Police Bhavan Kalaburagi

Police Bhavan Kalaburagi

Sunday, August 2, 2020

BIDAR DISTRICT DAILY CRIME UPDATE 02-08-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-08-2020

ಜನವಾಡಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 44/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ : -
ದಿನಾಂಕ 01-08-2020 ರಂದು 1800 ಗಂಟೆಗೆ ಯರನಳ್ಳಿ ಗ್ರಾಮದ ಜಗನ್ನಾಥ ಫುಲಾರಿ ರವರ ಹೊಟೇಲ್ ಕೌಂಟರ ಹತ್ತಿರ ಒಬ್ಬ ವ್ಯಕ್ತಿಯು ಯಾವುದೇ ಕಾಗದ ಪತ್ರ ಲೈಸನ್ಸ ಇಲ್ಲದೇ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ. ಅಂತ ಖಚಿತ ಬಾತ್ಮಿ ಮೇರೆಗೆ. ಪಿಎಸ್ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಯರನಳ್ಳಿ ಗ್ರಾಮದ ಮಾಣಿಕೇಶ್ವರ ಮಂದಿರದ ಹತ್ತಿರ ಹೋಗಿ ಜಗನ್ನಾಥ ಫೂಲಾರಿ ರವರ ಹೊಟೇಲ್ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಸರಾಯಿ ಮಾರಾಟ ಮಾಡುತ್ತಿದ್ದು. ಆತನ ಮೇಲೆ 1845 ಗಂಟೆಗೆ ದಾಳಿ ಮಾಡಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಅವನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಜಗನ್ನಾಥ ತಂದೆ ರೇವಣೆಪ್ಪಾ ಹೂಗಾರ ವಯ|| 47 ವರ್ಷ, ಜಾತಿ|| ಹೂಗಾರ ಉ|| ಹೊಟೇಲ್ ಅಂಗಡಿ ಸಾ|| ಯರನಳ್ಳಿ ಗ್ರಾಮ  ಅಂತಾ ತಿಳಿಸಿದ್ದು. ಇವನ ಹತ್ತಿರ ರಟ್ಟಿನ ಕಾಟನನಲ್ಲಿ  1) McDowells Whisky 180 ಎಮ್.ಎಲ್. 5 ಬಾಟಲ್ಗಳು ಇದ್ದು ಅವುಗಳ ಅಂದಾಜು ಕಿಮ್ಮತ್ತು ಒಂದಕ್ಕೆ ರೂ 198.23 ಯಂತೆ ಒಟ್ಟು /- 991.15/-ರೂ. 2) Officer choice Whiskey 180 ಎಮ್ ಎಲ್ 19 ಸರಾಯಿ ತುಂಬಿದ ಪುಟ್ಟದ ಪಾಕೇಟಗಳು ಇದ್ದು, ಅವುಗಳ ಅಂದಾಜು ಕಿಮ್ಮತ್ತು ಒಂದಕ್ಕೆ ರೂ 106.23 ಯಂತೆ ಒಟ್ಟು 2018.37/- 3) Original Choice Whisky  90 ಎಮ್ ಎಲ್ ನ 50 ಸಾರಾಯಿ ತುಂಬಿದ ಫುಟ್ಟದ ಪಾಕೇಟಗಳು ಇದ್ದು ಅವುಗಳ ಅಂದಾಜು ಕೀಮ್ಮತ್ತು ಒಂದಕ್ಕೆ ರೂ. 35.13 ಯಂತೆ ಒಟ್ಟು 1756.5/- ರೂ ನೇದವುಗಳನ್ನು ಜಪ್ತಿ ಮಾಡಿದ್ದು ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಜಪ್ತಿ ಪಂಚನಾಮೆ, ಹಾಗೂ ಮುದ್ದೆ ಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 45/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ : -
ದಿನಾಂಕ 01-08-2020 ರಂದು 2030 ಗಂಟೆಗೆ ಯರನಳ್ಳಿ ಗ್ರಾಮದ ಸಂತೋಷ ಪಬರ್ನೋರ ಈತನು ತನ್ನ ಹೋಟಲ್ ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚೀತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ 2115 ಗಂಟೆಗೆ ದಾಳಿ ಮಾಡಿ. ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಂತೋಷ ತಂದೆ ಬೀರಪ್ಪ ಪಬರ್ನೋರ ವಯ|| 29 ವರ್ಷ ಉ|| ಹೋಟಲ್ ಅಂಗಡಿ ಜ್ಯಾ|| ಎಸ್.ಟಿ (ಗೊಂಡ) ಸಾ|| ಯರನಳ್ಳಿ ಗ್ರಾಮ ಈತನಿಗೆ ದಸ್ತಗಿರಿ ಮಾಡಿ. ಅವನ ಕಡೆಯಿಮದ ದಾಳಿಯಲ್ಲಿ ಒಟ್ಟು 90 ಎಮ್.ಎಲ್. ನ ಒಟ್ಟು 96 ಓರಿಜಿನಲ್ ಚೊಯ್ಸ್ ಡೀಲಕ್ಸ್ ವಿಸ್ಕೀಯ ಸರಾಯಿ ತುಂಬಿದ ಫುಟ್ಟದ ಪಾಕೇಟಗಳ ಅಂದಾಜು ಕಿಮ್ಮತ್ತು 3372.48/-ರೂ. ದಷ್ಟು ಜಪ್ತಿ ಮಾಡಿಕೊಂಡು. ದಸ್ತಿಗಿರಿ ಮಾಡಿದ ವ್ಯಕ್ತಿಗೆ ಸದರಿ ಸರಾಯಿ ಪಾಕೇಟ್ಗಳು ತಂದ ಬಗ್ಗೆ ವಿಚಾರಿಸಲಾಗಿ ಅವನು ಬೀದರದ ವೈನ್ ಶಾಪ್ ಒಂದರಿಂದ ಖರೀದಿ ಮಾಡಿಕೊಂಡು ಯರನಳ್ಳಿ ಗ್ರಾಮಕ್ಕೆ ತಂದು ಜನರಿಗೆ ಮಾರಾಟ್ ಮಾಡುತ್ತೇನೆ ಅಂತಾ ತಿಳಿಸಿದ್ದು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು. ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 46/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ : -
ದಿನಾಂಕ 01-08-2020 ರಂದು 2345 ಗಂಟೆಗೆ ಯರನಳ್ಳಿ ಗ್ರಾಮದ ದಶರಥ ಪಬರ್ನೋರ ಈತನು ತನ್ನ ಹೋಟಲ್ ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚೀತ ಬಾತ್ಮಿ ಮೇರೆಗೆ  ಪಿಎಸ್ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ದಿನಾಂಕ 02/08/2020 ರಂದು ಅವನ ಮೇಲೆ 0030 ಗಂಟೆಗೆ ದಾಳಿ ಮಾಡಿ. ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ದಶರಥ ತಂದೆ ಮಾಣಿಕ ಪಬರ್ನೋರ ವಯ|| 40 ವರ್ಷ || ಹೋಟಲ್ ಅಂಗಡಿ ಜ್ಯಾ|| ಎಸ್.ಟಿ (ಗೊಂಡ) ಸಾ|| ಯರನಳ್ಳಿ ಗ್ರಾಮ ಈತನಿಗೆ ದಸ್ತಗಿರಿ ಮಾಡಿ. ಅವನ ಕಡೆಯಿಂದ ದಾಳಿಯಲ್ಲಿ 90 ಎಮ್.ಎಲ್. ಒಟ್ಟು 60 ಓರಿಜಿನಲ್ ಚಾಯ್ಸ್ ಡೀಲಕ್ಸ್ ವಿಸ್ಕೀಯ ಸರಾಯಿ ತುಂಬಿದ ಫುಟ್ಟದ ಪಾಕೇಟಗಳು. ಇವುಗಳ ಅಂದಾಜು ಕಿಮ್ಮತ್ತು 2107.8/-ರೂ. ದಷ್ಟು. ಹಾಗೂ 180 ಎಮ್.ಎಲ್. ಒಟ್ಟು 09 ಇಂಪೇರಿಯಲ್ ಬ್ಲ್ಯೂ ಸರಾಯಿ ತುಂಬಿದ ಬಾಟಲ್ಗಳು  ಅಂದಾಜು ಕಿಮ್ಮತ್ತು 1.783.89/-ರೂ. ಮಾಲನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಆರೋಪಯನ್ನು ಬಂಧಿಸಿ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಾಗಿದೆ

ಹುಮನಾಬಾದ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 111/2020 ಕಲಂ 427, 428 ಜೊತೆ 34 ಐಪಿಸಿ ಮತ್ತು ಕಲಂ 2 ಕೆ.ಪಿ.ಡಿ.ಎಲ್.ಪಿ ಕಾಯ್ದೆ :-
ದಿನಾಂಕ 01/08/2020 ರಂದು 1900 ಗಂಟೆಗೆ ಫಿರ್ಯಾದಿ  ಶ್ರೀಮತಿ ಸೀಮಾ ಜೈರಾಜ ಚತುರೆ ಸಾ. ಪ್ರತಾಪನಗರ ಬೀದರ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ನಮ್ಮ ಸಂಸ್ಥೆಯ ಅಡಿಯಲ್ಲಿ ನಡೆಸುತ್ತಿರುವ ಪೂಜ್ಯ ಶಿವಲಿಂಗ ಸ್ವತಂತ್ರ ಪದವಿ ಪೂರ್ವ ಕಾಲೇಜ ಹುಮನಾಬಾದ ಕಟ್ಟಡವನ್ನು ಸಂಪೂರ್ಣ ನೆಲಸಮಗೊಳ್ಳಿಸಿ, ಕಾಗದ ಪತ್ರಗಳು. ಪಿಠೋಪಕರಣಗಳು ಇತ್ಯಾದಿ ರಸ್ತೆಗೆ ಎಸೇದು ಹಾಗೂ ಹತ್ತಿರದ ಗುಂಡಿಗೆ ಎಸೆದು ನಾಶಪಡಿಸಿದ್ದು ಪೂಜ್ಯ ಶಿವಲಿಂಗ ಸ್ವತಂತ್ರ ಪದವಿ ಪೂರ್ವ ಕಾಲೇಜ ನಿವೇಶನವು ಅಧ್ಯಕ್ಷರು ಪೂಜ್ಯ ಶಿವಲಿಂಗ ಸ್ವತಂತ್ರ ಪದವಿ ಪೂರ್ವ ಕಾಲೇಜ ಹುಮನಾಬಾದ ರವರ ಹೆಸರಿನಲ್ಲಿ ಇರುತ್ತದೆ. ಇದು ಪುರ ಸಭೆ ಸಂಖ್ಯೆ 20-103/1 ಇದ್ದು 1994 ರಿಂದ ಸುಮಾರು ಹತ್ತು ಕೋಣೆಗಳುಳ್ಳ ಕಟ್ಟಡವನ್ನು ಹೊಂದಿದೆ. ಇದರ ಮೌಲ್ಯ ಇಂದಿಗೆ ಸುಮಾರು ಹತ್ತು ಕೋಟಿಗೂ ಅಧಿಕವಾಗಿರುತ್ತದೆ. 1989 ರಿಂದ ಸರಕಾರದಿಂದ ವೇತನಾನುದಾನವನ್ನು ಪಡೆಯುತ್ತಿರುವ ಸಾರ್ವಜನಿಕ ಶಿಕ್ಷಣ ಸಂಸ್ಥೆಯಾಗಿದೆ. ಹತ್ತು ಜನ ಸಿಬ್ಬಂದಿಗಳು ಸರಕಾರದಿಂದ ವೇತನಾನುದಾನ ಪಡೆಯುತ್ತಿದ್ದಾರೆ. ನಿನ್ನೆ ದಿವಸ ಅಂದರೆ ದಿನಾಂಕ 31/07/2020 ರ ರಾತ್ರಿ ವೇಳೆಯಲ್ಲಿ ಗಜರಾಜ, ಮಸ್ತಾನ ಅಲಿ ( ಮನ್ನಾಖೇಳ್ಳಿ ಗ್ರಾಮದ) ಹಾಗೂ ಇತರರು ಜೆ.ಸಿ.ಬಿ ಹಾಗೂ ಟ್ರ್ಯಾಕ್ಟರ ಸಹಾಯದಿಂದ ಕಾಜೀನ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಳಿಸಿರುತ್ತಾರೆ, ಕಾಲೇಜಿನಲ್ಲಿ ಅಭ್ಯಾಸ ಮಾಡಿದ ವಿಧ್ಯಾರ್ಥಿಗಳು ಅಂಕ ಪಟ್ಟಿಗಳು, ವಗರ್ವಣಾ ಪತ್ರಗಳು, ಕಾಲೇಜ ವಾರ್ಷಿಕಾ ಲೆಕ್ಕ ಪತ್ರಗಳು, ವೇತನ ಬಟವಾಡೆ ಮುಂತಾದ ದಾಖಲಾತಿಗಳು ಮತ್ತು ಪೀಟೋಪಕರಣಗಳನ್ನು ರಸ್ತೆಗೆ ಹಾಗೂ ಗುಂಡಿಗೆ ಎಸೆದು ನಾಶ ಪಡಿಸಿರುತ್ತಾರೆ ಹಾಗೂ ಕಾಲೇಜನಲ್ಲಿ ಅಭ್ಯಾಸ ಮಾಡುವ ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡಿದಂತಾಗಿದೆ ಸಿಬ್ಬಂದಿಗಳಿಗೂ ಕೂಡ ತುಂಬಾ ಅನ್ಯಾಯವಾಗುತ್ತದೆ. ಪ್ರಯುಕ್ತ ತಾವುಗಳು ವಿಧ್ಯಾರ್ಥಿಗಳ ಹಿತದೃಷಿಯಿಂದ, ಸಿಬ್ಬಂದಿಗಳ ಹಿತದೃಷಿಯಿಂದ, ಕಟ್ಟಡ ಹಾಗೂ ದಾಖಲಾತಿ ನಷ್ಟದಿಂದ ಸಾರ್ವಜನಿಕವಾಗಿ ಆಗಿರುವ ನಷ್ಟವನ್ನು ಗಮನದಲ್ಲಿರಿಸಿ ದೂರನ್ನು ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಮುಖಾಂತರ ನ್ಯಾಯ ಒದಗಸಿಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಅಂತಾ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.



.