ಇಸ್ಪೀಟ
ಜೂಜಾಟದಲ್ಲಿ ತೊಡಗಿದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ
13-08-2016 ರಂದು ಕಾಳಮಂದರಗಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ
ಕೆಲವು ಜನರು ಗುಂಪಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ
ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ
ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ 1) ಮಾಣಿಕಪ್ಪ ತಂದೆ ಅಂದಪ್ಪ
ಬಿರಾದಾರ. 2) ರಾಘವೇಂದ್ರ ತಂದೆ ಬಸವಣ್ಣಪ್ಪ ಬಿರಾದಾರ 3) ಶಂಕ್ರಪ್ಪ ತಂದೆ ಮಲ್ಲಪ್ಪ ಸಿವರಾಮಗೋಳ 4) ಶಂಕ್ರಪ್ಪ ತಂದೆ ಸಿದ್ದಪ್ಪ
ಕಶಟ್ಟಿ 5) ಚಂದ್ರಕಾಂತ ತಂದೆ ಶಿವಲಿಂಗಪ್ಪ ಗಂಟೊಳ್ಳಿ 6) ಖಾಸಿಂ ಅಲಿ ತಂದೆ ಇಸ್ಮಾಯಿಲ್ ಸಾಬ ಮುಲ್ಲಾ 7) ಅಂಬಾರಾಯ ತಂದೆ ನಿಂಗಪ್ಪ
ಕಲಾಮೂತರ ಸಾ:ಎಲ್ಲರು ಕಾಳಮಂದರಗಿ ಇವರನ್ನು ವಶಕ್ಕೆ ಪಡೆದುಕೊಂಡಿದ್ದು ಸದರಿಂದ ಜೂಜಾಟಕ್ಕೆ ತೊಂಡಗಿಸಿದ
ನಗದು ಹಣ 3440/- ರೂ ಮತ್ತು 52 ಇಸ್ಪೇಟ ಎಲೆಗಳುನ್ನು
ವಶಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಣಿಜ್ಯ
ಬಳಕೆಗೆ ಗೃಹ ಬಳಕೆಯ ಸಿಲೆಂಡರ ಉಪಯೋಗಿಸುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ಕಲಬುರಗಿ ನಗರದ ಜಿಲಾನಾಬಾದ ಎಂ.ಎಸ್.ಕೆ ಮೀಲ್ ಪ್ರದೇಶದ ಖದೀರ ಚೌಕ ಹತ್ತಿರ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ
ತಹಸೀಲ್ದಾರರು ಕಲಬುರಗಿರವರು ಸ್ಥಳದ
ತನಿಖೆಗಾಗಿ ಹೋದಾಗ ಅಲ್ಲಿರುವ ಗ್ರ್ಯಾಂಡ ಮುಸ್ತಪಾ ಹೊಟೇಲದಲ್ಲಿ ಗೃಹ ಬಳಕೆಯ 2 ಅಡುಗಿ ಅನೀಲ ಎಲ್.ಪಿ.ಜಿ ಸಿಲಿಂಡರಗಳನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸುತ್ತಿರುವದನ್ನು
ಪತ್ತೆ ಹಚ್ಚಿ ಸದರಿ
ಸಿಲಿಂಡರಗಳನ್ನು ಜಪ್ತಿ ಮಾಡಲು ಸೂಚಿಸಿದಂತೆ ಇಂದು ದಿನಾಂಕ:13/06/2016 ರಂದು ಸಾಯಂಕಾಲ 6.30
ಗಂಟೆಗೆ ಸದರಿ ಹೊಟೇಲ ಮೇಲೆ ದಾಳಿ ನಡೆಯಿಸಿ ಅಲ್ಲಿ ಉಪಯೋಗಿಸುತ್ತಿದ್ದ
2 ಗೃಹಬಳಕೆಯ ಹೆಚ್.ಪಿ
ಕಂಪನಿಯ ತುಂಬಿದ ಸಿಲಿಂಡರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಅವುಗಳ ಅ.ಕಿ.4800/-ರೂ ಆಗಿರುತ್ತದೆ ಈ
ಬಗ್ಗೆ ನಡೆಸಿದ ಜಪ್ತಿ ಪಂಚನಾಮೆ ಹಾಗೂ 2 ಹೆಚ್.ಪಿ ಕಂಪನಿಯ ತುಂಬಿದ ಸಿಲಿಂಡರಗಳನ್ನು
ಈ ಪತ್ರದೊಂದಿಗೆ ತಮ್ಮಲ್ಲಿ ಸಲ್ಲಿಸುತ್ತಾ ಸದರಿ ಹೊಟೇಲ ಮಾಲಿಕನಾದ ಮಹ್ಮದ ಫಿರೋಜ ತಂದೆ ಇಕ್ಬಾಲಮೀಯಾ ಎಂ.ಎಸ್.ಕೆ ಮೀಲ್ ಕಲಬುರಗಿ ಇವರ ವಿರುದ್ದ ಅವಶ್ಯಕ
ವಸ್ತುಗಳ ಕಾಯ್ದೆ 1955
ಅಡಿಯಲ್ಲಿ ಜಾರಿಯಾಗಿರುವ ಲಿಕ್ವಿಪೈಡ ಪೆಟ್ರೋಲಿಯಂ ಗ್ಯಾಸ ಸಪ್ಲೇ
& ಕಂಟ್ರೋಲ್ ಆದೇಶ 2000 ಪ್ರಕಾರ ಕ್ರಮ ಕೈಕೊಳ್ಳಲು ಕೊರಲಾಗಿದೆ. ಅಂತಾ ಶ್ರೀ ಅಲ್ಲಾಬಕಶ ಆಹಾರ ನಿರೀಕ್ಷಕರು ಸಹಾಯಕ
ನಿರ್ದೇಶಕರ ಕಾರ್ಯಾಲಯ ಆಹಾರ,ನಾಗರಿಕ ಸರಬರಾಜು
& ಗ್ರಾಹಕರ ವ್ಯವಹಾರಗಳ ಇಲಾಖೆ ಮೀನಿ ವಿಧಾನ ಸೌದ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಆಳಂದ ಠಾಣೆ : ದಿನಾಂಕ: 13-08-2016 ರಂದು ನಮ್ಮ ತಂದೆಯವರು ಬೆಳಗ್ಗೆ 08:00 ಗಂಟೆ ಸುಮಾರಿಗೆ ಖಾಸಗಿ
ಕೆಲಸದ ನಿಮಿತ್ಯ ಆಳಂದಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ನಂತರ 12:30 ಗಂಟೆ
ಸುಮಾರಿಗೆ ನಮ್ಮ ಗ್ರಾಮದ ಗುರುರಾಜ ಸಿದ್ದಲಿಂಗಪ್ಪಾ ಮುನ್ನೋಳಿ ಇವರು ಪೋನ್ ಮಾಡಿ ವಿಷಯ
ತಿಳಿಸಿದೆನೆಂದರೆ ನಾನು ನಮ್ಮ ಗ್ರಾಮದಿಂದ ಆಳಂದ ಕಡೆಗೆ ಬರುವಾಗ ಆಳಂದ-ಖಜೂರಿ ರಸ್ತೆಯ ನಾರಾಯಣ
ಭಟ್ಟ ಮು|| ಆಳಂದರವರ ಹೊಲದ ಸಮೀಪ
ಬಂದಾಗ ಆಳಂದ ಕಡೆಯಿಂದ ತುಳಸಿರಾಮ ಪಾಂಡ್ರೆ ಇತನು ತನ್ನ ಮೋಟರ್ ಸೈಕಲ ನಂ: MH:14 CA-5309 ನೇದ್ದರ ಮೇಲೆ
ಬರುವಾಗ ಅವನ ಎದುರುಗಡೆಯಿಂದ ಅಂದರೆ ಖಜೂರಿ ಕಡೆಯಿಂದ ಜೀಪ್ ನಂ: MH:13 N:3642 ನೇದ್ದರ ಚಾಲಕನು
ಅತೀ ವೇಗದಿಂದ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸುತ್ತಾ
ಬಂದು ಮೋಟರ್ ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಮೋಟರ್ ಸೈಕಲ ಮೇಲೆ ಇದ್ದ ತುಳಸಿರಾಮನು ನೆಲಕ್ಕೆ
ಬಿದ್ದಾಗ ನಾನು ಹೋಗಿ ನೋಡಲು ಆತನ ಕಿವಿ,ಬಾಯಿ ಎಡಹುಬ್ಬಿಗೆ ಗಾಯ ಹೊಂದಿ ಬಲಗೈ ಅಂಗೈ ಮೇಲ್ಬಾಗದಲ್ಲಿ ಬಲಗಾಲ ಮೊಳಕಾಲಿನ ಕೆಳಗೆ ಭಾರಿ
ರಕ್ತಗಾಯವಾಗಿ ಮಾಂಸಹೊರಬಂದತೆ ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರ ಮೇರೆಗೆ
ಹೋಗಿ ನೋಡಲು ಘಟನೆ ನಿಜವಿರುತ್ತದೆ. ಕಾರಣ ನಮ್ಮ ತಂದೆಯವರಿಗೆ ಡಿಕ್ಕಿಪಡಿಸಿ ಭಾರಿಗಾಯಗೊಳಿಸಿ
ಸ್ಥಳದಲ್ಲೇ ಸಾವಿಗೆ ಕಾರಣನಾದ ಜೀಪ್ ನಂ: MH:13 N:3642 ನೇದ್ದರ ಚಾಲಕನ
ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವಾಜಿ ತಂದೆ ತುಳಸಿರಾಮ ಪಾಂಡ್ರೆ ಮು:ಕಿಣ್ಣಿಸುಲ್ತಾನ
ತಾ:ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಸುಶೀಲಾಬಾಯಿ
ಗಂಡ ಮಲ್ಲಣ್ಣ ಕುಂಬಾರ ಸಾ: ಕುಂಬಾರಗಲ್ಲಿ ಬ್ರಹ್ಮಪೂರ ಕಲಬುರಗಿ ರವರ ತವರು ಮನೆಗೆ ಕವಲಗಾ (ಕೆ) ಇದ್ದು ನಮ್ಮ ತಂದೆ ಶರಣಪ್ಪ
ಕುಂಬಾರ ಇವರಿಗೆ ನಾವು ನಾಲ್ಕು ಜನ ಹೆಣ್ಣೂ ಮಕ್ಕಳು 1) ನಾನು 2) ಬಸಮ್ಮ 3) ಮಾಣಿಕಮ್ಮ @
ಮಹಾನಂದಾ 4) ನಾಗಮ್ಮ ಇದ್ದು. ಒಬ್ಬ ತಮ್ಮ ಸೋಮಲಿಂಗಯಿದ್ದು ನಮ್ಮ ತಂದೆಯವರಿಗೆ 12 ಎಕರೆ ಜಮೀನು
ಇದ್ದು. ಕವಲಗಾ (ಕೆ) ಗ್ರಾಮದಲ್ಲಿ 3 ಎಕರೆ ಮತ್ತು 1 ಎಕರೆ ಹೊಲವಿದ್ದು. ಕವಲಗಾ (ಬಿ) ಗ್ರಾಮದಲ್ಲಿ
ನಾಲ್ಕು ಎಕರೆ ಹೊಲವಿದ್ದು. ನಮ್ಮ ತಂದೆಯವರು ಜೀವಿಂತವಿದ್ದಾಗ ಕವಲಗಾ (ಬಿ) ಗ್ರಾಮದಲ್ಲಿರುವ 4
ಎಕರೆ ಜಮೀನು ನಾವು ನಾಲ್ಕು ಜನ ಅಕ್ಕಂದಿಯರಿಗೆ ತಲಾ ಒಂದು ಎಕರೆಯಂತೆ ಸರ್ವೇ ನಂ 201/3 ರಲ್ಲಿಯ
4 ಎಕರೆ ಜಮೀನು ದಿನಾಂಕ 12/10/12 ರಂದು ವಿಲ್ ಡೆಡ್ ಮಾಡಿ ಕೊಟ್ಟಿದ್ದು ಎಲ್ಲಾ ದಾಖಲಾತಿಗಳು
ನಮ್ಮ ಹೆಸರಿನಲ್ಲಿ ಆಗಿದ್ದು ಪಹಣೆ ಪತ್ರಿಕೆ ಕೂಡಾ ನಾಲ್ಕು ಜನ ಹೆಣ್ಣೂ ಮಕ್ಕಳ
ಹೆಸರಿನಲ್ಲಿದ್ದು. ಸದರ ನಾಲ್ಕು ಎಕರೆ ಜಮೀನು ನಮ್ಮ ತಂಗಿಯರು ತಿಳಿಸಿದಂತೆ ನಾನೇ
ನೋಡಿಕೊಳ್ಳುತ್ತಾ ಬಂದಿರುತ್ತೇನೆ. ಈ ವರ್ಷ ಸದರಿ ಜಮೀನಿನಲ್ಲಿ ತೋಗರಿ ಬೆಳೆ ಇರುತ್ತದೆ. ನಮ್ಮ
ತಮ್ಮ ಸೋಮಲಿಂಗ ಮತ್ತು ಅವನ ಹೆಂಡತಿ ನಾಗಮ್ಮ ಇವರು ಸದರಿ ನಾಲ್ಕು ಎಕರೆ ಹೊಲ ನಮ್ಮದಿದೆ ನಮ್ಮ
ತಂದೆಗೆ ಮೋಸ ಮಾಡಿ ನೀವು ಹೆಸರಿಗೆ ಮಾಡಿಕೊಂಡಿರುತ್ತೀರಿ ಎಂದು ಆಗಾಗ ಜಗಳ ತೆಗೆಯುವದು ಬೈಯುವದು
ತಕರಾರು ಮಾಡಿ ನಮ್ಮ ಮೇಲೆ ವೈಮನಸ್ಸು ಹೊಂದಿರುತ್ತಾರೆ.
ದಿನಾಂಕ: 12/08/16 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಆಳು
ಮಗ ಶರಣಬಸು ತಂದೆ ಅಪ್ಪಾಸಾಬ ಇತನಿಂದ ತೋಗರೆ ಬೆಳೆಯಲ್ಲಿ ಎಡೆ ಹೊಡಸುತ್ತಿದ್ದಾಗ ಸದರಿ ಹೊಲದಲ್ಲಿ
ನಮ್ಮ ಅತ್ತಿಗೆ ನಾಗಮ್ಮ ತಮ್ಮ ಸೋಮಲಿಂಗ ಅತಿಕ್ರಮ ಪ್ರವೇಶ ಮಾಡಿ ಸೂಳೇ ಮಗಳೇ ಯಾರಪ್ಪನ ಹೊಲ ಅಂತಾ
ಎಡೆ ಹೊಡೆಸುತ್ತಿದ್ದಿ ಎಂದು ಅವ್ಯಾಚ್ಛವಾಗಿ ಬೈದು ಈ ಹೊಲದಲ್ಲಿಂದ ಕಡೆಗೆ ಹೋದರೆ ಸರಿ
ಇಲ್ಲದಿದ್ದರೆ ನಿನಗೆ ಜೀವ ಸಹಿತ ಇಡುವುದಿಲ್ಲಾ ಅಂತಾ ಅಂದಾಗ ನಾಗಮ್ಮ ಇವಳು ಈ ರಂಡಿದು ಬಹಳ
ಆಗಿದೆ ಬಿಡ ಬೇಡ್ರಿ ಅಂತಾ ಕೈ ಮುಷ್ಣಿ ಮಾಡಿ ಹೊಟ್ಟೆಗೆ ಹೊಡೆಯುವಾಗ ನನಗೆ ಸೋಮಲಿಂಗನು ಮಾನಭಂಗ
ಮಾಡುವ ಉದ್ದೇಶದಿಂದ ನನ್ನ ಸೀರೆ ಹಿಡಿದು ಎಳೆದಾಡಿ ಸೀರೆ ಹರಿದಿರುತ್ತಾನೆ ಈ ಎಲ್ಲಾ ಘಟನೆ ನೋಡಿ
ಎಡೆ ಹೊಡೆಯಲು ಬಂದ ಶರಣಬಸು ಈತನು ಬಿಡಿಸಿರುತ್ತಾನೆ. ಸದರಿಯವನು ಬಿಡಿಸುವಾಗ ಇನ್ನೂ ಮುಂದೆ ಈ
ಹೊಲದಲ್ಲಿ ಕಾಲು ಇಟ್ಟರೇ ನಿನಗೆ ಖಲ್ಲಾಸ ಬಿಡುತ್ತೇನ ಎಂದು ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ
ಮಹಾದೇವಪ್ಪಾ ತಂದೆ ಐಯ್ಯಪ್ಪಾ ಪುಜಾರಿ ಸಾ :
ಕವಲಗಾ (ಬಿ) ತಾ : ಜಿ :
ಕಲಬುರಗಿ ಇವರ ಮಗನಾದ ಲಗಮಣ್ಣ ಇತನು ದಿನಾಂಕ
13/08/2016 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನೀರು ತರಲೆಂದು ನಮ್ಮೂರಿನ
ಗ್ರಾಮ ಪಂಚಾಯತ ಭಾವಿಗೆ ಹೋಗಿದ್ದು ಬಹಳ ಸಮಯ ಕಳೆದರೂ ಮರಳಿ ಬಾರದ ಕಾರಣ ನನ್ನ ಹಿರಿಯ ಮಗನಾದ ಮೋನಪ್ಪಾ ಮತ್ತು ನಾನು ಸದರಿ ಭಾವಿಗೆ ಹೋಗಿ ನೋಡಲಾಗಿ
ನನ್ನ ಮಗ ಲಗಮಣ್ಣನು ಒಂದು ನೀರಿನ ಡಬ್ಬಿ ತುಂಬಿ
ಭಾವಿಯ ಹತ್ತೀರ ಇಟ್ಟಿದ್ದು ಇನ್ನೊಂದು ಡಬ್ಬಿ ಭಾವಿಯ
ನೀರಿನಲ್ಲಿ ತೇಲಾಡುತ್ತಿದ್ದು ನಮಗೆ ಸಂಶಯ ಬಂದು ಈ ವಿಷಯ ನಮ್ಮೂರಿನಲ್ಲಿ ತಿಳಿಸಿದ್ದು ನಮ್ಮೂರಿನ
ಚನ್ನಪ್ಪಾ ತಂದೆ ಶಿವಶರಣಪ್ಪಾ ಪರೀಟ ಹಾಗೂ ಇತರರು ಭಾವಿಯ ನೀರಿನಲ್ಲಿ ಪಾತಾಳಗಡ್ಡಿ
ಹಾಕಿ ನನ್ನ ಮಗನ ಶವ ಪತ್ತೆ ಮಾಡಿರುತ್ತಾರೆ .ನನ್ನ ಮಗ ಲಗಮಣ್ಣನು ನಮ್ಮೂರಿನ ಗ್ರಾಮ
ಪಂಚಾಯತಿಗೆ ಸೇರಿದ ಭಾವಿಗೆ ನೀರು ತರಲು ಹೋಗಿ ಆಕಸ್ಮೀಕವಾಗಿ ಕಾಲು ಜಾರಿ ನೀರಿನಲ್ಲಿ ಬಿದಿದ್ದು
ಈಜು ಬಾರದೆ ಇರುದರಿಂದ ಉಸಿರು ಗಟ್ಟಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.