ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-03-2021
ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 02/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 10-03-2021 ರಂದು 1100 ಗಂಟೆಗೆ ಫಿರ್ಯಾದಿ ಅನಿತಾ ಗಂಡ ಪಂಡರಿ ಕೋಟೆ ವಯ: 30 ವರ್ಷ, ಜಾತಿ: ಕುರುಬ, ಸಾ: ಸಿಕಿಂದ್ರಾಪೂರ ರವರ ಗಂಡನಾದ ಪಂಡರಿ ತಂದೆ ಮಾರುತಿ ಕೋಟೆ ವಯ: 35 ವರ್ಷ, ಸಾ: ಸಿಕಿಂದ್ರಾಪೂರ ರವರು ವಿಶ್ವನಾಥ ತಟ್ಟಪಳ್ಳೆ ರವರ ಹೊಲದಲ್ಲಿ ಕಬ್ಬಿಗೆ ನೀರು ಬಿಡಲು ವಿದ್ಯೂತ್ ಮೋಟಾರ ಚಾಲು ಮಾಡಲು ಹೋದಾಗ ಪಂಡರಿ ರವರಿಗೆ ಫೆಪ್ರಿ ಬಂದು ವಿದ್ಯೂರ್ ತಗಲಿ ಸ್ಥಳದಲ್ಲಿಯೇ ತಿರಿಕೊಂಡಿರುತ್ತಾರೆ, ಅವರ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ ಅಂತ ನೀಡಿದ ಸಾರಾಂಶದ ಮೇರೆಗೆ ದಿನಾಂಕ 11-03-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 18/2021, ಕಲಂ. 302, 201, 34 ಐಪಿಸಿ :-
ದಿನಾಂಕ 09-03-2021 ರಂದು 2000 ಗಂಟೆಗೆ ಬಾಬುರಾವ ತಂದೆ ಮಾಣಿಕರಾವ ಕುಂಬಾರೆ ವಯ: 50 ವರ್ಷ, ಸಾ: ಮರಖಲ್ ಗ್ರಾಮ ರವರ ಮಗನಾದ ಬೆನಹಿನ್ ತಂದೆ ಬಾಬುರಾವ್ ಕುಂಬಾರೆ ವಯ: 15 ವರ್ಷ ಇತನಿಗೆ ಆರೋಪಿ ವಿನೊದ ತಂದೆ ವಿಶ್ವನಾಥ ಕೋಳಿ ಸಾ: ಮರಖಲ್ ಗ್ರಾಮ ಈತನು ತನ್ನ ಮೋಟರ್ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿ ಸದರಿ ವಿನೋದ ಹಾಗು ಇತರೆ 3-4 ಜನರು ಕೂಡಿಕೊಂಡು ಯಾವುದೋ ಉದ್ದೇಶದಿಂದ ಫಿರ್ಯಾದಿಯವರ ಮಗನ ಕೊಲೆ ಮಾಡಿ ಕೊಲೆ ಮಾಡಿದ ಬಗ್ಗೆ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಶವವನ್ನು ಪ್ರಭು ಒಂಕಾರೆ ರವರ ಹೊಲದ ಬಾವಿಯಲ್ಲಿ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 30/2021, ಕಲಂ. 454, 380 ಐಪಿಸಿ :-
ದಿನಾಂಕ 11-03-2021 ರಂದು ಫಿರ್ಯಾದಿ ಶಾಂತಾ ಗಂಡ ಶ್ರೀಮಂತರಾವ ಗರೂಡಕರ ವಯ: 62 ವರ್ಷ, ಜಾತಿ: ಗೊಂದಳಿ, ಸಾ: ಜೆಪಿ ಕಾಲೋನಿ ರಾಜೇಶ್ವರ ತನ್ನ ಮಗಳ ಮನೆಯಾದ ಹಳ್ಳಿಖೇಡ (ಬಿ) ಗೆ ಭೇಟಿಯಾಗಿ ಬರಬೇಕೆಂದು ತನ್ನ ಮನೆಗೆ ಹಾಗೂ ಮುಖ್ಯ ಬಾಗಿಲಿಗೆ ಹಾಗೂ ಕಂಪೌಂಡ ಗೇಟಿಗೆ ಕೀಲಿಯನ್ನು ಹಾಕಿ ಊರಿಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಮುಖ್ಯ ಬಾಗಿಲಿನ ಕಿಲಿ ಮುರಿದು ಮನೆಯ ಒಳಗಡೆ ಹೋಗಿ ಅಲಮಾರಿಯ ಕಿಲಿ ಮುರಿದು ಅಲಮಾರಿಯಲ್ಲಿಟ್ಟ 1) ಬಂಗಾರದ 5 ತೊಲೆಯ ಗಂಟನ, 2) ಬಂಗಾರದ 5 ತೊಲೆಯ ಪಾಟಲಿ, 3) 15 ಗ್ರಾಂ ಬಂಗಾರದ ಲಾಕೀಟ, 4) 5 ಗ್ರಾಂ ದ ಎರಡು ಬಂಗಾರದ ಉಂಗುರಗಳು ಹೀಗೆ ಒಟ್ಟು 12 ತೊಲೆ 5 ಗ್ರಾಂ ಬಂಗಾರದ ಆಭರಣಗಳು ಮತ್ತು ಅಲಮಾರಿಯಲ್ಲಿಟ್ಟಿದ ನಗದು ಹಣ 20,000/- ರೂ. ಹೀಗೆ ಒಟ್ಟು 6,07,000/- ರೂಪಾಯಿ ಬೆಲೆ ಬಾಳುವ ಬಂಗಾರ ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 394 ಐಪಿಸಿ :-
ದಿನಾಂಕ 11-03-2021 ರಂದು ಯಾರೋ ಅಪರಿಚಿತ ಕಳ್ಳ ಫಿರ್ಯಾದಿ ಕಮಳಾಬಾಯಿ ಗಂಡ ಜೈಸಿಂಗ ರಾಠೋಡ ವಯ: 50 ವರ್ಷ, ಜಾತಿ: ಎಸ್.ಸಿ ಲಮಾಣಿ, ಸಾ: ಬಸವಣವಾಡಿ ತಾಂಡಾ, ತಾ: ಔರಾದ(ಬಿ) ರವರಿಗೆ ಕೆಲಸಕ್ಕೆ ಅಂತ ಕರೆದುಕೊಂಡು ಹೋಗಿ ಬಿ.ಎಸ್.ಎನ್.ಎಲ್ ಟಾವರ್ ಹತ್ತಿರ ರೋಡಿನ ಪಕ್ಕದಲ್ಲಿ ಚಾಕುವಿನಿಂದ ಹೋಡೆದು ಫಿರ್ಯಾದಿಯವರ ಕೊರಳಲ್ಲಿದ್ದ 2 ಬಂಗಾದರ ಮಂಗಳ ಸೂತ್ರ ಹಾಗೂ 07 ಗ್ರಾಂ ಬಂಗಾರದ 70 ಗುಂಡಗಳು ಅ.ಕಿ 20,000/- ರೂ. ಮತ್ತು ಕೈಯಲ್ಲಿದ್ದ ಬೆಳ್ಳಿ ರಟ್ಟೆ ಕಡಗಗಳು ಅ.ಕಿ 10,000/- ರೂ. ನೇದವುಗಳನ್ನು ಕಸಿದುಕೊಂಡು ಹೋಗಿರುತ್ತಾನೆ, ಕಸಿದುಕೊಂಡು ಹೋದ ವ್ಯಕ್ತಿಯ ಚಹರೆ ಪಟ್ಟಿ 1) ಗೋಧಿ ಮೈಬಣ್ಣ, 2) ಸಾಧಾರಣ ಮೈಕಟ್ಟು, ಎತ್ತರ 5.6 ಇಂಚು ಇದ್ದು ಒಂದು ಕಿವಿಯಲ್ಲಿ ಎರಡು ರಿಂಗಗಳು ಇದ್ದು ಮುಖದೆ ಮೇಲೆ ದಾಡಿ ಮತ್ತು ಮೀಸೆ 3) ಅಂದಾಜು ವಯಸ್ಸು 25 ರಿಂದ 28 ವರ್ಷ, 4) ಅವನ ಕೈಯಲ್ಲಿ ಚೈನ ಇದ್ದು ಹಾಗೂ 5) ಹಾಫ್ ಶರ್ಟ ಕಪ್ಪು ಪ್ಯಾಂಟ್ ಧರಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 50/2021, ಕಲಂ. ಕರ್ನಾಟಕ ಓಪನ್ ಪ್ಲೇಸೆಸ್ (ಪ್ರಿವೆನಷನ್ ಆಫ್ ಡಿಸ್ಪಿಗರಮೆಂಟ್ಸ ) ಕಾಯ್ದೆ 1981 :-
ದಿನಾಂಕ 11-03-2021 ರಂದು
ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರು ಪಟ್ರೋಲಿಂಗ್ ಕರ್ತವ್ಯ ಕುರಿತು ಗಾಂಧಿ ಚೌಕ ಹತ್ತಿರ ಹೋದಾಗ
ಗಾಂಧಿ ಚೌಕ ಹತ್ತಿರ ಇರುವ ಪೊಲೀಸ್ ಚೌಕಿಯನ್ನು ನೋಡಲಾಗಿ ಸದರಿ ಪೊಲೀಸ್ ಚೌಕಿಯ ಕಟ್ಟಡದ ಮುಂದಿನ ಭಾಗದ ಗೋಡೆ ತುಂಬ ಪೋಸ್ಟರಗಳನ್ನು ಅಂಟಿಸಿ ಅದರ ಅಂದವನ್ನು ಕೆಡಿಸಿರುತ್ತಾರೆ, ಸದರಿ ಪೋಸ್ಟರ್ಗಳ ಮೇಲೆ “ಶ್ರೀ ಕೇತಕಿ ಸಂಗಮೇಶ್ವರ ಸ್ವಾಮಿ ದೇವಸ್ಥಾನ ಝರಾ ಸಂಗಮ, ಜಿಲ್ಲೆ ಸಂಗಾರೆಡ್ಡಿ ತೆಲಂಗಾಣ ರಾಜ್ಯ“ ಮಹಾ ಶಿವರಾತ್ರಿ ಸವಾಹ್ನಿಕ ಜಾತ್ರಾ ಬ್ರಹ್ಮೋತ್ಸವ” ಅಂತ ಬರೆದಿದ್ದು ಈ ಪೋಸ್ಟರನ್ನು ಆರೋಪಿತರಾದ 1) ವೆಂಕಟೇಶರ ಗುಪ್ತ ಆಧ್ಯಕ್ಷರು ಕೇತಕಿ ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮತ್ತು 2) ಪಿ.ಮೋಹನ್ ರೆಡ್ಡಿ ಕಾರ್ಯನಿರ್ವಾಹಣಾ ಅಧಿಕಾರಿ ಕೇತಕಿ ಸಂಗಮೇಶ್ವರ ಸ್ವಾಮಿ ದೇವಸ್ಥಾನ ರವರು ಮುದ್ರಿಸಿದ್ದು ಇರುತ್ತದೆ, ಸದರಿ
ಗೋಡೆಗೆ ವಾರಸುದಾರರ ಅನುಮತಿ ಇಲ್ಲದೇ ಪೊಸ್ಟರ್ಗಳನ್ನು ಅಂಟಿಸಿ ಅದರ ಅಂದವನ್ನು ಹಾಳು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಿನಾಂಕ 06-03-2021 ರಂದು
2330 ಗಂಟೆ ನಂತರ ಸದರಿ ಪೋಸ್ಟರ್ಗಳನ್ನು ಅಂಟಿಸಿದ್ದು ಕಂಡು ಬರುತ್ತದೆ ಅಂತ ಕೊಟ್ಡ ದೂರಿನ ಮೇರೆಗೆ ಸದರಿ ಆರೋಪಿತರ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.