ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-10-2020
ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 21-10-2020 ರಂದು ಸಂಗಮ ಮಾಂಜ್ರಾ ನದಿಯ ಹಳೆಯ ಸಣ್ಣ ಬ್ರೀಡ್ಜ್ ಒತ್ತಿನ ನೀರಿನಲ್ಲಿ ಒಬ್ಬ ಅಪರಿಚಿತ ಗಂಡು ವ್ಯಕಿಯ ಶವ ತೇಲಿದೆ ಅಂತ ಫಿರ್ಯಾದಿ ಶಾಲಿವಾನ ತಂದೆ ಮಲ್ಲಿಕಾರ್ಜುನ ಪಾಟೀಲ ಸಾ: ಸಂಗಮ ರವರು ಸುದ್ದಿ ತಿಳಿದು ತನ್ನ ಜೊತೆ ಶಿವಕುಮಾರ ತಂದೆ ಝೇರೆಪ್ಪಾ ಮೇತ್ರೆ ಇಬ್ಬರೂ ಕೂಡಿಕೊಂಡು ಸಂಗಮ ಮಾಂಜ್ರಾ ನದಿಯ ಹಳೆಯ ಸಣ್ಣ ಬ್ರಿಡ್ಜನ ಹತ್ತಿರ ಬಂದು ನದಿಯ ಒತ್ತಿನ ನೀರಿನಲ್ಲಿ ನೋಡಲು ಒಬ್ಬ ಗಂಡು ವ್ಯಕ್ತಿಯ ಶವ ಬೊರಲಾಗಿ ಬಿದ್ದಿದ್ದು ಕಂಡು ಆ ವ್ಯಕ್ತಿಯ ಗುರುತಿನ ಸಲುವಾಗಿ ತಮ್ಮೂರ ಮಲ್ಲಿಕಾರ್ಜುನ ಮೇತ್ರೆ, ಮಹೇಶ ಮೇತ್ರೆ ಹಾಗು ಧನರಾಜ ಗೊಖಲೆ ರವರ ಸಹಾಯದಿಂದ ಶವವನ್ನು ನೀರಿನಿಂದ ನದಿಯ ದಡಕ್ಕೆ ತೆಗೆದು ನೋಡಲು ಸದರಿ ಮೃತ ದೇಹವು ಯಾರದೆಂಬುದರ ಬಗ್ಗೆ ಗೊತ್ತಾಗಿರುವುದಿಲ್ಲ, ಮೃತ ವ್ಯಕ್ತಿಯೂ ಅಂದಾಜು 35 ರಿಂದ 40 ವರ್ಷ ವಯಸ್ಸಿನವನಿದ್ದು ಆತನ ಮೈಮೇಲೆ ಒಂದು ಬಿಳಿ ಕಂದು ಗೆರೆಯುಳ್ಳ ಫೂಲ್ ಶರ್ಟ, ಕಪ್ಪು ಬಣ್ಣದ ಪ್ಯಾಂಟ, ಮೆಹಂದಿ ಬಣ್ಣದ ರೆಡಿಮೆಡ ಅಂಡರ ವಿಯರ್ ಮತ್ತು ಕೊರಳಿನಲ್ಲಿ ಬಿಳಿ ದಸ್ತಿ ಹಾಗು ಎಡಕೈಯಲ್ಲಿ ಒಂದು ಟೈಟಾನ್ ಗಡಿಯಾರ ಇರುತ್ತದೆ, ಈ ಮೃತ ವ್ಯಕ್ತಿ ಯಾರೆಂಬುದು ಗುರುತಿಸಲು ರಸ್ತೆಗೆ ಹೋಗಿ ಬರುವ ಜನರನ್ನು ಅಕ್ಕ-ಪಕ್ಕದ ಗ್ರಾಮ ಜನರಿಗೆ ಶವ ತೋರಿಸಿದ್ದು ಮೃತನು ಯಾರೆಂಬುದು ತಿಳಿದು ಬಂದಿರುವುದಿಲ್ಲಾ ಹಾಗು ಮೃತನ ಎರಡು ತುಟಿಗಳು, ಮೂಗಿಗೆ, ಎರಡು ಕಣ್ಣಿನ ರೆಪ್ಪೆ ಹಾಗು ಬಲಕ್ಕೆ ಮುಂಗೈ ಹತ್ತಿರ ಜಲಚರ ಜೀವಿಗಳು ತಿಂದು ಗಾಯಗಳಾಗಿರುತ್ತವೆ, ದಿನಾಂಕ 20-10-2020 ರಂದು 0600 ಗಂಟೆಯಿಂದ 2000 ಗಂಟೆಯ ಮಧ್ಯದ ಅವಧಿಯಲ್ಲಿ ಸದರಿ ಅಪರಿಚಿತ ವ್ಯಕ್ತಿಯೂ ಎಲ್ಲಿಯೋ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದ್ದರಿಂದ ನೀರಿನ ರಭಸದಲ್ಲಿ ಹರಿದುಕೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟ ಈ ಶವವು ಸಂಗಮ ಗ್ರಾಮದ ಮಾಂಜ್ರಾ ನದಿಯ ಹಳೆಯ ಸಣ್ಣ ಬ್ರಿಡ್ಜನ ಮೂರನೆ ಕಮಾನ ಹತ್ತಿರದ ಬತ್ತಿನ ನೀರಿನಲ್ಲಿ ಮುಳ್ಳಿನ ಜಾಲಿಗೆ ಸಿಲುಕಿದ್ದು ಬೋರಲಾಗಿ ಇರುತ್ತದೆ, ಸದರಿ ಅಪರಿಚಿತ ಮೃತ ವ್ಯಕ್ತಿಯೂ ಆಕಸ್ಮಿಕವಾಗಿ ಮಾಂಜ್ರಾ ನದಿಯ ನೀರಿನಲ್ಲಿ ಮುಳುಗಿ ಸತ್ತಂತೆ ಕಂಡು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 158/2020, ಕಲಂ. 78 (1) (ಎ) (6) ಕೆ.ಪಿ ಕಾಯ್ದೆ :-
ದಿನಾಂಕ 21-10-2020 ರಂದು ಬೀದರನ ಹಕ್ ಕಾಲೋನಿಯಲ್ಲಿ ಐ.ಪಿ.ಎಲ್ ಮೇಲೆ ಕ್ರಿಕೇಟ ಬೆಟ್ಟಿಂಗ ನಡೆಯುತ್ತಿದ್ದ ಬಗ್ಗೆ ಮಂಜನಗೌಡ ಪಾಟೀಲ್ ಪಿಎಸ್.ಐ (ಕಾ.ಸು-1) ಗಾಂಧಿಗಂಜ ಪೊಲೀಸ ಠಾಣೆ ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜಾಸ್ಮೀನ ಕಾಲೇಜ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ ನವೀನ ತಂದೆ ಮಾಣಿಕ ಭಾವಿದೊಡ್ಡಿ ವಯ: 29 ವರ್ಷ, ಜಾತಿ: ಎಸ್.ಸಿ ಹೋಲೆಯ, ಸಾ: ಚಿದ್ರಿ ಬೀದರ ಇತನು ಕ್ರಿಕೇಟ ಬೆಟ್ಟಿಂಗ ಆಡುತ್ತಿದ್ದ ಬಗ್ಗೆ ನೋಡಿ ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ವಿಚಾರಿಸಲು ಓಂಕಾರ ಸಾ: ಭಾಲ್ಕಿ ಈತನು ಕ್ರಿಕೇಟ ಬೆಟ್ಟಿಂಗ್ ನಡೆಸುತ್ತಿದ್ದು, ನಾನು ಜನರಿಂದ ಬೆಟಿಂಗ್ ಹಣ ಪಡೆದು ಅವರಿಗೆ ಕೊಟ್ಟರೆ 10% ರಷ್ಟು ಕಮೀಷನ ಕೊಡುತ್ತಿದ್ದರಿಂದ ಓಂಕಾರನ ಸೂಚನೆ ಮೇರೆಗೆ ನಾನು ಸಾರ್ವಜನಿಕರಿಂದ ಐ.ಪಿ.ಎಲ್ ಕ್ರಿಕೇಟ ಮ್ಯಾಚ ಮೇಲೆ ಕ್ರಿಕೇಟ ಬೆಟ್ಟಿಂಗ ಹಣ ಹಚ್ಚಿಕೊಂಡು ಕ್ರಿಕೇಟ ಬೆಟ್ಟಿಂಗ ಜೂಜಾಟ ಆಡಿಸಿ ಬೆಟ್ಟಿಂಗ ಹಣ ಓಂಕಾರನಿಗೆ ಕೊಡುತ್ತೇನೆ ಅಂತ ತಿಳಿಸಿರುತ್ತಾನೆ, ಸದರಿ ಆರೋಪಿತನಿಂದ ಕ್ರಿಕೇಟ್ ಬೆಟ್ಟಿಂಗ್ ಜೂಜಾಟಕ್ಕೆ ತೊಡಿಗಿಸಿದ 11,500/- ರೂ., ಒಂದು ಲಾವಾ ಕಂಪನಿಯ ಕೀ ಪ್ಯಾಡ ಮೊಬೈಲ್, ಒಂದು ಪೇನ ಮತ್ತು ಒಂದು ನೋಟ ಬುಕ್ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 68/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 21-10-2020 ರಂದು ಬಗದಲ ಗ್ರಾಮದ ಲಕ್ಷ್ಮೀ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಹಣ ಪಡೆದು ಚೀಟಿಯಲ್ಲಿ ಮಟಕಾ ನಂಬರ ಬರೆದು ಕೊಡುತ್ತಿದ್ದಾರೆಂದು ಮಹೇಬೂಬ ಅಲಿ ಪಿಎಸ್ಐ (ಅ.ವಿ) ಬಗದಲ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಗದಲ ಗ್ರಾಮದ ಲಕ್ಷ್ಮೀ ಗುಡಿಯ ಹತ್ತಿರ ಹೋಗಿ ಮರೆಯಾಗಿ ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಸಂಗಯ್ಯಾ ತಂದೆ ಪರಮೇಶ್ವರ ಸ್ವಾಮಿ ವಯ: 29 ವರ್ಷ, ಜಾತಿ: ಸ್ವಾಮಿ, ಸಾ: ಬಗದಲ ಹಾಗೂ ಇನ್ನೂ 3 ಜನ ಇವರೆಲ್ಲರೂ ಜನರಿಂದ ಹಣ ಪಡೆದು ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಓಡುತ್ತಾ ಹೋಗಿ ಏಕ ಕಾಲಕ್ಕೆ ದಾಳಿ ಮಾಡಿದಾಗ ಜನರು ಓಡಿ ಹೊಗಿರುತ್ತಾರೆ ಮತ್ತು 4 ಜನ ಆರೋಪಿತರಲ್ಲಿ ಒಬ್ಬ ಓಡಿ ಹೋಗಿರುತ್ತಾನೆ, ನಂತರ ಸದರಿ ಆರೋಪಿತರಿಗೆ ಮಟ್ಕಾ ಚೀಟ ಬರೆದುಕೊಳ್ಳಲು ಯಾವುದಾದರೂ ಪರವಾನಿಗೆ ಇದೆಯಾ ಹೇಗೆ ಅಂತ ವಿಚಾರಿಸಿದಾಗ ಸದರಿಯವರು ಯಾವುದೇ ಪರವಾನಿಗೆ ಇರುವುದಿಲ್ಲಾ ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ತಪ್ಪೊಪ್ಪಿಕೊಂಡಿರುತ್ತಾರೆ, ನಂತರ ಸದರಿ ಆರೋಪಿತರಿಂದ 1800/- ರೂಪಾಯಿ ನಗದು ಹಣ, 3 ಮಟ್ಕಾ ಚೀಟಿ ಹಾಗೂ 3 ಬಾಲ್ ಪೇನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 72/2020, ಕಲಂ. 379 ಐಪಿಸಿ :-
ಫಿರ್ಯಾದಿ ಮಹ್ಮದ ನಜೀರ ತಂದೆ ಮಹ್ಮದ ನಿಸಾರ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಹೈದರ ಕಾಲೋನಿ ಚಿದ್ರಿ ರೋಡ್ ಬೀದರ ರವರು ಬೀದರ ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ಬೆಂಗಳೂರು ಬೇಕರಿ ಮುಂದೆ ತನ್ನ ಹಿರೊ ಸ್ಪ್ಲೇಂಡರ್ ದ್ವಿಚಕ್ರ ವಾಹನ ನಂ. ಕೆ.ಎ-38/ಎಸ್-3390, ಅ.ಕಿ ಅ.ಕಿ 45,000/- ರೂ. ನೇದನ್ನು ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 12-10-2020 ರಂದು 1900 ಗಂಟೆಯಿಂದ 1930 ಗಂಟೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 91/2020, ಕಲಂ. 457, 380 ಐಪಿಸಿ :-
ಫಿರ್ಯಾದಿ ಸೂರ್ಯನಾಥ ತಂದೆ ಕಾಳಪ್ಪ ಠಾಕೂರ ವಯ: 30 ವರ್ಷ, ಜಾತಿ: ಎಸ್ಸಿ ಹರಿಜನ, ಸಾ: ರೇಕುಳಗಿ, ತಾ: ಜಿ: ಬೀದರ ರವರು ತಮ್ಮ ಹೊಲದಲ್ಲಿದ್ದ ದುರ್ಗಮ್ಮಾ ದೇವಿಯ ದೇವಸ್ಥಾನದಲ್ಲಿ ದಸರಾ ಹಬ್ಬ ಬರುತ್ತಿದ್ದರಿಂದ ವಿಶೇಷ ಪುಜೆ ಕಾರ್ಯಕ್ರಮಗಳನ್ನು ಮಾಡಿದ್ದು ಹಲವಾರು ಜನ ಭಕ್ತರು ಸಹ ಬಂದಿದ್ದು, ಮಂದಿರದಿಂದ ಎಲ್ಲಾ ಭಕ್ತರು ಹೋದ ನಂತರ ಫಿರ್ಯಾದಿಯು 2130 ಗಂಟೆ ಸುಮಾರಿಗೆ ದೇವಸ್ಥಾನದ ಬೀಗ ಹಾಕಿಕೊಂಡು ಮನೆಗೆ ಹೋಗಿ ಮರುದಿನ ದಿನಾಂಕ 18-10-2020 ರಂದು 0600 ಗಂಟೆಗೆ ಪುಜೆ ಮಾಡಲು ದೇವಸ್ಥಾನಕ್ಕೆ ಬಂದು ನೋಡಲಾಗಿ ದೇವಸ್ಥಾನದ ಬಾಗಿಲ ಬೀಗ ಮುರಿದಿತ್ತು, ಫಿರ್ಯಾದಿಯು ಗಾಬರಿಗೊಂಡು ದೇವಸ್ಥಾನದ ಒಳಗೆ ಹೋಗಿ ನೋಡಲು ಯಾರೋ ಅಪರಿಚಿತ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೇವರ ಮುಂದೆ ಭಕ್ತರು ಇಡುತ್ತಿದ್ದ ಕಾಣಿಕೆ ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ದೇವರ ಮುಂದೆ ಭಕ್ತರು ಇಟ್ಟಿದ್ದ ಕಾಣಿಕೆ ಹಣ ಅಂದಾಜು 4000/- ರೂ. ದಿಂದ 4500/- ರೂಪಾಯಿ ದಷ್ಟು ಹಣ ಇದ್ದಿರಬಹುದು, ಅವುಗಳನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 17-10-2020 ರ ರಾತ್ರಿ ದೇವಸ್ಥಾನದ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.