Yadgir District Reported Crimes
ಯಾದಗಿರಿ
ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 65/2016 ಕಲಂ 279, 337, 338
ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ ;- ದಿನಾಂಕ 21/04/2017 ರಂದು ಮಧ್ಯಾಹ್ನ 1-00 ಪಿ.ಎಮ್ ಕ್ಕೆ ಫಿರ್ಯಾದಿ ಮತ್ತು ಅವಳ ಸಂಬಂಧಿಕ ಮಲ್ಲಿಕಾಜರ್ುನ
ಇಬ್ಬರೂ ಕೂಡಿಕೊಂಡು ತಮ್ಮ ಮೋಟಾರ ಸೈಕಲ ನಂ
ಕೆ.ಎ-33-ಯು-1367 ನೆದ್ದರ ಮೇಲೆ ಕುಳಿತು ಕೊಂಡು ತಮ್ಮೂರಿನಿಂದ
ಯಾದಗಿರಿಗೆ ಬಿಎ. ಪರೀಕ್ಷೆ ಬರೆಯುವ ಕುರಿತು ಕುಳಿತುಕೊಂಡು ಬರುವಾಗ ಮಲ್ಲಿಕಾಜರ್ುನ ಇತನು ಮೋಟಾರ
ಸೈಕಲ್ ಓಡಿಸಿಕೊಮಡು ಹೋಗುತತಿದ್ದು, ಹಿಂದುಗಡೆ
ಸೀಟಿಗೆ ಫಿರ್ಯಾಧಿ ಕುಳಿತುಕೊಂಡಿದ್ದು, ಮಾರ್ಗಮಧ್ಯ
ಎದುರುಗಡೆ ಬಂದಳ್ಳಿ ಕಡೆಯಿಂದ ಬಂದಳ್ಳಿ-ಹೊನಗೇರಾ ರೋಡಿನ ಮೇಲೆ ಆರೋಪಿತನು ತನ್ನ ಮೋಟಾರ ಸೈಕಲನ್ನು
ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಫಿರ್ಯಾಧಿ ಕುಳಿತುಕೊಂಡು ಹೋಗುವ ಮೋಟಾರ
ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ವಾಗಿದ್ದರಿಂದ ಫಿರ್ಯಾದಿಗೆ ಮತ್ತು
ಮಲ್ಲಿಕಾಜರ್ುನನಿಗೆ ಭಾರಿ ಮತ್ತು ಸಾದಾ ರಕ್ತಗಾಯ, ಗುಪ್ತಗಾಯ ಹಾಗೂ ತರಚಿದಗಾಯಗಳು ಆಗಿದ್ದು ಇರುತ್ತದೆ. ಮತ್ತು
ಅಪಘಾತ ಮಾಡಿ ಆರೋಪಿತನು ತನ್ನ ಮೋಟಾರ ಸೈಕಲ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಅವನ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲಾ,
ಮತ್ತು ಮೋಟಾರ ಸೈಕಲ ನಂಬರ ಗೋತ್ತಾಗಿರುವದಿಲ್ಲಾ
ಅಂತಾ ಫಿಯರ್ಾದಿ ಅದೆ.
ಮಹಿಳಾ
ಪೊಲೀಸ್ ಠಾಣೆ ಗುನ್ನೆ ನಂ. 11/2017 ಕಲಂ 498(ಎ)
323
354 504, 506 ಸಂ 149
ಐ.ಪಿ.ಸಿ ಮತ್ತು 3&4 ಡಿ.ಪಿ. ಕಾಯಿದೆ ;- ದಿನಾಂಕ 21/04/20017 ರಂದು 3 .30 ಪಿ.ಎಮ್. ಕ್ಕೆ ಶ್ರೀಮತ ರೇಣುಕಾ ಗಂಡ
ಚಂದ್ರರೆಡ್ಡಿ ಕೊಟೆಕಲ್ ವ|| 21 ಸಾ||
ಹೆಡಿಗಿಮದ್ರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಹಾಜರ
ಪಡಿಸದಿ ಸಾರಾಂಶವೆನಂದರೆ ನನ್ನ ವಿವಾಹವು 02 ವರ್ಷಗಳ ಹಿಂದೆ ಅಂದರೆ ದಿನಾಂಕ 01/04/2015 ರಂದು ಹೆಡಗಿಮದ್ರಾ ಗ್ರಾಮದ
ಚಂದ್ರರೆಡ್ಡಿ ಕೊಟೆಕಲ್ ಎಂಬುವರೊಂದಿಗೆ ಹಿಂದು ಸಂಪ್ರಾದಯ ಪ್ರಕಾರ ಹೆಡಿಗಿಮದ್ರಾ
ಗ್ರಾಮದ ಶಿವಪ್ಪ ಮುತ್ಯಾನ ಗುಡಿಯ ಮುಂದು ನಮ್ಮ ಬಂದು ಬಳಗ ಮತ್ತು ಗುರು ಹಿರಿಯರ ಸಮಕ್ಷಮದಲ್ಲಿ ವಿವಾಹ ಜರುಗಿರುತ್ತದೆ.
ಸದರಿ ವಿವಾಹದ ಸಮಯದಲ್ಲಿ ನಮ್ಮ
ಕುಟುಂಸ್ಥರು ಚಂದ್ರರೆಡ್ಡಿ ಅವರ ಕುಟುಂಬಕ್ಕೆ ಉಡುಗರೆಯಾಗಿ 5 ತೋಲಿ ಬಂಗಾರ ಮತ್ತು 1 ಲಕ್ಷ ರೂಪಯಿಗಳನ್ನು ಹಾಗೂ ಇನ್ನಿತರ ಸಂಸಾರಕ್ಕೆ ಬೇಕಾಗುವ
ರೂಪಾಯಿ 1 ಲಕ್ಷದ ಬೆಲೆ ಬಾಳುವ
ಸಾಮಾನಗಳನ್ನು ಕೊಟು ಮದುವೆಯನ್ನು ಮಾಡಿಕೊಟ್ಟಿದ್ದು ಇರುತ್ತದೆ. ಹೀಗಿದ್ದು ವಿವಾಹದ ನಂತರ 06 ತಿಂಗಳ ವರೆಗೆ
ಸಖಮಯ ದಾಂಪತ್ಯ ಜೀವನ ನಡೆಸಿದ್ದು ಇರುತ್ತದೆ.
ಪಿರ್ಯಾದಿದಾರಳಿಗೆ ವಿನಾಹ ಕಾರಣ ಗಂಡನಾದ ಚಂದ್ರರೆಡ್ಡಿ ಮಾವನಾದ ಭೀಮರಾಯ ಅತ್ತೆಯಾದ
ಮಲ್ಲಮ್ಮ ದೋಡ್ಡ ಮಾವನಾದ ಮರೆಪ್ಪ ಸಂಗೀತಾ ಈರಪ್ಪ ಇವರೆಲ್ಲರು ಮಾನಸಿಕ ಮತ್ತು ದೈಹಕ ಕಿರುಕುಳ ಕೊಡುತಾ
ಬಂದಿರುತ್ತಾರೆ. ಗಂಡ ಅತ್ತೆ ಇವರು ನಿನು ನಿಮ್ಮ ತವರು ಮನೆಯಿಂದ ಇನ್ನು 1 ಲಕ್ಷ ರೂ/- ಗಳನು ತೆಗೆದುಕೊಂಡು ಬಾ ಎಂದು ಪಿಡಿಸಿದರು
ಇದಕ್ಕೆ ಮೇಲೆ ತೋರಿಸಿ ನನ್ನ ಗಂಡನ ಕುಟುಂಬದದ ಸದಸ್ಯರ ಪ್ರಚೋದನೆ ನೀಡಿರುತ್ತಾರೆ. ಕಳೆದ 1 ವರ್ಷದ ಹಿಂದೆ ನನ್ನ ತವರು ಮನೆಗೆ ಕಳುಹಿಸಿದ 50 ಸಾವಿರ ರೂ/- ಗಳನ್ನು ತೆಗೆದುಕೊಂಡು ಬಾ ಇಲ್ಲದಿದ್ದರೂ
ಬಡವರಾದ ನನ್ನ ತಂದೆ ತಾಯಿಯವರು ಹೊರೆಯಾಗದೆ ಅಂಜಿ ಸಾಲ ಸೋಲು ಮಾಡಿ 40 ಸಾವಿರ ರೂ/ ಕೊಟ್ಟು ನನ್ನನ್ನು ನನ್ನ ಗಂಡನ ಮನೆಗೆ ಬಿಟ್ಟು
ಬಂದಿರುತ್ತಾರೆ.
ತದನಂತರ ನನ್ನ ಗಂಡ ನ ಮೇಲೆ ಹೇಳಿದ
ಮನೆಯ ಸದಸ್ಯರು ನನಗೆ ಮಾನಸಿಕ ನೀಡುತ್ತಾ ನಾವು ನಿನಗೆ 50 ಸಾವಿರ ರೂ/- ತೆಗೆದುಕೊಂಡು ಬಾ ಹೇಳಿದರೆ ನಿನು ಕೇವಲ 40 ಸಾವಿರ ರೂ/- ತೆಗೆದುಕೊಂಡು ಬಂದಿದಿಯಾ ಸೋಳಿ ರಂಡಿ ಚಿನಾಲಿ ಎಂದು ಅವಾಚ್ಯ ಶಬ್ದಗಳಿಂದ
ಬೈಯುತ್ತಿದ್ದರು. ಮತ್ತು 6
ತಿಂಗಳಗಳಿಂದ ನನ್ನ ಗಂಡನು ದಿನಾಲು ಕುಡಿದು ಬಂದು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ
ನೀಡುತ್ತಿದ್ದನು ಮತ್ತು ಮಾವ ಭೀಮರಾಯ ಇತನು ಪರ್ಯಾದಿದಾರಳಿಗೆ ಕೈ ಹಿಡಿದು ಜೆಂಗಿ ಮತ್ತು ಲೈಂಗಿಕ
ಕಿರುಕುಳ ನೀಡಿರುತ್ತಾನೆ.
ಹೀಗಿದ್ದು ದಿನಾಂಕ 17/04/2017
12 ಗಂಟೆ ಸುಮಾರಿಗೆ ಹೆಡಿಗಿಮದ್ರಿ ಗ್ರಾಮದಲ್ಲಿ
ಪಿರ್ಯಾದಿದಾರಳಿಗೆ ಗಂಡ ಚಂದ್ರರೆಡ್ಡಿ ಮಾವ ಭೀಮರಾಯ ಅತ್ತೆ ಮಲ್ಲಮ್ಮ ದೋಡ್ಡ ಮಾವ ಮರೆಪ್ಪ ಸಗೀತಾ
ಈರಪ್ಪ ಎಲ್ಲಾರು ಹೋಡೆ ಬಂಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ್ದು
ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಲು
ಪಿರ್ಯಾದಿ ಇರುತ್ತದೆ.
ವಡಗೇರಾ
ಪೊಲೀಸ್ ಠಾಣೆ ಗುನ್ನೆ ನಂ. 54/2017 ಕಲಂ 323,324,504,307 ಐಪಿಸಿ;-
ದಿನಾಂಕ:21/04/2017 ರಂದು
ಖಾನಾಪೂರ ಗ್ರಾಮದ ಮರಲಿಂಗಪ್ಪ ಕೊಂಚೆಟ್ಟಿ ಇವರ ಮದುವೆ ಇದ್ದು ನನಗೆ ಮದುವೆಗೆ ಆಮಂತ್ರಣ
ನೀಡಿದ್ದರಿಂದ ನಾನು ಮದುವೆಯಲ್ಲಿ ಹೋಗಿದ್ದೇನು. ಸಾಯಂಕಾಲ 8 ಗಂಟೆಗೆ ಮೇರವಣಿಗೆಯಲ್ಲಿ
ಹೊರಟಿದ್ದೇನು ಮೇರಣಿಗೆಯು ರಾತ್ರಿ ಅಂದಾಜು 9.30 ಗಂಟೆಗೆ ನಮ್ಮೂರ ಗ್ರಾಮ ಪಂಚಾಯತ ಮುಂದೆ
ಇದ್ದಾಗ ಅದೇ ಸಮಯಕ್ಕೆ ನಮ್ಮೂರ 1)ರಾಜಕುಮಾರ ತಂದೆ ಬಸವರಾಜಪ್ಪ ವರಮನಿ, 2)ಅಂಬ್ರೇಶ ತಂದೆ ಗದ್ದೆಪ್ಪ ಮುಗಲ್ 3)ಅಂಬ್ರೇಶ ತಂದೆ ಸೂರ್ಯಕಾಂತ ತಂದೆ ಖಾನಾಪೂರ
4)ರಾಘವೇಂದ್ರ ತಂದೆ ಗದ್ದೆಪ್ಪ ಮುದಲ್ ಇವರೆಲ್ಲರು ನನಗೆ ಕುತ್ತಿಗೆ ಹಿಚುಕಿ ಕೊಲೆ ಮಾಡುವ ಉದ್ದೇಶದಿಂದ
ಅಕ್ರಮ ಕೂಟ ಕಟ್ಟಿಕೊಂಡು ಬಂದವರೇ ಎಲೇ ರಾಘ್ಯಾ ಸೂಳೆ ಮಗನೇ ಈ ಹಿಂದೆ ನಿನಗೆ ಕೊಲೆ ಮಾಡಲು
ಪ್ರಯತ್ನಿಸಿದ್ದು ಉಳಿದುಕೊಂಡಿದ್ದೀ ಮಗನೇ ಇವತ್ತು ನಿನಗೆ ಬಿಡುವದಿಲ್ಲಾ ಅಂದವರೆ ಅಂಬ್ರೇಶ ತಂದೆ
ಗದ್ದೆಪ್ಪ ಇವನು ತನ್ನ ಕೈಯಲ್ಲಿದ್ದು ಶೇಲ್ಯದಿಂದ ನನ್ನ ಕೊರಳಿಗೆ ಹಾಕಿ ಜೋರಾಗಿ ಕುತ್ತಿಗಿಗೆ
ಬಿಗಿದು ಹಿಚುಕಿದನು. ಅವರ ಜೋತೆಯಲ್ಲಿದ್ದ 1)ರಾಜಕುಮಾರ ತಂದೆ ಬಸವರಾಜಪ್ಪ ವರಮನಿ ಇವನು
ಕುತ್ತಿಗೆ ಹಿಚುಕಿ ನನ್ನ ಎರಡು ಕೈಗಳನ್ನು ಹಿಂದಕ್ಕೆ ತಿರುಗಿ ಜೋರಾಗಿ ಹಿಡಿದುಕೊಂಡನು. ಅಂಬ್ರೇಶ
ತಂದೆ ಸೂರ್ಯಕಾಂತ, ಖಾನಾಪೂರ, ರಾಘವೇಂದ್ರ ತಂದೆ ಗದ್ದೆಪ್ಪ
ಮುದಲ್ ಇಬ್ಬರು ಕೂಡಿಕೊಂಡು ಈ ಮಗನಂದು ಸೊಕ್ಕು ಬಹಾಳ ಆಗಿದೆ ಜೀವ ಸಹಿತ ಬಿಡಬೇಡರಿ ಅಂತಾ ನನಗೆ ಬೆನ್ನಿಗೆ ಮತ್ತು ಕಪಾಳಕ್ಕೆ ಕೈಯಿಂದ
ಹೊಡೆಯುತ್ತಿರುವಾಗ ನಾನು ಚೀರಾಡುವ ಸಪ್ಪಳ ಕೇಳಿ ಅಲ್ಲೆ ಇದ್ದ ಗೋವಿಂದಪ್ಪ ಕೊಂಚಟ್ಟಿ, ಬಂಗಾರಪ್ಪ ತಂದೆ ಅಬಿಮಾನಪ್ಪ ಚಕ್ಕಡಿ, ಅರುಣ ತಂದೆ ಗೋವಿಂದಪ್ಪ
ಯಲೇರಿ ಪರಶುರಾಮ ಕುರಕುಂದಿ ಇವರೆಲ್ಲರು ಕೂಡಿ ಜಗಳ ಬಿಡಿಸಿಕೊಂಡರು ಆಗ ಅವರೆಲ್ಲರು ಲೇ ಮಗನೇ
ನೀನು ಈ ಸಲ ಉಳಿದುಕೊಂಡಿ ಇವರೆಲ್ಲರು ಕೂಡಿ ಜಗಳ ಬಿಡಿಸಿಕೊಂಡರು ಆಗ ಅವರೆಲ್ಲರು ಲೇ ಮಗನೆ ನೀನು
ಈ ಸಲ ಉಳಿದುಕೊಂಡಿ ಮಗನೆ ಇನ್ನೊಮ್ಮೆ ಸಿಕ್ಕರೆ
ನೀನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕಿ ಹೋದರು ನನಗೆ ಹೊಡೆ ಬಡೆ ಮಾಡಿ ಕೊಲೆ
ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದವರ
ಮೇಲೆ ಕಾನೂನು ಕ್ರಮ ಜರುಗಿಸಿಬೇಕು ನನಗೆ ಜೀವ ರಕ್ಷಣೆ
ಮಾಡಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಅಂತಾ ನೀಡಿದ ಲಿಖಿತ ಅಜರ್ಿಯ ಸಾರಾಂಶದ ಮೇಲಿಂದ
ಠಾಣಾ ಗುನ್ನೆ ನಂ.54/2017 ಕಲಂ 323,
324, 504, 307 ಸಂ. 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗುರಮಿಠಕಲ ಪೊಲೀಸ್ ಠಾಣೆ
ಗುನ್ನೆ ನಂ. 63/2017 ಕಲಂ: 323, 324, 504, 506
ಸಂಗಡ 34
ಐಪಿಸಿ;- ದಿನಾಂಕ 21/04/2017 ರಂದು ಬೆಳಿಗ್ಗೆ 6-15 ಗಂಟೆಗೆ ಸರಕಾರಿ ಆಸ್ಪತ್ರೆ, ಗುರುಮಠಕಲ್ ದಿಂದ ಎಮ್.ಎಲ್.ಸಿ ವಸೂಲಾಗಿದ್ದು ಸದರಿ ಆಸ್ಪತ್ರೆಗೆ
ಭೇಟಿ ನೀಡಿ ಗಾಯಾಳು ಫಿರ್ಯಾಧಿಗೆ ವಿಚಾರಣೆ ಮಾಡಿದ್ದು ಆತನ ಹೇಳಿಕೆ ನಿಡಿದ್ದೇನೆಂದರೆ, ಸುಮಾರು
10 ವರ್ಷದ ಹಿಂದೆ ತಮ್ಮ ತಂದೆ ಮತ್ತು
ಚಿಕ್ಕಪ್ಪ ಎ-1 ಇಬ್ಬರು ಸೇರಿ 2-12 ಗುಂಟೆ ಜಮೀನು ಖರೀದಿಸಿದ್ದು ಅದರಲ್ಲಿ 23 ಗುಂಟೆ ಜಮೀನು ಫಿರ್ಯಾದಿಯ ತಂದೆಯ ಹೆಸರಿನಲ್ಲಿ ಉಳಿದ 2-29 ಗುಂಟೆ ಜಮೀನು ಎ-1 ಈತನ ಹೆಸರಿನಲ್ಲಿರುತ್ತದೆ ಆದ್ದರಿಂದ ಅದನ್ನು ಸಮಾನವಾಗಿ
ತಮ್ಮ-ತಮ್ಮ ಹೆಸರಿಗೆ ಮಾಡಿಕೊಳ್ಳುವ ವಿಚಾರದಲ್ಲಿ ನ್ಯಾಯಾ ಪಂಚಾಯತಿ ಮಾಡಿರುತ್ತಾರೆ. ಅದೇ
ಕಾರಣದಿಂದ ನಿನ್ನೆ ದಿನಾಂಕ 20/04/2017
ರಂದು ರಾತ್ರಿ 8-30 ಗಂಟೆ ಸುಮಾರಿಗೆ
ಫಿರ್ಯಾದಿ ಮನೆಯ ಮತ್ತು ಆತನ ಮನೆಯವರೆಲ್ಲರು ಕುಳಿತ್ತಿದ್ದಾಗ ಕುಡಿದು ಬಂದ ಎ-2 ಅವರನ್ನು ನೊಡಿ ಅವಾಚ್ಯಾಗಿ ಬೈದಿದ್ದು ಅದೇ ಸಮಯಕ್ಕೆ
ಅಲ್ಲಿಗೆ ಬಂದ ಎ-1 ಫಿರ್ಯಾದಿಗೆ
ಅವಾಚ್ಯಾವಾಗಿ ಬೈದು ಕೈಹಿಂದ ಹೊಡೆದಿರುತ್ತಾನೆ. ನಂತರ ಅಲ್ಲಿದ್ದವರು ಜಗಳ ಬಿಡಿಸಿದ್ದು ಆಗ ಎ-1 ಈತನು ಮನೆಗೆ ಹೋಗಿ ಕೊಡಲಿಯನ್ನು ತಂದು ಫಿರ್ಯಾದಿಯ
ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯ ಮಾಡಿದ್ದು ಆಗ ಎ-2 ಈತನು ಬಿಡಬ್ಯಾಡ ಖಲಾಸ ಮಾಡು ಅಂತಾ ಜೀವದ ಬೆದರಿಕೆ
ಹಾಕಿರುತ್ತಾನೆ ಅಂತಾ ಹೇಳಿಕೆ ನೀಡಿದ್ದು ಮರಳಿ ಠಾಣೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 63/2017 ಕಲಂ: 323, 324, 504, 506 ಸಂಗಡ 34
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ
ಪೊಲೀಸ್ ಠಾಣೆ ಗುನ್ನೆ ನಂ. 64/2017 ಕಲಂ: 279.338.304(ಎ)ಐ.ಪಿ.ಸಿ;- ದಿನಾಂಕ: 21.04.2017 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾಧಿ ಮತ್ತು ಆತನ ಸಂಬಂಧಿ ಎಂ.ಡಿ ಬಸೀರ
ಕೂಡಿಕೊಂಡು ಬೊಲೇರೊ ಮ್ಯಾಕ್ಸಿ ಟ್ರಕ್ ನಂ: ಟಿ.ಎಸ್.-06 ಯು.ಎ-4141 ನೇದ್ದರಲ್ಲಿ ಶಹಪುರದಿಂದ ಮೈಹುಬೂಬ ನಗರಕ್ಕೆ ಯಾದಗಿರಿ ಮಾರ್ಗವಾಗಿ ಗುರುಮಠಕಲ್ ಕಡೆಗೆ
ಬರುವಾಗ ಕಂದಕೂರು ಗ್ರಾಮದ ಹತ್ತಿರ ಮದ್ಯಾಹ್ನ 12.45 ಗಂಟೆ ಸುಮಾರಿಗೆ ನಾಸ್ಟ ಮಾಡಬೇಕು ಅಂತ ಗೇಟ್ ದಾಟಿ ಎಡಬದಿಗೆ
ಚಾಲಕ ಎಂ.ಡಿ ಬಸೀರ ಈತನು ವಾಹನ ನಿಲ್ಲಿಸುತ್ತಿದ್ದಾಗ ಗುಂಜನೂರು ಕಡೆಯಿಂದ ಆರೋಪಿ ಮೋಟಾರ ಸೈಕಲ
ಸವಾರನು ತನ್ನ ಸ್ಪ್ಲೇಂಡರ್ ಪ್ಲಸ್ ಇದ್ದು ಅದರ ನಂಬರ ಟಿ.ಎಸ್-34-0476 ನೇದ್ದರ ಹಿಂದುಗಡೆ ಮೃತ ಸಾಯಪ್ಪನನ್ನು ಕೂಡಿಸಿಕೊಂಡು
ಅತಿವೇಗವಾಗಿ ಮತ್ತು ಅಲಕ್ಷತನದಿಂದ ಬಂದು ಬೊಲೇರೋ ವಾಹನದ ಬಲಗಡೆ ಎಂಗಲಗೆ ಜೋರಾಗಿ ಡಿಕ್ಕಿ
ಪಡಿಸಿದ್ದರಿಂದ ಭಾರಿ ಗಾಯಗಳಾಗಿದ್ದು 108
ಅಂಬುಲೇನ್ಸ್ಗೆ ಗಾಯ ಹೊಂದಿದವರನ್ನು ಅದರಲ್ಲಿ ಹಾಕಿಕೊಂಡು ಗುರುಮಠಕಲ್ ಸಕರ್ಾರಿ ಆಸ್ಪತ್ರೆಗೆ
ಕರೆದುಕೊಂಡು ಬಂದು ಉಪಚಾರಕ್ಕಾಗಿ ಸೇರಿಕೆ ಮಾಡುತ್ತಿದ್ದಾಗ ಭಾರಿ ಗಾಯ ಹೊಂದಿದ್ದ ಸಾಯಪ್ಪ ತಂದೆ
ಬಕ್ಕಪ್ಪ ಪೂಜಾರಿ ಎಂಬುವನು ಮದ್ಯಾಹ್ನ 2
ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಠಾಣೆಯಲ್ಲಿ ಗುನ್ನೆ ನಂ: 64/2017 ಕಲಂ: 279.338.304(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ.
ಶಹಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 123/2017 ಕಲಂಃ 78(3) ಕೆ.ಪಿ.ಆಕ್ಟ;- ದಿನಾಂಕ:21/04/2017 ರಂದು 8-30 ಪಿ.ಎಂ. ಗಂಟೆಗೆ ಸರಕಾರಿ ತಫರ್ೆ ಪಿರ್ಯಾದಿಯಾಗಿ ಶ್ರೀ ಸೋಮಲಿಂಗಪ್ಪ ಎ.ಎಸ್.ಐ. ಶಹಾಪೂರ
ಪೊಲೀಸ್ ಠಾಣೆರವರು ವರದಿ ಕೊಟ್ಟಿದ್ದರ ಸಾರಾಂಶವೇನೆಂದರೆ, ದಿನಾಂಕ
21/04/2016 ರಂದು ಸಾಯಂಕಾಲ 18-30 ಗಂಟೆಗೆ
ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ
ಬಂದ್ದಿದ್ದೆನೆಂದರೆ ಶಹಾಪೂರ ನಗರದ ಹಳಿಪೇಠ್ದ
ಮರೇಮ್ಮ ದೇವಿಗುಡಿಯ ಮುಂದೆ ಇರುವ ಸಾರ್ವಜನಿಕ
ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ
ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದಿದ್ದ ಮೇರೆಗೆ ಪಿ.ಐ.ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು
ಠಾಣೆಯ ಸಿಬ್ಬಂದಿಯವರಾದ ಹೋನ್ನಪ್ಪ ಹೆಚ್.ಸಿ.101. ಶರಣಪ್ಪ ಎಚ್.ಸಿ.164 ರವರಿಗೆ ವಿಷಯ ತಿಳಿಸಿ
ಇಬ್ಬರೂ ಪಂಚರಾದ 1] ಶ್ರೀ
ಮಲ್ಲಿಕಾಜರ್ುನ್ ತಂದೆ ಭೀಮರಾಯ ಗಗ್ಗರಿ ವ|| 47 ಜಾ|| ಕಬ್ಬಲಿಗ ಉ|| ಕೂಲಿ ಸಾ|| ಗಂಗಾನಗರ ಶಹಾಪೂರ 2] ಶ್ರೀ
ಚೌಡಪ್ಪ ತಂದೆ ದೇವಿಂದ್ರಪ್ಪ ಪುಜಾರಿ ವಯಾ 28 ವರ್ಷ ಜಾ||ಕುರಬರು ಉ|| ಕೂಲಿ ಕೆಲಸ ಸಾ|| ಸೈದಾಪೂರ ತಾ||
ಶಹಾಪೂರು
ಇವರನ್ನು ಪಂಚರಂತ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು
ಒಪ್ಪಿಕೊಂಡಿದ್ದು. ಸದರಿಯವನ ಮೇಲೆ ದಾಳಿ ಮಾಡಲು
ನಾನು ಪಂಚರು ಸಿಬ್ಬಂದಿಯವರು ಒಂದು
ಖಾಸಗಿ ವಾಹನದಲ್ಲಿ ಕುಳಿತುಕೊಂಡು, ಠಾಣೆಯಿಂದ
ಸಾಯಂಕಾಲ 18-40 ಗಂಟೆಗೆ ಹೊರಟು ಹಳಿಪೇಠದ ಮರೇಮ್ಮ ದೇವಿಯ ಗುಡಿ
ಹತ್ತಿರ ಸಾಯಂಕಾಲ 18-50 ಗಂಟೆಗೆ ಹೋಗಿ ಮನೆಗಳ ಮರೆಯಲ್ಲಿ ನಿಂತು ನಿಗಾ ಮಾಡಿ
ನೋಡಲಾಗಿ ಮರೇಮ್ಮದೇವಿ ಗುಡಿ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ
ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದನು
ಸದರಿಯವನು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಮಟಕಾ ಅಂಕಿಗಳನ್ನು
ಬರೆದುಕೊಳ್ಳುತಿದ್ದನು, ಆಗ ನಾವು
ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು
ಸಿಬ್ಬಂದಿಯವರೊಂದಿಗೆ ಸುತ್ತುವರೆದು ಸಾಯಂಕಾಲ 19-00 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು
ಓಡಿ ಹೋಗಿದ್ದು ಮತ್ತು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿ
ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು
ತನ್ನ ಹೆಸರು ಶಾಂತಪ್ಪ ತಂದೆ ಭೀಮರಾಯ ಮಸರಕಲ್ ವ|| 32 ಉ|| ಗೌಂಡಿಕೆಲಸ
ಜಾ|| ಪ.ಜಾತಿ ಸಾ|| ಹಳಿಪೇಠ್ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ
ಮಾಡಿದಾಗ ನಗದು 2850=00 ರೂಪಾಯಿ
ಸಿಕ್ಕವು ಮತ್ತು ಒಂದು ಬಾಲ್ ಪೆನ್, ಎರಡು ಮಟಕಾ ಅಂಕಿಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು
ಒಂದು ಲಕೋಟೆಯಲ್ಲಿ ಹಾಕಿಕೊಂಡು ಪಂಚರು ಸಹಿ
ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಸಾಯಂಕಾಲ 19-00 ಗಂಟೆಯಿಂದ 20-00 ಗಂಟೆಯವರೆಗೆ ಮರೇಮ್ಮ ದೇವಿಯ ಗುಡಿಯ
ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮಾಡಿ ತಾಬೆಗೆ ತೆಗೆದುಕೊಂಡೆನು. ನಂತರ ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿಗಳನ್ನು ಬರೆದುಕೊಂಡ
ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ರಾತ್ರಿ 20-15 ಗಂಟೆಗೆ ಬಂದು ವರದಿ ತಯ್ಯಾರಿಸಿ ಮುಂದಿನ ಕ್ರಮಕೈಕೊಳ್ಳಲು ಎಸ್.ಹೆಚ್.ಓ.ರವರಿಗೆ ಸೂಚಿಸಿದ
ಪ್ರಕಾರ ಠಾಣೆ ಗುನ್ನೆ ನಂ.123/2017
ಕಲಂ. 78 (3) ಕೆ.ಪಿ.ಆಕ್ಟ ನೇದ್ದರ
ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 54-2017 ಕಲಂ, 78(3) ಕೆ.ಪಿ.ಆ್ಯಕ್ಟ್;- ದಿನಾಂಕ:
21/04/2017 ರಂದು 01.00 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ
ಕರ್ತವ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ
ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು
ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 21/04-2017 ರಂದು 11.00 ಎಎಮ್ ಕ್ಕೆ ಠಾಣೆಯಲ್ಲಿದ್ದಾಗ ಗೋಗಿ ಪೇಠ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ
ಮೇಲೆ ಒಬ್ಬನು ಸಾರ್ವಜನಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಳೆ ಅಂತಾ ಭಾತ್ಮೀ
ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಗೋಗಿ ಪೇಠ ಬಸ್ ನಿಲ್ದಾಣದ ಹತ್ತಿರ
ಸಾರ್ವಜನಿಕ ರಸ್ತೆಯ ಮೇಲೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಒಬ್ಬನು ಸಾರ್ವಜನಿಕ
ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಕಲ್ಯಾಣ ಮಟಕಾ ಚೀಟಿ
ಬರೆದುಕೊಳ್ಳುತ್ತಿದ್ದನ್ನು ಖಾತ್ರಿ ಪಡಿಸಿಕೊಂಡು 11.45 ಪಿಎಮ್ ಕ್ಕೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ
ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅಶೋಕ ತಂದೆ ಸಾಬಯ್ಯ ಗುತ್ತೇದಾರ ವಯಾ:48 ವರ್ಷ ಉ: ಒಕ್ಕಲುತ ಜಾ: ಇಳಗೇರ ಸಾ: ಗೋಗಿ ಪೇಠ ತಾ:
ಶಹಾಪೂರ ಅಂತಾ ತಿಳಿಸಿದ್ದು ಸದರಿಯವನ ಅಂಗ ಪರಿಶೀಲಿಸಲಾಗಿ ನಗದು ಹಣ 750/- ರೂ ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್
ಪೆನ್ನನ್ನು ಪಂಚರ ಸಮಕ್ಷಮ 11.45 ಎಎಮ್
ದಿಂದ 12.45 ಪಿಎಮ್ ದವರೆಗೆ ಜಪ್ತಿ
ಪಂಚನಾಮೆ ಕೈಕೊಂಡು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ
ಅನುಮತಿ ಪಡೆದುಕೊಂಡು 01.45 ಪಿಎಮ್
ಕ್ಕೆ ಠಾಣೆ ಗುನ್ನೆ ನಂ: 54/2017 ಕಲಂ,
78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ: 279,
304(ಎ)
ಐಪಿಸಿ ;- ದಿನಾಂಕ: 21/04/2017 ರಂದು 12.30 ಪಿಎಮ್‌ಕ್ಕೆ ಶ್ರೀ ಪ್ರಕಾಶ ತಂದೆ ಹಳ್ಳೆಪ್ಪ ಹಿರೆಕುರುಬರ @ ಬಳುಟಗಿ ಸಾ:
ಬಸವಲಿಂಗೇಶ್ವರ ನಗರ ಯಲಬುರ್ಗಾ ಜಿ||
ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ
ಸಾರಾಂಶವೇನೆಂದರೆ, ನಾವು ಇಬ್ಬರು ಅಣ್ಣತಮ್ಮಂದಿರಿದ್ದು,
ಒಬ್ಬ ತಂಗಿ ಇರುತ್ತಾಳೆ. ನಮ್ಮ ಅಣ್ಣನಾದ ರಮೇಶ ತಂದೆ
ಹಳ್ಳೆಪ್ಪ ಹಿರೆಕುರುಬರ@ ಬಳುಟಗಿ ವಯಾ|| 30 ಈತನು ಕುಕನೂರ ಗ್ರಾಮದ ಶರಣಪ್ಪ ತಂದೆ ಅಮರಪ್ಪ ಪಲ್ಲೇದಾರ ಇವರ ಲಾರಿ ನಂ ಕೆಎ 37 ಎ 6424 ನೇದ್ದಕ್ಕೆ
ಚಾಲಕನಾಗಿ ಸುಮಾರು 2 ವರ್ಷಗಳಿಂದ ಡ್ರೈವರನಾಗಿ ಕೆಲಸ ಮಾಡುತ್ತಿರುತ್ತಾನೆ. ಈತನು ತಮ್ಮ ಮಾಲಿಕರು
ಹೇಳಿದಂತೆ ಬಾಡಿಗೆಗೆ ಹೋಗಿ ವಾಪಸು ಮನೆಗೆ ಬರುತ್ತಿದ್ದನು. ಹೀಗಿದ್ದು ಈಗ 15 ದಿವಸಗಳ ಹಿಂದೆ
ನಮ್ಮ ಅಣ್ಣ ರಮೇಶನು ಡ್ರೈವರ ಕೆಲಸಕ್ಕೆ ಹೋದವನು ವಾಪಸು ಬಂದಿರುವದಿಲ್ಲ. ಹೀಗಿದ್ದು ಇಂದು
ದಿನಾಂಕ: 21/04/2017 ರಂದು ಬೆಳಿಗ್ಗೆ 7 ಗಂಟೆಗೆ ನಮ್ಮ ಅಣ್ಣನ ಮಾಲಿಕನ ತಮ್ಮನಾದ ಮುತ್ತಣ್ಣ ತಂದೆ ಮಹಾದೇವಪ್ಪ ಪಲ್ಲೇದಾರ ಸಾ|| ಕುಕನೂರ ಈತನು ನಮಗೆ
ಫೊನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಅಣ್ಣ ರಮೇಶ ಈತನು ಕೆಂಭಾವಿಯಿಂದ ಹುಣಸಗಿ ಬರುವ ರಸ್ತೆಯ ಸಾಯಿ ನಗರ ಹತ್ತಿರ
ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ ಅಂತ ಸುದ್ದಿ ತಿಳಿಸಿದ್ದು ಇರುತ್ತದೆ. ಆಗ ನಾನು ಹಾಗೂ
ನಮ್ಮ ಮನೆಯ ಬಾಜು ಜನರು ಬಂದು ಸಾಯಿ ನಗರ ಹತ್ತಿರ ನೋಡಲು ನಮ್ಮ ಅಣ್ಣ ರಮೇಶನು ಲಾರಿ ಅಪಘಾತದಲ್ಲಿ
ಮೃತಪಟ್ಟಿದ್ದು ಕಂಡಿದ್ದು, ಸದರಿ ಘಟನೆಯು ದಿನಾಂಕ: 21/04/2017 ರಂದು ನಸುಕಿನ 3.00 ಗಂಟೆ ಸುಮಾರಿಗೆ ಲಾರಿ ನಂಬರ ಕೆಎ 37 ಎ 6424 ನೇದ್ದರಲ್ಲಿ ಭಾರವಾದ ಗ್ರಾನೈಟ್ ಕಲ್ಲುಗಳನ್ನು ತುಂಬಿಕೊಂಡು ಲಾರಿಯನ್ನು ಚಾಲನೆ
ಮಾಡಿಕೊಂಡು ಬರುತ್ತಿರುವಾಗ ಹುಣಸಗಿ ರಸ್ತೆಯ ಸಾಯಿ ನಗರ ಹತ್ತಿರ ಲಾರಿಯನ್ನು ಅತಿವೇಗ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿರುವಾಗ ಮುಂದೆ ಹೋಗುತ್ತಿದ್ದ ಯಾವುದೋ ಒಂದು ವಾಹನಕ್ಕೆ
ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಗ್ರಾನೈಟ್ ಕಲ್ಲು ಮುಂದೆ ಸರಿದು ಕ್ಯಾಬಿನ್ ಒಳಗೆ
ನುಗ್ಗಿದ್ದರಿಂದ ನಮ್ಮ ಅಣ್ಣ ರಮೇಶನಿಗೆ ಸ್ಟೇರಿಂಗ್ ಮತ್ತು ಕಲ್ಲಿನ ಮದ್ಯ ಸಿಲುಕಿದ್ದರಿಂದ
ಬಲಗಡೆ ಮುಖಕ್ಕೆ, ಮೆಲಕಿಗೆ, ಮೂಗಿಗೆ ಹಾಗೂ ಬಲಗೈ ರಟ್ಟೆಗೆ ಮತ್ತು ಎರಡೂ ಕಾಲುಗಳು ಒಳಗಡೆ ಸಿಕ್ಕಿ ಮುರಿದಿದ್ದರಿಂದ
ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತ ಪಿರ್ಯಾದಿ ಸಾರಾಂಶದ ಮೇಲಿಂದ
ಕೆಂಭಾವಿ ಠಾಣೆಗುನ್ನೆ ನಂ 52/17 ಕಲಂ: 279, 304 ಎ ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ.;- 17/2017 ಕಲಂ : 143,
147, 148, 323, 324, 504, 506 ಸಂ 149 ಐಪಿಸಿ;-
ಪಿರ್ಯಾದಿಯವರದು ಹಗರಟಗಿ ಸಿಮಾಂತದಲ್ಲಿ
ಸವರ್ೆ ನಂ:279 ರಲ್ಲಿ ಗೋದಿ ಮಡಿ ಹೊಲ
ಅಂತ ಹೆಸರಿನ ಹೊಲವಿದ್ದು ಹೊಲದಲ್ಲಿ ಹೊರಟ್ಟಿಯಿಂದ ತಾಳಿಕೊಟಿಗೆ ಹೊಗುವ ಬಂಡಿದಾರಿ ರಸ್ತೆಯಿದ್ದು
ಪಿರ್ಯಾದಿಯ ಹೊಲದ ಪಕ್ಕದಲ್ಲಿಯೆ ಆರೋಪಿತರ ಜಮಿನೂ ಇದ್ದು ದಿನಾಂಕ:19-04-2017 ರಂದು ಪಿರ್ಯಾದಿಯು ತನ್ನ ಹೆಂಡತಿ ಮತ್ತು ತಮ್ಮೂರ ಶರಣಪ್ಪ ಬೂದಿಹಾಳ ಹಾಗೂ ತಿಪ್ಪಣ್ಣಗೌಡ ತಂದೆ
ಬರಮಣ್ಣ ಮಾಲಿಗೌಡರ ರವರೊಂದಿಗೆ ಹಗರಟಗಿ ಸಿಮಾಂತರದ ತಮ್ಮ ಜಮಿನೂ ಸವರ್ೆ ನಂ:279 ನೇದ್ದರಲ್ಲಿ ಕೆಲಸ ಮಾಡುತ್ತಿರುವಾಗ ಸಾಯಂಕಾಲ 05-00 ಸುಮಾರಿಗೆ ಪಿರ್ಯಾದಿಯ ಹೊಲದ ಪ್ಪಕದ ಹೊಲದವರಾದ
ಆರೋಪಿತರು ಹೊಲದೊಳಗೆ ಅಕ್ರಮವಾಗಿ ಬಂದವರೆ ಪಿರ್ಯಾದಿಗೆ ಲೇ ಬೊಸಡಿ ಮಗನೆ ಗುರ್ಯಾ ನಿನ್ನ ಸೊಕ್ಕು
ಬಹಳವಾಗಿದೆ ನಮ್ಮ ಹೊಲಕ್ಕೆ ಹೊಗಲು ದಾರಿ ಬಂದು ಮಾಡಿರುವಿ ಇವತ್ತು ನಿನಗೆ ಒಂದು ಗತಿ
ಕಾಣಿಸಿತ್ತೆವೆ ಅಂತಾ ಬೈದಾಡಿ ಜಗಳ ತೆಗೆದು ಕೈಯಿಂದ, ಕಲ್ಲಿನಿಂದ ಹೊಡೆ-ಬಡೆ ಮಾಡಿ ಗಾಯಪೆಟ್ಟುಗೊಳಿಸಿ ಜಿವಬೇಧರಿಕೆ
ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ 279, 338
ಐ.ಪಿ.ಸಿ. ಮತ್ತು ಕಲಂ.187 ಐ.ಎಮ್.ವ್ಹಿ ಆಕ್ಟ ;- ದಿನಾಂಕ:21-04-2017 ರಂದು 11:15 ಎ.ಎಮ್.ಕ್ಕೆ ಫಿಯರ್ಾದಿ ಶ್ರೀ ಬಾಪುಗೌಡ ತಂದೆ ಭೀಮನಗೌಡ ಹೊಸಮನಿ ವಯ: 52 ವರ್ಷ ಜಾ: ಲಿಂಗಾಯತ ಉ: ದಾಬಾದಲ್ಲಿ ಕೂಲಿ ಕೆಲಸ ಸಾ:
ನೀರಲಗಿ ತಾ:ಸಿಂದಗಿ ಹಾ:ವ:ಸುರಪೂರ ಇವರು ಠಾಣೆಗೆ ಬಂದು ಒಂದು ಫಿಯರ್ಾದಿ ನೀಡಿದ್ದು ಏನಂದರೆ, ನಮ್ಮ
ಪರಿಚಯದ ರಸೂಲಸಾಬ ತಂದೆ ಖಾದರಸಾಬ ಕಕ್ಕೇರಿ ಸಾ: ಪೀರಾಪೂರ ತಾ: ಮುದ್ದೇಬಿಹಾಳ ಇವರು ಸುರಪೂರದ
ಬೈಪಾಸ ರೋಡಿನಲ್ಲಿ ಎ.ಪಿ.ಎಮ್.ಸಿ. ಹತ್ತಿರ ಒಂದು ದಾಬಾ ಇಟ್ಟಿದ್ದು ಅದರಲ್ಲಿ ಕೂಲಿ ಕೆಲಸ ಮಾಡಲು
ಬಂದಿರುತ್ತೇನೆ. ನಮ್ಮ ಮಾಲಿಕರಾದ ರಸೂಲಸಾಬ ತಂದೆ ಖಾದರಸಾಬ ಕಕ್ಕೇರಿ ಈತನು ದಿನಾಲು
ಮುಂಜಾನೆ ನಮಾಜ ಮಾಡಲು ಹೋಗುತ್ತಾರೆ. ಅದರಂತೆ
ಇಂದು ದಿನಾಂಕ: 21-04-2017 ರಂದು
ಮುಂಜಾನೆ 5:45 ಗಂಟೆ ಸುಮಾರಿಗೆ ಎದ್ದು ನಮಾಜು ಮಾಡಲು ಹೋದನು. ನಂತರ ನಮಗೆ
ಸುದ್ದಿ ತಿಳಿದಿದ್ದೇನಂದರೆ ನಮಾಜಿಗೆ ಹೋಗುವಾಗ ವಾಸವಿ ಪೆಟ್ರೋಲ ಬಂಕ ಮುಂದೆ 6:00 ಗಂಟೆಗೆ ಆತನ ಎದುರಿನಿಂದ ಒಂದು ಟಾಟಾ ಎಸಿಇ. ಮೆಗಾ
ವಾಹನವು ಡಿಕ್ಕಿಪಡಿಸಿ ಓಡಿ ಹೋಗಿದ್ದು ರಸೂಲಸಾಬನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ
ಅಂತಾ ವಿಷಯ ತಿಳಿದು ನಾನು ಮತ್ತು ವಿ.ಕೆ.ಜಿ. ವೈನ್ ಶಾಫ್ ಮ್ಯಾನೇಜರ ಜನರ್ೇಶ ಇಬ್ಬರೂ ಕೂಡಿ
ನೋಡಲಾಗಿ ವಾಸವಿ ಪೆಟ್ರೋಲ ಬಂಕ ಮುಂದೆ ರಸ್ತೆಯ ಮೇಲೆ ರಸೂಲ ಸಾಬನ ಮೊಟಾರ ಸೈಕಲ ಬಿದ್ದಿತ್ತು.
ಅಲ್ಲಿ ಪೆಟ್ರೋಲ ಬಂಕನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ವಿಚಾರಿಸಲಾಗಿ ಆತನು ತಿಳಿಸಿದ್ದೇನಂದರೆ
ರಸೂಲ ಸಾಬನು ದಾಬಾದ ಕಡೆಯಿಂದ ಬರುವಾಗ ಕುಂಬಾರ
ಪೇಟ ಕ್ರಾಸ ಕಡೆಯಿಂದ ಒಂದು ಟಾಟಾ ಎಸಿಇ ವಾಹನ ನಂ. ಕೆ.ಎ.33-ಎ-6845
ನೇದ್ದರ ಚಾಲಕನು ವಾಹನವನ್ನು ಅತೀ ವೇಗ ಮತ್ತು
ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೊಟಾರ ಸೈಕಲ್ ಸವಾರನಿಗೆ ಬಲವಾಗಿ ಡಿಕ್ಕಿ
ಪಡಿಸಿದ್ದರಿಂದ ಮೊಟಾರ ಸೈಕಲ ಸಮೇತ ಕೆಳಗೆ ಬಿದ್ದು ಆತನಿಗೆ ತಲೆಯ ಹಿಂದೆ ಭಾರೀ ರಕ್ತಗಾಯವಾಗಿದೆ.
ಮತ್ತು ಬಲಗಾಲ ಪಾದದ ಹತ್ತಿರ ಭಾರೀ
ರಕ್ತಗಾಯವಾಗಿದೆ. ಆತನ್ನು ಖಾಸಗೀ ವಾಹನದಲ್ಲಿ
ಸರಕಾರಿ ಆಸ್ಪತ್ರೆಗೆ ಸೇರಿಸಲು
ಕಳಿಸಿರುತ್ತೇವೆ . ಅಂತಾ ತಿಳಿಸಿದನು. ಆಗ
ನಾವು ಸರಕಾರಿ ಆಸ್ಪತ್ರೆಗೆ ಹೋಗಿ
ನೋಡಲಾಗಿ ರಸೂಲಸಾಬನಿಗೆ ಹೆಚ್ಚಿನ ಉಪಚಾರಕ್ಕಾಗಿ
ಕಲಬುಗರ್ಿಗೆ ಕಳಿಸಿರುವುದಾಗಿ ತಿಳಿಯಿತು.
ರಸೂಲ ಸಾಬನ ಮೊಟಾರ ಸೈಕಲ ನಂ. ಕೆ.ಎ.28-ಇಎಮ್.1737 ಇದ್ದು ಅದು ಸ್ಥಳದಲ್ಲೇ ಇರುತ್ತದೆ. ರಸೂಲ ಸಾಭನಿಗೆ ಡಿಕಿ
ಪಡಿಸಿ ವಾಹನ ಚಾಲಕನ ಹೆಸರು ನಾಗರಾಜ ತಂದೆ ಶರಣಪ್ಪ ಚಿಂತಿ ಸಾ: ಮಂಡಗಳ್ಳಿ ಅಂತಾ ಗೊತ್ತಾಗಿದೆ.
ಇಂದು ದಿನಾಂಕ: 21-04-2017 ರಂದು ಮುಂಜಾನೆ 6:00 ಗಂಟೆಗೆ ತನ್ನ ಮೊಟಾರ ಸೈಕಲ್ ನಂ ಕೆ.ಎ.28-ಇಎಮ್.1737 ನೇದ್ದರ ಮೇಲೆ ಹೊರಟ ರಸೂಲ ಸಾಬನಿಗೆ ಎದುರಿನಿಂದ ಟಾಟಾ ಎಸಿಇ
ವಾಹನ ಚಾಲಕನು ತನ್ನ ವಾಹನ ನಂ. ಕೆ.ಎ.33-ಎ-6845
ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರೀ
ಗಾಯಪಡಿಸಿ ವಾಹನ ಸಮೇತ ಓಡಿ ಹೋಗಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ
ನಂ.111/2017 ಕಲಂ.279, 338 ಐ.ಪಿ.ಸಿ. ಮತ್ತು ಕಲಂ.187 ಐ.ಎಮ್.ವ್ಹಿ.ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ
ಕೈಗೊಂಡೆನು.