ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು
ರಾತ್ರಿ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಕರಜಗಿ ಕ್ರಾಸ (ಸೋನ್ನ ಕ್ರಾಸ) ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದು ನಮ್ಮ ವಾಹನದ ಲೈಟಿನ ಬೆಳಕಿನಲ್ಲಿ ನೋಡಿ ನಮ್ಮ ವಾಹನವನ್ನು ನಿಲ್ಲಿಸಿ ಸದರಿ ಟ್ಯಾಕ್ಟರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರಗಳ ಚಾಲಕರು, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NHM2TAE1323 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NMHB03774 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಟ್ರ್ಯಾಕ್ಟರಗಳೊಂದಿಗೆ ಅಫಜಲಪೂರ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು
ರಾತ್ರಿ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ
ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಸೊನ್ನ ಹೊಸ ಊರಿನ ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದುದನ್ನು ನಮ್ಮ ವಾಹನದ ಲೈಟಿನ ಬೆಳಕಿನಲ್ಲಿ ನೋಡಿ ನಮ್ಮ ವಾಹನವನ್ನು ನಿಲ್ಲಿಸಿ ಸದರಿ ಟ್ಯಾಕ್ಟರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರಗಳ ಚಾಲಕರು, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NJCU1820 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ KA-32 TA-5946. ಇಂಜೆನ್ ನಂಬರ NNHY01037 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : 30-09-2018 ರಂದು ಬೆಳಿಗ್ಗೆ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ
ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಸೊನ್ನ ಕ್ರಾಸ ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದವು. ಸದರಿ ಟ್ಯಾಕ್ಟರ ಚಾಲಕರು ನಮ್ಮ ಇಲಾಖಾ ವಾಹನವನ್ನು ನೋಡಿ ಟ್ಯಾಕ್ಟರಗಳನ್ನು ಕರಜಗಿ ರೋಡಿನ ಕೆಡೆಗೆ ಸ್ಪೀಡಾಗಿ ನಡೆಸಿಕೊಂಡು ಹೊಗುತ್ತಿದ್ದರು. ಆಗ ನಾವು ಸದರಿ ಟ್ಯಾಕ್ಟರಗಳಿಗೆ ಚೇಜ್ ಮಾಡುತ್ತಿದ್ದಾಗ, ಟ್ಯಾಕ್ಟರ ಚಾಲಕರು ಟ್ಯಾಕ್ರಗಳನ್ನು ಬಳೂಂಡಗಿ ಕ್ರಾಸ ಹತ್ತಿರ ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NJCU3835 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ಇರುವುದಿಲ್ಲ. ಇಂಜೆನ್ ನಂಬರ NNHY07891 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಪೂರ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು
ಬೆಳಿಗ್ಗೆ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ
ಸೊನ್ನ ದೇವಣಗಾಂವ ಬ್ರೀಜ ಹತ್ತಿರ ಹೋಗುತ್ತಿದ್ದಂತೆ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಅದಕ್ಕೆ ಇನ್ನೊಂದು ಟ್ಯಾಕ್ಟರ ಇಂಜೆನ್ ಹಚ್ಚಿ ಎರಡು ಇಂಜೆನಗಳಿಂದ ನದಿಯ ದಡ ಏರಿಸುತ್ತಿದ್ದರು. ಸದರಿಯವರು ನಮ್ಮ ಇಲಾಖಾ ವಾಹನವನ್ನು ನೋಡಿ ಟ್ಯಾಕ್ಟರಗಳನ್ನು ಅಲ್ಲೆ ಬಿಟ್ಟು ಓಡಿ ಹೋದರು. ನಂತರ ಅಲ್ಲಿದ್ದ ಬಾತ್ಮಿದಾರರಿಗೆ ವಿಚಾರಿಸಲಾಗಿ, ಮರಳು ತುಂಬಿದ ಟ್ಯಾಕ್ಟರಗಳು ನದಿಯ ದಡ ಏರಲು ಕಷ್ಟವಾಗುತ್ತಿದ್ದರಿಂದ ಒಂದೋಂದು ಟ್ರೈಲಿಗೆ ಎರಡೆರಡು ಇಂಜೆನಗಳನ್ನು ಹಚ್ಚಿ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತಂದು ಮೇಲಿನಿಂದ ಒಂದೆ ಇಂಜೆನ್ ಮೂಖಾಂತರ ತಗೆದುಕೊಂಡು ಹೊಗುತ್ತಿದ್ದಾರೆ. ಸದರಿ ಟ್ಯಾಕ್ಟರ ಇಂಜೆನ್ ನನ್ನು ಮರಳು ತುಂಬಿದ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತರಲು ಬಳಸುತ್ತಿದ್ದಾರೆ ಅಂತಾ ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಒಂದು ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರ 1) ಜಾನಡೀರ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ PY3029T211682 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ಮರಳು ತುಂಬಿದ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತರಲು ಬಳಸಿದ ಸ್ವರಾಜ ಕಂಪನಿಯ ಟ್ಯಾಕ್ಟರ ನಂ 2) ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ಇರುವುದಿಲ್ಲ. ಇಂಜೆನ್ ನಂಬರ 47-3030STK14433 ಅಕಿ 4,00,000/-ರೂ. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಮರಳು ಸಾಗಾಣಿಕೆ ಮಾಡಲು ಬಳಸಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಗಡ್ಡೆಪ್ಪ ತಂದೆ ಸಿದ್ರಾಮಪ್ಪ ಹೊಸಮನಿ ಸಾ|| ಶಿವೂರ ಇವರು ಮಗಳು
ಮತ್ತು ಅಳಿಯ ಇವರೊಂದಿಗೆ ವಾಸವಾಗಿರುತ್ತೇನೆ. ನನಗೆ ಗಂಡು
ಮಕ್ಕಳು ಇಲ್ಲದ ಕಾರಣ ನನ್ನ
ಮಗಳಾದ ಸಾವಿತ್ರಿ ಮತ್ತು ಅವಳ ಗಂಡನಾದ ಬಸವಂತಪ್ಪ ಇಬ್ಬರೂ ನನ್ನ ಹತ್ತಿರವೆ ಇದ್ದು ನನ್ನ ಹೆಸರಿನಲ್ಲಿದ್ದ ಶಿವೂರ
ಸೀಮಾಂತರದ ಸರ್ವೆ 14/1 ನೇದ್ದರ 9 ಎಕರೆ 25 ಗುಂಟೆ ಜಮೀನಿನಲ್ಲಿ ಒಕ್ಕಲುತನದ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಹೊಲದ ಬಾಜು
ಮನೋಹರ ತಂದೆ ಶರಣಪ್ಪ ಲಾಳಸಂಗಿ ಈತನ ಹೊಲ
ಇರುತ್ತದೆ. ನಾನು ನನ್ನ
ಹೊಲದ ಬಾಂದಾರಿಗೆ ನನ್ನ ಹೊಲದಲ್ಲಿ
30 ಸಾಗುವಾನಿ ಗಿಡಗಳನ್ನು ಹಚ್ಚಿರುತ್ತೇನೆ.
ದಿನಾಂಕ 29-09-2018 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ಹೊಲ ನೊಡಬೆಕೆಂದು ನನ್ನ ಹೊಲಕ್ಕೆ ಹೊದಾಗ ನನ್ನ ಹೊಲದಲ್ಲಿನ ಸಾಗುವಾನಿ ಗಿಡಗಳಲ್ಲಿ ಒಂದು ಗಿಡ ಗಾಳಿ ಮಳೆಗೆ ನಮ್ಮ ಬಾಜು ಹೊಲದ ಮನೋಹರ ಲಾಳಸಂಗಿ ಇವರ ಹೊಲದಲ್ಲಿ ಒಂದು ಗಿಡ ಬಿದ್ದಿತ್ತು. ಸದರಿ ಗಿಡವನ್ನು ನಾನು ಮತ್ತು ನನ್ನ ಮಗಳಾದ ಸಾವಿತ್ರಿ ಹಾಗೂ ನನ್ನ ಅಳಿಯ ಬಸವಂತಪ್ಪ ಮೂರು ಜನರು ಕೂಡಿ ನೊಡುತ್ತಿದ್ದಾಗ ನಮ್ಮ ಬಾಜು ಹೊಲದ
1) ಮನೋಹರ ತಂದೆ ಶರಣಪ್ಪ ಲಾಳಸಂಗಿ 2) ಹಣಮಂತ ತಂದೆ ಶರಣಪ್ಪ ಲಾಳಸಂಗಿ 3) ಸರೂಬಾಯಿ ಗಂಡ ಮನೋಹರ ಲಾಳಸಂಗಿ ಸಾ|| ಮೂರು ಜನರು ಶಿವೂರ ಗ್ರಾಮ ಇವರು ನಮ್ಮ ಹತ್ತಿರ ಬಂದು ನನಗೆ ಬೋಸಡಿ ಮಕ್ಕಳ್ಯಾ ನಮ್ಮ ಹೊಲದಲ್ಲಿ ಯಾಕ ಗಿಡ ಬೀಳಸಿ ಬೆಳೆ ಹಾಳು ಮಾಡಿರಿ ಎಂದು ಬೈಯುತ್ತಿದ್ದರು. ಆಗ ನಾನು ಯಾಕ ಬೈತಿರಿ ಮಳೆ ಗಾಳಿಗೆ ಬಿದ್ದಿದೆ ನಾವೇನು ಬೇಕು ಅಂತಾ ಬೀಳಿಸಿಲ್ಲ ಈಗ ತಗೆಯುತ್ತೇವೆ ಎಂದು ಹೇಳಿ ತಗೆಯಲು ಹೋದಾಗ ಮನೋಹರ ಈತನು ಈಗೇನು ತಗಿತಿರಿ ಬೋಸಡಿ ಮಕ್ಕಳ್ಯಾ ನಿಮ್ಮ ಸೊಕ್ಕ ಬಾಳ ಆಗ್ಯಾದ ಬಂದಾರಿ ಎಲ್ಲಾ ಹಾಳ ಮಾಡಿಬಿಟ್ಟಿರಿ ಎಂದು ಬೈಯುತ್ತಿದ್ದನು. ಆಗ ನಾವು ಯಾಕ ಬೈತಿ ಅಂತಾ ಕೇಳಿದ್ದಕ್ಕೆ ಮೂರು ಜನರೂ ಕೂಡಿ ನನ್ನ ಮೈ ಮೇಲೆ ಏರಿ ಬಂದು ನನ್ನ ಮೈ ಮೇಲಿನ ಅಂಗಿ ಹಿಡಿದು ಮನೋಹರ ಈತನು ಕೈಯಿಂದ ಹೊಡೆದನು. ಹಣಮಂತ ಈತನು ಅಲ್ಲೆ ಬಿದ್ದ ಒಂದು ಕಟ್ಟಿಗೆ ತಗೆದುಕೊಂಡು ನನ್ನ ತಲೆಗೆ ಹೊಡೆದನು. ಆಗ ನನ್ನ ಮಗಳು ಸಾವಿತ್ರಿ ಹಾಗೂ ನನ್ನ ಅಳಿಯ ಬಿಡಿಸಲು ಬಂದಾಗ ನನ್ನ ಅಳಿಯನಿಗೆ ತಳ್ಳಿ, ನನ್ನ ಮಗಳಿಗೆ ಸರೂಬಾಯಿ ಇವಳು ಕೈಯಿಂದ ಹೊಡೆದು ನೆಲಕ್ಕೆ ಕೆಡವಿರುತ್ತಾಳೆ. ಸದರಿಯವರು ನಮಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ನನ್ನ ಅಳಿಯ ಬಸವಂತಪ್ಪ ಹಾಗೂ ಜಗಳದ ಬಾಯಿ ಸಪ್ಪಳ ಕೇಳಿ ಬಂದ ನನ್ನ ಅಣ್ಣನ ಮಗ ಭಗವಂತ್ರಾಯ ಹೊಸಮನಿ ಇವರು ಬಂದು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ
ಗೀರಿಶ ಹಣಗುಜಿ ಸಾ:ಬೆಳಮಗಿ ಗ್ರಾಮ ಇವರು ತಮ್ಮೂರು ಸೀಮಾಂತರದ ಸರ್ವೆ ನಂ:341 ವಿಸ್ತೀರ್ಣ
4 ಎಕರೆ 30 ಗುಂಟೆ ಜಮೀನಿದ್ದು ನಾನು ಮತ್ತು ನನ್ನ ಕುಟುಂಬದವರು
ಸದರಿ ಜಮೀನನ್ನು ಉಳಿಮೆಮಾಡಿ ಉಪಭೋಗ ಮಾಡುತ್ತಿದ್ದು ಸದರಿ ಜಮೀನು ಬಿಟ್ಟು ನಮಗೆ ಉಪ ಜೀವನ ಮಾಡಲು ಯಾವುದೇ ತರಹದ ಸಾಧನೆ ಇಲ್ಲ. ಹೀಗಾಗಿ
ಸದರಿಯವರು ಹೊಲ ಕಬಳಿಸುವ ಉದ್ದೇಶ ಇಟ್ಟಿಕೊಂಡು ಹಾಣಾದಿಯಿಂದ ಹೋಗಿ ಬರಲು ನಮ್ಮ ಹೊಲದಲ್ಲಿ
ಅತೀಕ್ರಮ ಪ್ರವೇಶಮಾಡಿ ತೊಂದರೆ ಮಾಡುತ್ತಿದ್ದಾರೆ,
ಹಾಗೂ ನನ್ನ ಹೊಲದಲ್ಲಿದ್ದ ಬೋರವೆಲ್ ಮೋಟಾರದ
ವೈಯರನ್ನು ಕಟ್ಟ್ ಮಾಡುವುದು ಪೈಪ್ ಒಡೆಯುವುದು ಮಾಡಿ ನನಗೆ ನಷ್ಟ ಉಂಟು ಮಾಡುತ್ತಿದ್ದಾರೆ.
ಇದರಿಂದ ನಾನು ಹತಶಾಯನಾಗಿ ಮಾನಸಿಕ ಸ್ಥಿರತೆ ಕಳೆದುಕೊಂಡು ಬೆಳಮಗಿ ಗ್ರಾಮ ಬಿಟ್ಟು ಓಡಿ
ಹೋಗುವಂತೆ ವರ್ತಿಸುತ್ತಿದ್ದಾರೆ. ಹಾಗೂ ಕವಿರಾಜ ಎಂಬವನು ಮಗನಾ ಪೊಲೀಸ್ ಸ್ಟೇಷನ ಹೋಗಿದಿ ಈಗ
ಹೋಗಿನೋಡಿ ನಿನಗ ಖಲಾಸ ಮಾಡಿ ಹೋಗುತ್ತೇವೆ ಎಂದು ಜೀವದ ಬೇದರಿಕೆ ಹಾಕಿ ಇಲ್ಲ ಸಲ್ಲದ ಸುಳ್ಳು
ಆರೋಪ ಹೊರಿಸುವ ಒಳಸಂಚು ನೀರುಪಿಸುತ್ತಿದ್ದಾರೆ. ದಿನಾಂಕ:30/07/2018 ರಂದು
ಕವಿರಾಜ ಎಂಬುವನು ನನ್ನ ಮೇಲೆ ಹಲ್ಲೆ ಮಾಡಿದ್ದು, ಅದಕ್ಕೆ
ಅರುಣಕುಮಾರ ಎಂಬುವನು ಪ್ರಚೋದನೆ ನೀಡಿದನು ಆಗ ನಾನು ನರೋಣಾ ಪೊಲೀಸ್ ಠಾಣೆಗೆ ಬಂದು ಫಿರ್ಯಾದಿ ನೀಡಿರುತ್ತೇನೆ. ತದನಂತರ ನಾನು ಭಯದ ಕಾರಣ ಗ್ರಾಮಕ್ಕೆ
ಹೋಗಿರುವುದಿಲ್ಲ. ತದನಂತರ ದಿನಾಂಕ: 07/08/2018 ರಂದು
ಸರ್ಕಲ್ ಇನ್ಸಪೆಕ್ಟರ್ ಆಳಂದಕ್ಕೆ ಹೋಗಿ ಫಿರ್ಯಾದಿ ನೀಡಿದಾಗ ಸರ್ಕಲ್ ಸಾಹೇಬರು ಸದಿಯವನಿಗೆ ಕರೆಸಿ ತಾಕಿತು
ಮಾಡಿ ಪಾಬಂದಿ ಬರೆದುಕೊಂಡು ನನ್ನ ತಂಟೆ ತಕರಾರಿಗೆ ಬರದಂತೆ ಬರೆದಿಕೊಂಡಿರುತ್ತಾರೆ. ನಂತರ
ದಿನಾಂಕ:29/09/2018 ರಂದು ನಾನು ಅರುಣಕುಮಾರನಿಗೆ ನಿಮ್ಮ ಅಣ್ಣ ಸದರಿ
ವರ್ತನೆ ಬಿಟ್ಟಿರುವುದಿಲ್ಲ ಭಯಹಾಕುತ್ತಾನೆಂದು ಹೇಳಿದಾಗ ಏ ಬೋಸಡಿ ಮಗನಾ ನಿಂದು ಹೆಚ್ಚಾಯಿತು
ನಿನಗೆ ಹೊಡದೆ ಪೊಲೀಸ್ ಠಾಣೆಗೆ ಹೋಗುತ್ತೇವೆಂದು ಕವಿರಾಜನಿಗೆ ಹೊಡಿರೋ ಮಗನಿಗೆ ಅಂತಾ
ಹೇಳಿರುತ್ತಾನೆ. ಆಗ ನನ್ನ ಪಕ್ಕದಲ್ಲಿದ್ದ ನಮ್ಮ ಅಣ್ಣ ಬಸವರಾಜ ತಂದೆ ಸಿದ್ರಾಮಪ್ಪಾ ಹಣಗುಜಿ
ನನ್ನ ಹೆಂಡತಿಯಾದ ಶ್ರೀಮತಿ.ನಾಗಮ್ಮ ಇವರು ಜಗಳ ನೋಡಿ ಬಿಡಿಸಿರುತ್ತಾರೆ. ಸರ್ ಕವಿರಾಜ ಹಾಗೂ
ಅರುಣಕುಮಾರ ತನ್ನ ಹಣಬಲ ತೋಳ ಬಲ ಉಳ್ಳವರಾಗಿದ್ದು ನನ್ನ ಮೇಲೆ ಪದೇ ಪದೇ ಹಲ್ಲೇ ಮಾಡುವುದು
ಭಯಹುಟ್ಟಿಸುವುದು ಮಾಡುತ್ತಿದ್ದಾರೆ. ಇವರ ಭಯ ಹಾಗೂ ಕಾಟಕ್ಕೆ ಅಂಜಿ ನನ್ನ ಜಮೀನು ಬೇರೆಯವರಿಗೆ
ಪಾಲದ ರೂಪದಲ್ಲಿ ಹಚ್ಚಿದರು ಕೂಡ ಅವರಿಗೆ ಕೂಡ ಭಯ ಹುಟ್ಟಿಸಿ ಹೊಲ ಬಿಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದುರು ಸಾರಂಸದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.