¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-11-2018
¨ÉªÀļÀSÉÃqÁ ¥Éưøï
oÁuÉ C¥ÀgÁzsÀ ¸ÀA. 70/2018, PÀ®A. 32, 34 PÉ.E PÁAiÉÄÝ :-
ದಿನಾಂಕ 02-11-2018 ರಂದು ಹುಲೇಪ್ಪಾ ಪಿಎಸ್ಐ ಬೆಮಳಖೇಡಾ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರ
ಜೊತೆಯಲ್ಲಿ ಠಾಣೆಯಿಂದ ಬಿಟ್ಟು ಬೇಮಳಖೇಡಾ, ಮರಕುಂದಾ ಗ್ರಾಮಗಳಿಗೆ ಭೇಟಿ ಕೊಟ್ಟು ಮುಂದೆ ಮೊಗದಾಳ ಗ್ರಾಮಕ್ಕೆ ಹೋಗಲು ಎನ್.ಹೆಚ್ 65 ರೋಡ ಮೂಲಕ ಹೋಗುವಾಗ ಮೊಗದಾಳ ಶಿವಾರದ ಬಿ.ಕೆ.ಎಸ್.ಕೆ ಸಕ್ಕರೆ ಕಾರ್ಖಾನೆ ಹತ್ತಿರ ಹೋದಾಗ ಸಂತೊಷ ಧಾಬಾದ ಎದುರಿಗೆ ಎನ್.ಹೆಚ್ 65 ರೋಡ ಮೂಲಕ ಒಬ್ಬ ವ್ಯಕ್ತಿ ತನ್ನ ಹೆಗಲ ಮೇಲೆ ಒಂದು ಚೀಲದ ಗಂಟು ಇಟ್ಟುಕೊಂಡು ಮನ್ನಾಏಖೇಳಿ ಕಡೆಯಿಂದ ನಡೆದುಕೊಂಡು ಬರುತ್ತಿದ್ದನು ಆತನು ಜೀಪ ನೋಡಿ ಮರೆಯಾಗುತ್ತಿದ್ದು, ಅದನ್ನು ನೋಡಿ ಆತನ ಮೇಲೆ ಸಂಶಯ ಬಂದಿದ್ದರಿಂದ ಅವನ ಹತ್ತಿರ ಹೋಗುವಾಗ ಸದರಿಯವನು ಪೊಲೀಸರಿಗೆ ನೋಡಿ ಚೀಲವನ್ನು ಸಂತೊಷ ಧಾಬಾದ ಎದುರಿಗೆ ರೋಡಿನ ಪಕ್ಕದಲ್ಲಿ ಬಿಟ್ಟು ಧಾಭಾ ಕಡೆಯಿಂದ ಹೊಲದ ಕಬ್ಬಿನಲ್ಲಿ ಓಡಿ ಹೋಗಿರುತ್ತಾನೆ, ಸಿಬ್ಬಂದಿಯವರು ಹಿಡಿಯಲು ಬೆನ್ನು ಹತ್ತಿದ್ದರು ಸಿಕ್ಕಿರುವುದಿಲ್ಲಾ, ನಂತರ ಇಬ್ಬರು ಪಂಚರನ್ನು ಕರೆಸಿ ಆಪಾದಿತನು ಬಿಟ್ಟು ಹೊದ ಚೀಲದಲ್ಲಿದ್ದ 180 ಎಮ್.ಎಲ್ ವುಳ್ಳ ಓಲ್ಡ್ ಟಾವರ್ನ
ವಿಸ್ಕಿ ಒಟ್ಟು 36 ಸಾರಾಯಿ ತುಂಬಿದ ಪುಟ್ಟದ ಡಬ್ಬಿಗಳು ಇದ್ದು, ಅ.ಕಿ 2668=68 ರೂ.ಗಳು ಇರುತ್ತದೆ, ಸದರಿ ಸರಾಯಿ ತುಂಬಿದ ಪುಟ್ಟದ ಡಬ್ಬಿಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಓಡಿ ಹೋದ ವ್ಯಕ್ತಿಯ ಹೆಸರು ತಿಳಿದುಕೊಳ್ಳಲು ಮಾಣಿಕ ತಂದೆ ಮೋನಪ್ಪಾ ಚಂಗೊಲಿ ವಯ: 40 ವರ್ಷ, ಜಾತಿ: ಕಬ್ಬಲಿಗ,
ಸಾ: ಮೊಗದಾಳ, ತಾ: ಜ: ಬೀದರ ಅಂತ ಗೊತ್ತಾಗಿದ್ದು, ನಂತರ ಸದರಿ
ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¨ÉªÀļÀSÉÃqÁ ¥Éưøï
oÁuÉ C¥ÀgÁzsÀ ¸ÀA. 71/2018, PÀ®A. 392 L¦¹ :-
ದಿನಾಂಕ 02-11-2018 ರಂದು ಫಿರ್ಯಾದಿ ಕಮಳಬಾಯಿ ಗಂಡ ಬಾಬುರಾವ ಚೆಂಗೋಲಿ ವಯ: 51 ವರ್ಷ, ಜಾತಿ: ಕಬ್ಬಲಿಗ,
ಸಾ: ಮೊಗದಾಳ, ತಾ: ಜಿ: ಬೀದರ ರವರ ಹತ್ತಿರ 2 ಎಮ್ಮೆಗಳಿದ್ದು, ಸದರಿ ಎಮ್ಮೆಗಳನ್ನು ಮೆಯಿಸಲು ತಮ್ಮೂರ ಪ್ರಭು ಪರಿಟ ರವರ ಖುಲ್ಲಾ ಹೊಲದಲ್ಲಿ ಹೋಗಿ ಮೆಯಿಸುತ್ತಿದ್ದಾಗ ತಮ್ಮೂರ ಸರಸ್ವತಿ ಗಂಡ ಘಾಳೇಪ್ಪಾ ಗೊಲಿ ಇವರು ಸಹ ತನ್ನ ಒಂದು ಎಮ್ಮೆ ಮೆಯಿಸಲು ಬಂದಿರುತ್ತಾರೆ, ಫಿರ್ಯಾದಿಯು ಮೆಯಿಸುತ್ತಿದ್ದ ಬೀಳು ಹೊಲದಲ್ಲಿ ತಗಡದ ಶೆಡ್ಡು ಇದ್ದು ಅದರ ಕಟ್ಟೆಯ ಮೇಲೆ ಕುಳಿತುಕೊಂಡಾಗ ಇಬ್ಬರು ಅಪರಿಚಿತರು ಒಂದು ಮೋಟಾರ ಸೈಕಲ್ ಮೇಲೆ ಬಂದು ಒಬ್ಬ ವ್ಯಕ್ತಿ ಮೋಟಾರ ಸೈಕಲ್ ಚಾಲು ಮಾಡಿಕೊಂಡು ಅಲ್ಲಿಯೆ ನಿಂತಾಗ ಇನ್ನೊಬ್ಬ ವ್ಯಕ್ತಿ ಮಾತಾನಾಡುತ್ತಾ ಫಿರ್ಯಾದಿಯವರ ಹತ್ತಿರ ಬಂದು ಈ ಹೊಲ ಯಾರದು ಇಲ್ಲೇಕೆ ಕುಳಿತಿರಿ ಅಂತಾ ಅಂದಾಗ ನಾವು ದಿನಾಲು ಇಲ್ಲಿಯೆ ಎಮ್ಮೆಗಳನ್ನು ಮೆಯಿಸುತ್ತೇವೆ ಅಂತಾ ಹೇಳಿ ನಿವ್ಯಾರು ಅಂತಾ ಕೇಳಿದಾಗ ನಾವು ಹೊಲ ಸರ್ವೆ ಮಾಡಲು ಬಂದಿರುತ್ತೆವೆ ಅಂತಾ ಹೇಳಿ ಹತ್ತಿರ ಬಂದು ಫಿರ್ಯಾದಿಯವರ ಕೊರಳಲ್ಲಿನ 5 ಗ್ರಾಮ ಬಂಗಾರದ ಅಷ್ಟಪೈಲಿ ಮಣಿವುಳ್ಳ ಸರ ಹಾಗೂ 3 ತೋಲೆಯ ಬಂಗಾರದ ನಾನ ಕಸಿದುಕೊಂಡು ಅವರು ತಂದ ಮೋಟಾರ ಸೈಕಲ್ ಮೇಲೆ ಕುಳಿತುಕೊಂಡು ಭಂಗೂರ ಕಡೆಗೆ ಹೋದರು, ಅವರಿಗೆ ಮತ್ತೆ ನೋಡಿದಲ್ಲಿ ನಾನು ಗುರುತ್ತಿಸುತ್ತೇನೆ, ಸದರಿ ಸರ ಕಸಿದುಕೊಳ್ಳುವಾಗ ಸರ ಕಡಿದು ಸ್ವಲ್ಪ ಮಣಿಗಳು ಅಲ್ಲಿಯೆ ಬೀದ್ದಿರುತ್ತವೆ, ಫಿರ್ಯಾದಿಯವರ ಹತ್ತಿರ ಕುಳಿತ ಸರಸ್ವತಿ ಇವರು ಚೀರಾಡುತ್ತಾ ಹೊಲದಲ್ಲಿ ಹೋಗಿರುತ್ತಾಳೆ ಅಷ್ಟರಲ್ಲಿ ತಮ್ಮೂರ ಸುಭಾಷ ನಿಣ್ಣೆ ರವರು ಟ್ರಾಕ್ಟರ ಮೇಲೆ ಬರುವಾಗ ಚೀರಾಡುವದನ್ನು ನೋಡಿ ಹತ್ತಿರ ಬಂದು ಏನಾಗಿದೆ ಅಂತಾ ಕೇಳಿದಾಗ ನಡೆದ ಘಟನೆ ಬಗ್ಗೆ ತಿಳಿಸಿದ್ದು, ನಂತರ ಎಲ್ಲರು ಕೂಡಿ ಮನೆಗೆ ಬಂದು ನಡೆದ ಘಟನೆ ಮಕ್ಕಳಾದ ರಘು, ಗಣಪತಿ ಹಾಗೂ ಸೊಸೆಯಾದ ಸುಧಾರಾಣಿ ರವರಿಗೆ ವಿಷಯ ತಿಳಿಸಿದ್ದು, ಕೊರಳಲ್ಲಿನ 5 ಗ್ರಾಮ ಬಂಗಾರದ ಅಷ್ಟಪೈಲಿ ಮಣಿವುಳ ಸರ ಅ.ಕಿ 12,000/- ರೂ. ಹಾಗೂ ತೋಲೆಯ ಬಂಗಾರದ ನಾನ ಅ.ಕಿ 75,000/- ರೂಪಾಯಿ ಹೀಗೆ ಒಟ್ಟು 87,000/- ರೂ ದೋಚಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಬಗದಲ್ ಪೊಲೀಸ್ ಠಾಣೆ ಅಪರಾಧ
ಸಂ. 110/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 02-11-2018 ರಂದು ಮೀನಕೇರಾ ಕ್ರಾಸ್ ಹತ್ತಿರ ಕೈಲಾಶ ರವರ ಹಳೆಯ ಧಾಬಾದ ಹತ್ತಿರ ಕೇಲವು ಜನರು ಹಣ ಪಣಕ್ಕೆ ಹಚ್ಚಿ ಅಂದರ ಬಾಹಾರ ಎಂಬ ನಸಿಬೀನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಪಿಎಸ್ಐ ಮಂಜುನಾಥ ಬಾರ್ಕಿ ಪಿಎಸ್ಐ ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು
ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮೀನಕೇರಾ ಕ್ರಾಸ್ ಹತ್ತಿರ ಸಂತೋಷ ಪಾಟೀಲ ರವರ ಖಾನಾವಳಿ ಹತ್ತಿರ ಹೋಗಿ ಮರೆಯಾಗಿ ನೋಡಲು ಕೈಲಾಶ ರವರ ಹಳೆಯ ಧಾಬಾದ ಹತ್ತಿರ ಕೆಳಗೆ ಕೇಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಹಣ ಪಣಕ್ಕೆ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಎಲ್ಲರೂ ಸುತ್ತುವರೆದು ಓಡುತ್ತಾ ಹೋಗಿ ದಾಳಿ ಮಾಡಿದಾಗ ಇಸ್ಪಿಟ ಆಡುತ್ತಿದ್ದ ಎಲ್ಲರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದು, ವಿಚಾರಿಸಲು ಅವರು ತಮ್ಮ ಹೆಸರು 1) ಇಸ್ಮಾಯಿಲ ತಂದೆ ರಬ್ಬಾನಿ ಮಾಸೂಲ್ದಾರ್ ವಯ: 40 ವರ್ಷ, ಜಾತಿ: ಮುಸ್ಲಿಂ, 2) ಎಂ.ಡಿ. ಇಸ್ಮಾಯಿಲ ತಂದೆ ಅಬ್ದುಲ್ ಗಫರ್ ದಫೆದಾರ್ ವಯ: 43 ವರ್ಷ, ಜಾತಿ: ಮುಸ್ಲಿಂ, 3) ಬಾಬಾ ತಂದೆ ಖಯಮೋದ್ದಿನ್ ಜಮಾದಾರ ವಯ: 30 ವರ್ಷ, ಜಾತಿ: ಮುಸ್ಲಿಂ, 4) ಖುತ್ಮೊದ್ದಿನ್ ತಂದೆ ಖಮರೋದ್ದಿನ್ ತಡಪಳ್ಳಿ ವಯ: 36 ವರ್ಷ, ಜಾತಿ: ಮುಸ್ಲಿಂ, 5) ಮೈನೋದ್ದಿನ್ ತಂದೆ ಬಾಬುಮಿಯಾ ಯದ್ಲಾಪೂರವಾಲೆ ವಯ: 38 ವರ್ಷ, ಜಾತಿ: ಮುಸ್ಲಿಂ, 6) ಮಾರುತಿ ತಂದೆ ಮಾಣಿಕಪ್ಪಾ ಕಂಬಾರ ವಯ: 32 ವರ್ಷ, ಜಾತಿ: ಕಂಬಾರ, ಎಲ್ಲರೂ ಸಾ: ಬಗದಲ ಗ್ರಾಮ ಅಂತ ತಿಳಿಸಿದ್ದು, ನಂತರ ಅವರಿಂದ 52 ಇಸ್ಪಿಟ್ ಎಲೆಗಳು ಹಾಗು ನಗದು ಹಣ 7930/- ರೂಪಾಯಿಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಎಲ್ಲರಿಗೆ ದಸ್ತಗಿರಿ, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.