ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-06-2020
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 11/2020, ಕಲಂ. 174
ಸಿ.ಆರ್.ಪಿ.ಸಿ :-
ಫಿರ್ಯಾದಿ ಶಂಕರ ತಂದೆ ಯಲ್ಲಪ್ಪಾ ಹೇಳವಾ, ವಯ: 40 ವರ್ಷ, ಜಾತಿ: ಎಸ್.ಸಿ ಹೇಳುವಾ, ಸಾ: ಬೇಳಕೇರಾ ರವರ ಕಿರಿಯ ಮಗನಾದ ರವಿ ವಯ: 19 ವರ್ಷ ಇವನಿಗೆ ಸುಮಾರು ಎರಡು ವರ್ಷದಿಂದ ಗಂಟಲಿಗೆ ಗಂಟಮಲ್ಲಿಗೆಯಾಗಿದ್ದು ಸುಮಾರು ಆರು ತಿಂಗಳ ಹಿಂದೆ ಬೀದರಿನ ಬಾವಗಿ ಆಸ್ಪತ್ರೆಯಲ್ಲಿ ಗಂಟಲಿಗೆ ಆದ ಗಂಟಮಲ್ಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದು ಇನ್ನು ಗಂಟಮಲ್ಲಿಗೆ ಬೇನೆ ಕಡಿಮೇ ಆಗಿರುವುದಿಲ್ಲಾ ಬಹಳ ತೊಂದರೆಯಾಗುತ್ತಿದೆ ಅಂತ ತಿಳಿಸುತ್ತಿರುತ್ತಾನೆ, ಹೀಗಿರುವಾಗ ದಿನಾಂಕ 08-06-2020 ರಂದು 2300 ಗಂಟೆಯಿಂದ ದಿನಾಂಕ 09-06-2020 ರಂದು 0700 ಗಂಟೆಯ ಅವಧಿಯಲ್ಲಿ ಫಿರ್ಯಾದಿಯವರ ಮಗನು ತನಗಾದ ಗಂಟಮಲ್ಲಿಗೆ ಬೇನೆ ಕಡಿಮೆ
ಆಗಿರುವುದಿಲ್ಲಾ ಅಂತಾ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಾನು ಮಲಗಿದ ಕೋಣೆಯ ತಗಡದ ಕೆಳಗಿರುವ ಕಟ್ಟಿಗೆಯ ದಂಟಕ್ಕೆ ವೈರಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಮಗನ ಸಾವಿನ ಬಗ್ಗೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ನೀಡಿದ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 12/2020, ಕಲಂ. 174
ಸಿ.ಆರ್.ಪಿ.ಸಿ :-
ಫಿರ್ಯಾದಿ ಶಿವಾರೆಡ್ಡಿ ತಂದೆ ಮಾಣಿಕರೆಡ್ಡಿ ನಲಬಲ ವಯ: 32 ವರ್ಷ, ಜಾತಿ: ರೆಡ್ಡಿ, ಸಾ: ಮುಸ್ತರಿ ವಾಡಿ ರವರಿಗೆ ಮುಸ್ತರಿವಾಡಿ ಶಿವಾರದ ಹೊಲ ಸರ್ವೆ ನಂ. 139 ರಲ್ಲಿ ತಾಯಿ ರಾಜಮ್ಮ ಗಂಡ ಮಾಣಿಕರೆಡ್ಡಿ ನಲಬಲೆ ವಯ: 52 ವರ್ಷ ರವರ ಹೆಸರಿನಲ್ಲಿ 3ಎಕ್ಕರೆ 20 ಗುಂಟೆ ಜಮೀನು ಇರುತ್ತದೆ, ಹೀಗಿರುವಾಗ ದಿನಾಂಕ 08-06-2020 ರಂದು ಪ್ರತಿನಿತ್ಯದಂತೆ ಫಿರ್ಯಾದಿ ಮತ್ತು ತಾಯಿ ರಾಜಮ್ಮ ಇಬ್ಬರೂ ಹೊಲಕ್ಕೆ ಹೋಗಿ ಕೆಲಸ ಮಾಡಿ ಮಧ್ಯಾಹ್ನ ತಾಯಿ ಹೊಲದಲ್ಲಿನ ತೊಗರೆ ಬೇಳೆಯ ಹೊಟ್ಟನ್ನು ತೆಗೆಯುವಾಗ ಆಕಸ್ಮಿಕವಾಗಿ ತಾಯಿಯ ಎಡಗೈ ಮುಂಗೈಗೆ ಹಾವು ಕಡಿದಿರುವುದನ್ನು ನೋಡಿ ತಾಯಿಯವರನ್ನು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ವೈಧ್ಯಾಧಿಕಾರಿಯವರಿಗೆ ತೊರಿಸಿ ವೈಧ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹುಮಾನಾಭದಕ್ಕೆ ತೆಗೆದುಕೊಂಡು ಹೋಗುವಾಗ ದಾರಿಯ ಮಧ್ಯ ಮೃತಪಟ್ಟಿರುತ್ತಾರೆ, ಸದರಿ ಘಟನೆಯ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 09-06-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ.
41/2020, ಕಲಂ. 279, 338 ಐಪಿಸಿ :-
ದಿನಾಂಕ 09-06-2020 ರಂದು ಫಿರ್ಯಾದಿ
ಸಿದ್ದು ತಂದೆ ಶಿವರಾಜ ಹಳ್ಳಿಖೇಡೆ ಸಾ: ಜೇರಪೇಟ ಹುಮನಾಬಾದ ರವರು ತನ್ನ ಕೆಲಸವನ್ನು
ಮುಗಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಆರ್.ಕೆ.ಎಮ್ ಕೇಮಿಕಲ್ ಕಂಪನಿಯಿಂದ ಮರಳಿ
ಮನೆಗೆ ಹೊಗುತ್ತಿರುವಾಗ ಪರಿಚಯಸ್ಥರಾದ ಪ್ರಶಾಂತ ತಂದೆ ರೇವಣಸಿದ್ದಪ್ಪಾ ಹಲಗೆನೋರ್ ಸಾ: ಯರಬಾಗ, ತಾ:
ಬಸವಕಲ್ಯಾಣ ಇವನು ಹಳೆ ಆರ್.ಟಿ.ಓ ಚೆಕ್ ಪೋಸ್ಟದಿಂದ ಕಡೆಯಿಂದ ತನ್ನ ಮೋಟಾರ್ ಸೈಕಲ್ ಸಂ.
ಕೆಎ-56/ಹೆಚ್-2448 ನೇದನ್ನು ಚಲಾಯಿಸಿಕೊಂಡು ಚಿದ್ರಿ ಪೆಟ್ರೋಲ್ ಬಂಕ್ ದಲ್ಲಿ ಬಂದು ತನ್ನ
ಮೋಟಾರ್ ಸೈಕಲಗೆ ಪೆಟ್ರೋಲ್ ಹಾಕಿಸಿಕೊಂಡು ಚಿದ್ರಿ ಪೆಟ್ರೋಲ್ ಬಂಕ್ ಕಡೆಯಿಂದ ತನ್ನ ಮೋಟಾರ್
ಸೈಕಲನ್ನು ರಾ.ಹೆ ನಂ. 65
ಹೈದ್ರಾಬಾದ
- ಸೋಲಾಪುರ ರೋಡಿನ ಮೇಲೆ ರಾಂಗ್ ಸೈಡಿನಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಎ.ಎಸ್
ವಾಟರ್ ಸರ್ವಿಸಿಂಗ್ ಸೆಂಟರ್ ಹತ್ತಿರ ಬಂದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಹುಮನಾಬಾದ
ಕಡೆಯಿಂದ ಹೊಂಡಾ ಶೈನ್ ಮೋಟಾರ್ ಸೈಕಲ್ ನೇದರ ಚಾಲಕನಾದ ಆರೋಪಿ ತುಕಾರಾಮ ತಂದೆ ಶಂಕರರಾವ ತಮಗಿಕರ್
ಸಾ: ಹಳ್ಳಿಖೇಡ (ಬಿ) ಇವನು ತನ್ನ ಮೋಟಾರ್ ಸೈಕಲನ್ನು ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಆರ್.ಟಿ.ಓ
ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿದ್ದರಿಂದ
ಇಬ್ಬರೂ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾರೆ, ನಂತರ ಫಿರ್ಯಾದಿಯು ಹೋಗಿ
ನೋಡಲಾಗಿ ತುಕಾರಾಮ ಇವನಿಗೆ ತಲೆಗೆ ಮತ್ತು ಎದೆಗೆ ತೀವ್ರ ಗುಪ್ತಗಾಯವಾಗಿರುತ್ತದೆ, ಪ್ರಶಾಂತ
ಇವನಿಗೆ ನೋಡಲಾಗಿ ಬಾಯಿಯಲ್ಲಿನ ಮೇಲಿನ ಒಂದು ಹಲ್ಲು ಮುರಿದು ಬಲಗಾಲ ಮೊಣಕಾಲಗೆ ತರಚಿದ ಗಾಯಗಳು
ಆಗಿರುತ್ತವೆ, ನಂತರ ಫಿರ್ಯಾದಿಯು ಇಬ್ಬರೂ ಗಾಯಾಳುಗಳಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ
ಕುಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ
ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.