Police Bhavan Kalaburagi

Police Bhavan Kalaburagi

Wednesday, January 1, 2020

BIDAR DISTRICT DAILY CRIME UPDATE 01-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-01-2020

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 214/2019, ಕಲಂ. 380, 457 ಐಪಿಸಿ :-
ದಿನಾಂಕ 31-12-2019 ರಂದು ರಾತ್ರಿ ಅಂದಾಜು 0240 ಗಂಟೆಯ ಸುಮಾರಿಗೆ ಯಾರೋ ಅಪರಿಚಿತ ಕಳ್ಳನು ಫಿರ್ಯಾದಿ ರವೀಂದ್ರ ತಂದೆ ಮನೋಹರರಾವ ಪಾಟೀಲ ವಯ: 46 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ಪ್ಲಾಟ ನಂ. 72 ಬಸವನಗರ ಬೀದರ ರವರ ಮನೆಯ ಬಾಗಿಲು ಕೊಂಡಿ ತೆಗೆದು ಒಳಗೆ ಬಂದು ಮೇಲಿನ ರೂಮಿನಲ್ಲಿ ಹೋಗಿ ಅಲಮಾರಿಯಲ್ಲಿರುವ 1) ಬಂಗಾರದ ಮುತ್ತಿನ ಸರ 5 ತೊಲೆ .ಕಿ. 2,00,000/- ರೂ., 2) ಬಂಗಾರದ ಚೈನ ಸರ 5 ತೊಲೆ .ಕಿ. 2,00,000/- ರೂ., 3) ಬಂಗಾರದ ಒಂದು ಲಕ್ಷ್ಮೀ ಸರ 10 ತೊಲೆ .ಕಿ 4,00,000/- ರೂ., 4) ಬಂಗಾರದ ನೆಕ್ಲೆಸ ಸರ 3 1/2 ತೊಲೆ .ಕಿ 1,40,000/- ರೂ., 5) ಬಂಗಾರದ ಲಾಕೇಟ 4 ತೊಲೆ .ಕಿ. 1,60,000/- ರೂ., 6) ಬಂಗಾರದ ಒಂದು ಜೊತೆ ಕಂಗನ 3 ತೊಲೆ .ಕಿ. 1,20,000/- ರೂ., 7) 2 ಬಂಗಾರದ ಪಾಟ್ಲಿ 5 ತೊಲೆ .ಕಿ 2,00,000/- ರೂ., 8) ಬಂಗಾರದ ಗಂಟನ 5 ತೊಲೆ .ಕಿ. 2,00,000/- ರೂ., 9) ತಾಳಿ ಸರ ಕರಿಮಣಿ ಸಹಿತ 1/2 ತೊಲೆ .ಕಿ 20,000/- ರೂ., 10) ಸಣ್ಣ ಬಳೆಗಳು ಮತ್ತು ಕಡಗಳು 6 ತೊಲೆ .ಕಿ 2,40,000/- ರೂ., 11) ಬಂಗಾರದ ಕಿವಿ ಓಲೆ ಝಮಕ ಸಹಿತ 1 ತೊಲೆ .ಕಿ. 40,000/- ರೂ., 12) ಒಂದು ಲಾಕೇಟ 1/2 ತೊಲೆ .ಕಿ. 20,000/- ರೂ., 13) ಪೆಂಡೆಂಟ 2 ಜೊತೆ 3 ಗ್ರಾಂ .ಕಿ. 12,000/- ರೂ., 14) ಸ್ಯಾಮಸಾಂಗ ಮೋಬೈಲ್ ಆನ್-8 .ಕಿ. 15,000/- ರೂ., 15) ಒಂದು ಪೆನ್ನ .ಕಿ. 300/- ರೂ. ಹೀಗೆ ಒಟ್ಟು  19,67,300/- ರೂ. ಬೆಲೆ ಬಾಳುವ ಬಂಗಾರದ ಒಡವೆಗಳು ಹಾಗೂ ಒಂದು ಮೊಬೈಲ & ಪೆನ್ನು ಕಳ್ಳ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 53/2019, ಕಲಂ. 498(), 323, 504, 506, 307 ಜೊತೆ 34 ಐಪಿಸಿ :-
ಫಿರ್ಯಾದಿ ಮಲ್ಲಿಕಾಜುರ್ನ ತಂದೆ ಬಾಬುರಾವ ತುಳೆ ವಯ: 53 ವರ್ಷ, ಜಾತಿ: ಎಸ್.ಸಿ ಗೊಂಡಾ, ಸಾ: ಗೊರಚಿಂಚೊಳಿ, ತಾ: ಭಾಲ್ಕಿ, ಜಿ: ಬೀದರ ರವರ ಮಗಳಾದ ರಾಜೇಶ್ವರಿ ಇವಳ ಮದುವೆಯು ಸುಮಾರು 14 ವರ್ಷಗಳ ಹಿಂದೆ ಹಾಲಹಳ್ಳಿ ಗ್ರಾಮದ ಗುರುನಾಥ ಶಾಹು ರವರ ಮಗನಾದ ವಿಠ್ಠಲ್ ರವರ ಜೊತೆಯಲ್ಲಿ ಆಗಿರುತ್ತದೆ, ಅವಳಿಗೆ 3 ಜನ ಮಕ್ಕಳು ಇರುತ್ತಾರೆ, ವಿಠ್ಠಲ್ ಇತನು ಸೆಲ್ಸ್ಮೆನ್ ಕೆಲಸ ಮಾಡುತ್ತಾನೆ, ಆತನು ತನ್ನ ಹೆಂಡತಿ ಮಕ್ಕಳೊಂದಿಗೆ ರಾಮ ನಗರದಲ್ಲಿ ವಾಸವಾಗಿದ್ದು,  ಆತನು ರಾಯಿ ಕುಡಿಯುವ ಚಟಕ್ಕೆ ಬಿದ್ದು ಮೇಲಿಂದ ಮೇಲೆ ರಾಜೇಶ್ವರಿ ಇವಳಿಗೆ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಅಲ್ಲದೇ ಹಿಂದೆಯು ಸಹ ಅವಳ ಕೊಲೆ ಮಾಡಲು ಕುತ್ತಿಗೆ ಒತ್ತಲು ಬಂದಿರುತ್ತಾನೆ, ಹಾಗೂ ಬೀದರದಲ್ಲಿದ್ದ ಅವನ ಚಿಕ್ಕಮ್ಮಳಾದ ಮಹಾನಂದಾ ಗಂಡ ತಾನಾಜಿ ಇವಳು ರಾಜೇಶ್ವರಿ ಇವಳ ಮನೆಗೆ ಮೇಲಿಂದ ಮೇಲೆ ಬಂದು ರಾಜೇಶ್ವರಿ ಇವಳಿಗೆ ಅವಾಚ್ಯ ಶಬ್ದಗಳಿಂದ ಬೈದು ವಿಠ್ಠಲ ಇತನಿಗೆ ನೀನು ಅವಳಿಗೆ ಏಕೆ ಮನೆಯಲ್ಲಿ ಇಟ್ಟುಕೊಂಡಿದ್ದಿ ಅವಳಿಗೆ ಬಿಟ್ಟು ಕೊಡು ಬೇರೆ ಮದುವೆ ಮಾಡುತ್ತೇನೆ ಅಂತ ಸಹ ಅವಳಿಗೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾಳೆ, ಅವಳ ಮಾತು ಕೇಳಿ ರಾಜೇಶ್ವರಿ ಇವಳಿಗೆ ವಿಠ್ಠಲ್ ಇತನು ಹೊಡೆ ಬಡೆ ಮಾಡಿ ತುಂಬಾ ತೊಂದರೆ ಕೊಟ್ಟು ಜೀವ ಸಮೇತ ಬಿಡುವದಿಲ್ಲ ಹೊಡೆದು ಹಾಕುತ್ತೇವೆ ಅಂತ ಅವಳಿಗೆ ಜೀವದ ಬೆದರಿಕೆ ಹಾಕಿರುತ್ತಾರೆ, ಹೀಗಿರುವಾಗ ದಿನಾಂಕ 31-12-2019 ರಂದು ಸೊಶಿಯಲ್ ಮಿಡಿಯಾದಲ್ಲಿ ಅಪರಿಚಿತ ಹೆಣ್ಣು ಮಗಳು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಅಂತ ಮಾಹಿತಿ ದೊರೆತ ತಕ್ಷಣ ಅದರಲ್ಲಿನ ಫೋಟೊವನ್ನು ನೋಡಿಕೊಂಡು ಅವಳಿಗೆ ಗುರುತಿಸಿ ತಕ್ಷಣ ಫಿರ್ಯಾದಿಯು ತನ್ನ ಹೆಂಡತಿ ಮತ್ತು ಮಗನೊಂದಿಗೆ ಕೂಡಿಕೊಂಡು ಬೀದರ ಸರ್ಕಾರಿ ಆಸ್ಪತ್ರೆಗೆ ಬಂದು .ಸಿ. ರೂಮಗೆ ಹೋಗಿ ನೋಡಲಾಗಿ, ರಾಜೇಶ್ವರಿ ಇವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅಲ್ಲದೇ ಅವಳ ಕುತ್ತಿಗೆಯ ಸುತ್ತಲು ಒಂದು ಪ್ಲಾಸ್ಟಿಕ್ ವೈರದಿಂದ ಬಿಗಿದ ಹಾಗೆ ಗಾಯ ಕಂಡು ಬಂದಿರುತ್ತದೆ, ರಾಜೇಶ್ವರಿ ಇವಳಿಗೆ ಅವಳ ಗಂಡ ವಿಠ್ಠಲ್ ಹಾಗು ವಿಠ್ಠಲನ ಚಿಕ್ಕಮ್ಮಳಾದ ಮಹಾನಂದಾ ಇವರಿಬ್ಬರೂ ಕೂಡಿ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಅವಳ ಕುತ್ತಿಗೆಗೆ ಬಿಗಿದು ಅವಳಿಗೆ ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ಓಡಿ ಹೋಗಿರುತ್ತಾರೆ, ಆಸ್ಪತ್ರೆಯಲ್ಲಿ ಅವಳಿಗೆ ಅಪರಿಚಿತಳು ಎಂದು ನೊಂದಣಿ ಆಗಿರುತ್ತದೆ, ಅವಳು ಇನ್ನು ಮಾತನಾಡದೆ ಆಸ್ಪತ್ರೆಯಲ್ಲಿ ಸಾವು ನೋವಿನ ಮದ್ಯ ಇರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 97/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 31-12-2019 ರಂದು ಫಿರ್ಯಾದಿ ಗುಂಡಮ್ಮಾ ಗಂಡ ಶಿವಾನಂದ ಜಮಾದಾರ ವಯ: 50 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಕೊಹಿನೂರ ಗ್ರಾಮ ರವರು ತಮ್ಮೂರ ಕರುಣಾಬಾಯಿ ಗಂಡ ಸಿದ್ರಾಮಪ್ಪಾ ರಾಯಜಿ, ಸಂತೋಷ ತಂದೆ ಶ್ರೀಮಂತ ಪೂಜಾರಿ ರವರು ಕೂಡಿಕೊಂಡು ಹೊಲದಲ್ಲಿ ಬೆಳೆದಿರುವ ತೊಗರಿ ಬೆಳೆಯನ್ನು ಕಟಾವು ಮಾಡುವ ಕುರಿತು ಕೊಹಿನೂರ-ಸಲಗರ ಟಾರ ರೋಡ ಹಿಡಿದುಕೊಂಡು ಹೊಲಕ್ಕೆ ಹೋಗುತ್ತಿರುವಾಗ ಮ್ಮೂರ ಸಚೀನ ಪಾಟೀಲ್ ರವರ ಹೊಲದ ಹತ್ತಿರ ಎದರುಗಡೆಯಿಂದ ಅಂದರೆ ಸಲಗರ ಕಡೆಯಿಂದ ದ್ವೀಚಕ್ರ ವಾಹನ ಸಂ. ಕೆಎ 53/ಇಟಿ 5912 ನೇದ್ದರ ಚಾಲಕನಾದ ಆರೋಪಿಯು  ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಫಿರ್ಯಾದಿಯವರ ಹಣೆಯ ಎಡಭಾಗದ ಮೇಲೆ ರಕ್ತಗಾಯ ಹಾಗೂ ಬಲಗಾಲಿನ ಮೊಳಕಾಲಿನ ಕೆಳಗೆ ಮೂಳೆ ಮುರಿದು ಭಾರಿ ಸ್ವರೂಪದ ಗುಪ್ತಗಾಯವಾಗಿದ್ದರಿಂದ ಫಿರ್ಯಾದಿಯವರ ಮಗ ಶರಣಪ್ಪಾ ಈತನು ಸ್ಥಳಕ್ಕೆ ಬಂದು ನೋಡಿ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಮಂಠಾಳ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆಯ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.