Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 153/2018 ಕಲಂ 78(3) ಕೆ.ಪಿ. ಆ್ಯಕ್ಟ;- ದಿನಾಂಕ 20/06/2018 ರಂದು ಬೆಳಿಗ್ಗೆ 9-30 ಎ.ಎಮ್ ಕ್ಕೆ ಆರೋಪಿತನು ಅಬ್ಬೆತುಮಕೂರ ಗ್ರಾಮದಲ್ಲಿ ಬಸಮ್ಮಾಯಿ ದೇವರ ಕಟ್ಟೆಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಪ್ರೇರೇಪಣೆ ಮಾಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಂಚರು ಮತ್ತು ಸಿಬ್ಬಂಧಿಯವರ ಜೋತೆಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 2000/ರೂ, ಒಂದು ಬಾಲಪೆನ್ನ, ಒಂದು ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ,
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ 154/18 ಕಲಂ 341, 324, 326, 504, 506 ಐಪಿಸಿ;- ದಿನಾಂಕ 20-06-2018 ರಂದು ಬೆಳಗ್ಗೆ ನಾನು ಎಂದಿನಂತೆ ನಮ್ಮ ಎತ್ತಿನ ಬಂಡಿಯನ್ನು ಹೊಡೆದುಕೊಂಡು ನಮ್ಮ ಹೋಲಕ್ಕೆ ಹೋಗುವ ಸಲುವಾಗಿ ನಮ್ಮ ಅಣ್ಣತಮಕಿಯವರಾದ ನಿಂಗಯ್ಯಾ ತಂದೆ ಸಂಗಣ್ಣಾ ವಗ್ಗರ ಇವರ ಹೋಲದ ಹತ್ತಿರವಿದ್ದ ಬದುವಿನ ಮೇಲಿಂದ ಬಂಡಿ ಹೊಡೆದುಕೊಂಡು ಹೊರಟಾಗ ಆಗ ಸಮಯ ಬೆಳಗಿನ 10 ಗಂಟೆಯಾಗಿತ್ತು. ಅದೇ ವೇಳೆಗೆ ನಿಂಗಯ್ಯಾ ತಂದೆ ಸಂಗಣ್ಣಾ ವಗ್ಗರ ಇತನು ತನ್ನ ಕೈಯಲ್ಲಿ ಬಡಿಗೆಯನ್ನು ಹಿಡಿದುಕೊಂಡು ಮುಂದೆ ಬಂದು ನನ್ನ ಬಂಡಿಯನ್ನು ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಭೊಸಡಿ ಮಗನೇ ಇಲ್ಲಿಂದ ಹೋಗಬೇಡ ಅಂತಾ ನಿನಗೆ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೆನೆ ಆದರೂ ನೀನು ಇಲ್ಲಿಂದ ಎತ್ತಿನ ಬಂಡಿಯನ್ನು ಹೊಡೆದುಕೊಂಡು ಹೊಗುತ್ತಿದ್ದಿ ನಿನ್ನ ಸೊಕ್ಕ ಬಹಳ ಆಗಿದೆ ಸೂಳೇ ಮಗನೇ ಅಂತಾ ಇವತ್ತು ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿ ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದನು. ಮತ್ತು ಸಲ ಎಡಗಡೆ ಕಿವಿಯ ಮೇಲೆ ಹೊಡೆದು ಅಲ್ಲಿಯೂ ಕೂಡಾ ರಕ್ತಗಾಯ ಮಾಡಿದನು. ಆಗ ನಾನು ಚಿರಾಡುತ್ತಿದ್ದಾಗ ಪಕ್ಕದ ಹೊಲದವರಾದ ತಿರುಪತಿ ತಂದೆ ನಾಗೇಂದ್ರಪ್ಪಾ ಕೆರೆಪ್ಪರ ಮತ್ತು ಶಿವರೆಡ್ಡಿ ತಂದೆ ಶಿವಯೋಗೆಪ್ಪಾ ವಗ್ಗರ ಮತ್ತು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಮ್ಮನಾದ ಈರಪ್ಪಾ ತಂದೆ ಬಸಣ್ಣಾ ವಗ್ಗರ ಮೂರು ಜನರು ನನಗೆ ಹೊಡೆಯುವುದನ್ನು ಬಿಡಿಸಿಕೊಂಡು ನಿಂಗಯ್ಯಾ ಇತನಿಗೆ ಅಲ್ಲಿಂದ ಕಳುಹಿಸಿದರು. ನನಗೆ ಬಡಿಗೆಯಿಂದ ಹೊಡೆಬಡಿ ಮಾಡಿ ಜೀವದ ಭಯ ಹಾಕಿದ ನಿಂಗಯ್ಯಾ ತಂದೆ ಸಂಗಣ್ಣಾ ವಗ್ಗರ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿಬೇಕು ಅಂತಾ ನೀಡಿದ ಫಿರ್ಯಾಧಿ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು 2-30 ಪಿ.ಎಮ್ ಕ್ಕೆ ಫಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ 154/2018 ಕಲಂ 341, 324, 326, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 141/2018 ಕಲಂ 279.337.338. ಐ ಪಿ ಸಿ ;- ದಿನಾಂಕ 20-06-2018 ರಂದು 6-45 ಎ ಎಂ ಕ್ಕೆ ಸರಕಾರಿ ಆಶ್ಪತ್ರೆ ಸೈದಾಪೂರದಿಂದ ದೂರವಾಣಿ ಮೂಲಕ ಅರ್.ಟಿ.ಎ ಎಮ್.ಎಲ್.ಸಿ ತಿಳಿಸಿದ್ದು. ಸದರಿ ಎಮ್.ಎಲ್.ಸಿ ಆದಾರದ ಮೇಲಿಂದ ಎಮ್.ಎಲ್.ಸಿ ಹೇಳಿಕೆ ಪಡೆಯಲು ಠಾಣೆಯಿಂದ 6-50 ಎ ಎಂ ಕ್ಕೆ ಹೊರಟು ಸರಕಾರಿ ಆಶ್ಪತ್ರೆ ಸೈದಾಪೂರಕ್ಕೆ 7 ಎ ಎಂ ಕ್ಕೆ ಬೇಟಿ ನೀಡಿ ಗಾಯಾಳು ರವಿಕುಮಾರ ತಂದೆ ಸುಭಾಶ್ಚಂದ್ರ ಹಡಪದ ವಯಾ|| 25 ವರ್ಷ ಜಾ|| ಹಡಪದ ಉ|| ಕ್ಷೌರಿಕ ಕೆಲಸ ಸಾ|| ಕಡೆಚೂರ ತಾ|| ಜಿಲ್ಲಾ|| ಯಾದಗಿರಿ ಇವರ ಹೇಳಿಕೆಯನ್ನು ಪಡೆದುಕೊಮಡಿದ್ದು ಅದರ ಸಾರಾಂಶವೇನಂದರೆ.
ಇಂದು ದಿನಾಂಕ 20-06-2018 ರಂದು ಬೆಳೆಗ್ಗೆ 6 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಮ್ಮನಾದ ಅಂಬ್ರೇಶ ತಂದೆ ಸುಭಾಶ್ಚಂದ್ರ ಹಾಗೂ ನಮ್ಮಸಂಭಂದಿಕನಾದ ಸಾಬಣ್ಣ ತಂದೆ ಆಶಪ್ಪ ಸಾ|| ನಜರಾಪೂರ ನಾವು ಮೂರು ಜನ ಕೂಡಿಕೊಂಡು ನಮ್ಮ ಕ್ಷೌರಿಕ ಅಂಗಡಿಗೆ ನನ್ನ ದ್ವೀಚಕ್ರವಾಹನ ಹೊಂಡ ಸೈನ ಸೈಕಲ ಮೋಟಾರ ನಂ ಕೆಎ-33-ಅರ್-8100 ನೇದ್ದರ ಮೇಲೆ ಕುಳಿತುಕೊಂಡು ಕಡೆಚೂರದಿಂದ ಸೈದಾಪೂರಕ್ಕೆ ಬರುತ್ತಿದ್ದು ನಾನು ಸೈಕಲ ಮೊಟಾರನ್ನು ಚಲಾಯಿಸುತ್ತಿದ್ದೆ. ಸೈದಾಪುರದಲ್ಲಿ ಕನಕವೃತ್ತದ ಹತ್ತಿರ ಬರುತ್ತಿದ್ದಾಗ ಇಂದು 6-30 ಎ ಎಂ ಸುಮಾರಿಗೆ ಎದುರಿನಿಂದ ಒಂದು ಕ್ರೂಷರ ಜೀಪ ನಂ ಕೆಎ-33-ಎ-8275 ನೇದ್ದರ ಚಾಲಕ ತನ್ನ ಕ್ರೂಷರನ್ನು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಸೈಕಲ ಮೊಟಾರಕ್ಕೆ ಅಪಘಾತ ಪಡಿಸಿದನು. ಆಗ ನಾವು ಮೂರು ಜನರು ಸೈಕಲ ಮೊಟಾರದಿಂದ ಕೆಳಗೆ ಬಿದ್ದೆವು.ನಂತರ ಎದ್ದು ನೋಡಲು ನನಗೆ ಹಣೆಯ ಮೇಲೆ ಗುಪ್ತಗಾಯ ಮತ್ತು ಮೂಗಿಗೆ ರಕ್ತಗಾಯವಾಗಿದೆ. ತಲೆಗೆ ಗುಪ್ತಗಾಯವಾಗಿದೆ.ಅಂಬ್ರಶನಿಗೆ ನೋಡಲಾಗಿ ಆತನ ಹಣೆಗೆ ರಕ್ತಗಾಯ ಗದ್ದಕ್ಕೆ. ತುಟಿಗೆ ರಕ್ತಗಾಯವಾಗಿದೆ. ಹಾಗೂ ಮುಂದಿನ ಹಲ್ಲುಗಳಿಗೆ ಭಾರೀ ಪೆಟ್ಟಾಗಿರುತ್ತದೆ.ಸಾಬಣ್ಣ ಇವರಿಗೆ ನೋಡಲು ಆತನ ಬಲಕಿವಿಗೆ ತರಚಿದ ಗಾಯವಾಗಿದೆ. ಆಗ ಅಪಘಾತ ಪಡಿಸಿದ ಕ್ರೂಷನ ಚಾಲಕನಾದ ಖಾಜಾಮೈನೋದ್ದೀನ ತಂದೆ ಇಮಾಮಸಾಬ ಸಾ|| ಬದ್ದೆಪಲ್ಲಿ ಇವನು ತನ್ನ ಕ್ರೂಷರ ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಸೈದಾಪೂರಕ್ಕೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ.
ಕಾರಣ ನಮ್ಮ ಸೈಕಲ ಮೊಟಾರ ಹೊಂಡ ಸೈನ ಸೈಕಲ ಮೋಟಾರ ನಂ ಕೆಎ-33-ಅರ್-8100.ನೇದ್ದಕ್ಕೆ ಖಾಜಾಮೈನೋದ್ದೀನ ತಂದೆ ಇಮಾಮಸಾಬ ಸಾ|| ಬದ್ದೆಪಲ್ಲಿ ಇವರು ಕ್ರೂಷರ ಜೀಪ ನಂ ಕೆಎ-33-ಎ-8275 ನೇದ್ದನ್ನು ಅಪಘಾತ ಪಡಿಸಿದ್ದರಿಂದ ಘಟನೆ ಜರುಗಿದ್ದು ಚಾಲಕ ಹಾಗೂ ವಾಹನದ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿಕೆ ಪಿಯರ್ಾದಿ ಸಾರಾಂಶವಿದ್ದು ಮರಳಿ ಠಾಣೆಗೆ 8-15 ಎ ಎಂ ಕ್ಕೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 141/2018 ಕಲಂ 279.337.338. ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 330/2018. ಕಲಂಃ 323.354.504.506 ಸಂಗಡ 34 ಐಪಿಸಿ;-ದಿನಾಂಕ 20/06/2018 ರಂದು ಮುಂಜಾನೆ 11-35 ಎ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀಮತಿ ಶರಬಮ್ಮ ಗಂಡ ದೇವಿಂದ್ರಪ್ಪ ಬಟ್ಟಿ ವಯ|| 38 ಉ|| ಮನೆಕೆಲಸ ಜಾ|| ಪರಿಸಿಷ್ಟ ಜಾತಿ ಸಾ|| ವಿಭುತಿಹಳ್ಳಿ ತಾ|| ಶಹಾಪೂರ ರವರು ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ.
ನಾನು ಈ ಮೇಲ್ಕಂಡ ವಿಳಾಸದಲ್ಲಿ ಮನೆ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ವಾಸಿಸುತ್ತಿರುತ್ತೆನೆ. ಹೀಗಿರುವಾಗ ನನಗೂ ಮತ್ತು ನಮ್ಮ ಓಣಿಯಯವರಾದ ಮರಳಪ್ಪ ತಂದೆ ಕೃಷ್ಣಪ್ಪ ಸಾಗರಕರ್, ನಿಂಗಪ್ಪ ತಂದೆ ಭೀಮಪ್ಪ ಬಟ್ಟಿ, ಮಾರುತಿ ತಂದೆ ಮರಳಪ್ಪ ಸಾಗರಕರ್, ಕಾಳಪ್ಪ ತಂದೆ ಕೃಷ್ಣಪ್ಪ ಸಾಗರಕರ್, ಇವರೆಲ್ಲರೊಂದಿಗೆ ಈಗ ಸುಮಾರು ದಿವಸಗಳ ಹಿಂದೆ ಸಕರ್ಾರಿ ನಳದ ನೀರು ತುಂಬುವ, ನಳ ಬಂದ ಮಾಡುವ ವಿಷಯದಲ್ಲಿ ತಕರಾರು ಆಗಿತ್ತು. ಅದೇ ದ್ವೇಶದಿಂದ ನಾಲ್ಕು ಜನರು ದಿನಾಂಕ: 18/06/2018 ರಂದು ಮದ್ಯಾಹ್ನ 10-00 ಪಿ,ಎಂ ಕ್ಕೆ ನಮ್ಮ ಮನೆಯ ಮುಂದೆ ಬಂದು ನನಗೆ ಬಾಯಿಗೆ ಬಂದಂತೆ ಎ ಶರಬಿ ಸೂಳೆ ರಂಡಿ ಅಂತ ಬೈಯ್ದು ನಾವು ನೀರು ತರಲು ಸಕರ್ಾರಿ ನಳಕ್ಕೆ ಬಂದರೆ ನೀನು ನಳ ಬಂದ ಮಾಡುತ್ತಿಯಾ ಅಂತ ಬೈಯ್ದರು. ಆಗ ನಾನು ಮನೆಯಿಂದ ಹೋರಗೆ ಬಂದು ಯಾಕೇ ಬೈಯುತ್ತಿರಿ ಅದು ಸಕರ್ಾರಿ ನಳ ನಾನು ನೀರು ತರಬಹುದು ನೀವು ನೀರ ತೆಗೆದುಕೊಂಡು ಹೋಗರಿ ಅಲ್ಲೆನಿದೆ ನಳ ಬಂದ ಮಾಡುವದು ಏನು ಇಲ್ಲ ಅಂತ ಅಂದೆನು. ಅದಕ್ಕೆ ಅವರಲ್ಲಿ ಮರಳಪ್ಪ ಈತನು ನೀಯಾಕೆ ನಳ ಬಂದ ಮಾಡತಿ ಅಂತ ಅಂದು ನನ್ನ ಕೂದಲು, ಕೈ ಹಿಡಿದು ಏಳೆದಾಡಿದನು ನಿಂಗಪ್ಪನು ಕಪಾಳಕ್ಕೆ ಹೋಡೆದನು. ಮಾರುತಿ ಈತನು ಕಾಲಿನಿಂದ ನನ್ನ ಕಾಲಿಗೆ ಒದ್ದನು. ಕಾಳಪ್ಪ ಈತನು ಕೈ ಯಿಂದ ಹೋಡೆದು ಏಳೆದಾಡಿದನು. ಅಷ್ಡರಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ನನ್ನ ನೇಗೇಣಿ ತಾಯಮ್ಮ ಗಂಡ ಭಿಮಣ್ಣ @ ಸಾದು ಗೌಂಡಿ ಹಾಗೂ ನಮ್ಮ ಪಕ್ಕದ ಮನೆಯ ಸೋಮಣ್ಣ ತಂದೆ ಬಸಣ್ಣ ಹಾದಿಮನಿ ಇಬ್ಬರೂ ಬಂದು ಜಗಳ ನೋಡಿ ಜಗಳ ಬಿಡಿಸಿದರು.
ನಂತರ ನಾಲ್ಕು ಜನರು ಇನ್ನೋಮ್ಮೆ ಎನಾದರು ನೀನು ನಾವು ನೀರು ತರಲು ಬಂದಾಗ ನಳ ಬಂದ ಮಾಡಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನ್ನ ಗಂಡ ಗೌಂಡಿ ಕೆಲಸದ ನಿಮಿತ್ಯ ಗೋಲಗೇರಿ ಗುಡಸಲಕ್ಕೆ ಹೋಗಿದ್ದು ನನ್ನ ಗಂಡನಿಗೆ ವಿಷಯ ತಿಳಿಸಿ ನನ್ನ ಗಂಡ ದೇವಿಂದ್ರಪ್ಪ ತಂದೆ ಬಸಪ್ಪ ಬಟ್ಟಿ ಈತನು ಮನೆಗೆ ಬಂದ ನಂತರ ಆತನಲ್ಲಿ ವಿಚಾರಿಸಿ ಇಂದು ದಿನಾಂಕ 20/06/2018 ರಂದು 11-35 ಎ,ಎಂ ಕ್ಕೆ ಠಾಣೆಗೆ ಬಂದು ಈ ದೂರು ಕೊಟ್ಟಿದ್ದು ನನಗೆ ಜಗಳದಲ್ಲಿ ಯಾವುದೆ ಗಾಯ ವಗೈರೆ ಆಗಿರುವದಿಲ್ಲ ಮತ್ತು ನನಗೆ ಆಸ್ಪತ್ರೆಗೆ ತೋರಿಸವದು ಅವಶ್ಯ ಇರುದಿಲ್ಲ. ನನಗೆ ಕೂದಲ ಹಿಡಿದು ಏಳೆದಾಡಿ ಕೈಯಿಂದ ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ, ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 330/2018 ಕಲಂ 323.354.504.506 ಸಂಗಡ 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 44/2018 ಕಲಂ 279, 338 ಐಪಿಸಿ;-ದಿನಾಂಕ 20/06/2018 ರಂದು ಸಮಯ ಮದ್ಯಾಹ್ನ 2 ಪಿ.ಎಂ. ದ ಸುಮಾರಿಗೆ ಯಾದಗಿರಿ ನಗರದ ಮೈಲಾಫುರ ಬೆಸ್ ಮುಖ್ಯ ರಸ್ತೆಯ ಮೇಲೆ ಫಿಯರ್ಾದಿಯವರು ರಸ್ತೆ ಬದಿಯಲ್ಲಿ ಬಹಿದರ್ೆಸೆಗೆ ನಡೆದುಕೊಂಡು ಹೊರಟಿದ್ದಾಗ .ಆರೋಪಿತನು ತನ್ನ ಮೋಟಾರು ಸೈಕಲ್ ನಂ.ಕೆಎ-03, ಎಚ್.ಎನ್-1353 ನೆದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿ ಗಾಯಾಳುವಿಗೆ ಡಿಕ್ಕಿಕೊಟ್ಟು ಅಪಗಾತ ಮಾಡಿದ್ದರಿಂದ ಫಿಯರ್ಾದಿಗೆ ಬಲಗಾಲಿನ ತೊಡೆಗೆ, ಸೊಂಟಕ್ಕೆ ಭಾರೀ ಗುಪ್ತಗಾಯವಾಗಿದ್ದರ ಬಗ್ಗೆ ಮತ್ತು ಮೋಟಾರು ಸೈಕಲ್ ಸವಾರನ ಮೇಲೆ ಮುಂದಿನ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.130/2018 ಕಲಂ 279, 337, 338, ಐಪಿಸಿ ;- ದಿನಾಂಕ 20/06/2018 ರಂದು 05:30 ಪಿಎಮ್ ಕ್ಕೆ ಕಲಬುರಗಿಯ ಯುನೇಟೇಡ ಆಸ್ಪತ್ರೆಯ ಯಿಂದ ಒಂದು ಆರ್.ಟಿ.ಓ ಎಂ..ಎಲ್.ಸಿ ಅಜರ್ಿ ತೆಗಿದುಕೊಂಡು ಬಂದು ಹೆಚ್.ಸಿ-74 ರವರು ಹಾಜರ ಪಡಿಸಿದ ಅಜರ್ಿಯ ಸಾರಂಶವೆನಂದರೆ. ದಿನಾಂಕ 19/06/2018 ರಂದು ಮುಂಜಾನೆ 11 ಎ,ಎಂ ಸುಮರಿಗೆ ನಾನು ಚಂದ್ರಮ್ಮ ಗಂಡ ಚಂದ್ರಶೆಖರ ವ|| 36 ವರ್ಷ ಜಾ|| ಮಾದರ ಉ|| ಕೂಲಿ ಸಾ|| ಹಾರಣಗೇರಾ ಇದ್ದು ನಾನು ಮತ್ತು ಗಂಡ ಕಿರಾಣಿ ಸಾಮಾನು ತರಲು ಚಾಮನಾಳ ಗ್ರಾಮಕ್ಕೆ ನಮ್ಮ ಸಂಬಂದಕರಾದ ಶರಣಪ್ಪ ಇವರ ಮೋಟಾರ ಸೈಕಲ ನಂ. ಕೆ.ಎ 32 ಡ್ಬ್ಲೂ 9305 ನೇದ್ದನ್ನು ತೆಗಿದುಕೊಂಡು ನಾನು ಮತ್ತು ನನ್ನ ಗಂಡ ಚಂದ್ರಶೇಖರ ಕೂಡಿಕೊಂಡು ಚಾಮನಾಳ ಗ್ರಾಮಕ್ಕೆ ಹೋಗಿ ಕಿರಾಣಿ ಸಂತಿ ಮಾಡಿಕೊಂದು ಸಾಯಾಂಕಾಲ ನಮ್ಮ ಗ್ರಾಮ ಹಾರಣಗೇರಾ ವಾಪಸ ಹೋರಟೇವು. ಅಂದಾಜು 6:30 ಪಿ.ಎಂ ಕ್ಕೆ ಸುಮರಿಗೆ ಉಕ್ಕನಾಳ ಕ್ರಾಸ ದೋರಿಗುಡ್ಡದ ಹತ್ತಿರ ಇರುವ ಸೇತುವೆ ಸಮೀಪ ಹೋಗುತ್ತಿದ್ದಾಗ ನನ್ನ ಗಂಡ ವಾಹನವನ್ನು ನಿಧಾನವಾಗಿ ಚಲಾಹಿಸುತ್ತಾ ಇದ್ದನು. ಹಿಂದನಿಂದ ಚಾಮನಾಳ ಕಡೆಯಿಂದ ಒಂದು ಟಾಟಾ ಎ.ಎಸಿ ವಾಹನುವು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದನು, ಆಗ ನಾವು ವಾಹನ ಸಮೇತರಾಗಿ ಕೇಳಗೆ ಬಿದ್ದೇವು, ನಾನು ಎದ್ದು ನೋಡಲಾಗಿ ನನಗೆ ಬಲಗೈ ಮೋಳ ಕೈ ತರುಚಿದ ಗಾಯವಾಗಿರುತ್ತದೆ. ನನ್ನ ಗಂಡ ಚಂದ್ರಶೇಖರನಿಗೆ ಎಬ್ಬಸಿ ನೋಡಲಾಗಿ ಎಡ ಹಣೆ ಹುಬ್ಬಿನ ಹತ್ತಿರ ಭಾರಿ ರಕ್ತ ಗಾಯವಾಗಿದ್ದು ರಕ್ತ ಸೋರುತ್ತಿತ್ತು, ಬಲಗಣ್ಣಿಗೆ ಪೆಟ್ಟಾಗಿದ್ದು ಎಡ ಮೋಣ ಕೈಗೆ ಪೆಟ್ಟಾಗಿದ್ದು ಮತ್ತು ಎಡ ಮೋಣಕಾಲಿಗೆ ರಕ್ತ ಗಾಯವಾಗಿರುತ್ತದೆ ಅಲ್ಲೇ ನಿಂತ್ತಿದ್ದ ಟಾ.ಟಾ ಎ.ಸಿ ನಂ. ಕೆ,ಎ 33 ಎ.2317 ಇದ್ದು ನೋಡಿದೇನು ಆಗ ನಾನು ಆಳುವದು, ಚೀರುವದುನ್ನು ಕೇಳಿ ಅದೇ ಸಮಯಕ್ಕೆ ಮೋಟಾರ ಸೈಯಕಲಿನ ಮೇಲೆ ಬಂದ ನಮ್ಮೂರಿನ ಅಯ್ಯಪ್ಪ ತಂದೆ ಅಂಬ್ಲಪ್ಪ, ಭೀಮರಾಯ ತಂದೆ ಚನ್ನ ಬಸಪ್ಪ ಇವರು ನಮ್ಮ ನೋಡಿ ಇಳಿದು ಬಂದು 108 ಅಂಬುಲೇನ್ಸಿಗೆ ಫೋನಮಾಡಿ, ಕರೆಯಿಸಿ ಅಂಬುಲೇನ್ಸ ಮುಖಾಂತರ ಶಹಾಪೂರ ಸಕರ್ಾರಿ ಆಸ್ಪತ್ರೆಗೆ ಕಳಿಸಿದರು ಸಕರ್ಾರಿ ಆಸ್ಪತ್ರೆ ಶಹಾಪೂರ ಬಂದು ಸೇರಿಕೆ ಮಾಡಿದೇವು. ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಿಗಿಯ ಯುನೇಟೆಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೇವು . ಕಾರಣ ಅಪಘಾತ ಪಡಿಸಿದ ಟಾ.ಟಾ ಎ.ಸಿ ನಂ. 2317 ನೇದ್ದರ ಚಾಲಕನ ಮೇಲೆ ಕ್ರಮ ಜರುಗಿಸಬೆಕೆಂದು ಹೇಳಿ ಬರೆಯಿಸಿದ ದಸ್ರೂರು ಕರ್ಣಪ್ಪ ಇರುತ್ತರೆ ನನಗೆ ಹೇಚ್ಚಿನ ಗಾಯ ಆಗದ ಕಾರಣ ಉಪಚಾರ ಮಾಡಿಕೊಂಡಿರುವದಿಲ್ಲಾ ವಾಹನದ ಚಾಲಕನು ಡಿಕ್ಕಿ ಪಡಿಸಿ ಓಡಿ ಹೋಗಿದ್ದಾನೆ, ನೋಡಿದಲ್ಲಿ ಗುತರ್ಿಸುತ್ತೆನೆ. ಅಂತಾ ಪಿಯರ್ಾದಿ ನೀಡಿದಾ ಅಜರ್ಿಯ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ. 130/2018 ಕಲಂ 279,337,338 ನೇದ್ದರ ಅಡಿಯಲ್ಲಿ
್ಲ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 234/2018 ಕಲಂ 279, 337, 338, ಐಪಿಸಿ;-ದಿನಾಂಕ 21.06.2018 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಪಿರ್ಯಾಧಿ ಹಾಗೂ ಇತರರು ಕೂಡಿಕೊಂಡು ಸೇಡಂ ತಾಲ್ಲೂಕಿ ಭೂತಪೂರ ಗ್ರಾಮದಲ್ಲಿ ಮನೆ ಚೆತ್ ಹಾಕಲು ಬೇಕಾಗುವ ಉಪಕರಣಗಳನ್ನು ಟೆಂಪೂ ವಾಹನ ನಂ. ಎಂ.ಹೆಚ್-02-ಟಿ-3918 ನೆದ್ದರಲ್ಲಿ ಹಾಕಿ ಎಲ್ಲರೂ ಕುಳಿತುಕೊಂಡು ತಮ್ಮೂರಿನಿಂದ ಬಿಟ್ಟು ಭೂತಪೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ವಾಹನದ ಚಾಲಕನು ವೇಗವಾಗಿ ನಡೆಯಿಸಿಕೊಂಡು ಹೋಗಿ ಇಳಿಜಾರಿನ ರಸ್ತೆಯ ಮೇಲೆ ವಾಹನವನ್ನು ನಿಯಂತ್ರಿಸದೆ ರಸ್ತೆಯ ಪಕ್ಕದಲ್ಲಿರುವ ಕಲ್ಲುವಟ್ಟಿಗೆ (ಪೂಲ್) ಹತ್ತಿರ ದೇವರಳ್ಳಿ-ಸಿದ್ದಾಪೂರ ರೋಡಿನ ಮೇಲೆ ಸಿದ್ದಾಪೂರ ಸೀಮಾಂತರದಲ್ಲಿ ಸಮಯ ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಅಪಘಾತಕ್ಕಿಡು ಮಾಡಿದನು. ಸದರಿ ಅಪಘಾತದಲ್ಲಿ ಪಿರ್ಯಾಧಿಗೆ ಮತ್ತು ಇತರರಿಗೆ ಹಾಗೂ ಆರೋಪಿ ಚಾಲಕನಿಗೆ ಸಾಧಾ ಮತ್ತು ಗಂಭಿರ ಸ್ವರೂಪದ ಗಾಯಗಳು ಆದ ಬಗ್ಗೆ ಅಪರಾಧ.