Police Bhavan Kalaburagi

Police Bhavan Kalaburagi

Friday, June 28, 2019

KALABURAGI DISTRICT REPORTED CRIMES

ಕ್ರಮವಾಗಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದ  ಟಿಪ್ಪರ ಮತ್ತು ಟ್ರ್ಯಾಕ್ಟರಗಳ ಜಪ್ತಿ :
ಫರತಾಬಾದ ಠಾಣೆ : ದಿನಾಂಕ:27/06/2019 ರಂದು ಸಾಯಂಕಾಲ ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಟಿಪ್ಪರದಲ್ಲಿ ತುಂಬಿಕೊಂಡು ಜೇವಗರಗಿ  ಕಡೆಯಿಂದ ಕಲಬುರಗಿಗೆ ಸಾಗಾಣೆ ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೀಪನಲ್ಲಿ ಠಾಣೆಯಿಂದ ಹೊರಟು ರಾಷ್ಟ್ರೀಯ ಹೇದ್ದಾರಿ 218 ಫರಹತಾಬಾದ ಕರಿಗೂಳೇಶ್ವರ ದೇವಸ್ಥಾನದ ಹತ್ತೀರ ಮುಖ್ಯ ರಸ್ತೆಯ ಹತ್ತಿರ ಹೋಗಿ ನಾವು ಕಾಯುತ್ತಾ ನಿಂತಾಗ 06.00 ಪಿ.ಎಮಕ್ಕೆ ಜೇವಗರಗಿ  ಕಡೆಯಿಂದ ಟಿಪ್ಪರ ಬರುತ್ತಿರುವುದನ್ನು ನೋಡಿ ನಮಗೆ ಸಂಶಯ ಬಂದು ಸದರಿ ಟಿಪ್ಪರನು ನಿಲ್ಲಿಸಲು ಚಾಲಕನಿಗೆ ಕೈ ಮಾಡಿ ಸೂಚಿಸಿದಾಗ, ಸದರಿ ಟಿಪ್ಪರ ಚಾಲಕನು ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿದ್ದು, ಅದನ್ನು ನೋಡಲು ಅದು ಭಾರತಬೆಂಜ ಕಂಪನಿಯ ಟಿಪ್ಪರ ಇದ್ದು ಅದರ ನಂಬರ-ಕೆ.33 ಎ.7189 ಇದ್ದು ಟಿಪ್ಪರದಲ್ಲಿ ಮರಳು ತುಂಬಿದ್ದು, ಸದರಿ ಚಾಲಕನಿಗೆ ಮರಳು ಸಾಗಾಣಿಕೆಗೆ ಸಂಬಂಧಿಸಿದ ದಾಖಲಾತಿಗಳು ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ. ನಮ್ಮ ಮಾಲಿಕನ ಸೂಚನೆ ಮೇರೆಗೆ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡಲು ಕಲಬುರಗಿಗೆ ಹೋಗುತ್ತಿದ್ದ ಬಗ್ಗೆ ತಿಳಿಸಿದನು. ಕೂಡಲೆ ಸದರಿ ಚಾಲಕನಿಗೆ ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸದ ಬಗ್ಗೆ ವಿಚಾರ ಮಾಡಲು ತನ್ನ ಹೆಸರು ತಿಪ್ಪಣ್ಣ ತಂದೆ ಮಲ್ಲಣ್ಣ ಬಿರಾದಾರ ಸಾ:ವಿಭೂತಿಹಳ್ಳಿ ತಾ:ಶಹಾಪೂರ ಜಿ:ಯಾದಗಿರ ಅಂತಾ ತಿಳಿಸಿದ್ದು. ಸದರಿ ಟಿಪ್ಪರದ ಮಾಲಿಕರ ಹೆಸರು ವಿಚಾರಿಸಲಾಗಿ ಬಸಣ್ಣಗೌಡ ಮಲ್ಲಾಬಾದ ಸಾ:ಶಹಾಪೂರ ಅಂತಾ ತಿಳಿಸಿದನು. ಸದರಿ ಮೇಲೆ ಹೇಳಿದ ಟಿಪ್ಪನ ಅ.ಕಿಃ 5,00,000/-ರೂ ಮತ್ತು ಅದರಲ್ಲಿರುವ ಮರಳಿನ ಅ.ಕಿಃ 25,000/-ರೂ ಇರುತ್ತದೆ. ಸದರಿ ಟಿಪ್ಪರನ್ನು ಜಪ್ತಿ ಮಾಡಿಕೊಂಡು ಫರತಾಬಾದ ಠಾಣೆಗೆ ಬಂದು ಠಾಣೆಯಲ್ಲಿ ಗುನ್ನೆ ನಂಬರ-92/2019 ಕಲಂ.379 ಐಪಿಸಿ ಹಾಗೂ 21(1) ಎಂ.ಎಂ.ಆರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27-06-2019 ರಂದು ರಾತ್ರಿ ಅಫಜಲಪೂರ ಠಾಣಾ ವ್ಯಾಪ್ತಿಯ  ಹಿಂಚಗೇರಾ ಗ್ರಾಮದ ಭೀಮಾನದಿಯ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಟಾರ್ಚ ಬೆಳಕಿನಲ್ಲಿ ನೊಡಲಾಗಿ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ, ಟ್ಯಾಕ್ಟರ ಹೆಡ್ ಲೈಟ ಬೆಳಕಿನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಕತ್ತಲಲ್ಲಿ ಓಡಿಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ಟ್ಯಾಕ್ಟರ ಚಾಲಕನನ್ನು ಸುತ್ತ ಮುತ್ತಲು ನೋಡಲು ಪರಾರಿ ಆಗಿದ್ದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ SL NO :- 99151399 ENG NO:- 47.204CH10 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಹಾಕಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ನಂತರ ಸದರಿ ಟ್ರ್ಯಾಕ್ಟರದೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ  ಗುನ್ನೆ ನಂ 99/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ದಿನಾಂಕ 26/06/2019 ರಂದು ಮದ್ಯಾಹ್ನ ವಾಡಿ ಠಾಣೆ ವ್ಯಾಪ್ತಿಯ ಇಂಗಳಗಿ ಗ್ರಾಮದ ಕಾಗಿಣಾ ನದಿಯಿಂದ ಯಾರೋ ಅನಧಿಕೃತವಾಗಿ ಕಳ್ಳತನದಿಂದ ತಮ್ಮ ಟ್ರ್ಯಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ ಅಂತಾ ಬಂದ ಖಚಿತ ಬಾತ್ಮೀ ಮೇರೆಗೆ ಪಿ.ಎಸ್.ಐ (ಕಾಸು) ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಇಂಗಳಗಿ ಗ್ರಾಮದ ಸಮೀಪ ರೊಡಿಗೆ ಹೊರಟಾಗ ಎದರುಗಡೆಯಿಂದ ಒಂದು ಟ್ರ್ಯಾಕ್ಟರ ಹೊರಟಿದ್ದು ಅದರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ ಟ್ರ್ಯಾಕ್ಟರ ನಿಲ್ಲಿಸಿ ಹೊಲದಲ್ಲಿ  ಓಡಲು ಪ್ರಾರಂಭಿಸಿದನು ಆಗ ಟ್ರ್ಯಾಕ್ಟರ ಹತ್ತಿರ ಜೀಪ ತೆಗೆದುಕೊಂಡು ಹೋಗಿ ಟ್ರ್ಯಾಕ್ಟರದಲ್ಲಿ ಮರಳು ಇದ್ದಿದ್ದನ್ನು ಕಂಡು ಸಿಬ್ಬಂದಿಯ ಸಹಾಯದಿಂದ ಸದರಿ ಟ್ರ್ಯಾಕ್ಟರ ಚಾಲಕನಿಗೆ  ಹಿಡಿಯಲು ಪ್ರಯತ್ನಿಸಿದ್ದು ಆತನು ಸಿಗದೇ ಹೊಲದಲ್ಲಿ ಓಡಿ ಹೋದನು. ನಂತರ ಸದರಿ ಟ್ರ್ಯಾಕ್ಟರ ಪರಿಶೀಲಿಸಿ ನೋಡಲಾಗಿ ಅದು ಮೆಸ್ಸಿ ಫರ್ಗೋಷನ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಇಂಜಿನ ನಂಬರ ಕೆಎ-32 ಟಿಬಿ  ಅಂತಾ ಬರೆದಿದ್ದು  ಮತ್ತು ಟ್ರ್ಯಾಲಿ ನಂಬರ ಕೆಎ-32 ಟಿ-2579 ಅಂತಾ ಬರೆದಿದ್ದು ಸದರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಅಂದಾಜು 01 ಸಾವಿರ ರೂಪಾಯಿದಷ್ಟು ಮರಳು ತುಂಬಿದ್ದು ಟ್ರ್ಯಾಕ್ಟರ ಕಿಮ್ಮತ್ತು ಅಂದಾಜು 75 ಸಾವಿರ ರೂಪಾಯಿ ಆಗುತ್ತದೆ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಕ ಅನಧಿಕೃತವಾಗಿ ಯಾವದೇ ಪರವಾನಿಗೆ ಇಲ್ಲದೇ  ಕಳ್ಳತನದಿಂದ ಟ್ರ್ಯಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಜನರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೊರಟ ಬಗ್ಗೆ ಖಚಿತಪಟ್ಟಿದ್ದರಿಂದ  ಸದರಿ ಟ್ರ್ಯಾಕ್ಟರನೊಂದಿಗೆ ವಾಡಿ ಠಾಣೆಗೆ ಬಂದು ವಾಡಿ ಠಾಣೆಯ ಗುನ್ನೆ ನಂ 72/2019 ಕಲಂ:379 ಐಪಿಸಿ ಸಂಗಡ 21 ಎಮ್.ಎಮ್.ಅರ.ಡಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡಲು ಸಾಗಿಸುತ್ತಿದ್ದ  ಲಾರಿ ಜಪ್ತಿ :
ಆಳಂದ ಠಾಣೆ : ಸಾರ್ವಜನಿಕ ವಿತರಣಾ ವ್ಯವಸ್ಥೆಗೆ & ಸರ್ಕಾರದ ಇತರೆ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅಕ್ಕಿಯನ್ನು ಯಾದಗಿರಿ ಜಿಲ್ಲೆ ಗುರುಮಿಟ್ಕಲನ ಶ್ರೀ ಮಣಿಕಂಠ ರಾಠೋಡ & ಕಲಬುರಗಿಯ ಶ್ರೀ ಮೈನುಭಾಯಿ ಎಣ್ಣೆಗುರೆ ಎಂಬುವರು ಅಕ್ರಮವಾಗಿ ಖರೀದಿಸಿ ರೀಬ್ಯಾಗ್ ಮಾಡಿ ಬೇರೆ ಬೇರೆ ಬ್ರ್ಯಾಂಡಗಳಲ್ಲ್ಲಿ ಮಹಾರಾಷ್ಟ್ರ ರಾಜ್ಯದ ಗೋಂಡಿಯಾ ಎಂಬ ಸ್ಥಳಕ್ಕೆ ಲಾರಿ ನಂ ಕೆಎ 56 2867 ಮೂಲಕ ದಿನಾಂಕ 26/06/2019 ರಂದು ಮರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಕಲಬುರಗಿ ಜಿಲ್ಲಾ ಆಹಾರ ಇಲಾಖೆಯ ಹಿರಿಯ ಉಪನಿದೇಶಕರಾದ ಡಾ|| ಕೆ,ರಾಮೇಶ್ವರಪ್ಪಾ ರವರು ನೀಡಿದ ಮಾಹಿತಿ ಮೇರೆಗೆ ಖಚಿತ ಮಾಹಿತಿಯನ್ನಾಧರಿಸಿ ನಾನು ಮತ್ತು ಮಹಜರದಾರರೊಂದಿಗೆ ಒಂದು ಖಾಸಗಿ ವಾಹದಲ್ಲಿ ಕಲಬುರಗಿ-ಆಳಂದ ರಸ್ತೆಯಲ್ಲಿ ಗಸ್ತು ತಿರುಗುವಾಗ ಡೋಗಿ ಬನ ನಾಲಾ ಚಡಾಣ ಎಂಬಲ್ಲಿ ಲಾರಿ ಸಂಖ್ಯೆ ಕೆಎ 56 2867 ಎಂಬ ವಾಹನವನ್ನು ಬಸವರಾಜ ಕೊರಳ್ಳಿ ಜೈ ಕರ್ನಾಟಕಾ ರಕ್ಷಣಾ ವೇದಿಕೆ ಅಧ್ಯಕ್ಷರು ಆಳಂದ ಘಟಕ ರವರು ಹಿಡಿದಿರುವುದಾಗಿ ತಿಳಿಸಿದರ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಲಾರಿ ತುಂಬ ಅಕ್ಕಿ ತುಂಬಿರುವುದು ಪತ್ತೆಯಾಗಿರುತ್ತದೆ, ಲಾರಿಯ ಚಾಲಕನನ್ನು ವಿಚಾರಿಸಲಾಗಿ ಶ್ರೀ ವೀರಯ್ಯಾ ಸ್ವಾಮಿ ತಂದೆ ಮಲ್ಲಯ್ಯಾ ಸ್ವಾಮಿ ಸಾ|| ಬಾಲಸೂರ ತಾ|| ಉಮರ್ಗಾ ಜಿ|| ಉಸ್ಮಾನಾಬಾದ ಎಂತಲೂ & ಕ್ಲೀನರ್ ಶ್ರೀ ಜ್ಯೋತಿಬಾ ತಂದೆ ಚಂದ್ರಕಾಂತ ಬುಂದಗೆ ಸಾ|| ಸಮುದ್ರಾಳ ತಾ|| ಉಮರ್ಗಾ ಜಿ|| ಉಸ್ಮಾನಾಬಾದ ಎಂದು ತಿಳಿಸಿದ್ದು ಲಾರಿಯಲ್ಲಿ ತಲಾ 50 ಕೆಜಿ ತೂಕದ 600 ಚೀಲ ಅಕ್ಕಿ ಇದ್ದು ಇದನ್ನು 25/06/2019 ರಂದು ಯಾದಗಿರಿ ಜಿಲ್ಲೆ ಗುರುಮಿಟ್ಕಲನಲ್ಲಿ ಲಕ್ಷ್ಮೀ ತಿಮ್ಮಪ್ಪಾ ಸ್ವಾಮಿ ಟ್ರೆಡಿಂಗ್ ಮಾಲಿಕರಾದ ಶ್ರೀ ಮಣಿಕಂಠ ರಾಠೋಡ ಎಂಬುವರು ಮಾರಾಟ ಮಾಡಿದ್ದು ಮಹಾರಾಷ್ಟ್ರದ ದೋಂಡಿಯಾದ ಮೇ|| ವಿಕಾಸ್ ಸೋರಟೆಕ್ಸ ಎಂಬುವರಿಗೆ ಮಾರಾಟ ಮಾಡುತ್ತಿದ್ದು ನಾವು ಸಾಗಾಣಿಕೆಯನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ, ಈ ಪ್ರಾಥಮಿಕ ವಿಚಾರಣೆಯ ಬಗ್ಗೆ ಕಲಬುರಗಿ ಜಿಲ್ಲಾ ಆಹಾರ ನಾಗರಿಕ ಸರಬರಾಜು ವ್ಯವಹಾರಗಳ ಇಲಾಖೆ ಹಿರಿಯ ಉಪನಿರ್ಧೇಶಕರಾದ ಡಾ|| ಕೆ,ರಾಮೇಶ್ವರಪ್ಪಾ ಇವರಿಗೆ ವಿವರಿಸಲಾಗಿ ಅವರು 26/06/2019 ರಂದು 10-30,ಎಮ್ ಕ್ಕೆ ಸ್ಥಳಕ್ಕೆ ಬಂದು ಪ್ರಕರಣದ ಬಗ್ಗೆ ಪರಿಶೀಲಿಸಿ ಸದರಿ ಪ್ರಕರಣದಲ್ಲಿ ಕಾಳ ಸಂತೆಕೋರರು ಸಾರ್ವಜನಿಕ ವಿತರಣಾ ವ್ಯವಸ್ಥೆ & ಸರ್ಕಾರದ ಇತರೆ ಯೋಜನೆಗಳಿಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ರಿಬ್ಯಾಗ್ ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ಅಕ್ಕಿ & ವಾಹನವನ್ನು ವಶಪಡಿಸಿಕೊಂಡು ಅಗತ್ಯ ವಸ್ತುಗಳ ಕಾಯಿದೆ ಅಡಿಯಲ್ಲಿ ಕ್ರಮ ಜರುಗಿಸಲು ಸೂಚಿಸಿರುತ್ತಾರೆ, ಈ ವಿಷಯದ ಬಗ್ಗೆ ತಕ್ಷಣಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು, ಲಾರಿ ಸಂಖ್ಯೆ ಕೆಎ 56 2867 ರಲ್ಲಿ ತುಂಬಿದ ಚೀಲಗಳನ್ನು ಪರಿಶೀಲಿಸಲಾಗಿ ಯಾವುದೇ ವಿಷಯಗಳನ್ನು ಮುದ್ರಿಸದ ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಬೇರೆ ಬೇರೆ ಉತ್ಪಾದಕರು ಮಾರಾಟಗಾರರ ಹೆಸರು ಮುದ್ರಿಸಿದ ಚೀಲಗಳಲ್ಲಿ ಅಕ್ಕಿ ತುಂಬಿರುವುದು ಕಂಡು ಬಂದಿತು, ವಾಹನ ಚಾಲಕ ವೀರಯ್ಯಾಸ್ವಾಮಿಯನ್ನು ವಿಚಾರಿಸಲಾಗಿ ಅವರು ಮೇ|| ಲಕ್ಷ್ಮೀ ತಿಮ್ಮಪ್ಪ ಸ್ವಾಮಿ ಗುರುಮಿಟ್ಕಲ ಅವರಿಗೆ ಸೇರಿದ ದಿನಾಂಕ 25/06/2019 ರ ಮಾರಾಟ ಬಿಲ್ & ಗುರುಮಿಟ್ಕಲ್ ನ ಎ,ಪಿ,ಎಮ್,ಸಿ ಇಂದ ದಿನಾಂಕ 25/06/2019 ರಂದು ಮಧ್ಯಾಹ್ನ 1-50 ಗಂಟೆಗೆ ನೀಡಿದ ಪರಮಿಟ್ ಸಂಖ್ಯೆ;ಅಓಖಿ0030 20192500156 ಹಾಗೂ 25/06/2019 ರಂದು ಮಧ್ಯಾಹ್ನ 01-54 ಗಂಟೆಗೆ ಯಾದಗಿರಿ ಜಿಲ್ಲೆಯಲ್ಲಿ ನೀಡಲಾದ ಜಿ,ಎಸ್,ಟಿ ಇ ವೇ ಬಿಲ್ಲುಗಳೆಂದು ತಿಳಿಸಲಾದ ದಾಖಲೆಗಳ ಜಿರಾಕ್ಸ ಪ್ರತಿಗಳು & ವಾಹನ ಸಂಖ್ಯೆ ಕೆಎ 56 2867 ಗೆ ಸಂಭಂಧಸಿದಂತೆ ಫಾರ್ಮ 47 ಪ್ರತಿ, ಇನ್ಸರೆನ್ಸ ಪ್ರತಿ, ನ್ಯಾಷ್ನಲ್ ಪರಮಿಟ್ ಪ್ರತಿ,ನೊಂದಣಿ ಬಿ,ಎಕ್ಸಟ್ರಾಕ್ಸಿ ಪ್ರತಿ ಹಾಜರ ಪಡಿಸಿದ್ದು ಅದರಂತೆ ಲಾರಿಯು ಬೀದರ ಜಿಲ್ಲೆ ಬಸವಕಲ್ಯಾಣ ದಲ್ಲಿ ನೊಂದಣಿಯಾಗಿದ್ದು ವಾಹನ ಮಾಲಿಕರು ಶ್ರೀ ಕಾರ್ತಿಕಯ್ಯಾ ತಂದೆ ಶರಣಯ್ಯಾ ಹಿರೇಮಠ ಎಂದು ತಿಳಿದು ಬಂದಿದೆ, ಲಾರಿ ಚಾಲಕರು ಹಾಜರು ಪಡಿಸಿದ ದಾಖಲೆಗಳು & ನೀಡಿದ ಮಾಹಿತಿಯನ್ನು ಆಧರಿಸಿ ಪ್ರಕರಣದ ಬಗ್ಗೆ ಪರಿಶೀಲಿಸಲಾಗಿ ಲಾರಿ ಸಂಖ್ಯೆ ಕೆಎ 56 2867 ರಲ್ಲಿ ಸಾಗಾಣಿಕೆ ಮಾಡುತ್ತಿರುವ ಅಕ್ಕಿಯನ್ನು ಯಾದಗಿರಿ ಜಿಲ್ಲೆ ಗುರುಮಿಟ್ಕಲನ ಶ್ರೀ ಲಕ್ಷ್ಮೀ ತಿಮ್ಮಪ್ಪ ಟ್ರೆಡಿಂಗನ ಮಣೀಕಂಠ ರಾಠೋಡ ಎಂಬುವರು 25/06/2019 ರಂದು ತುಂಬಿರುವುದಾಗಿ & ಈ ಬಗ್ಗೆ 25/06/2019 ರಂದು ಮಧ್ಯಾಹ್ನ ಎಪಿಎಮ್ಸಿ ಇಂದ ಪರಮಿಟ್ ಪಡೆದಿರುವುದಾಗಿ & 25/06/2019 ರಂದು ಜಿ,ಎಸ್,ಟಿ ತೆರಿಗೆ ಪಾವತಿ ಇ ವೇ ಬಿಲ್ಲು ಪಾವತಿಸಿದ ದಾಖಲೆಗಳನ್ನು ನೋಡಲಾಗಿ & 25/06/2019 ರಂದು ಗುರುಮಿಟ್ಕಲನಿಂದ ಹೊರಟ ವಾಹನ 26/06/2019 ರಂದು ಬೆಳಿಗ್ಗೆ 10-00 ಗಂಟೆಗೆ ಆಳಂದ ಸಮೀಪ ಬಂದಿದ್ದು ಸುಮಾರು 150 ಕೀ ಮೀ ಪ್ರಯಾಣಕ್ಕೆ 18 ಗಂಟೆಗಳನ್ನು ತೆಗೆದುಕೊಂಡಿದ್ದಾರೆ ಸುಮಾರು 6,15,000/- ರೂಪಾಯಿ ಮೌಲ್ಯದ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಸಾಗಾಣಿಕೆ ಮಾಡುವಾಗ ಲಾರಿಯಲ್ಲಿ ಮೂಲ ಮಾರಾಟದ ದಾಖಲೆಗಳನ್ನೆ ಇಟ್ಟರುವುದಿಲ್ಲ,ಈ ಪ್ರಕರಣದ ಬಹುಮುಖ್ಯ ವಿಷಯವಾಗಿ ಲಾರಿಯಲ್ಲಿ ದೊರೆತ ಅಕ್ಕಿ  ಚೀಲಗಳ ಮೇಲೆ ಉತ್ಪಾದಕ/ಮಾರಾಟಗಾರರ ವಿವರಗಳು ಧಾನ್ಯದ ವಿವರ ಉತ್ಪಾದನೆಯ ವರ್ಷ ತೂಕ ಬೆಲೆಗಳು ಮುದ್ರಣವಾಗದಿರುವುದು & ಕೆಲವು ಚೀಲಗಳ ಮೇಲೆ ಬೇರೆ ಬೇರೆ ಉತ್ಪಾದಕರು ಮಾರಾಟಗಾರರ ವಿವರಗಳು ಮುದ್ರಣವಾಗಿರುವುದು ಪತ್ತೆಯಾಗಿದ್ದು ಈ ಅಕ್ಕಿಯನ್ನು ಯಾದಗಿರಿ ಜಿಲ್ಲೆ ಗುರುಮಿಟ್ಕಲನ ಮೇ|| ಲಕ್ಷ್ಮೀ ತಿಮ್ಮಪ್ಪ ಸ್ವಾಮಿ ಟ್ರೆಡಿಂಗ್ ಶ್ರೀ ಮಣಿಕಂಠ ರಾಠೋಡ & ಕಲಬರುಗಿಯ ಮೈನುಭಾಯಿ ಎಣ್ಣೆಗುರೆ & ಇತರರು ಸೇರಿಕೊಂಡು ಸಕರ್ಕಾರದ ಯೋಜನೆಗಳಿಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಖರೀದಿಸಿ ರಿ ಬ್ಯಾಗ್ ಮಾಡಿ ಅಥವಾ ವಿವಿಧ ಬ್ರ್ಯಾಂಡಿನ ಚೀಲಗಳಲ್ಲಿ ಹೆಚ್ಚಿನ ಲಾಭಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಸ್ಪಷ್ಟ್ಟವಾಗಿರುತ್ತದೆ, ಈ ಹಿನ್ನೆಲೆಯಲ್ಲಿ ಲಾರಿ ಸಂಖ್ಯೆ ಕೆಎ 56 2867 ಅನ್ನು ಮಹಜರುದಾರರ ಸಮಕ್ಷಮ ವಶಪಡಿಸಿಕೊಂಡು ಆಳಂದ ಪಟ್ಟಣಕ್ಕೆ ತಂದು ಮೇ|| ಟಾಟಾ ವೇ ಬ್ರಿಡ್ಜ ಆಳಂದದಲ್ಲಿ ತೂಕ ಮಾಡಿಸಲಾಗಿ ಭರ್ತಿ 42130 ಕೆಜಿ ತೂಕವಿರುತ್ತದೆ, ನಂತರ ಲಾರಿಯನ್ನು ಆಳಂದ ಪಟ್ಟಣದ ಎ,ಪಿ,ಎಮ್,ಸಿಯಲ್ಲಿರುವ ಕೆ,ಎಫ್,ಸಿ,ಎಸ್,ಸಿ ಸಗಟು ಕೇಂದ್ರಕ್ಕೆ ಕೊಂಡುಯ್ದು ಮಹಜರುದಾರರ ಸಮಕ್ಷಮದಲ್ಲಿ ಚೀಲಗಳನ್ನು ಇಳಿಸಿ ಪರಿಶೀಲಿಸಲಾಗಿ-ಬಿಳಿ ಪ್ಲಾಸ್ಟಿಕ್ ಚೀಲಗಳ ಮೇಲೆ ಯಾವುದೇ ವಿಷಯ ಮುದ್ರಣವಾಗಿರುವುದಿಲ್ಲ, ಹಾಗೂ- ಚೀಲಗಳ ಮೇಲೆ ಬೇರೆ ಬೇರೆ ಉತ್ಪಾದಕರು ಮಾರಾಟಗಾರರ ವಿವರ ಮುದ್ರಿಸಲಾಗಿರುತ್ತದೆ,ಈ ಚೀಲಗಳನ್ನು ತೂಕ ಮಾಡಲಾಗಿ 50 ಕೆಜಿ ತೂಕವಿರುತ್ತದೆ, ಈ ರೀತಿ ದೊರೆತ 600 ಚೀಲ ಅಕ್ಕಿಯನ್ನು ಚೀಲಗಳಿಂದ ತಲಾ 01 ಕೆಜಿಯಂತೆ 04 ಸ್ಯಾಂಪಲಗಳನ್ನು ತೆಗೆದು ಅವುಗಳನ್ನು ಒಂದೊಂದು ಕೆಜಿಯಂತೆ ಬಿಳಿ ಬಟ್ಟೆಯಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ ಎಸ್ ಅಂತಾ ಅರಗಿನಿಂದ ಶಿಲ್ ಮಾಡಿ ಪಂಚರ ಚೀಟಿಯನ್ನು ಅಂಟಿಸಿದ್ದು ಈ ರೀತಿ ವಶಪಡಿಸಿಕೊಂಡ 600 ಚೀಲ ಅಕ್ಕಿಯನ್ನು ಮಳೆಗಾಲದ ದಿನವಾದ ಕಾರಣ ಕೆ,ಎಫ್,ಸಿ,ಎಸ್,ಸಿ ಸಗಟು ನಿರ್ವಾಹಕರಾದ ಶ್ರೀ ರಾಜಕುಮಾರ ರಾಠೋಡ ಅವರ ಸುರಕ್ಷತೆಗೆ ನೀಡಿ ಯಥಾಸ್ಥಿತಿ ಕಾಪಾಡುವಂತೆ ಸ್ವಿಕೃತಿ ಪಡೆಯಲಾಯಿತು, ಅನಂತರ ಖಾಲಿ ಲಾರಿ ಸಂಖ್ಯೆ ಕೆಎ 56 2867 ಪುನಃ ಮೇ|| ಟಾಟಾ ವೇ ಬ್ರಿಡ್ಜ ಆಳಂದದಲ್ಲಿ ತೂಕ ಮಾಡಿಸಲಾಗಿ ಖಾಲಿ ಲಾರಿಯ ತೂಕವು-ಕೆಜಿ ಇರುತ್ತದೆ, ಹಾಗಾಗಿ ವಶಪಡಿಸಿಕೊಂಡಿರುವ 600 ಪ್ಲಾಸ್ಟಿಕ್ ಚೀಲಗಳಲ್ಲಿ ವೇ ಬ್ರಿಡ್ಜ & ಚೀಲಗಳ ತೂಕದಿಂದ 300 ಕ್ವಿಂಟಲ್ ಅಕ್ಕಿ ಇರುತ್ತದೆ, ಪ್ರತಿ ಕ್ವಿಂಟಲ್ ಅಕ್ಕಿಗೆ ಮಾರುಕಟ್ಟೆ ಬೇಲೆ ಆರೋಪಿತರು ನಮೂದಿಸಿದಂತೆ 6,15,000/- ಎಂದು ಅಂದಾಜಿಸಲಾಗಿದೆ, ಸಾರಿಗೆ ಇಲಾಖೆಯ ನೊಂದಣಿ ದಾಖಲೆಗಳಂತೆ ಲಾರಿ ಸಂಖ್ಯೆ ಕೆಎ-56 2867 ಮೌಲ್ಯ ಅಂದಾಜು 4,00,000/- ಆಗಿರುತ್ತದೆ. ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆ & ಸರ್ಕಾರದ ಇತರೆ ಯೋಜನೆಗಳಿಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಖರಿದಿಸಿ ರೀಬ್ಯಾಗ್ ಮಾಡಿ ವಿವಿಧ ಬ್ರ್ಯಂಡ ಅಥವಾ ಬ್ರ್ಯಾಂಡ ಇಲ್ಲದೆ ಕಾಳ ಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಕಾಯಿದೆ 1955ರ ಕಲಂ 6[] ಅಡಿಯಲ್ಲಿ 600 ಚೀಲ್ (300 ಕ್ವಿಂಟಲ್) ಅಕ್ಕಿ & ಲಾರಿ ಸಂಖ್ಯೆ ಕೆಎ-56 2867 ವಶಪಡಿಸಿಕೊಂಡಿದೆ, ಈ ಹಿನ್ನೆಲೆಯಲ್ಲಿ ಸಾರ್ವನಿಕ ವಿತರಣಾ ವ್ಯವಸ್ಥೆ & ಇತರೆ ಯೋಜನೆಗಳಿಗೆ ಸೇರಿದ ಅಕ್ಕಿಯನ್ನು ಕಾಳ ಸಂತೆ ವಹಿವಾಟು ಮಾಡುತ್ತಿರುವ ಸರ್ಕಾರ & ಸಾರ್ವಜನಿಕರ ವಿರುಧ್ದ ಸಂಚು ಮಾಡುತ್ತಿರುವ ಕೆಳಕಂಡ ವ್ಯಕ್ತಿಗಳ ವಿರುಧ್ಧ ಕ್ರಮ ಜರುಗಿಸಬೇಕು 1] ಶ್ರೀ ಮಣಿಕಂಠ ರಾಠೋಡ ಮೇ|| ಲಕ್ಷ್ಮೀ ತಿಮ್ಮಪ್ಪ ಟ್ರೇಡರ್ಸ ಎ.ಪಿ,ಎಮ್,ಸಿ ಯಾರ್ಡ ಗುರುಮಿಟ್ಕಲ ಯಾದಗಿರಿ ಜಿಲ್ಲೆ 2] ಶ್ರೀ ಮೈನುಭಾಯಿ ಎಣ್ಣುಗುರೆ ಮಧ್ಯವರ್ತಿ ಕಲಬುರಗಿ 3] ಮೇ|| ವಿಕಾಸ್ ಸೋರಟೆಕ್ಸ ಗೋಂಡಿಯಾ ಮಹಾರಾಷ್ಟ್ರ 4] ವೀರಯ್ಯಾ ಸ್ವಾಮಿ ತಂದೆ ಮಲ್ಲಯ್ಯಾ ಸ್ವಾಮಿ ಬಾಲಸೂರ ತಾ|| ಉಮರ್ಗಾ ಜಿ|| ಉಸ್ಮಾನಾಬಾದ 5] ಜ್ಯೋತಿಬಾ ತಂದೆ ಚಂದ್ರಕಾಂತ ಬುಂದಗೆ  ಸಾ|| ಸಮುದ್ರಾಳ ತಾ|| ಉಮರ್ಗಾ ಜಿ|| ಉಸ್ಮಾನಾಬಾದ 6] ಕಾರ್ತಿಕಯ್ಯಾ ತಂದೆ ಶರಣಯ್ಯಾ ಹಿರೇಮಠ ಸಾ|| ತಡೋಳಾ ತಾ|| ಬಸವ ಕಲ್ಯಾಣ ಜಿ|| ಬೀದರ ರವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲು ದೂರು ಸಲ್ಲಿಸಿದೆ.ಅಂತಾ ಅಂತಾ ಶ್ರೀ ಪ್ರವೀಣಕುಮಾರ ಸಾತನೂರ ಆಹಾರ ನಿರೀಕ್ಷಕರು ಆಳಂದ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಆಳಂದ ಠಾಣೆ ಗುನ್ನೆ ನಂ 134/2019 ಕಲಂ 03, 06(), 07, .ಸಿ.ಆಕ್ಟ್, ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ ನಿಯಂತ್ರಣಾ ಆದೇಶ ಕ್ಲಾಸ್  03, 04, 12, 18, 19 ಮತ್ತು ಕರ್ನಾಟಕ ಅಗತ್ಯ ವಸ್ತುಗಳ ಲೇಕ್ಕ ಪತ್ರಗಳ ನಿರ್ವಹಣೆ ದಾಸ್ತುನು & ಬೆಲೆ ಪ್ರಕರಣಾ ಆದೇಶ ಕ್ಲಾಸ 03,04,06,08 ಮತ್ತು 120[ಬಿ],406,409,416,420,426 ಸಂಗಡ 149 ಐಪಿಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಸುಲೆಪೇಟ ಠಾಣೆ : ಶ್ರೀಮತಿ ಕಾಂತಮ್ಮ ಗಂಡ ಚಂದ್ರಪ್ಪಾ @ ಚಂದ್ರಶ್ಯಾ  ಕರಕನಳ್ಳಿ ಸಾ: ಸುಲೇಪೆಟ ರವರ ಮಗಳಾದ ರತಿದೇವಿ ವಯ: 17 ವರ್ಷ ಇವಳಿಗೆ ದಿನಾಂಕ: 04/06/2019 ರಂದು ಚಿಂಚೋಳಿ ತಾಲೂಕಿನ ಕೊಟಗಾ ಗ್ರಾಮದ ದಿಲೀಪ ತಂದೆ  ಸಿದ್ರಾಮ @ ಶಿರೋಮಣಿ ರವರಿಗೆ ಕೊಟ್ಟು ಕೊಟಗಾ ಗ್ರಾಮದಲ್ಲಿಯೇ ಮದುವೆ ಮಾಡಿರುತ್ತೇವೆ. ಮದುವೆಯಾದ ಬಳಿಕ ನನ್ನ ಮಗಳು ಗಂಡನ ಮನೆಯಲ್ಲಿಯೇ ಇದ್ದಳು ದಿನಾಂಕ: 13/06/2019 ರಂದು ರಾತ್ರಿ ಅಂದಾಜು 08.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಅಳಿಯನಾದ ದಿಲೀಪ ಇತನು ಫೊನ ಮಾಡಿ ನಮಗೆ ತಿಳಿಸಿದೇನೆಂದರೆ ಸಾಯಂಕಾಲ 07.00 ಗಂಟೆಯ ಸುಮಾರಿಗೆ ನಿಮ್ಮ ಸಂಬಂಧಿಕನಾದ ರಾಜು ಟೆಂಗಳಿ ಅನ್ನುವವನು ಮನೆಗೆ ಬಂದು ಮಂಚದ ಮೇಲೆ ಕುಳಿತ್ತಿದ್ದಾನೆ ಅವನು ನಿಮ್ಮ ಸಂಬಂಧಿಕನೇ ಅಂತ ಕೇಳಿದನು ಆಗ ನಾನು ನನ್ನ ಮಗಳಿಗೆ ಫೋನ ಕೊಡಿರಿ ಅಂತ ಹೇಳಿ ಅವಳೊಂದಿಗೆ ಮಾತಾಡಿದಾಗ ಅವಳು ತಿಳಿಸಿದೇನೆಂದರೆ, ಸುಲೇಪೇಟ ಗ್ರಾಮದ ರಾಜು ತಂದೆ ನರಸಪ್ಪ ಹಡಪದ ಇತನು ಬೇರೆ ಊರಿಗೆ ಹೋಗಿ ರಾತ್ರಿ ಆಗಿದ್ದರಿಂದ ಇಲ್ಲಿಗೆ ಬಂದಿರುತ್ತಾನೆ ಅಂತ ಹೇಳಿದಳು. ಆಗ ನಾನು ನಮ್ಮ ಅಳಿಯನಿಗೆ ಅವನನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿರಿ ಹೋರಗೆ ಕಳಿಸಿರಿ ಅಂತ ಹೇಳಿದೆನು. ನಂತರ 03 ದಿವಸಗಳ ಬಳಿಕ ನಮ್ಮ ಅಳಿಯನಾದ ದಿಲೀಪ ಇತನು ನನ್ನ ಮಗಳಾದ ರತಿದೇವಿ ಇವಳನ್ನು ಕಾರ ಹುಣ್ಣಿಮೆ ಹಬ್ಬಕ್ಕೆಂದು ರವಿವಾರ ದಿವಸ ಸಾಯಂಕಾಲ 06.00 ಗಂಟೆಯ ಸುಮಾರಿಗೆ ಕರೆದುಕೊಂಡು ಬಂದು ಅವಳನ್ನು ಮನೆಯಲ್ಲಿ ಬಿಟ್ಟು ಊರಿಗೆ ಹೋದನು. ಬಳಿಕ ನನ್ನ ಮಗಳಾದ ರತಿದೇವಿ ಇವಳು ರಾತ್ರಿ ಅಂದಾಜು 08.30 ಗಂಟೆಯ ಸುಮಾರಿಗೆ ಸಂಡಾಸಕ್ಕೆ ಹೋಗುತ್ತೇನೆ ಅಂತ ಹೋದವಳು ಅರ್ಧ ಗಂಟೆಯಾದರು ಮನೆಗೆ ಬರಲಿಲ್ಲ ಆಗ ನಾನು ಮತ್ತು ನನ್ನ ದೊಡ್ಡ ಮಗಳಾದ ಬಸಮ್ಮ ಇಬ್ಬರೂ ಕೂಡಿ ಸಂಡಾಸ ಕೂಡುವ ಏರಿಯಾದ ಕಡೆಗೆ ಹೋಗಿ ಹುಡುಕಾಡಿದರು ನನ್ನ ಮಗಳು ಕಾಣಲಿಲ್ಲ ನಂತರ ನಾವು ನಮ್ಮ ಮಗಳಿಗಾಗಿ ಎಲ್ಲಾ ಕಡೆ  ಹುಡುಕಾಡುತ್ತಿದ್ದೇವು ಮತ್ತು ಸಂಬಂಧಿಕರ ಊರುಗಳಿಗೆ ಹೋಗಿ ಹುಡುಕಾಡಿದ್ದೇವೆ ಎಲ್ಲಿಯು ಅವಳ ಸುಳಿವು ಸಿಗಲಿಲ್ಲ ದಿನಾಂಕ: 18/06/2019 ರಂದು ಬೆಳಿಗ್ಗೆ ಅಂದಾಜು 10.30 ಗಂಟೆಯ ಸುಮಾರಿಗೆ ಲಲಿತಾ ಗಂಡ ನರಸಪ್ಪ ಹಡಪದ ಇವಳು ಒಂದು ಫೋನ ತಂದು ಕೊಟ್ಟು ನನ್ನ ಮಗಳಾದ ಬಸಮ್ಮ ಇವಳಿಗೆ ನಿಮ್ಮ ತಂಗಿ ರತಿದೇವಿ ಮಾತಾಡುತ್ತಿದ್ದಾಳೆ ಮಾತಾಡು ಅಂತ ನನ್ನ ಮಗಳಿಗೆ ಫೋನ ಕೊಟ್ಟಿದ್ದು ಆಗ ನನ್ನ ಮಗಳಾದ ಬಸಮ್ಮ ಇವಳು ನಾನು ನಮ್ಮ ತಂಗಿ ಜೊತೆ ಮಾತಾಡುವದಿಲ್ಲ ನೀವು ಅವಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದರೆ ಸರಿ ಇಲ್ಲದಿದ್ದಾರೆ ಪೊಲೀಸ್ ಕಂಪ್ಲೇಂಟ್ ಮಾಡುತ್ತೇವೆ ಅಂತ ಹೇಳಿ ಫೋನಿನಲ್ಲಿ ಮಾತಾಡದೆ ಅವಳಿಗೂ ಮತ್ತು ಲಲಿತಾ ಇವಳಿಗೂ ಬಾಯಿ ಮಾತಿನ ತಕರಾರು ಅಗಿರುತ್ತದೆ ಅದರಿಂದ ನಮಗೆ ಗೊತ್ತಾಗಿದ್ದೇನೆಂದರೆ ಅವರ ಮಗನಾದ ರಾಜು ತಂದೆ ನರಸಪ್ಪ ಹಡಪದ ಇತನು ನನ್ನ ಮಗಳಿಗೆ ನಾವು ದಲಿತ ವರ್ಗಕ್ಕೆ ಸೇರಿದವರು ಅಂತ ತಿಳಿದು ಮತ್ತು ಮದುವೆಯಾದವಳನ್ನು ಅಪಹರಿಸಿಕೊಂಡು ಹೋಗಿರುತ್ತಾನೆ. ನಂತರ ಇಲ್ಲಿಯವರೆಗೆ ನಮ್ಮ ಮಗಳಿಗೆ ಅವರು ಕರೆದುಕೊಂಡು ಬರಬಹುದು ಅಂತ ದಾರಿ ನೋಡಿದೆವು ಅದರೆ ಅವರ ತಂದೆ ತಾಯಿಯವರಿಗೆ ವಿಚಾರಿಸಿದರೆ ಅವರು ಸರಿಯಾಗಿ ನಮಗೆ ಸ್ಪಂದಿಸುತ್ತಿಲ್ಲ ಕಾರಣ ನನ್ನ ಮಗಳನ್ನು ಅಪಹರಿಸಿಕೊಂಡು ಹೋದವನ ವಿರುದ್ದ ಸೂಕ್ತ ಕಾನೂನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೆಟ ಪೊಲೀಸ ಠಾಣೆಯ ಗುನ್ನೆ ನಂ 63/2019 ಕಲಂ 363.ಐಪಿಸಿ ಮತ್ತು 3(2) (5-) ಪಿ.ಎ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಶಿರಸಮ್ಮ ಗಂಡ ರವಿಕುಮಾರ ಕಂಬಾರ ಸಾ|| ಬೆನಕನಳ್ಳಿ ಗ್ರಾಮ ರವರ ಗಂಡನಾದ ರವಿಕುಮಾರ ಕಂಬಾರ ರವರು ಒಕ್ಕಲುತನ ಸಂಬಂದವಾಗಿ ಕ್ರಿಷ್ಣಾ ಬ್ಯಾಂಕಿನಲ್ಲಿ ಬೆಳೆ ಸಾಲ ಮತ್ತು ಇತರೆ ಸಾಲ ಮಾಡಿದ್ದು, ಇದರಿಂದ ಮಳೆ ಬಳೆ ಸರಿಯಾಗಿ ಆಗದೆ ನಷ್ಟವಾಗಿದ್ದರಿಂದ ಸಾಲ ಹೇಗೆ ತಿರಿಸಬೇಕೆಂದು ಮಾನಸಿಕ ಮಾಡಿಕೊಡು ನಿನ್ನೆ ನಾವು ಮನೆಯಲ್ಲಿ ಯಾರು ಇಲ್ಲದಿದ್ದಾಗ ದಿನಾಂಕ: 26-06-2019 ರಂದು ಬೆಳಗ್ಗೆ 10-00 ಗಂಟೆಯಿಂದ ಇಂದು ದಿನಾಂಕ: 27-06-2019 ರಂದು ಬೆಳಗ್ಗೆ 07-00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ. ಸದರಿಯವನ ಸಾವಿನಲ್ಲಿ ಯಾರ ಮೇಲೆ ಸಂಶಯವಿರುದ್ದಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಪೊಲೀಸ ಠಾಣೆ ಯು.ಡಿ.ಆರ್ ನಂ 13/2019 ಕಲಂ 174 ಸಿಆರ್ ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 :ದಿನಾಂಕ 26.06.2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತ ರೂಪಲಾಬಾಯಿ ಮತ್ತು ಅವರ ಮಕ್ಕಳಾದ ಸುನೀತಾ ಹಾಗೂ ತಾರಾಬಾಯಿ ಮೂರು ಜನರು ನಂದಿಕೂರ ತಾಂಡಾದ ರೋಡ ಆಚೆಗೆ ಬಯಲು ಜಾಗೆಯಲ್ಲಿ ಟಾಯ್ಲೇಟ್ ಕುರಿತು ನಡೆದುಕೊಂಡು ಹೋಗುವಾಗ ನಂದಿಕೂರ ತಾಂಡಾದ ಹತ್ತೀರ ರೋಡ ಮೇಲೆ ಜೇವರಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ಕಾರ ನಂಬರ ಕೆಎ-42/ಎಮ್-6770 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿರುವ ರೂಪಲಾಬಾಯಿ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ಅವರ ಉಪಚಾರ ಕುರಿತು ತನ್ನ ಕಾರಿನಲ್ಲಿಯೇ ಖಾಸಗಿ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಕಾಮರೆಡ್ಡಿ ಆಸ್ಪತ್ರೆಯಿಂದ ಹೇಳದೆ ಕೇಳದೆ ಓಡಿ ಹೋಗಿದ್ದು ರೂಪಲಾಬಾಯಿ ಇವರು ಕಾಮರೆಡ್ಡಿ ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಆದ ಗಾಯದ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ರಾತ್ರಿ 9-25 ಗಂಟೆ ಸುಮಾರಿಗೆ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಮೃತಪಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಗುನ್ನೆ ನಂ 79/2019 ಕಲಂ 279, 304(ಎ) ಐ.ಪಿ.ಸಿ ಸಂ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ವಾಡಿ ಠಾಣೆ : ಶ್ರೀ ನಾಗನಗೌಡ ತಂದೆ ಸಿದ್ರಾಮಗೌಡ ರಾಮತೀರ್ಥ:ತರ್ಕಸಪೇಟ ರವರು ,ದಿನಾಂಕ 24/06/2019 ರಂದು 05-00 ಪಿ.ಎಮ್ ಸುಮಾರು ನಮ್ಮ ಮನೆಯಿಂದ ಚಹಾದ ಅಂಗಡಿಗೆ ಹೋಗಿ ಚಹಾ ಕುಡಿದು ಬರಲು ಕಾಲ್ನಡಿಗೆಯಿಂದ ಹೊರಟಾಗ ನಮ್ಮ ಮನೆಯ ಮುಂದಿನ ರೊಡಿಗೆ ಹೊರಟಾಗ ಹಿಂದಿನಿಂದ ಟಂ ಟಂ ಗೂಡ್ಸ ಚಾಲಕನು ಅತೀ ವೇಗ ಹಾಗೂ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗಡೆ ಬಿದ್ದ ಪರಿಣಾಮ ಎಡಗಾಲ ತೊಡೆಯ ಹತ್ತಿರ ಮತ್ತು ಬಲಗಾಲ ಕಪಗಂಡ ಹತ್ತಿರ ಭಾರಿ ಗುಪ್ತಗಾಯವಾಗಿದ್ದು ಘಟನೆ ನೋಡಿದ ಮಹಿಮೂದ ಮತ್ತು ನನ್ನ ಹೆಂಡತಿ ಬಂದು ನನಗೆ ಎಬ್ಬಿಸಿದರು. ಟಂ ಟಂ ಗೂಡ್ಸ ನಂಬರ ನೋಡಲಾಗಿ ಕೆಎ-32 ಡಿ-1932 ಅಂತಾ ಬರೆದಿತ್ತು. ಈ ಘಟನೆ ನಡೆದಾಗ 05-15 ಪಿ.ಎಮ್ ಆಗಿತ್ತು. ನಂತರ ನನ್ನ ಹೆಂಡತಿ ಮತ್ತು ಅಳಿಯ ಕೂಡಿಕೊಂಡು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇಂದು ನನಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆ ಗುನ್ನೆ ನಂ ಕಲಂ:279,338 ಐಪಿಸಿ ಸಂಗಡ 187 ಐ.ಎಮ್.ವ್ಹಿ ಕಾಯ್ದೆ. ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಮ್ಯಾನ ಹೋಲನಲ್ಲಿ ಪೌರಕಾರ್ಮಿಕರನ್ನು  ಇಳಿಸಿ ಸ್ವಚ್ಛಗೊಳಿಸಿದವರ ವಿರುದ್ಧ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಸತೀಶ.ಕೆ,ಹೆಚ್‌. ಜಂಟಿ ನಿರ್ದೆಶಕರು ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ರವರು ದಿನಾಂಕ 27.06.2019 ಪ್ರಜಾವಾಣಿ ಪತ್ರಿಕೆಯಲ್ಲಿ ಕಲಬುರಗಿಯ ಸಮಾಜ ಕಲ್ಯಾಣ ಕಚೇರಿಯ ಎದುರು ಪೌರ ಕಾರ್ಮೀಕರೊಬ್ಬರು ಬುಧವಾರ ಮ್ಯಾನ ಹೋಲ್ನ್ನು ಸ್ವಚ್ಚಗೊಳಿಸಿದರೆಂಬ ವರದಿಯು ಛಾಯ ಚಿತ್ರ ಸಮೇತ ಪ್ರಕಟಗೊಂಡಿರುತ್ತದೆ. ಬಗ್ಗೆ ದಿನಾಂಕ 27.06.2019 ರಂದು ಸ್ಥಳ ತನಿಖೆ ಮಾಡಲಾಗಿ ಕೆಳಕಂಡ ವ್ಯಕ್ತಿಗಳು ಮ್ಯಾನ ಹೋಲ್ಸ್ವಚ್ಚ ಗೊಳಿಸಿರುತ್ತಾರೆ.!) ಶ್ರೀ ಅಮೀತಕುಮಾರ 2) ಶ್ರೀ ಸುರೇಶ ತಂದೆ ಮಹೇಶ ಸಿಂಗ್‌ 3) ಶ್ರೀಮತಿ ರಾದಾ ಗಂಡ ಸುರೇಶ ದಿನಾಂಕ 27.06.2019 ರಂದು ಸ್ಥಳ ಪರಿಶೀಲಸಲಾಗಿ ಮ್ಯಾನ್ಹೋಲ್ಸ್ವಚ್ಚ ಗೊಳಿಸಿದ ವ್ಯಕ್ತಿಗಳ ಹೇಳಿಕೆಯನ್ನು ಪಡೆಯಲಾಗಿರುತ್ತದೆ ಕಲಬುರಗಿ ನಗರ ಶಿವಾಜಿ ಮರಾಠಾ ಖಾನಾವಳಿ ಮಾಲೀಕರು ಐವಾನ್‌--ಶಾಹಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಮುಂಭಾಗದಲ್ಲಿರುವ ಮ್ಯಾನ್ಹೋಲ್‌‌ನಲ್ಲಿ ಮಳೆಯಿಂದಾಗಿ ನೀರು ಕಟ್ಟಿಕೊಂಡಿದ್ದು ಇದರೊಂದಿಗೆ ಕಲ್ಲು ಮತ್ತು ಕಸ ಕಡ್ಡಿಗಳಿರುವುದರಿಂದ ನೀರು ಸರಗವಾಗಿ ಹೋಗುತ್ತಿಲ್ಲ ಇದರಿಂದಾಗಿ ಹೋಟೆಲ್ಲಿನವರಿಗೆ ಸಮಸ್ಯೆಯುಂಟಾಗುತ್ತಿದೆ ಆದ್ದರಿಂದ ಅಕ್ಕ ಪಕ್ಕದ ಹೋಟೆಲಿನ ಮಾಲಿಕರು ಸೇರಿ ರೂ 500-600 ರೂ ವರೆಗೆ ಹಣವನ್ನು ಕೊಡುತ್ತೇವೆಂದು ಹೇಳಿ ಮ್ಯಾನ್ ಹೋಲ್ನನ್ನು ಸ್ವಚ್ಚಗೊಳಿಸಿ ಕೊಡಲು ತಿಳಿಸಿದ ಮೇರೆಗೆ ನಾವು ಮ್ಯಾನ್ಹೋಲ್ನ್ನು ಸ್ವಚ್ಚ ಮಾಡಿರುತ್ತೇವೆ ಮತ್ತು ಮ್ಯಾನ್ ಹೋಲ್ಗೆ ಶ್ರೀ ಅಮೀತಕುಮಾರನು ಇಳಿದಿರುತ್ತಾನೆಂದು ಸದರಿಯವರ ಹೇಳಿಕೆಯಿಂದ ತಿಳಿದು ಬಂದಿರುತ್ತದೆ.The Prohibition of employment as Manual scavenger and Rehabilitation Act 2013 Sec 7  ಪ್ರಕಾರ ಒಳ ಚರಂಡಿ ಮತ್ತು ರೊಚ್ಚು ತೊಟ್ಟಿ ( Septic tanks ) ಗಳನ್ನು ಸ್ವಚ್ಚಗೊಳಿಸುವಂತೆಹ ಅಪಾಯಕಾರಿ ಕೆಲಸಕ್ಕೆ ವ್ಯಕ್ತಿಗಳನ್ನು ತೊಡಗಿಸಿ ಕೊಳ್ಳುವುದನ್ನು ಅಥವಾ ನಿಯೋಜನೆ ಮಾಡುವುದನ್ನು ನಿಷೇಧಿಸಲಾಗಿದೆ. ಪ್ರಕರಣದಲ್ಲಿ ಶಿವಾಜಿ ಮರಾಠಾ ಖಾನಾವಳಿಯ ಮಾಲಿಕರು ಮ್ಯಾನ ಹೋಲ್ನಲ್ಲಿ ಇಳಿಸುವುದನ್ನು ನಿಷೇದಿಸಲಾಗಿದ್ದರೂ ಕೂಡಾ ಮೇಲ್ಕಂಡ ಮೂರು ಜನರನ್ನು ಕಾರ್ಯಕ್ಕೆ ಬಳಿಸಿಕೊಂಡು The Prohibition of employment as Manual scavenger and Rehabilitation Act 2013 Sec 7  ಕಾಯ್ದೆಯನ್ನು ಉಲ್ಲಂಘಿಸಿರುತ್ತಾರೆ ಆದ್ದರಿಂದ ಸದರಿಯವರ ವಿರುದ್ದ The Prohibition of employment as Manual scavenger and Rehabilitation Act 2013 Sec 7  ಪ್ರಕಾರ ಹಾಗೂ SC/ST POA Act 1989 ಕಲಂ 3 (1) (ಜೆ) ರಡಿ ತಪ್ಪಿತಸ್ಥರಾದ ಶಿವಾಜಿ ಮರಾಠಾ ಖಾನಾವಳಿಯ ಮಾಲಿಕರ ವಿರುದ್ದ ಪ್ರಕರಣವನ್ನು ದಾಖಲಿಸಲು ಕೋರಿದೆ. ಮ್ಯಾನ ಹೊಲ್ಸ್ವಚ್ಛಗೊಳಿಸಿದವರು ಪರಿಶಿಷ್ಟ ಜಾತಿಯ ಭಂಗಿ ಸಮುದಾಯಕ್ಕೆ ಸೇರಿರುವದಾಗಿ ತಿಳಿಸಿರುವ ವಿಷಯವನ್ನು ತಮ್ಮ ಗಮನಕ್ಕೆ ತರಬಯಸಿದೆ ಅಂತ ಇತ್ಯಾದಿಯಾಗಿ ನಿಡಿರುವ ದೂರು ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.69/19 ಕಲಂ The Prohibition of employment as Manual scavenger and Rehabilitation Act 2013 Sec 7 ಮತ್ತು SC/ST POA Act 1989 ಕಲಂ 3 (1) (ಜೆ) ನೇದ್ದರ ಪ್ರಕಾರ ಪ್ರಕರಣ  ದಾಖಲಿಸಲಾಗಿದೆ,
ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ಸಾಹೇಬ ಪಟೇಲ ತಂದೆ ಖಾಸಿಂಪಟೇಲ ಖಾಜಿ ಸಾ|| ಅರಳಗುಂಡಗಿ ರವರು,ತಮ್ಮೂರ ಸೀಮಾಂತರದಲ್ಲಿ ನಮ್ಮ ಹೊಲ ಇದ್ದು, ಅದರ ಸರ್ವೆ ನಂ 260 ನೇದ್ದು ಇರುತ್ತದೆ, ನಮ್ಮ ಅಣ್ಣತಮ್ಮಕಿಯ ನಜೀರ ತಂದೆ ಮೈದುನಪಟೇಲ ಖಾಜಿ ಇವರು ನಮ್ಮ ಹೊಲದಲ್ಲಿನ ದಾರಿ ವಿಷಯಕ್ಕೆ ನಮ್ಮೊಂದಿಗೆ ಸುಮಾರುಸಲ ತಕರಾರು ಮಾಡಿಕೊಂಡು ಬಂದಿರುತ್ತಾರೆ, ಆದರೆ ನಮ್ಮ ಹೊಲದಲ್ಲಿ ದಾರಿ ಇರುವುದಿಲ್ಲಾ ಅಂತಾ ನಮ್ಮೂರಿನ ಹಿರಿಯರು ತಿಳಿಸಿ ಹೇಳಿದರು ಕೇಳದೆ ನಮ್ಮ ವಿರುದ್ದ ಹಗೆ ಸಾಧಿಸುತ್ತಾ ಬಂದಿದ್ದು  ದಿನಾಂಕ 26-06-2019 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ತಂದೆ ಖಾಸಿಂಪಟೇಲ, ನಮ್ಮ ಅಣ್ಣ ಖಾಜಾಪಟೇಲ ತಂದೆ ಮಹಮ್ಮದ ಶೇಖ ಖಾಜಿ ಹಾಗು ಅವರ ಹೆಂಡತಿ ಕರೀಂಬಿ ರವರು ಕೂಡಿ ನಮ್ಮೂರ ಸಂತೋಷ ಮಂಗಳೂರ ರವರ ಜೇ.ಸಿ.ಬಿ ಯನ್ನು ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿದ್ದು, ನಮ್ಮ ಹೊಲದಲ್ಲಿದ್ದ ದಾರಿಯನ್ನು ನಾವು ಜೇ.ಸಿ.ಬಿ ಯಿಂದ ಬಂದ ಮಾಡುತ್ತಿದ್ದಾಗ ನಮ್ಮ ಅಣ್ಣತಮ್ಮಕಿಯ 1] ನಜೀರ ತಂದೆ ಮೈದುನಸಾಬ ಖಾಜಿ, 2] ಇಸ್ಮಾಯಿಲ ತಂದೆ ಪೀರಸಾಬ ಖಾಜಿ, 3] ಸಲೀಮ ತಂದೆ ಮೈದುನಸಾಬ ಖಾಜಿ, 4] ಸೈಪನಸಾಬ ತಂದೆ ಮೈದುನಸಾಬ ಖಾಜಿ, 5] ಶಬ್ಬಿರ ತಂದೆ ಇಸ್ಮಾಯಿಲ ಖಾಜಿ, 6] ಬಂದೆನವಾಜ ತಂದೆ ಇಸ್ಮಾಯಿಲ ಖಾಜಿ, 7] ಅಮೀನಾಬಿ ಗಂಡ ಮೈದುನಪಟೇಲ ಖಾಜಿ, 8] ಮಹಿಬೂಬ್ಬಿ ಗಂಡ ಇಸ್ಮಾಯಿಲ ಖಾಜಿ ಸಾ|| ಎಲ್ಲರೂ ಗುಂಪುಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ ಮತ್ತು ಕಬ್ಬಿಣದ ಸರಪಳಿಯನ್ನು ಹಿಡಿದುಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿ ಸೂಳಿ ಮಕ್ಕಳ್ಯಾ ಹೊಲದಾಗ ನಮಗೆ ದಾರಿ ಇದೇ ಅಂತಾ ಹೇಳಿದರು ನೀವು ಕೇಳದೆ ಇವತ್ತ ದಾರಿ ಬಂದಮಾಡಲಾಕ ಬಂದಿರಾ ಅಂತಾ ಅಂದರು, ಆಗ ನಾವು ವಿರೋಧ ಮಾಡಿದ್ದಕ್ಕೆ ನಜೀರ ಈತನು ಬಡಿಗೆಯಿಂದ ನನ್ನ ಎಡಮೊಳಕಾಲಿನ ಮೇಲೆ ಮತ್ತು ತಲೆಯ ಮೇಲೆ ಹೊಡೆದು ಒಳಪೆಟ್ಟು ಪಡಿಸಿದನು, ಇಸ್ಮಾಯಿಲ ಇವನು ಕಲ್ಲಿನಿಂದ ನಮ್ಮ ಅಣ್ಣ ಖಾಜಾಪಟೇಲನ ತಲೆ ಹಿಂದೆ ಹೊಡೆದು ರಕ್ತಗಾಯ ಪಡಿಸಿದನು, ಜಗಳ ಬಿಡಿಸಲು ಬಂದ ನಮ್ಮ ತಂದೆಗೆ ಸಲೀಮ ಈತನು ಕಲ್ಲಿನಿಂದ ಅವರ ಎಡಗೈ ಮೊಳಕೈ ಹತ್ತಿರ ಹೊಡೆದು ಭಾರಿ ಒಳಪೆಟ್ಟು ಪಡಿಸಿದನು, ಸೈಪನಸಾಬ ಇವನು ಕಬ್ಬಿಣದ ಸರಪಳಿಯಿಂದ ನನ್ನ ಬೆನ್ನಿನ ಮೇಲೆ ಹೊಟ್ಟೆಯ ಮೇಲೆ 4-5 ಸಲ ಹೊಡೆದು ಒಳಪೆಟ್ಟು ಪಡಿಸಿರುತ್ತಾರೆ, ಶಬ್ಬೀರ ಇವನು ಕೈಯಿಂದ ಕಾಲಿನಿಂದ ನಮ್ಮ ಅಣ್ಣ ಖಾಜಾಪಟೇಲನ ಬೆನ್ನಿಗೆ ಹೊಟ್ಟೆಗೆ ಹೊಡೆದಿರುತ್ತಾರೆ, ಬಂದೆನವಾಜ ಇವನು ಬಡಿಗೆಯಿಂದ ನಮ್ಮ ತಂದೆಯ ಹೊಟ್ಟೆಯ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಒಳಪೆಟ್ಟು ಪಡಿಸಿರುತ್ತಾನೆ, ಅಮೀನಾಬಿ ಮತ್ತು ಮೈಹಿಬುಬ್ಬಿ ಇವರು ನನ್ನ ಹಾಟ್ಯಾನ ಮಕ್ಕಳಗಿ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅನ್ನುತ್ತಿದ್ದಾಗ ಶಬ್ಬೀರ ಈತನು ನನಗೆ ಸಾಯಿಸುವ ಉದ್ದೇಶದಿಂದ ನನ್ನ ತೊರಡನ್ನು ಹಿಚುಕುತ್ತಿದ್ದಾಗ ನಾನು ಅವನಿಂದ ತಪ್ಪಿಸಿಕೋಂಡಿರುತ್ತೇನೆ ಇಲ್ಲದಿದ್ದರೆ ನನಗೆ ಸಾಯಿಸೆ ಬಿಡುತ್ತಿದ್ದನು, ಆಗ ನಮ್ಮ ಅತ್ತಿಗೆ ಕರೀಂಬಿ ಗಂಡ ಖಾಜಾಪಟೇಲ, ಮತ್ತು ಜೇ.ಸಿ.ಬಿ ಜೊತೆಯಲ್ಲಿದ್ದ ಬಂದೆನವಾಜ ತಂದೆ ಇಸ್ಮಾಯಿಲಸಾಬ ಗೋಗಿ, ಖಾಸಿಂಪಟೇಲ ತಂದೆ ಮಹಿಬೂಬಪಟೇಲ ಶಿವಪೂರ ರವರು ಕೂಡು ಬಿಡಿಸಿಕೊಂಡಿರುತ್ತಾರೆ, ಇಲ್ಲದಿದ್ದರೆ ನಮಗೆ ಕೊಲೆ ಮಾಡುತ್ತಿದ್ದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆ ಗುನ್ನೆ ನಂ 67/2019 ಕಲಂ 143 147 148 341 323 324 326 307 504 506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ನಜೀರ ತಂದೆ ಮೈದುನಸಾಬ ಖಾಜಿ ಸಾ : ಅರಳಗುಂಡಗಿ ರವರದು ತಮ್ಮೂರ ಸೀಮಾಂತರದಲ್ಲಿ ನಮ್ಮ ಹೊಲ ಇದ್ದು, ಅದರ ಸರ್ವೆ ನಂ 259 ನೇದ್ದು ಇರುತ್ತದೆ, ನಮ್ಮ ಹೊಲಕ್ಕೆ ಹೋಗಲು ನಮ್ಮ ಅಣ್ಣತಮ್ಮಕಿಯ ಸಾಹೇಬ ಪಟೇಲ ತಂದೆ ಖಾಸಿಂ ಪಟೇಲ ಖಾಜಿ ರವರ ಹೊಲದಲ್ಲಿ ದಾರಿ ಇರುತ್ತದೆ, ಆದರೆ ಸಾಹೇಬ ಪಟೇಲ ರವರು ನಮಗೆ ಅವರ ಹೊಲದಲ್ಲಿನ ದಾರಿಯಲ್ಲಿ ಹೋಗಲು ಬಿಡುತ್ತಿರಲಿಲ್ಲಾ, ಬಗ್ಗೆ ನಮ್ಮ ಗ್ರಾಮದ ಹಿರಿಯರು ತಿಳಿಸಿ ಹೇಳಿದರು ಕೇಳದೆ ನಮ್ಮ ವಿರುದ್ದ ಹಗೆ ಸಾಧಿಸುತ್ತಾ ಬಂದಿರುತ್ತಾರೆ, ದಿನಾಂಕ 26-06-2019 ರಂದು ಬೆಳಿಗ್ಗೆ ಸಾಹೇಬ ಪಟೇಲ ತಂದೆ ಖಾಸಿಂ ಪಟೇಲ ಖಾಜಿ ರವರು ನಮ್ಮೂರ ಸಂತೋಷ ಮಂಗಳೂರ ರವರ ಜೇಸಿಬಿ ತೆಗೆದುಕೊಂಡು ತಮ್ಮ ಹೋಲಕ್ಕೆ ಹೋಗಿ ದಾರಿಯನ್ನು ಜೆ.ಸಿ.ಬಿ ಯಿಂದ ಬಂದ ಮಾಡುತ್ತಿರುವ ವಿಷಯ ಗೊತ್ತಾಗಿ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಇಸ್ಮಾಯಿ ತಂದೆ ಪೀರಸಾಬ ಖಾಜಿ ಮತ್ತ ನಮ್ಮ ತಮ್ಮಂದಿರಾದ ಸಲೀಮ, ಸೈಪನಸಾಬ ಹಾಗು ನಮ್ಮ ತಾಯಿ ಅಮೀನಬಿ ರವರು ಕೂಡಿ 09;00 .ಎಂ ಕ್ಕೆ ಹೊಲಕ್ಕೆ ಹೋಗಿ ನೋಡಿದಾಗ, 1] ಸಾಹೇಬಪಟೇಲ ತಂದೆ ಖಾಸಿಂಪಟೇಲ ಖಾಜಿ, 2] ಖಾಜಾಪಟೇಲ ತಂದೆ ಮೊಹಮ್ಮದಶೇಖ ಖಾಜಿ, 3] ಖಾಸಿಂಮಪಟೇಲ ತಂದೆ ಇಮಾಮಪಟೇಲ ಖಾಜಿ, 4] ರೋಷನಬಿ ಗಂಡ ಖಾಸಿಂಪಟೇಲ ಖಾಜಿ ರವರು ಕೂಡಿ ದಾರಿ ಬಂದ ಮಾಡುತ್ತಿದ್ದರು, ಆಗ ನಾವು ಅವರ ಹತ್ತಿರ ಹೋಗಿ ದಾರಿ ಯಾಕ ಬಂದ ಮಾಡಲಾಕತ್ತಿರಿ ಅಂತಾ ಕೇಳಿದ್ದಕ್ಕೆ ನಮ್ಮ ಹೊಲದಲ್ಲಿನ ದಾರಿ ನಾವು ಬಂದ ಮಾಡಿದರ ನಿವ್ಯಾರು ಕೇಳವರೊ ಸೂಳಿ ಮಕ್ಕಳ್ಯಾ ಅಂತಾ ಅಂದು ಅವರಲ್ಲಿ ಸಾಹೇಬ ಪಟೇಲ ಇವನು ಕೈಯಿಂದ ನನ್ನ ಹೊಟ್ಟೆಗೆ ಹೊಡೆದನು, ಬಿಡಿಸಲು ಬಂದ ನಮ್ಮ ಅಣ್ಣ ಇಸ್ಮಾಯಿಲ ರವರಿಗೆ ಖಾಜಾ ಪಟೇಲ ಇವನು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ಖಾಸಿಂ ಪಟೇಲ ಇವನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದನು, ರೋಷನಬಿ ಇವರು ಹಾಟ್ಯಾನ ಮಕ್ಕಳಿಗೆ ಹೊಡೆದು ಖಲಾಸೆ ಮಾಡರಿ ಅಂತಾ ಅನ್ನುತ್ತಿದ್ದಾಗ ಸಾಹೇಬ ಪಟೇಲ ಇವನು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತೊರಡನ್ನು ಹಿಚುಕುತ್ತಿದ್ದಾಗ ನಮ್ಮ ತಾಯಿ ಮತ್ತು ನಮ್ಮ ತಮ್ಮಂದಿರು ಬಿಡಿಸಿಕೊಂಡಿರುತ್ತಾರೆ, ಇಲ್ಲದಿದ್ದರೆ ನನಗೆ ಜೀವ ಸಹೀತ ಬಿಡುತ್ತಿರಲಿಲ್ಲಾ, ನಂತರ ನಾವು ಅಲ್ಲಿಂದ ಮನೆಗೆ ಹೋದೇವು, ನಂತರ ನಾವು ನಮ್ಮ  ಮನೆಯ ಮುಂದೆ ಇದ್ದಾಗ 5] ಶಬ್ಬೀರ ತಂದೆ ಮೊಹಮ್ಮದರಫೀಕ ಆಲಗೂರ, 6] ಹಜ್ಜು ತಂದೆ ಮೊಹಮ್ಮದರಫೀಕ ಆಲಗೂರ ಸಾ|| ಇಬ್ಬರು ಸರಕಾರಿ ದವಾಖಾನೆ ಹಿಂದೆ ಸಿಂದಗಿ 7] ಬಿಸ್ಮಿಲ್ಲಾ ಗಂಡ ಸಾಹೇಬಪಟೇಲ ಖಾಜಿ, 8] ಸೈಪನಬಿ ಗಂಡ ಬಂದೆನವಾಜ ಗೋಗಿ ರವರು ಕೂಡಿ ಗೂಡ್ಸ್ ಟಂಟಂ ನಂ ಕೆ.-28/ಸಿ-4443 ನೇದ್ದರಲ್ಲಿ ಕುಳಿತು ನಮ್ಮ ಹತ್ತಿರ ಬಂದು ನಮಗೆ ರಂಡಿ ಮಕ್ಕಳ್ಯಾ ಹೊದಲ್ಲಿ ನಮ್ಮ ಮಂದಿಗಿ ಹೊಡೆದಿರಾ, ಇವತ್ತ ನೀವು ಸತ್ತರಿ ಅಂತಾ ಅನ್ನುತ್ತಾ ಅವರಲ್ಲಿ ಬಿಸ್ಮಿಲ್ಲಾ ಇವಳು ಕೈಯಿಂದ ನನ್ನ ಹೆಂಡತಿ ಲಾಲಬಿಯ ತುಟಿಯ ಮೇಲೆ ಮತ್ತು ಬಲ ಕಿವಿಗೆ ಹಾಗು ಹೊಟ್ಟೆಗೆ ಹೊಡೆದಳು, ಸೈಪನಬಿ ಇವಳು ನಮ್ಮ ತಮ್ಮನ ಹೆಂಡತಿ ರಿಯಾನಾ ಇವಳಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಳು, ಶಬ್ಬಿರ ಈತನು ನಮ್ಮ ತಮ್ಮ ಸೈಪನಗೆ ಕೈಯಿಂದ ಬೆನ್ನಿನ ಮೇಲೆ ಮತ್ತು ಬಲ ಭುಜದ ಮೇಲೆ ಹೊಡೆದು ಒಳಪೆಟ್ಟು ಪಡಿಸಿದನು, ಹಜ್ಜು ಈತನು ನಮ್ಮ ಅಣ್ಣನ ಮಗ ಶಬ್ಬಿರ ತಂದೆ ಇಸ್ಮಾಯಿಲ ಖಾಜಿ ಈತನಿಗೆ ಕಾಲಿನಿಂದ ತೊರಡಿನ ಹತ್ತಿರ ಒದ್ದು ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ ಗುನ್ನೆ ನಂ 68/2019 ಕಲಂ 143 147 148 323 324 307 504 506 ಸಂ 149 ಐಪಿಸಿ ಪ್ರಕಾರ ಪ್ರಕಣ ದಾಖಲಿಸಲಾಗಿದೆ.
ಫರತಾಬಾದ ಠಾಣೆ : ದಿನಾಂಕ:26.06.2019 ರಂದು ಸಾಯಂಕಾಲ ನಾನು ಮತ್ತು ನನ್ನ ಅಣ್ಣ ಬಾವಾಪಟೇಲ ಹಾಗೂ ಚಂದ್ರಶ್ಯಾ ಕೂಡಿ ನಮ್ಮೂರ ಸರಕಾರಿ ಶಾಲೆಯ ಸಮೀಪ ಇರುವ ಸರಕಾರಿ ಜಮೀನ ಮಾರ್ಗವಾಗಿ ನಡೆದುಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಅನ್ವರಪಟೇಲ ಹಾಗೂ ನಮ್ಮೂರ ಈಶಪ್ಪ @ ಈಶ್ವರ ತಂದೆ ಶಿವಶರಣ ಪೋತ್ಯಾ ಇವರು ಬಂದು ನಮಗೆ ಅಡ್ಡಗಟ್ಟಿ ನಿಲ್ಲಿಸಿ ನನಗೆ ತೇರಿ ಮಾಕಿ ಛೂತ ನಿನ್ನವ್ವುನ ತುಲ್ಲು ನಿನ್ನ ಹೆಂಡತಿ ತುಲ್ಲು ಹಡತಿನಿ ನನ್ನ ಹೋಲಕ್ಕೆ ಯಾಕ ಹೋಗಿದ್ದಿ ನಿನಗೆ ಹೋಡದ ಖಲಾಸ ಮಾಡತಿನಿ ಅಂತಾ ಹೋಲಸಾಗಿ ಬೈದು ಕೈಯಿಂದ ನನ್ನ ತಲೆಗೆ ನನ್ನ ಎರಡು ಕಾಪಾಳಕ್ಕೆ ಹೋಡೆದು ನನ್ನ ಎಡಗೈ ಒಡ್ಡು ಮುರಿದನು ಬಾವಾಪಟೆಲನಿಗೆ ಅನ್ವರಪಟೇಲ ಇವನು ಕೈಯಿಂದ ಎರಡು ಕಪಾಳಕ್ಕೆ ಹೋಡೆದನು. ಚಂದ್ರಶ್ಯಾನಿಗೆ ಈಶಪ್ಪ @ ಈಶ್ವರ ಇವನು ರಂಡಿ ಮಗನೆ ನೀ ಯಾಕ ಅವರ ಸಂಗಟ ಹೊಂಟಿದಿ ಅಂತಾ ಬೈದು ಕೈಯಿಂದ ಅವನ ಕಪಾಳಕ್ಕೆ ಹೋಡೆದಿರುತ್ತಾರೆ ನಂತರ ನಾವು ನಮ್ಮ ಜಗಳದ ಬಗ್ಗೆ ಊರ ಹಿರಿಯರಲ್ಲಿ ಮಾತುಕತೆ ಆಡಿ ಬಗೆಹರಿಸಿಕೋಳ್ಳಬೇಕು ಅಂತಾ ನಿನ್ನೆ ಊರಲ್ಲಿ ಇದ್ದು. ಅನ್ವರಪಟೇಲ ಹಾಗೂ ಈಶಪ್ಪ @ ಈಶ್ವರ ಇವರು ಮಾತುಕತೆಗೆ ಬಾರದೆ ಇದ್ದರಿಂದ ನಮಗೆ ಅವವರಿಂದ ಜೀವದ ಭಯ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ  ಠಾಣೆಯ ಗುನ್ನೆ ನಂ 91/2019 ಕಲಂ 341,323,504,506 ಸಂಗಡ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ದತ್ತಪ್ಪ ತಂದೆ ರಾಯಪ್ಪ ನಾಯ್ಕೋಡಿ ಮು:ಹುಣಸಿಹಡಗೀಲ್ ಗ್ರಾಮ ತಾ:ಜಿ:ಕಲಬುರಗಿ ರವರ ಹಿರಿಯ ಮಗಳಾದ ನಾಗಮ್ಮ ಇವಳು ಪುಣೆಯಲ್ಲಿ ಪ್ಲಾಟ ಖರೀದಿ ಮಾಡುತ್ತಿದ್ದರಿಂದ ಅವಳಿಗೆ ಹಣ ಕಡಿಮೆ ಬಿದ್ದಿದ್ದು ಅದಕ್ಕೆ ನನ್ನ ಮಗಳು ಹಾಗೂ ಅಳಿಯ ಅಮೃತ ಇಬ್ಬರೂ ದಿನಾಂಕ:24.06.2019 ರಂದು ಪುಣೆಯಿಂದ ನಮ್ಮೂರಿಗೆ ಬಂದಿದ್ದು. ಅಲ್ಲದೆ ಅಂದೇ ಕೋಟ್ರಕಿ ಗ್ರಾಮದಲ್ಲಿ ಇರುವ ನನ್ನ ಸಡ್ಡಕ ಲಕ್ಕಪ್ಪ ತಂದೆ ಮರೇಪ್ಪ ಇವರ ಹತ್ತೀರ ಹೋಗಿ ನನ್ನ ಮಗಳಿಗೆ ಪ್ಲಾಟ ಖರೀದಿ ಮಾಡಲು 1 ಲಕ್ಷ 6 ಸಾವಿರ ರೂಪಾಯಿ ಹಣವನ್ನು ಸಾಲ ಅಂತಾ ಪಡೆದುಕೊಂಡು ಬಂದಿದ್ದು. ಅದರಂತೆ ನನ್ನ 3 ತಿಂಗಳ ಪಗಾರದ ಹಣ ಒಟ್ಟು 66 ಸಾವಿರ ರೂಪಾಯಿ ಹಾಗೂ ನನ್ನ ಮಗಳ ಸಾಲದ ಹಣ ಸೇರಿ ಒಟ್ಟು 1 ಲಕ್ಷ 88 ಸಾವಿರ ರೂಪಾಯಿಗಳನ್ನು ನಮ್ಮ ಮನೆಯ ದೇವರ ಕೋಣೆಯಲ್ಲಿ ಇರುವ ಕಬ್ಬಿಣದ ಅಲಮಾರಿಯ ಲಾಕರನಲ್ಲಿ ಇಟ್ಟಿದ್ದು ಅದರಂತೆ ಬಂಗಾರದ ಆಭರಣಗಳು ಕೂಡಾ ಅಲಮಾರಿಯಲ್ಲಿ ಇಟ್ಟಿರುತ್ತೇವೆ. ನಿನ್ನೆ ದಿನಾಂಕ:25.06.2019 ರಂದು ರಾತ್ರಿ 11.00 ಗಂಟೆಯ ಸೂಮಾರಿಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ಇತರೆ ಮನೆಯವರು ಮನೆಯಲ್ಲಿ ಊಟ ಮಾಡಿದ್ದು ನಂತರ ನನ್ನ ಹಿರಿಯ ಮಗ ಸೋಮಲಿಂಗ ಹಾಗೂ ಸೋಸೆ ಅಶ್ವಿನಿ ಇಬ್ಬರೂ ಕೆಳಗಡೆ ಬೆಡ್ ರೂಮನಲ್ಲಿ ಮಲಗಿದ್ದು ಇನ್ನೂಳಿದ ನಾನು ನನ್ನ ಹೆಂಡತಿ ಕವಿತಾ, ಅನೀಲಕುಮಾರ, ನಾಗಬಾಯಿ ಹಾಗೂ ಅಳಿಯ ಅಮೃತ ಎಲ್ಲರೂ ಕೂಡಿ ಮನೆಯ ಛತ್ತಿನ ಮೇಲೆ ಮಲಗಿಕೊಂಡಿದ್ದೇವು. ದಿನಾಂಕ:26.06.2019 ರಂದು ನಸುಕಿನ 05.00 ಗಂಟೆಯ ಸೂಮಾರಿಗೆ ನನ್ನ ಹೆಂಡತಿ ಇಂದುಬಾಯಿ ಇವಳು ನನ್ನ ಮಗಳು ಹಾಗೂ ಅಳಿಯ ಪುಣೆಗೆ ಹೋಗುತ್ತಿದ್ದರಿಂದ ನಿರು ಕಾಯಿಸಲು ಕೆಳಗಡೆ ಹೋಗಿ ಮನೆ ಕಳ್ಳತನವಾಗಿದೆ ಅಂತಾ ಗಾಬರಿಯಲ್ಲಿ ಚಿರಾಡುತ್ತಿದ್ದು. ಆಗ ನಾನು ಮತ್ತು ಇನ್ನೂಳಿದವರು ಕೂಡಿ ಕೆಳಗಡೆ ಬಂದು ನೋಡಲು ನನ್ನ ಮಗಳು ಹಾಗೂ ಸೋಸೆ ಮಲಗಿಕೊಂಡ ರೂಮಗೆ ಹೋರಗಿನಿಂದ ಕೊಂಡಿ ಹಾಕಿದ್ದು. ಇನ್ನೂಳಿದ ದೇವರು ಮನೆ ಸೇರಿದಂತೆ 3 ರೂಮಗಳಿಗೆ ಹಾಕಿದ ಕಿಲಿ ಮುರಿದು ಬಾಗಿಲು ಖುಲ್ಲಾ ಆಗಿದ್ದು. ಆಗ ನಾವೇಲ್ಲರೂ ಕೂಡಿ ದೇವರ ಮನೆಯ ಒಳಗೆ ಅಲಮಾರಿಯ ಹತ್ತೀರ ಹೋಗಿ ನೋಡಲು ಅಲಮಾರಿಯ ಕಿಲಿ ಮುರಿದು ಒಳಗಿನ ಸಾಮಾನುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದು ಅಲ್ಲದೆ ಅಲಮಾರಿಯ ಲಾಕರ ಕೂಡಾ ಮುರಿದ್ದಿದ್ದು ನಾವೆಲ್ಲರೂ ನೋಡಲು ಅಲಮಾರಿಯಲ್ಲಿಟ್ಟ ನನ್ನ ಮಗಳ ಸಾಲದ ಹಾಗೂ ನನ್ನ ಪಗಾರನ ಹಣ ಸೇರಿ ಒಟ್ಟು 1 ಲಕ್ಷ 88 ಸಾವಿರ ರೂಪಾಯಿ ಕಳ್ಳತನವಾಗಿದ್ದು. ಅದರಂತೆ ಅಲಮಾರಿಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು  ನಗದು ಹಣ ಸೇರಿ ಒಟ್ಟು 4,51.000.00 ರೂಪಾಯಿ ಕಿಮ್ಮತ್ತಿನವುಗಳನ್ನು ನಿನ್ನೆ ದಿನಾಂಕ:25.06.2019 ರಂದು ರಾತ್ರಿ 11.00 ಗಂಟೆಯಿಂದ ಇಂದು ದಿನಾಂಕ:26.06.2019 ರ ನಸುಕಿನೆ 05.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ದೇವರ ಮನೆಯ ಬಾಗಿಲಗೆ ಹಾಕಿದ ಕಿಲಿ ಮುರಿದು ಒಳಗೆ ಹೋಗಿ ಅಲಮಾರಿಯ ಕಿಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯ ಗುನ್ನೆ ನಂಬರ.90/2019 ಕಲಂ.457,380 ಐಪಿಸಿ ನೇದ್ದರ ಪ್ರಕಾರ  ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಮಹ್ಮದ ಅಬ್ದುಲ್ ಖದೀರ ಓಮರ ತಂದೆ ಮಹ್ಮದ ಅಬ್ದುಲ್ ಲತೀಫ್ ಸಾ: ಮನೆ ನಂ 6-38 ಖಾರಿ ಬೌಲಿ ಮೋಮಿನಪುರ ಕಲಬುರಗಿ ರವರು 2015 ನೇ ಸಾಲ್ಲಿನಲ್ಲಿ ತನ್ನ ಉಪಯೋಗ ಸಲುವಾಗಿ ಒಂದು KTM Duke-200  ಮೊಟಾರ ಸೈಕಲ ನಂ KA49 V4949 ನೇದ್ದು ಖರೀದಿ ಮಾಡಿದ್ದು ಮೋಟಾರ ಸೈಕಿಲನ್ನು ಇಲ್ಲಿಯ ವರೆಗೆ ನಾನೆ ಉಪಯೋಗ ಮಾಡಿಕೊಂಡು ಬಂದಿರುತ್ತೇನೆ. ಇದನ್ನು ನಾನು ಪ್ರತಿ ದಿವಸ ಮನೆಯ ಎದರುಗಡೆ ನಮ್ಮ ಜಾಗೆಯಲ್ಲಿಯ ಕಟ್ಟೆಯ ಮೇಲೆ ನಿಲ್ಲಿಸುತ್ತಾ ಬಂದಿರುತ್ತೇನೆ. ದಿನಾಂಕಃ 13.06.2019 ರಂದು ಸಾಯಂಕಾಲ 5.00 ಗಂಟೆಗೆ ನಾನು ಮನೆಗೆ ಬಂದ ನಂತರ ನನ್ನ ಮೋಟರ ಸೈಕಲನ್ನು ನಾನು ಪ್ರತಿ ದಿವಸ ನಿಲ್ಲಿಸುವಂತೆ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ನಿಲ್ಲಿಸಿ ಹ್ಯಾಂಡಲಾಕ ಮತ್ತು ಲಾಕ ಮಾಡಿ ನಿಲ್ಲಿಸಿ ಮನೆಯಲ್ಲಿ ಹೋಗಿದ್ದು ಮನೆಯಿಂದ ಹೊರಗೆ ಮರುದಿವಸ ಅಂದರೆ ದಿನಾಂಕ 14.06.2019 ರಂದು ಬೆಳಿಗ್ಗೆ 08.00 ಗಂಟೆಗೆ ಬಂದು ನೋಡಲಾಗಿ ನನ್ನ ಮೋಟರ ಸೈಕಲ್  ನಮ್ಮ ಮನೆಯ ಎದುರುಗಡೆ ಇರಲಿಲ್ಲ ಆಗ ನಾನು ಅಲ್ಲಿಯೇ ಇದ್ದ ನನ್ನ ಗೆಳೆಯರಾದ 1. ಶ್ರೀ ಮಹ್ಮದ ಅಫತಾಫ್ ಆಲಂ ಹಾಗೂ 2. ಶ್ರೀ ಅಬ್ದುಲ್ ಕರಿಂ ಇವರಿಗೆ ಕರೆದು ನನ್ನ ಮೋಟರ ಸೈಕಲ ನಮ್ಮ ಮನೆಯ ಮುಂದುಗಡೆ ನಿಲ್ಲಿಸಿರುವುದನ್ನು ಯಾರೋ ಕಳವುಮಾಡಿಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ್ದು ಆಗ ಅವರೂ ಕೂಡಾ ಬಂದು ಎಲ್ಲಕಡೆಗೆ ನನ್ನ ಮೋಟರ ಸೈಕಲನ್ನು ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ ನಾವು ಮೂರು ಜನರು ಅಂದಿನಿಂದ ಇಲ್ಲಿಯವೆಗೆ ನನ್ನ ಮೋಟರ ಸೈಕಲಗಾಗಿ ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ. ಸದರಿ ನನ್ನ ಕಳುವಾದ ಮೋಟಾರ ಸೈಕಲ ವಿವರ ಕೆಳಗಿನಂತಿದೆ. ಮೋಟಾರ ಸೈಕಲ ವಿವರ: KTM Duke-200, ಮೋಟಾರ ಸೈಕಲ ನಂ : KA49 V4949, ಮೋಟಾರ ಸೈಕಲ  ಚೆಸ್ಸಿ ನಂ: MD2JUC4F5FC049804, ಮೋಟಾರ ಸೈಕಲ ಇಂಜನ ನಂ : 590632723, ಮೋಟಾರ ಸೈಕಲ ಮಾದರಿ: 2015, ಮೋಟಾರ ಸೈಕಲ ಬಣ್ಣ: ORANGE METALIC ಅಂದಾಜ ಕಿಮ್ಮತ್ತು  : 49500/- ರೂಪಾಯಿ. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯ ಗುನ್ನೆ ನಂ 73/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.