Police Bhavan Kalaburagi

Police Bhavan Kalaburagi

Sunday, April 19, 2020

KALABURAGI DISTRICT PRESS NOTE


                                                  : ಪತ್ರಿಕಾ ಪ್ರಕಟಣೆ :                                                                   
  (ದಿನಾಂಕ: 19.04.2020)
          ದೇಶದಲ್ಲಿ ಮಹಾಮಾರಿ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ದೇಶದ್ಯಾಂತ ಲಾಕ್ಡೌನ ಘೋಷಣೆ ಮಾಡಿದ್ದು ಈ ದಿಶೆಯಲ್ಲಿ (ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿ ಹೊರತು ಪಡಿಸಿ) ಕಲಬುರಗಿ ಜಿಲ್ಲೆಯ ಆಳಂದಅಫಜಲಪೂರಜೇವರ್ಗಿ,  ಚಿತ್ತಾಪೂರಶಹಾಬಾದಸೇಡಂಮತ್ತು ಚಿಂಚೋಳಿ ತಾಲ್ಲೂಕಾಗಳ ವ್ಯಾಪ್ತಿಯಲ್ಲಿ ಲಾಕ್ಡೌನನ್ನು ಉಲ್ಲಂಘಿಸಿದವರ ವಿರುದ್ದ ಜಿಲ್ಲೆಯ ವಿವಿದ ಪೊಲೀಸ ಠಾಣೆಗಳಲ್ಲಿ ಇಲ್ಲಿಯವರೆಗೆ  ಒಟ್ಟು 38 ಲಾಕ್ಡೌನ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು ಆ ಪ್ರಕರಣಗಳಿಗೆ ಸಂಭಂದಿಸಿದಂತೆ 122 ಜನರನ್ನು ದಸ್ತಗಿರಿಗೊಳಿಸಲಾಗಿರುತ್ತದೆ ಹಾಗೂ ಲಾಕ್ಡೌನ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾದ 118 ಜನರ ವಿರುದ್ದ ರೌಡಿ ಶೀಟ ತೆರೆಯಲಾಗಿದೆ. ಅಲ್ಲದೆ ಲಾಕ್ಡೌನ ಉಲ್ಲಂಘಿಸಿ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 659 ವಾಹನಗಳನ್ನು ವಶಕ್ಕೆ ಪಡೆದುಕೊಂಡು 92,700-00 ರೂ. ದಂಡ ವಿಧಿಸಲಾಗಿದೆ.

                                                                                                ಸಹಿ/-
                                                                                        ಪೊಲೀಸ ಅಧೀಕ್ಷಕರು,
                                                                                              ಕಲಬುರಗಿ
ಗೆ,
ಸಂಪಾದಕರು
ಕಲಬುರಗಿ ನಗರದ ಎಲ್ಲಾ ಪತ್ರಿಕೆಗಳು.