Police Bhavan Kalaburagi

Police Bhavan Kalaburagi

Monday, May 18, 2020

BIDAR DISTRICT DAILY CRIME UPDATE 18-05-2020ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-05-2020
ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 55/2020 ಕಲಂ 457, 380 ಐಪಿಸಿ :-
ದಿನಾಂಕ 17/05/2020  ರಂದು 1315 ಗಂಟೆಗೆ ಫಿರ್ಯಾದಿ ಶ್ರೀ. ಶ್ರೀಮಂತ ತಂದೆ ಜಗನ್ನಾಥ ವಯ:25 ವರ್ಷ ಜಾತಿ:ಎಸ್.ಟಿ.ಗೊಂಡ ಉ:ವ್ಯಾಪಾರ ಸಾ/ಹಾಲಹಿಪ್ಪರಗಾ ತಾ/ಭಾಲ್ಕಿ. ಜಿಲ್ಲಾ/ಬೀದರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶ ಏನೆಂದರೆ  ಫಿರ್ಯಾದಿಯು ಗಣೇಶ ಮೈದಾನದ ಹತ್ತೀರ ಶ್ರೀ. ಕೃಷ್ಣ ನಂದಿ ಎಂಬ ಹೆಸರಿನ ಮೊಬೈಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು  ಉಪ ಜೀವಿಸಿಕೊಂಡಿದ್ದು ದಿನಾಲು   ಗ್ರಾಮದಿಂದ ಅಂಗಡಿಗೆ ಹೋಗಿ ಬರುತ್ತಿರುತ್ತಾರೆ.   ಹೀಗಿರುವಾದ ದಿನಾಂಕ 12/05/2020 ರಂದು ಸಾಯಂಕಾಲ 1800 ಗಂಟೆಗೆ  ಫಿರ್ಯಾದಿಯು ಅಂಗಡಿಯನ್ನು ಮುಚ್ಚಿ ಅಂಗಡಿಗೆ ಬೀಗ ಹಾಕಿ   ಗ್ರಾಮಕ್ಕೆ ಹೋಗಿದ್ದು ಇರುತ್ತದೆ.  ದಿನಾಂಕ 13/05/2020 ರಂದು ಮುಂಜಾನೆ 1000 ಗಂಟೆಯ ಸುಮಾರಿಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಮೆಲೆ ಹಾಕಿದ ತಗಡದ ಬೋಲ್ಟ ಹಾಗು   ಅಂಗಡಿಯ ಮೇಲಿನ ತಗಡ ತೆಗೆದಿದ್ದು, ಅಂಗಡಿಯಲ್ಲಿ ಹೋಗಿ ನೋಡಿದಾಗ ಅಂಗಡಿಯಲ್ಲಿ ಕ್ಯಾಶ ಕೌಂಟರ ಮುರಿದಿದ್ದು, ಕ್ಯಾಶ ಕೌಂಟರನಲ್ಲಿ ಇಟ್ಟಿದ್ದ  5,000/- ರೂಪಾಯಿ ನಗದು ಹಣ ಇರಲಿಲ್ಲ.  ಕಾರಣ  ಮೊಬೈಲ ಅಂಗಡಿಯ ತಗಡನ್ನು ತೆಗೆದು ಅಂಗಡಿಯ ಕ್ಯಾಶ ಕೌಂಟರಿನ ಬೀಗ ಮುರಿದು, ಅದರಲ್ಲಿ ಇಟ್ಟಿದ್ದ 5000/- ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಅಪರಿಚಿತ ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೋಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 80/2020 ಕಲಂ 454, 457, 380 ಐ.ಪಿ.ಸಿ. :-
ದಿನಾಂಕ 17/05/2020 ರಂದು 1230 ಗಂಟೆಗೆ ಫಿರ್ಯಾದಿ ಶ್ರೀಮತಿ ನಿಖತ್ ಅಫ್ ಶಾನ ಹೇಡ್ ಮಾಸ್ತರ ಸರಕಾರಿ ಉರ್ದ ಹೈಸ್ಕೂಲ್ ಆರ್.ಎಮ್.ಎಸ್.ಎ ಅಮಲಾಪೂರ  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ. ಲಾಕಡೌನ ಇದ್ದ ಪ್ರಯುಕ್ತ ದಿನಾಂಕ 31/03/2020 ರಿಂದ ಶಾಲೆ ಬಂದ ಇದ್ದು  ದಿನಾಂಕ 15/05/2020 ರಂದು ನಮ್ಮ ಶಾಲೆಗೆ ಹೋಸ ಹೆಡ್ ಮಾಸ್ಟ್ತರ ಬರುತಿರುವದರಿಂದ ಫಿರ್ಯಾದಿಯು ಶಾಲೆಗೆ ಹೋಗಿ ಹೋಸದಾಗಿ ಬಂದ ಹೆಡ್ ಮಾಸ್ತ ರವರಿಗೆ ಪ್ರಭಾರ ಕೊಡುವ ಗೋಸ್ಕರ ಕಂಪ್ಯೂಟರ ಅಳವಡಿಸಿದ ಕೊಣೆಯಲ್ಲಿ ನೋಡಲು ಕಂಪ್ಯೂಟರ ಕೊಣೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು, ಒಳಗೆ ಹೋಗಿ ನೋಡಲು   ಶಾಲೆಗೆ ಸರಬರಾಜ ಆದ ಕಂಪ್ಯೂಟರ ಅಳವಡಿಸಿದ 8 ಎಕ್ಷಿಡ್ ಬ್ಯಾಟರಿ  ಕಳುವಾಗಿದ್ದು  ಕಂಡು ಬರುತ್ತದೆ. ಕಳುವಾದ ಬ್ಯಾಟರಿಯ ಒಂದರ ಬೆಲೆ 7650/ ರೂಪಾಯಿ ಇದ್ದು ಒಟ್ಟು 8 ಬ್ಯಾಟರಿಗಳ ಅ||ಕಿ|| 61,200/ ರೂಪಾಯಿ ಬೇಲೆ ಬಾಳುವ ಬ್ಯಾಟರಿಗಳು ದಿನಾಂಕ 31/03/2020 ರಂದು 15-30 ಗಂಟೆಯಿಂದ  ದಿನಾಂಕ 15/05/2020 ಬೆಳ್ಳಿಗೆ 9 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 82/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕಃ 17/05/2020 ರಂದು 2245 ಗಂಟೆಗೆ  ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಬೀದರ ಗಾಂಧಿಗಂಜದಲ್ಲಿರುವ ಎಪಿಎಮ್ಸಿ ಯಾರ್ಡನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಗಾಂಧಿಗಂಜದೆಲ್ಲಿರುವ ಎಪಿಎಮ್ಸಿ ಯಾರ್ಡಗೆ ಹೋಗಿ ಜೀಪನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಬಾತ್ಮಿಯನ್ನು ಖಚಿತಪಡಿಸಿಕೊಂಡು 2130 ಗಂಟೆಗೆ ದಾಳಿ ಮಾಡಿ 10 ಜನರನ್ನು ಹಿಡಿದುಕೊಂಡು ಅವರಿಗೆ ವಿಚಾರಣೆ ಮಾಡಲಾಗಿ ಅವರುಗಳು 1) ರಮೇಶ ತಂದೆ ಬಸಪ್ಪ ಮಗರ್ೆ ವಯ: 51,  ಇವರ ಅಂಗ ಜಡ್ತಿ ಮಾಡಲಾಗಿ   ಹತ್ತಿರ 350/- ರೂ. 02) ಅಶೋಕ ತಂದೆ ಸಿದ್ರಾಮ ಬಿರಾದಾರ ವಯ: 50, ಜಾತಿ: ಲಿಂಗಾಯತ,  ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 480/- ರೂ. 03) ಹಾವಪ್ಪಾ ತಂದೆ ಮಾಣಿಕ್ಪಪಾ ವಯ: 46, ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 320/- ರೂ. 04) ನಾರಾಯಣ ತಂದೆ ಮಾಣಿಕಪ್ಪಾ ಶಟಕಾರ ವಯ: 50,  ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 500/- ರೂ. 05) ರವಿ ತಂದೆ ಪಂಡರಿ ನುದನೂರೆ ವಯ: 30, ಜಾತಿ:ಗೊಂಡ, ಉಃಒಕ್ಕಲುತನ ಸಾಃ ವಲ್ಲೆಪೂರ ಗ್ರಾಮ ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 490/- ರೂ. 06) ನಾಗಶೆಟ್ಟಿ ತಂದೆ ಶಿವರಾಜ ವಯ: 33,   ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 320/- ರೂ. 07) ಸಂತೋಷ ತಂದೆ ವಿಶ್ವನಾಥ ಬೆಳಕೇರೆ ವಯಃ 42, ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 300/- ರೂ. 08) ಓಂಕಾರ ತಂದೆ ಸಂಗಪ್ಪಾ ಸುಲ್ತಾನಪೂರ ವಯಃ 31, ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 290/- ರೂ. 09) ಮೊಗಲಪ್ಪ ತಂದೆ ಬಂಡೆಪ್ಪಾ ಚಿಲ್ಲಗರ್ೆ ವಯಃ 48,   ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 410/- ರೂ. 10) ರಾಜಕುಮಾರ ತಂದೆ ನಾಗಶೆಟ್ಟಿ ಉಜ್ಜಣಗಿ ವಯಃ 40,  ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 380/- ರೂ. ಹಾಗು ಇವರುಗಳೆಲ್ಲರ ಮಧ್ಯದಲ್ಲಿ ಇದ್ದ 52 ಇಸ್ಪೀಟ್ ಎಲೆಗಳು ಮತ್ತು ನಗದು ಹಣ 1510/- ರೂ. ಹೀಗೆ ಒಟ್ಟು 52 ಇಸ್ಪೀಟ್ ಎಲೆಗಳು ಮತ್ತು ಒಟ್ಟು ರೂ. 5350/- ರೂ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಠಾಣೆ  ಅಪರಾಧ ಸಂಖ್ಯೆ 33/2020 ಕಲಂ 279, 337, 338, 304(ಎ) ಐಪಿಸಿ :-
ದಿನಾಂಕ 17/05/2020 ರಂದು 1245 ಗಂಟೆಗೆ ಫಿರ್ಯಾದಿ ಸತೀಷ ತಂದೆ ಪ್ರಭುರಾವ ಬಿರಾದಾರ ವಯ: 41 ವರ್ಷ ಜಾತಿ: ಮರಾಠಾ ಉ: ವ್ಯಾಪಾರ ಸಾ|| ಜಾಮಖಂಡಿ ತಾ|| ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನೆಂದರೆ ಫಿರ್ಯಾದಿಯು ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದು ಜಾಮಖಂಡಿಯಲ್ಲಿ ಮತ್ತು ಭಾಲ್ಕಿಯಲ್ಲಿಯೂ ಸಹ   ಮನೆ ಇರುತ್ತದೆ.    ಕೆಲವು ದಿನಗಳ ಹಿಂದೆ ನನ್ನ ತಂದೆಯಾದ ಪ್ರಭುರಾವ ರವರು ಮೃತಪಟ್ಟಿದ್ದು  ು ದಿನಾಂಕ 17/05/2020 ರಂದು ಭಾಲ್ಕಿಯ  ಮನೆಯಲ್ಲಿ  ಇವರ ತಂದೆ ತೀರಿಕೊಂಡ 11 ನೇ ದಿನದ ಕಾರ್ಯಕ್ರಮವಿದ್ದ ಕಾರಣ   ಕಾಕನಾದ ಹಣಮಂತರಾವ ತಂದೆ ನರಸಿಂಗರಾವ ಬಿರಾದಾರ ವಯ: 60 ವರ್ಷ  ಮತ್ತು   ಭಾಗವತ ತಂದೆ ಶಹಾಜಿರಾವ ತಾಂಬೋಳೆ ವಯ: 40 ವರ್ಷ   ರಾಜೇಂದ್ರ ತಂದೆ ಪಂಡರಿನಾಥ ಬಿರಾದಾರ, ರಾಜೇಂದ್ರ ತಂದೆ ಶಂಕರಾವ ಬಿರಾದಾರ ರವರು ಭಾಲ್ಕಿಯಲ್ಲಿರುವ ತಮ್ಮ ಮನೆಗೆ  ಮುಂಜಾನೆ ಬಂದಿರುತ್ತಾರೆ. ಕಾರ್ಯಕ್ರಮ ಮುಗಿಸಿಕೊಂಡು ಎಲ್ಲರೂ ಜಾಮಖಂಡಿಗೆ ಹೋಗುತ್ತೆವೆಂದು  ಹೇಳಿ ಅವರವರ ಮೋಟಾರ್ ಸೈಕಲಗಳ ಮೇಲೆ   ಮನೆಯಿಂದ ಹೋಗಿರುತ್ತಾರೆ.  ದಿನಾಂಕ 17/05/2020 ರಂದು 1135 ಗಂಟೆಗೆ   ರಾಜೇಂದ್ರ ತಂದೆ ಶಂಕರಾವ ಬಿರಾದಾರ ರವರು  ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ರಾಜೇಂದ್ರ ತಂದೆ ಪಂಡರಿನಾಥ ಬಿರಾದಾರ ಇಬ್ಬರು  ನನ್ನ ಮೋಟಾರ್ ಸೈಕಲ್ ಮೇಲೆ ಮತ್ತು ನಮ್ಮೂರ ಭಾಗವತ ಮತ್ತು ಹಣಮಂತರಾವ ರವರು ಭಾಗವತ ರವರ ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದರ ಮೇಲೆ ಜಾಮಖಂಡಿಗೆ ಹೋಗುತ್ತಿದೆವು. ಭಾಗವತ ರವರು ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದರ ಹಿಂದೆ ಹಣಮಂತರಾವ ರವರಿಗೆ ಕೂಡಿಸಿಕೊಂಡು ಮೋಟಾರ್ ಸೈಕಲ್ ಚಲಾಯಿಸಿಕೊಂಡು ನಮಗಿಂತ ಸ್ವಲ್ಪ ಮುಂದೆ ಹೋಗುತ್ತಿದ್ದರು. ಸೋಲದಾಪಕಾ ಗ್ರಾಮ ದಾಟಿದ ನಂತರ ಸೋಲದಾಪಕಾ ಶಿವಾರದ ಮನೋಹರ ಮಸಾಳೆ ರವರ ಹೊಲದ ಹತ್ತಿರ ಭಾಲ್ಕಿ- ಹುಲಸೂರ ರಸ್ತೆಯ ಮೇಲೆ   1130 ಗಂಟೆಯ ಸುಮಾರಿಗೆ ಭಾಗವತ ರವರು ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಎಮ್ಮೆಗೆ ಡಿಕ್ಕಿ ಮಾಡಿದರಿಂದ ಭಾಗವತ ಮತ್ತು ಹಣಮಂತರಾವ ಇಬ್ಬರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಇಬ್ಬರು ಗಾಯಗೊಂಡಿರುತ್ತಾರೆ. ಭಾಗವತ ಈತನು ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದರ ಮೇಲೆ   ಕಾಕನಾದ ಹಣಮಂತರಾವ ಈತನಿಗೆ ಕೂಡಿಸಿಕೊಂಡು ಜಾಮಖಂಡಿಗೆ ಹೋಗುವಾಗ ಸೋಲದಾಪಕಾ ಶಿವಾರದ ಮನೋಹರ ಮಸಾಳೆ ರವರ ಹೊಲದ ಹತ್ತಿರ ಭಾಲ್ಕಿ- ಹುಲಸೂರ ರಸ್ತೆಯ ಮೇಲೆ ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಎಮ್ಮೆಗೆ ಡಿಕ್ಕಿ ಮಾಡಿದರಿಂದ ಇಬ್ಬರು ಕೆಳಗೆ ಬಿದ್ದು ಗಾಯಗೊಂಡು ಹಣಮಂತರಾವ ರವರ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.