ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-01-2020
ಮನ್ನಾಎಖೇಳ್ಳಿ ಪೋಲಿಸ್ ಠಾಣೆ
ಯು.ಡಿ.ಆರ್ ನಂ. 01/2020, ಕಲಂ. 174
ಸಿ.ಆರ್.ಪಿ.ಸಿ :-
ದಿನಾಂಕ
28-01-2020 ರಂದು ಫಿರ್ಯಾದಿ ಜ್ಯೋತಿ ಗಂಡ ವಿಜಯಕುಮಾರ ಭಾಜಿ ಸಾ: ಬನ್ನಳ್ಳಿ, ತಾ: ಹುಮನಾಬಾದ ರವರ ಗಂಡ ವಿಜಯಕುಮಾರ ತಂದೆ ಚಂದ್ರಪ್ಪಾ ಭಾಜಿ ವಯ: 45 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಬನ್ನಳ್ಳಿ, ತಾ: ಹುಮನಾಬಾದ ರವರು ನಿರ್ಣಾ ಗ್ರಾಮದಲ್ಲಿರುವ ಪಿಕೆಪಿಎಸ್ ಬ್ಯಾಂಕಿನಲ್ಲಿ ಬೆಳೆ ಸಾಲ 1,57,000/- ರೂಪಾಯಿ ಹಾಗೂ ಮಗಳ ಮದುವೆಗೆಂದು ಮಾಡಿದ 2,00,000/- ಹೀಗೆ ಒಟ್ಟು 3,57,000/- ರೂ. ಗಳು ಸದರಿ ಸಾಲವನ್ನು ತಿರಿಸಲು ಆಗದೇ, ಸಾಲದ ಬಾಧೇ ತಳಲಾರದೇ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ದಿನಾಂಕ 29-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ.
32/2020, ಕಲಂ. 379
ಐಪಿಸಿ :-
ದಿನಾಂಕ 21-01-2020 ರಂದು
2200 ಗಂಟೆಗೆ ಫಿರ್ಯಾದಿ ಜ್ಞಾನೇಶ್ವರ ತಂದೆ ನಿವರ್ತಿರಾವ ಗುರನಾಳೆ ಸಾ: ತಪಶ್ಯಾಳ ಸದ್ಯ: ಭಾಲ್ಕಿ ರವರು ತನ್ನ ಮೋಟಾರ ಸೈಕಲ ನಂ. ಕೆಎ-38/ಜೆ-7755 ಅ.ಕಿ 20,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿರುವಾಗ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿ ನೋಡಲು ಮೋಟಾರ ಸೈಕಲ ಸಿಕ್ಕಿರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-01-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
11/2020, ಕಲಂ. 381
ಐಪಿಸಿ :-
ದಿನಾಂಕ 05-12-2019 ರಂದು ಫಿರ್ಯಾದಿ ವಿಶ್ವನಾಥ ತಂದೆ ಸೈದಪ್ಪ ದೀನೆ ವಯ: 51 ವರ್ಷ, ಜಾತಿ: ಎಸ್.ಸಿ ಹೊಲೆಯ, ¸Á: ಕೆ.ಎಚ.ಬಿ. ಕಾಲೋನಿ ಬೀದರ ರವರು ತಮ್ನ ಮನೆಯಲ್ಲಿಯ ಮಂಚದ ಡೆಸ್ಕನಲ್ಲಿ ಒಂದು ಬ್ಯಾಗಿನಲ್ಲಿ ಬಂಗಾರದ ವಡವೆಗಳಾದ 1) 45 ಗ್ರಾಂ. ತೂಕದ ಒಂದು ಗಂಟನ ಸರಗಳು ಅ.ಕಿ. 135,000/- ರೂ., 2) 40 ಗ್ರಾಂ ತೂಕದ ಒಂದು ಪದಕ ಸರ ಅ.ಕಿ. 1,20,000/- ರೂ., 3) 6 ಗ್ರಾಂ. ತೂಕದ ಒಂದು ರಿಂಗ ಅ.ಕಿ. 18,000/- ರೂ., 4) 3 ಗ್ರಾಂ ತೂಕದ ಎgÀಡು ತಾಳಿಗಳು ಅ.ಕಿ. 9,000/- ರೂ., 5) 8 ಗ್ರಾಂ. ತೂಕದ ಕಿವಿಯಲ್ಲಿಯ 4 ಹೂಗಳು ಅ.ಕಿ. 24,000/- ರೂ. ಹಾಗೂ 6) 10 ಗ್ರಾಂ. ತೂಕದ ತಾಳಿಯ ಜೊತೆಗೆ ಹಾಕುವ ಗುಂಡಗಳು ಮತ್ತು ಮಕ್ಕಳ ಕಿವಿಯಲ್ಲಿಯ ಲೋಲಕ ಸೇರಿ, ಅ.ಕಿ. 30,000/- ಇರುತ್ತವೆ, ಹೀಗೆ ಒಟ್ಟು ಸೇರಿ 112 ಗ್ರಾಂ. ತೂಕದ ಅ.ಕಿ. 336,000/- ರೂ. ಮೊತ್ತದ ಬಂಗಾರದ ವಡವೆಗಳನ್ನು ಇಟ್ಟಿದ್ದು ಇರುತ್ತದೆ, ಸದರಿ ಡೆÀಸ್ಕಿಗೆ ಬೀಗ ಇರುವದಿಲ್ಲ, ದಿನಾಂಕ 16-12-2019 ರಂದು ಫಿರ್ಯಾದಿಯು ಇಟ್ಟಿದ್ದ ಬಂಗಾರದ ವಡವೆಗಳನ್ನು ನೋಡಿದಾಗ ಅವುಗಳು ಇಟ್ಟಿರುವ ಸ್ಥಳದಲ್ಲಿ ಇದ್ದಿರುವದಿಲ್ಲ, ಈ ಮಧ್ಯ ಅವಧಿಯಲ್ಲಿ ಯಾರೋ ಹೊಸಬರು ಮನೆಗೆ ಬಂದಿರುವದಿಲ್ಲ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮರಿಯಮ್ಮ @ ಮೇರಿ ಇವಳ ಮೇಲೆ ಸಂ±Àಯ ಇರುತ್ತದೆ, ಅವಳು ದಿನಾಂಕ 16-12-2019 ರಿಂದ ಕೆಲಸ ವiÁಡುವದನ್ನು ಬಿಟ್ಟು ಹೋಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 12/2020, ಕಲಂ. 457, 380
ಐಪಿಸಿ :-
ಯಾರೋ
ಅಪರಿಚಿತ ಕಳ್ಳರು ದಿನಾಂಕ 25-01-2020 ರಂದು 1300 ಗಂಟೆಯಿಂದ 1330 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿ ಪ್ರಶಾಂತ ತಂದೆ ಅರ್ಜುನರಾವ ಅರಳಿ ವಯ: 29 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ದುಬಲಗುಂಡಿ ರವರ ಮನೆಯ ಹಾಲ್ ರೂಮಿನ ಮೇನ್ ಗೇಟ್ ಕೀಲಿ ಮುರಿದು ಬೇಡ್ ರೂಮಿನಲ್ಲಿಟ್ಟಿದ್ದ ಕಬ್ಬಿಣದ ಪೆಟ್ಟಿಗೆಯ ಕೊಂಡಿ ತೆಗೆದು ಅದರಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನUÀದು ಹಣ ಸೇರಿ ಒಟ್ಟು 22,500/- ರೂ. ಬೆಲೆ ಬಾಳುವುದು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 29-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 12/2020, ಕಲಂ. 41 (ಡಿ),
102 ಸಿ.ಆರ್.ಪಿ.ಸಿ ಮತ್ತು 379 ಐಪಿಸಿ :-
ದಿನಾಂಕ 28-01-2020 ರಂದು
ರವಿಕುಮಾರ ಪಿಎಸಐ (ಕಾಸು) ಹುಮನಾಬಾದ ಪೊಲೀಸ ಠಾಣೆ ರವರು ಹುಮನಾಬಾದ ಪಟ್ಟಣದ ವೀರಭದ್ರೇಶ್ವರ ಜಾತ್ರೆ ಬಂದೋಬಸ್ತ ಕರ್ತವ್ಯ ಕುರಿತು ಪಟ್ಟಣದ ಯಾತ್ರಿ ನಿವಾಸಿ ಕಟ್ಟಡದ ಹತ್ತಿರ ಹೋದಾಗ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು ಸಿಬ್ಬಂದಿಯವರ ಸಹಾಯದಿಂದ ಅವರಿಗೆ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ರಫೀಕ ತಂದೆ ಖಾಜಾ ಶಾ ಸಾ: ರಾಣೆಸ್ ಪೀರ ಸಾ: ಕಲಬುರ್ಗಿ, 2) ಮಹ್ಮದ ¸Àಮೀರ ತಂದೆ ಅಬ್ದುಲ ಮಜೀದ, ಸಾ: ಖಾಜಾ ಕಾಲೋನಿ ಕಲಬುರ್ಗಿ ಅಂತಾ ತಿಳಿಸಿ ಅವರು ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇರುವದರಿಂದ ಅವರಿಗೆ ವಿಚಾರಣೆ ಕುರಿತು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಲು ಅವರು ದಿನಾಂಕ 26-01-2020 ರಂದು ಕಲಬುರ್ಗಿಯಿಂದ ಹುಮನಾಬಾದಕ್ಕೆ ಬಂದು ಜಾತ್ರೆಯಲ್ಲಿ ವೀರಭಧ್ರೇಶ್ವರ ಮಂದಿರ ಮುಂದಗಡೆ ಹೆಚ್ಚಿನ ಜನರು ಇರುವದನ್ನು ನೋಡಿ ಜನರ ಮದ್ಯ ಹೋಗಿ ನಾವು ಮೋಬೈಲ ಕಳವು ಮಾಡಿರುತ್ತೇವೆ ಅಂತಾ ಹೇಳಿದ್ದರಿಂದ ಕತ್ತಲಾಗಿರುವದರಿಂದ ಅವರಿಗೆ ಠಾಣೆಯಲ್ಲಿ ಕೂಡಿಸಿ ದಿನಾಂಕ 29-01-2020 ರಂದು ಪಂಚರ ಸಮಕ್ಷಮ ಸದರಿ ಆರೋಪಿತರು ಕಳವು ಮಾಡಿದ ತಲಾ ಎರಡೇರಡು ಮೋಬೈಲಗಳು ತೆಗೆದು ಹಾಜರ ಪಡಿಸಿರುವದನ್ನು ಪಂಚರು ಹಾಗೂ ಪೊಲೀಸರು ರಫೀಕ ಇವನ ಹತ್ತಿರ ಇರುವ 1) ಒಂದು ಅ.ಕಿ 3000/- ರೂ. ಮತ್ತು 2) ಇನ್ನೊಂದು ಅ.ಕಿ 1200/- ರೂ. ಇದ್ದವು, ನಂತರ ಮಹ್ಮದ ಸಮೀರ ಇವನು ತನ್ನ ಹತ್ತಿರ ಇರುವ ಎರಡು ಮೋಬೈಲ್ ಹಾಜರ ಪಡಿಸಿದ್ದು ಅವುಗಳನ್ನು ಪರೀಶಿಲಿಸಿ ನೋಡಲು 1) ಒಂದು ಕಪ್ಪು ಬಣ್ಣದ ಎಂ.ಐ ಮೋಬೈಲ ಅ.ಕಿ 2000/- ರೂ ಮತ್ತು 2) ಒಂದು ಗೋಲ್ಡನ ಕಲರ ಸ್ಯಾಮಸಾಂಗ ಮೋಬೈಲ ಅ.ಕಿ 3000/- ರೂ. ಸದರಿ 4 ಮೋಬೈಲಗಳು ಜಪ್ತಿ ಮಾಡಿಕೊಂಡು, ಸದರಿಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.