Police Bhavan Kalaburagi

Police Bhavan Kalaburagi

Friday, April 9, 2021

BIDAR DISTRICT DAILY CRIME UPDATE 09-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-04-2021

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 29/2021, ಕಲಂ. 302, 201 ಐಪಿಸಿ :-

ದಿನಾಂಕ 07-04-2021 ರಂದು 2100 ಗಂಟೆಯಿಂದ ದಿನಾಂಕ 08-04-2021 ರಂದು 0600 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಝರೇಮ್ಮಾ ಗಂಡ ಲಕ್ಷ್ಮಕುಪ್ಪೆ ವಯ: 65 ವರ್ಷ, ಜಾತಿ: ಗೊಂಡ, ಸಾ: ಹಾಲಹಿಪ್ಪರ್ಗಾ ರವರ ಹೊಲದ ಬಾವಿಯ ಹತ್ತಿರ ಯಾರೋ ಅಪರಿಚಿತರು ಯಾವುದೋ ಹರೀತವಾದ ವಸ್ತುವಿನಿಂದ ಫಿರ್ಯಾದಿಯವರ ಗಂಡ ಲಕ್ಷ್ಮಣ ತಂದೆ ಹಣಮಂತ ಕುಪ್ಪೆ ವಯ: 70 ವರ್ಷ, ಜಾತಿ: ಗೊಂಡ, ಸಾ: ಹಾಲಹಿಪ್ಪರ್ಗಾ ರವರ ಮುಖದ ಮೇಲೆ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಬಾವಿಯಲ್ಲಿ ಬಿಸಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹೊಕ್ರಾಣ ಪೊಲೀಸ ಠಾಣೆ ಅಪರಾಧ ಸಂ. 13/2021, ಕಲಂ. 457, 380 ಐಪಿಸಿ :-

ದಿನಾಂಕ 07-04-2021 ರಂದು 2330 ಗಂಟೆಯಿಂದ ದಿನಾಂಕ 08-04-2021 ರಂದು 0130 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ವಿಷ್ಣುಕಾಂತ ತಂದೆ ಬಾಲಾಜಿ ಬಿರಾದಾರ ಸಾ: ಚೊಂಡಿಮುಖೇಡ, ತಾ: ಕಮಲನಗರ ರವರ ಮನೆಯ ಬಾಗಿಲಿನ ಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲ್ಮಾರದ ಲಾಕರ್ ಕಬ್ಬಿಣದ ರಾಡನಿಂದ ಮುರಿದು ಅಲ್ಮಾರದಲ್ಲಿನ 1) ಝೂಮ್ಕಾ 7 ಗ್ರಾಂ ಅ.ಕಿ 7,000/- ರೂ., 2) 10 ಗ್ರಾಂ ಬಂಗಾರದ ಗುಂಡುಸರ ಅ.ಕಿ 15,000/- ರೂ., 3) 07 ಗ್ರಾಂ ಬಂಗಾರದ ಝೂಮ್ಕಾ ಅ.ಕಿ 10,000/- ರೂ., 4) 30 ಗ್ರಾಂ ಬಂಗಾರದ ಪಾಟಲಿ ಅ.ಕಿ 1,40,000/- ರೂ., 5) 07 ಗ್ರಾಂ ಬಂಗಾರದ ಝೂಮ್ಕಾ ಅ.ಕಿ 15,000/- ರೂ., 6) 15 ಗ್ರಾಂ ಬಂಗಾರದ ನೆಕ್ಲೇಸ್ ಅ.ಕಿ 50,000/- ರೂ., 7) 10 ತೊಲೆಯ ಬೆಳ್ಳಿಯ ಕಾಲು ಚೈನ್ ಅ.ಕಿ 4,000/- ರೂ. ಹಾಗೂ 8) ನಗದು ಹಣ 1,75,000/- ರೂಪಾಯಿ ಹೀಗೆ ಒಟ್ಟು 4,16,000/- ಬಂಗಾರ & ಬೆಳ್ಳಿಯ ವಡವೆಗಳು ಹಾಗು ನಗದು ಹಣ ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲಿಸ್ ಠಾಣೆ ಅಪರಾಧ ಸಂ. 44/2021, ಕಲಂ. 392 ಐಪಿಸಿ :-

ದಿನಾಂಕ 08-04-2020 ರಂದು ಫಿರ್ಯಾದಿ ಉಷಾ ಗಂಡ ಸಂಜೀವರಡ್ಡಿ ಗೋಲಂಪಲ್ಲೆ ವಯ: 47 ವರ್ಷ, ಜಾತಿ: ರಡ್ಡಿ, ಸಾ: ಹಿರೇಮಠ ಕಾಲೋನಿ ಬಸವಕಲ್ಯಾಣ ರವರು ತನ್ನ ತಂಗಿಯಾದ ಜ್ಯೋತಿ ಇಬ್ಬರೂ ಮ್ಮ ಮನೆಯಿಂದ ಕಿರಾಣಿ ಸಾಮಾನುಗಳನ್ನು ತರುವಗೋಸ್ಕರ ಶಾಂತನಿಕೇತನ ಶಾಲೆಯ ಆವರಣದ ಮಾರ್ಗವಾಗಿ ವೀರಭದ್ರೇಶ್ವರ ಟ್ರೇಡರ್ಸ ಕಡೆಗೆ ಹೋಗುವಾಗ ವೀರಭದ್ರೇಶ್ವರ ಟ್ರೇಡರ್ಸ ಎದುರುಗಡೆ ರೋಡಿನ ಮೇಲೆ ಟೂರಿಸ್ಟ್ಲಾಡ್ಜ ರೋಡ್ ಕಡೆಯಿಂದ ಎದುರಿನಿಂದ ಒಂದು ಮೋಟಾರ ಸೈಕಲ್ ಮೇಲೆ ಇಬ್ಬರೂ ಅಪರಿಚಿತ ವ್ಯಕ್ತಿಗಳು ಕುಳಿತುಕೊಂಡು ಫಿರ್ಯಾದಿಯವರ ಹತ್ತಿರ ಬಂದು ಮೋಟಾರ ಸೈಕಲ್ ಸ್ವಲ್ಪ ನಿಧಾನ ಮಾಡಿ ಮೋಟಾರ ಸೈಕಲ್ ಹಿಂದೆ ಕುಳಿತಿದ್ದ ವ್ಯಕ್ತಿ ಫಿರ್ಯಾದಿಯವರ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ 5 ತೊಲೆ ಬಂಗಾರದ ಗಂಟನ್ ಅ.ಕಿ 2,35,000/- ರೂ. ನೇದನ್ನು ಎಳೆದು ದೋಚಿಕೊಂಡು ಮೋಟಾರ ಸೈಕಿಲ್ ಸಮೇತ ಓಡಿಸಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 63/2021, ಕಲಂ. 379 ಐಪಿಸಿ :-

ಫಿರ್ಯಾದಿ ಶಿವಕುಮಾರ ತಂದೆ ಶಿವರಾಜ ವಯ: 36 ವರ್ಷ, ಜಾತಿ: ಹಡಪದ, ಸಾ: ಅಲಿಯಂಬರ, ತಾ: ಜಿ: ಬೀದರ ದಿನಾಂಕ 27-03-2021 ರಂದು 1030 ಗಂಟೆಗೆ ಸರಕಾರಿ ಬಾಲಕರ ವಸತಿ ನೀಲಯ ಭಾಲ್ಕಿ ನೇದರ ಎದುರುಗಡೆ ತನ್ನ ಫ್ಯಾಷನ ಪ್ರೋ ಮೋಟರ ಸೈಕಲ ನಂ. ಕೆ.-01/ಇ/ಝಡ್-0829 ನೇದನ್ನು ಇಟ್ಟು ಜೈಭವಾನಿ ಮಲ್ಟಿ ಸರ್ವಿಸ್ ಅಂಗಡಿಯಲ್ಲಿ ಹೋಗಿ 1115 ಗಂಟೆಗೆ ಮರಳಿ ಬಂದು ನೋಡಲು ಸದರಿ  ಮೋಟರ ಸೈಕಲ್ ಇರಲಿಲ್ಲ, ಸದರಿ ಮೋಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 08-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 35/2021, ಕಲಂ. 279, 337, 338 ಐಪಿಸಿ :-

ದಿನಾಂಕ 08-04-2021 ರಂದು ಫಿರ್ಯಾದಿ ಮೊಹಮ್ಮದ ಯಾಸೀರ್ ತಂದೆ ಮೊಹಮ್ಮದ ಹುಸೇನ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 14-1-68/1, ಮಂಗಲಹಟ ಸೀತಾರಾಮಪೇಟ ಹೈದ್ರಾಬಾದ ರವರು ತನ್ನ ಗೆಳೆಯನಾದ ಮೊಹಮ್ಮದ ಉಜೈರ್ ತಂದೆ ಮೊಹಮ್ಮದ ಅರ್ಷದ ಹುಸೇನ ಸಾ: ಮಂಗಲಹಟ  ಸೀತಾರಾಮಪೇಟ ಹೈದ್ರಾಬಾದ ಇವನು ಚಲಾಯಿಸುತ್ತಿದ್ದ ಕಾರ್ ಸಂ. ಟಿ.ಎಸ್-09/ಇ.ಎಫ್-9056 ನೇದರಲ್ಲಿ ನ್ನ ಗೆಳೆಯರಾದ ಅಫರೊಜಖಾನ ತಂದೆ ಈಕ್ಬಾಲಖಾನ,  ಅಬ್ದುಲ ಕವಿ ತಂದೆ ಅಬ್ದುಲ ಖಯೂಮ ಸಾ: ಮಂಗಲಹಟ ಸೀತಾರಾಮಪೇಟ ಮೂವರು ಕುಳಿತುಕೊಂಡು ಹೈದ್ರಾಬಾದನಿಂದ ಹುಮನಾಬಾದ ಮಾರ್ಗವಾಗಿ ಕಲಬುರಗಿ ಖಾಜಾ ಬಂದೇನವಾಜ ದರ್ಗಾಕ್ಕೆ ಹೋಗುತ್ತಿರುವಾಗ ಮೊಹಮ್ಮದ ಉಜೈರ್ ಇವನು ತಾನು ಚಲಾಯಿಸುತ್ತಿದ್ದ ಕಾರನ್ನು ರಾ.ಹೆದ್ದಾರಿ-50 ಹುಮನಾಬಾದ - ಕಲಬುರಗಿ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹುಮನಾಬಾದನ ಕೈಗಾರಿಕಾ ಪ್ರದೇಶದ ಆರ್.ಕೆ.ಎಮ್ ಕೆಮಿಕಲ್ ಕಂಪನಿ ಹತ್ತಿರ ಹೋದಾಗ ಎದುರಿನಿಂದ ಅಂದರೆ ಕಲಬುರಗಿ ಕಡೆಯಿಂದ ಕಾರ್ ನಂ. ಕೆಎ-05/ಎನ್-ಎ-0500 ನೇದರ ಚಾಲಕನಾದ ಆರೋಪಿ ಶಣಮುಖ ತಂದೆ ಈರಣ್ಣಾ ಸಜ್ಜನಶೆಟ್ಟಿ ಸಾ:  ಯಳವಾ,  ತಾ: ಜೇವರ್ಗಿ, ಜಿ: ಕಲಬುರಗಿ ಇತನು ತನ್ನ ಕಾರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಾಗ ಇಬ್ಬರು ಮುಖಾಮುಖಿ ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಅಪಘಾತದಿಂದ ಫಿರ್ಯಾದಿಯ ಮೂಗಿನ ಮೇಲೆ ಸಾದಾ ರಕ್ತಗಾಯವಾಗಿರುತ್ತದೆ, ಅಫರೊಜಖಾನ ಇವನಿಗೆ ಎಡಗಾಲ ತೊಡೆಗೆ ತೀವ್ರ ಗುಪ್ತಗಾವಾಗಿರುತ್ತದೆ, ಅಬ್ದುಲ ಕವಿ ಇವನಿಗೆ ತಲೆಗೆ, ಬಲಗೈಗೆ ಸಾದಾ ಗುಪ್ತಗಾಯ ಮತ್ತು ಬಲಗಾಲ ಮೊಣಕಾಲ ಕೆಳಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ಮೊಹಮ್ಮದ ಉಜೈರ್ ಇವನಿಗೆ ಸೊಂಟಕ್ಕೆ, ಎರಡು ಕಾಲುಗಳಿಗೆ ಸಾದಾ ಗುಪ್ತಗಾಯಗಳು ಆಗಿರುತ್ತವೆ, ಡಿಕ್ಕಿ ಮಾಡಿದ ಕಾರನಲ್ಲಿದ್ದ ಪ್ರಯಾಣಿಕರಿಗೆ ನೋಡಲಾಗಿ ಆರೋಪಿ ಶಣಮುಖ ಇವನಿಗೆ ಮೂಗಿನ ಮೇಲೆ ತರಚಿದ ರಕ್ತಗಾವಾಗಿರುತ್ತದೆ, ಸಿದ್ದಾರ್ಥ ತಂದೆ ಅಶೋಕ ಸಜ್ಜನಶೆಟ್ಟಿ ಸಾ: ಯಳವಾರ ಇತನ ಬಲಗೈಗೆ ತೀವ್ರ ಗುಪ್ತಗಾಯವಾಗಿರುತ್ತದೆ, ಸಂಗೀತಾ ಗಂಡ ಅಶೋಕ ಸಜ್ಜನಶೆಟ್ಟಿ ಸಾ: ಯಳವಾರ ರವರ ಬಲಗೈಗೆ ತೀವ್ರ ಗುಪ್ತಗಾಯವಾಗಿರುತ್ತದೆ,  ವಿಜಯಕುಮಾರ ತಂದೆ ದಂಡಪ್ಪಾಗೌಡ ಪೊಲೀಸ ಪಾಟೀಲ್ ಸಾ:  ಲಕ್ಷ್ಮೀ ಚೌಕ ಹತ್ತಿರ ಜೇವರ್ಗಿ ಇತನ ತಲೆಗೆ,  ಮುಖಕ್ಕೆ ಸಾದಾ ರಕ್ತಗಾಯ ಮತ್ತು ಬಲಗೈಗೆ ಸಾದಾ ಗುಪ್ತಗಾಯಗಳು ಆಗಿರುತ್ತವೆ ನಂತರ ಎಲ್ಲರು ಚಿಕಿತ್ಸೆ ಕುರಿತು 108 ಆಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.