ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-02-2021
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 02/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 05-02-2021 ರಂದು ಫಿರ್ಯಾದಿ ನಿರ್ಮಲಾ ಗಂಡ ರಾಜಪ್ಪಾ ಲಂಬನೋರ ವಯ: 30 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿಂಧನಕೇರಾ ರವರ ಗಂಡನಾದ ರಾಜಪ್ಪಾ ತಂದೆ ತುಕರಾಮ ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿಂಧನಕೇರಾ ಇತನು ಈತನು ಈ ವರ್ಷ ಮಳೆ ಹೆಚ್ಚಾಗಿ ಬೆಳೆ ಹಾಳಾಗಿದ್ದರಿಂದ ಹಾಗು ಖಾಸಗಿ ಸಾಲ, ಬ್ಯಾಂಕ ಸಾಲ ತೀರಿಸಲಾಗದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ತಗಡದ ಕೆಳಗೆ ಹಾಕಿದ ಕಟ್ಟಿಗೆ ಸರಕ್ಕೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಈ ಬಗ್ಗೆ ಯಾರ ಮೇಲೆ ಯಾವದೇ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 22/2021, ಕಲಂ. 457, 457, 380 ಐಪಿಸಿ :-
ದಿನಾಂಕ 23-12-2020 ರಂದು 1930 ಗಂಟೆಯಿಂದ ದಿನಾಂಕ 24-12-2020 ರಂದು 1700 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಸಂತೋಷ ತಂದೆ ಶರಣಪ್ಪಾ ಕಿವಡೆ ವಯ: 36 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 30 ಶ್ರೀ ಕಾಲೋನಿ 6 ನೇ ಕ್ರಾಸ ಚಿಟ್ಟಾ ರಸ್ತೆ ಗುಂಪಾ ಬೀದರ ರವರ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿನ 1) ಲೇನೊವಾ ಕಂಪನಿಯ ಲ್ಯಾಪಟಾಪ ಅ.ಕಿ 40,000/- ಉ್ಪ್ರ., 2) ಡೇಲ ಲ್ಯಾಪಟಾಪ ಅ.ಕಿ 10,000/- ರೂ., 3) ಹುವಾಯಿ ಕಂಪನಿಯ ಮೋಬೈಲ ಅ.ಕಿ 15,000/- ರೂ., 4) ಹಾರ್ಡ ಡ್ರೈವ್ 01 ಟಿ.ಬಿ ಸ್ಕ್ಯಾನ್ ಡಿಸ್ಕ ಕಂಪನಿ ಅ.ಕಿ 4500/- ರೂ., 5) ಅಮೇರಿಕಾ ದೇಶದ ಡಾಲರ 1100 ಡಾಲರ ಅ.ಕಿ 77,000/- ರೂ., 6) ಫಿರ್ಯಾದಿಯವರ ಪಾಸಪೊರ್ಟ ಸಂ. ಹೆಚ್-8686841, ಹೀಗೆ ಒಟ್ಟು 1,46,500/- ರೂಪಾಯಿ ಬೇಲೆ ಬಾಳುವ ವಸ್ತುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಕಲಾವತಿ ಗಂಡ ಅಣೇಪ್ಪಾ ಕುಡಂಬಲ ವಯ: 52 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಮರ್ಜಾಪುರ(ಎಂ) ಗ್ರಾಮ, ತಾ: ಜಿ: ಬೀದರ ರವರ ಕೊನೆಯ ಮಗಳಾದ ಉಷಾ ತಂದೆ ಅಣೇಪ್ಪಾ ಕುಡಂಬಲ್ ವಯ: 20 ವರ್ಷ ಇವಳು 9ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಉಷಾ ಇವಳಿಗೆ ಔರಾದ(ಎಸ್) ಗ್ರಾಮದ ಶಿವಕುಮಾರ ತಂದೆ ಭೀಮಶಾ ಭೈರನಳ್ಳಿಕರ್ ರವರಿಗೆ ಮದುವೆ ಮಾಡಿಕೊಡುವುದಾಗಿ ಮಾತುಕತೆಯಾಗಿರುತ್ತದೆ, ಶಿವಕುಮಾರ ಇತನು ಬೀದರನಲ್ಲಿ ಜೂಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾನೆ, ಉಷಾ ಇವಳು ಆಗಾಗ ಬೀದರಗೆ ಹೊಗಿ ಶಿವಕುಮಾರ ಇತನಿಗೆ ಭೇಟಿಯಾಗಿ ಬರುತ್ತಿದ್ದಳು, ಹೀಗಿರುವಾಗ ದಿನಾಂಕ 02-02-2021 ರಂದು 1400 ಗಂಟೆಯ ಸುಮಾರಿಗೆ ಉಷಾ ಇವಳು ಬೀದರಗೆ ಹೋಗಿ ಶಿವಕುಮಾರನಿಗೆ ಭೇಟಿಯಾಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿ ರಾತ್ರಿಯಾದರೂ ಸಹ ಮರಳಿ ಮನೆಗೆ ಬಂದಿರುವುದಿಲ್ಲಾ, ಆಗ ಫಿರ್ಯಾದಿಯು ಶಿವಕುಮಾರ ಇತನಿಗೆ ಕರೆ ಮಾಡಿ ಉಷಾ ಮನೆಗೆ ಬಂದಿಲ್ಲಾ ಎಲ್ಲಿದ್ದಾಳೆ ಅಂತ ಕೇಳಲು ಶಿವಕುಮಾರ ಇತನು ಇವತ್ತು ಉಷಾ ನನಗೆ ಭೇಟಿಯಾಗಲು ಬಂದಿರುವುದಿಲ್ಲಾ ಮತ್ತು ನಾನು ಅವಳಿಗೆ ಬರೋಕೆ ಹೇಳಿರುವುದಿಲ್ಲಾ, ಎಲ್ಲಿಗೆ ಹೊಗಿರುತ್ತಾಳೆ ಅಂತ ಹೇಳಿದ್ದು, ಆಗ ಫಿರ್ಯಾದಿಯು ಗಾಬರಿಗೊಂಡು ತನ್ನ ಮಗನೊಂದಿಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಎಲ್ಲಿಯೂ ಸಿಕ್ಕಿರುವುದಿಲ್ಲಾ, ನಂತರ ತಮ್ಮ ಸಂಬಂದಿಕರಿಗೆಲ್ಲರಿಗೂ ಕರೆ ಮಾಡಿ ವಿಷಯ ತಿಳಿಸಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ಕಾರಣ ಫಿರ್ಯಾದಿಯವರ ಮಗಳು ಮನೆಯಿಂದ ಬೀದರಗೆ ಹೊಗಿ ಬರುತ್ತೇನೆಂದು ಹೇಳಿ ಹೊಗಿ ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ಮಗಳ ಚಹರೆ ಪಟ್ಟಿ 1) ಎತ್ತರ: 4 ಫೀಟ್ 8 ಇಂಚ, 2) ಮೈ ಬಣ್ಣ: ಗೋಧಿ ಮೈ ಬಣ್ಣ, 3) ಮುಖ: ದುಂಡು ಮುಖ, 4) ಮೈಕಟ್ಟು: ಸಾಧಾರಣ ಮೈಕಟ್ಟು 5) ಧರಿಸಿದ ಉಡುಪು: ಕರಿಯ ಬಣ್ಣದ ಪ್ಯಾಂಟ ಮತ್ತು ಹಳದಿ ಬಣ್ಣದ ಟಿ ಶರ್ಟ ಹಾಗೂ ಜಾಕೇಟ್ ಹಾಗೂ 6) ಮಾತಾಡುವ ಭಾಷೆ: ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 05-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 379 ಐಪಿಸಿ :-
ದಿನಾಂಕ 22-01-2021 ರಂದು 1945 ಗಂಟೆಯಿಂದ 2015 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ರಾಜಶೇಖರ ತಂದೆ ಮೋಹನರಾವ ಕ್ಷೀರಸಾಗರ ವಯ: 46 ವರ್ಷ, ಜಾತಿ: ಮರಾಠಾ, ಸಾ: ವೈಷ್ಣವಿ ಲೇಔಟ್ ಬಸವಕಲ್ಯಾಣ ರವರು ಅಭಿಷೇಕ ಟೇಲರ್ ಅಂಗಡಿಯ ಎದುರುಗಡೆ ನಿಲ್ಲಿಸಿದ ತನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. ಕೆಎ-56/ಜೆ-9252, ಚಾಸಿಸ್ ನಂ. ಎಮ್.ಇ.4.ಜೆ.ಸಿ.852.ಹೆಚ್.ಎಲ್.ಡಿ.058212, ಇಂಜಿನ್ ನಂ. ಜೆ.ಸಿ.85.ಇ.ಡಿ.0090440, ಮಾಡಲ್ 2020, ಅ.ಕಿ 49,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 05-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 25/2021, ಕಲಂ. 32(3) ಕೆ.ಇ ಕಾಯ್ದೆ :-
ದಿನಾಂಕ 05-02-2021 ರಂದು ಘಾಟಬೋರಳ ಗ್ರಾಮದದಲ್ಲಿರುವ ರೆಡ್ಡಿ ಧಾಬಾದಲ್ಲಿ ಅಶೋಕರೆಡ್ಡಿ ಎಂಬುವವನು ತನ್ನ ಧಾಬಾದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೊಟ್ಟಿರುತ್ತಾನೆಂದು ರವಿಕುಮಾರ ಪಿಎಸ್ಐ ಹುಮನಾಬಾದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಘಾಟಬೋರಳ ಗ್ರಾಮಕ್ಕೆ ಹೋಗಿ ರೆಡ್ಡಿ ಧಾಬಾದ ಮುಂದೆ ಜೀಪ ನಿಲ್ಲಿಸಿದಾಗ ಸಮವಸ್ತ್ರದಲ್ಲಿ ನೋಡಿ ಒಬ್ಬನು ಓಡಿ ಹೋದನು ಹೊಟೇಲನಲ್ಲಿ ನೋಡಲು ಒಂದು ಟೇಬಲ್ ಮೇಲೆ ಸರಾಯಿ ಬಾಟಲ, ಪ್ಲಾಸ್ಟಿಕ್ ಗ್ಲಾಸಗಳು ಮತ್ತು ನೀರಿನ ಬಾಟಲ ಇದ್ದವು, ಅಲ್ಲೆ ಹಾಜರಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಆಶೋಕರೆಡ್ಡಿ ತಂದೆ ತಿಪ್ಪಾರೆಡ್ಡಿ ಚಿರಾಕೆ ವಯ: 38 ವರ್ಷ, ಜಾತಿ: ರೆಡ್ಡಿ, ಸಾ: ಘಾಟಬೋರಳ ಗ್ರಾಮ ಅಂತಾ ತಿಳಿಸಿ ಸದರಿ ದಾಬಾ ತನ್ನದೆ ಇರುತ್ತದೆ ಅಂತ ತಿಳಿಸಿದನು, ಅವನಿಗೆ ಸರಾಯಿ ಬಾಟಲಿ ಬಗ್ಗೆ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ತನ್ನ ಧಾಬಾದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೊಟ್ಟಿರುವುದು ಒಪ್ಪಿಕೊಂಡಿದ್ದು, ಅವನಿಗೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಕುರಿತು ಸರಕಾರದಿಂದ ಪರವಾನಿಗೆ ತೋರಿಸಲು ಹೇಳಿದಾಗ ಅವನು ತನ್ನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತ ತಿಳಿಸಿದನು ಮತ್ತು ಓಡಿ ಹೋದವರ ವಿಳಾಸ ವಿಚಾರಿಸಿದಾಗ ಅವರ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲಾ ಅಂತ ತಿಳಿಸಿದನು, ನಂತರ ಟೇಬಲ್ ಮೇಲಿನ 1) 180 ಎಂ.ಎಲ್ ನ ಒಂದು ಎಂ.ಸಿ ಅದರಲ್ಲಿ ಅರ್ದ ಖಾಲಿ ಅಗಿದ್ದು ಅ.ಕಿ 100/- ರೂ., 2) 1 ಪ್ಲಾಸ್ಟಿಕ್ ಗ್ಲಾಸ್ ಅ.ಕಿ 00 ಮತ್ತು 4) ಒಂದು ನೀರಿನ ಪ್ಲಾಸ್ಟಿಕ ಬಾಟಲ ಅ.ಕಿ 00=00 ನೇದವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.