ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-10-2020
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 19/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 24-09-2020 ರಂದು ಫಿರ್ಯಾದಿ ಸಂಗೀತಾ ಗಂಡ ಅರ್ಜುನ ಘಾಳೆ ವಯ: 36 ವರ್ಷ, ಜಾತಿ: ಎಸ್.ಟಿ ಕೋಳಿ, ಸಾ: ಹಳ್ಳಿ ಗ್ರಾಮ ರವರ ಮಗಳಾದ ಪ್ರತಿಭಾ ಇವಳು ಒಲೆ ಹತ್ತಿಸಿ ರೋಟ್ಟಿ ಮಾಡುವಾಗ ಅಡುಗೆ ಮನೆಯಲ್ಲಿ ಕತ್ತಲೆ ಇರುವದನ್ನು ನೋಡಿ ಚಿಮಣಿ ದೀಪ ಹತ್ತಿಸಿ ಚಕ್ಕೆಯ ಮೇಲೆ ಇಟ್ಟು ಕುಳಿತುಕೊಳ್ಳುವಾಗ ಮಗಳ ಕೈ ಚಕ್ಕೆಯ ಮೈಲಿರುವ ಚಿಮಣಿ ದೀಪಕ್ಕೆ ಹತ್ತಿ ಆಕಸ್ಮೀಕವಾಗಿ ದೀಪ ಚಿಮಣಿಯು ಮಗಳ ಮೈ ಮೇಲೆ ಬಿದ್ದು ಬೆಂಕಿ ಸುಡುವಾಗ ಫಿರ್ಯಾದಿ ಮತ್ತು ಮಗ ವೆಂಕಟ ಇಬ್ಬರೂ ಕೂಡಿ ಸದರಿ ಬೆಂಕಿಯನ್ನು ಆರಿಸಿ ಮಗಳಿಗೆ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಚೌಧರಿ ಆಸ್ಪತ್ರೆ ಬಸವಕಲ್ಯಾಣದಲ್ಲಿ ದಾಖಲು ಮಾಡಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ, ಸದರಿ ಬೆಂಕಿ ಅನಾಹುತವು ಆಕಸ್ಮಿಕವಾಗಿ ಜರುಗಿರುತ್ತದೆ, ಈ ಬಗ್ಗೆ ಯಾರ ಮೇಲೆ ಸಂಶಯ ಅಥವಾ ದೂರು ಇರುವುದಿಲ್ಲಾ ಅಂತಾ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-10-2020 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 145/2020, ಕಲಂ. 379 ಐಪಿಸಿ :-
ದಿನಾಂಕ 31-08-2020 ರಂದು 0800 ಗಂಟೆಯಿಂದ 1600 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಅಶೋಕ ತಂದೆ ಮಾಣಿಕಪ್ಪಾ ವಯ: 52 ವರ್ಷ, ಜಾತಿ: ಲಿಂಗಾಯತ, ಸಾ: ಬ್ಯಾಂಕ ಕಾಲೋನಿ, ಬೀದರ ರವರ ದ್ವಿಚಕ್ರ ವಾಹನ ನಂ. KA38/L-2940, ENGINE NO. HA10EFBHG81393, CHESSI NO. MBLHA10EZBHG68031 ನೇದನ್ನು ಗಾಂಧಿಗಂಜದಲ್ಲಿ ಬೌಧ ಮಂದಿರ ಹತ್ತಿರದಿಂದ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 122/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 02-10-2020 ರಂದು ಬೇನ ಚಿಂಚೋಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನಿಂಗಪ್ಪಾ ಮಣ್ಣೂರ ಪಿ.ಎಸ್.ಐ(ಕಾಸು) ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇನ ಚಿಂಚೋಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಪ್ರಕಾಶ ತಂದೆ ಸಂಗಪ್ಪಾ ಖಿರೋಜಿ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಬೇನ ಚಿಂಚೋಳಿ ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಲು ಮಟಕಾ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಸದರಿ ಆರೋಪಿಗೆ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಟ್ಟಿರುವ ಮಟಕಾ ಚೀಟಿ ಹಾಗೂ ಹಣವನ್ನು ಯಾರಿಗೆ ಕೊಡುತ್ತಿಯಾ ಅಂತ ವಿಚಾರಿಸಲು ಅವನು ತಿಳಿಸಿದ್ದೆನೆಂದ್ದರೆ ನಾನು ಮಟಕಾ ಚೀಟಿ ಬರೆದು ಹಣ ಪಡೆದುಕೊಂಡು ನಂತರ ಮಟಕಾ ಚೀಟಿ ಮತ್ತು ಹಣ ಕಬೀರಾಬಾದ ವಾಡಿ ಗ್ರಾಮದ ಗುರುನಾಥ ತಂದೆ ವಿರಶೇಟ್ಟಿ ಹುಡುಗಿ ಅವನಿಗೆ ಕೊಡುತ್ತೇನೆ ಅವನು ಬಂದು ತೆಗೆದುಕೊಂಡು ಹೋಗುತ್ತಾನೆ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 2420/- ರೂ ನಗದು ಹಣ, 1 ಮಟಕಾ ಚೀಟಿ ಹಾಗೂ 1 ಪೆನ ಇದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿತನನ್ನು ತಾಬೆಗೆ ತೆಗೆದುಕೊಂಡು ಅತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ ಠಾಣೆ ಅಪರಾಧ ಸಂ. 67/2020, ಕಲಂ. 363, 109 ಜೊತೆ 34 ಐಪಿಸಿ :-
ದಿನಾಂಕ 28-09-2020 ರಂದು 0300 ಗಂಟೆಗೆ ಫಿರ್ಯಾದಿ ಬಸವರಾಜ್ ತಂದೆ ವೆಂಕಟರಾವ ಸಾ: ಚಾಂದೂರಿ ಗ್ರಾಮ, ತಾ: ಕಮಲನಗರ, ಜಿ: ಬೀದರ ಆರೋಪಿ ಪ್ರೇಮದೀಪ ತಂದೆ ರವೀಂದ್ರ ಸಾಳುಂಕೆ ವಯ: 19 ವರ್ಷ ಇವನು ಫಿರ್ಯಾದಿಯವರ ತಂಗಿಯಾದ ಸುಭೇಷ್ನಾ ವಯ: 19 ವರ್ಷ ಇವರಿಗೆ ಅಪಹರಣ ಮಾಡಿಕೊಂಡು ಸ್ಪ್ಲೆಂಡರ್ ದ್ವೀಚಕ್ರ ವಾಹನದ ಮೇಲೆ ಓಡಿ ಹೋಗಿರುತ್ತಾನೆ, ಸದರಿ ಅಪಹರಣಕ್ಕೆ ರವೀಂದ್ರ ಶರಣಪ್ಪಾ ಸಾಳುಂಕೆ, ರತ್ನದೀಪ, ಉಧವ, ವಿಶ್ವದೀಪ, ಪ್ರವೀಣ ಇವರೆಲ್ಲರೂ ಸಹಾಯ ಮಾಡಿ ಫಿರ್ಯಾದಿಯವರ ತಂಗಿಯನ್ನು ತೆಗೆದುಕೊಂಡು ಹೊಗುವಂತೆ ಪ್ರೇರಣೆ ನೀಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 02-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.