Police Bhavan Kalaburagi

Police Bhavan Kalaburagi

Monday, March 22, 2021

BIDAR DISTRICT DAILY CRIME UPDATE 22-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-03-2021

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 14/2021, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 20-03-2021 ರಂದು ಫಿರ್ಯಾದಿ ಪಂಡೀತ ತಂದೆ ಹುಸೇನಪ್ಪಾ ಮೊಡಾ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಔರಾದ(ಎಸ್) ಗ್ರಾಮ, ತಾ:ಜಿ:ಬೀದರ ರವರ ಅಣ್ಣನಾದ ನರಸಿಂಗ ತಂದೆ ಹುಸೇನಪ್ಪಾ ಮೊಡಾ ವಯ: 44 ವರ್ಷ, ಜಾತಿ: ಎಸ್.ಸಿ ಹೊಲಿಯಾ ರವರು ಮೀನಕೆರಾ ಕ್ರಾಸ್ದಿಂದ ತಮ್ಮ ಮನೆಯ ಕಡೆಗೆ ಅಂದರೆ ಮೊಗದಾಳ ಕಡೆಗೆ ನಡೆದುಕೊಂಡು ಬರುತ್ತಿವಾಗ ಮನ್ನಾಏಖೇಳ್ಳಿ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರೋಡಿನ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ನರಸಿಂಗ್ ರವರಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೊಗಿರುತ್ತಾನೆ ಮತ್ತು ಸದರಿ ರಸ್ತೆ ಅಪಘಾತದಿಂದ ನರಸಿಂಗ ರವರು ಭಾರಿ ಗಾಯಗೊಂಡು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 20/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 21-03-2021 ರಂದು ಕಟ್ಟಿತುಗಾಂವ ಗ್ರಾಮದ ಗೊರಿಯ ಹತ್ತಿರ ಇವರು ಕಾರಂಜಾ ಕೆನಾಲ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಪಣದಲ್ಲಿ ಹಣ ಕಟ್ಟಿ ಆಡುತ್ತಿದ್ದಾರೆಂದು ಚಿದಾನಂದ ಸೌದಿ ಪಿಎಸ್ಐ ಧನ್ನೂರ ಪೊಲೀಸ ಠಾಣೆ ರವರಿಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸ್ಐ  ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಟ್ಟಿತುಗಾಂವ ಗ್ರಾಮಕ್ಕೆ ಹೋಗಿ ಗೊರಿಯಿಂದ ಸ್ವಲ್ಪ ಅಂತರದಲ್ಲಿ ಮರೆಯಾಗಿ ನಿಂತು ನೊಡಲು ಗೊರಿಯ ಹತ್ತಿರ ಇವರು ಕಾರಂಜಾ ಕೆನಾಲ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಅಲ್ಲಾವುದ್ದಿನ ತಂದೆ ಮೈನೊದ್ದಿನ ಬೈರುಪಿಯಾ ವಯ: 34 ವರ್ಷ, ಜಾತಿ: ಮುಸ್ಲಿಂ, ಸಾ: ಮಂಗಲಗಿ, ತಾ: ಚಿಟಗುಪ್ಪಾ, 2) ಮೈನೊದ್ದಿನ ತಂದೆ ಖಾಸಿಮಸಾಬ ಬೈರುಪಿಯಾ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: 3) ದೀಲಿಪ ತಂದೆ ಮಹಾಂರೇಶ ಕೊಂಡ್ರೆ, 4) ಖಾಸಿಂ ತಂದೆ ಪನ್ನು ಬೈರುಪಿಯಾ, 5) ಮಹೇಬೂಬ ತಂದೆ ಸುಲ್ತಾನಸಾಬ, 6) ಜಾವೀದ ತಂದೆ ಹುಸೇನಸಾಬ, 7) ಫರೀದ ವಾಟರ ಮ್ಯಾನ, 8) ಮಾರುತಿ ಕ್ರೀಶ್ಚಿನ, 9) ರಾಜಕುಮಾರ ಹೊಸಳ್ಳಿ, 10) ಇಮಾಮ ತಂದೆ ಮೌಲಾನಸಾಬ ಮತ್ತು 11) ಜಗನ್ನಾಥ ತಂದೆ ಬಾಬು ಬಾಯಪ್ಪಾ 9 ಜನ ಎಲ್ಲರೂ ಸಾ: ಕಟ್ಟಿತುಗಾಂವ ಇವರೆಲ್ಲರೂ ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಪಣದಲ್ಲಿ ಹಣ ಕಟ್ಟಿ ಆಡುತ್ತಿರುವುದು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿಯಲು ಹೋದಾಗ ಕ್ರ. ಸಂ. 3 ರಿಂದ 11 ರವರೆಗಿನ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ, ನಂತರ ಸಿಕ್ಕ ಆರೋಪಿತರಿಂದ 3200/- ರೂಪಾಯಿ ನಗದು ಹಣ ಹಾಗೂ 52 ಇಸ್ಪಿಟ್ ಎಲೆಗಳು ಮತ್ತು 1) ಹಿರೊ ಸ್ಪ್ಲೇಂಡರ ಪ್ಲಸ್ ಮೊಟಾರ ಸೈಕಲ ನಂ.  ಕೆಎ-39/ಆರ್-5099 .ಕಿ. 30,000/- ರೂ., 2) ಬಜಾಜ ಪಲ್ಸರ ಮೊಟಾರ ಸೈಕಲ ನಂ. ಎಪಿ-09/ಬಿ.ಇ-8003 ಅ.ಕಿ 35,000/- ರೂ., 3) ಹೊಂಡಾ ಶೈನ್ ಮೊಟಾರ ಸೈಕಲ ನಂ. ಎಪಿ-28/ಎ.ಎಕ್ಸ್-1774 ಅ.ಕಿ 35,000/- ರೂ. & 4) ಬಜಾಜ್ ಎಮ್-80 ಮೊಟಾರ ಸೈಕಲ ನಂ. ಎಮ್.ಹೆಚ್-12/ಎ.ಡಬ್ಲು-3864 ಅ.ಕಿ 10,000/- ರೂಪಾಯಿ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.