Police Bhavan Kalaburagi

Police Bhavan Kalaburagi

Tuesday, June 30, 2020

BIDAR DISTRICT DAILY CRIME UPDATE 30-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-06-2020

ಬೇಮಳೇಡಾ ಠಾಣೆ  ಅಪರಾದ ಸಂಖ್ಯೆ 28/2020 ಕಲಂ 87 ಕೆ.ಪಿ ಎಕ್ಟ್  :-

ದಿನಾಂಕ 29-06-2020 ರಂದು 16:30 ಗಂಟೆಗೆ  ಬಸಿಲಾಪೂರ  ಶಿವಾರದಲ್ಲಿರವ  ಬಾಲಾಸಾಬ ದರ್ಗಾಕ್ಕೆ ಹೋಗವ ರೋಡಿನ ಮೇಲೆ ಸಾರ್ವಜನಿಕ  ಸ್ಥಳದಲ್ಲಿ  ಅಂದಾರ ಬಾಹೇರ ಎಂಬ ಇಸ್ಪೇಟ ಆಟವಾಡುತ್ತಿದ್ದಾರೆ. ಅಂತಾ ಖಚಿತ ಬಾತ್ಮಿ  ಬಂದ ಮೆರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ  ಸಾರ್ವಜನಿಕ  ಸ್ಥಳದಲ್ಲಿ ಕೆಲವು ಜನರು ಗೋಲಾಕರವಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಅಂದರ-ಬಾಹರ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿರುವುದು ಖಚಿತಪಡಿಸಿಕೊಂಡು   ದಾಳಿ ಮಾಡಿ 2 ಜನರನ್ನು ಹಿಡಿಯಲಾಯಿತ್ತು. ಇನ್ನೂ 2 ಜನರು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೊದರು ದಾಳಿ ಮಾಡಿ ಹಿಡಿದ 2 ಜನರ ಅಂಗ ಜಡ್ತಿ ಮಾಡಿ ಹೆಸರು, ವಿಳಾಸ ವಿಚಾರಿಸಿದ್ದು 1) ಸಂತೋಷ ತಂದೆ ಶಿವರಾಮ ಮೇತ್ರೆ ಸಾ// ಟೀಚರ ಕಾಲೋನಿ ಹುಮನಾಬಾದ ಇತನ ಹತ್ತಿರ 880=00 2) ಮಹ್ಮದ ಆಸೀಪ ತಂದೆ ಮುಸ್ತಫ ಸಾ// ಜೇರಪೇಟ ಹುಮನಾಬಾದ ಇತನ ಹತ್ತಿರ 1150=00 ರೂಪಾಯಿಗಳು ಹಾಗೂ  ಎಲ್ಲರ ನಡುವೆ ಜೂಜಾಟಕ್ಕೆ ಪಣಕ್ಕೆ ಹಚ್ಚಿದ ರೂಪಾಯಿ ನೋಡಲು 780=00 ರೂ ಹೀಗೆ ಒಟ್ಟು 2810=00 ರೂಪಾಯಿಗಳು ಹಾಗೂ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ   ಯೋಹನ ಚಾಂಗಲೇರಾ ಮತ್ತು ಸಿದ್ದು ಸಿಂಧನಕೇರಾ ಅಂತಾ ತಿಳಿದು ಬಂದಿರುತ್ತದೆ .ಜೂಜಾಟಕ್ಕೆ ಸಂಭಂಧಿಸಿದ 52 ಇಸ್ಪೀಟ್ ಎಲೆಗಳು, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ  ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78(3) ಕೆಪಿ ಕಾಯ್ದೆ :-

ದಿನಾಂಕ 29-06-2020 ರಂದು 0730 ಗಂಟೆಗೆ ಪಿಎಸ್ಐ ರವರು  ಜೊತೆಯಲ್ಲಿ ಲೊಕೇಶ ಸಿಪಿಸಿ 1152, ಪ್ರವೀಣ ಸಿಪಿಸಿ 1160 ರವರೊಂದಿಗೆ ನಮ್ಮ ಠಾಣೆಯ ಜೀಪ ನಂಬರ ಕೆಎ-38-ಜಿ-287 ನೇದ್ದರಲ್ಲಿ ಠಾಣೆಯಿಂದ ಹೊರಟು   ಪರಿಕ್ಷಾ ಕೇಂದ್ರಗಳಾದ ಧನ್ನೂರ(ಕೆ),  ಮುಚಳಂಬ, ರಾಜೊಳಾ, ರಾಜೇಶ್ವರ ಪರಿಕ್ಷೆ ಕೇಂದ್ರಗಳಿಗೆ ಭೇಟ್ಟಿಕೊಟ್ಟು ಪರಿಕ್ಷೆ ಬಂದೋಬಸ್ತ ಮುಗಿಸಿಕೊಂಡು 1415 ಗಂಟೆಗೆ   ರಾಜೇಶ್ವರದಲ್ಲಿ ಇದ್ದಾಗ  ರಾಜೇಶ್ವರ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ 1 ರೂಪಾಯಿಗೆ 90 ರೂಪಾಯಿ ಅಂತಾ ಕೂಗುತ್ತಿದ್ದು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಮೆರೆಗೆ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ 1 ರೂಪಾಯಿಗೆ 90 ರೂಪಾಯಿ ಅಂತಾ ಜೋರಾಗಿ ಕೂಗುತ್ತಿದ್ದು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 1630   ಗಂಟೆಗೆ ಅವನ ಮೇಲೆ ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲೆ ಇದ್ದ ಜನರು ಓಡಿ ಹೋಗಿರುತ್ತಾರೆ ಜೂರಾಗಿ ಕೂಗಾಡಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಆತನ ಹೆಸರು ಮತ್ತು ವಿಳಾಸ ನಾನು ವಿಚಾರಿಸಲು ಆ ವ್ಯಕ್ತಿ ತನ್ನ ಹೆಸರು ಶಿವಾನಂದ ತಂದೆ ಈರಣ್ಣಾ ಮಚಕೂರಿ ವಯ 31 ವರ್ಷ ಜಾತಿ ಎಸ್ ಸಿ ಹೊಲಿಯಾ ಉದ್ಯೋಗ ಕೂಲಿ ಕೆಲಸ ಸಾ : ರಾಜೇಶ್ವರ ಗ್ರಾಮ ಅಂತಾ ತಿಳಿಸಿದನು. ಇತನ ಅಂಗ ಝಡ್ತಿ ಮಾಡಲು ಇತನ ಹತ್ತಿರ 2,500 ರೂಪಾಯಿ ಒಂದು ಬಾಲ ಪೇನ್ ಹಾಗೂ ಮಟಕಾ ಬರೆದ ಚೀಟಿ ಸಿಕ್ಕಿರುತ್ತವೆ. ಪುನಃ ಶಿವಾನಂದ ಇತನಿಗೆ ನಾನು ಪಂಚರ ಸಮಕ್ಷಮ ವಿಚಾರಿಸಲು ಆತನ ತಿಳಿಸಿದೇನೆಂದರೆ ನಾನು ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಂಡು ಬಂದ ಹಣವನ್ನು 100 ರೂಪಾಯಿಗೆ 20 ರೂಪಾಯಿ ಕಮೀಷನಂತೆ ತ್ರೀಪೂರಾಂತ ಬಸವಕಲ್ಯಾಣನಿನ ಮೋಹನ ತಂದೆ ಮಧುಕರ ಸೂರ್ಯವಂಶಿ ವಯ 28 ವರ್ಷ ಜಾತಿ ಎಸ್ ಸಿ ಮಾದಿಗ ಉದ್ಯೋಗ ಕೂಲಿ ಕೆಲಸ ಇತನಿಗೆ ಕೊಡುತ್ತೇನೆ ಅಂತಾ ತಿಳಿಸಿದೆನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.