Police Bhavan Kalaburagi

Police Bhavan Kalaburagi

Saturday, March 31, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 30-03-2018 ರಂದು ಚಿಂಚೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕಂಪೊಂಡ್ ಹತ್ತಿರ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಸರಕಾರಿ ಪ್ರೌಢ ಶಾಲೆಯ ಕಂಪೋಂಡ ಪಕ್ಕ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 6 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು  ಖಚಿತ ಪಡಿಸಿಕೊಂಡು  ದಾಳಿ ಮಾಡಿ ಜೂಜಾಡುತಿದ್ದ 6 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ವಿವೇಕಾನಂದ ತಂದೆ ಗುರುಲಿಂಗಪ್ಪ ಬಿರಾದಾರ ಸಾ||ಚಿಂಚೋಳಿ  2) ಕುಮಾರ ತಂದೆ ಶಿವಶರಣ ಅಗಸಿ ಸಾ|| ಸೊನ್ನ 3) ಬಸವರಾಜ ತಂದೆ ಮಲ್ಕಪ್ಪ ಜಮಾದಾರ ಸಾ||ಚಿಂಚೋಳಿ 4) ಸಾಗರ ತಂದೆ ಬಸವರಾಜ ತೇಲಿ ಸಾ||ಚಿಂಚೋಳಿ  5) ಮಲ್ಲಪ್ಪ ತಂದೆ ಜಗದೇವಪ್ಪ ಜಮಾದಾರ ಸಾ||ಹಳ್ಯಾಳ 6) ಅಂಬರೀಶ ತಂದೆ ಶರಣಪ್ಪ ಮಾಂಗ ಸಾ||ಹಳ್ಯಾಳ ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 2100/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ತಡಕಲ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ದಿನಾಂಕ 29/03/2018 ರ ರಾತ್ರಿ 9.00 ಗಂಟೆಗೆ ನನ್ನ ಮನೆಯ ಕೌಂಪಡಗೆ ಹಚ್ಚಿ ನಿಲ್ಲಿಸಿದ ಕಾರು ದಿ:30/03/18 ರ ರಾತ್ರಿ 1.00 ಗಂಟೆಯವರೆಗೆ ಅಲ್ಲಿಯೇ ಇತ್ತು ನಂತರ ಬೆಳಗ್ಗೆ 6.00 ಗಂಟೆಗೆ ನೋಡಿದಾಗ ಅಲ್ಲಿರಲಿಲ್ಲ ಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದೆ ಕಾರಣ ನನ್ನ ಕಾರನ್ನು ತಾವು ದಯವಿಟ್ಟು ಹುಡುಕಿಕೊಡಲು ವಿನಂತಿಸುತ್ತೇನೆ. CAR MODEL-2006 TATA INDICADLS E-II ಆಗಿದ್ದು ಬಣ್ಣ   SILVER COLOUR   ಕಾರಿನ ಸಂಖ್ಯೆ KA32M4960 ಆಗಿರುತ್ತದೆ. ಕಾರಿನ ಅಂದಾಜು ಮೊತ್ತ 1 ಲಕ್ಷ 25 ಸಾವಿರ ರೂಪಾಯಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.