹೀಗೆ ಒಟ್ಟು 20 ತೊಲೆ ಬಂಗಾರದ ಒಡವೆಗಳು .ಕಿ 9,00,000/- ರೂ., ಹಾಗೂ ನಗದು ಹಣ 10,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಯವರ ದೂರಿನ ಹೇಳಿಕೆ ಸಾರಾಂಶಧ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.