Police Bhavan Kalaburagi

Police Bhavan Kalaburagi

Monday, April 20, 2020

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ; 19/04/2020  ರಂದು ಮದ್ಯಾನ್ಹ ಮಾನ್ಯ ಜಿಲ್ಲಾಧಿಕಾರಿ ಕಲಬುರಗಿ ರವರು ಕಲಂ 144 ಸಿ.ಆರ್.ಪಿ.ಸಿ. ನಿಷೆದಾಜ್ಞೆ ಹೊರಡಿಸಿದ್ದು ಒತ್ತಿದ್ದರೂ ಕೂಡಾ ಜೇವರಗಿ ಪಟ್ಟಣದ ನೂರಂದೇಶ್ವರ ಶಾಲೆಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ. ಸಾಹೇಬ ಗ್ರಾಮಿಣ ಉಪ ವಿಬಾಗ ಕಲಬುರಗಿ, ಮಾನ್ಯ ಸಿಪಿಐ ಸಾಹೇಬ ಜೇವರಗಿ ರವರ ಮಾರ್ಗದರ್ಶನದಲ್ಲಿ  ಹೊರಟು ಬಾತ್ಮೀ ಬಂದ ಸ್ಥಳ ತಲುಪಿದ ನಂತರ ಬಾತ್ಮೀ ಸ್ಥಳದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಡೆದುಕೊಂಡು ನೂರಂದೇಶ್ವರ ಶಾಲೆಯ ಗೊಡೆಯ  ಮರೆಯಲ್ಲಿ ನಿಂತು ನೋಡಲಾಗಿ  ಸದರಿ ಶಾಲೆಯ ಹತ್ತಿರ  ಸಾರ್ವಜನಿಕ ಜಾಗದಲ್ಲಿ  ಕೇಲವು  ಜನರು ದುಂಡಾಗಿ ಕುಳಿತುಕೊಂಡು ಅಂದರ ಎಕ್ಕಾಗೆ 100 ರೂ ಅನ್ನುತ್ತಿದ್ದು ಇನ್ನೊಬ್ಬನು ಬಾಹರ ಪಂಜಾಗೆ 100 ರೂ ಅನ್ನುತ್ತಿದ್ದನು. ಇಸ್ಪೀಟ ಜೂಜಾಟ ಆಡುತ್ತೀರುವದು ನಾವು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ಕೇಳಿ ಅಂಗಶೊದ ಮಾಡಲಾಗಿ 1) ಹಾಜಿಮಲಂಗ ತಂದೆ ಮೌಲಾಲಿ  ಭೂಸನೂರ ಸಾ: ರಾಸಣಿ  ಹಾ:: ಜೊಪಡಪಟ್ಟಿ ಜೇವರಗಿ 2) ಶೌಕತಲಿ  ತಂದೆ ರುಕ್ಮೊದ್ದೀನ ಮುಲ್ಲಾ  ಸಾ:   ಚಿಕ್ಕ ಜೇವರಗಿ  3) ಮೈಹಿಬೂಬ ತಂದೆ ಕಾಸೀಮ ಸಾಬ ರಟಕಲ್  ಸಾ:  ವಿದ್ಯಾನಗರ  ಜೇವರಗಿ  ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ  1600/- ರೂ, ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ಪಡೆದು  ಕರೊನಾ ವೈರಸ ( covid-19)  ಹರಡದಂತೆ ತಡೆಗಟ್ಟಲು  ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಕಲಂ 144 ಸಿ.ಆರ್.ಪಿ.ಸಿ  ನಿಷೇದಾಜ್ಞೆ ಹೊರಡಿಸಿದ್ದು  ಗೊತ್ತಿದ್ದರೂ ಕೂಡಾ ಮೇಲ್ಕಂಡ ಮೂವರು  ಜೇವರಗಿ ಪಟ್ಟಣದ  ನೂರಂದೇಶ್ವರ  ಶಾಲೆಯ ಹತ್ತಿರ ಸಾರ್ವಜನಿಕ  ಸ್ತಳದಲ್ಲಿ  ದುಂಡಾಗಿ ಕುಳಿತುಕೊಂಡ ಸಾಮಾಜಿಕ  ಅಂತರ ಕಾಪಾಡದೆ  ಮತ್ತು  ತಮ್ಮ ತಮ್ಮ ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಕೈಗಳಿಗೆ ಹ್ಯಾಂಡ್ ಗಲೊಸ್  ಹಾಕಿಕೊಳ್ಳದೆ  ನಿರ್ಲಕ್ಷತನ ವಹಿಸಿ ಗುಂಪಾಗಿ ಕುಳಿತುಕೊಂಡು ಇಸ್ಪೇಟ್ ಜೂಜಾಟ  ಆಡಿದ್ದು ಅಲ್ಲದೆ  ಗುಂಪ್ಪಾಗಿ ಕುಳಿತುಕೊಂಡರೆ  ಕರೊನಾ ವೈರಸ ( covid-19)   ಪ್ರಾಣಕ್ಕೆ ಅಪಾಯಕಾರಿ  ರೋಗದ ಸೊಂಕು ಹರಡುವ ಸಂಭವ ಇದೆ ಎಂದು ಗೊತ್ತಿದ್ದರು ಕೂಡಾ  ಉದ್ದೇಶಪೂರ್ವಕವಾಗಿ  ಮಾನ್ಯ ಜಿಲ್ಲಾಧಿಕಾರಿಗಳ ಕಲಂ 144 ಸಿ.ಆರ್.ಪಿ.ಸಿ.  ನಿಷೇದಾಜ್ಞೆ ಆಧೇಶ ಲ್ಲಂಘನೆ ಮಾಡಿರುತ್ತಾರೆ. ಸದರಿ ಮೇಲ್ಕಂಡ  ಮೂವರ ವಿರುದ್ದ ಮುಂದಿನ ಕ್ರಮಕ್ಕಾಗಿ ಸೂಚಿಸಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೀನು ಮಾರಾಟ ಮಾಡುತ್ತಿದ್ದವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 19/04/2020  ರಂದು  ಕರೋನ ವೈರಸ ಹರಡದಂತೆ ತಡೆಗಟ್ಟುವ ಪ್ರಯುಕ್ತ ಮುಂಜಾಗೃತ ಕ್ರಮವಾಗಿ ಭಾರತ ಸರಕಾರ , ಭಾರತ ಲಾಕಡೌನ ಅದೇಶವಾಗಿ ಕರೋನಾ ವೈರಸ ತಡೆಗಟ್ಟಲು ಯಾರೋ ಹೊರಗಡೆ ತಿರುಗಾಡದಂತೆ ಮತ್ತು ಅಗತ್ಯ ವಸ್ತುಗಳು ಖರೀದಿ ಮತ್ತು ಮಾರಾಟ ಮಾಡುವ ಸಮಯದಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ  ಅದೇಶದಂತೆ  ಶಹಾಬಾದ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ  ವಿ ಪಿ ಚೌಕ ಕಡೆಗೆ ಹೋದಾಗ ದತ್ತ ಮಂದಿರ ಹತ್ತಿರ ಒಬ್ಬ ವ್ಯಕ್ತಿಯು  ರಸ್ತೆಯ ಬದಿಯಲ್ಲಿ ಕುಳಿತುಕೊಂಡು ಮೀನು ಮಾರಾಟ ಮಾಡುತ್ತಿದ್ದು ಅದನ್ನು ಖರೀದಿಸಲು ಸಾರ್ವಜನಿಕರ ಗುಂಪಾಗಿ ಸೇರಿಸಿದ್ದು ನೋಡಿ ಮೀನು ಮಾರಾಟ ಮಾಡುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ನಾರಯಣ ತಂದೆ ರಾಮು ಭೋಯಿ ಸಾ: ದತ್ತಾ ಮಂದಿರ ವಿ ಪಿ ಚೌಕ ಶಹಾಬಾದ ಅಂತಾ ತಿಳಿಸಿದನು ಸದರಿಯವನಿಗೆ  ಹಿಡಿದುಕೊಂಡು ಠಾಣೆಗೆ ತಂದಿದ್ದು ಸದರಿಯವನು ಕರೋನಾ ವೈರಾಣು ತಡೆಗಟ್ಟುವ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೆ ಮತ್ತು ಸಮಾಜಿಕ ಅಂತರ ಕಾಯ್ದು ಕೊಳ್ಳಲು ಯಾವುದೆ ವ್ಯವಸ್ಥೆ ಮಾಡದೆ ಅತೀವ ನಿರ್ಲಕ್ಷತನ ವಹಿಸಿ ಮೀನು ಮಾರಾಟ ಮಾಡುತ್ತಾ  ಜನರ ಗುಂಪು ಸೇರಿಸಿಕೊಂಡು ಕರೋನ ವೈರಾಣು ಒಬ್ಬರಿಂದ ಮತ್ತೋಬ್ಬರಿಗೆ ಹರಡಿ ಪ್ರಾಣಕ್ಕೆ ಹಾನಿ ತರುವಂತಹ ಸಂಭವ ಇರುವುದು ತಿಳಿದು ಸಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷತನ ವಹಿಸಿದ್ದರಿಂದ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 19/04/2020 ರಂದು ಶ್ರೀ  ಸಂಗಮೇಶ ಅಂಗಡಿ ಪಿ,ಎಸ್, ಜೇವರಗಿ ಪೋಲೀಸ್ ಠಾಣೆ ರವರು  ಕರೊನಾ ವೈರಸ ನಾಡಿನಾದ್ಯಾಂತ ಹಬ್ಬುತ್ತಿದ್ದು  ಹಿನ್ನೇಲೆಯಲ್ಲಿ ( covid-19)  ಕರೊನಾ ವೈರಸ ಕಲಬುರಗಿ ಜಿಲ್ಲೆಯಲ್ಲಿ  ಹರಡಂತೆ ಮುಂಜಾಗ್ರತೆಯ  ಬಗ್ಗೆ  ಎಲ್ಲಾ ಸರಕಾರಿ ಆಡಳಿತ ಮಂಡಳಿಯವರು  ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸಾರ್ವಜನಿಕರಲ್ಲಿ  ಜಾಗೃತ ಮೂಡಿಸುತ್ತಿದ್ದು ಇರುತ್ತದೆ. ಅಲ್ಲದೆ ಸರಕಾರವೇ ನಿಷೇದಾಜ್ಞೆ ಕೂಡಾ ಹೊರಡಿಸಿದ್ದು ಇರುತ್ತದೆ. ಅದರಂತೆ  ಎಲ್ಲಾ ಹಳ್ಳಿಗಳಲ್ಲಿ  ಸರಕಾರ ನಿಷೆದಾಜ್ಞೆ ಹೊರಡಿಸಿದೆ  ಯಾರು ಹೊರಗಡೆ ಓಡಾಡುವಂತಿಲ್ಲಾ ಮತ್ತು ಅಂಗಡಿ ಹೊಟೇಲ ತೆರೆದಿಡುವಂತಿಲ್ಲಾ ಮತ್ತು ಮಾಸ್ಕ ಹಾಗೂ  ಹ್ಯಾಂಡ್   ಗ್ಲೊಸ್   ಹಾಕಿಕೊಳ್ಳುವುದು ಮತ್ತು ಮನೆಯಲ್ಲಿ  ಇದ್ದು  ಸುರಕ್ಷತೆಯಿಂದ ಕಾಪಾಡಿಕೊಳ್ಳುವಂತೆ  ನಾವು ನೊಟೀಸ್ ಮತ್ತು  ದ್ವನಿ ವರ್ಧಕ ಮುಖಾಂತರ  ಮತ್ತು ಪತ್ರಿಕಾ  ಪ್ರಕಟಣೆ ಮುಖಾಂತರ ಜನರಲ್ಲಿ ಜಾಗೃತಿ ಸಹ ಮೂಡಿಸಿದ್ದು ಇರುತ್ತದೆ.  ದಿನಾಂಕ 19/04/2020 ರಂದು ನಾನು ಮದ್ಯಾನ್ಹ 12-00 ಗಂಟೆ ಸೂಮಾರಿಗೆ ನಾನು ಕಟ್ಟಿ ಸಂಗಾವಿ ಗ್ರಾಮಕ್ಕೆ ಕರೋನಾ ಸಾಂಕ್ರಾಮಿಕ ರೋಗ ಹರಡದಂತೆ ಸಾರ್ವಜನಿಕರಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕೂರಿತು ಜಾಗೃತಿ ಮೂಡಿಸಲು ಹೋದಾಗ covid-(19)  ಕರೊನಾ ವೈರಸ  ತಡೆಗಟ್ಟುವ  ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟು ಚೆಕ್ಕ ಮಾಡುತ್ತಾ ಜನರಿಗೆ ಹೊರಗಡೆ ಬರದಂತೆ ಹೇಳುತ್ತಾ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ  ಕಟ್ಟಿ ಸಂಗಾವಿ  ಗ್ರಾಮದಲ್ಲಿ  ಯಲ್ಲಾಲಿಂಗ ಮಠದ ಹತ್ತಿರ ಸಾರ್ವಜನಿಕ ಕಟ್ಟೆಯ ಮೇಲೆ ನಾಲ್ಕು ಜನರು  ಮುಖಕ್ಕೆ  ಮಾಸ್ಕ ಹಾಕಿಕೊಳ್ಳದೆ, ಮತ್ತು ಕೈಗಳಿಗೆ ಹ್ಯಾಂಡ ಗ್ಲೊಸ್ ಹಾಕಿಕೊಳ್ಳದೆ , ಸಾಮಾಜಿಕ ಅಂತರ ನಿರ್ವಹಣೆ ಮಾಡದೆ ಯಾವುದೇ ಮುಂಜಾಗ್ರತೆ ಕ್ರಮ ಕೈಕೊಳ್ಳದೆ  ಕೂಳಿತುಕೊಂಡಿದ್ದುನ್ನು ನೋಡಿ  ಅವರಿಗೆ ವಿಚಾರಿಸಲು ಅವರು ತಮ್ಮ  ಹೆಸರು 1) ಸಿದ್ದು ತಂದೆ ಜಾನಪ್ಪ ಕುಂಬಾರ 2) ಶಾಂತಕುಮರ ತಂದೆ ಮಲ್ಲಿಕಾರ್ಜುನ ಕುಂಬಾರ 3) ಸುನೀಲ ತಂದೆ ಮಲ್ಲಪ್ಪ ಯಳೂರ 4) ರೇಹೆಮಾನ ತಂದೆ ನಬಿ ಪಟೇಲ ಕಡಗೂರ ಸಾ/ ಎಲ್ಲರು ಕಟ್ಟಿ ಸಂಗಾವಿ ಜೇವರಗಿ   ಅಂತಾ ಹೇಳಿದ್ದು  ಸದರಿ ಮೇಲ್ಕಂಡ  ನಾಲ್ಕು ಜನರು ಕೂಡಿಕೊಂಡು ಗುಂಪ್ಪಾಗಿ   ಕಟ್ಟಿ ಸಂಗಾವಿ ಗ್ರಾಮದ   ಗ್ರಾಮದಲ್ಲಿ  ಯೆಲ್ಲಾಲಿಂಗ ಮಠದ ಹತ್ತಿರ  ಹತ್ತಿರ   ಹ್ಯಾಂಡ್ ಗ್ಲೊಸ್  ಮತ್ತು ಮಾಸ್ಕ ಹಾಕಿಕೊಳ್ಳದೆ  ಇರುವುದು ನೊಡಿ  ಅವರಿಗೆ  ( covid-19)  ಕರೊನಾ ವೈರಸ  ಹರಡುತ್ತಿದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಹೊರಗಡೆ ಓಡಾಡದಂತೆ ನಿಷೇದಾಜ್ಞೆ ಹೊರಡಿಸಿದ್ದು ಇರುತ್ತದೆ.  ( covid-19)  ಕರೊನಾ ವೈರಸ  ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮೀಕ  ರೋಗ  ಇರುತ್ತದೆ.  ಅದಕ್ಕೆ ಯಾವುದೆ ಮುಂಜಾಗ್ರತೆ ವಹಿಸದೆ ಗುಂಪ್ಪಾಗಿ ಕೂಡುವದು    ಸರಿ ಅಲ್ಲಾ  ಎಂದು ಹೇಳಿದಾಗ ಅವರು  ನಾವು ಹೇಳಿದಂತೆ ಮಾಡದೆ ನಿರ್ಲಕ್ಷತನ ವಹಿಸಿದ್ದು ಇರುತ್ತದೆ.  ಮತ್ತು ಅವರಿಗೆ ಈ ಮೊದಲು  ಮನವರಿಕೆ ಮಾಡಿದ್ದರು ಕೂಡಾ ಯಾವುದೆ  ಸರಕಾರದ  ಆಧೇಶ ಪಾಲನೆ ಮಾಡದೆ ಪದೆ ಪದೆ ಈ ರೀತಿ ಓಡಾಡುವುದು  ಕಂಡು ಬಂದಿರುತ್ತದೆ. ಕರೊನಾ ವೈರಸ ( covid-19)  ಹರಡದಂತೆ ತಡೆಗಟ್ಟಲು  ಸರಕಾರ ನಿಷೇದಾಜ್ಞೆ ಹೊರಡಿಸಿದ್ದು  ಗೊತ್ತಿದ್ದರೂ ಕೂಡಾ ತಮ್ಮ ತಮ್ಮ   ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಕೈಗಳಿಗೆ ಹ್ಯಾಂಡ್ ಗಲೊಸ್  ಹಾಕಿಕೊಳ್ಳದೆ  ನಿರ್ಲಕ್ಷತನ ವಹಿಸಿ ಸಾರ್ವಜನಿಕ ಸ್ಥಳದಲ್ಲಿ   ಗುಂಪಾಗಿ ಕೂಳಿತಿದ್ದು   ಇದ್ದರಿಂದ ಕರೊನಾ ವೈರಸ     ( covid-19)   ಪ್ರಾಣಕ್ಕೆ ಅಪಾಯಕಾರಿ  ರೋಗದ ಸೊಂಕು ಹರಡುವ ಸಂಭವ ಇದೆ ಎಂದು ಗೊತ್ತಿದ್ದರು ಕೂಡಾ  ಉದ್ದೇಶಪೂರ್ವಕವಾಗಿ  ತಮ್ಮ  ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಕೈಗಳಿಗೆ ಹ್ಯಾಂಡ್ ಗಲೊಸ್  ಹಾಕಿಕೊಳ್ಳದೆ  ಹಾಗೂ ಸಾಮಾಜಿಕ  ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷತನ ವಹಿಸಿ ಗ್ರಾಮದಲ್ಲಿ  ಗುಂಪ್ಪಾಗಿ ಕುಳಿತಿದ್ದು ಇರುತ್ತದೆ  ಕಾರಣ  ಅವರ  ವಿರುದ್ದ ಕಾನೂನು ಕ್ರಮ ಜರುಗಿಸಬವೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅವಿನಾಶ ತಂದೆ ಬಾಲಕೃಷ್ಣ ರಜಪೂತ ಸಾ: ಅಫಜಲಪೂರ ರವರ  ತಂದೆಯವರಾದ ಬಾಲಕೃಷ್ಣ ತಂದೆ ರಾಮಕೃಷ್ಣ ರಜಪೂತ ಇವರು ಪ್ರತಿದಿನ ರೇಣುಕಾ ಸಕ್ಕರೆ ಕಾರ್ಖಾನೆ ಹವಳಗಿಯಲ್ಲಿ ಸೇಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿದ್ದು ನಮ್ಮ ತಂದೆಯವರು ದಿನಾಂಕ:15/04/20 ರಂದು ಬೆಳಿಗ್ಗೆ ಕಾರ್ಖಾನೆಗೆ ಕೆಲಸಕ್ಕೆಂದು ಹೊಗುವದಕ್ಕೆ ತಯಾರಾದಾಗ ನಮ್ಮ ಮೋಟಾರ ಸೈಕಲ ಪಂಕ್ಷರ ಆಗಿದ್ದರಿಂದ ಬಲರಾಮಸಿಂಗ ತಂದೆ ಸಿತಾರಾಮ ರಜಪೂತರವರಿಗೆ ಕರೆದು ನಮ್ಮ ತಂದೆಯು ನನಗೆ ಸಕ್ಕರೆ ಕಾರ್ಖಾನೆಯವರಿಗೆ ಬಿಟ್ಟು ನೀನು ವಾಪಿಸ್ಸು ಬರುವಿಯಂತೆ ಮೋಟಾರ ಸಯಕಲ ತಗೆದುಕೊಂಡು ಬಾ ಅಂತ ಹೇಳಿದ್ದರಿಂದ ಬಲರಾಮಸಿಂಗನು ಮೋಟಾರ ಸೈಕಲ ನಂ ಕೆ,ಎ-32 ಈಕೆ-7326 ನೇದ್ದು ತಗೆದುಕೊಂಡು ಬಂದಿದ್ದರಿಂದ ನಮ್ಮ ತಂದೆ ಮತ್ತು ಬಲರಾಮಸಿಂಗ ಇಬ್ಬರು ಕೂಡಿ ಮೋಟಾರ ಸೈಕಲ ಮೇಲೆ ನಮ್ಮ ಮನೆಯಿಂದ ಹೋಗಿರುತ್ತಾರೆ ಹೊಗುವಾಗ ಬಲರಾಮಸಿಂಗನು ಮೋಟಾರ ಸೈಕಲನ್ನು ಚಲಾಯಿಸುತ್ತಿದ್ದನು ನಂತರ ನನ್ನ ಮೋಬೈಲಗೆ ಒಬ್ಬ ವ್ಯಕ್ತಿ ಪೊನ ಮಾಡಿ ನಾನು ನಿಮ್ಮ ತಂದೆ ಜೋತೆಯಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವವನಿರುತ್ತೆನೆ ನಿಮ್ಮ ತಂದೆಗೆ ಹಿಂಚಗೇರಾ ಗ್ರಾಮದ ಹತ್ತೀರ ಮುಖ್ಯ ಡಾಂಬರ ರೋಡಿನ ಮೇಲೆ ಅಪಘಾತವಾಗಿರುತ್ತದೆ ನಾವು 108 ವಾಹನಕ್ಕೆ ಕರೆಮಾಡಿದ್ದು ನಿಮ್ಮ ತಂದೆಗೆ ಅಫಜಲಪೂರ ಸರಕಾರಿ ಆಸ್ಪತ್ರೇಗೆ ಕರೆದುಕೊಂಡು ಬರುತ್ಥೇವೆ ನೀವು ಅಲ್ಲಿಗೆ ಬನ್ನಿ ಅಂತ ತಿಳಿಸಿದ್ದರಿಂದ ನಾನು ಮತ್ತು ನನ್ನ ತಾಯಿ ಇಬ್ಬರು ಆಸ್ಪತ್ರೇಗೆ ಹೋಗಿ ನೋಡಲಾಗಿ ನಮ್ಮ ತಂದೆಗೆ ಎಡತಲೆಗೆ ಹಾಗೂ ಮೂಗಿಗೆ ಎಡಕಿವಿಗೆ ರಕ್ತಗಾಯ ಮತ್ತು ತೆಲೆಗೆ ಭಾರಿ ಒಳಪೆಟ್ಟು ಆಗಿರುವದು ಕಂಡು ಬಂತು ನನ್ನ ತಂದೆ ಮಾತನಾಡುವ ಸ್ಥಿತಿಯಲ್ಲಿ ಇದ್ದಿರಲಿಲ್ಲ ಆಗ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಧನ್ವಂತರಿ ಆಸ್ಪತ್ರೇಗೆ ಸೇರಿಕೆಮಾಡಿರುತ್ತೆವೆ ಘಟನೆ ಬಗ್ಗೆ ತಿಳಿದುಕೊಳ್ಳಲಾಗಿ 6 ,ಎಮ್.ಸುಮಾರಿಗೆ ಜರುಗಿದ್ದು ಬಲರಾಮಸಿಂಗ ತಂದೆ ಸಿತಾರಾಮನು ಮೋಟಾರ ಸೈಕಲ ಅತಿ ವೇಗವಾಗಿ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ ಸ್ಕಿಡ ಆಗಿ ಬಿದ್ದಿರುತ್ತದೆ ಅಂತಾ ಗೊತ್ತಾಗಿರುತ್ತದೆ ಕಾರಣ ಮೋಟಾರ ಸೈಕಲನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಅಪಘಾತಪಡಿಸಿ ಮೋಟಾರ ಸೈಕಲ್ ಸ್ಥಳದಲ್ಲೆ ಬಿಟ್ಟು ಹೋದ ಬಲರಾಮಸಿಂಗ ತಂದೆ ಸೀತಾರಾಮ ರಜಪೂತ ಸಾ||ದೇವಣಗಾಂವ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

BIDAR DISTRICT DAILY CRIME UPDATE 20-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-04-2020

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 24/2020 ಕಲಂ 379 ಐಪಿಸಿ :-

ದಿನಾಂಕ 19-04-2020 ರಂದು 1130 ಗಂಟೆಗೆ ಶ್ರೀ ಶರಣಪ್ಪಾ ತಂದೆ ವೈಜಿನಾಥ ಜೊನ್ನಿಕೇರಿ ಸಾ;ಅಕ್ಕಮಹಾದೇವಿ ಕಾಲೋನಿ ಹಾರೂರಗೇರಿ ಬೀದರ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಇವರು ತಮ್ಮ ಸ್ಪ್ಲೆಂಟರ್ ದ್ವಿಚಕ್ರವಾಹನದ ಮೇಲೆ ದಿನಾಂಕ 09-03-2020 ರಂದು ಸಾಯಂಕಾಲ 1700 ಗಂಟೆಯ ಸುಮಾರಿಗೆ ಬೀದರ ನಗರಸಭೆ ಕಛೇರಿಗೆ ಹೋಗಿ   ದ್ವಿಚಕ್ರವಾಹನವನ್ನು ಕಛೇರಿಯ ಆವರಣದಲ್ಲಿರುವ ವಾಹನಗಳು ನಿಲ್ಲಿಸುವ ಸ್ಥಳದಲ್ಲಿ ದ್ವಿಚಕ್ರವಾಹನ ನಿಲ್ಲಿಸಿ ಕಛೇರಿಗೆ ಹೋಗಿ  ಮರಳಿ ಸಾಯಂಕಾಲ 1715 ಗಂಟೆಯ ಸುಮಾರಿಗೆ ಕಛೇರಿಯಿಂದ ಹೊರಗೆ ಬಂದು ನೋಡಲಾಗಿ,   ದ್ವಿಚಕ್ರವಾಹನ ಇರಲಿಲ್ಲಾ.   ದ್ವಿಚಕ್ರವಾಹನವನ್ನು ದಿನಾಂಕ 09-03-2020 ರಂದು 1700 ಗಂಟೆಯಿಂದ 1715 ಗಂಟೆಯ ಅವಧಿಯಲ್ಲಿ ಯಾರೂ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು  ಕಳವು ಅದ ದ್ವಿಚಕ್ರವಾಹನದ ವಿವರ ಈ ಕೆಳಗಿನಂತೆ ಇರುತ್ತದೆ. 1) ಹಿರೊ ಸ್ಪಲೆಂಡರ್ ಪ್ಲಸ್ ದ್ವಿಚಕ್ರವಾಹನ.ನಂ.ಕೆ.ಎ-38-ಯು-1758 2) ಚೆಸ್ಸಿ.ನಂ. ಎಮ್ಬಿಎಲ್ಎಚ್ಎ10ಸಿಜಿಜಿಹೆಚ್ಎಮ್24409 3) ಇಂಜಿನ್.ನಂ. ಹೆಚ್ಎ10ಇಆರ್ಜಿಎಚ್ಎಮ್25730 ಕಪ್ಪು ಬಣ್ಣದು ಇರುತ್ತದೆ ಅಂತಾ ದಿ: 19-04-2020 ರಂದು ಠಾಣೆಗೆ ಹಾಜರಾಗಿ ದೂರು ನಿಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ:19/04/2020 ರಂದು 10:00 ಗಂಟೆಗೆ ನಾನು ಸುನೀಲ್ಕುಮಾರ ಪಿ.ಎಸ್. (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ತ್ರೀಪೂರಾಂತ ಎಸ್.ಬಿ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಯನ್ನು ತಿಳಿದು ಬಂದ ಮೇರೆಗೆ  ಸಿಬ್ಬಂದಿ ಮತ್ತು ಪಂಚರೊಂದಿಗೆ ಬಸವಕಲ್ಯಾಣ ನಗರದ ತ್ರೀಪೂರಾಂತ ಎಸ್.ಬಿ. ಬ್ಯಾಂಕ್ ಹಿಂದುಗಡೆ ಸಾರ್ವಜನಿಕ ಸ್ಥಳಕ್ಕೆ ಹೋಗಿ ನೋಡಿದಾಗ  7 ಜನರು ಗುಂಪಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ನಡೆದು ಕೊಂಡು ಹೋಗಿ ಸಮಯ 12:00 ಗಂಟೆಗೆ   ದಾಳಿಮಾಡಿ ಹಿಡಿದುಕೊಂಡು ಸಾಲಾಗಿ ನಿಲ್ಲಿಸಿ ಮೊದಲನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು1] ಪ್ರವೀಣ ತಂದೆ ಸೂರ್ಯಕಾಂತ ಲಾಡೆ ವಯಸ್ಸು:24ವರ್ಷ ಜಾತಿ:ಎಸ್ಸಿ ಮಾದಿಗಾ :ಕೂಲಿಕೆಲಸ ಸಾ:ಧರ್ಮಪ್ರಕಾಶಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3100/-ರೂ ಸಿಕ್ಕ್ಕಿರುತ್ತವೆ,2] ಎರಡನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ತೌಶಿಫ್ ತಂದೆ ಅಬ್ದುಲ್ಖಾದರ ಸೋಫವಾಲೆ ವಯಸ್ಸು:21ವರ್ಷ ಜಾತಿ:ಮುಸ್ಲಿಂ :ಕೂಲಿಕೆಲಸ ಸಾ:ಪಾಶಪೂರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧಿನದಿಂದ ನಗದು ಹಣ 2300/-ರೂ ಸಿಕ್ಕ್ಕಿರುತ್ತವೆ,3] ಮೂರನೆಯವನಿಗೆ ಹೆಸರುಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಗಣೇಶ ತಂದೆ ಭಾಸ್ಕರರಾವ ಭೋಸ್ಲೆ ವಯಸ್ಸು:31ವರ್ಷ ಜಾತಿ:ಮರಾಠ :ವ್ಯಾಪಾರ ಸಾ:ಸವರ್ೋದಯ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3000/-ರೂ ಸಿಕ್ಕ್ಕಿರುತ್ತವೆ, 4]ನಾಲ್ಕನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಂಜುನಾಥ ತಂದೆ ವೆಂಕಟರಾವ ವಲ್ಲೇಪೂರೆ ವಯಸ್ಸು:33ವರ್ಷ ಜಾತಿ:ಎಸ್.ಸಿ ವಡ್ಡರ :ವ್ಯಾಪಾರ ಸಾ:ನಿಟ್ಟೂರ ತಾ:ಭಾಲ್ಕಿ ಸದ್ಯ:ಆದರ್ಶ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3200/-ರೂ ಸಿಕ್ಕ್ಕಿರುತ್ತವೆ,5] ಐದನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸುರೇಶ ತಂದೆ ಮಲ್ಲಣ್ಣಾ ರಾಂಪೂರೆ ವಯಸ್ಸು:42ವರ್ಷ ಜಾತಿ:ಲಿಂಗಾಯತ್ ;ಎಲೇಕ್ಟ್ರಿಷನ್ ಕೆಲಸ ಸಾ:ಲಾಲತಾಲಬ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2900/-ರೂ ಸಿಕ್ಕ್ಕಿರುತ್ತವೆ 6]ಆರನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಉಮರ ತಂದೆ ಗನಿ ಮಾಮು ವಯಸ್ಸು:24ವರ್ಷ ಜಾತಿ:ಮುಸ್ಲಿಂ :ವಿ ಕೂಲಿಕೆಲಸ ಸಾ:ಕಾಟೆವಾಡಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2500/-ರೂ ಸಿಕ್ಕ್ಕಿರುತ್ತವೆ ಮತ್ತು 7] ಏಳನಿಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸುನೀಲ್ ತಂದೆ ಸಂಗಮನಾಥ ವಕಾರೆ ವಯಸ್ಸು:28ವರ್ಷ ಜಾತಿ:ಲಿಂಗಾಯತ್ :ಕೂಲಿಕೆಲಸ ಸಾ:ಹಿರೆಮಠ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2300/-ರೂ ಸಿಕ್ಕ್ಕಿರುತ್ತವೆ ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 3,300/-ರೂ ಮತ್ತು 52 ಇಸ್ಪಿಟ್ ಎಲೆಗಳು ಸಿಕ್ಕಿರುತ್ತವೆ. ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 22,600/- ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 49/2020 ಕಲಂ 32, 34 ಕೆಇ ಕಾಯ್ದೆ ಜೊತೆ 273 ಐಪಿಸಿ :-

ದಿನಾಂಕ:19/04/2020 ರಂದು 14:00 ಗಂಟೆಗೆ  ನಾನು ಪಿ.ಎಸ. [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಲಾಲತಲಾಬ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮಗಳ ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಕ್ಯಾನ್ಗಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಭಾತ್ಮಿಯಂತೆ ಇಬ್ಬರು ವ್ಯಕ್ತಿಗಳ ತಮ್ಮ ಹತ್ತಿರ ಎರಡು ಪ್ಲಾಸ್ಟಿಕ್ ಕ್ಯಾನಗಳು ಇಟ್ಟುಕೊಂಡು ಕುಳಿತಿದ್ದು ದಾಳಿ ಮಾಡಿ  ಆರೋಪಿತ ಅಜಗರ ತಮದೆ ಖಾಸಿಮಸಾಬ ಆಪದಾರ ವಯಸ್ಸು//30 ವರ್ಷ ಜಾತಿ//ಮುಸ್ಲಿಂ //ಸಾ-ಮಿಲ್ದಲ್ಲಿ ಕೆಲಸ ಸಾ//ಅಲ್ಲಾನಗರ ಬಸವಕಲ್ಯಾಣ  ಇತನ ಹತ್ತಿರವಿದ್ದ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಇಟ್ಟುಕೊಂಡಿದ್ದ  5 ಲೀಟರ ಗಾತ್ರದ ಪ್ಲಾಸ್ಟಿಕ್ ಕ್ಯಾನಗಳಲ್ಲಿ ಕಳ್ಳಭಟ್ಟಿ ಸರಾಯಿ ಅಂದಾಜು 10 ಲೀಟರ್ ಇರುತ್ತದೆ ಅದರ ಅಂದಾಜು ಕಿಮ್ಮತ್ತು 3000/-ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.





ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 50/2020 ಕಲಂ  87 ಕೆ.ಪಿ ಎಕ್ಟ ಜೊತೆ 269 ಐ.ಪಿ.ಸಿ :-
ದಿನಾಂಕ:19/04/2020 ರಂದು 1700 ಗಂಟೆಗೆ ನಾನು ಸುನೀಲ್ಕುಮಾರ ಪಿ.ಎಸ್.ಐ (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ  ಫಂಕ್ಷನ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸರ್ಕಾರದ ಆದೇಶದಂತೆ ಲಾಕ್-ಡೌನ್ ಇದ್ದು ಕೊರೊನಾ ಸೊಂಕು ಹರಡುವ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ ವಷರ್ಾ ಫಂಕ್ಷನ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 6 ಜನರು ಗುಂಪಾಗಿ ಕುಳಿತುಕೊಂಡು ಕೊರೊನಾ ಸೋಂಕು ಹರಡುವ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತಿದ್ದಾಗ ಅವರುಗಳ ಮೇಲೆ ದಾಳಿ ಮಾಡಿ 1] ಆನಂದ ತಂದೆ ಶರಣಯ್ಯಾ ಮಠಮತಿ ವಯಸ್ಸು//29 ವರ್ಷ  ಇವನ ಅಧೀನದಿಂದ ನಗದು ಹಣ 300/-ರೂ ಸಿಕ್ಕ್ಕಿರುತ್ತವೆ, 2]   ಈಶ್ವರ ತಂದೆ ಗುಲಾಬರಾವ ತ್ರೀಮುಖೆ ವಯಸ್ಸು//30 ವರ್ಷ ಇವನ ಅಧಿನದಿಂದ ನಗದು ಹಣ 500/-ರೂ ಸಿಕ್ಕ್ಕಿರುತ್ತವೆ,3]  ಮೋತಿರಾಮ ತಂದೆ ಶಂಕರರಾವ ನಾಯ್ಕ ವಯಸ್ಸು//32 ವರ್ಷ ಇವನ ಅಧಿನದಿಂದ ನಗದು ಹಣ 600/-ರೂ ಸಿಕ್ಕ್ಕಿರುತ್ತವೆ, 4 ಹೆಸರು ಅಂಬರೀಶ ತಂದೆ ಪರಮೇಶ್ವರ ರಾವ ಸಿಂಧೆ ವಯಸ್ಸು//32 ವರ್ಷ ಇವನ ಅಧಿನದಿಂದ ನಗದು ಹಣ 900/-ರೂ ಸಿಕ್ಕ್ಕಿರುತ್ತವೆ,5] ಮಹೇಶ ತಂದೆ ರಾಮಚಂದರ ರಾಠೋಡ್ ವಯಸ್ಸು//34 ವರ್ಷ ಇವನ ಅಧಿನದಿಂದ ನಗದು ಹಣ 1000/-ರೂ ಸಿಕ್ಕ್ಕಿರುತ್ತವೆ ಮತ್ತು 6]  ದತ್ತಾತ್ರಿ ತಂದೆ ಪರಮೇಶ್ವರರಾವ ಸಿಂಧೆ ವಯಸ್ಸು//28 ವರ್ಷ ಇವನ ಅಧಿನದಿಂದ ನಗದು ಹಣ 800/-ರೂ ಸಿಕ್ಕ್ಕಿರುತ್ತವೆ ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 2200/-ರೂ ಮತ್ತು 52 ಇಸ್ಪಿಟ್ ಎಲೆಗಳು ಸಿಕ್ಕಿರುತ್ತವೆ.ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 6300/- ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.