ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-05-2021
ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 11/2021, ಕಲಂ. 174(ಸಿ) ಸಿ.ಆರ್.ಪಿ.ಸಿ :-
ಫಿರ್ಯಾದಿ ಜೈಶ್ರೀ ಗಂಡ ರಾಜಕುಮಾರ ಶ್ರೀಮಂಗಲೆ ವಯ: 40 ವರ್ಷ, ಸಾ: ಫುಲಕುರ್ತಿ, ಸದ್ಯ: ಹೌಸಿಂಗ ಬೊರ್ಡ ಕಾಲೋನಿ ಬೀದರ ರವರ ಗಂಡನಾದ ರಾಜಕುಮಾರ ತಂದೆ ನಾರಾಯಾಣರಾವ ಶ್ರಿಮಂಗಲೆ ವಯ: 48 ವರ್ಷ, ರವರು ಸುಮಾರು ದಿವಸಗಳಿಂದ ಸರಾಯಿ ಕುಡಿಯುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದು ಸಮಯಕ್ಕೆ ಸರಿಯಾಗಿ ಊಟ ಮಾಡಲಾರದೆ ದಿನಾಲು ಸರಾಯಿ ಕುಡಿಯುತ್ತಾ ಬಂದಿರುತ್ತಾರೆ. ಗಂಡನಿಗೆ ಈ ಹಿಂದೆ ಸುಮಾರು 2-3 ಸಾರಿ ಆರೋಗ್ಯ ಸರಿ ಇರಲಾದ ಸಮಯಕ್ಕೆ ಆಸ್ಪತ್ರೆಗೆ ತೋರಿಸಿದಾಗ ವೈದ್ಯರು ಗಂಡನ ಲಿವರ ಮತ್ತು ದೇಹದ ಇತರೆ ಭಾಗಗಳು ಡ್ಯಾಮೇಜ ಆಗಿದ್ದು ಸರಾಯಿ ಕುಡಿಯುವುದು ಬಿಡಬೇಕೆಂದು ತಿಳಿಸಿರುತ್ತಾರೆ, ಹೀಗಿರುವಲ್ಲಿ ದಿನಾಂಕ 21-05-2021 ರಂದು ರಂದು ಫಿರ್ಯಾದಿಯು ಮನೆಯಲ್ಲಿರುವಾಗ ಗಂಡ ಸರಾಯಿ ಕುಡಿದು ಮನೆಗೆ ಬಂದು ಇನ್ನೂ ಸರಾಯಿ ಕುಡಿಯಲು ನನಗೆ ಹಣ ಬೇಕು ಅಂತ ಫಿರ್ಯಾದಿಯೊಂದಿಗೆ ತಕರಾರು ಮಾಡುವಾಗ ಫಿರ್ಯಾದಿಯು ಅವರಿಗೆ ಸುಮ್ಮನೆ ಏಕೆ ಸರಾಯಿ ಕುಡಿಯುತ್ತಿದ್ದರಿ ಈಗ ಸುಮಾರು 2-3 ದಿವಸಗಳಿಂದ ಹೊಟ್ಟೆಗೆ ಊಟ ಮಾಡಲಾರದೆ ಸರಾಯಿ ಏಕೆ ಕುಡಿಯುತ್ತೀರಿ ಅಂತ ಅಂದಾಗ ಒಮ್ಮೆಲೇ ಮನೆಯಲಿದ್ದ ಬತಾಯಿ ತೆಗೆದುಕೊಂಡು ತನ್ನನ್ನು ತಾನು ಹೊಡೆದುಕೊಂಡಾಗ ಮಕ್ಕಳಾದ ಪವನ ಮತ್ತು ಪ್ರಮೊದ ರವರು ತಡೆದಾಗ ಬತಾಯಿ ಗಂಡನ ಎದೆಯ ಭಾಗದಲ್ಲಿ ಹತ್ತಿದಾಗ ತರಚಿದ ರಕ್ತಗಾಯವಾಗಿರುತ್ತದೆ, ಕೂಡಲೇ ಅವರಿಗೆ ಚಿಕಿತ್ಸೆ ಕುರಿತು ಮೋಟಾರ ಸೈಕಲ ಮೇಲೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 22-05-2021 ರಂದು ಫಿರ್ಯಾದಿಯ ಗಂಡ ಮೃತಪಟ್ಟಿರುತ್ತಾರೆ, ಗಂಡನಾದ ರಾಜಕುಮಾರ ರವರು ತನ್ನ ಎದೆಯಲ್ಲಿ ಆದ ಗಾಯದಿಂದಲೋ? ಅಥವಾ ಇನ್ನಾವುದೋ? ಕಾಯಿಲೆಯಿಂದ ಮೃತಪಟ್ಟಿರುತ್ತಾರೆಂಬ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 22-05-2021 ರಂದು ಬೊಳೆಗಾಂವ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣ ಪಣಕ್ಕೆ ಹಚ್ಚಿ ಇಸ್ಪಿಟ ಎಲೆಗಳ ನಸಿಬೀನ ಜೂಜಾಟ ಆಡುತ್ತಿದ್ದಾರೆ ಅಂತ ನಂದಕುಮಾರ ಪಿ.ಎಸ.ಐ ಮೇಹಕರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೊಳೆಗಾಂವ ಗ್ರಾಮಕ್ಕೆ ಹೋಗಿ ಅಲ್ಲಿಯ ಹನುಮಾನ ಮಂದಿರ ಹತ್ತಿರ ಮರೆಯಾಗಿ ನಿಂತು ನೋಡಲು ಬೊಳೆಗಾಂವ ಗ್ರಾಮದ ಹನುಮಾನ ಮಂದಿರ ಹತ್ತಿರ ಹಿಂದುಗಡೆ ಹುಣಸಿ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸೌದಾಗರ ತಂದೆ ನಿಂಗಪ್ಪ ಮೇತ್ರೆ ವಯ: 38 ವರ್ಷ, ಜಾತಿ: ಎಸ.ಟಿ ಗೊಂಡ, 2) ಗಣೇಶ ತಂದೆ ಪುಂಡಲಿಕರಾವ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, 3) ಹಣಮಂತ ತಂದೆ ಬಸವರಾಜ ಧಬಾಲೆ ವಯ: 35 ವರ್ಷ, ಜಾತಿ: ಲಿಂಗಾಯತ, 4) ಓಂಕಾರ ತಂದೆ ಬಾಬುರಾವ ಧಬಾಲೆ ವಯ: 44 ವರ್ಷ, ಜಾತಿ: ಲಿಂಗಾಯತ, 5) ಏಕನಾಥ ತಂದೆ ಉಮಾಕಾಂತ ಬಿರಾದಾರ ವಯ: 48 ವರ್ಷ, ಜಾತಿ: ಮರಾಠಾ ಮತ್ತು 6) ರಾಮಚಂದ್ರ ತಂದೆ ವೈಜಿನಾಥ ನಳಗಿರೆ ವ: 39 ವರ್ಷ, ಜಾತಿ: ಲಿಂಗಾಯತ. ಎಲ್ಲರೂ ಸಾ: ಬೊಳೆಗಾಂವ ಇವರೆಲರಲರೂ ದುಂಡಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಅಂದರ ಬಹಾರ ಅನ್ನುವ ನಸೀಬಿನ ಇಸ್ಪಿಟ ಎಲೆ ಜೂಜಾಟ ಆಡುತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಹಿಡಿದುಕೊಂಡು ಅವರಿಂದ ಒಟ್ಟು 1270/- ರೂ. ನಗದು ಹಣ ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂ. 31/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 22-05-2021 ರಂದು ಪೊಲೀಸ್ ಚೌಕ ಹತ್ತಿರ ಒಬ್ಬ ವ್ಯಕ್ತಿ ಅನಧಿಕ್ರತವಾಗಿ ಯಾವುದೇ ಲೈಸನ್ಸ ಇಲ್ಲದೇ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಕು.ಸಂಗೀತಾ ಪಿಎಸಐ(ಕಾಸೂ) ಮಾರ್ಕೇಟ್ ಪೊಲೀಸ್ ಠಾಣೆ ಬೀದರ ರವರೊಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಪಂಚರ ಸಮಕ್ಷಮ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಅವಿನಾಶ ತಂದೆ ರವೀಂದ್ರ ದೊಡ್ಡಮನಿ ವಯ: 29 ವರ್ಷ, ಜಾ: ಎಸ್.ಸಿ ಹೊಲಿಯಾ, ಸಾ: ಗೊರನಳ್ಳಿ, ತಾ: ಜಿ: ಬೀದರ ಇತನ ಮೇಲೆ ದಾಳಿ ಮಾಡಿ ಆತನನ್ನು ದಸ್ತಗಿರಿ ಮಾಡಿ ಸದರಿಯವನ ಹತ್ತಿರವಿದ್ದ ಓರಿಜಿನಲ್ ಚಾಯಿಸ್ ವಿಸ್ಕಿ 90 ಎಮ.ಎಲ್ ನ 49 ಟೆಟ್ರಾ ಪ್ಯಾಕಗಳು ಅ.ಕಿ 1715/- ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 57/2021, ಕಲಂ. 457, 380 ಐಪಿಸಿ :-
ಯಾರೋ ಅಪರಿಚಿತ ಕಳ್ಳರು ದಿನಾಂಕ 21-05-2021
ರಂದು 2200 ಗಂಟೆಯಿಂದ ದಿನಾಂಕ 22-05-2021 ರಂದು 0600 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಅಂಕುಶ
ತಂದೆ ಪಂಡಿತರಾವ ಭುಸಾರೆ ಸಾ: ಹುಲಸೂರ,
ತಾ: ಹುಲಸೂರ
ರವರ ವೈನ್ ಶಾಪ್ ಅಂಗಡಿಯ ಮೇಲೆ ಇರುವ ತಗಡಗಳ ನಟ ಬೋಲ್ಟಗಳು ತೆಗೆದು ಅಂಗಡಿಯ ಒಳಗಡೆ ಪ್ರವೇಶ
ಮಾಡಿ ಅಂಗಡಿಯಲ್ಲಿರುವ 1) 60 ಎಂ.ಎಲ್ ವುಳ್ಳ 12 ಬ್ಲ್ಯಾಕ & ವೈಟ್ ಸರಾಯಿ ಬಾಟಲಗಳು ಅ.ಕಿ 2,376/-
ರೂ.,
2)
180 ಎಂ.ಎಲ್ ವುಳ್ಳ 06 ವಿಲಿಯಮ ಲಾರ್ಸನ್ಸ ಅ.ಕಿ 2,850/- ರೂ., 3) 180 ಎಂ.ಎಲ್ ವುಳ್ಳ 10
ಬ್ಲ್ಯಾಂಡರ ಸ್ಪಾಯಿಡ್ ವಿಸ್ಕಿ ಬಾಟಲಗಳು ಅ.ಕಿ 4,510/- ರೂ., 4) 180 ಎಂ.ಎಲ್ ವುಳ್ಳ ಒಂದು
ಸಿಗ್ನಿಚರ ವಿಸ್ಕಿ ಬಾಟಲ 448/- ರೂ., 5) 180 ಎಂ.ಎಲ್ ವುಳ್ಳ 48 ರಾಯಲ್ ಸ್ಟಾಗ
ವಿಸ್ಕಿ ಬಾಟಲಗಳು ಅ.ಕಿ 15,744/- ರೂ., 6) 90 ಎಂ.ಎಲ್ ವುಳ್ಳ 76 ರಾಯಲ್ ಸ್ಟಾಗ
ವಿಸ್ಕಿ ಬಾಟಲಗಳು ಅ.ಕಿ 12,464/- ರೂ., 7) 750 ಎಂ.ಎಲ್ ವುಳ್ಳ 03
ಐ.ಬಿ ವಿಸ್ಕಿ ಬಾಟಲಗಳು ಅ.ಕಿ 2463/-
ರೂ.,
8)
180 ಎಂ.ಎಲ್ ವುಳ್ಳ 173 ಐ.ಬಿ ವಿಸ್ಕಿ ಬಾಟಲಗಳು ಅ.ಕಿ 34,254/- ರೂ., 9)
750 ಎಂ.ಎಲ್ ವುಳ್ಳ ಒಂದು ಎಂ.ಸಿ ವಿಸ್ಕಿ ಸರಾಯಿ ಬಾಟಲ ಅ.ಕಿ 821/- ರೂ., 10)
180 ಎಂ.ಎಲ್ ವುಳ್ಳ 29 ಎಂ.ಸಿ ವಿಸ್ಕಿ ಸರಾಯಿ ಬಾಟಲಗಳು 5742/- ರೂ., 11)
750 ಎಂ.ಎಲ್ ವುಳ್ಳ 05 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 2200/- ರೂ., 12)
375 ಎಂ.ಎಲ್ ವುಳ್ಳ 06 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 1320/- ರೂ., 13)
180 ಎಂ.ಎಲ್ ವುಳ್ಳ 148 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲಗಳು ಅಕಿ 15,836/- ರೂ., 14)
90 ಎಂ.ಎಲ್ ವುಳ್ಳ 01 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲ ಅ.ಕಿ 68/- ರೂ., 15)
180 ಎಂ.ಎಲ್ ವುಳ್ಳ 96 ಆಫಿಸರ ಚಾಯಿಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 10,272/- ರೂ., 16)
180 ಎಂ.ಎಲ್ ವುಳ್ಳ 86 ಓ.ಟಿ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 7482/- ರೂ., 17)
90 ಎಂ.ಎಲ್ ವುಳ್ಳ 08 ಓರಿಜಿನಲ್ ಚಾಯಿಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 280/- ರೂ., 18)
375 ಎಂ.ಎಲ್ ವುಳ್ಳ 20 ಎಂ.ಸಿ ರಮ್ ಬಾಟಲಗಳು ಅ.ಕಿ 4400/- ರೂ., 19) 650 ಎಂ.ಎಲ್ ವುಳ್ಳ
70 ಕೆ.ಎಫ್ ಸ್ಟ್ರಾಂಗ ಬಿಯರ ಬಾಟಲಗಳು ಅ.ಕಿ 10,500/-
ರೂ.,
20)
650 ಎಂ.ಎಲ್ ವುಳ್ಳ 03 ಕೆ.ಎಫ್ ಪ್ರಿಮಿಯಮ್ ಬಿಯರ ಬಾಟಲಗಳು ಅ.ಕಿ 450/- ರೂ., 21)
330 ಎಂ.ಎಲ್ ವುಳ್ಳ 03 ಕೆ.ಎಫ್ ಪ್ರಿಮಿಯಮ್ ಬಿಯರ ಬಾಟಲಗಳು ಅ.ಕಿ 255/- ರೂ., ಹೀಗೆ
ಒಟ್ಟು 1,34,955/-
ರೂಪಾಯಿಯ ಸರಾಯಿ ಮತ್ತು ವಾಯಿನಶಾಪ ಅಂಗಡಿಯಲ್ಲಿ ಅಳವಡಿಸಿದ ಒಂದು ಸಿಸಿ ಟಿ.ವ್ಹಿ ಮತ್ತು
ಡಿ.ವ್ಹಿ.ಆರ್. ಅ.ಕಿ 10,000/- ರೂ. ಹೀಗೆ ಒಟ್ಟು ಎಲ್ಲಾ 1,44,955/- ರೂ ಸರಾಯಿ ಬಾಟಲಗಳು
ಹಾಗೂ ಸಿಸಿ ಟಿವ್ಹಿ. ಮತ್ತು ಡಿ.ವ್ಹಿ.ಆರ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು
ಹೋಗಿರುತ್ತಾರೆಂದು ಕೊಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.