Police Bhavan Kalaburagi

Police Bhavan Kalaburagi

Thursday, August 11, 2016

KALABURAGI DISTRICT REPORTED CRIMES

ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಬಂಧನ:-
ಮಹಾಗಾಂವ ಪೊಲೀಸ್ ಠಾಣೆ:ದಿನಾಂಕ: 10/08/2016 ರಂದು ಮಹಾಗಾಂವ ಪೊಲೀಸ ಠಾಣೆ ವ್ಯಾಪ್ತಿಯ ಮಹಾಗಾಂವ ಕ್ರಾಸ್ ಚಂದ್ರ ನಗರ ಹೊಟೇಲ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದಿರುವ ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ 1) ಕಿಶನ ಪಿಸಿ. 713, ಮತ್ತು 2) ಲಕ್ಷ್ಮೀಕಾಂತ ಪಿಸಿ-1073 ಹಾಗು ಇಬ್ಬರು ಪಂಚರೊಂದಿಗೆ, ಚಂದ್ರ ನಗರ ಹೊಟೇಲ ಹತ್ತಿರ ನಿಂತು ನೋಡಲಾಗಿ, ಹೊಟೇಲ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ  ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಜನರಿಂದ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ಅಂಕಿ ಸಂಖ್ಯೆ ಬರೆದಿರುವ ಮಟಕಾ ಚೀಟಿ ಬರೆದುಕೊಡುತ್ತಿರುವಾಗ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಡುತ್ತಿದ್ದವನಿಗೆ ವಶಕ್ಕೆ ತೆಗೆದುಕೊಂಡು, ವಿಚಾರಿಸಲಾಗಿ, ತನ್ನ ಹೆಸರು ಬಾಬು ಪಟೇಲ ತಂದೆ ಶಮಶೀರ ಪಟೇಲ ಇನಾಮದಾರ ಸಾ: ಮಹಾಗಾಂವ ಕ್ರಾಸ ತಾ:ಜಿ: ಕಲಬುರಗಿ ಅಂತಾ ತಿಳಿಸಿದ್ದು ಆತನಿಂದ 1) ಒಂದು ಅಂಕಿ ಸಂಖ್ಯೆ ಬರೆದಿರುವ ಮಟಕಾ ಚೀಟಿ ಮತ್ತು 2)  ನಗದು ಹಣ 580-00 ರೂ. 3) ಒಂದು ಬಾಲ ಪೆನ್ ಜಪ್ತಿ ಮಾಡಿಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ  ಬಾಬು ಪಟೇಲ ವಿರುದ್ದ  ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:-
ಮಹಾಗಾಂವ ಪೊಲೀಸ್ ಠಾಣೆ:- ಶ್ರೀ ಸೂರ್ಯಕಾಂತ ತಂದೆ ತುಳಜಪ್ಪಾ ಜಡ್ಡಿ ಸಾ: ಧಮ್ಮೂರ ಆರ್.ಸಿ ಮಹಾಗಾಂವ ಕ್ರಾಸ ರವರು ದಿನಾಂಕ: 09/08/2016 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ತಾನು ತನ್ನ ಹಿರೋ ಸ್ಪ್ಲೆಂಡರ್ ಮೋ.ಸೈಕಲ ನಂ. ಕೆಎ:28 ಎಲ್:0879 ನೇದ್ದರ ಮೇಲೆ ಗ್ರಾಮದ ಮಿಲಿಂದ ತಂದೆ ಮಾಣಿಕಪ್ಪಾ ತಳಕೇರಿ ಈತನಿಗೆ  ಹಿಂದೆ ಕೂಡಿಸಿಕೊಂಡು ಚಿಂಚೋಳಿ ರೋಡಿಗೆ ಇರುವ ಮ್ಮ ಹೊಲಕ್ಕೆ ಹೋಗುವಾಘ ಮಹಾಗಾಂವ ಕ್ರಾಸ-ಚಿಂಚೋಳಿ ರೋಡಿನ ಮೌಂಟವ್ಹೆವ್ ಶಾಲೆ ಹತ್ತಿರ ಇರುವ ಸೇತುವೆ ಹತ್ತಿರ ಹೋಗುತ್ತಿದ್ದಾಗ ಎದುರುಗಡೆ ನಾಗೂರ ಕಡೆಯಿಂದ ಬರುತ್ತಿದ್ದ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು ಮೋಟಾರ ಸೈಕಲಗೆ ಅಪಘಾತ ಪಡಿಸಿದ್ದು. ಆಗ ಅಲ್ಲೇ ಮೌಂಟವ್ಹೆವ್ ಶಾಲೆ ಹತ್ತಿರ ಬರುತ್ತಿದ್ದ ನನ್ನ ಅಣ್ಣ ಮಲ್ಲಪ್ಪಾ ಮತ್ತು ನಮ್ಮೂರಿನ ಮಲ್ಲಿಕಾರ್ಜುನ ತಂದೆ ಸುಭಾಶ್ಚಂದ್ರ ಇವರು ಬಂದು ನಮಗೆ ಎಬ್ಬಿಸಿ ನೋಡಲಾಗಿ, ನನಗೆ ಬಲಗಾಲ ಮುರಿದು ಭಾರಿ ರಕ್ತಗಾಯಗಳಾಗಿದ್ದು. ಮತ್ತು ಮೊಣಗೈ, ಎಡಗಾಲು ಮೊಳಕಾಲಿಗೆ ಹಾಗು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ನಂತರ ಮಿಲಿಂದ ತಳಕೇರಿ ಈತನಿಗೆ ನೋಡಲಾಗಿ ಬಲಗಾಲ ಮೊಳಕಾಲು ಮುರಿದಂತಾಗಿ ರಕ್ತಗಾಯಗಳಾಗಿದ್ದು ಇರುತ್ತದೆ ಅಪಘಾತ ಪಡಿಸಿದ ಕಾರ ನಂ. ನೋಡಲಾಗಿ, ಮಾರುತಿ ಸ್ವೀಪ್ಟ್ ಕೆಎ:31 ಎನ್:0164 ನೇದ್ದು ಇದ್ದು ಅದರ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಅಪಘಾತ ಪಡಿಸಿದ ಮಾರುತಿ ಸ್ವೀಪ್ಟ್ ಕೆಎ:31 ಎನ್:0164 ನೇದ್ದರ ಚಾಲಕನ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಪ್ರಕಾರ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.