Police Bhavan Kalaburagi

Police Bhavan Kalaburagi

Monday, March 27, 2017

BIDAR DISTRICT DAILY CRIME UPDATE 27-03-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-03-2017

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 06/2017, PÀ®A. 174 ¹.Dgï.¦.¹ :-
ದಿನಾಂಕ 26-03-2017 ರಂದು ಫಿರ್ಯಾದಿ ಸುಭಾಷ ತಂದೆ ಜಗನಾಥ ಚಿದ್ರೆ ವಯ: 35 ವರ್ಷ, ಜಾತಿ: ಕುರುಬ, ಸಾ: ಮಳಚಾಪೂರ ರವರ ತಾಯಿ ಕಮಳಮ್ಮಾ ಗಂಡ ಜಗನ್ನಾಥ ವಯ: 60 ವರ್ಷ, ಜಾತಿ: ಕುರುಬ, ಸಾ: ಮಳಚಾಪೂರ ಈಕೆಯು ರೈತಳಾಗಿದ್ದು, ಅವಳಿಗೆ ತಮ್ಮ ಗ್ರಾಮದ ಶಿವಾರದಲ್ಲಿ ಸರ್ವೆ ನಂ. 87 ರಲ್ಲಿ 2 ಎಕ್ಕರೆ 13 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನ ಮೇಲೆ ಕಮಳಮ್ಮಾ ಈಕೆಯು ಪಿ.ಕೆ.ಪಿ.ಎಸ್ ಬ್ಯಾಂಕ ಧನ್ನೂರಾದಿಂದ 1 ಲಕ್ಷ ರೂಪಾಯಿ ಸಾಲ ತೆಗೆದಿದ್ದು, 5-6 ವರ್ಷಗಳಿಂದ ವರ್ಷದಿಂದ ಸರಿಯಾಗಿ ಮಳೆ-ಬೆಳೆಯಾಗದೇ ಇರುವುದ್ದರಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ತಾಯಿ ಬಾವಿಯಲ್ಲಿ ಬಿದ್ದು ಮೃತಪಟ್ಟಿತ್ತಾಳೆಂದು ನೀಡಿದ ಫಿರ್ಯಾದಿಯ ಮೌಖಿಕ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 49/2017, ಕಲಂ. 457, 380 ಐಪಿಸಿ :-
ದಿನಾಂಕ 21-03-2017 ರಂದು ಫಿರ್ಯಾದಿ ಮೋಹನರಾವ ತಂದೆ ವೇಂಕಟರಾವ ಮಂಠಾಳಕರ ವಯ: 59 ವರ್ಷ, ಸಾ: ಬಸವೇಶ್ವರ ಚೌಕ ಹತ್ತಿರ ಭಾಲ್ಕಿ ರವರು ತನ್ನ ಕಣ್ಣಿನ ಉಪಚಾರ ಕುರಿತು ಮತ್ತು ತನ್ನ ಮಗಳಾದ ಶೀಲ್ಪಾ ಇವಳ ಮದುವೆ ಸಾಮಾನು ಖರಿದಿ ಮಾಡಲು ತನ್ನ ಹೆಂಡತಿಯಾದ ಸಂದ್ಯಾ ಮತ್ತು ಮಗಳಾದ ಶೀಲ್ಪಾ ರವರು ಕೂಡಿಕೊಂಡು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೊಗಿ ದಿನಾಂಕ 26-03-2017 ರಂದು ಬೆಂಗಳೂರಿನಿಂದ ಮರಳಿ ಮನೆಗೆ ಬಂದು ಮನೆಯ ಕಂಪೌಡ ಗೇಟ ಕೀಲಿ ತೆರೆದು ಒಳಗೆ ಹೊಗಿ ಮನೆಯ ಮುಖ್ಯದ್ವಾರದ ಬಾಗಿಲಿದ ಬೀಗ ಮುರಿದಿದ್ದು ಇತ್ತು ಮನೆಯ ಒಳಗೆ ಹೊಗಿ ನೊಡಲು ಮನೆಯಲ್ಲಿದ್ದ ವಿದ್ಯೂತ್ ದ್ವೀಪಗಳು ಚಾಲು ಇದ್ದವು ಮನೆಯಲ್ಲಿದ್ದ ಎರಡು ಅಲಮಾರಾ ತೆರೆದಿದ್ದು ಇದ್ದವು ಅದರಲ್ಲಿ ಇಟ್ಟಿದ ಬಟ್ಟೆ ಮತ್ತು ಇತರೆ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದವು ಒಂದು ಅಲಮಾರಾದಲ್ಲಿ ಇಟ್ಟಿದ ನಗದು ಹಣ 4,000/- ರೂ ಮತ್ತು ಮತ್ತೊಂದು ಅಲಮಾರಾದಲ್ಲಿ ಒಂದು ಬಂಗಾರದ ನೆಕ್ಲೇಸ 08 ಗ್ರಾಂ. ದಷ್ಟು ಅ.ಕಿ 20,000/- ಹೀಗೆ ಒಟ್ಟು 24,000/- ರೂ ದಷ್ಟು ನಗದು ಹಣ ಮತ್ತು ಬಂಗಾರದ ಆಭರಣ ದಿನಾಂಕ 21-03-2017 ರಿಂದ 26-03-2017 ರ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಬಾಗಿಲದ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥ÉưøÀ oÁuÉ UÀÄ£Éß £ÀA. 26/2017, PÀ®A. 279, 337, 338 L¦¹ :-
ದಿನಾಂಕ 26-03-2017 ರಂದು ಫಿರ್ಯಾದಿ ವೆಂಕಟ ತಂದೆ ಶಿವಕುಮಾರ ಹಡಪದ ವಯ 27 ವರ್ಷ, ಜಾತಿ: ಹಡಪದ, ಸಾ: ಕುರುಬಖೇಳಗಿ, ತಾ: ಭಾಲ್ಕಿ ರವರ ಸಹೋದರತ್ತೆಯಾದ ಮಂಜುಳಾ ಗಂಡ ಸುರೇಕಾಂತ ಸಾ: ಮೈಲೂರ ಹಾಗೂ ಇವರ ಮಗಳಾದ ನಾಗಜ್ಯೋತಿ ಇವರೊಂದಿಗೆ ಇನ್ನೊಂದು ಸಹೋದರತ್ತೆ ಶೇಶಿಕಲಾ ತಂದೆ ಮಹಾರುದ್ರಾಪ್ಪಾ ಹಡಪದ ರವರ ಯೋಗಕ್ಷೇಮ ವಿಚಾಸಿಕೊಂಡು ಮತ್ತು ಹೊಲ ನೋಡಿಕೊಂಡು ಬರಲು ಹೋಗಿ ತಾಳಮಡಗಿಯಿಂದ ಬೀದರಕ್ಕೆ ಫಿರ್ಯಾದಿ ಮತ್ತು ಸಹೋದರತ್ತೆ ಮಂಜುಳಾ ಮತ್ತು ಅವರ ಮಗಳಾದ ನಾಗಜ್ಯೋತಿ ಮೂವರು ಕುಡಿಕೊಂಡು ತಮ್ಮ ಸ್ಕೂಟಿ ಮೋಟರ ಸೈಕಲ್ ನಂ. ಕೆಎ-38/ಕ್ಯೂ4908 ನೇದರ ಮೇಲೆ ಸದರಿ ಮೋಟರ್ ಸೈಕಲ ಫಿರ್ಯಾದಿ ಚಲಾಯಿಸಿಕೊಂಡು ತಾಳಮಡಗಿ ಬಿಟ್ಟು ಬೀದರ ಕಡೆಗೆ ಬರುವಾಗ ಫಿರ್ಯಾದಿಯು ತನ್ನ ಸೈಡಿನಿಂದ ಬರುವಾಗ ಬೀದರ-ಮನ್ನಾಎಖ್ಖೆಳ್ಳಿ ರಸ್ತೆಯ ಹೊನ್ನಡ್ಡಿ ಕ್ರಾಸ್ ಬಸ ನಿಲ್ದಾಣದ ತಿರುವಿನಲ್ಲಿ ಬೀದರ ಕಡೆಯಿಂದ ಮೊಟರ ಸೈಕಲ ನಂ. ಕೆಎ-38/ಕ್ಯೂ-1874 ನೇದರ ಚಾಲಕನಾದ ಆರೋಪಿ ಪಿಂಕು @ ರಾಜಕುಮಾರ ತಂದೆ ಗಣಪತಿ ಮಡಿವಾಳ ವಯ: 30 ವರ್ಷ, ಸಾ: ಕಮಠಾಣಾ ತನ್ನ ಮೋಟರ ಸೈಕಲ ಮೇಲೆ ತನ್ನ ತಂಗಿಯನ್ನು ಕೂಡಿಸಿಕೊಂಡು ಅತೀವೇಗೆ ಹಾಗೂ ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಎಡಗಡೆ ಹೋಗುವುದು ಬಿಟ್ಟು ಬಲಗಡೆ ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದನು, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿಯ ಬಲಗಾಲ ಮುಂಗಾಲು ಮೇಲೆ ಕಟ್ ಆಗಿ ಭಾರಿ ರಕ್ತಗಾಯವಾಗಿದ್ದು, ಮತ್ತು ಮಂಜುಳಾ ಇವರಿಗೆ ಬಲಭುಜಕ್ಕೆ ಗುಪ್ತಗಾಯ, ಬಲ ಮೆಲಕಿಗೆ ರಕ್ತಗಾಯ, ಬಲಗಾಲ ಹಿಮ್ಮಡಿಗೆ ರಕ್ತಗಾಯವಾಗಿದ್ದು ಮತ್ತು ನಾಗಜ್ಯೋತಿ ಇವಳಿಗೆ ಬಲ ಹೆಬ್ಬಟಿಗೆ ರಕ್ತಗಾಯ, ಹಣೆಯ ಮೇಲೆ ರಕ್ತಗಾಯ, ಎಡಗಾಲ ಮೋಣಕಾಲ ಹತ್ತಿರ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿ ಮತ್ತು ಆರೊಪಿಯ ತಂಗಿಗು ಗಾಯಗಳಾಗಿರುತ್ತವೆ, ಯಾರೂ ದಾರಿ ಹೋಕರು 108 ಅಂಬುಲೆನ್ಸಗೆ ಕರೆ ಮಾಡಿದಾಗ ಗಾಯಗೊಂಡ ಎಲ್ಲರಿಗೂ ಅದರಲ್ಲಿ ಬೀದರ ಅಪೆಕ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 53/2017, ಕಲಂ. 279, 337, 338 ಐಪಿಸಿ :- 
ದಿನಾಂಕ 25-03-2017 ರಂದು ಫಿರ್ಯಾದಿ ರತ್ನಮ್ಮಾ ಗಂಡ ಭೀಮಶಾ ವಯ: 55 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಅತಿವಾಳ, ತಾ: ಹುಮನಾಬಾದ ರವರು ತನ್ನ ಗಂಡನೊಂದಿಗೆ ಮೊಟಾರ ಸೈಕಲ ಮೇಲೆ ಹಿಂದೆ ಕುಳಿತು  ಘೋಡಪಳ್ಳಿ ಗ್ರಾಮದಲ್ಲಿ ತಮ್ಮ ಸಂಬಂಧಿಕರರು ಮರಣ ಹೊಂದಿದರಿಂದ ಅಂತ್ಯ ಕ್ರಿಯೆ ಕುರಿತು ಹೋಗಿ ಅಂತ್ಯ ಕ್ರಿಯೆ ಮುಗಿಸಿಕೊಂಡು ಮರಳಿ ತಮ್ಮ ಮೊಟಾರ ಸೈಕಲ್ ಮೇಲೆ ನಮ್ಮ ಬರುವಾಗ ದಾರಿಯಲ್ಲಿ ಬೀದರ-ಹುಮನಾಬಾದ ರೋಡ ದೇವಣಿ ಕೇಟಲ್ ಫಾರಂ ಹತ್ತಿರ ಫಿರ್ಯಾದಿಯವರ ಗಂಡನಾದ ಆರೋಪಿ ಭೀಮಶಾ ತಂದೆ ಸೈದಪ್ಪಾ ವಯ: 58 ವರ್ಷ, ಜಾತಿ: ಎಸ್.ಸಿ ದಲಿತ,  ಸಾ: ಅತಿವಾಳ, ತಾ: ಹುಮನಾಬಾದ ರವರು ತನ್ನ ಮೊಟಾರ ಸೈಕಲನ್ನು ಅತಿವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿ ರೋಡಿನ ಬದಿಯಲ್ಲಿ ಸ್ಕಿಡ್ ಆಗಿ ಮೋಟಾರ ಸೈಕಲ್ ಮೇಲಿಂದ ಇಬ್ಬರೂ ಕೆಳಗೆ ಬಿದ್ದ ಪ್ರಯುಕ್ತ ಫಿರ್ಯಾದಿಯ ಬಲ ತಲೆಯಲ್ಲಿ ಭಾರಿ ರಕ್ತಗಾಯ, ಬಲಗಣ್ಣಿನ ಕಪಾಳದ ಹತ್ತಿರ ತರಚಿದ ಗಾಯ, ಎದೆಗೆ ಗುಪ್ತಗಾಯ ಮತ್ತು ಗಂಡ ಭೀಮಷಾ ಇವರಿಗೆ ಎಡಕಪಾಳದ ಕೆಳಗೆ ತರಚಿದ ಗಾಯ, ಎದೆಗೆ ಗುಪ್ತಗಾಯಗಳಾಗಿದ್ದು ಇರುತ್ತದೆ ಅಂತಾ ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Kalaburagi District Reported Crimes

ಅಪಘಾತ ಪ್ರಕರಣಗಳು :
ವಾಡಿ ಪೊಲೀಸ ಠಾಣೆ : ಶ್ರೀಮತಿ ಶಕುಂತಲಾ ಗಂಡ ಉಮೇಶ ಜೈಕರ ಸಾ: ಕೃಷ್ಟಾ ನಗರ ಕೂಸನೂರ ರೋಡ ಕಲಬುರಗಿ. ರವರ ಗಂಡ ಉಮೇಶ ತಂದೆ ರಾಮದಾಸ ಇವರು  ದಿನಾಂಕ:10/02/2017 ರಂದು ಬೆಳ್ಳಿಗ್ಗೆ ಯಾದಗಿರಗೆ ಹೋಗಿ ಬರುವದಾಗಿ ಹೇಳಿ ತನ್ನ ರಾಯಲ ಎನಪೀಲ್ಡ ಮೊ/ಸೈ ನಂ:ಕೆ.ಎ-32/ಇಎಮ್-5053 ನೇದ್ದರ ಮೇಲೆ ಹೊರಟು ಹೊದರು. ನಂತರ ರಾತ್ರಿ 8.30 ಗಂಟೆಯ ಸುಮಾರು ಯಾರೊ ಒಬ್ಬರೂ ನನ್ನ ಗಂಡನ ಮೊಬೈಲ ದಿಂದ  ನನಗೆ ಪೊನ ಮಾಡಿ ಈ ಮೊಬೈಲ ವ್ಯಕ್ತಿಯ ನಾಲವಾರ ಸ್ಷೇಷನ ಆಚೆಗೆ ಒಂದು ಪರ್ಲಾಂಗ ಅಂತರದ ಯಾದಗಿರ ಕಡೆಗೆ ಹೋಗುವ ರೋಡಿನ ಮೇಲೆ ಬಿದಿದ್ದು ಆತನ ಮುಖಕ್ಕೆ , ಕೈಕಾಲುಗಳಿಗೆ ತರಚಿದ ರಕ್ತಗಾಯವಾಗಿ ತಲೆಗೆ ರಕ್ತಗಾಯವಾಗಿ ಭಾರಿ ಒಳಪೆಟ್ಟಾಗಿದ್ದು  ಸದರಿಯವನಿಗೆ ಅಂಬುಲೇನ್ಸದಲ್ಲಿ ಹಾಕಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕಳಹಿಸಿಕೊಡಲಗಿದೆ ಅಂತಾ ಹೇಳಿದ್ದು ನಂತರ ನಾನು ಮತ್ತು ನನ್ನ ಅಳಿಯ ಬಸವವೇಶ್ವರ ಆಸ್ಪತ್ರೆಗೆ ಹೋಗಿ ದಾರಿ ಕಾಯುತ್ತಾ ಇದ್ದಾಗ ಅಂಬುಲೇನ್ಸ ಬಂದಿದ್ದು ಅದರಲ್ಲಿದ್ದ ನನ್ನ ಗಂಡನಿಗೆ ನೋಡಿ ಗುರ್ತಿಸಿ ಆತನಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಉಪಚರಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಗಂಡನು ಯಾದಗಿರ ದಿಂದ ಕಲಬುರಗಿಗೆ ಬರುವ ಕಾಲಕ್ಕೆ ಮೊ/ಸೈ ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಸ್ಕೀಡ ಆಗಿ ಬಿದ್ದಿದ್ದರ ಬಹುದು ಅಥವಾ ಯಾವುದೊ ವಾಹನ ಅಥವಾ  ಮೊ/ಸೈ ಡಿಕ್ಕಿ ಪಡಿಸಿ ಹೋಗಿರಬಹುದು ನನ್ನ ಗಂಡನಿಗೆ  ಪ್ರಜ್ಞೇ ಬಂದಾಗ ಅಥವಾ ಯಾರಾದರೂ ಘಟನೆ ನೋಡಿದವರು ಬಂದು ವಿಷಯ ತಿಳಿಸಿದಾಗ ನಿಜ ಸ್ಥೀತಿ ಗೊತ್ತಾಗುತ್ತದೆ  ಅಂತಾ ತಿಳಿಸಿದ್ದು ಗಾಯಾಳು ಉಮೇಶ ತಂದೆ ರಾಮದಾಸ ಜೈಕಾರ ಇತನು ಉಪಚಾರ ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಆಗಿ ಉಪಚಾರ ಪಡೆಯುತ್ತಿದ್ದು ಇರುತ್ತದೆ. ನಂತರ ನನ್ನ ಗಂಡ ಉಮೇಶ ಇತನು ಮೊ/ಸೈ ಮೇಲೆ ಯಾದಗಿರ ದಿಂದ ವಾಡಿ ಕಡೆಗೆ ಬರುವ ಕಾಲಕ್ಕೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊ/ಸೈ ಮೇಲಿಂದ ಬಿದ್ದು ತಲೆಗೆ ಭಾರಿ ಗಾಯವಾಗಿ ಅಲ್ಲದೇ ಮೈಕೈಗೆ ಅಲ್ಲಲ್ಲಿ ಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಯಲ್ಲಿ ದಾಖಲಾಗಿದ್ದು ದಿನಾಂಕ : 16/03/2017  ರಂದು ಕಲಬುರಿಯ ಯುನೈಟೆಡ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಅಲ್ಲಿಂದ ಜಿಲ್ಲಾ ಆಸ್ಪತ್ರೆ ಕಲಬುರಿಯಲ್ಲಿ ಸೇರಿಕೆ ಮಾಡಿ ಅಲ್ಲಿಯೂ ಸಹ ಉಪಚಾರ ಪಡಿಸಿಕೊಂಡು ದಿನಾಂಕ:22/03/2017 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಮನೆಗೆ ತಂದು ಮನೆಯಲ್ಲಿ ಉಪಚರಿಸುವ ಕಾಲಕ್ಕೆ ನಿನ್ನೆ ದಿನಾಂಕ;25/03/2017 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹುಸೇನ ಪಟೇಲ ತಂದೆ ಖಾದರ ಪಟೇಲ ಸಾ: ಮಾತೋಳ್ಳಿ ರವರು ದಿನಾಂಕ 25-03-2017 ರಂದು ನಾನು ಮತ್ತು ನನ್ನ ಕಾಕನ ಮಗನಾದ ಖಾದರಸಪಟೇಲ ತಂದೆ ಹಸನಪಟೇಲ ಇಬ್ಬರು ಕೂಡಿಕೊಂಡು ನಮ್ಮ ಮೋಟಾರ ಸೈಕಲ್ ನಂ  ಕೆಎ-32-.ಜೆ-2041 ನೇದ್ದರ ಮೇಲೆ ಕುಳಿತು ಕೊಂಡು ಖಾಸಗಿ ಕೇಲಸದ ನಿಮಿತ್ಯ ಅಫಜಲಪೂರಕ್ಕೆ ಹೋಗಿ ವಾಪಸ ಮಾತೋಳ್ಳಿ ಕಡೆಗೆ ಬರುತ್ತಿದ್ದೇವು ಮೋಟಾರ ಸೈಕಲ ಖಾದರಪಟೇಲ ನಡೆಸುತ್ತಿದ್ದನು ಸರಸಾಂಬಾ ರವರ ಹೊಲ ದಾಟಿ ಸ್ವಲ್ಪ ಮುಂದೆಕ್ಕೆ ಹೋಗುತ್ತಿದ್ದಾಗ ಹಿಂದೆ ಗಡೆಯಿಂದ ಒಂದು ಬಸ್ಸ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಒಮ್ಮೆಲೆ ಬೇಜವಾಬ್ದಾರಿಯಿಂದ ಓವರ ಟೇಕ್ ಮಾಡಲು ಹೋಗಿ ನಮ್ಮ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡೆಸಿದ್ದು ನಾನು ಮತ್ತು ಖಾದರಪಟೇಲ ಕೆಳಗೆ ಬಿದ್ದೇವು ಬಸ್ಸ ಚಾಲಕನು ತನ್ನ ಬಸ್ಸನ್ನು ನಿಲ್ಲಿಸದ ಹಾಗೆ ಓಡಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅದರ ನಂಬರ ನೋಡಲು ಕೆಎ-32-ಎಫ್-1728 ನೇದ್ದು ಇತ್ತು ನನಗೆ ತಲೆಗೆ ಒಳಪೆಟ್ಟು ಗಾಯವಾಗಿದ್ದು ಖಾದರ ಪಟೇಲನಿಗೆ ತಲೆಗೆ ಭಾರಿ ರಕ್ತ ಪೆಟ್ಟು ಗಾಯವಾಗಿದ್ದು ನಾನು ಹಿಂದುಗಡೆಯಿಂದ ಬರುತ್ತಿದ್ದ ಚಾಂದ ಪಟೇಲ ತಂದೆ ಸೈಯದ ಪಟೇಲ ಕೂಡಿಕೊಂಡು ಅಂಬುಲೇನ್ಸ ನಲ್ಲಿ ಹಾಕಿಕೊಂಡು ಸರಕಾರಿ ದವಾಖಾನೆ ಅಫಜಲಪೂರದಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆ ಕಲಬುರಗಿಗೆ ಒಯ್ಯೂತ್ತಿರುವಾಗ ಮಾರ್ಗಮಧ್ಯ 6 ಪಿ.ಎಮ್ ಕ್ಕೆ ಖಾದರ ಪಟೇಲ ನಿದನ ಹೊಂದಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಹಳ್ಳೆಪ್ಪ ತಂದೆ ಬೀಮಶ್ಯಾ ದಿವಂಟಗಿ ಸಾ: ಮಂದರವಾಡ ತಾ: ಜೇವರಗಿ ಇವರ ಹೊಲ ಸರ್ವೆ ನಂ 141 ಆಕಾರ 3 ಎಕರೆ ಇರುತ್ತದೆ. ನಮ್ಮ ಹೊಲವು ಬೀಮಾ ನದಿ ದಂಡೆಗೆ ಹತ್ತಿಕೊಂಡು ಇರುತ್ತದೆ. ಈಗ ಸುಮಾರು 6 ತಿಂಗಳಿಂದ ನಮ್ಮೂರ ಮಾಳಪ್ಪ ತಂದೆ ಬಸಪ್ಪ ಪೂಜಾರಿ, ಮುತ್ತಪ್ಪ ತಂದೆ ಶರಣಪ್ಪ ಪೂಜಾರಿ, ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ  ವಿಜಯಕುಮಾರ ತಂದೆ ಬಾಬುರಾಯ ಪೂಜಾರಿ ಇವರು ಕಳುವಿನಿಂದ ಟ್ರ್ಯಾಕ್ಟರಗಳ ಮೂಲಕ ರಾತ್ರಿ ವೇಳೆಯಲ್ಲಿ ಉಸುಕು ತೆಗೆದುಕೊಂಡು ಹೋಗುವದು ಮಾಡುತ್ತಿದ್ದರು ನಾನು ಮತ್ತು ನನ್ನ ಅಣ್ಣ ನಿಂಗಪ್ಪ ಇಬ್ಬರು ಅವರಿಗೆ ಇಲ್ಲಿಂದ ಉಸುಕು ತೆಗೆದುಕೊಂಡು ಹೋಗ ಬೇಡರಿ ಅಂತ ನಮ್ಮ ಹೊಲ ಹಾಳು ಆಗುತ್ತದೆ ಅಂತ ಸುಮಾರು ಸಲ ಹೇಳಿದರು ಹಾಗೆ ಮಾಡುತ್ತಿದ್ದರು ಅಲ್ಲದೇ ನಮ್ಮ ಸಂಗಡ ತಂಟೆ ತಕರಾರು ಕೂಡಾ ಮಾಡುತ್ತಾ ಬಂದಿರುತ್ತಾರೆ ಆದರೂ ನಾವು ಎಲ್ಲಿ ಆವರ ಸಂಗಡ ಜಗಳ ಮಾಡುವದು ಅಂತ ಸುಮ್ಮನಿದ್ದೇವು. ದಿನಾಂಕ: 24.03.2017 ರಂದು ರಾತ್ರಿ ನಾವು ಮನೆಯಲ್ಲಿದ್ದಾಗ ನನ್ನ ಅಣ್ಣ ನಿಂಗಪ್ಪ ಇತನು ನಮ್ಮ ಹೊಲದ ಕೆಳಗೆ ಇರುವ ಬೀಮಾ ನದಿಯಲ್ಲಿಂದ ನಮ್ಮೂರ ಮಾಳಪ್ಪ ತಂದೆ ಬಸಪ್ಪ ಪೂಜಾರಿ, ಮುತ್ತಪ್ಪ ತಂದೆ ಶರಣಪ್ಪ ಪೂಜಾರಿ, ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ  ವಿಜಯಕುಮಾರ ತಂದೆ ಬಾಬುರಾಯ ಪೂಜಾರಿ ಉಸುಕು ಟ್ರ್ಯಾಕ್ಟರಗಳಲ್ಲಿ ತುಂಬುತ್ತಿದ್ದಾರೆ ಅಂತ ನಾನು ಹೋಗಿ ಅವರಿಗೆ ತುಂಬುವದು ಬೇಡ ಅಂತ ಹೇಳುತ್ತೇನೆ ಅಂತ ಹೇಳಿ ಹೋದನು. ಅವನು ಹೋದ ಸ್ವಲ್ಪ ಹೊತ್ತಿನಲ್ಲಿ ನಾನು ಮತ್ತು ನನ್ನ ಹೆಂಡತಿ ಜಕ್ಕಮ್ಮ ಇಬರು ಕೂಡಿ ಅಲ್ಲಿಗೆ ಹೊದೆವು. ನಮ್ಮ ಹೊಲದ ಕೆಳಗೆ ನದಿಯ ಪಕ್ಕದಲ್ಲಿ ದಂಡೆಯಲ್ಲಿ ನಮ್ಮೂರ ಮಾಳಪ್ಪ ಪೂಜಾರಿ, ಮುತ್ತಪ್ಪ ಪೂಜಾರಿ, ಶರಣಪ್ಪ ಪೂಜಾರಿ ಹಾಗೂ ವಿಜಯಕುಮಾರ ಪೂಜಾರಿ ಇವರು ನನ್ನ ಅಣ್ಣ ನಿಂಗಪ್ಪನ ಸಂಗಡ ತಕರಾರು ಮಾಡುತ್ತಿದ್ದರು ನಾವು ಅವರಿಗೆ ಯಾಕೆ ಸುಮ್ಮನೆ ತಕರಾರು ಮಾಡುತ್ತಿದ್ದಿರಿ ಅಂತ ಅಂದಿದಕ್ಕೆ ಅವರು ರಂಡಿ ಮಗ ನಿಂಗ್ಯಾ ಮಾದಗ ಸೂಳ್ಯಾ ಮಗನದು ಬಹಳ ಆಗ್ಯಾದ ಊರಲ್ಲಿ ಯಾರು ನಮಗೆ ಕೇಳಲು ಇವನೆ ಬಹಳ ನಮ್ಮ ಸಂಗಡ ಗಂಟ ಬಿದ್ದಾನ ಅಂತ ಬೈದಾಗ ನನ್ನ ಅಣ್ಣ ನಿಂಗಪ್ಪನು ನಿವು ನನಗೆ ಬೈರಿ ಅದರೆ ಜಾತಿ ಎತ್ತಿ ಬೈದರೆ ಸುಮ್ಮನಿರುವದಿಲ್ಲಾ, ಅಂತ ಅಂದಿದಕ್ಕೆ ವಿಜಯಕುಮಾರನು ತನ್ನ ಕೈಯಲ್ಲಿದ್ದ ಸಲಕಿ ತುಂಬಿನಿಂದ ನನ್ನ ಅಣ್ಣನ ತಲೆ ಮೇಲೆ ಮತ್ತು ಬಲಗಾಲ ಮೊಳಕಾಲದ ಮೇಲೆ ಜೋರಾಗಿ ಹೋಡೆದಾಗ ಅವನು ಕೇಳಗೆ ಬಿದ್ದು ಬಿಟ್ಟನು ಆ ಉಳಿದ ಮೂರು ಜನರು ಅವನಿಗೆ ಬಿಡಬ್ಯಾಡ ಹೋಡಿರಿ ಅಂತ ಅನ್ನುತ್ತಿದ್ದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಅಣ್ಣನಿಗೆ ಹೊಡೆಯುವದನ್ನು ಬಿಡಿಸಿದೇನು ನಂತರ ಆ ನಾಲ್ಕು ರಂಡಿ ಮಗನೆ ನಿಂಗ್ಯಾ ಇವತ ಉಳಿದಿದ್ದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.