Police Bhavan Kalaburagi

Police Bhavan Kalaburagi

Friday, June 18, 2021

BIDAR DISTRICT DAILY CRIME UPDATE 18-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-06-2021

 

ಬಗದಲ್ ಪೊಲೀಸ್ ಠಾಣೆಅಪರಾಧ ಸಂ. 36/2021, ಕಲಮ. 279, 304(ಎ) ಐಪಿಸಿ :-

ದಿನಾಂಕ 17-06-2021 ರಂದು ಫಿರ್ಯಾದಿ ದತ್ತಪ್ಪಾ ತಂದೆ ಶಿವರಾಜ ಯಾಬಾ ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಕಮಠಾಣಾ ರವರ ತಾಯಿ ಅನುಶಮ್ಮಾ ರವರಿಗೆ ಹುಡಗಿ ಗ್ರಾಮಕ್ಕೆ ಬಿಡಲು ಫಿರ್ಯಾದಿಯ ಭಾವನಾದ ಉದಯಕುಮಾರ ರವರು ಫಿರ್ಯಾದಿಯ ಬಜಾಜ ಪಲ್ಸರ್ ಮೋಟಾರ ಸೈಕಲ ನಂ. ಕೆಎ-38/ಎಕ್ಸ-8073 ನೇದರ ಮೇಲೆ ಹೋಗುವಾಗ ಶೇಂಶೇರನಗರ ಗ್ರಾಮದ ಬುದ್ದ ವಿಹಾರ ಹತ್ತಿರ ಕ್ರಾಸ ಬಳಿ  ಉದಯಕುಮಾರ ರವರು ತಾನು ಚಲಾಯಿಸುತ್ತಿರುವ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮುಂದೆ ನಾಯಿ ಅಡ್ಡ ಬಂದ ಪರಿಣಾಮ ಮೋಟಾರ ಸೈಕಲಿನ ಬ್ರೇಕ್ ಒಮ್ಮೆಲೆ ಹಾಕಿದಾಗ ಮೋಟಾರ ಸೈಕಲ ಸ್ಕೀಡ ಆದ ಪರಿಣಾಮ ಹಿಂದೆ ಕುಳಿತ ಫಿರ್ಯಾದಯವರ ತಾಯಿ ಕೆಳಗೆ ಬಿದ್ದು ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದರಿಂದ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ತಾಯಿಯವರಿಗೆ ನೋಡಿ ಇವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 59/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 17-06-2021 ರಂದು ಕೋಹಿನೂರ ಗ್ರಾಮದಲ್ಲಿರುವ ಪಹಾಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕೋಹಿನೂರ ಗ್ರಾಮಕ್ಕೆ ಹೋಗಿ ಅಲ್ಲಿ ಕೋಹಿನೂರ ಗ್ರಾಮದ ಪಶು ಆಸ್ಪತ್ರೆಯ ಎದುರುಗಡೆ ರೋಡಿನ ಪಕ್ಕದಲ್ಲಿ ಹೋಗಿ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಕೋಹಿನೂರ ಗ್ರಾಮದಲ್ಲಿರುವ ಕೋಹಿನುರ ಪಹಾಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಜಾಲಿಂದರ ತಂದೆ ಶಿವಶರಣಪ್ಪಾ ಕಲೋಜಿ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕೋಹಿನೂರ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಾಗ ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಇಲ್ಲಿ ನೀನು ಏನು? ಬರೆದುಕೊಳ್ಳುತಿರುವೆ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆzÀÄಕೊಳ್ಳುತ್ತಿದ್ದೆನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 680/- ರೂಪಾಯಿ, 2) ಎರಡು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಸಿಕ್ಕಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.